Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 21-05-2022

ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 70/2022 ಕಲಂ 323, 324, 354, 448, 504, 506 ಐ.ಪಿ.ಸಿ: ಇಂದು ದಿನಾಂಕ: 20-05-2022 ರಂದು ಮುಂಜಾನೆ 11:00 ಗಂಟೆಗೆ ಪಿಯರ್ಾದಿದಾರಳು ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿಸಿದ ಫಿಯರ್ಾದಿ ತಂದು ಹಾಜರುಪಡೆಸಿದ್ದೆನೆಂದರೆ, ನಾನು ಶ್ರೀಮತಿ ಲಕ್ಷ್ಮೀ ಗಂಡ ಸಣ್ಣ ಸಾಬಣ್ಣ ತಳವಾರ ವಯ: 35 ಜಾತಿ: ಕಬ್ಬಲಿಗ ಉ: ಕೂಲಿಕೆಲಸ ಸಾ: ಠಾಣಾಗುಂದಿ ತಾ: ಜಿ:ಯಾದಗಿರಿ -9353560035. ಸದರಿ ವಿಳಾಸದಲ್ಲಿ ನನ್ನ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ಯಜಮಾನ ಸಣ್ಣಸಾಬಣ್ಣ ಇವರು ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಹೋಗಿರುತ್ತಾರೆ. ದಿನಾಂಕ 18-05-2022 ರ ರಾತ್ರಿ 8.00 ಪಿ.ಎಮ್ ಸಮಯದಲ್ಲಿ ನಮ್ಮ ಗ್ರಾಮ ವಾಸಿಯಾದ ಭೀಮರಾಯ ತಂದೆ ತಿಮ್ಮಣ್ಣ ಹುಲಕಲ್ಲ ಇವರ ಮಗಳ ವಿವಾಹವು ಅಪ್ರಪ್ತಾ ವಯಸ್ಸಿನ ಕಾರಣದಿಂದ ಮದುವೆ ನಿಂತು ಹೋಗಿರುತ್ತದೆ. ಇದೆ ವಿಚಾರಕ್ಕೆ ಅಧಿಕಾರಿಗಳಿಗೆ ನಾನೆ ಹೇಳಿಕೊಟ್ಟಿದ್ದೆನೆಂದು ತಿಳಿದು ಮನೆಗೆ ನುಗ್ಗಿ ಬಂದು ಕೈಹಿಡಿದು ಎಳೆದಾಡಿ ಬಡಿಗೆಯಿಂದ ನನ್ನ ಎಡಗೈಯ ಮುಂಗೈಗೆ , ತಲೆಯ ಹಿಂದುಗಡೆ ಮತ್ತು ಎಡ ಭಾಗದ ಸೊಂಟಕ್ಕೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾನೆ, ಆಗ ಅಲ್ಲಿಯೇ ಇದ್ದ ನನ್ನ ಮಗನಾದ ದೇವಪ್ಪ ತಂದೆ ಸಾಬಣ್ಣ ನಮ್ಮ ಮನೆಯ ಪಕ್ಕದವರಾದ ಪಾರ್ವತಿ ಗಂಡ ಮರೆಪ್ಪ ತಳವಾರ ಮತ್ತು ದೇವಪ್ಪ ತಂದೆ ದೊಡ್ಡಸಾಬಣ್ಣ ತಳವಾರ ಇವರು ಬಂದು ಜಗಳ ಬಿಡಿಸಿರುತ್ತಾರೆ - ನಮ್ಮ ಸಂಸಾರದ ವಿಚಾರಕ್ಕೆ ಬಂದರೆ ನಿನ್ನ ಹಾಗೂ ನಿಮ್ಮ ಕುಟುಂಬವನ್ನು ಕೊಲೆ ಮಾಡುತ್ತೇವೆಂದು ಸೂಳೇ ಮಕ್ಕಳೇ ರಂಡಿ ಮಕ್ಕಳೇ ಅಂತ ಅವಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾನೆ ರಾತ್ರಿ ಸಮಯವಾಗಿದ್ದರಿಂದ ಮತ್ತು ದಿನಾಂಕ 19/05/2022 ರಂದು ಯಾದಗಿರಿ ಜಿಲ್ಲಾ ಆಸ್ಪತ್ರೆಯಗೆ ನನ್ನ ಮಗನೊಂದಿಗೆ ಚಿಕಿತ್ಸೆಗಾಗಿ ದಾಖಲಾಗಿರುತ್ತೆನೆ.
ನನ್ನ ಮನೆಯೊಳಗೆ ಬಂದು ಅವಚ್ಯವಾಗಿ ಬೈದು ಬಡಿಗೆಯಿಂದ ಹೊಡೆದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಭೀಮರಾಯ ತಂದೆ ತಿಮ್ಮಣ್ಣ ಹುಲಿಕಲ್ಲ ಇತನ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ನಾನು ನಮ್ಮ ಕುಟುಂಬದ ಹಿರಿಯರೊಂದಿಗೆ ಚಚರ್ಿಸಿ ಠಾಣೆಗೆ ಬರಲು ತಡವಾಗಿರುತ್ತದೆ.
ಸದರಿ ಹೇಳಿಕೆ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ:70/2022 ಕಲಂ 323, 324, 354, 448, 504, 506 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 71/2022 ಕಲಂ. 279,337,338 ಐಪಿಸಿ : ದಿನಾಂಕ: 20-05-2022 ರಂದು ಸಾಯಂಕಾಲ 05-00 ಗಂಟೆಗೆ ಕಲಬುರಗಿ ಬಸವೇಶ್ವರ ಆಸ್ಪತ್ರೆಯಿಂದ ಪಿಯರ್ಾಧಿ ಹೇಳಿಕೆ ಪಡೆದುಕೊಂಡ ಬಂದ ಪಿಯರ್ಾಧಿ ಸಾರಂಶವೆನೆಂದರೆ ದಿನಾಂಕ: 19-05-2022 ರಂದು ಮಧ್ಯಾಹ್ನ 02-45 ಗಂಟೆಗೆ ಯಾದಗಿರಿ- ಸೇಡಂ ಮುಖ್ಯ ರಸ್ತೆಯ ಮೇಲೆ ಬಾಚವಾರ ಕ್ರಾಸ ಹತ್ತಿರ ಟ್ರ್ಯಾಕ್ಟರದಲ್ಲಿ ಯಾದಗಿರಿಗೆ ಹೋಗುತ್ತಿರುವಾಗ ಟ್ರ್ಯಾಕ್ಟರ ಚಾಲಕನು ತಾನು ನಡೆಸುವ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಟ್ರ್ಯಾಕ್ಟರನ್ನು ನಿಯಂತ್ರಣ ಮಾಡದೆ ರೊಡಿನ ಪಕ್ಕದಲ್ಲಿ ಟ್ರ್ಯಾಕ್ಟರನ್ನು ಪಲ್ಟಿ ಮಡಿದ್ದು ಟ್ರ್ಯಾಕ್ಟರ ಪಲ್ಟಿಯಾದಾಗ ನನ್ನ ತಂದೆ ಹಣೆಗೆ ಕೈಗೆ ಭಾರಿ ರಕ್ತಗಾಯವಾಗಿದ್ದು ಮತ್ತು ಚಾಲಕನಿಗೆ ಹಣೆಗೆ ಗಾಯವಾಗಿರುತ್ತದೆ. ಟ್ರ್ಯಾಕ್ಟರ ಚಾಲಕನು ತಾನು ನಡೆಸುವ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿದ್ದರಿಂದ ಘಟನೆ ಜರುಗಿರುತ್ತದೆ, ಕಾರಣ ಟ್ರ್ಯಾಕ್ಟರ ಚಾಲಕ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿರ್ಯಾಧಿ ಸಾರಂಶ ಇರುತ್ತದೆ.

ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 72/2022 ಕಲಂ. 279. 337, 338, ಐಪಿಸಿ: ಇಂದು ದಿನಾಂಕ :20/05/2022 ರಂದು ಸಾಯಂಕಾಲ 06:30 ಗಂಟೆಗೆ ಪಿಯರ್ಾದಾರನಾದ ಲಕ್ಷ್ಮಣ ತಂದೆ ಶಂಕರ ಚವ್ಹಾಣ ವಯ:25 ಉ: ಕೂಲಿಕೆಲಸ ಜಾತಿ: ಲಂಬಾಣಿ ಸಾ: ಪೇರಿಪಾಳತಾಂಡಾ ತಾ:ಜಿ:ನಾರಯಣಪೇಠ ಇತನು ಠಾಣೆಗೆ ಬಂದು ಕನ್ನಡದಲ್ಲಿ ಟೈಪ್ ಮಾಡಿ ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಂಶವೆನಂದರೆ ನಾನು ಮತ್ತು ನನ್ನ ಹೆಂಡತ್ತಿ ಶೀಲಾ ಗಂಡ ಲಕ್ಷ್ಮಣ ಚವ್ಹಾಣ ನನ್ನ ಹೆಡತ್ತಿಯ ತವರ ಊರಾದ ಎಸ್ ಹೊಸಳ್ಳಿ ತಾಂಡಾ ಯಾದಗಿರಿ ತಾಲ್ಲೂಕ ಇದ್ದು ಅವರ ಸಂಬಂದಿಕರು ಅರಿಕೇರ ಗ್ರಾಮದಲ್ಲಿ ದೇವರ ಕಾರ್ಯಕ್ರಮ ಇದೆ ಬಾ ಅಂತ ನಮ್ಮ ಮಾವನವರು ಪೋನ ಮೂಲಕ ತಿಳಿಸಿದ್ದರಿಂದ ಎಸ್ ಹೊಸಳ್ಳಿ ತಾಂಡಾಕ್ಕೆ ಬಂದ್ದಿದೇವು. ದಿನಾಂಕ: 17/05/2022 ರಂದು ಮುಂಜಾನೆ 10:30 ಗಂಟೆಗೆ ನಾನು ಮತ್ತು ನನ್ನ ಹೆಂಡತ್ತಿ ಶೀಲಾ ಇಬ್ಬರು ನನ್ನ ಹೊಸ ಮೋಟರ ಸೈಕಲ ಟಿವಿ ಎಸ್ ಪ್ಲಾಟಿನ ನೊಂದಣಿ ಇಲ್ಲದ್ದು ಮತ್ತು ಮೋಟರ ಸೈಕಲ ಚೇಸಿ ನಂ ಒಆ2ಂ76ಂಘಿಘಿಒಘಈ37568 ನೇದ್ದರ ಮೇಲೆ ಎಸ್ ಹೊಸಳ್ಳಿ ತಾಂಡಾದಿಂದ ಅರಿಕೇರ(ಕೆ) ಗ್ರಾಮಕ್ಕೆ ಹೋಗುವಾಗ ರಾಮಸಮುದ್ರ ಗ್ರಾಮದ ಹತ್ತಿರ ಹೋಗುವಾಗ ನನ್ನ ಮೋಟರ ಸೈಕಲನಲ್ಲಿ ಪೆಟ್ರೋಲ್ ಖಾಲಿಯಾಗಿದ್ದು. ಆಗ ನಾನು ರಾಮಸಮುದ್ರ ಗ್ರಾಮದಲ್ಲಿ ಪೆಟ್ರೋಲ್ ಬಂಕನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ರಾಮಸಮುದ್ರದಿಂದ ಅರಿಕೇರ(ಕೆ) ಕಡೆಗೆ ಹೋಗುವಾಗ ರಾಮಸಮುದ್ರ ಗ್ರಾಮದ ದಾಟಿ ಸ್ವಲ್ಪ ಮುಂದೆ ಹೋಗುವಾಗ ನಮ್ಮ ಎದರುಗಡೆಯಿಂದ ಒಂದು ಮೋಟರ ಸೈಕಲ ಸವಾರನು ಅತಿ ವೇಗವಾಗಿ ಬಂದು ನಾವು ಹೋಗುವ ಕಡೆಗೆ ಬಂದು ಡಿಕ್ಕಿ ಪಡೆಸಿದನು. ಆಗ ಡಿಕ್ಕಿ ರಭಸಕ್ಕೆ ನಾವು ರೋಡ ಮೇಲೆ ಬಿದ್ದೇವು ನನಗೆ ತಲೆಯ ಎಡಭಾಗಕ್ಕೆ ಭಾರಿ ರಕ್ತಗಾಯ, ಎಡಭುಜಕ್ಕೆ ತರಚಿದ ಗಾಯ, ಬಲಗೈ ಮತ್ತು ಎಡಗೈನ ಬೆರಳುಗಳಿಗೆ ತರಚಿದ ಗಾಯ ಮತ್ತು ಗುಪ್ತಗಾಯಗಳು, ಬಲ ಮತ್ತು ಎಡ ಮೊಣಕಾಲುಗಳಿಗೆ ತರಚಿದ ರಕ್ತ ಗಾಯಗಳು ಹಾಗೂ ಎಡಗಾಳಿನ ಪಾದ ಮತ್ತು ಕಾಳಿನ ಹೆಬ್ಬೆರಳಿಗೆ ಭಾರಿ ರಕ್ತಗಾಯಳಾಗಿದ್ದು ಅಲ್ಲಿಯೇ ಬಿದ್ದಿದ ನನ್ನ ಹೆಂಡತ್ತಿಗೆ ಎಡಕಣ್ಣಿನ ಪಕ್ಕದಲ್ಲಿ ಭಾರಿ ರಕ್ತಗಾಯ, ಎಡಗೈನ ಮೊಣಕೈಗೆ ತರಚಿದ ಗಾಯ ಬಲಗಾಲಿನ ಮೊಣಕಾಲಿಗೆ ತರಚಿದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ. ನನ್ನಂತೆ ನಮ್ಮಗೆ ಅಪಘಾತ ಮಾಡಿದ ವಾಹನ ಸವಾರನಿಗೆ ಬಲಗಾಲಿನ ಮೊಣಕಾಲಿನ ಕೆಳಗೆ ಮತ್ತು ಪಾದದ ಮೇಲೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿವೆ ಆಗ ನನ್ನ ಹೆಂಡತ್ತಿ ನನ್ನ ಮೋಬೈಲನಿಂದ ಅವರ ಅಣ್ಣಾಂದಿರಿಗೆ ಪೋನ ಮಾಡಿದಾಗ ಅವರು ಅರಿಕೇರ(ಕೆ) ಗ್ರಾಮದಿಂದ ಅಪಘಾತವಾದ ಸ್ಥಳಕ್ಕೆ ಬಂದು ವಿಚಾರಿಸಿದಾಗ ನಮ್ಮಗೆ ಅತಿ ವೇಗದಿಂದ ಬಂದು ಡಿಕ್ಕಿ ಪಡೆಸಿದ ಮೋಟರ ಸೈಕಲ ಸವಾರನಿಗೆ ಅವರು ವಿಚಾರಿಸಿದಾಗ ಅವನ್ನು ನನ್ನ ಹೆಸರು ಅಕ್ಷೊಬ್ ತಂದೆ ಅನಂತರಾವ್ ಪೂಜಾರಿ ಸಾ: ಬೊರಬಂಡ ಗಾಡಿ ನಂ ಕೆಎ33/ಇಬಿ/9524 ಅಂತ ಹೇಳಿದನು ನಂತರ ನನಗೆ ಮತ್ತು ನನ್ನ ಹೆಂಡತ್ತಿಗೆ ಒಂದು ಖಾಸಗಿ ವಾಹನದಲ್ಲಿ ನಮ್ಮ ಮಾವನವರಿಬ್ಬರು ಕೂಡಿ ಹಾಕಿಕೊಂಡು ಯಾದಗಿರ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ವಿಷಯದ ಬಗ್ಗೆ ನಾವು ನಮ್ಮ ಹಿರಿಯರ ಜೊತೆಗೆ ಚಚರ್ಿಸಿ ಬರಲು ತಡವಾಗಿರುತ್ತದೆ. ನಮ್ಮಗೆ ಅಪಘಾತ ಮಾಡಿದ ಚಾಲಕನ ಮೇಲೆ ಸೂಕ್ತ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತ ವಿನಂತಿ. ಸದರಿ ಹೇಳಿಕೆಯ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ 72/2022 ಕಲಂ 279, 337, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 80/2022 ಕಲಂ: 420 ಐ.ಪಿ.ಸಿ: ಫಿಯರ್ಾದಿ ಮತ್ತು ಇತರರಿಗೆ ಆರೋಪಿತರು ನಮ್ಮದು ದೊಡ್ಡ ದೊಡ್ಡ ಹಣಕಾಸಿನ ಲೇವಾದೇವಿ ಸಂಸ್ಥೆಗಳಿವೆ. ನೀವು ರೂ 5000=00 ಕೊಟ್ಟರೆ ಅದಕ್ಕೆ ಒಂದು ವಾರದೊಳಗೆ ಡಬಲ ಹಣ ರೂ 10000=00 ಕೊಡುತ್ತೇವೆ ಅಂತಾ ಮೋಸಮಾಡುವ ಉದ್ದೇಶದಿಂದ ನಂಬಿಕೆ ಹುಟ್ಟುವಆಗೆ ಹೇಳಿ ಫಿಯರ್ಾದಿಯ ಹತ್ತಿರ ಮತ್ತು ಇತರರ ಹತ್ತಿರ ಒಟ್ಟು ರೂ 15.70.000=00 ಗಳನ್ನು ಪಡೆದು ಮೋಸವಂಚನೆ ಮಾಡಿದ ಬಗ್ಗೆ ಫಿಯರ್ಾದಿ ವಗೈರೆ.


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 78/2022 ಕಲಂ: 143, 147, 148, 323, 324, 326, 307, 504, 506 ಸಂಗಡ 149 ಐಪಿಸಿ: ಇಂದು ದಿನಾಂಕಃ 20/05/2022 ರಂದು 11-00 ಎ.ಎಮ್ ಕ್ಕೆ ಠಾಣೆಯಲ್ಲಿರುವಾಗ ಶ್ರೀ ಭೀಮಣ್ಣ ತಂದೆ ಅಂಬ್ಲಪ್ಪ ಹಳಿಸಗರ ವಯಸ್ಸು:55 ವರ್ಷ ಉ:ಒಕ್ಕಲುತನ ಜಾತಿ:ಬೇಡರ ಸಾ:ದೇವರಗೋನಾಲ ಇವರು ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನಗೆ 5 ಜನ ಗಂಡುಮಕ್ಕಳು, 2 ಜನ ಹೆಣ್ಣುಮಕ್ಕಳು ಒಟ್ಟು 7 ಜನ ಮಕ್ಕಳಿರುತ್ತಾರೆ. ನಮ್ಮ ಹೊಲ ಸವರ್ೇ ನಂ. 14/3 ನೇದ್ದಕ್ಕೆ ಹೊಂದಿಕೊಂಡು, ನಮ್ಮೂರ ಶ್ರೀನಿವಾಸ ತಂದೆ ಸಂಜೀವಪ್ಪ ದೇಸಾಯಿ ಇವರ ಹೊಲವಿರುತ್ತದೆ. ಸದರಿ ಹೊಲದ ಬದುವಿನ ಮೇಲೆ ಹಾದು ಹೋಗುವ ವಿಷಯದಲ್ಲಿ ಶ್ರೀನಿವಾಸ ಮತ್ತು ಆತನ ಮಕ್ಕಳು ಆಗಾಗ ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿದ್ದರು. ಆದರೂ ಕೂಡ ನಾವು ಮುಂದೆ ಸರಿ ಹೋಗಬಹುದು ಅಂತ ಸುಮ್ಮನಿದ್ದೆವು. ಹೀಗಿದ್ದು ನಿನ್ನೆ ದಿನಾಂಕ:19-05-2022 ರಂದು ನಾನು, ನನ್ನ ಮಗನಾದ ರಾಘವೇಂದ್ರ ವಯಸ್ಸು|| 28 ವರ್ಷ, ಅಣ್ಣನ ಮಗನಾದ ಪರಮಣ್ಣ ತಂದೆ ಹಣಮಂತ್ರಾಯ ಹಳಿಸಗರ ವಯಸ್ಸು|| 27ವರ್ಷ ಹಾಗೂ ನಮ್ಮ ಅಳಿಯನಾದ ಶರಣಪ್ಪ ತಂದೆ ಸಣ್ಣನಿಂಗಪ್ಪ ನಾಯ್ಕೋಡಿ ವಯಸ್ಸು|| 27ವರ್ಷ ಎಲ್ಲರು ಕೂಡಿ ನಮ್ಮ ಹೊಲಕ್ಕೆ ಹೋಗಿದ್ದು, ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಬರುವಾಗ ಕೆಂಭಾವಿ-ಸುರಪುರ ಮುಖ್ಯ ರಸ್ತೆಯ ಪಶು ಆಸ್ಪತ್ರೆಯ ಮುಂದುಗಡೆ ಸಾಯಂಕಾಲ 7:00 ಗಂಟೆ ಸುಮಾರಿಗೆ ನಮ್ಮೂರ ನಮ್ಮ ಜನಾಂಗದವರಾದ 1) ಸಂಜೀವಪ್ಪ ತಂದೆ ಶ್ರೀನಿವಾಸ ದೇಸಾಯಿ 2) ಸತ್ಯಮೂತರ್ಿ ತಂದೆ ಶ್ರೀನಿವಾಸ ದೇಸಾಯಿ 3) ಸತೀಶ ತಂದೆ ಅಮರಪ್ಪ ಕಟ್ಟಿಮನಿ 4) ತಿಪ್ಪರಾಜ ತಂದೆ ಶ್ರೀನಿವಾಸ ದೇಸಾಯಿ 5) ಶ್ರೀನಿವಾಸ ತಂದೆ ಸಂಜೀವಪ್ಪ ದೇಸಾಯಿ ಈ ಎಲ್ಲಾ ಜನರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಮಚ್ಚು, ರಾಡು, ಬಡಿಗೆ ಹಿಡಿದುಕೊಂಡು ಬಂದವರೇ, ಏನಲೆ ಸೂಳೆಮಕ್ಕಳೆ ನಮ್ಮ ಹೊಲದ ಬದುವಿನ ಮೇಲೆ ಹಾದು ಹೋಗಬೇಡಿರಿ ಅಂತ ಹೇಳಿದರೂ ಹಾದು ಹೋಗುತ್ತೀರಿ ಸೂಳೆಮಕ್ಕಳೆ ಅಂತ ಅವಾಚ್ಯವಾಗಿ ಬೈಯುತ್ತಿರುವಾಗ, ನಾವೆಲ್ಲರು ಯಾಕೆ ಸುಮ್ಮನೆ ಬೈಯುತ್ತೀರಿ ಬಹುಕಾಲದಿಂದಲೂ ಅಲ್ಲಿಯೇ ಹಾದು ಹೋಗುತ್ತೇವೆ ಅಂತ ಅನ್ನುತ್ತಿದ್ದಾಗ, ಅವರಲ್ಲಿಯ ಸಂಜೀವಪ್ಪ ಈತನು ನನ್ನ ಅಣ್ಣನ ಮಗನಾದ ಪರಮಣ್ಣನಿಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಮಚ್ಚಿನಿಂದ ತಲೆಯ ಎಡಭಾಗಕ್ಕೆ ಹೊಡೆದು ಭಾರಿ ರಕ್ತಗಾಯ ಮಾಡಿದನು, ಸತ್ಯಮೂತರ್ಿ ಈತನು ರಾಡಿನಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ನನ್ನ ಮಗ ರಾಘವೇಂದ್ರ ಈತನಿಗೆ ಸತೀಶ ಈತನು ರಾಡಿನಿಂದ ತಲೆಯ ಹಿಂದುಗಡೆ ಎಡಭಾಗಕ್ಕೆ ಹೊಡೆದು ರಕ್ತಗಾಯ ಮಾಡಿ, ಎಡಭುಜಕ್ಕೆ ಹೊಡೆದು ಗುಪ್ತಗಾಯ ಮಾಡಿದನು. ಅಳಿಯ ಶರಣಪ್ಪ ಈತನಿಗೆ ತಿಪ್ಪರಾಜ ಈತನು ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದನು ಮತ್ತು ಶ್ರೀನಿವಾಸ ಈತನು ಬಡಿಗೆಯಿಂದ ಬಲಗಾಲ ಮೊಳಕಾಲಿಗೆ ಹೊಡೆದು ಗುಪ್ತಗಾಯ ಮಾಡಿದನು. ಆಗ ಅಲ್ಲಿಯೇ ಇದ್ದ ನಾನು ಮತ್ತು ಅಲ್ಲಿಯೇ ರೋಡಿನ ಮೇಲೆ ಹೊರಟಿದ್ದ ಯಲ್ಲಪ್ಪ ತಂದೆ ಭೀಮಣ್ಣ ನಾಯ್ಕೋಡಿ, ಹೊನ್ನಯ್ಯ ತಂದೆ ಮಲ್ಲಪ್ಪ ಕೊಂಗಂಡಿ ಮತ್ತು ಮಲ್ಲಿಕಾಜರ್ುನ ತಂದೆ ಸಿದ್ದಯ್ಯ ನಾಯ್ಕೋಡಿ ಎಲ್ಲರು ಕೂಡಿ ಜಗಳವನ್ನು ನೋಡಿ ಬಿಡಿಸಿಕೊಂಡೆವು. ಆಗ ಅವರು ಇವತ್ತು ಉಳದಿರಿ ಸೂಳೇ ಮಕ್ಕಳೆ ಇನ್ನೊಮ್ಮೊ ನಮ್ಮ ತಂಟೆಗೆ ಬಂದರೆ ಜೀವ ಹೊಡೆಯುವದೆ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೋದರು. ನಂತರ ಗಾಯಗೊಂಡ ರಾಘವೇಂದ್ರ, ಶರಣಪ್ಪ ಮತ್ತು ಪರಮಣ್ಣ ಮೂವರಿಗು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸುರಪೂರ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿ ಉಪಚಾರ ಪಡಿಸಿ ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಎಎಸ್ಎಮ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ 05 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 79/2022 ಕಲಂ: 143, 147, 148, 323, 324, 326, 307, 504, 506 ಸಂಗಡ 149 ಐಪಿಸಿ: ಇಂದು ದಿನಾಂಕಃ 20/05/2022 ರಂದು 6 ಪಿ.ಎಮ್ ಕ್ಕೆ ಠಾಣೆಯಲ್ಲಿರುವಾಗ ಶ್ರೀ ಸಂಜೀವಪ್ಪ ತಂದೆ ತಿಪ್ಪರಾಜ ಕಕ್ಕಸಗೇರಿ ವ|| 31 ವರ್ಷ ಜಾ||ಬೇಡರ ಉ|| ಒಕ್ಕಲುತನ ಸಾ:ದೇವರಗೋನಾಲ ತಾ:ಸುರಪೂರ ಜಿಲ್ಲಾ:ಯಾದಗಿರಿ ಇವರು ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನಮ್ಮ ಮನೆ ಮತ್ತು ನಮ್ಮ ಜನಾಂಗದ ಭೀಮಣ್ಣ ತಂದೆ ಅಂಬ್ಲಪ್ಪ ಹಳಿಸಗರ ಇವರ ಮನೆ ಅಕ್ಕ-ಪಕ್ಕದಲ್ಲಿ ಇರುತ್ತವೆ. ಭೀಮಣ್ಣನ ಮಗನಾದ ರಾಘವೇಂದ್ರ ಮತ್ತು ಅವರ ಅಣ್ಣನ ಮಗನಾದ ಪರಮಣ್ಣ ಇಬ್ಬರು ದಿನಾಲೂ ಸಾಯಂಕಾಲ ಕುಡಿದು ಬಂದು ನಮ್ಮ ಮನೆ ಮುಂದೆ ನಿಂತುಕೊಂಡು ವಿನಾ ಕಾರಣ ನಮಗೆ ಸುಮ್ಮನೇ ಅವಾಚ್ಯವಾಗಿ ಬೈಯುತ್ತಿದ್ದರು. ನಮ್ಮ ಚಿಕ್ಕಪ್ಪನಾದ ಆಗ ಶ್ರೀನಿವಾಸ ತಂದೆ ಸಂಜೀವಪ್ಪ ಈತನು ರಾಘವೇಂದ್ರ ಮತ್ತು ಪರಮಣ್ಣ ಇಬ್ಬರಿಗೂ ಈ ರೀತಿ ಕುಡಿದು ಬಂದು ಸುಮ್ಮನೇ ಏಕೆ ಬೈಯುತ್ತಿರಿ ಅಂತಾ ಆಗಾಗ ಬುದ್ಧಿ ಮಾತು ಹೇಳಿದರೂ ಸಹ ಅವರು ಕೇಳದೇ ಅವಾಚ್ಯವಗಿ ಬೈಯುವುದು ಮಾಡುತ್ತಿದ್ದರು. ನಮ್ಮ ಚಿಕ್ಕಪ್ಪನಾದ ಶ್ರೀನಿವಾಸ ಇವರು ಕುಡಿದ ನಶೆಯಲ್ಲಿ ಬೈಯುತ್ತಿದ್ದಾರೆ ಅಂತಾ ಸುಮ್ಮನೇ ಇರುತ್ತಿದ್ದರು. ಹೀಗಿದ್ದು ನಿನ್ನೆ ದಿನಾಂಕ: 19/05/2022 ರಂದು ಸಾಯಂಕಾಲ 6:30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಚಿಕ್ಕಪ್ಪನಾದ ಶ್ರೀನಿವಾಸ ತಂದೆ ಸಂಜೀವಪ್ಪ ಹಾಗೂ ನಮ್ಮ ಚಿಕ್ಕಪ್ಪನ ಮಕ್ಕಳಾದ ಸಂಜೀವಪ್ಪ ತಂದೆ ಶ್ರೀನಿವಾಸ, ತಿಪ್ಪರಾಜು ತಂದೆ ಶ್ರೀನಿವಾಸ ಹಾಗೂ ಅಳಿಯನಾದ ಸತೀಶ ತಂದೆ ಅಮರಪ್ಪ ಕಟ್ಟಿಮನಿ ಎಲ್ಲರೂ ಕೂಡಿ ನಮ್ಮ ಹೊಲದಿಂದ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿರುವಾಗ ಕೆಂಬಾವಿ ಮುಖ್ಯ ರಸ್ತೆಯಿಂದ ನಮ್ಮ ಮನೆಗೆ ಹೋಗುತ್ತಿರುವಾಗ ಮಾಚಗುಂಡಾಳ ಸೀಮಾಂತರದ ಮನ್ವಿತ ದಾಬಾ ಹತ್ತಿರ ನಮ್ಮೂರಿನ ನಮ್ಮ ಜನಾಂಗದವರೇ ಆದ 1) ಸಕ್ರೆಪ್ಪ ತಂದೆ ಭೀಮಣ್ಣ ಹಳಿಸಗರ 2) ರಾಘವೇಂದ್ರ ತಂದೆ ಭೀಮಣ್ಣ ಹಳಿಸಗರ 3) ಪರಮಣ್ಣ ತಂದೆ ಹಣಮಂತ್ರಾಯ ಹಳಿಸಗರ 4) ಶರಣಪ್ಪ ತಂದೆ ಸಣ್ಣ ನಿಂಗಪ್ಪ ನಾಯ್ಕೋಡಿ 5) ಶೆಳ್ಳಿಗಪ್ಪ ತಂದೆ ಭೀಮಣ್ಣ ಹಳಿಸಗರ ಎಲ್ಲರೂ ಅಕ್ರಮ ಕೂಟ ರಚಿಸಿಕೊಂಡು, ತಮ್ಮ ಕೈಯಲ್ಲಿ ಮಚ್ಚು, ಕಬ್ಬಿಣದ ರಾಡು, ಬಡಿಗೆಗಳನ್ನು ಹಿಡಿದುಕೊಂಡು ಬಂದರೆ, ಎನಲೇ ಸೂಳೆ ಮಕ್ಕಳೆ ನಾವು ಕುಡಿದು ಬಂದರೆ ನಿಮಗೆನಲೇ ಬೋಸಡಿ ಮಕ್ಕಳೆ, ನಿಮ್ಮ ಸೊಕ್ಕು ಬಹಳ ಆಗಿದೆ ಅಂತಾ ಅವಾಚ್ಯ ಶಬ್ದಗಳಿಂದ ಬೈದವರೇ, ಅವರಲ್ಲಿಯ ಸಕ್ರೆಪ್ಪ ಈತನು ನಮ್ಮ ಚಿಕ್ಕಪ್ಪನಾದ ಶ್ರೀನಿವಾಸ ಈತನಿಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಮಚ್ಚಿನಿಂದ ತೆಲೆಗೆ ಹೊಡೆದು ಬಾರಿ ರಕ್ತಗಾಯ ಮಾಡಿದನು. ಹಾಗೂ ರಾಘವೇಂದ್ರ ಮತ್ತು ಪರಮಣ್ಣ ಇಬ್ಬರು ತಮ್ಮ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನಮ್ಮ ಚಿಕ್ಕಪ್ಪನ ಬೆನ್ನಿಗೆ ಹೊಡೆದು ಬಾರಿ ಗುಪ್ತಗಾಯ ಮಾಡಿದರು. ಶರಣಪ್ಪ ಈತನು ನಮ್ಮ ಚಿಕ್ಕಪ್ಪನ ಮಗನಾದ ಸಂಜೀವಪ್ಪ ತಂದೆ ಶ್ರೀನಿವಾಸ ಈತನಿಗೆ ಬಡಿಗೆಯಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ಶೆಳ್ಳಿಗಪ್ಪ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನಮ್ಮ ಚಿಕ್ಕಪ್ಪನಾದ ಶ್ರಿನಿವಾಸ ಈತನ ಬಲಗಡೆ ಕಿವಿಯ ಹಿಂದೆ ಹೊಡೆದು ಗುಪ್ತಪೆಟ್ಟುಪಡಿಸಿದನು. ಬಿಡಿಸಲು ಹೋದ ನನಗೆ ಮತ್ತು ತಿಪ್ಪರಾಜ ಹಾಗೂ ಸತೀಶ ಮೂವರಿಗೂ ನೆಲಕ್ಕೆ ದಬ್ಬಿಸಿಕೊಟ್ಟರು. ಆಗ ಅಲ್ಲೇ ಇದ್ದ ನಮ್ಮ ಸಂಬಂಧಿಕರಾದ ನಾಗಪ್ಪ ತಂದೆ ಭೀಮಣ್ಣ ಕನ್ನೆಳ್ಳಿ ಹಾಗೂ ರಾಮಚಂದ್ರ ತಂದೆ ದ್ಯಾವಣ್ಣ ಕಟ್ಟಿಮನಿ ಇವರು ಬಂದು ಜಗಳವನ್ನು ನೋಡಿ ಬಿಡಿಸಿದರು. ಆಗ ಆರೋಪಿತರೆಲ್ಲರೂ ಇವತ್ತು ಇವರು ಬಂದು ಬಿಡಿಸಿಕೊಂಡಿದ್ದಕ್ಕೆ ಉಳಿಸಿದಿರಿ ಸೂಳೇ ಮಕ್ಕಳೆ. ನಿಮ್ಮ ಜೀವ ನಮ್ಮ ಕೈಯಲ್ಲಿದೆ. ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದರು. ನಂತರ ಗಾಯಗೊಂಡ ನಮ್ಮ ಚಿಕ್ಕಪ್ಪ ಶ್ರೀನಿವಾಸ ಮತ್ತು ಅವನ ಮಗನಾದ ಸಂಜೀವಪ್ಪ ಇಬ್ಬರಿಗೆ ನಾನು ಮತ್ತು ನಮ್ಮ ಚಿಕ್ಕಪ್ಪನಾದ ದೇಸಾಯಿ ತಂದೆ ಸಜೀವಪ್ಪ, ರಾಮಚಂದ್ರ ತಂದೆ ದ್ಯಾವಣ್ಣ ಕಟ್ಟಿಮನಿ ಮೂವರು ಕೂಡಿ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಹಣಸಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಉಪಚಾರ ಪಡಿಸಿ ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಯಾದಗಿರಿಯ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಕೊಲೆ ಮಾಡುವ ಉದ್ದೇಶದಿಂದ ನಮ್ಮ ಚಿಕ್ಕಪ್ಪನಾದ ಶ್ರೀನಿವಾಸ ಹಾಗೂ ಅವನ ಮಗ ಸಂಜೀವಪ್ಪನಿಗೆ ಹೊಡೆಬಡೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜೀವದ ಬೆದರಿಕೆ ಹಾಕಿದ ಮೇಲೆ ಹೇಳಿದ 05 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 82/2022 ಕಲಂ: 279, 337, 338 ಐಪಿಸಿ: ಇಂದು ದಿನಾಂಕ 20/05/2022 ರಂದು 5.30 ಪಿಎಂ ಕ್ಕೆ ಅಜರ್ಿದಾರರಾದ ಮಲ್ಲಪ್ಪ ತಂದೆ ದೇವಪ್ಪ ಜಾಲಿಬೆಂಚಿ ವ|| 22ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಅರಳಹಳ್ಳಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ದಿನಾಂಕ 18/05/2022 ರಂದು ನಮ್ಮ ಗೆಳೆಯನಾದ ದೇವರಾಜ ತಂದೆ ಸಿದ್ದಣ್ಣ ಹಂದ್ರಾಳ ಈತನ ತಂಗಿಯ ಮದುವೆ ಇದ್ದ ಪ್ರಯುಕ್ತ ನಮ್ಮ ಗೆಳೆಯನು ಹೇಳಿದಂತೆ ಅವರ ತಂಗಿಗೆ ಮದುವೆಯಲ್ಲಿ ಕೊಡಬೇಕಾದ ಬಾಂಡೆ ಸಾಮಾನುಗಳನ್ನು ಆಲಮೇಲ ಪಟ್ಟಣಕ್ಕೆ ನಮಗೆ ಪರಿಚಯ ಇರುವ ದೇವಾಪೂರ ಗ್ರಾಮದ ನಿಂಗಪ್ಪ ತಂದೆ ಖಂಡಪ್ಪ ಗೊರವಯ್ಯನವರ ಇವರ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ನಂ ಕೆಎ 33 ಬಿ 3353 ನೇದ್ದರಲ್ಲಿ ಸಾಮಾನು ಹೇರಿಕೊಂಡು ಗೂಡ್ಸ್ ವಾಹನದಲ್ಲಿ ವಾಹನದ ಚಾಲಕ ಮತ್ತು ಮಾಲೀಕರಾದ ನಿಂಗಪ್ಪ ಮತ್ತು ಅವನೊಂದಿಗೆ ಸಹಾಯಕ್ಕಾಗಿ ನಮ್ಮ ತಮ್ಮನಾದ ರಾಮಕೃಷ್ಣ ತಂದೆ ದೇವಪ್ಪ ಜಾಲಿಬೆಂಚಿ ವ|| 17ವರ್ಷ ಜಾ|| ಬೇಡರ ಉ|| ಕೂಲಿ ಸಾ|| ಅರಳಹಳ್ಳಿ ಇದ್ದರು. ಅವರು ಸಾಮಾನು ಹಾಕಿಕೊಂಡಿದ್ದ ವಾಹನ ತೆಗೆದುಕೊಂಡು ಮುಂದೆ ಹೋಗುತ್ತಿದ್ದರು. ಅವರ ವಾಹನದ ಹಿಂದೆ ನಾನು ಮತ್ತು ನಮ್ಮ ಗೆಳೆಯನಾದ ಆನಂದ ತಂದೆ ಬಸನಗೌಡ ಮಾಲಿ ಪಾಟೀಲ್ ಇಬ್ಬರೂ ಕೂಡಿ ಹೋಗಿದ್ದು ಎಲ್ಲರೂ ಆಲಮೇಲಕ್ಕೆ ಹೋಗಿ ಗೂಡ್ಸ್ ವಾಹನದಲ್ಲಿದ್ದ ಸಾಮಾನು ಆಲಮೇಲದ ಮದುವೆಯಲ್ಲಿ ಇಳಿಸಿ ಮದುವೆ ಮುಗಿಸಿ ನಂತರ ಮರಳಿ ನಮ್ಮೂರಿಗೆ ಹೋಗುವ ಕುರಿತು ಗೂಡ್ಸ್ ವಾಹನದಲ್ಲಿ ಮತ್ತೆ ನಮ್ಮ ತಮ್ಮನಾದ ರಾಮಕೃಷ್ಣ ಮತ್ತು ವಾಹನ ಚಾಲಕ ನಿಂಗಪ್ಪ ಇಬ್ಬರೂ ಕೂಡಿ ಬರುತ್ತಿದ್ದರು. ಅವರ ಹಿಂದೆ ನಾನು ಮತ್ತು ಆನಂದ ಮೋಟಾರ ಸೈಕಲ್ ತೆಗೆದುಕೊಂಡು ಬರುತ್ತಿದ್ದೆವು. ಎಲ್ಲರೂ ಮಲ್ಲಾ- ಕೆಂಭಾವಿ ರಸ್ತೆಯ ಮೇಲೆ ಮಲ್ಲಾ ಕ್ರಾಸ್ ದಾಟಿ 100 ಮೀಟರ ಅಂತರದಲ್ಲಿ ಬರುತ್ತಿದ್ದಾಗ ದಿನಾಂಕ 18/05/2022 ರಂದು 4.00 ಪಿಎಂ ಸುಮಾರಿಗೆ ಗೂಡ್ಸ್ ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಿದ್ದನು, ಗೂಡ್ಸ್ ವಾಹನದ ಮುಂದೆ ಒಮ್ಮೆಲೇ ಒಂದು ಎಮ್ಮೆ ಅಡ್ಡ ಬಂದಿದ್ದರಿಂದ ಎಮ್ಮೆಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ವಾಹನ ಚಾಲಕನು ವಾಹನವನ್ನು ಒಮ್ಮೆಲೇ ಕಟ್ ಹೊಡೆದಿದ್ದರಿಂದ ಗೂಡ್ಸ್ ವಾಹನವು ರಸ್ತೆಯ ಪಕ್ಕದಲ್ಲಿ ಪಲ್ಟಿಯಾಗಿ ಬಿದ್ದಿದ್ದು ಅದರ ಹಿಂದೆ ಬರುತ್ತಿದ್ದ ನಾವು ನೋಡಿ ವಾಹನದಲ್ಲಿದ್ದ ನಮ್ಮ ತಮ್ಮನಿಗೆ ವಾಹನದಿಂದ ಕೆಳಗೆ ಇಳಿಸಿ ನೋಡಲಾಗಿ ಅವನ ಎರಡೂ ಕಾಲುಗಳ ಮೊಣಕಾಲಿನ ಕೆಳಗೆ ಭಾರೀ ಗುಪ್ತಗಾಯವಾಗಿ ಕಾಲು ಮುರಿದಂತೆ ಆಗಿದ್ದು, ವಾಹನ ಚಾಲಕನಿಗೆ ಕೆಳಗೆ ಇಳಿಸಿ ನೋಡಲಾಗಿ ಅವನಿಗೆ ಯಾವುದೇ ಗಾಯಗಳಾಗಿರಲಿಲ್ಲ. ನಾನು, ಆನಂದ ಮತ್ತು ವಾಹನ ಚಾಲಕನಾದ ನಿಂಗಪ್ಪ ಮೂರೂ ಜನರು ಕೂಡಿ ನಮ್ಮ ತಮ್ಮನಾದ ರಾಮಕೃಷ್ಣನಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಶಹಾಪೂರ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಹೆಚ್ಚಿನ ಉಪಚಾರ ಕುರಿತು ಕಾಮರೆಡ್ಡಿ ಆಸ್ಪತ್ರೆ ಕಲಬುರಗಿಗೆ ಹೋಗಿ ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿದ್ದು ನಮ್ಮ ತಮ್ಮನು ಇನ್ನೂ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದಾನೆ. ನಾನು ಅಪಘಾತವಾದ ದಿನ ನಮ್ಮ ತಮ್ಮನಿಗೆ ಅರ್ಜಂಟ್ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ ನಂ ಕೆಎ 33 ಬಿ 3353 ನೇದ್ದರಲ್ಲಿ ಸಾಮಾನು ಇಳಿಸಿ ಬರುವಾಗ ವಾಹನ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಒಮ್ಮೆಲೇ ಕಟ್ ಹೊಡೆದು ಪಲ್ಟಿ ಮಾಡಿದ್ದರಿಂದ ಚಾಲಕನ ಸಹಾಯಕ್ಕಾಗಿ ವಾಹನದಲ್ಲಿದ್ದ ನಮ್ಮ ತಮ್ಮನಾದ ರಾಮಕೃಷ್ಣನಿಗೆ ಭಾರೀ ಗುಪ್ತಗಾಯವಾಗಿ ಎರಡೂ ಕಾಲುಗಳು ಮುರಿದಂತೆೆ ಆಗಿದ್ದು ಕಾರಣ ಗೂಡ್ಸ್ ವಾಹನ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಅಂತ ನೀಡಿದ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 82/2022 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: ಕಲಂ:143, 147, 148, 323, 332, 353, 307, 504, 506 ಸಂ: 149 ಐಪಿಸಿ: ಇಂದು ದಿನಾಂಕ: 20/05/2022 ರಂದು 03.30 ಪಿ.ಎಮ್ ಕ್ಕೆ ವಿಜಯಕುಮಾರ ತಂದೆ ಗುರಯ್ಯ ಹಿರೇಮಠ ವಯಾ: 32 ವರ್ಷ ಉ: ಅಬಕಾರಿ ನೀರಿಕ್ಷಕರು ಶಹಾಪೂರ ತಾ: ಶಹಾಪೂರ. ಜಿ: ಯಾದಗಿರಿ. ಇವರು ಒಂದು ಲಿಖಿತ ಅಜರ್ಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ, ನಾನು ವಿಜಯಕುಮಾರ ತಂದೆ ಗುರಯ್ಯ ಹಿರೇಮಠ ವಯಾ: 32 ವರ್ಷ ಉ: ಅಬಕಾರಿ ನೀರಿಕ್ಷಕರು ಶಹಾಪೂರ ವಲಯ ಇದ್ದು, ಈ ಮೂಲಕ ದೂರು ನೀಡುವದೇನಂದರೆ, ದಿನಾಂಕ:19/05/2022 ರಂದು ಸಮಯ 03.30 ಪಿಎಮ್ ಕ್ಕೆ ನಾನು ವಲಯ ಕಛೇರಿ ಶಹಾಪೂರದಲ್ಲಿ ಇದ್ದಾಗ ಬಂದ ಖಚಿತ ಭಾತ್ಮಿ ಏನಂದರೆ, ಶಹಾಪೂರ ತಾಲೂಕಿನ ಕಾಡಂಗೇರಾ ದಿಂದ ಚಂದಾಪೂರ ಮಾರ್ಗವಾಗಿ ಸ್ವಿಪ್ಟ ಡಿಸೈರ್ ನಾಲ್ಕು ಚಕ್ರದ ಕಾರಿನಲ್ಲಿ ನಕಲಿ ಮದ್ಯ ಸಾಗಾಣಿಕೆಯಾಗುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಕೂಡಲೆ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ಮಾನ್ಯ ಅಬಕಾರಿ ಉಪ ಆಯುಕ್ತರು ಯಾದಗಿರಿ ಜಿಲ್ಲೆ ರವರು ರಚಿಸಿರುವ ವಿಶೇಷ ತಂಡದ ಜೊತೆ ಶ್ರೀ. ಶ್ರೀರಾಮ ರಾಠೋಡ ಅಬಕಾರಿ ಉಪ ಅಧಿಕ್ಷಕರು ಉಪ ವಿಭಾಗ ಶಹಾಪೂರ ರವರ ನೇತೃತತ್ದಲ್ಲಿ, ಧನರಾಜ ಹಳ್ಳಿಖೇಡ ಅಬಕಾರಿ ನೀರಿಕ್ಷಕರು ಉಪ ವಿಭಾಗ ಶಹಾಪೂರ, ಸಾದೀಕ ಹುಸೇನ ಅಬಕಾರಿ ಉಪ ನಿರೀಕ್ಷಕರು ಶಹಾಪೂರ ವಲಯ, ಬಸವರಾಜ ರಾಜಣ್ಣವರ ಅಬಕಾರಿ ಉಪ ನೀರಿಕ್ಷಕರು ಉಪ ಆಯುಕ್ತರ ಕಛೇರಿ, ಯಾದಗಿರಿ, ಸಿಬ್ಬಂದಿಯವರಾದ ಚಂದ್ರಶೇಖರ ಅಬಕಾರಿ ಪೇದ, ಮಹ್ಮದ ರಫೀ ಅಬಕಾರಿ ಪೇದ, ಪ್ರವೀಣಕುಮಾರ ಆಬಕಾರಿ ಪೇದ, ನಾಗರಾಜ ಆಬಕಾರಿ ಪೇದ ಹಾಗೂ ಗುರುನಾಥ ಆಬಕಾರಿ ಪೇದ ಎಲ್ಲರೂ ಕೂಡಿ, ಸರಕಾರಿ ವಾಹನಗಳಲ್ಲಿ ಶಹಾಪೂರ ದಿಂದ ಹೊರಟು ಚಾಮನಾಳ ಬಸ್ ನಿಲ್ದಾಣದ ಹತ್ತಿರ ಇಬ್ಬರು ಸರಕಾರಿ ಪಂಚರಾದ 1) ಭೀಮರೆಡ್ಡಿ ಕಂದಾಯ ನೀರಿಕ್ಷಕರು ಗೋಗಿ, 2) ಧರ್ಮರಾಜ ತಂದೆ ತಿಪ್ಪಣ್ಣ (ಗ್ರಾಮ ಸಹಾಯಕ ರವರ ಮಗ) ಇವರಿಗೆ ಪರಿಚಯಸಿಕೊಂಡು, ನಂತರ ಪಂಚರಿಗೆ ದಾಳಿಯ ವಿಷಯ ತಿಳಿಸಿ ಪಂಚರುಗಳಾದ ನಮ್ಮ ಸರಕಾರಿ ವಾಹನಗಳಲ್ಲಿ ಕರೆದುಕೊಂಡು ಹೋಗಿ ಭಾತ್ಮಿ ಪ್ರಕಾರ ಕಾಡಂಗೇರಾ ದಿಂದ ಚಂದಾಪೂರ ಗ್ರಾಮದ ಮಧ್ಯದ ರೋಡಿನ ಸ್ಥಳಕ್ಕೆ 05.00 ಪಿಎಮ್ ಕ್ಕೆ ತಲುಪಿದ್ದೆವು.ಸ್ವಲ್ಪ ಸಮಯದ ನಂತರ ಒಂದು ನಾಲ್ಕು ಚಕ್ರದ ವಾಹನ ಸಂಖ್ಯೆ ಕೆಎ-33-ಎ-7677 (ಸ್ವಿಪ್ಟ ಡಿಸೈರ್) ವಾಹನ ಬಂದಿದ್ದು, ಅದನ್ನು ತಡೆದು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಿದಾಗ ಅಕ್ರಮವಾಗಿ ನಕಲಿ ಮದ್ಯವು ವಾಹನದ ಡಿಕ್ಕಿಯಲ್ಲಿ ದೊರೆತಿರುತ್ತದೆ. ವಾಹನ ಚಾಲಕನಿಗೆ ಹೆಸರನ್ನು ಕೇಳಲಾಗಿ ತನ್ನ ಹೆಸರು ಹಣಮಂತ್ರಾಯ ತಂದೆ ಸದಾಶಿವ ಸಾಹು ಎಂದು ತಿಳಿಸಿದ ನಂತರ ಅಧಿಕಾರಿ ಸಿಬ್ಬಂದಿಯವರು ವಾಹನ ಚಾಲಕನನ್ನು ನಕಲಿ ಮದ್ಯವನ್ನು ಎಲ್ಲಿಗೆ ತಗೆದುಕೊಂಡು ಹೋಗುತ್ತಿರುವೆ ಎಂದು ತಿಳಿಸಿದ, ಗದರಿಸಿ ಕೇಳಿದಾಗ ಚಂದಾಪೂರ ಗ್ರಾಮದಿಂದ ಅಂದಾಜು ಎರಡು ಕಿ.ಮೀ. ಗ್ರಾಮದ ಮುಖ್ಯ ರಸ್ತೆಯಿಂದ ಒಳಗಡೆ ಇರುವ ಮಡ್ಡಿ ಪ್ರದೇಶದಲ್ಲಿ ಮುದುಕಪ್ಪ ತಂದೆ ಶರಣಪ್ಪ ಅಳ್ಳೋಳ್ಳಿ ಈತನ ತೋಟದ ಮನೆಯಲ್ಲಿ ಸಂಗ್ರಹಣೆ ಮಾಡಿ ಮಾರಾಟ ಮಾಡಲು ಹೋಗುತ್ತಿರುವುದಾಗಿ ತಿಳಿಸಿದ.
ನಂತರ ಆರೋಪಿ ಮತ್ತು ವಾಹನ ಹಾಗೂ ನಕಲಿ ಮದ್ಯವನ್ನು ವಶಕ್ಕೆ ಪೆದುಕೊಂಡು ಸದರಿ ನಕಲಿ ಮದ್ಯ ಸಂಗ್ರಹಣೆ ಮಾಡಿ ಇಟ್ಟಿರುವ ಸ್ಥಳಕ್ಕೆ ಹೋದೆವು ಅಲ್ಲಿ ಕೂಡ ಬೂದು ಬಣ್ಣದ ರಟ್ಟಿನ ಪೆಟ್ಟಿಗೆಗಳು ಇದ್ದವು, ಅವುಗಳನ್ನು ತೆಗೆದು ನೋಡಿದಾಗ ನಕಲಿ ಮದ್ಯ ಪತ್ತೆಯಾಯಿತು. ನಂತರ ಮುಂದುವರೆದು ಸರಕಾರಿ ಪಂಚರ ಸಮಕ್ಷಮ ಎಲ್ಲಾ ಮದ್ಯವನ್ನು ಇಲಾಖಾ ವಶಕ್ಕೆ ಜಪ್ತಿ ಪಡಿಸಿಕೊಂಡು ಮಹಜರ ಕ್ರಮ ಜರುಗಿಸಿ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಸದರಿ ಮುದುಕಪ್ಪ ತಂದೆ ಶರಣಪ್ಪ ಅಳ್ಳೋಳ್ಳಿ ಇತನ ತೋಟದ ಮನೆಯ ಮುಂದೆ ಅಂದಾಜು ಸಮಯ 07.45 ಪಿಎಮ್ ಸುಮಾರಿಗೆ, 40 ಕ್ಕೂ ಹೆಚ್ಚು ಜನರು ಕೈಯಲ್ಲಿ ಕಲ್ಲು ದೊಣ್ಣಿಗಳನ್ನು ತೆಗೆದುಕೊಂಡು ಬರುವ ಶಬ್ದವನ್ನು ಕೇಳಿ ಪಂಚರಿಗೆ, ಸಿಬ್ಬಂದಿಯವರಾದ ಸಾದೀಕ ಹುಸೇನ ಅಬಕಾರಿ ಉಪ ನಿರೀಕ್ಷಕರು ಶಹಾಪೂರ ವಲಯ ನಾಗರಾಜ ಅಬಕಾರಿ ಪೇದ ಹಾಗೂ ಗುರುನಾಥ ಅಬಕಾರಿ ಪೇದ ಇವರೊಂದಿಗೆ ಬೇರೆ ಮಾರ್ಗದಲ್ಲಿ ಕಳುಹಿಸಿದೆವು. ಆಗ ಅಲ್ಲಿಗೆ ಬಂದ 40 ಕ್ಕೂ ಹೆಚ್ಚಿನ ಜನರು, ನಮ್ಮ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ನನಗೆ ಮತ್ತು ನಮ್ಮ ಸಿಬ್ಬಂದಿಯವರಾದ ಮಹ್ಮದ ರಫೀ ಇವರಿಗೆ ಹೊಡೆದು ಕೋಲೆ ಮಾಡುವ ಉದ್ದೇಶದಿಂದ ತಲೆಗೆ ಬಡಿಗೆಯಿಂದ ಬೀಸಿ ಹೋಡೆದರು, ನಾವು ತಪ್ಪಿಸಿಕೊಂಡಿದ್ದು ಸದರಿ ಬಡಿಗೆಯ ಏಟು ಮಹ್ಮದ ರಫೀ ಇವರ ಕಾಲಿಗೆ ಬಿದ್ದಿರುತ್ತದೆ.
