ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 21-08-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 125/2022 ಕಲಂ 32,34 ಕೆ,ಇ ಯಾಕ್ಟ್ : ಇಂದು ದಿನಾಂಕ: 20-08-2022 ರಂದು ಸಾಯಂಕಾಲ 06-30 ಗಂಟೆಗೆ ಶ್ರೀ ರಾಜಕುಮಾರ ಪಿ.ಎಸ್.ಐ ಸಾಹೇಬರು ಯರಗೊಳ ಗ್ರಾಮದಲ್ಲಿ ಮದ್ಯದ ಬಾಟಲಿಗಳನ್ನು ಜಪ್ತಿ ಮಾಡಿಕೊಂಡು ಮಧ್ಯ ಜಪ್ತಿಪಂಚನಾಮೆ ಮತ್ತು ವರದಿಯನ್ನು ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ & ವರದಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 125/2022 ಕಲಂ. 32, 34 ಕೆ.ಇ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ. 104/2022 ಕಲಂ: 32, 34 ಕೆ.ಇ ಎಕ್ಟ 1965 : ಇಂದು ದಿನಾಂಕ:20/08/2022 ರಂದು 6-45 ಪಿಎಮ್ ಕ್ಕೆ ಶ್ರೀ ರಾಮಣ್ಣ ಪಿ.ಎಸ್.ಐ (ತನಿಖೆ) ವಡಗೇರಾ ಪೊಲೀಸ್ ಠಾಣೆ ರವರು ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ:20/08/2022 ರಂದು ಮದ್ಯಾಹ್ನ ಸಮಯದಲ್ಲಿ ನಾನು ಮತ್ತು ತಾಯಪ್ಪ ಹೆಚ್.ಸಿ 79, ಮಲ್ಲಪ್ಪ ಹೆಚ್.ಸಿ 72, ವೇಣುಗೋಪಾಲ ಪಿಸಿ 36 ಮತ್ತು ಸಾಬರೆಡ್ಡಿ ಪಿಸಿ 290 ಎಲ್ಲರೂ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ತಡಿಬಿಡಿ ಗ್ರಾಮದ ಡಾ:ಬಾಬು ಜಗಜೀವನರಾಮ ಕಟ್ಟೆ ಹತ್ತಿರ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಬಿಯರಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ತಾಯಪ್ಪ ಹೆಚ್.ಸಿ 79 ರವರ ಮುಖಾಂತರ 3 ಪಿಎಮ್ ಸುಮಾರಿಗೆ ಇಬ್ಬರೂ ಪಂಚರನ್ನು ಠಾಣೆಗೆ ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ದಾಳಿಯ ವಿಷಯ ತಿಳಿಸಿ, ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ನಮ್ಮ ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದ್ದರಲ್ಲಿ ಕರೆದುಕೊಂಡು 3-30 ಪಿಎಮ್ ಕ್ಕೆ ಠಾಣೆಯಿಂದ ಹೊರಟು 4-15 ಪಿಎಮ್ ಕ್ಕೆ ತಡಿಬಿಡಿ ಗ್ರಾಮಕ್ಕೆ ತಲುಪಿ ತಡಿಬಿಡಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಜೀಪನ್ನು ನಿಲ್ಲಿಸಿ, ಅಲ್ಲಿಂದ ಸ್ವಲ್ಪ ದೂರ ಪಶ್ಚಿಮ ದಿಕ್ಕಿಗೆ ನಡೆದುಕೊಂಡು ಹೋಗಿ ಅಲ್ಲಿರುವ ಬಸವರಾಜ ಬಟಗೇರಿ ಈತನ ಮನೆಯನ್ನು ಮರೆಯಾಗಿ ನಿಂತು ನೋಡಲಾಗಿ ಡಾ:ಬಾಬು ಜಗಜೀವನರಾಮ ಕಟ್ಟೆ ಹತ್ತಿರ ಖಾಲಿ ಸ್ಥಳದಲ್ಲಿ ಒಬ್ಬ ವ್ಯಕ್ತಿಯು 100/- ರೂ. ಗೆ ಒಂದು ಟಿನ ಬಿಯರ ಕುಡಿಯಿರಿ ಎಂದು ಕೂಗಿ ಕರೆದು ಮದ್ಯ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 4-30 ಪಿಎಮ್ ಕ್ಕೆ ನಾವು ಅವನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿಯಬೇಕೆನ್ನುವಷ್ಟರಲ್ಲಿ ಅವನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು. ಅಲ್ಲಿಯೇ ಇದ್ದ ಪೊಲೀಸ್ ಬಾತ್ಮಿದಾರರಿಗೆ ಓಡಿ ಹೋದವನ ಹೆಸರು ವಿಳಾಸ ಕೇಳಿದಾಗ ಸಂಗಯ್ಯ ತಂದೆ ನಿಂಗಯ್ಯ ಗುತ್ತೆದಾರ, ವ:48, ಜಾ:ಇಳಿಗೇರ, ಉ:ಖಾಸಗಿ ಕೆಲಸ ಸಾ:ತಡಿಬಿಡಿ ತಾ:ವಡಗೇರಾ ಎಂದು ಹೇಳಿದರು. ಸದರಿ ವ್ಯಕ್ತಿಯು ಬಿಯರ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ ಒಂದು ರಟ್ಟಿನ ಕಾಟನ ಬಾಕ್ಸದಲ್ಲಿ 330 ಎಮ್.ಎಲ್ ದ ಕಿಂಗಫಿಶಯರ್ ಸ್ಟ್ರಾಂಗ್ ಪ್ರಿಮಿಯಮ್ ಬಿಯರಗಳು ಇದ್ದು, ಎಣಿಕೆ ಮಾಡಿ ನೋಡಲಾಗಿ ಒಟ್ಟು 28 ಟಿನ ಬಿಯರ ಡಬ್ಬಿಗಳು ಇದ್ದು, 330ಘಿ28= 9 ಲೀಟರ್ 240 ಎಮ್.ಎಲ್ ಮದ್ಯ ಆಗುತ್ತಿದ್ದು, ಎಮ್.ಆರ್.ಪಿ ಬೆಲೆ 95ಘಿ28=2660/- ರೂ. ಗಳು ಆಗುತ್ತವೆ. ಎಲ್ಲಾ ಮದ್ಯ ತುಂಬಿದ 28 ಟಿನ ಬಿಯರಗಳನ್ನು ನಮ್ಮ ಸಮಕ್ಷಮ ಅದೇ ರಟ್ಟಿನ ಡಬ್ಬಿಯಲ್ಲಿ ಹಾಕಿ ಈ ರಟ್ಟಿನ ಡಬ್ಬಿಯನ್ನು ಬಿಳಿಯ ಬಣ್ಣದ ಬಟ್ಟೆಯಲ್ಲಿ ಹಾಕಿ ಕಟ್ಟಿ ದಾರದಿಂದ ಹೊಲೆದು ಸದರಿ ರಟ್ಟಿನ ಡಬ್ಬಿಗೆ ಘಆಉ ಅಂತಾ ಅರಗಿನಿಂದ ಸೀಲ್ ಮಾಡಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆ ಚಿಟಿಯನ್ನು ಅಂಟಿಸಿ ಜಪ್ತಿಪಡಿಸಿಕೊಳ್ಳಲಾಯಿತು. 4-30 ಪಿಎಮ್ ದಿಂದ 5-30 ಪಿಎಮ್ ದ ವರೆಗೆ ಜಪ್ತಿ ಪಂಚನಾಮೆ ಜರುಗಿಸಿ, ಸದರಿ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲುನೊಂದಿಗೆ ಮರಳಿ ಠಾಣೆಗೆ ಬಂದು ಈ ವರದಿ ಸಲ್ಲಿಸುತ್ತಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 104/2022 ಕಲಂ: 32, 34 ಕೆ.