ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 21-07-2022


ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 119/2022 ಕಲಂ: 279, 338, 304(ಎ) ಐಪಿಸಿ ಮತ್ತು 187 ಐಎಂವಿ ಯಾಕ್ಟ್: ದಿನಾಂಕ 18/07/2022 ರಂದು 9.20 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಪರಶುರಾಮ ತಂದೆ ಬಾಲಪ್ಪ ವಡ್ಡರ ವ|| 35ವರ್ಷ ಜಾ|| ವಡ್ಡರ ಉ|| ಗೌಂಡಿ ಕೆಲಸ ಸಾ|| ಕಕ್ಕಸಗೇರಾ ಹಾ|| ವ|| ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನೆಂದರೆ, ನಾವು ಇಬ್ಬರು ಅಣ್ಣ ತಮ್ಮಂದಿರರು ಇದ್ದು ನಾನು ಹಿರಿಯವನಾಗಿದ್ದು ನಮ್ಮ ತಮ್ಮನಾದ ನಾಗಪ್ಪ ತಂದೆ ಬಾಲಪ್ಪ ವಡ್ಡರ ವ|| 31ವರ್ಷ ಜಾ|| ವಡ್ಡರ ಉ|| ಗೌಂಡಿ ಕೆಲಸ ಸಾ|| ಕಕ್ಕಸಗೇರಾ ಹಾ|| ವ|| ಕೆಂಭಾವಿ ಇದ್ದು, ನಾನು ಮತ್ತು ನನ್ನ ತಮ್ಮನಾದ ನಾಗಪ್ಪ ಇಬ್ಬರೂ ಸುಮಾರು 9 ವರ್ಷಗಳ ಹಿಂದಿನಿಂದ ಗೌಂಡಿ ಕೆಲಸ ಮಾಡುತ್ತಾ ಕೆಂಭಾವಿ ಪಟ್ಟಣದಲ್ಲಿ ವಾಸ ಮಾಡುತ್ತಾ ಇರುತ್ತೇವೆ. ಆಗಾಗ ನಾನು ಮತ್ತು ನಮ್ಮ ತಮ್ಮ ಇಬ್ಬರೂ ನಮ್ಮ ಊರಾದ ಕಕ್ಕಸಗೇರಾಕ್ಕೆ ಹೋಗುವುದು ಬರುವುದು ಮಾಡುತ್ತಾ ಇದ್ದೇವೆ. ಹೀಗಿದ್ದು ಇಂದು ದಿನಾಂಕ 18/07/2022 ರಂದು ಮುಂಜಾನೆ 9.00 ಗಂಟೆಗೆ ನಮ್ಮ ತಮ್ಮನಾದ ನಾಗಪ್ಪನು ನಮ್ಮ ಊರಾದ ಕಕ್ಕಸಗೇರಾಕ್ಕೆ ಕೆಲಸ ಇದೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದನು. ನಂತರ ಸಂಜೆ 7.30 ಪಿಎಂ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಅಳಿಯನಾದ ಶರಣಪ್ಪ ಮೋಪಗಾರ ಈತನು ನನಗೆ ಫೋನ್ ಮಾಡಿ ನಾಗಪ್ಪನು ತನ್ನ ಸೈಕಲ್ ಮೋಟಾರ ಮೇಲೆ ಕಕ್ಕಸಗೇರಾದಿಂದ ಕೆಂಭಾವಿಗೆ ಹೋಗುತ್ತಿದ್ದಾಗ ಕಿರದಳ್ಳಿ ಕ್ರಾಸ್ ಹತ್ತಿರ ಒಂದು ಕಾರಿಗೆ ಅಪಘಾತವಾಗಿ ಬಿದ್ದಿದ್ದು ನಾಗಪ್ಪನಿಗೆ ಬಹಳಷ್ಟು ಗಾಯಗಳಾಗಿ ಮಡಿವಾಳ ಕಟ್ಟಿಮನಿ ಕಿರದಳ್ಳಿ ಮತ್ತು ಧನರಾಜ ಜೈನಾಪೂರ ಇವರು ಒಂದು ಅಂಬುಲೆನ್ಸನಲ್ಲಿ ಹಾಕಿಕೊಂಡು ಕೆಂಭಾವಿ ದವಾಖಾನೆಗೆ ಬರುತ್ತಿದ್ದಾರೆ ನೀವು ಅಲ್ಲಿಗೆ ಹೋಗಿರಿ ಅಂತಾ ಹೇಳಿದ್ದರಿಂದ ತಕ್ಷಣ ನಾನು ಮತ್ತು ನಮ್ಮ ಸಂಬಂಧಿಕನಾದ ಬಸವರಾಜ ತಂದೆ ಮಾರೆಪ್ಪ ಮೋಪಗಾರ ಇಬ್ಬರೂ ಕೂಡಿ ಕೆಂಭಾವಿ ಸಕರ್ಾರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನಮ್ಮ ತಮ್ಮನಾದ ನಾಗಪ್ಪನಿಗೆ ತಲೆಗೆ, ತಲೆಯ ಹಿಂದೆ, ಕುತ್ತಿಗೆಗೆ ಭಾರೀ ರಕ್ತಗಾಯವಾಗಿದ್ದು ಮತ್ತು ಬಲಗಾಲಿನ ಪಾದದ ಮೇಲೆ ರಕ್ತಗಾಯವಾಗಿ ಕಾಲಿಗೆ ಗುಪ್ತಗಾಯವಾಗಿ ನಾಗಪ್ಪನು ಮಾತನಾಡದ ಸ್ಥಿತಿಯಲ್ಲಿದ್ದನು. ನಾಗಪ್ಪನಿಗೆ ದವಾಖಾನೆಗೆ ಕರೆದುಕೊಂಡು ಬಂದ ಮಡಿವಾಳ ಕಿರದಳ್ಳಿ ಮತ್ತು ಧನರಾಜ ಜೈನಾಪೂರ ಇವರಿಗೆ ಅಪಘಾತ ಹೇಗಾಯಿತು ಅಂತಾ ಕೇಳಿದಾಗ ನಾಗಪ್ಪನು ತನ್ನ ಸೈಕಲ್ ಮೋಟಾರ ನಂ ಕೆಎ 33 ಇಬಿ 2290 ನೇದ್ದರ ಮೇಲೆ ಮಾಲಗತ್ತಿ ಕಡೆಯಿಂದ ಕೆಂಭಾವಿ ಕಡೆಗೆ ಹೋಗುತ್ತಿದ್ದಾಗ ಕಿರದಳ್ಳಿ ಕ್ರಾಸ್ ಮತ್ತು ಕೋರಮ್ಮ ದೇವಿ ದೇವಸ್ಥಾನದ ನಡುವೆ ಸುರಪೂರ ಕೆಂಭಾವಿ ರಸ್ತೆಯ ಮೇಲೆ ಕೆಂಭಾವಿ ಕಡೆಯಿಂದ ಒಂದು ಕಾರ ನಂ ಕೆಎ 33 ಎಮ್ 3464 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಸೈಕಲ್ ಮೋಟಾರಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಾಗಪ್ಪನು ಕೆಳಗೆ ಬಿದ್ದು ತಲೆಗೆ, ಕುತ್ತಿಗೆಗೆ, ಕಾಲಿಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿ ಮಾತನಾಡದ ಸ್ಥಿತಿಯಲ್ಲಿದ್ದುದರಿಂದ ನಾವು ನಾಗಪ್ಪನಿಗೆ ಕೆಂಭಾವಿ ದವಾಖಾನೆಗೆ ಕರೆದುಕೊಂಡು ಬಂದಿದ್ದು, ಕಾರಿನ ಚಾಲಕನು ತನ್ನ ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅವನ ಹೆಸರು ವಿಳಾಸ ಗೊತ್ತಿಲ್ಲ ಅಂತಾ ತಿಳಿಸಿದನು. ಅಪಘಾತದಿಂದಾಗಿ ನಮ್ಮ ತಮ್ಮನಾದ ನಾಗಪ್ಪನಿಗೆ ತೀವ್ರತರವಾದ ಗಾಯಗಳಾಗಿ ಮಾತನಾಡದ ಸ್ಥಿತಿಯಲ್ಲಿದ್ದುದರಿಂದ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ದವಾಖಾನೆಗೆ ಕಳುಹಿಸಿದ್ದು ಇರುತ್ತದೆ. ಕಾರಣ ನಮ್ಮ ತಮ್ಮನಾದ ನಾಗಪ್ಪ ತಂದೆ ಬಾಲಪ್ಪ ವಡ್ಡರ ಈತನು ತನ್ನ ಸೈಕಲ್ ಮೋಟಾರ ನಂ ಕೆಎ 33 ಇಬಿ 2290 ನೇದ್ದರ ಮೇಲೆ ಕೆಂಭಾವಿಗೆ ಬರುತ್ತಿದ್ದಾಗ ಎದುರಿನಿಂದ ಕಾರು ನಂ ಕೆಎ 33 ಎಮ್ 3464 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಾಗಪ್ಪನ ಸೈಕಲ್ ಮೋಟಾರಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಕಾರನ್ನು ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದಾಗಿ ನಾಗಪ್ಪನಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದು ಅಪಘಾತ ಮಾಡಿದ ಕಾರು ನಂ ಕೆಎ 33 ಎಮ್ 3464 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 119/2022 ಕಲಂ 279, 338 ಐಪಿಸಿ ಮತ್ತು 187 ಐಎಂವಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ನಂತರ ಇಂದು ದಿನಾಂಕ 20.07.2022 ರಂದು 8.30 ಎಎಮ್ಕ್ಕೆ ಸರಕಾರಿ ಆಸ್ಪತ್ರೆ ಕಲಬುಗರ್ಿಯಿಂದ ಡೆತ್ ಎಮ್ ಎಲ್ ಸಿ ವಸೂಲಾಗಿದ್ದೇನೆಂದರೆ ಸದರಿ ಪ್ರಕರಣದಲ್ಲಿಯ ಗಾಯಾಳು ನಾಗಪ್ಪ ತಂದೆ ಬಾಲಪ್ಪ ವಡ್ಡರ ವ|| 31ವರ್ಷ ಜಾ|| ವಡ್ಡರ ಉ|| ಗೌಂಡಿ ಕೆಲಸ ಸಾ|| ಕಕ್ಕಸಗೇರಾ ಹಾ|| ವ|| ಕೆಂಭಾವಿ ಈತನು ಭಾರಿ ರಕ್ತಗಾಯ ಹಾಗೂ ಗುಪ್ತಗಾಯ ಹೊಂದಿ ಕಲಬುರಗಿಯ ಜಯದೇವ ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದವನು ಉಪಚಾರ ಫಲಕಾರಿಯಾಗದೆ ಇಂದು ದಿ 20.07.2022 ರಂದು 8.00 ಎಎಮ್ಕ್ಕೆ ಮೃತಪಟ್ಟಿದ್ದು ಇರುತ್ತದೆ ಅಂತ ಎಮ್.ಎಲ್.ಸಿ ವಸೂಲಾಗಿದ್ದು ಇರುತ್ತದೆ. ಕಾರಣ ಸದರಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಂಡಿದ್ದು ಇರುತ್ತದೆ


ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 61/2022 ಕಲಂ 78(3) ಕೆ.ಪಿ. ಎಕ್ಟ್: ಇಂದು ದಿನಾಂಕ:20/07/2022 ರಂದು 5.30 ಪಿ.ಎಮ್ ಕ್ಕೆ ಸಲಾದಪೂರಗ್ರಾಮದ ಸೈಯ್ಯದ ಪೀರಪಾಶಾದಗರ್ಾದ ಹತ್ತಿರಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಫಿಯರ್ಾದಿದಾರರಿಗೆ ಬಾತ್ಮಿ ಬಂದಿದ್ದರಿಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿಆರೋಪಿತನು ಹೋಗಿ ಬರುವ ಸಾರ್ವಜನಿಕರಿಗೆ ಕೈ ಮಾಡಿಕರೆದು ಬಾಂಬೆ ಕಲ್ಯಾಣ ಮಟಕಾದೈವದ ಆಟ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬರ್ರಿ ನಂಬರ ಬರೆಯಿಸಿರಿ ಅಂತಕೂಗುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿಅವನಿಂದ 1) ನಗದು ಹಣರೂಪಾಯಿ 720=00, 2) ಒಂದು ಮಟಕಾ ನಂಬರ ಬರೆದಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳು 6.30 ಪಿ.ಎಮ್ ದಿಂದ 7.30 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು 8 ಪಿ.ಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 103/2022 ಕಲಂ. 323, 324, 114, 448, 504,506 ಸಂಗಡ 34 ಐಪಿಸ್ಟಿ: ದಿನಾಂಕ 10-07-2022 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ ಫಿರ್ಯಾಧಿದಾರರ ಹೋಲದ ಒಡ್ಡು ಮಳೆಯಿಂದ ಒಡೆದು ಹೋಗಿದ್ದರಿಂದ ಅದನ್ನು ಸರಿ ಮಾಡುವ ಸಲುವಾಗಿ ಪಕ್ಕದ ಹಳ್ಳದಲ್ಲಿಂದ ಮಣ್ಣು ತಂದು ಒಡ್ಡನ್ನು ಸರಿ ಮಾಡುತ್ತಿದ್ದಾಗ ಅದೇ ವೇಳೆಗೆ ಆರೋಪಿತರು ಫಿರ್ಯಾಧೀಯ ಹೋಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಮಗನೇ ನಿಮಗೆ ಮೊದಲಿನಿಂದ ಈ ಹಳ್ಳದಿಂದ ಮಣ್ಣು ತೆಗಬೇಡ ಅಂತಾ ಹೇಳಿದರೂ ಕೂಡಾ ನಮ್ಮ ಮಾತಿಗೆ ಕಿಮ್ಮತ್ತು ಮಾಡುತ್ತಿಲ್ಲಾ ನಿಮಗೆ ಸೊಕ್ಕು ಜಾಸ್ತಿಯಾಗಿದೆ ಅಂತಾ ಫಿರ್ಯಾಧಿಗೆ ಅಚಾಚ್ಯವಾಗಿ ಬೈದು ಕಲ್ಲಿನಿಂದ ಹೊಡೆದು ಕುತ್ತಿಗೆ ಬಿಗಿಯಾಗಿ ಹಿಡಿದು ಹೊಡೆ ಬಡಿ ಮಾಡಿ ಜೀವದ ಭಯ ಹಾಕಿದ್ದು ಇರುತ್ತದೆ ಅಂತಾ ವಗೈರೆ ಫಿರ್ಯಾಧಿ ಸಾರಾಂಶವಿರುತ್ತದೆ.

ಇತ್ತೀಚಿನ ನವೀಕರಣ​ : 22-07-2022 12:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080