ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 21-06-2021
ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ : 75/2021 ಕಲಂ:143, 147, 148, 504, 341, 324, 323, 506 ಸಂ 149 ಐಪಿಸಿ : ಇಂದು ದಿನಾಂಕ:20/06/2021 ರಂದು 10-30 ಎಎಮ್ ಕ್ಕೆ ವಡಗೇರಾ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿದ್ದ ಗಾಯಾಳು ಯೂಸೂಫಸಾಬ ತಂದೆ ಅಲ್ಲಿಸಾಬ ಮುಲ್ಲಾ ಸಾ:ತುಮಕೂರು ಇವರಿಗೆ ವಿಚಾರಿಸಿದಾಗ ಅವರು ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಹಾಜರಪಡಿಸಿದ್ದನ್ನು ಸ್ವಿಕೃತ ಮಾಡಿಕೊಂಡಿದ್ದು, ಸದರಿ ದೂರಿನ ಸಾರಾಂಶವೇನಂದರೆ ನಾನು ಕುಟುಂಬದೊಂದಿಗೆ ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಇಟಗಿ ಸೀಮಾಂತರದಲ್ಲಿ ಹೊಲ ಸವರ್ೆ ನಂ. 16 ವಿಸ್ತಿರ್ಣ 12 ಎಕರೆ 01 ಗುಂಟೆ ಜಮೀನು ನಮ್ಮ ತಂದೆಯಾದ ಅಲ್ಲಿಸಾಬ ಮುಲ್ಲಾ ಈತನ ಹೆಸರಿನಲ್ಲಿ ಪಹಣಿ ಇರುತ್ತದೆ. ಸದರಿ ಹೊಲವನ್ನು ನಾವು ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಇತ್ತಿಚ್ಚೆಗೆ ನಮ್ಮ ಎರಡನೆ ಅಣ್ಣತಮ್ಮಕೀಯವರಾದ ಸೈಯದ ಬಾಷಾ ತಂದೆ ಮಹಿಮೂದಸಾಬ ಮುಲ್ಲಾ ಮತ್ತು ಇತರರು ಸುಮಾರು ದಿವಸಗಳಿಂದ ಮೇಲ್ಕಂಡ ಜಮೀನಿನಲ್ಲಿ ನಮ್ಮದು ಪಾಲು ಇರುತ್ತದೆ ಎಂದು ತಕರಾರು ಮಾಡುತ್ತಾ ಬಂದಿರುತ್ತಾರೆ. ಹೀಗಿದ್ದು ಇಂದು ದಿನಾಂಕ:20/06/2021 ರಂದು ಬೆಳಗ್ಗೆ 8-30 ಗಂಟೆ ಸುಮಾರಿಗೆ ನಾನು ನಮ್ಮ ಮೇಲ್ಕಂಡ ಹೊಲದಿಂದ ಮನೆಗೆ ಬರುತ್ತಿದ್ದಾಗ ನಮ್ಮೂರ ಅವಿನಾಶ ವೈನಶಾಪ ಮುಂದುಗಡೆ 1) ಸೈಯದ ಬಾಷಾ ತಂದೆ ಮಹಿಮೂದಸಾಬ ಮುಲ್ಲಾ, 2) ಮೈನೊದ್ದಿನ ತಂದೆ ಮಹಿಮೂದಸಾಬ ಮುಲ್ಲಾ, 3) ಪೀರಮೊಹ್ಮದ ತಂದೆ ಇಮಾಮಸಾಬ ಮುಲ್ಲಾ, 4) ಮೊಹ್ಮದ ಅಲ್ತಾಫ ತಂದೆ ಇಮಾಮಸಾಬ ಮುಲ್ಲಾ, 5) ರಹಿಂಸಾಬ ತಂದೆ ಜಲಾಲಸಾಬ ಮುಲ್ಲಾ, 6) ಯೂಸೂಫಸಾಬ ತಂದೆ ಬಾಷುಮಿಯಾ ಮುಲ್ಲಾ, 7) ಮೊಹ್ಮದ ಅಲಿ ತಂದೆ ಇಮಾಮಸಾಬ ಬೆಂಡೆಬೆಂಬಳ್ಳಿ, 8) ಬಾಷಾ ತಂದೆ ಇಮಾಮಸಾಬ ಬೆಂಡೆಬೆಂಬಳ್ಳಿ, 