ಈ ಸಮಯದಲ್ಲಿ ಒಬ್ಬನು ನನಗೆ ಕಾಲಿಗೆ ಒದ್ದು ಹಲ್ಲೆಮಾಡಿ ಗಾಯ ಮಾಡಿರುತ್ತಾರೆ. ಮತ್ತು ನನಗೆ ಕಲ್ಲಿನಿಂದ ಕಾಲಿಗೆ ಹೊಡೆದಿರುತ್ತಾರೆ. ಗುಪ್ತ ಪೆಟ್ಟಾಗಿರುತ್ತದೆ. ಆಗ ಎಲ್ಲರೂ ಕೂಡಿ ಹಣಮಂತ್ರಾಯ ತಂದೆ ಸದಾಶಿವ ಸಾಹು ಈತನಿಗೆ ಇಲ್ಲೆ ಬಿಡದೇ ಇದ್ದರೆ, ನಿಮಗೆ ಖಲಾಸ್ ಮಾಡುತ್ತೇವೆ ಮಕ್ಕಳೆ ಅಂತಾ ಜೀವ ಬೆದರಿಕೆ ಹಾಕಿದರು.
ನಂತರ ನಮ್ಮ ವಶದಲ್ಲಿ ಆರೋಪಿಯಾದ ಹಣಮಂತ್ರಾಯ ತಂದೆ ಸದಾಶಿವ ಸಾಹು ಈತನನ್ನು ದಬ್ಬಾಳಿಕೆಯಿಂದ ಸದರಿ ಜನರು ಕರೆದುಕೊಂಡು ಹೋದರು, ಸದರಿ 1) ಹಣಮಂತ್ರಾಯ ತಂದೆ ಸದಾಶಿವ ಸಾಹು ಸಾ: ಚಂದಾಪೂರ, ಮತ್ತು ಆತನನ್ನು ದಬ್ಬಾಳಿಕೆಯಿಂದ ಕರೆದುಕೊಂಡು ಹೋದವರ ಹೆಸರು ವಿಚಾರಿಸಲಾಗಿ 2) ಶರಣಪ್ಪಗೌಡ ತಂದೆ ಭೀಮಣ್ಣ ಸಾಹು (ಅಳ್ಳೋಳ್ಳಿ), 3) ಮುದುಕಪ್ಪ ತಂದೆ ಶರಣಪ್ಪ ಅಳ್ಳೊಳ್ಳಿ 4) ಯಲ್ಲಪ್ಪ ತಂದೆ ಮಲ್ಲಿಕಾಜರ್ುನ ಸಾಹು 5) ಮಡಿವಾಳಪ್ಪ ತಂದೆ ಸಿದ್ರಾಮಪ್ಪ ಬಿರಾದಾರ 6) ಹಣಮಂತ್ರಾಯ ಸಾಹು, 7) ಮಲ್ಲಕ ತಂದೆ ಭಾಗಪ್ಪ ನಾಯ್ಕೋಡಿ 8) ಶೇಖಪ್ಪ ತಂದೆ ಹಣಮಂತ್ರಾಯ ವಾಗಣಗೇರಿ 9) ಚಂದಪ್ಪ ತಂದೆ ಭಿಮಣ್ಣ ಅಗಂಡಿಕರ 10) ರೇವಣಸಿದ್ದಪ್ಪ ತಂದೆ ಹಯ್ಯಾಳಪ್ಪ ಗೋಣಗೊಣಿ 11) ನಿಂಗಯ್ಯ ತಂದೆ ಭೀಮಣ್ಣ ಗೋಣಗೋಣಿ 12) ನಾನೇಗೌಡ ತಂದೆ ಸಾಹೇಬಗೌಡ ರಾಜಾಪೂರ 13) ಲಕ್ಷ್ಮಣ ತಂದೆ ಭೀಮಣ್ಣ ಗುಡ್ಡಕಾಯಿ 14) ಮಂಜುನಾಥ ತಂದೆ ಬೈಲಪ್ಪ ಮೇಟಿ 15) ದೇವಪ್ಪ ತಂದೆ ಚಂದ್ರಶೇಖರ ಮೇಟಿ 16) ಹಣಮಂತ್ರಾಯ ತಂದೆ ನಿಂಗಣ್ಣ ಅಂಗಡಿಕರ್ 17) ಅಮ್ರಪ್ಪ ತಂದೆ ನಿಂಗಪ್ಪ ಅಂಗಡಿಕರ 18) ಸಂಗಯ್ಯ ಸಾಹು, 19) ನಾಗಪ್ಪ ಸಾಹು, 20) ಮಾನಪ್ಪ ಸಾಹು, ಹಾಗೂ ಇತರ 20 ಕ್ಕೂ ಹೆಚ್ಚು ಜನರು ಎಲ್ಲರೂ ಸಾ: ಚಂದಾಪೂರ ಇವರುಗಳು ಕೂಡಿ ಬಂದು ಸರಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ನಮ್ಮಗಳನ್ನು ಕೊಲೆ ಮಾಡುವ ಉದ್ದೇಶದಿಂದ ನಮ್ಮ ಮೇಲೆ ಬಡಿಗೆ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಿ ಜೀವದ ಬೇದರಿಕೆ ಹಾಕಿದ ಪ್ರಯುಕ್ತ ಮೇಲೆ ಹೆಸರಿಸಿದ 1) ಹಣಮಂತ್ರಾಯ ತಂದೆ ಸದಾಶಿವ ಸಾಹು ಸಾ: ಚಂದಾಪೂರ ಸೇರಿ ಎಲ್ಲಾ 40 ಕ್ಕೂ ಹೆಚ್ಚಿನ ಜನ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ. ನಾವು ಎಲ್ಲಾ ನಕಲಿ ಮದ್ಯದ ಪೆಟ್ಟಿಗೆಗಳನ್ನು ಹಾಗೂ ನಾಲ್ಕು ಚಕ್ರದ ಸ್ವಿಪ್ಟ ಡಿಸೈರ್ ಕಾರನ್ನು ಶಹಾಪೂರ ವಲಯ ಕಛೇರಿಗೆ ತಗೆದುಕೊಂಡು ಹೋಗಿ ತದನಂತರ ಶಹಾಪೂರ ತಾಲೂಕಾ ಸರಕಾರಿ ಆಸ್ಪತ್ರೆಗೆ ಉಪಚಾರಕ್ಕೆ ಸೇರಿಕೆಯಾಗಿ ಉಪಚಾರ ಪಡೆದುಕೊಂಡು ಇಂದು ಠಾಣೆಗೆ ಬಂದು ಅಜರ್ಿ ನಿಡಿರುತ್ತೆನೆ. ಅಂತಾ ಅಜರ್ಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 32/2022 ಕಲಂ: 143, 147, 148, 323, 332, 353, 307, 504, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದ

Last Updated: 21-05-2022 12:11 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080