Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 21-08-2021

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ :135/2021 ಕಲಂ: 143, 147, 148, 323, 324, 307, 195(ಎ), 504, 506 ಸಂಗಡ 149 ಐಪಿಸಿ : ಇಂದು ದಿನಾಂಕ 20.08.2021 ರಂದು ಸಮಯ 0100 ಗಂಟೆಯಿಂದ ಸಮಯ 0245 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತರೆಲ್ಲಾರೂ ಕೂಡಿ ಅಕ್ರಮ ಕೂಟ ರಚಿಸಿಕೊಂಡು 06/2020 ರ ಪ್ರಕರಣದಲ್ಲಿ ನಮ್ಮ ವಿರುದ್ಧ ಸಾಕ್ಷಿ ಹೇಳುತ್ತಿಯಾ ಅಂತಾ ಹೆದರಿಸಿ ಸಾಕ್ಷಿ ಹೇಳದಂತೆ ಫಿರ್ಯಾದಿಗೆ ಕೈಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒದ್ದಿದು ಅಲ್ಲದೇ ಕಟ್ಟಿಗೆಯಿಂದ ಆತನ ಮೇಲೆ ಹಲ್ಲೇ ಮಾಡಿ ಗುಪ್ತಾಂಗಕ್ಕೆ ಒದ್ದು ಮಾರಣಾಂತಿಕ ಹಲ್ಲೇ ಮಾಡಿದ್ದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದ ಬಗ್ಗೆ ಫಿರ್ಯಾದಿಯ ಲಿಖಿತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 135/2021 ಕಲಂ: 143, 147, 148, 323, 324, 307, 195(ಎ), 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ : 103/2021 ಕಲಂ: 143, 147, 504, 341, 323, 324, ಸಂ 149 ಐಪಿಸಿ : ದಿನಾಂಕ: 20/08/2021 ರಂದು 10-30 ಎಎಮ್ ಕ್ಕೆ ಸಮುದಾಯ ಆರೋಗ್ಯ ಕೇಂದ್ರ ವಡಗೇರಾ ರವರಿಂದ ಎಮ್.ಎಲ್.ಸಿ ಮಾಹಿತಿ ಇದೆ ಎಂದು ತಿಳಿಸಿದ್ದರಿಂದ ನಾನು 11:00 ಎಎಮ್ ಕ್ಕೆ ಆಸ್ಪತ್ರೆಗೆ ಭೇಟಿ ನೀಡಿ, ಎಮ್.ಎಲ್.ಸಿ ಸ್ವಿಕೃತ ಮಾಡಿಕೊಂಡು ಆಸ್ಪತ್ರೆಯಲ್ಲಿದ್ದ ಗಾಯಾಳು ಶ್ರೀ ಬಸಪ್ಪ ತಂದೆ ಮಲ್ಲಿಕಾಜರ್ುನ ಭಜಂತ್ರಿ, ವ:30, ಜಾ:ಕೋರವರ, ಉ:ಒಕ್ಕಲುತನ ಸಾ:ಕಾಡಂಗೇರಾ (ಬಿ) ತಾ:ವಡಗೇರಾ ಇವರು ದೂರು ಅಜರ್ಿ ಕೊಟ್ಟಿದ್ದೇನಂದರೆ ನಾನು ಕಾಡಂಗೇರಾ (ಬಿ) ನಿವಾಸಿಯಾಗಿದ್ದು, ನಮ್ಮ ಕುಲಕಸುಬು ಮತ್ತು ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮೂರಲ್ಲಿ ಮತ್ತು ನಮ್ಮೂರ ಸುತ್ತಮುತ್ತಲ ಗ್ರಾಮಗಳಲ್ಲಿ ಮದುವೆ, ಮುಂಜಿ, ನಿಶ್ಚಿತಾರ್ಥ ಮುಂತಾದ ಸಮಾರಂಭಗಳಿದ್ದರೆ ನಾನು ಮತ್ತು ನಮ್ಮ ಅಣ್ಣತಮ್ಮಕೀಯ ಭೀಮರಾಯ ತಂದೆ ಸುಭಾಶ ಭಜಂತ್ರಿ ಮತ್ತು ಇತರರು ಸೇರಿ ಬ್ಯಾಂಡ ಬಾರಿಸಲು ಹೋಗುತ್ತೇವೆ. ಆದರೆ ಇತ್ತಿಚ್ಚೆಗೆ ಎರಡು-ಮೂರು ಸಮಾರಂಭಗಳಿಗೆ ಭೀಮರಾಯನು ನನಗೆ ಬಿಟ್ಟು ಬೇರೆಯವರಿಗೆ ಕರೆದುಕೊಂಡು ಬ್ಯಾಂಡ ಬಾರಿಸಲು ಹೋಗುತ್ತಿದ್ದನು. ಹೀಗಿದ್ದು ಇಂದು ದಿನಾಂಕ:20/08/2021 ರಂದು ಕುರುಕುಂದಾ ಗ್ರಾಮದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬ್ಯಾಂಡ ಬಾರಿಸಲು ಹೇಳಿದ್ದರು. ಆದರೆ ಸದರಿ ಭೀಮರಾಯ ಈತನು ಬ್ಯಾಂಡ ಬಾರಿಸಲು ನನಗೆ ಬಿಟ್ಟು ಬೇರೆಯವರಿಗೆ ಕರೆದುಕೊಂಡು ಹೋಗುತ್ತಿದ್ದಾನೆ ಎಂದು ನನಗೆ ಗೊತ್ತಾಗಿ ನಾನು ಬೆಳಗ್ಗೆ 8 ಗಂಟೆ ಸುಮಾರಿಗೆ ನಮ್ಮೂರ ದುಗರ್ಾದೇವಿ ಗುಡಿ ಹತ್ತಿರ ಹೋಗಿ ಅಲ್ಲಿದ್ದ ಭೀಮರಾಯನಿಗೆ ಬ್ಯಾಂಡ ಬಾರಿಸಲು ಯ್ಯಾಕೆ ನನಗೆ ಬಿಟ್ಟು ಬೇರೆಯವರಿಗೆ ಕರೆದುಕೊಂಡು ಹೋಗುತ್ತಿದ್ದಿ ಎಂದು ಕೇಳಲು ಹೋಗುತ್ತಿದ್ದಾಗ ಸದರಿ 1) ಭೀಮರಾಯ ತಂದೆ ಸುಭಾಶ ಭಜಂತ್ರಿ, 2) ಲಲಿತಮ್ಮ ಗಂಡ ಭೀಮರಾಯ ಭಜಂತ್ರಿ, 3) ಭೀಮಣ್ಣ ತಂದೆ ಹಣಮಂತ ಭಜಂತ್ರಿ, 4) ನಿಂಗಪ್ಪ ತಂದೆ ಭೀಮಣ್ಣ ಭಜಂತ್ರಿ ಮತ್ತು 5) ಹಣಮಂತ ತಂದೆ ಭೀಮಣ್ಣ ಭಜಂತ್ರಿ ಎಲ್ಲರೂ ಸಾ:ಕಾಡಂಗೇರಾ (ಬಿ) ಇವರೆಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಬಂದವರೆ ನನಗೆ ತಡೆದು ನಿಲ್ಲಿಸಿ, ಭೋಸುಡಿ ಮಗನೆ ನಿನಗೆ ಕರೆದುಕೊಂಡು ಹೋಗಲ್ಲ ಏನು ಸೆಂಟಾ ಕಿತ್ತುಕೊತಿ ಕಿತ್ತಿಕೊ ಎಂದು ಜಗಳ ತೆಗೆದವರೆ ಲಲಿತಮ್ಮ ಮತ್ತು ಭೀಮಣ್ಣ ಇಬ್ಬರೂ ನನಗೆ ಹಿಡಿದುಕೊಂಡಾಗ ಭೀಮರಾಯನು ಅಲ್ಲಿಯೇ ಬಿದ್ದ ಕಟ್ಟಿಗೆಯಿಂದ ನನ್ನ ಎಡಗಡೆ ಎಡಕಿಗೆ ಹೊಡೆದು ಒಳಪೆಟ್ಟು ಮಾಡಿದನು. ನಿಂಗಪ್ಪ ಮತ್ತು ಹಣಮಂತ ಇಬ್ಬರೂ ಬಂದು ನನಗೆ ನೆಲಕ್ಕೆ ಕೆಡವಿ ಕಿಬ್ಬೊಟ್ಟೆ ಮತ್ತು ಪಕ್ಕೆಗಳಿಗೆ ಕಾಲಿನಿಂದ ಒದ್ದಿರುತ್ತಾರೆ. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮ ಕಾಕ ಸಣ್ಣ ಯಲ್ಲಪ್ಪ ತಂದೆ ಭೀಮರಾಯ ಭಜಂತ್ರಿ ಹಾಗೂ ನಮ್ಮ ತಾಯಿ ರೇಣುಕಮ್ಮ ಗಂಡ ಮಲ್ಲಿಕಾಜರ್ುನ ಭಜಂತ್ರಿ ಇಬ್ಬರೂ ಬಂದು ಜಗಳ ಬಿಡಿಸಿರುತ್ತಾರೆ. ಕಾರಣ ನನಗೆ ಬ್ಯಾಂಡ ಬಾರಿಸಲು ಯಾಕೆ ಕರೆದುಕೊಂಡು ಹೋಗುತ್ತಿಲ್ಲ ಎಂದು ಕೇಳಲು ಹೊದರೆ ಎಲ್ಲರೂ ಸೇರಿ ಅವಾಚ್ಯ ಬೈದು, ತಡೆದು ನಿಲ್ಲಿಸಿ, ಹೊಡೆಬಡೆ ಮಾಡಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಎಂದು ಕೊಟ್ಟ ದೂರನ್ನು 12-30 ಪಿಎಮ್ ಕ್ಕೆ ಸ್ವಿಕೃತವ ಮಾಡಿಕೊಂಡು 1-15 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ಗುನ್ನೆ ನಂ. 103/2021 ಕಲಂ: 143, 147, 504, 341, 323, 324, ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ವಡಗೇರಾ ಪೊಲೀಸ ಠಾಣೆ
ಗುನ್ನೆ ನಂ: 104/2021 ಕಲಂ: 143, 147, 504, 341, 323, 324, ಸಂ 149 ಐಪಿಸಿ : ದಿನಾಂಕ: 20/08/2021 ರಂದು 3-15 ಪಿಎಮ್ ಕ್ಕೆ ಶ್ರೀ ಭೀಮರಾಯ ತಂದೆ ಸುಭಾಶ ಭಜಂತ್ರಿ, ವ:26, ಜಾ:ಕೋರವರ, ಉ:ಒಕ್ಕಲುತನ ಸಾ:ಕಾಡಂಗೇರಾ (ಬಿ) ತಾ:ವಡಗೇರಾ ಇವರು ದೂರು ಅಜರ್ಿ ಕೊಟ್ಟಿದ್ದೇನಂದರೆ ನಾನು ಕಾಡಂಗೇರಾ (ಬಿ) ನಿವಾಸಿಯಾಗಿದ್ದು, ನಮ್ಮ ಕುಲಕಸುಬು ಮತ್ತು ಒಕ್ಕಲುತನ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಮ್ಮೂರಲ್ಲಿ ಮತ್ತು ನಮ್ಮೂರ ಸುತ್ತಮುತ್ತಲ ಗ್ರಾಮಗಳಲ್ಲಿ ಮದುವೆ, ಮುಂಜಿ, ನಿಶ್ಚಿತಾರ್ಥ ಮುಂತಾದ ಸಮಾರಂಭಗಳಿದ್ದರೆ ನನಗೆ ಬ್ಯಾಂಡ ಬಾರಿಸಲು ಕರೆಯುತ್ತಾರೆ. ಆಗ ನಾನು ಮತ್ತು ನಮ್ಮ ಅಣ್ಣತಮ್ಮಕೀಯ ಬಸವರಾಜ @ ಬಸಪ್ಪ ತಂದೆ ಮಲ್ಲಿಕಾಜರ್ುನ ಭಜಂತ್ರಿ ಮತ್ತು ಇತರರು ಸೇರಿ ಬ್ಯಾಂಡ ಬಾರಿಸಲು ಹೋಗುತ್ತೇವೆ. ಆದರೆ ಇತ್ತಿಚ್ಚೆಗೆ ಎರಡು-ಮೂರು ದಿನಗಳಿಂದ ಸದರಿ ಬಸವರಾಜ @ ಬಸಪ್ಪ ಈತನು ಸಮಾರಂಭಗಳಲ್ಲಿ ಬ್ಯಾಂಡ ಬಾರಿಸುವುದು ಆದ ನಂತರ ವಿನಾಕಾರಣ ನನ್ನೊಂದಿಗೆ ಜಗಳ ತೆಗೆಯುತ್ತಿದ್ದನು. ಆದಕ್ಕೆ ನಾವು ಅವನಿಗೆ ಬಿಟ್ಟು ಬ್ಯಾಂಡ ಬಾರಿಸಲು ಹೋಗುತ್ತಿದ್ದೇವು. ಹೀಗಿದ್ದು ಇಂದು