9) ಮಹಿಬೂಬ ತಂದೆ ಇಮಾಮಸಾಬ ಬೆಂಡೆಬೆಂಬಳ್ಳಿ, 10) ಮೊಹ್ಮದ ರಫಿ ತಂದೆ ಅಬ್ದುಲಸಾಬ ಮುಲ್ಲಾ ಎಲ್ಲರೂ ಸಾ:ತುಮಕೂರು ಇವರೆಲ್ಲರೂ ಸೇರಿ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕಲ್ಲು ಬಡಿಗೆ ಹಿಡಿದುಕೊಂಡು ಬಂದವರೆ ನನಗೆ ತಡೆದು ನಿಲ್ಲಿಸಿ, ಭೋಸುಡಿ ಮಗನೆ ಇಟಗಿ ಹೊಲದಲ್ಲಿ ನಮ್ಮದು ಪಾಲು ಇರುತ್ತದೆ. ಅದನ್ನು ಕೊಡುವುದಿಲ್ಲ ಎನ್ನುತ್ತಿ ನಿನ್ನ ಸೊಕ್ಕು ಜಾಸ್ತಿಯಾಗಿದೆ ಎಂದು ಜಗಳ ತೆಗೆದವರೆ ತೆರೆಕೊ ಆಜ್ ಖಲಾಸ ಕರತೆ ಎಂದು ಜಗಳ ತೆಗೆದವರೆ ಪೀರ ಮೊಹ್ಮದ ಮತ್ತು ರಹಿಂಸಾಬ ಇಬ್ಬರೂ ಹಿಡಿದುಕೊಂಡಾಗ ಸೈಯದ ಬಾಷಾ ಈತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಬಲಗಡೆ ತೆಲೆಗೆ ಹೊಡೆದು ರಕ್ತಗಾಯ ಮಾಡಿದನು. ಮೈನೊದ್ದಿನ ಈತನು ಕಲ್ಲಿನಿಂದ ಬಲಗೈ ಮೊಳ ಕೈ ಕೆಳಗಡೆ ಹೊಡೆದು ರಕ್ತಗಾಯ ಮಾಡಿದನು. ಯೂಸೂಫಸಾಬನು ತನ್ನ ಕೈಯಲ್ಲಿದ್ದ ಕೊಡ್ಲಿಯಿಂದ ಎಡಗೈ ಹೆಬ್ಬೆರಳ ಸಂದಿಗೆ ಹೊಡೆದು ರಕ್ತಗಾಯ ಮಾಡಿದನು. ಮೊಹ್ಮದ ಅಲಿ ಈತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಎಡಗಡೆ ಭುಜಕ್ಕೆ ಹೊಡೆದು ಒಳಪೆಟ್ಟು ಮಾಡಿದನು. ಇನ್ನುಳಿದವರ ನನಗೆ ರೋಡಿನ ಮೇಲೆ ಓಡಸ್ಯಾಡಿಸಿ ಹೊಡೆದರು. ಕೈ ಮುಷ್ಟಿ ಮಾಡಿ ಗುದ್ದಿ, ಕಾಲಿನಿಂದ ಒದ್ದಿರುತ್ತಾರೆ. ಆಗ ನಾನು ಅವರ ಹೊಡೆತಕ್ಕೆ ಅಂಜಿ ಬಸವರಾಜ ತಂದೆ ಸೈದಪ್ಪ ಕಂಟೆಕಾಯಿ ಇವರ ಮನೆಯಲ್ಲಿ ಹೋಗಿ ಅಡಗಿಕೊಂಡೆನು. ಇಲ್ಲದ್ದಿದ್ದಲ್ಲಿ ನನಗೆ ಖಲಾಸ ಮಾಡುತ್ತಿದ್ದರು. ಅಷ್ಟರಲ್ಲಿ ಖಾಸಿಂ ಅಲಿ ತಂದೆ ಅಬ್ಬಾಸ ಅಲಿ, ಹಾರೂನಬಾಷಾ ತಂದೆ ಸೈಯದ ಸಾಬ, ರೂಬಿನಾ ಗಂಡ ಹಾರೂನಸಾಬ ಮತ್ತು ಇತರರು ಸೇರಿ ಜಗಳವನ್ನು ಬಿಡಿಸಿದಾಗ ಹೊಡೆಯುವುದು ಬಿಟ್ಟು ಆಜ್ ಬಚಗಯೇ ಸಾಲೆ ಔರ ಏಕ ಬಾರ ಮಿಲೆತೋ ತುಜéೆ ಖಲಾಸ ಕರತೆ ಎಂದು ಅವಾಚ್ಯ ಬೈದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಆಗ ನಾನು ಅಲ್ಲಿಂದ ಉಪಚಾರ ಕುರಿತು 108 ಅಂಬ್ಯುಲೇನ್ಸನಲ್ಲಿ ವಡಗೇರಾ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇನೆ. ವಿನಾಕಾರಣ ನಮ್ಮ ಹೊಲದಲ್ಲಿ ಪಾಲು ಬರುತ್ತದೆ ಎಂದು ಜಗಳ ತೆಗೆದು ಅಕ್ರಮಕೂಟ ಕಟ್ಟಿಕೊಂಡು ಬಂದು ಹೊಡೆಬಡೆ ಮಾಡಿ, ಜೀವ ಬೆದರಿಕೆ ಹಾಕಿದ ಮೇಲ್ಕಂಡರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರನ್ನು ಪಡೆದುಕೊಂಡು 11-30 ಎಎಮ್ ಕ್ಕೆ ಮರಳಿ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 75/2021 ಕಲಂ:143, 147, 148, 504, 341, 324, 323, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 76/2021 ಕಲಂ: 504, 324, 323 ಸಂ 34 ಐಪಿಸಿ : ಇಂದು ದಿನಾಂಕ:20/06/2021 ರಂದು 10 ಎಎಮ್ ಕ್ಕೆ ವಡಗೇರಾ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿದ್ದ ಗಾಯಾಳು ಸೈಯದ ಬಾಷಾ ತಂದೆ ಮಹಿಮೂದಸಾಬ ಮುಲ್ಲಾ ಸಾ:ತುಮಕೂರು ಇವರಿಗೆ ವಿಚಾರಿಸಿದಾಗ ಅವರು ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸುವುದಾಗಿ ಹೇಳಿ 12-30 ಪಿಎಮ್ ಕ್ಕೆ ದೂರು ಕೊಟ್ಟಿದ್ದನ್ನು ಸ್ವಿಕೃತ ಮಾಡಿಕೊಂಡಿದ್ದು, ಸದರಿ ದೂರಿನ ಸಾರಾಂಶವೇನಂದರೆ ನಾನು ಕುಟುಂಬದೊಂದಿಗೆ ಟೈಲರ್ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ಇಟಗಿ ಸೀಮಾಂತರದಲ್ಲಿ ಹೊಲ ಸವರ್ೆ ನಂ. 16 ವಿಸ್ತಿರ್ಣ 12 ಎಕರೆ 01 ಗುಂಟೆ ಜಮೀನು ಇರುತ್ತದೆ. ಸದರಿ ಜಮೀನು ನಮ್ಮ ಪೂರ್ವಜರ ಪಿತ್ರಾಜರ್ಿಜಿತ ಆಸ್ತಿಯಾಗಿದ್ದು, ಅದರಲ್ಲಿ ನಮ್ಮದು ಭಾಗ ಇರುತ್ತದೆ. ಆದರೆ ಸದರಿ ಜಮೀನನ್ನು ನಿಮಗೆ ಸಾಗುವಳಿ ಮಾಡಲು ಕೊಡುವುದಿಲ್ಲ ಎಂದು ನಮ್ಮ ಅಣ್ಣತಮ್ಮಕೀಯವರಾದ ಯೂಸೂಫಸಾಬ ತಂದೆ ಅಲ್ಲಿಸಾಬ ಮತ್ತು ಮತ್ತು ಇತರರು ಸುಮಾರು ದಿವಸಗಳಿಂದ ನಮ್ಮೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾರೆ. ಹೀಗಿದ್ದು ಇಂದು ದಿನಾಂಕ:20/06/2021 ರಂದು ಬೆಳಗ್ಗೆ 8-30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಅಣ್ಣತಮ್ಮಂದಿರಾದ ಯೂಸೂಫಸಾಬ ತಂದೆ ಬಾಷುಮಿಯಾ ಮುಲ್ಲಾ, ಇಬ್ರಾಹಿಂಸಾಬ ತಂದೆ ಹುಸೇನಸಾಬ ಮುಲ್ಲಾ ನಾವು ಮೂರು ಜನ ನಮ್ಮೂರ ಅವಿನಾಶ ವೈನಶಾಪ ಮುಂದುಗಡೆ ಮಾತಾಡುತ್ತಾ ನಿಂತುಕೊಂಡಾಗ 1) ಯೂಸುಫಸಾಬ ತಂದೆ ಅಲ್ಲಿಸಾಬ ಮುಲ್ಲಾ, 2) ಖಾಸಿಂಸಾಬ ತಂದೆ ಅಲ್ಲಿಸಾಬ ಮುಲ್ಲಾ, 3) ಹಾರೂನಸಾಬ ತಂದೆ ಸೈಯದ ಅಲಿ ಮುಲ್ಲಾ, 4) ಮಹಿಬೂಬ ಅಲಿ ತಂದೆ ಖಾಸಿಂಸಾಬ ಮುಲ್ಲಾ ಎಲ್ಲರೂ ಸಾ:ತುಮಕೂರು ಇವರೆಲ್ಲರೂ ಒಟ್ಟಾಗಿ ಸೇರಿ ಬಂದವರೆ ನನಗೆ ನೋಡಿ ಈ ಭೋಸುಡಿ ಮಗ ಇಟಗಿ ಹೊಲದಲ್ಲಿ ತಮಗೆ ಪಾಲು ಬರುತ್ತದೆ ಎನ್ನುತ್ತಿದ್ದಾನೆ ಎಂದು ಜಗಳ ತೆಗೆದವರೆ ಇಸ್ ಸುವರಕೆ ಬಚ್ಚೆ ಕೊ ಆಜ್ ಖಲಾಸ ಕರೆಂಗೆ ಎಂದು ಜಗಳ ತೆಗೆದವರೆ ಹಾರೂನಸಾಬ ನನಗೆ ಹಿಡಿದುಕೊಂಡಾಗ ಯೂಸೂಫಸಾಬ ತಂದೆ ಅಲ್ಲಿಸಾಬನು ಅಲ್ಲಿಯೇ ಇದ್ದ ಕಟ್ಟಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದನು. ಬಿಡಿಸಲು ಬಂದ ನಮ್ಮ ಯೂಸೂಫಸಾಬ ತಂದೆ ಬಾಷುಮಿಯಾ ಈತನಿಗೆ ಖಾಸಿಂಸಾಬನು ಕೈ ಮುಷ್ಟಿ ಮಾಡಿ ಟೊಂಕಕ್ಕೆ, ಪಕ್ಕೆಗೆ ಹೊಡೆದು ಒಳಪೆಟ್ಟು ಮಾಡಿದನು. ಬಿಡಿಸಲು ಬಂದ ಇಬ್ರಾಹಿಂಸಾಬ ತಂದೆ ಹುಸೇನಸಾಬ ಮುಲ್ಲಾ ಈತನಿಗೆ ಮಹಿಬೂಬ ಅಲಿ ಈತನು ಕಾಲಿನಿಂದ ಬಲಗಡೆ ಮೊಳಕಾಲಿಗೆ ಮತ್ತು ಬೆನ್ನಿಗೆ ಒದ್ದನು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮೂರ ಹುಸೇನಸಾಬ ತಂದೆ ಅಬ್ದುಲಸಾಬ ಎಮಂಟಿ, ಇಮಾಮಸಾಬ ತಂದೆ ಜುಬ್ಲೆಸಾಬ ಮುಲ್ಲಾ ಮತ್ತು ಮಹ್ಮದ ಅಲಿ ತಂದೆ ಇಮಾಮಸಾಬ ಮುಲ್ಲಾ ಇವರು ಬಂದು ಜಗಳ ಬಿಡಿಸಿರುತ್ತಾರೆ. ಇಲ್ಲದಿದ್ದರೆ ನಮಗೆ ಇನ್ನು ಹೊಡೆಬಡೆ ಮಾಡುತ್ತಿದ್ದರು. ಕಾರಣ ಸದರಿ ಮೇಲ್ಕಂಡರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರನ್ನು ಪಡೆದುಕೊಂಡು 1-15 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 76/2021 ಕಲಂ: 504, 324, 323 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ: 34/2021 ಕಲಂ 279,337, 338 ಐಪಿಸಿ ಸಂಗಡ 187 ಐ.ಎಮ್.ವ್ಹಿ ಆಕ್ಟ : ನಿನ್ನೆ ದಿನಾಂಕ 20/06/2021 ರಂದು ಮದ್ಯಾಹ್ನ 06-00 ಎ.