ಇ ಎಕ್ಟ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಸ್ಶೆದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 99/2022 ಕಲಂ 87 ಕೆ.ಪಿ ಕಾಯ್ದೆ : ಇಂದು ದಿನಾಂಕ 20.08.2022 ರಂದು 6.00 ಪಿಎಮ್ಕ್ಕೆ ಪಿಐ ಸಾಹೇಬರು ಠಾಣೆಗೆ ಬಂದು ಕಡೇಚೂರ ಗ್ರಾಮ ಸೀಮಾಂತರದಲ್ಲಿ ರೇಲ್ವೇ ಕೋಚ ಫ್ಯಾಕ್ಟರಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಇಸ್ಪೆಟ ಜೂಜಾಟದ ಮೇಲೆ ದಾಳಿ ಮಾಡಿಕೊಂಡು ಜಪ್ತಿ ಪಂಚನಾಮೆ ಆರೋಪಿತರು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಾಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ಸಂಖ್ಯೆ 99/2022 ಕಲಂ 87 ಕೆ.ಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 145/2022 ಕಲಂ 341, 323, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ: 20/08/2022 ರಂದು ರಾತ್ರಿ 8-15 ಗಂಟೆಗೆ ಪಿರ್ಯಾದಿ ಶ್ರೀಮತಿ ಲಕ್ಷ್ಮಿ ಗಂಡ ಬಸವರಾಜ ಮಕಾಶಿ ವಯಾ: 55 ಉ: ಕೂಲಿಕೆಲಸ ಜಾತಿ: ಕಬ್ಬಲಿಗ, ಸಾ: ಡಿಗ್ಗಿ ತಾ: ಶಹಾಪೂರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ, ನನಗೆ ದೇವಿಂದ್ರಪ್ಪ ವಯಾ: 38 ವರ್ಷ, ಪರಶುರಾಮ ವಯಾ: 36, ಅಕ್ಕಮ್ಮ ವಯಾ: 34ವರ್ಷ, ಸಂಗೀತಾ ವಯಾ; 32ವರ್ಷ, ಅಯ್ಯಮ್ಮ@ ಪಾರ್ವತಿ ಹೀಗೆ ಇಬ್ಬರೂ ಗಂಡು ಮಕ್ಕಳು ಮೂರು ಜನ ಹೆಣ್ಣು ಮಕ್ಕಳು ಒಟ್ಟು 5 ಜನ ಮಕ್ಕಳಿರುತ್ತಾರೆ. ಎಲ್ಲರಿಗೂ ಮದುವೆ ಆಗಿರುತ್ತದೆ. ಹೀಗಿದ್ದು ನನ್ನ ಕೊನೆಯ ಮಗಳಾದ ಅಯ್ಯಮ್ಮ @ ಪಾರ್ವತಿ ಇವಳಿಗೆ ತುಮಕೂರ ಜಿಲ್ಲೆಯ ಕುಣಿಗಲಗೆ ಜಗದೀಶ ಎಂಬುವನ ಜೋತೆ ಸುಮಾರು 2 ತಿಂಗಳ ಹಿಂದೆ ಮದುವೆ ಮಾಡಿ ಕೊಟ್ಟಿರುತ್ತೇನೆ. ಆಶಾಡ ಮಾಸ ಇರುವುದರಿಂದ ಸುಮಾರು 1 ತಿಂಗಳ ಹಿಂದೆ ನಾನು ನಮ್ಮೂರಿಗೆ ಕರೆದುಕೊಂಡು ಬಂದಿರುತ್ತೇನೆ. ಹೀಗಿದ್ದು ಇಂದು ದಿನಾಂಕ: 