ದಿನಾಂಕ:20/08/2021 ರಂದು ಕುರುಕುಂದಾ ಗ್ರಾಮದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬ್ಯಾಂಡ ಬಾರಿಸಲು ಬರುವಂತೆ ನನಗೆ ಹೇಳಿದ್ದರು. ಅದರಂತೆ ನಾನು ಬೆಳಗ್ಗೆ ನಮ್ಮ ಹುಡುಗರಿಗೆ ಬ್ಯಾಂಡ ಬಾರಿಸುವುದು ಇದೆ ಬನ್ನಿ ನಾನು ಬರುತ್ತೇನೆ ಎಂದು ಹೇಳಿದ್ದೇನು. ಆ ಪ್ರಕಾರ ನಮ್ಮ ಅಣ್ಣತಮ್ಮಕೀಯ ತಮ್ಮನಾದ ನಿಂಗಪ್ಪ ತಂದೆ ಭೀಮರಾಯ ಈತನು ಬ್ಯಾಂಡ ಬಾರಿಸಲು ತಯಾರಾಗಿ ಬಂದನು. ನಾನು ಮತ್ತು ಸದರಿ ನಿಂಗಪ್ಪ ಇಬ್ಬರೂ ಬೆಳಗ್ಗೆ 8 ಗಂಟೆ ಸುಮಾರಿಗೆ ಬ್ಯಾಂಡ ಬಾರಿಸಲು ನಮ್ಮ ಸಾಮಾನುಗಳೊಂದಿಗೆ ಕುರುಕುಂದಾಕ್ಕೆ ಹೋದರಾಯಿತು ಎಂದು ಹೊರಟಾಗ ನಮ್ಮೂರ ದುಗರ್ಾದೇವಿ ಗುಡಿ ಹತ್ತಿರ ಸದರಿ 1) ಬಸವರಾಜ @ ಬಸಪ್ಪ ತಂದೆ ಮಲ್ಲಿಕಾಜರ್ುನ ಭಜಂತ್ರಿ, 2) ಭೀಮರಾಯ ತಂದೆ ಮಲ್ಲಿಕಾಜರ್ುನ ಭಜಂತ್ರಿ, 3) ನಾಗರಾಜ ತಂದೆ ಮಲ್ಲಿಕಾಜರ್ುನ ಭಜಂತ್ರಿ, 4) ಸಣ್ಣ ಯಲ್ಲಪ್ಪ ತಂದೆ ಬುಡ್ಡಪ್ಪ ಭಜಂತ್ರಿ ಸಾ:ಐಕೂರು, 5) ನಾಗಪ್ಪ ತಂದೆ ದೊಡ್ಡ ಯಲ್ಲಪ್ಪ ಭಜಂತ್ರಿ, 6) ನಿಂಗಪ್ಪ ತಂದೆ ಮಲ್ಲಿಕಾಜರ್ುನ ಭಜಂತ್ರಿ ಹಾಗೂ 7) ಭಾಗಮ್ಮ ಗಂಡ ಬಸವರಾಜ @ ಬಸಪ್ಪ ಭಜಂತ್ರಿ ಎಲ್ಲರೂ ಸಾ:ಕಾಡಂಗೇರಾ (ಬಿ) ಇವರೆಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಬಂದವರೆ ನನಗೆ ತಡೆದು ನಿಲ್ಲಿಸಿ, ಅವರಲ್ಲಿ ಬಸಪ್ಪ @ ಬಸವರಾಜನು ಏ ಭೋಸುಡಿ ಮಗನೆ ನನಗೆ ಬಿಟ್ಟು ಬೇರೆಯವರಿಗೆ ಬ್ಯಾಂಡ ಬಾರಿಸಲು ಕರೆದುಕೊಂಡು ಹೋಗುತ್ತಿ ಸೂಳೆ ಮಗನೆ ನಿನ್ನ ಸಒಕ್ಕು ಜಾಸ್ತಿಯಾಗಿದೆ ಎಂದು ಜಗಳ ತೆಗೆದವರೆ ಅವರಲ್ಲಿ ಬಸಪ್ಪ @ ಬಸವರಾಜ ಮತ್ತು ನಾಗಪ್ಪ ಇಬ್ಬರೂ ನನಗೆ ಹಿಡಿದುಕೊಂಡಾಗ ಭೀಮರಾಯ ತಂದೆ ಮಲ್ಲಿಕಾಜರ್ುನನು ಅಲ್ಲಿಯೇ ಬಿದ್ದ ಕಟ್ಟಿಗೆಯಿಂದ ನನ್ನ ಡುಬ್ಬಕ್ಕೆ ಮತ್ತು ಎಡಗೈ ಮೊಳಕೈಗೆ ಹೊಡೆದು ಒಳಪೆಟ್ಟು ಮಾಡಿದನು. ನಾಗರಾಜ ಮತ್ತು ಸಣ್ಣಯಲ್ಲಪ್ಪ ಇಬ್ಬರೂ ಬಂದು ನನಗೆ ನೆಲಕ್ಕೆ ಕೆಡವಿ ಬಲಗಡೆ ಕಣ್ಣಿಗೆ ಮತ್ತು ಹೊಟ್ಟೆಗೆ ಕಾಲಿನಿಂದ ಒದ್ದಿರುತ್ತಾರೆ. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮ ಕಾಕ ಭೀಮರಾಯ ತಂದೆ ಹಣಮಂತ ಭಜಂತ್ರಿ ಹಾಗೂ ನಿಂಗಪ್ಪ ತಂದೆ ಭೀಮರಾಯ ಭಜಂತ್ರಿ ಇಬ್ಬರೂ ಬಂದು ಜಗಳ ಬಿಡಿಸಿರುತ್ತಾರೆ. ಕಾರಣ ಬಸಪ್ಪ @ ಬಸವರಾಜನಿಗೆ ಬ್ಯಾಂಡ ಬಾರಿಸಲು ಯಾಕೆ ಕರೆದುಕೊಂಡು ಹೋಗುತ್ತಿಲ್ಲ ಬೋಸುಡಿ ಮಗನೆ ಎಂದು ಎಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಬಂದು ಜಗಳ ತೆಗೆದು ಅವಾಚ್ಯ ಬೈದು, ತಡೆದು ನಿಲ್ಲಿಸಿ, ಹೊಡೆಬಡೆ ಮಾಡಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಗುನ್ನೆ ನಂ. 104/2021 ಕಲಂ: 143, 147, 504, 341, 323, 324 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 117/2021 ಕಲಂ 143, 147, 148, 341, 323, 324, 504, 506 ಸಂ 149 ಐ.ಪಿ.ಸಿ : ದಿನಾಂಕ 19/08/2021 ರಂದು ಬೆಳಿಗ್ಗೆ 9-00 ಗಂಟೆಗೆ ಫಿರ್ಯಾಧಿಯು ತನ್ನ ತಾಯಿ-ತಂದೆ ಇವರೊಂದಿಗೆ ತಮ್ಮ ಹೊಲದಲ್ಲಿ ಕೆಲಸ ಮಾಡುವಾಗ ಆರೋಪಿತರೆಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು ಬಂದು ಹಳೇ ದ್ವೇಶದಿಂದ ಫಿರ್ಯಾಧಿ ಮತ್ತು ಅವನ ಮನೆಯವರ ಜೋತೆಗೆ ಜಗಳ ತೆಗೆದು ಫಿರ್ಯಾಧಿಯನ್ನು ಅವಾಚ್ಯವಾಗಿ ಬೈದು ಕೊಡಲಿಯಿಂದ, ಕಟ್ಟಿಗೆಯಿಂದ ಮತ್ತು ಕೈಯಿಂದ ಫಿರ್ಯಾಧಿಗೆ ಮತ್ತು ಅವನ ಮನೆಯವರಿಗೆ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಮಾಡಿ ಜೀವದ ಭಯ ಹಾಕಿದ್ದು ಮತ್ತು ಇಂದು ದಿನಾಂಕ 20/08/2021 ರಂದು ಫಿರ್ಯಾಧಿ ತಮ್ಮನು ಬೆಂಗಳೂರಿನಿಂದ ಬಂದು ತನ್ನ ಮನೆಯ ಕಡೆಗೆ ಹೋಗುವಾಗ ಆರೋಪಿತರೆಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾಧಿ ತಮ್ಮನನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕಲ್ಲಿನಿಂದ, ಕಟ್ಟಿಗೆಯಿಂದ ಮತ್ತು ಕೈಯಿಂದ ಫಿರ್ಯಾಧಿ ತಮ್ಮನಿಗೆ ಮತ್ತು ಅವನ ಮನೆಯವರಿಗೆ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಮಾಡಿ ಜೀವದ ಭಯ ಹಾಕಿದ್ದು ಬಗ್ಗೆ ಪ್ರಕರಣದ ದಾಖಲು ಆಗಿರುತ್ತದೆ.