ಎಂ. ದ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮುಂಡರಗಿ ಗ್ರಾಮದ ಹತ್ತಿರ ಬರುವ ಬಾದಲ್ ಕಾಟನ್ ಮಿಲ್ ಮುಂದಿನ ಮುಖ್ಯ ರಸ್ತೆಯ ಮೇಲೆ ಈ ಕೇಸಿನ ಪಿಯರ್ಾದಿಶ್ರೀ ನೀಲಪ್ಪ ತಂದೆ ಬಸ್ಸಪ್ಪ ಮಿಠಾಯಿ ವಯ:36 ಜಾ:ಮೇದರ ಉ:ಬಜ್ಜಿ ಬಂಡಿ ಸಾ:ಸುರಪೂರ ಹಾ//ವಾ//:ಮುಂಡರಗಿ, ತಾ; ಜಿ;ಯಾದಗಿರಿ ಇವರು ರಸ್ತೆ ಬದಿಯಲ್ಲಿ ವಾಕಿಂಗ್ ಮಾಡುತ್ತಾ ಹೋಗುತ್ತಿದ್ದಾಗ ಕಾರ ನಂ ಟಿಎಸ್ 08 ಹೆಚ್ ಜಿ 9183 ನೇದ್ದರ ಸವಾರನು ಮುಂಡರಗಿ ಕಡೆಯಿಂದ ಬಂದವನೇ ಹಿಂದುಗಡೆಯಿಂದ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳದುಕೊಂಡು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದು ನನಗೆ ಮತ್ತು ನನ್ನ ಮಗನಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಕಾರನ್ನು ನಿಲ್ಲಿಸದೇ ಹಾಗೇ ಓಡಿಸಿಕೊಂಡು ಹೋಗಿರುತ್ತಾನೆ. ಈ ಅಪಘಾತದಲ್ಲಿ ನನ್ನ ಬಲಮುಂಡಿಗೆ ಭಾರಿ ಗುಪ್ತಗಾಯ, ಬಲಗೈ ಮೊಳಕೈಗೆ ತರಚಿತ ಗಾಯ, ಬಲಗಾಲಿಗೆ ತರಚಿದ ಗಾಯ ಮತ್ತು ಗುಪ್ತಗಾಯವಾಗಿರುತ್ತದೆ. ನನ್ನಂತೇ ನನ್ನ ಮಗನಾದ ಬಸವರಾಜ ತಂದೆ ನೀಲಪ್ಪ ಈತನ ಬಲಗಡೆ ಸೊಂಟಕ್ಕೆ, ಬಲಮೊಳಕೈಗೆ, ಎಡಗಾಲು ಮೊಣಕಾಲಿಗೆ ತರಚಿತ ಗಾಯವಾಗಿರುತ್ತೇವೆ. ಈ ಅಪಘಾತಕ್ಕೆ ಕಾರಣರಾದ ಕಾಎ ನೇದ್ದರ ಚಾಲಕನ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 34/2021 ಕಲಂ 279,337,338 ಐಪಿಸಿ ಸಂಗಡ 187 ಐ.ಎಮ್.ವ್ಹಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 142/2021 ಕಲಂ 279, 337, 304(ಎ) ಐ.ಪಿ.ಸಿ : ಇಂದು ದಿನಾಂಕ 20/06/2021 ರಂದು ಮುಂಜಾನೆ 08-30 ಎ.ಎಂ.ಕ್ಕೆ ಫಿಯರ್ಾದಿ ಶ್ರೀ ಕಾಮಣ್ಣ ತಂ/ ಭೀಮರಾಯ ಗುಡೆನೋರ, ಸಾ|| ದೇವಿನಗರ ಶಹಾಪೂರ, ತಾ|| ಶಹಾಪೂರ, ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸರಾಂಶವೆನೆಂದರೆ. ನನ್ನ ತಂದೆ-ತಾಯಿಗೆ ನಾವು 3 ಜನ ಗಂಡು ಮಕ್ಕಳಿದ್ದು, ಮೊದಲನೆಯವನು ಮಲ್ಲಿಕಾಜರ್ುನ ತಂ/ ಭೀಮರಾಯ ಗುಡೇನೋರ, ವ|| 30 ವರ್ಷ, ನಾನು