ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 21-06-2022


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 100/2022 ಕಲಂ 279, 337, 338 ಐಪಿಸಿ ನೇದ್ದಕ್ಕೆ ಹೆಚ್ಚುವರಿಯಾಗಿ ಕಲಂ: 304(ಎ) ಐ.ಪಿ.ಸಿ ಅಳವಡಿಸಿಲಾಗಿದೆ. : ಪಿರ್ಯಾಧಿಯು ಮತ್ತು ಇತರ ಗಾಯಾಳುಗಳು ಬೂಲೋರ ನಂ ಕೆಎ-32 ಎನ್ 6305 ನೇದ್ದರಲ್ಲಿ ಹೈದ್ರಾಬಾದಿನಿಂದ ಮರಳಿ ಕಲಬುರಗಿಗೆ ಗರುಮಠಕಲ್ ಮಾರ್ಗವಾಗಿ ಹೋಗುತ್ತಿರುವಾಗ ಸಿಂದಗಿ- ಕೋಡಂಗಲ್ ರಾಜ್ಯ ಹೆದ್ದಾರಿ ಎಸ್ ಹೆಚ್ -16 ಮೇಲೆ ಗುರುಮಠಕಲ್ ಪಟ್ಟಣದ ಯಶೋದ ಪೆಟ್ರೋಲ್ ಬಂಕ್ ಹತ್ತಿರ ಸದರಿ ಬೂಲೋರ ನಂ ಕೆಎ-32 ಎನ್ 6305 ನೇದ್ದರಲ್ಲಿ, ಅತಿವೇಗ, ಅಲಕ್ಷತನದಿಂದ ಚಾಲನೆ ಮಾಡಿಕೊಂಡು ಹೋಗಿ ಒಮ್ಮಿಗೆ ಬ್ರೇಕ್ ಮಾಡಿದ್ದರಿಂದ ಬೂಲೋರ ಪಲ್ಟಿಯಾಗಿ ಬಿದ್ದಿದ್ದರಿಂದ್ದ ಬೂಲೋರ ನಂ ಕೆಎ-32 ಎನ್ 6305 ನೇದ್ದರಲ್ಲಿ ಪಿರ್ಯಾಧಿಗೆ ಮತ್ತು ಇತರರಿಗೆ ಸಾದ ಮತ್ತು ಭಾರಿ ಮತ್ತು ಸಾದಸ್ವರೂಪದ ಗಾಯಗಳಾಗಿದ್ದು ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ ಅಂತಾ ಪಿರ್ಯಾಧಿ ವಗೈರೆ ಇರುತ್ತದೆ.
ನಂತರ ದಿನಾಂಕ 19.06.2022 ರಂದು ಮದ್ಯಾಹ್ನ 02.30 ಗಂಟೆಗೆ ಸಂಭವಿಸಿದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಈಗಾಗಲೇ ದಾಖಲಾಗಿರುವ ಗುರುಮಠಕಲ್ ಠಾಣೆ ಗುನ್ನೆ ನಂಬರ 100/2022 ನೇದ್ದರ ಪ್ರಕರಣದಲ್ಲಿಯ ಗಾಯಾಳುದಾರನಾದ ಖಲೀಲ್ ತಂದೆ ಖಾಸೀಮಸಾಬ ಹವಲ್ದಾರ ವ|| 30 ವರ್ಷ ಜಾ: ಮುಸ್ಲಿಂ ಉ: ಚಾಲಕ ಸಾ|| ಹಳಿಪೇಟ ಏರಿಯಾ ಶಹಾಪೂರ ಜಿ: ಯಾದಗಿರ ಈತನು ವೈಧ್ಯರ ಸಲಹೇಯ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಮಣ್ಣೂರು ಆಸ್ಪತ್ರೆಗೆ ಅಂಬುಲೆನ್ಸನಲ್ಲಿ ಹಾಕಿಕೊಂಡು ಹೋಗುತ್ತಿರುವಾಗ ಮಣ್ಣೂರು ಆಸ್ಪತ್ರೆಯ ಹತ್ತಿರ 05.15 ಪಿ.ಎಮ್ ಸುಮಾರಿಗೆೆ ಮೃತಪಟ್ಟಿರುತ್ತಾನೆ. ನಂತರ ಆತನ ಮೃತದೇಹವನ್ನು ಅಲ್ಲಿಂದ ಪುನಃ ಶಹಪೂರ ಸರಕಾರಿ ಆಸ್ಪತ್ರೆಗೆ ತಂದು ಶವಗಾರ ಕೊಣೆಯಲ್ಲಿಟ್ಟು ಆ ಬಗ್ಗೆ ಮೃತನ ತಂದೆಯ ತಮ್ಮ(ಕಾಕ) ದಾವಲಸಾಬ ತಂದೆ ಹುಸೇನಸಾಬ ಅವಲ್ದಾರ ವ||46 ವರ್ಷ ಜಾ|| ಮುಸ್ಲಿಂ ಉ|| ಕಾಂಟ್ರಕ್ಟರ ಸಾ|| ರಾಕಮಗೇರಾ ಏರಿಯಾ ಶಹಪೂರ ಜಿ||ಯಾದಗಿರಿ ಇವರ ಹೇಳಿಕೆಯನ್ನು ಪಡೆದು ಮುಂದಿನ ಕ್ರಮ ಜರುಗಿಸಿದ್ದು ಇರುತ್ತದೆ. ಕಾರಣ ಸದರಿ ಗುನ್ನೆ ನಂ: 100/2022 ನೇದ್ದರಲ್ಲಿ ಕಲಂ:304(ಎ) ಐಪಿಸಿ ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಕ್ಕೆ ನಿವೇಧಿಸಿಕೊಂಡಿದ್ದು ಇರುತ್ತದೆ.


ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 58/2022 ಕಲಂ 341, 323, 307, 364, 384, 395, 427, 504, 506, 109 ಸಂಗಡ 149 ಐಪಿಸಿ : ಯಾರೋ 8 ಜನಅಪರಿಚಿತ ವ್ಯಕ್ತಿಗಳು ಜೆ.ವೆಂಕಟೇಶ ಸಂಗಡ 5 ಜನರಕುಮ್ಮಕ್ಕಿನಿಂದ ಫಿಯರ್ಾದಿಯಗಂಡ ಶ್ರೀನಿವಾಸರಾವಈತನಿಗೆ ದಿನಾಂಕ:31/05/2022 ರಂದು 10.15 ಪಿ.ಎಮ್. ಸುಮಾರಿಗೆಕಾರನಲ್ಲಿ ಹೊರಟಾಗಕಾರ್ಗ್ಲಾಸ್ಒಡೆದುತಮ್ಮಕಾರನಲ್ಲಿ ಕೊಲೆ ಮಾಡುವಉದ್ದೇಶದಿಂದಅಪಹರಣ ಮಾಡಿಕೊಂಡು ಹೋಗಿ ಎಲ್ಲೋಒಂದುಕಡೆರೂಮಿಗೆಕರೆದುಕೊಂಡು ಹೋಗಿ ಅವಾಚ್ಯ ಬೈದು ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿ ಖಾಲಿ ಚೆಕ್ಗಳು, ಸ್ಟ್ಯಾಂಪ್ ಪೇಪರ್ ಮತ್ತು ಖಾಲಿ ಹಾಳೆಗಳ ಮೇಲೆ ಸಹಿ ಮಾಡಿಸಿಕೊಂಡು, 2,60,000 ರೂ ಹಣ ಕಸಿದುಕೊಂಡು ಮತ್ತೆಕಾರನಲ್ಲಿ ಕೂಡಿಸಿಕೊಂಡು ದಿನಾಂಕ:01/06/2022 ರಂದು 2.45 ಎ.ಎಮ್.ಕ್ಕೆಭೀಮಾ ನದಿಯ ಬ್ರಿಜ್ ಮೇಲೆ ಕರೆದುಕೊಂಡು ಬಂದಾಗ ಶ್ರೀನಿವಾಸ ಈತನುಅವರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು ಸದರಿಘಟನೆಆರೋಪಿತರಕುಮ್ಮಕ್ಕಿನಿಂದಯಾರೋ 8 ಜನರು ಈ ಕೃತ್ಯಎಸಗಿದ್ದು ಕಾನೂನು ಕ್ರಮಜರುಗಿಸುವಂತೆದೂರುಇರುತ್ತದೆ.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 93/2022, ಕಲಂ, 341, 323, 324, 504.506. ಸಂ. 34 ಐ ಪಿ ಸಿ : ಇಂದು ದಿನಾಂಕ: 20-06-2022 ರಂದು ರಾತ್ರಿ 07-00 ಗಂಟೆಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಇದೆ ಅಂತಾ ಪೊನ್ ಮೂಲಕ ತಿಳಿಸಿದ ಮೇರೆಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆ ಭೆಟಿ ನೀಡಿ ಅಲ್ಲಿ ಗಾಯಾಳುಗಳಿಗೆ ಘಟನೆ ಬಗ್ಗೆ ವಿಚಾರಿಸಿದ್ದು ಪಿರ್ಯಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 19-06-2022 ರಂದು ಬೆಳಿಗ್ಗೆ 09-30 ಗಂಟೆ ಸುಮಾರಿಗೆ ನಾನು ನಮ್ಮ ತಮ್ಮನವರು ಮತ್ತು ನನ್ನ ಹೆಂಡತಿ ಕೂಲಿಕೆಲಸಕ್ಕೆ ಅಂತಾ ನಮ್ಮ ಟ್ರ್ಯಾಕ್ಟರದಲ್ಲಿ ಹಣಮಂತನ ಹೊಲದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಹೋಗುತ್ತಿರುವಾಗ ಆರೋಪಿತರಲ್ಲರು ಕೂಡಿಕೊಂಡು ಬಂದು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಟ್ಟಿಗೆಯಂದ ಹೊಡೆದು ಜೀವದ ಬೇದರಿಕೆ ಹಾಕಿದ ಬಗ್ಗೆ ಪಿಯರ್ಾಧಿ.ಸಾರಂಶ ಇರುತ್ತದೆ.

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 50/2022 ಕಲಂ-78 (3) ಕೆ.ಪಿ ಯಾಕ್ಟ : ದಿನಾಂಕ:20/06/2022 ರಂದು 3.00 ಪಿ.ಎಮ್ ಕ್ಕೆ ಶ್ರೀ. ದೌಲತ್ ಎನ್.ಕೆ ಸಿಪಿಐ ಹುಣಸಗಿ ವೃತ್ತ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆನಕನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:50/2022 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
ನಂತರ ಸಿಪಿಐ ಸಾಹೇಬರು ರವರು 18.30 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 3060/- ರೂ.ಗಳು, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಆದೇಶ ನೀಡಿದ್ದು,್ದ ಇರುತ್ತದೆ. ಆರೋಪಿತರ ಹೆಸರು ಶರಣಪ್ಪ ತಂದೆ ಯಮನಪ್ಪ ಕೆಂಭಾವಿ ವಯಾ-55 ವರ್ಷ, ಜಾ:ಹಿಂದೂ ಬೇಡರ ಉ:ಮಟಕಾ ಬರೆಯುವದು ಸಾ:ಬೆನಕನಹಳ್ಳಿ

ಇತ್ತೀಚಿನ ನವೀಕರಣ​ : 21-06-2022 11:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080