 

 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 118/2021 ಕಲಂ 143, 147, 148, 323, 324, 504, 506 ಸಂ 149 ಐ.ಪಿ.ಸಿ : ದಿನಾಂಕ 19/08/2021 ರಂದು ಬೆಳಿಗ್ಗೆ 9-00 ಗಂಟೆಗೆ ಫಿರ್ಯಾಧಿಯು ತನ್ನ ತಾಯಿ-ತಂದೆ ಇವರೊಂದಿಗೆ ತಮ್ಮ ಹೊಲದಲ್ಲಿ ಕೆಲಸ ಮಾಡುವಾಗ ಆರೋಪಿತರೆಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು ಬಂದು ಹಳೇ ದ್ವೇಶದಿಂದ ಫಿರ್ಯಾಧಿ ಮತ್ತು ಅವನ ಮನೆಯವರ ಜೋತೆಗೆ ಜಗಳ ತೆಗೆದು ಫಿರ್ಯಾಧಿಯನ್ನು ಅವಾಚ್ಯವಾಗಿ ಬೈದು ಕೊಡಲಿಯಿಂದ, ಕಟ್ಟಿಗೆಯಿಂದ ಮತ್ತು ಕೈಯಿಂದ ಫಿರ್ಯಾಧಿಗೆ ಮತ್ತು ಅವನ ಮನೆಯವರಿಗೆ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಮಾಡಿ ಜೀವದ ಭಯ ಹಾಕಿದ್ದು ಮತ್ತು ಇಂದು ದಿನಾಂಕ 20/08/2021 ರಂದು ಫಿರ್ಯಾಧಿ ತಮ್ಮನು ಬೆಂಗಳೂರಿನಿಂದ ಬಂದು ತನ್ನ ಮನೆಯ ಕಡೆಗೆ ಹೋಗುವಾಗ ಆರೋಪಿತರೆಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾಧಿ ತಮ್ಮನನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕಲ್ಲಿನಿಂದ, ಕಟ್ಟಿಗೆಯಿಂದ ಮತ್ತು ಕೈಯಿಂದ ಫಿರ್ಯಾಧಿ ತಮ್ಮನಿಗೆ ಮತ್ತು ಅವನ ಮನೆಯವರಿಗೆ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಮಾಡಿ ಜೀವದ ಭಯ ಹಾಕಿದ್ದು ಬಗ್ಗೆ ಪ್ರಕರಣದ ದಾಖಲು ಆಗಿರುತ್ತದೆ.

 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 118/2021 ಕಲಂ 143, 147, 148, 323, 324, 504, 506 ಸಂ 149 ಐ.ಪಿ.ಸಿ : ದಿನಾಂಕ 19/08/2021 ರಂದು ಬೆಳಿಗ್ಗೆ 9-00 ಗಂಟೆಗೆ ಫಿರ್ಯಾಧಿಯು ತನ್ನ ಮನೆಯವರೊಂದಿಗೆ ಆರೋಪಿತನ ಹೊಲಕ್ಕೆ ಹೋಗಿ ಈ ಹೊಲದಲ್ಲಿ ನಮಗೆ ಪಾಲು ಬರುತ್ತದೆ ಸರಿಯಾಗಿ ಪಾಲು ಆಗಿರುವದಿಲ್ಲ, ಈಗ ಹೊಲ ಸಾಗುವಳಿ ಮಾಡಬೇಡಿರಿ ಅಂತಾ ಅಂದಿದಕ್ಕೆ ಆರೋಪಿತರೆಲ್ಲರೂ ಫಿರ್ಯಾಧಿಗೆ ಮತ್ತು ಅವನ ಕಾಕಾನ ಜೋತೆಗೆ ಹಳೇ ದ್ವೇಶದಿಂದ ಜಗಳ ತೆಗೆದು ಫಿರ್ಯಾಧಿಯನ್ನು ಅವಾಚ್ಯವಾಗಿ ಬೈದು ಕಲ್ಲಿನಿಂದ, ಕಟ್ಟಿಗೆಯಿಂದ ಮತ್ತು ಕೈಯಿಂದ ಫಿರ್ಯಾಧಿಗೆ ಮತ್ತು