ಎರಡನೆಯವನಿದ್ದು, ನನ್ನ ತಮ್ಮ ರಾಜಕುಮಾರ ತಂ/ ಭೀಮರಾಯ ಗುಡೇನೋರ ವ|| 21 ವರ್ಷ ಇದ್ದು, ನನ್ನ ಅಣ್ಣ ಮಲ್ಲಿಕಾಜರ್ುನನು ಶಹಾಪೂರ ನಗರಸಭೆಯಲ್ಲಿ ಪೌರಕಾಮರ್ಿಕ ಅಂತಾ ಕೆಲಸ ಮಾಡಿಕೊಂಡಿದ್ದನು. ಹೀಗಿದ್ದು, ನಿನ್ನೆ ದಿನಾಂಕ:19/06/2021 ರಂದು ಸಾಯಂಕಾಲ 7.30 ಪಿ.ಎಂ. ಸುಮಾರಿಗೆ ನನ್ನ ಅಣ್ಣ ಮಲ್ಲಿಕಾಜರ್ುನನು ಹತ್ತಿಗುಡೂರದಲ್ಲಿ ಸ್ವಲ್ಪ ಕೆಲಸ ಇದೆ ಅಂತಾ ಹೇಳಿ ತನ್ನ ಗೆಳೆಯ ಭೀಮರಾಯ ತಂ/ ಮಲ್ಲಪ್ಪ ಮಡಿವಾಳಕರ್ ಈತನೊಂದಿಗೆ ಮೋಟರ್ ಸೈಕಲ್ ನಂ. ಕೆಎ-33 ವಿ-6985 ನೇದ್ದರಲ್ಲಿ ಕುಳಿತು ಹೋದನು ಮೋಟರ ಸೈಕಲನ್ನು ಭೀಮರಾಯ ಮಡಿವಾಳಕರ್ ಇವನು ನಡೆಸುತ್ತಿದ್ದನು. ರಾತ್ರಿ 10.30 ಪಿ.ಎಂ ಸುಮಾರಿಗೆ ನನ್ನ ಪರಿಚಯದ ರಸ್ತಾಪುರದ ನಾಗರಾಜ ಗುತ್ತಿಪೇಟ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾನು ನನ್ನ ಕೆಲಸ ಮುಗಿಸಿಕೊಂಡು ನನ್ನ ಮೋಟರ ಸೈಕಲದಲ್ಲಿ ಶಹಾಪುರದಿಂದ ರಸ್ತಾಪೂರಕ್ಕೆ ಹೋಗುತ್ತಿದ್ದಾಗ ರಾತ್ರಿ ಅಂದಾಜು 10.20 ಪಿ.ಎಂ ಸುಮಾರಿಗೆ ಶಹಾಪೂರ-ಹತ್ತಿಗುಡೂರ ಮುಖ್ಯ ರಸ್ತೆಯಲ್ಲಿರುವ ಗೋಲಗೇರಿ ಕ್ರಾಸ್ನಿಂದ ಅಂದಾಜು 200 ಅಡಿ ಅಂತರದಲ್ಲಿ ರಸ್ತಾಪೂರ ಕಮಾನ ಕಡೆಯಿಂದ ಒಂದು ಮೋಟರ ಸೈಕಲ್ನ ಚಾಲಕನು ತನ್ನ ಮೋಟರ ಸೈಕಲ್ನ್ನು ಅತಿವೇಗ ಮತ್ತು ಅಲಕ್ಷತನ ನಡೆಸಿಕೊಂಡು ಬರುತ್ತಿದ್ದಾಗ ಮೋಟರ ಸೈಕಲ್ ಸ್ಕಿಡ್ಡಾಗಿ ಬಿದ್ದಿದ್ದು, ನಾನು ಹತ್ತಿರ ಹೋಗಿ ನೋಡಲಾಗಿ ಅಪಘಾತದಲ್ಲಿ ನಿನ್ನ ಅಣ್ಣ ಮಲ್ಲಿಕಾಜರ್ುನ ಮತ್ತು ಅವನ ಗೆಳೆಯ ಭೀಮರಾಯ ಮಡಿವಾಳಕರ್ ಇದ್ದು, ಅಪಘಾತದಲ್ಲಿ ನಿನ್ನ ಅಣ್ಣನ ಮುಖಕ್ಕೆ ಭಾರಿ ರಕ್ತಗಾಯವಾಗಿದ್ದು, ಮೋಟರ್ ಸೈಕಲ್ ನಡೆಸುತ್ತಿದ್ದ ಭೀಮರಾಯ ಮಡಿವಾಳಕರ್ನಿಗೆ ಎಡ ಹಣೆ ಮತ್ತು ಎಡಗಣ್ಣ ಕೆಳಗೆ ರಕ್ತಗಾಯವಾಗಿರುತ್ತವೆ ಸ್ಥಳದಲ್ಲಿದ್ದ ಮೋಟರ ಸೈಕಲ್ ನಂಬರ ನೋಡಲಾಗಿ ಕೆಎ-33 ವಿ-6985 ಇರುತ್ತದೆ ಅಂತಾ ಹೇಳಿದಾಗ ನಾನು ಮತ್ತು ನಮ್ಮ ಮಾವ ರುದ್ರಪ್ಪ ತಂ/ ಯಲ್ಲಪ್ಪ ಹುಲಿಮನಿ ಸಾ|| ದೇವಿನಗರ ಇಬ್ಬರೂ ಕೂಡಿ ಘಟನೆ ಸ್ಥಳಕ್ಕೆ ಹೋಗಿ ನೋಡಲಾಗಿ ಗೋಲಗೇರಿ ಕ್ರಾಸ್ ಹತ್ತಿರ ಅಪಘಾತ ಜರುಗಿದ್ದು, ಅಪಘಾತದಲ್ಲಿ ಭಾರೀಗಾಯ ಹೊಂದಿದ ನನ್ನ ಅಣ್ಣ ಮಲ್ಲಿಕಾಜರ್ುನ ಮತ್ತು ಅವನ ಗೆಳೆಯ ಭೀಮರಾಯ ಮಡಿವಾಳಕರ್ ಇವರಿಬ್ಬರಿಗೆ ಸ್ಥಳಕ್ಕೆ ಬಂದ 108 ವಾಹನದಲ್ಲಿ ಹಾಕಿಕೊಂಡು ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರ ಕುರಿತು ಸೇರಿಕೆ ಮಾಡಿದಾಗ ತಪಾಸಣೆ ಮಾಡಿದ ವೈಧ್ಯಾಧಿಕಾರಿಗಳು ಗಾಯಾಳುಗಳಿಗೆ ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದರಿಂದ ನಾನು ಮತ್ತು ನಾಗರಾಜ ಗುತ್ತಿಪೇಟ್ ಹಾಗೂ ನನ್ನ ಮಾವ ರುದ್ರಪ್ಪ ಹುಲಿಮನಿ 3 ಜನರು ಕೂಡಿಕೊಂಡು ಗಾಯಾಳುಗಳಿಗೆ 108 ವಾಹನದಲ್ಲಿ ಕಲಬುಗರ್ಿಗೆ ಕರೆದುಕೊಂಡು ಹೋಗುತ್ತಿದ್ದಾಗ ಇಂದು ದಿನಾಂಕ: 20/06/2021 ರಂದು 2.00 ಎ.ಎಂ. ಸುಮಾರಿಗೆ ಕಲಬುಗರ್ಿಯ ರಾಮ ಮಂದಿರದ ಹತ್ತಿರ ಇರುವಾಗ ನನ್ನ ಅಣ್ಣ ಮಲ್ಲಿಕಾಜರ್ುನನು ಅಪಘಾತದಲ್ಲಿ ತನಗೆ ಆದ ಗಾಯಗಳಿಂದಾಗಿ ಮೃತಪಟ್ಟಿದ್ದು, ಮೃತ ದೇಹವನ್ನು ಮರಳಿ ಶಹಾಪೂರಕ್ಕೆ ತಂದು ಸರಕಾರಿ ಆಸ್ಪತ್ರೆ ಶಹಾಪೂರದ ಮರ್ಚರಿ ಕೋಣೆಯಲ್ಲಿ ಹಾಕಿ ಠಾಣೆಗೆ ಬಂದಿರುತ್ತೇನೆ. ಕಾರಣ ಅಪಘಾತ ಪಡಿಸಿದ ಆರೋಪಿತನ ವಿರುದ್ದ ಸೂಕ್ತ ಕಾನೂನುಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 142/2021 ಕಲಂ 279, 337, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 143/2021 ಕಲಂ ಮಹಿಳೆ ಕಾಣೆ : ಇಂದು ದಿನಾಂಕ 2/06/2021 ರಂದು 18.30 ಪಿ.ಎಮ್ ಕ್ಕೆ ಪಿಯರ್ಾದಿ ಬಸವರಾಜ ತಂದೆ ಭೀಮಣ್ಣ ಬೇನಕನಳ್ಳಿ, ವ|| 55 ವರ್ಷ, ಜಾ|| ಕುರಬರು, ಉ|| ಜಾನವಾರ ಅಧೀಕಾರಿ, ಸಾ|| ಅರಳಳ್ಳಿ, ಹಾ||ವ|| ಮಡಿವಾಳೆಶ್ವರ ನಗರ ಶಹಾಪುರ ಇದ್ದು, ನನಗೆ ಸುಮಾರು 23 ವರ್ಷಗಳಿಂದ ಮದು ಜೋತೆಯಲ್ಲಿ ಮದುವೆಯಾಗಿ ನಮ್ಮ ಸಂಸಾರದಲ್ಲಿ ಒಬ್ಬ ಗಂಡು ಮಗನಿದ್ದು, ಭರತಕೂಮರ ವ|| 21 ವರ್ಷ, ನಾನು ಜಾನವಾರ ಅಧಿಕಾರಿ ಅಂತಾ ಕೆಲಸಮಾಡಿಕೊಂಡು ಉಪಜೀವಿಸುತ್ತಿದ್ದು, ಹೀಗಿದ್ದು, ದಿನಾಂಕ 18/06/2021 ರಂದು ನಾನು ನನ್ನ ಕರ್ತವ್ಯ ಕುರಿತು 09:00 ಎ.