20/08/2022 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಮಾಕರ್ೆಟ ಮಾಡಲು ನಾನು ಮತ್ತು ಮಗನಾದ ದೇವಿಂದ್ರಪ್ಪ ಇಬ್ಬರೂ ಕೂಡಿ ಮಾಕರ್ೆಟ ಮಾಡಲು ಶಹಾಪೂರ ಬಸವೇಶ್ವರ ವೃತ್ತದ ಹತ್ತಿರ ಬಂದಾಗ ವಡಗೇರಾ ತಾಲೂಕಿನ ಕ್ಯಾತನಾಳ ಗ್ರಾಮದ ನಮ್ಮ ಸಂಬಂದಿಕರಾದ ದಂಡಪ್ಪ ತಂದೆ ದೇವಿಂದ್ರಪ್ಪ ಗುಡ್ಡೆನವರು, ಮರೆಪ್ಪ ತಂದೆ ದಂಡಪ್ಪ, ಭೀಮಣ್ಣ ತಂದೆ ದೇವಿಂದ್ರಪ್ಪ ಗುಡ್ಡೆನವರು ಇವರು ಕೂಡಾ ಅಲ್ಲೇ ಇದ್ದರು, ಅವರ ಪೈಕಿ ದಂಡಪ್ಪ ತಂದೆ ದೇವಿಂದ್ರಪ್ಪ ಗುಡ್ಡನವರು ಇತನು ನಮ್ಮ ಹತ್ತಿರ ಬಂದವನೇ ನಾನು ನಿಮ್ಮ ಮಗಳಾದ ಅಯ್ಯಮ್ಮ @ಪಾರ್ವತಿ ಇವಳಿಗೆ ಪ್ರೀತಿ ಮಾಡುತ್ತಿದ್ದೆನೆ ಅವಳಿಗೆ ಮದುವೆ ಆಗುತ್ತೇನೆ ಅಂತಾ ಅಂದನು, ಆಗ ನಾವು ಅವಳಿಗೆ ಈಗಾಗಲೇ ಮದುವೆ ಮಾಡಿ ಕೊಟ್ಟಿರುತ್ತೇವೆ ಆ ತರಹ ಏನು ಮಾಡಬೇಡ ಅಂತಾ ಬುದ್ದಿ ಮಾತು ಹೇಳಿದೆವು, ದಂಡಪ್ಪ ತಂದೆ ದೇವಿಂದ್ರಪ್ಪ ಗುಡ್ಡೆನವರು ಈತನು ಎಲಾ ಸೂಳೆ ಮಕ್ಕಳೆ ನಿಮ್ಮದು ಸೊಕ್ಕು ಬಹಳ ಆಗಿದೆ ಅಂತಾ ಕೈಯಿಂದ ನನ್ನ ಮಗನಾದ ದೇವಿಂದ್ರಪ್ಪ ಈತನ ಕಪಾಳಕ್ಕೆ ಹೊಡೆದನು. ಯಾಕೆ ನನ್ನ ಮಗನಿಗೆ ಹೊಡೆಯುತ್ತಿ ಅಂತಾ ಕೇಳಿದ್ದಕ್ಕೆ ಅಲ್ಲೇ ಇದ್ದ ಮರೆಪ್ಪ ತಂದೆ ದಂಡಪ್ಪ ಮತ್ತು ಭೀಮಣ್ಣ ತಂದೆ ದೇವಿಂದ್ರಪ್ಪ ಗುಡ್ಡನವರು ಇವರಿಬ್ಬರು ಬಂದು ನನಗೆ ದಬ್ಬಿಸಿ ಕೊಟ್ಟು, ನನ್ನ ಮಗನಿಗೆ ಕೈಯಿಂದ ಬೆನ್ನಿಗೆ ಹೊಟ್ಟೆಗೆ ಹೊಡೆದರು. ನಂತರ ನಾನು ಮತ್ತು ಮಗ ಇಬ್ಬರು ಕೂಡಿ ಹೋಗುವಾಗ ಮತ್ತೇ ದಂಡಪ್ಪನು ತಡೆದು ನಿಲ್ಲಿಸಿ ನನ್ನ ಮಗನಿಗೆ ಎದೆಯ ಮೇಲಿನ ಅಂಗಿ ಹಿಡಿದು ಎಲೇ ಸೂಳೆ ಮಗನೆ ನಾನು ನಿನ್ನ ತಂಗಿಗೆ ಪ್ರೀತಿ ಮಾಡುತ್ತೇನೆ ನೋಡು ಏನು ಮಾಡಕೊತ್ತಿ ಮಾಡಕೋ ಅಂತಾ ಕೈಯಿಂದ ತಲೆಗೆ ಹೊಡೆದನು ಆಗ ನಾನು ನನ್ನ ಮಗನಿಗೆ ಕರೆದುಕೊಂಡು ಮನೆಗೆ ಹೋಗುವಾಗ ಅವರೆಲ್ಲರೂ ಕೂಡಿ ಸೂಳೆ ಮಕ್ಕಳೆ ನಿನಗೆ ಬೀಡುವುದಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಹೋದರು. ನಂತರ ನಮಗೇನು ಅಷ್ಟೇನು ಗಾಯ ಆಗದೇ ಇರುವುದರಿಂದ ಆಸ್ಪತ್ರೆಗೆ ತೋರಿಸಿಕೊಂಡಿರುವುದಿಲ್ಲ. ಈ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನಮಗೆ ಮೇಲ್ಕಂಡ 3 ಜನರು ನನಗೆ ತಡೆದು ನಿಲ್ಲಿಸಿ, ಕೈಯಿಂದ ಕಪಾಳಕ್ಕೆ ಬೆನ್ನಿಗೆ, ಹೊಟ್ಟೆಗೆ, ತಲೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೇದರಿಕೆ ಹಾಕಿದ್ದು, ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತಾ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 341, 323, 504, 506 ಸಂಗಡ 34 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 65/2022 ಕಲಂ 32, 34 ಕೆ.ಇ ಎಕ್ಟ್ : ಇಂದು ದಿನಾಂಕ: 20/08/2022 ರಂದು 12 ಪಿ.ಎಮ್.ಕ್ಕೆಆರೋಪಿತನು ಸರಕಾರದಿಂದಯಾವುದೇ ಪರವಾನಿಗೆಯನ್ನು ಪಡೆಯದೇ ಮದ್ರಕಿಗ್ರಾಮದಲ್ಲಿನತನ್ನ ಪಾನ್ ಶಾಪ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 12.10 ಪಿ.ಎಮ್ ಕ್ಕೆ ದಾಳಿ ಮಾಡಿದ್ದು, ದಾಳಿ ಸಮಯದಲ್ಲಿಆರೋಪಿತನು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ 90 ಎಮ್.ಎಲ್ ನ 45 ಓ.ಸಿ ವಿಸ್ಕಿ ಪೌಚಗಳು, ಅ.ಕಿ. 1580.85 ರೂ. ಕಿಮ್ಮತ್ತಿನ ಮದ್ಯವನ್ನುಜಪ್ತಿಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ. 133/2022 ಕಲಂ: 32, 34 ಕೆ. ಇ ಯಾಕ್ಟ : ಇಂದು ದಿನಾಂಕ 20/08/2022 ರಂದು 3.00 ಪಿಎಮ್ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಮುದ್ದೆಮಾಲು, ಜಪ್ತಿ ಪಂಚನಾಮೆ ಸಮೇತ ಒಂದು ವರದಿ ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ಹಣಮಂತ ಪಿಎಸ್ಐ(ಕಾ.ಸು) ಕೆಂಭಾವಿ ಪೊಲೀಸ್ ಠಾಣೆ ಇದ್ದು ವರದಿ ನೀಡುವುದೇನೆಂದರೆ, ಇಂದು ದಿನಾಂಕ 20/08/2022 ರಂದು 12.15 ಪಿ.ಎಮ್ಕ್ಕೆ ಪೊಲೀಸ್ ಠಾಣೆಯಲ್ಲಿದ್ದಾಗ ದಂಡಸೋಲಾಪೂರ ಗ್ರಾಮದ ಹೊರವಲಯದಲ್ಲಿರುವ ಪಂಚಮುಖಿ ದಾಬಾದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಲೈಸನ್ಸ ಇಲ್ಲದೆ ಅನಧಿಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆ ಅಂತ ಭಾತ್ಮಿ ಬಂದ ಮೇರೆಗೆ ಸಿಬ್ಬಂದಿಯವರಾದ 1) ಶಿವರಾಜ ಹೆಚ್.