ಅವನ ಕಾಕಾನಿಗೆ ಹೊಡೆಬಡೆ ಮಾಡಿ ಗುಪ್ತಗಾಯ ಮಾಡಿ ಜೀವದ ಭಯ ಹಾಕಿದ್ದು ಮತ್ತು ಇಂದು ದಿನಾಂಕ 20/08/2021 ರಂದು ಫಿರ್ಯಾಧಿ ಮತ್ತು ಅವನ ಕಾಕಾ ಇಬ್ಬರೂ ಹಂಪಯ್ಯನ ಗುಡಿ ಹತ್ತಿರ ಇರುವಾಗ ಆರೋಪಿತರೆಲ್ಲರೂ ಕೂಡಿ ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾಧಿ ಮತ್ತು ಅವನ ಕಾಕಾನ ಜೋತೆಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕಲ್ಲಿನಿಂದ, ಕಟ್ಟಿಗೆಯಿಂದ ಮತ್ತು ಕೈಯಿಂದ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಮಾಡಿ ಜೀವದ ಭಯ ಹಾಕಿದ್ದು ಬಗ್ಗೆ ಪ್ರಕರಣದ ದಾಖಲು ಆಗಿರುತ್ತದೆ.

 

ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂಬರ 193/2021 ಕಲಂ 188 ಐ.ಪಿ.ಸಿ ಮತ್ತು ಕಲಂ 51(ಬಿ)ಖಿಜ ಆಚಿಣಜಡಿ ಒಚಿಟಿಚಿರಜಟಜಟಿಣ ಂಛಿಣ-2005 : ಇಂದು ದಿನಾಂಕ 20/08/2021 ರಂದು, ರಾತ್ರಿ 20-45 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ, ಧರ್ಮಣ್ಣ ಎ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ರವರು, ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಕೋವಿಡ್-19 ಸಾಂಕಾಮಿಕ ರೋಗ ತಡೆಗಟ್ಟುವ ಸಂಬಂಧ, ಮಾನ್ಯ ತಹಸೀಲ್ದಾರರು ಹಾಗೂ ತಾಲುಕಾ ದಂಡಾಧಿಕಾರಿಗಳು ಶಹಾಪೂರ ರವರು, ದಿನಾಂಕ 20/08/2021 ರಂದು ನಡೆಯಲಿರುವ ಮೊಹರಂ ಹಬ್ಬದ ಕೊನೆಯ ದಿನದಂದು ಕೋವಿಡ್-19 ರ ನಿಯಮಗಳು ಉಲ್ಲಂಘನೆಯಾಗದಂತೆ ಅಗತ್ಯ ಕ್ರಮ ಕೈಕೊಳ್ಳಲು ಮತ್ತು ಸರಳವಾಗಿ ಆಚರಿಸಲು ಮಾರ್ಗಸೂಚಿ ನೀಡಿ ದಿನಾಂಕ 19/08/2021 ರಂದು ಆದೇಶ ಹೊರಡಿಸಿರುತ್ತಾರೆ. ಇಂದು ದಿನಾಂಕ 20/08/2021 ರಂದು, ಮೊಹರಂ ಹಬ್ಬದ ಕೊನೆಯ ದಿನವಾದ ದಫನ್ ಕಾರ್ಯಕ್ರಮದಂದು, ನನಗೆ ಶಹಾಪೂರ ಪಟ್ಟಣದಲ್ಲಿ ಬಂದೋಬಸ್ತಿನ್ ಉಸ್ತುವಾರಿ ಅಧಿಕಾರಿಯಾಗಿ ನೇಮಿಸಿರುತ್ತಾರೆ. ಅದರಂತೆ ನಾನು ಶಹಾಪೂರ ಪಟ್ಟಣದಲ್ಲಿ ಮೊಹರಂ ದೇವರು ಕೂಡಿಸಿದ ಸ್ಥಳಗಳಿಗೆ ಭೇಟಿ ನೀಡಿ ಮೊಹರಂ ಪಂಜಾ ದೇವರ ವ್ಯವಸ್ಥಾಪಕರಿಗೆ ಮತ್ತು ಕೂಡಿದ್ದ ಜನರಿಗೆ, ಸದ್ಯ ಕೊವಿಡ್-19 ಸಾಂಕ್ರಾಮಿಕ ಕಾಯಿಲೆ ತಡೆಗಟ್ಟುವ ಸಂಬಂಧ ಮನೋರಂಜನೆ/ಸಾಂಸ್ಕೃತಿಕ/ಧಾಮರ್ಿಕ ಕಾರ್ಯಕ್ರಮ/ಜಾತ್ರೆ/ಸಂತೆಗಳಲ್ಲಿ ಜನರ ಗುಂಪುಗುಡಿಕೆಯನ್ನು ತಾಲೂಕಾ ಮಂಡಳಿ (ತಹಸೀಲ್ದಾರರು ಹಾಗೂ ತಾಲುಕಾ ದಂಡಾಧಿಕಾರಿಗಳು) ಶಹಾಪೂರ ರವರು ನಿಷೇದಿಸಿರುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಕೋವಿಡ್ 19- ಸಾಂಕ್ರಾಮಿಕ ರೋಗದ ನಿಯಮಗಳನ್ನು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವಂತೆ ಸಲಹೆ ಸೂಚನೆಗಳನ್ನು ನೀಡುತ್ತಾ ಇಂದು ಸಂಜೆ 19-45 ಗಂಟೆಗೆ ಶಹಾಪೂರ ಪಟ್ಟಣದ, ರಂಗಾರಿ ಮಸೀದ ಕಡೆಗೆ ಬಂದಾಗ, ರಂಗಾರಿ ಮಸೀದಿ ಮೋಹರಂ ಪಂಜಾ ದೇವರ ಉಸ್ತುವಾರಿ/ವ್ಯವಸ್ಥಾಪಕರು ಇವರು ದೇವರ ದಫನ್ ಮಾಡಲು ಮರೆವಣಿಗೆ ಮುಖಾಂತರ ತೆಗೆದುಕೊಂಡು ಹೋಗುವಾಗ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮತ್ತು ಮೆರವಣಿಗೆಯಲ್ಲಿ ಭಾಗವಹಿಸಿದ ಜನರಿಗೆ ಮಾಸ್ಕ ಧರಿಸುವಂತೆ ಮುಂಜಾಗ್ರತ ಮುನ್ನೇಚ್ಚರಿಕೆ ಕ್ರಮ ಕೈಗೊಳ್ಳದೆ ಅತೀವ ನಿರ್ಲಕ್ಷ್ಯತನ ವಹಿಸಿ ಕೋವಿಡ್ -19 ರೋಗ ತಡೆಗಟ್ಟಲು ಹೊರಡಿಸಿರುವ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆ. ರಂಗಾರಿ ಮಸೀದಿ ಮೊಹರಂ ಪಂಜಾ ದೇವರ ಉಸ್ತುವಾರಿ/ವ್ಯವಸ್ಥಾಪಕರ ಮುಖವನ್ನು ಲೈಟಿನ ಬೆಳಕಿನಲ್ಲಿ ನೋಡಿದ್ದು ಪುನಃ ನೋಡಿದಲ್ಲಿ ಗುರುತಿಸುತ್ತೇನೆ. ಸದರಿ ಘಟನೆಯು ಇಂದು ದಿನಾಂಕ 20/08/2021 ರಂದು ಸಂಜೆ 19-45 ಗಂಟೆಯಿಂದ 20-00 ಗಂಟೆಯ ಅವಧಿಯಲ್ಲಿ ಜರುಗಿರುತ್ತದೆ. ಆದ್ದರಿಂದ ಶಹಾಪೂರ ಪಟ್ಟಣದ ರಂಗಾರಿ ಮಸೀದಿ ಮೊಹರಂ ಪಂಜಾ ದೇವರ ಉಸ್ತುವಾರಿ/ವ್ಯವಸ್ಥಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ಸಲ್ಲಿಸಿದ ವರದಿಯ ಆಧಾರ ಮೇಲಿಂದ ಠಾಣೆ ಗುನ್ನೆ ನಂಬರ 193/2021 ಕಲಂ 188 ಐ.ಪಿ.ಸಿ ಮತ್ತು ಕಲಂ 51(ಬಿ) ಖಿಜ ಆಚಿಣಜಡಿ ಒಚಿಟಿಚಿರಜಟಜಟಿಣ ಂಛಿಣ-2005 ರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

Last Updated: 21-08-2021 10:55 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080