Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 21-02-2022


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 42/2022 ಕಲಂ 279,304(ಎ) ಐಪಿಸಿ : ದಿನಾಂಕಃ 20/02/2022 ರಂದು 4-30 ಪಿ.ಎಮ್ ಕ್ಕೆ ಶ್ರೀಮತಿ ಮಂಜುಳಾ ಗಂಡ ಮಲ್ಲಿಕಾಜರ್ುನಅರಕೇರಿ ಸಾ: ಕಲ್ಲದೇವನಹಳ್ಳಿ ತಾಃ ಹುಣಸಗಿ ಹಾ.ವಃ ಸುರಪೂರಇವರುಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ಮುಂಜಾನೆ ನನ್ನಗಂಡನಾದ ಮಲ್ಲಿಕಾಜರ್ುನತಂದೆ ಭೀಮರಾಯಅರಕೇರಿ ವಯಃ 33 ವರ್ಷ ಉಃ ಖಾನಾವಳಿ ಕೆಲಸ ಸಾಃ ಕಲ್ಲದೇವನಹಳ್ಳಿ ಹಾ.ವಃ ಸುರಪೂರಇವರು ನಮ್ಮರಾಯಲ್ಎನ್ಫೀಲ್ಡ್ ಮೋಟಾರ ಸೈಕಲ ನಂಬರ ಕೆ.ಎ 33 ಇ.ಎ 4000 ನೇದ್ದರ ಮೇಲೆ ತಿಂಥಣಿಜಾತ್ರೆಗೆ ಹೋಗಿದ್ದರು. ನಂತರ 11-00 ಎ.ಎಮ್ ಸುಮಾರಿಗೆ ನನ್ನಗಂಡನು ನಮ್ಮಕಾರಚಾಲಕನಾದರಾಹುಲ್ತಂದೆ ಮದನಕುಮಾರ ಪಂಚಮಗಿರಿಇವರಿಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನನ್ನ ಸ್ನೇಹಿತನಾದರಾಜಶೇಖರ ಸಾ: ಹುಣಸಗಿಇವರುತನ್ನ ಮಗಳಿಗೆ ನಮ್ಮಕಾರಿನಲ್ಲಿ ಸುರಪೂರದಿಂದ ಹುಣಸಗಿಗೆಕರೆದುಕೊಂಡು ಬರುವಂತೆ ಹೇಳಿರುವದರಿಂದ ನೀನು ರಾಜಶೇಖರಇವರ ಮಗಳಿಗೆ ನಮ್ಮಕಾರಿನಲ್ಲಿ ಕೂಡಿಸಿಕೊಂಡು ದೇವಾಪೂರ ಕ್ರಾಸಿಗೆ ಬಾ, ನಾನು ಅಲ್ಲಿಗೆ ಬರುತ್ತೇನೆ, ಹುಣಸಗಿ ಹೋಗಿ ಬಿಟ್ಟು ಬರೋಣಾಅಂತ ಹೇಳಿದ್ದರಿಂದ ರಾಹುಲ್ಇತನು ನಮ್ಮಕಾರಿನಲ್ಲಿತನ್ನ ಸ್ನೇಹಿತನಾದ ಪವನ ಬೋವಿಗಲ್ಲಿ ಹಾಗು ರಾಜಶೇಖರಇವರ ಮಗಳಿಗೆ ಕೂಡಿಸಿಕೊಂಡು ಹೋಗಿದ್ದನು. ನಂತರ 3-00 ಪಿ.ಎಮ್ ಸುಮಾರಿಗೆ ನಮ್ಮಕಾರಚಾಲಕನಾದರಾಹುಲ್ಇತನು ಫೋನ್ ಮುಖಾಂತರ ನನಗೆ ತಿಳಿಸಿದ್ದೆನೆಂದರೆ, ಅಕ್ಕ ನಾನು ಕಾರಿನಲ್ಲಿದೇವಾಪೂರ ಕ್ರಾಸಿಗೆ ಹೋದಾಗಅಲ್ಲಿ ಮಲ್ಲಿಕಾಜರ್ುನ ಮಾಲಿಕರುತಮ್ಮ ಬುಲೆಟ್ ಮೋಟಾರ ಸೈಕಲ್ ನಿಲ್ಲಿಸಿ ನಮ್ಮಕಾರಿನಲ್ಲಿ ಕುಳಿತುಕೊಂಡಿದ್ದು, ನಾವು ಹುಣಸಗಿರಾಜಶೇಖರಇವರ ಮನೆಗೆ ಹೋಗಿ ಅವರ ಮಗಳಿಗೆ ಬಿಟ್ಟುಅಲ್ಲಿಂದ ಮರಳಿ 2-20 ಪಿ.ಎಮ್ ಸುಮಾರಿಗೆದೇವಾಪೂರ ಕ್ರಾಸಿಗೆ ಬಂದಾಗ ಮಲ್ಲಿಕಾಜರ್ುನ ಮಾಲಿಕರು ನಮ್ಮ ಬುಲೇಟ್ ಮೋಟಾರ ಸೈಕಲ್ ನಡೆಸಿಕೊಂಡು ಬರುತ್ತೇನೆ, ನೀವು ಹೋಗ್ರಿಅಂತ ಕಳಿಸಿದರಿಂದ ನಾನು ಕಾರತಗೆದುಕೊಂಡು ಸುರಪೂರಕ್ಕೆ ಬಂದಿರುತ್ತೇನೆಅಂತ ತಿಳಿಸಿದನು. ನಂತರ ಸ್ವಲ್ಪ ಹೊತ್ತಿನಲ್ಲಿಯಾರೋಅಪರಿಚಿತರು ನನಗೆ ಫೋನ್ ಮಾಡಿ ಸುರಪೂರ ಲಿಂಗಸುಗೂರ ಮುಖ್ಯರಸ್ತೆಯ ಮೇಲೆ ಹಾವಿನಾಳ ಕ್ರಾಸ್-ದೇವಾಪೂರ ಹಳ್ಳದ ಮದ್ಯೆಇರುವತಿರುವರಸ್ತೆಯಲ್ಲಿರಾಯಲ್ಎನ್ಫೀಲ್ಡ್ ಮೋಟಾರ ಸೈಕಲ ನಂಬರ ಕೆ.ಎ 33 ಇ.ಎ 4000 ನೇದ್ದರ ಸವಾರನುತನ್ನ ಮೋಟಾರ ಸೈಕಲ್ ಸಮೇತರಸ್ತೆಯ ಪಕ್ಕದಲ್ಲಿ ಬಿದ್ದಿದ್ದರಿಂದತಲೆಗೆ ಭಾರಿರಕ್ತಗಾಯವಾಗಿ ಮೃತಪಟ್ಟಿರುತ್ತಾನೆಅಂತ ತಿಳಿಸಿದರಿಂದ ಗಾಬರಿಯಾಗಿ ನಾನು ಮತ್ತು ನನ್ನ ಮಾವನಾದ ಭೀಮರಾಯಅರಕೇರಿ, ಕಾರ ಚಾಲಕ ರಾಹುಲ್ ಪಂಚಮಗಿರಿಎಲ್ಲರೂಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನಗಂಡನ ಮೃತದೇಹರಸ್ತೆಯ ಪಕ್ಕ ಬಿದ್ದಿದ್ದು, ಆತನ ಹಣೆಗೆ, ತಲೆಗೆ, ಬಲಗಲ್ಲದ ಮೇಲೆ ಭಾರಿರಕ್ತಗಾಯಗಳಾಗಿತ್ತು. ನಮ್ಮ ಮೋಟಾರ ಸೈಕಲ್ರಸ್ತೆಯ ಪಕ್ಕದಲ್ಲಿರುವ ಭತ್ತದ ಹೊಲದಲ್ಲಿಜಖಂಗೊಂಡು ಬಿದ್ದಿತು. ಆಗ ನಾವು ನಮ್ಮಕಾರಿನಲ್ಲಿ ನನ್ನಗಂಡನ ಶವವನ್ನು ಹಾಕಿಕೊಂಡು ಸುರಪೂರ ಸಕರ್ಾರಿಆಸ್ಪತ್ರೆಯ ಶವಾಗಾರಕೊಣೆಯಲ್ಲಿತಂದು ಹಾಕಿರುತ್ತೇವೆ. ನನ್ನಗಂಡನುದೇವಾಪೂರ ಕ್ರಾಸಿನಿಂದ ಸುರಪೂರಕಡೆಗೆ ನಮ್ಮ ಮೋಟಾರ ಸೈಕಲ ನಂಬರ ಕೆ.ಎ 33 ಇ.ಎ 4000 ನೇದ್ದನ್ನುಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬರುವಾಗ 2-30 ಪಿ.ಎಮ್ ಸುಮಾರಿಗೆದೇವಾಪೂರ ಹಳ್ಳ ದಾಟಿ ಬರುವತಿರುವುರಸ್ತೆಯಲ್ಲಿ ವೇಗದಲ್ಲಿ ನಿಯಂತ್ರಣ ಕಳೆದುಕೊಂಡು ಮೋಟಾರ ಸೈಕಲ್ ಸಮೇತರಸ್ತೆಯ ಪಕ್ಕದಲ್ಲಿ ಬಿದ್ದ ಪರಿಣಾಮತಲೆಗೆ ಭಾರಿಗಾಯಗಳಾಗಿ ಮೃತಪಟ್ಟಿದ್ದು, ಮೃತ ನನ್ನಗಂಡನ ವಿರುದ್ದ ಕಾನೂನು ಕ್ರಮಜರುಗಿಸಬೇಕುಅಂತವಗೈರೆ ಹೇಳಿಕೆ ಸಾರಾಂಶದಠಾಣೆಗುನ್ನೆ ನಂಬರ 42/2022 ಕಲಂ. 279, 304(ಎ) ಐಪಿಸಿ ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.

 
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 28/2022 ಕಲಂ; 504, 506 ಸಂ. 149 ಐಪಿಸಿ : ದಿನಾಂಕ; 20/02/2022 ರಂದು 4-00 ಪಿಎಮ್ ಕ್ಕೆ ಶ್ರೀ ಸಿದ್ದಬಸವಯ್ಯ ತಂದೆ ರಾಚಯ್ಯ ಸುರಗಿಮಠ ವ;37 ಜಾ; ಲಿಂಗಾಯತ ಉ; ವೈದ್ಯರು ಸಾ; ನಾಯಿಕೋಡಿ ಸಂಕೀರ್ಣ ಗಣೇಶ ನಗರ, ಗಂಜ ಏರಿಯಾ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಅಜರ್ಿ ಹಾಜರುಪಡಿಸಿದ್ದು ಸದರಿ ಅಜರ್ಿ ಸಾರಾಂಶವೆನೆಂದರೆ, ನಾನು ಮೇಲೆ ಹೇಳಿದ ವಿಳಾಸದಲ್ಲಿ ಆಸ್ಪತ್ರೆ, ಪ್ಯಾರಾ ಮೆಡಿಕಲ್ ಮತ್ತು ರಕ್ತಬ್ಯಾಂಕ ನಡೆಸುತ್ತಿದ್ದು ಸಂಭಂದ ನಮ್ಮ ಕಟ್ಟಡದ ಮಾಲೀಕರಾದ ನಾಯಿಕೋಡಿ ತಂದೆ ನಾರಾಯಣಪ್ಪ ಜೋತೆ 2019 ರ ಸಾಲಿನಲ್ಲಿ 5 ವರ್ಷಗಳ ವರೆಗೆ ಬಾಡಿಗೆ ಕರಾರು ಮಾಡಿಕೊಂಡಿರುತ್ತದೆ. ಈಗ ದಿನಾಂಕ; 06/02/2022 ರಂದು ನಾನು ಮತ್ತು ನಮ್ಮ ಸಂಕೀರ್ಣ ಮಾಲೀಕರ ಮಗನಾದ ಜಯವರ್ದನ ತಂದೆ ನಾಯಿಕೋಡಿ ಇಬ್ಬರು ಕೂಡಿ ನಮ್ಮ ಕಾರಿನಲ್ಲಿರುವಾಗ ಇಳಕಲ್ ಅಮೀನಗಡ ರಾಜ್ಯ ಹೆದ್ದಾರಿಯಲ್ಲಿ ಒಂದು ಖಾಸಗಿ ಬಸ್ ನಂ.ಕೆಎ.51.ಬಿ.2459 ರ ಚಾಲಕ ಅಲಕ್ಷತನದಿಂದ ಚಲಾಯಿಸಿ ನಮ್ಮ ಕಾರಿಗೆ ಅಪಘಾತಪಡಿಸಿದಾಗ ನನ್ನ ಜೊತೆಯಲ್ಲಿದ್ದ ಜಯರ್ವನ ಸ್ಥಳದಲ್ಲಿ ಮೃತಪಟ್ಟಿದ್ದು ಮತ್ತು ನನಗೆ ತಲೆಗೆ, ಕೈ ಕಾಲುಗಳಿಗೆ ರಕ್ತಗಾಯವಾಗಿರುತ್ತದೆ. ಈ ಸಂಭಂದ ಹುನುಗುಂದಾ ಪೊಲೀಸ ಠಾಣೆಯಲ್ಲಿ ಬಸ್ಸಿನ ಚಾಲಕನ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.(05/2022) ಈಗ ದಿನಾಂಕ; 11/02/2022 ರಂದು ಮಧ್ಯಾಹ್ನ 3-30 ಪಿಎಮ್ ಕ್ಕೆ ನಾನು, ನನ್ನ ಆಸ್ಪತ್ರೆಯಲ್ಲಿದ್ದಾಗ ನಾಯಿಕೋಡಿ ಬಂದು ನಿನ್ನ ಜೊತೆ ಮಾತನಾಡುವುದು ಇದೆ. ನಮ್ಮ ಮನೆಗೆ ಬಾ ಎಂದು ಕರೆದುಕೊಂಡು ಹೋದ. ಜೋತೆಯಲ್ಲಿ ನನ್ನ ಹೆಂಡತಿ ಹೇಮಾ ಮತ್ತು ನಮ್ಮ ಸ್ನೇಹಿತರಾದ ರಾಘವೇಂದ್ರ ಕಲಾಲ, ನಂದಗೋಪಾಲ ಪಟವಾರಿ ಮತ್ತು ನಮ್ಮ ಸಿಬ್ಬಂದಿ ಎಲ್ಲರೂ ಅವರ ಮನೆ ದುಗರ್ಾ ನಿವಾಸದ ಒಳಗಡೆ ನಿಂತಾಗ ಅಲ್ಲಿ ತಾಯಪ್ಪ ಹತ್ತಿಕುಣಿ, ಶರಣು(ನಾಯಿಕೋಡಿ ಅಣ್ಣನ ಮಗ), ಮಹೇಂದ್ರಗೌಡ ಯಾದಗಿರಿ, ಹಣಮಂತ ಮಡ್ಡಿ ಯಾದಗಿರಿ, ಶಂಕರ ಗೌಸಿ ಯಾದಗಿರಿ ಮತ್ತು ಈತರರು ಇದ್ದು ನನಗೆ ನಾಯಿಕೋಡಿ ಮತ್ತು ಈತರರು 2019 ನೇ ಸಾಲಿನಲ್ಲಿ ನನಗೆ 2 ಎಕರೆ ಹೊಲ ಮಾರಾಟ ಮಾಡಿದ್ದು, ಆ ಹೊಲವನ್ನು ನನಗೆ ವಾಪಾಸ್ಸು ಪುಕ್ಕಟೆಯಾಗಿ ಕೊಡಬೇಕೆಂದು, ಇಲ್ಲದಿದ್ದರೆ ನಿನಗೆ ಜೀವ ತೆಗೆಯುತ್ತೇವೆ ಎಂದರು. ಅಷ್ಠರಲ್ಲಿ ನಾನು ನನ್ನ ಹೊಲವನ್ನು ನಿಮಗೆ ಏಕೆ ಕೊಡಬೇಕು ಎಂದು ಕೇಳಿದಾಗ ತಾಯಪ್ಪ ಹತ್ತಿಕುಣಿ ನನಗೆ ಬೊಸಡೀ ಮಗನೇ ನೀನು ನಮ್ಮ ಜಯವರ್ದನನಿಗೆ ಊರಿಗೆ ಕರೆದುಕೊಂಡು ಹೋದ ಸಲುವಾಗಿ ಸತ್ತಿದ್ದಾನೆ. ಅದಕ್ಕೆ ಪರಿಹಾರ ರೂಪದ್ದು ಹೊಲ ಕೊಡಬೇಕು ಎಂದನು ಅಷ್ಟರಲ್ಲಿ ಊಳಿದ ಮಹೇಂದ್ರಗೌಡ, ಹಣಮಂತ ಮಡ್ಡಿ, ಶಂಕರಗೌಸಿ, ಶರಣು ಇವರೆಲ್ಲರೂ ಈ ಸೂಳಿ ಮಗನಿಗೆ ಏನು ಮಾತನಾಡುತ್ತೀಯಾ ಹೊಡೆದು ಖಲಾಸ ಮಾಡ್ರಿ ಎಂದರು. ಅಷ್ಟರಲ್ಲಿ ನನ್ನ ಹೆಂಡತಿ ಮತ್ತು ನನ್ನ ಜೊತೆಯಲ್ಲಿದ್ದವರು ಮಹೇಂದ್ರಗೌಡ, ಹಣಮಂತ ಮಡ್ಡಿ, ಶಂಕರಗೌಸಿ, ತಾಯಪ್ಪ ಹತ್ತಿಕುಣಿ, ಶರಣು ಮತ್ತು ಈತರರು ನನಗೆ ಯಾದಗಿರಿಯಲ್ಲಿ ಹೇಗೆ ಬಾಳುತಿ ನಾವು ನೋಡುತ್ತೇವೆ. ನೀನು ನಿನ್ನ ಹೊಲವನ್ನು ನಾಯಿಕೊಡಿಗೆ ಕೊಡದಿದ್ದರು ನಿನ್ನ ಕುಟುಂಬವನ್ನು ನಾಶ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ. ನಾನು ಮನೆಯಲ್ಲಿ ವಿಚಾರಣೆ ಮಾಡಿ ಪಿಯರ್ಾಧಿ ಸಲ್ಲಿಸಲು ತಡವಾಗಿರುತ್ತದೆ. ನನ್ನ ಕುಟುಂಬಕ್ಕೆ ರಕ್ಷಣೆ ಕೊಡಬೇಕಾಗಿ ಮತ್ತು ಮೇಲೆ ಹೇಳಿದ ಆರೋಪಿತರ ವಿರುದ್ದ ಕ್ರಮ ಕೈಕೊಳ್ಳಬೇಕಾಗಿ ವಿನಂತಿ ಅಂತಾ ಅಜರ್ಿ ಕೊಟ್ಟಿದ್ದು ಸದರಿ ಪ್ರಕರಣವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ಇಂದು ದಿನಾಂಕ; 20/02/2022 ರಂದು 4-45 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.28/2022 ಕಲಂ.504, 506 ಸಂ. 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 23/2022, ಕಲಂ, 323,326, 504.506. ಸಂ.34 ಐ ಪಿ ಸಿ : ದಿನಾಂಕ: 20-02-2022 ರಂದು ಮಧ್ಯಾಹ್ನ 02-30 ಗಂಟೆ ಸುಮಾರಿಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಎಮ್.ಎಲ್ ಸಿ ಇದೆ ಅಂತಾ ತಿಳಿಸಿದ ಮೇರೆಗೆ ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ಗಾಯಾಳುವನ್ನು ವಿಚಾರಿಸಿದ್ದು ಗಾಯಾಳು ಹೇಳಿಕೆ ಪಿಯರ್ಾಧಿ ನೀಡಿದ ಸಾರಂಶವೇನೆಂದರೆ ನಾನು ನಮ್ಮೂರಿನಲ್ಲಿ ಕೆರೆ ನೀರು ಬಿಡುವ ಕೆಲಸ ಮಾಡಿಕೊಂಡಿರುತ್ತೇನೆ ಇಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ನಾನು ನಮ್ಮೂರಾದ ಬೇಳಗೇರಾ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಇರುವಾಗ ಆರೋಪಿತರಲ್ಲರು ಕೂಡುಕೊಂಡು ಬಂದು ಲೇ ಸೂಳೆ ಮಗನೆ ಕೆರೆ ನೀರು ಖಾಲಿ ಮಾಡು ಅಂತಾ ಎಷ್ಟು ಸಲ ಹೇಳಬೇಕು ಮಗನೆ ಅಂತಾ ಅಂದು ಕಯಿಂದ ಮತ್ತು ಕಟ್ಟಿಗೆಯ ಬಡಿಗೆಯಿಂದ ತಲೆಗೆ ಎಡಗೈಗೆ ಹೊಡೆದಿದ್ದರಿಂದ ಎಡಗೈ ಭಾರಿ ಗಾಯವಾಗಿ ಕೈ ಮುರಿದಿರುತ್ತದೆ ಬೆನ್ನಿಗೆ ಗುಪ್ತಗಾಯ ಮಾಡಿ ಇನ್ನೊಂದು ಸಲ ನಾವು ಹೇಳದೆ ಕೇಳದಿದ್ದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಮಗನೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯಾಧಿ ಸಾರಂಶ

ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 21/2022 ಕಲಂ 323, 354, 504, 506 ಸಂಗಡ 34 ಐಪಿಸಿ : ನಿನ್ನೆ ದಿನಾಂಕ:19/02/2022 ರಂದು 3.30 ಪಿ.ಎಮ್. ಸುಮಾರಿಗೆ ಫಿಯರ್ಾದಿ ಮತ್ತು ಫಿಯರ್ಾದಿ ಮೊಮ್ಮಗಳು ಕೂಡಿತಮ್ಮ ಮನೆಯ ಮುಂದೆ ಮಾತನಾಡುತ್ತಾ ಕುಳಿತಾಗ ಆರೋಪಿತರೆಲ್ಲರೂಕೂಡಿ ಬಂದವರೇ ಎಲೇ ಭೋಸಡಿ ಮಕ್ಕಳೇ ಠಾಣೆಯಲ್ಲಿ ನಮ್ಮ ಮೇಲೆ ಯಾಕೆಅಜರ್ಿಕೊಟ್ಟೀರಿ, ನಮ್ಮ ಮೇಲೆ ಅಜರ್ಿಕೊಡುವಷ್ಟುಧೈರ್ಯ ಬಂತಾ, ಸೂಳೇ ಮಕ್ಕಳೇ ಅಂತಾ ಬೈದವರೇಆರೋಪಿ ಸಾಯಬಣ್ಣಈತನು ಫಿಯರ್ಾದಿ ಮೊಮ್ಮಗಳಾದ ಅಂಬಿಕಾ ಇವಳಿಗೆ ಅವಮಾನ ಮಾಡುವಉದ್ದೇಶದಿಂದ ಕೈ ಹಿಡಿದು ಎಳೆದಾಡಿ ಮೈ-ಕೈಗೆ ತನ್ನ ಕೈಗಳಿಂದ ಹೊಡೆಬಡೆ ಮಾಡುತ್ತಿರುವಾಗ ಫಿಯರ್ಾದಿ ಹೊಡೆಯುವದನ್ನು ಬಿಡಿಸಲು ಹೋದಾಗಆರೋಪಿತರಾದ ಮಹಾದೇವಿ ಮತ್ತು ಸುನಿತಾಇವರು ಬಂದುಕೈಯಿಂದ ಹೊಡೆಬಡೆ ಮಾಡಿಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 37/2022 ಕಲಂ: 279, 337, 338 ಐಪಿಸಿ : ಇಂದು ದಿನಾಂಕ 20.02.2022 ರಂದು 08.45 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಸಂಜು ತಂದೆ ಶರಣಪ್ಪ ಹೊಸಮನಿ ವ|| 29ವರ್ಷ ಜಾ|| ಹಿಂದೂ ಹೊಲೆಯ ಉ|| ಕೂಲಿಕೆಲಸ ಸಾ|| ಮುದನೂರ [ಬಿ] ತಾ|| ಹುಣಸಗಿ ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನಂದರೆ ನನ್ನ ಹೆಸರಿನಲ್ಲಿ ಒಂದು ಹೊಂಡಾ ಶೈನ ಮೋಟರ ಸೈಕಲ ನಂಬರ ಕೆಎ-33 ಬಿ-3072 ಇದ್ದು ನಾನು ಆಗಾಗ ಕೆಲಸಕ್ಕೆ ಹೋಗಬೇಕೆಂದರೆ ನನಗೆ ಸರಿಯಾಗಿ ನಡೆಸಲು ಬಾರದೇ ಇರುವದರಿಂದ ನಾನು ಬೇರೆಯವರನ್ನು ಕರೆದುಕೊಂಡು ಹೋಗುತ್ತಿದ್ದೆನು. ಹೀಗಿದ್ದು ದಿನಾಂಕ 13.02.2022 ರಂದು 10.30 ಎಎಂ ಸುಮಾರಿಗೆ ನನ್ನ ಕೆಲಸದ ನಿಮಿತ್ಯೆ ಮುದನೂರದಿಂದ ಕೆಂಭಾವಿಗೆ ಹೋಗುವ ಕುರಿತು ನಮ್ಮ ಮೋಟರ ಸೈಕಲ ನಡೆಸಲು ನಮ್ಮೂರ ಸಾಹೇಬಗೌಡ ತಂದೆ ಬಸನಗೌಡ ಗೌಡಪ್ಪಗೋಳ ಇವರನ್ನು ಕರೆದುಕೊಂಡು ಹೋಗುತ್ತಿದ್ದಾಗ ಅಂದಾಜು 10.45 ಎಎಮ್ ಸುಮಾರಿಗೆ ನಾವಿಬ್ಬರೂ ನಮ್ಮ ಮೋಟರ ಸೈಕಲ ನಂಬರ ಕೆಎ-33 ಬಿ-3072 ನೇದ್ದರ ಮೇಲೆ ಕೆಂಭಾವಿ ಪಟ್ಟಣದ ಸೊನ್ನದ ಪೆಟ್ರೋಲ ಬಂಕ ಮುಂದೆ ಹೋಗುತ್ತಿದ್ದಾಗ ನಮ್ಮ ಮೋಟರ ಸೈಕಲ ನಡೆಸುವ ಸಾಹೇಬಗೌಡ ಗೌಡಪ್ಪಗೋಳ ಸಾ|| ಮುದನೂರ [ಬಿ] ಈತನು ನಮ್ಮ ಮೋಟರ್ ಸೈಕಲನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿ ಒಮ್ಮಲೇ ಬಲಭಾಗಕ್ಕೆ ಕಟ್ ಮಾಡಿದಾಗ ಮೋಟರ್ ಸೈಕಲ ಸ್ಕಿಡ್ಡಾಗಿ ಬಿದ್ದಿದ್ದು ಆಗ ನಾವಿಬ್ಬರೂ ನೆಲಕ್ಕೆ ಬಿದ್ದಿದ್ದು ಆದರೆ ನಮ್ಮ ಮೋಟರ ಸೈಕಲ ನಡೆಸುವ ಸಾಹೇಬಗೌಡ ಇವರಿಗೆ ಯಾವದೇ ಗಾಯಗಳಾಗಲಿಲ್ಲ ಆದರೆ ಹಿಂದೆ ಕುಳಿತ ನನಗೆ ಎಡಮುಡ್ಡಿಗೆ ಭಾರೀ ಗುಪ್ತಗಾಯವಾಗಿ ತಲೆಗೆ ರಕ್ತಗಾಯವಾಗಿದ್ದು ಅಲ್ಲದೇ ಟೊಂಕಕ್ಕೆ ಸಹ ಗುಪ್ತಗಾಯವಾಗಿದ್ದು ಅಟಷರಲ್ಲಿ ನಮ್ಮ ಮೋಟರ ಸೈಕಲ ನಡೆಸುವ ಸಾಹೇಬಗೌಡ ಇವರು ನನಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಹೋಗಿ ಉಪಚಾರ ಪಡಿಸಿದ್ದು ಅಷ್ಟರಲ್ಲಿ ಅಲ್ಲಿಗೆ ನಮ್ಮ ಅಣ್ಣನಾದ ಗುರುಪುತ್ರ ಇವರು ಬಂದು ನನಗೆ ಬಹಾಳ ತ್ರಾಸ ಆಗುತ್ತಿದ್ದರಿಂದ ನನಗೆ ಹೆಚ್ಚಿನ ಉಪಚಾರ ಕುರಿತು ವಿಜಯಪುರದ ಬಿ ಎಮ್ ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇಲ್ಲಿಯವರೆಗೆ ನಾನು ಸದರಿ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ಬಿಡುಗಡೆಯಾಗಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನನಗೆ ಅಪಘಾತ ಪಡಿಸಿದ ಮೋಟರ್ ಸೈಕಲ ನಂಬರ ಕೆಎ-33 ಬಿ-3072 ನೇದ್ದರ ಚಾಲಕ ಸಾಹೇಬಗೌಡ ತಂದೆ ಬಸನಗೌಡ ಗೌಡಪ್ಪಗೋಳ ಸಾ|| ಮುದನೂರ [ಬಿ] ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 37/2022 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಸ್ಶೆದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 28/2022 ಕಲಂ 379 ಐಪಿಸಿ : ಇಂದು ದಿನಾಂಕ 20-02-2022 ರಂದು ರಾತ್ರಿ 11 ಗಂಟೆಗೆ ಶ್ರೀ ವಿಜಯ ಕುಮಾರ ಪಿ.ಐ ಸಾಹೇಬ ಸೈದಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಛಲೇರಿ ಹಳ್ಳದಲ್ಲಿ ಮರಳು ತುಂಬಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಇಂಜಿನ್ ನಂ ಟಿ.ಎಸ್-38-ಟಿ-0209 ಮತ್ತು ಇಂಜನ್ಗೆ ಅಳವಡಿಸಿದ ಟ್ರ್ಯಾಲರ್ ಸಂಖ್ಯೆ ಟಿ.ಎಸ್.06-ಯು.ಸಿ ವಾಹನವಬನ್ನು ಜಪ್ತಿ ಪಂಚನಾಮೇದೊಂದಿಗೆ ನನಗೆ ಒಪ್ಪಿಸಿ ಮುಂದಿನ ಕಾನೂನು ಕ್ರಮ ಕೈಕೊಳ್ಳುವಂತೆ ಜ್ಞಾಪನಾ ಪತ್ರದ ಮೂಲಕ ಸೂಚಿಸಿರುತ್ತಾರೆ. ಸದರಿ ಜಪ್ತಿ ಪಂಚನಾಮೆಯ ಆಧಾರದ ಮೇಲಿಂದ ನಾನು ಸಿ.ಹೆಚ್.ಸಿ-44 ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ 28/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

Last Updated: 21-02-2022 09:28 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080