ಸಿ 85 2) ಆನಂದ ಪಿಸಿ 43 ಮತ್ತು 3) ಕಾಶಿನಾಥ ಪಿಸಿ 293 ರವರಿಗೆ ಸದರಿ ಭಾತ್ಮಿ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ವ|| 40 ಜಾ|| ಪ.ಜಾತಿ ಉ|| ಕೂಲಿ ಸಾ|| ಕೆಂಭಾವಿ 2) ಮಕ್ತುಮಸಾಬ ತಂದೆ ಮಾಸುಮಸಾಬ ವಡಕೇರಿ ವ|| 38 ಜಾ|| ಮುಸ್ಲಿಂ ಉ|| ಕೂಲಿ ಸಾ|| ಕೆಂಭಾವಿ ತಾ|| ಸುರಪೂರ ಇವರಿಗೆ ಠಾಣೆಗೆ ಕರೆಯಿಸಿ ಅವರಿಗೂ ಬಾತ್ಮಿ ವಿಷಯ ತಿಳಿಸಿದೆನು. ನಂತರ ನಾನು, ಸಿಬ್ಬಂದಿ ಹಾಗೂ ಪಂಚರು ಕೂಡಿಕೊಂಡು ಠಾಣೆಯ ಜೀಪ್ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 12.25 ಪಿ.ಎಮ್ಕ್ಕೆ ಹೊರಟು 12.55 ಪಿ.ಎಮ್ಕ್ಕೆ ದಂಡಸೋಲಾಪೂರ ಗ್ರಾಮದ ಹೊರವಲಯದಲ್ಲಿರುವ ಪಂಚಮುಖಿ ದಾಬಾದ ಹತ್ತಿರ ಹೋಗಿ ಮರೆಯಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಪಂಚಮುಖಿ ದಾಬಾದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸರಾಯಿ ಮಾರಾಟ ಮಾಡುವುದನ್ನು ನೋಡಿ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 1.00 ಪಿಎಮ್ಕ್ಕೆ ದಾಳಿ ಮಾಡಲಾಗಿ ಸರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ನಮ್ಮನ್ನು ನೋಡಿ ಓಡಿ ಹೋಗಿದ್ದು, ನಂತರ ಓಡಿ ಹೋದವನ ಹೆಸರು ವಿಳಾಸ ವಿಚಾರಿಸಿ ತಿಳಿದುಕೊಳ್ಳಲಾಗಿ ಗೋಪಾಲ ತಂದೆ ಮಲ್ಲಿಕಾಜರ್ುನ ಬಿರಾದಾರ ವ|| 26ವರ್ಷ ಜಾ|| ಕುರುಬರ ಉ|| ದಾಬಾದಲ್ಲಿ ಕೆಲಸ ಸಾ|| ಚಾಮನಾಳ ತಾ|| ಶಹಾಪೂರ ಅಂತ ತಿಳಿಸಿದ್ದು ಇರುತ್ತದೆ. ನಂತರ ಸದರಿ ಸ್ಥಳದಲ್ಲಿದ್ದ ಸರಾಯಿಯನ್ನು ಪರಿಶೀಲಿಸಿ ನೋಡಲಾಗಿ 1) 180 ಎಮ್ಎಲ್ನ 12 ಓರಿಜಿನಲ್ ಚ್ವಾಯಿಸ್ ಪೌಚಗಳು ಇದ್ದು ಒಂದು ಪೌಚಿನ ಬೆಲೆ 60.64 ರೂ. ಇದ್ದು ಒಟ್ಟು ಪೌಚಗಳ ಕಿಮ್ಮತ್ತು 727.68/- ರೂ ಆಗುತ್ತಿದ್ದು, 2) 650 ಎಂಎಲ್ ನ 5 ಕಿಂಗಫಿಶರ್ ಸ್ಟ್ರಾಂಗ್ ಬೀಯರ್ ಬಾಟಲಿಗಳು ಇದ್ದು, ಒಂದು ಬಿಯರ್ನ ಬೆಲೆ 160 ರೂಪಾಯಿಯಂತೆ ಒಟ್ಟು 5 ಬಿಯರ್ಗಳ ಬೆಲೆ 800/ ರೂ ಆಗುತ್ತಿದ್ದು, 3) 330 ಎಮ್ಎಲ್ನ ಕಿಂಗಫಿಶರ್ ಸ್ಟ್ರಾಂಗ್ ಬೀಯರ್ ಟಿನಗಳು ಇದ್ದು, ಒಂದು ಟಿನ್ನ ಬೆಲೆ 95/- ರೂಪಾಯಿಯಂತೆ ಒಟ್ಟು 4 ಟಿನಗಳ ಕಿಮ್ಮತ್ತು 380/- ರೂ ಆಗುತ್ತಿದ್ದು, ಹೀಗೆ ಒಟ್ಟು 1907.68/- ರೂಪಾಯಿ ಬೆಲೆಬಾಳುವ 6 ಲೀಟರ್ 710 ಎಮ್ ಎಲ್ ಸರಾಯಿಯನ್ನು ಇಂದು ದಿನಾಂಕ 20/08/2022 ರಂದು 1.00 ಪಿಎಮ್ದಿಂದ 2.00 ಪಿಎಮ್ದವರೆಗೆ ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಸದರಿ ಸರಾಯಿಯಲ್ಲಿ ಪ್ರತಿಯೊಂದು ನಮೂನೆಯಲ್ಲಿನ ಒಂದೊಂದು ಸರಾಯಿ ಪೌಚನ್ನು ಹಾಗೂ ಬಾಟಲ್ನ್ನು ರಾಸಾಯನಿಕ ತಜ್ಞರ ಪರೀಕ್ಷೆಗೆ ಕಳುಹಿಸುವ ಕುರಿತು ಪಂಚರ ಸಮಕ್ಷಮದಲ್ಲಿ ಪ್ರತೇಕವಾಗಿ ಬಿಳಿ ಬಟ್ಟೆಯಲ್ಲಿ ಹೊಲೆದು ಅದರ ಮೇಲೆ ಇಂಗ್ಲೀಷ ಅಕ್ಷರದ ಏ ಅಂತ ಶೀಲ ಮಾಡಿ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಈ ಮೇಲೆ ನಮೂದಿಸಿದ ಆರೋಪಿತನು ಸರಾಯಿ ಮಾರಾಟ ಮಾಡಲು ಯಾವುದೇ ಪರವಾನಿಗೆ ಪತ್ರ (ಲೈಸನ್ಸ) ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಸರಾಯಿ ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿದ್ದು, ದಾಳಿ ಮಾಡಿದಾಗ ಆರೋಪಿತನು ಓಡಿ ಹೋಗಿದ್ದು ಸ್ಥಳದಲ್ಲಿ ಸಿಕ್ಕ ಮುದ್ದೆಮಾಲು ಸಮೇತ 3.00 ಪಿ.ಎಂಕ್ಕೆ ಠಾಣೆಗೆ ಬಂದಿದ್ದು, ಕಾರಣ ಸದರಿ ಆರೋಪಿ ಗೋಪಾಲ ಬಿರಾದಾರ ಈತನ ವಿರುದ್ದ ಮುಂದಿನ ಕ್ರಮ ಕೈಗೊಳ್ಳಬೇಕು ಅಂತ ಸೂಚಿಸಿದ ಮೇರೆಗೆ ಠಾಣೆ ಗುನ್ನೆ ನಂ 133/2022 ಕಲಂ 32, 34 ಕೆ.ಇ ಯಾಕ್ಟ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ. 31/2022 ಕಲಂ: 15(ಎ), 32(3) ಕೆ.ಇ ಆಕ್ಟ್ : ಇಂದು ದಿನಾಂಕ: 20/08/2022 ರಂದು 10:40 ಎ.ಎಂ ಕ್ಕೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜಪ್ತಿ ಪಂಚನಾಮೆ ಹಾಗೂ ಜ್ಞಾಪನ ಪತ್ರದ ಸಾರಾಂಶವೆನೆಂದರೆ ಇಂದು ದಿನಾಂಕ: 20/08/2022 ರಂದು 8:30 ಎ.ಎಂ.ಕ್ಕೆ ನಾನು ಠಾಣೆಯಲ್ಲಿ ಇದ್ದಾಗ ನಾರಾಯಣಪೂರ ಗ್ರಾಮದ ಸುಂದರ ಕಿರಾಣಿ ಅಂಗಡಿಯ ಹಿಂದೆ ಇರುವ ಕೂಲ್ಡಡ್ರಿಂಕ್ಸ ಅಂಗಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾಜಾಗೆಯಲ್ಲಿ ಸಾರ್ವಜನಿಕರಿಗೆ ಸಾರಾಯಿ ಸೇವನೆ ಮಾಡಲು ಅಂಗಡಿಯವನು ಅನುಕೂಲ ಮಾಡಿಕೊಟ್ಟಿರುತ್ತಾನೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ನಾನು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಕುರಿತು 9:10 ಎ.