ಎಂ ಕ್ಕೆ ಮನೆಯಿಂದ ಹಳ್ಳಿ ಕಡೆಗೆ ಹೋಗಿದ್ದು, ನಂತರ ಮರಳಿ 01:00 ಪಿ.ಎಂ ಕ್ಕೆ ಮನೆಗೆ ಬಂದು, ನೋಡಲಾಗಿ ಮನೆಯಲ್ಲಿ ನನ್ನ ಹೆಂಡತಿ ಮಧು ಇರಲಿಲ್ಲಾ, ಮನೆಯಲ್ಲಿದ್ದ ನನ್ನ ಮಗ ಭರತಕುಮಾರನಿಗೆ ವಿಚಾರಿಸಲಾಗಿ, ನಮ್ಮ ತಾಯಿ ಮಧು ಇವರು 12:00 ಪಿ.ಎಂ ಸುಮಾರಿಗೆ ಹೋರಗಡೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋಗಿದ್ದಾಳೆ ಅಂತಾ ತಿಳಿಸಿದ್ದು, ನಂತರ ನಾನು ಸ್ವಲ್ಪ ಸಮಯ ಕಳೆದು ನೋಡಿದ್ದು, ಸದರಿ ನನ್ನ ಹೆಂಡತಿ ಮನೆಗೆ ಬರದಿದ್ದಾಗ, ನಾನು ಮತ್ತು ನನ್ನ ಮಗ ಭರತಕುಮಾರ ಗಾಬರಿಯಾಗಿ, ಶಹಾಪೂರ ನಗರದ ಬಸ ನಿಲ್ದಾಣ, ಚರಬಸವೇಶ್ವರ ಮಂದಿರ, ದೇವಿ ನಗರ, ಹಳಿ ಪೇಠ, ರಾಕಂಗೇರಾ ಎಲ್ಲಾ ಕಡೆ ಹುಡಕಾಡಿದರು ಸಿಕ್ಕಿರುವದಿಲ್ಲಾ, ನಂತರ ನಾನು ನಮ್ಮ ಸಂಬಂದಕರಿಗೆ ಮತ್ತು ನನ್ನ ಹೆಂಡತಿ ತವರು ಮನೆಯವರಿಗೆ ಪೋನ ಮಾಡಿ ವಿಚಾರಿಸಲಾಗಿ ಬಂದಿರುವದಿಲ್ಲಾ ಅಂತಾ ತಿಳಿಸಿದ್ದು, ನಾನು ಮತ್ತು ನ್ನನ ಮಗ ಭರತಕುಮಾರ, ಮಲ್ಲಪ್ಪ ತಂದೆ ಈರಪ್ಪ ಟಣಕೇದಾರ, ಸುಭಾಸ ತಂದೆ ತಿಪ್ಪಣ್ಣಗೌಡ ಸಾ|| ಸಾದ್ಯಾಪೂರ ಎಲ್ಲರೂ ಕೂಡಿ ಅರಳಳ್ಳಿ, ಬೀ ಗುಡಿ, ಜೇವಗರ್ಿ ಎಲ್ಲಾ ಹುಡಕಾಡಿದರು ಸಿಕ್ಕಿರುವದಿಲ್ಲಾ, ನನ್ನ ಹೆಂಡತಿ ಮಧು ಜೋತೆಯಲ್ಲಿ ಶಹಾಪೂರದ ದೇವಿ ನಗರದ ಇಮಿತಿಯಾಜ ಪಟೇಲ ಎಂಬ ವ್ಯಕ್ತಿ ಹಾಗಾಗ ನನ್ನ ಹೆಂಡತಿ ಜೋತಿಯಲ್ಲಿ ಫೋನಿನಲ್ಲಿ ಮಾತನಾಡುತ್ತಿದ್ದ, ಇವರು ನನ್ನ ಹೆಂಡತಿ ಜೋತೆಯಲ್ಲಿ ಸಲುಗೆಯಿಂದ ಇರುತ್ತಿದ್ದನು, ಕಾರಣ ನನ್ನ ಹೆಂಡತಿ ಮಧು ಗಂಡ ಬಸವರಾಜ ವ|| 42 ವರ್ಷ, ಜಾ|| ಕುರಬರು, ಉ|| ಗೃಹಿಣಿ, ಸಾ|| ಅರಳಳ್ಳಿ, ಹಾ||ವ|| ಮಡಿವಾಳೆಶ್ವರ ನಗರ ಶಹಾಪೂರ ಇವರ ನಮಗೆ ಹೆಳದೆ ಕೇಳದೆ, ಮನೆ ಬಿಟ್ಟು ಹೋಗಿ ಕಾಣೆಯಾಗಿದ್ದು, ನನ್ನ ಹೆಂಡತಿ ಮಧುವನ್ನು ಹುಡಕೊಡಬೆಕೆಂದು, ಎಲ್ಲಾ ಕಡೆ ಹುಡಕಾಡಿ ತಡವಾಗಿ ನಂತರ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಅಂತಾ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 143/2021 ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.