ಎಂ ಕ್ಕೆ ಹೊರಟೇವು ನಾವುಗಳು 9:20 ಎ.ಎಂ ಕ್ಕೆ ಬಾತ್ಮಿ ಬಂದ ಸ್ಥಳದ ಸ್ವಲ್ಪ ದೂರದಲ್ಲಿ ನಮ್ಮ ವಾಹನವನ್ನು ನಿಲ್ಲಿಸಿ ನಾವೆಲ್ಲರೂ ನಡೆಯುತ್ತಾ ಹೋಗಿ ಸುಂದರ ಕಿರಾಣಿ ಅಂಗಡಿಯ ಮರೆಯಲ್ಲಿ ನಿಂತು ನೋಡಲಾಗಿ ಕಿರಾಣಿ ಅಂಗಡಿಯ ಹಿಂದೆ ಇರುವ ಕೂಲ್ಡಡ್ರಿಂಕ್ಸ ಅಂಗಡಿಯವನು ತನ್ನ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯವನ್ನು ಕುಡಿಯಲು ಅನುಕೂಲ ಮಾಡಿಕೊಟಿದ್ದು ಮೂರು ನಾಲ್ಕು ಜನರು ಸಾರಾಯಿ ಕುಡಿಯುತ್ತಾ ಕುಳಿತುಕೊಂಡಿದ್ದರು, ಅದನ್ನು ನಾವು ನೋಡಿ ಖಚಿತಪಡಿಸಿಕೊಂಡೆವು ನಂತರ ಪಂಚರ ಸಮಕ್ಷಮದಲ್ಲಿ ನಮ್ಮ ಸಿಬ್ಬಂದಿಯವರೊಂದಿಗೆ 9:30 ಎ.ಎಂಕ್ಕೆ ದಾಳಿ ಮಾಡಿದಾಗ ಸರಾಯಿ ಕುಡಿಯುತ್ತಾ ಕುಳಿತವರು ಓಡಿ ಹೋದರು. ಸರಾಯಿ ಕುಡಿಯಲು ಅನುಕೂಲ ಮಾಡಿ ಕೊಟ್ಟ ವ್ಯಕಿಗೆ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಅಮರೇಶ ತಂದೆ ಶಂಕ್ರಪ್ಪ ಅಂಬಿಗೇರ ವ:19 ವರ್ಷ ಉ:ಕೂಲಿ ಕೆಲಸ ಜಾ:ಹಿಂದು ಅಂಬಿಗೇರ ಸಾ:ಆಯನೂರ ತಾ:ಸಿಂದನೂರ ಜಿ:ರಾಯಚೂರ ಅಂತಾ ತಿಳಿಸಿದನು, ನಂತರ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡವನಿಗೆ ಕೂಲ್ಡಡ್ರಿಂಕ್ಸ ಅಂಗಡಿಯ ಮುಂದೆ ಇರುವ ಸಾರ್ವಜನಿಕ ಜಾಗದಲ್ಲಿ ಮದ್ಯ ಕುಡಿಯಲು ಅನುಕೂಲ ಮಾಡಿ ಕೊಟ್ಟಿದ್ದರ ಬಗ್ಗೆ ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಸದರಿಯವನು ಯಾವುದೇ ದಾಖಲಾತಿಗಳು ಹೊಂದಿರುವುದಿಲ್ಲ ಅಂತ ತಿಳಿಸಿದನು. ನಂತರ ಸ್ಥಳ ಪರಿಶೀಲನೆ ಮಾಡಿದಾಗ ಸ್ಥಳದಲ್ಲಿ ಸಾರಾಯಿ ಇದ್ದ 180 ಎಂ.ಎಲ್.ದ 4 ಒಲ್ಡ ಟವರಿನ್ ವಿಸ್ಕಿಯ ಟೆಟ್ರಾಪ್ಯಾಕಗಳು ಇದ್ದು, ಒಂದು ಒಲ್ಡ ಟವರಿನ್ ವಿಸ್ಕಿಯ ಟೆಟ್ರಾಪ್ಯಾಕ ಬೆಲೆ 86.75/-ರೂ ಇದ್ದು ನಾಲ್ಕು ಒಲ್ಡ ಟವರಿನ್ ವಿಸ್ಕಿಯ ಟೆಟ್ರಾಪ್ಯಾಕಗಳ ಬೆಲೆ 347/- ರೂ ಇದ್ದು ಹಾಗೂ ಎರಡು ಒಲ್ಡ ಟವರಿನ್ ವಿಸ್ಕಿಯ ಟೆಟ್ರಾಪ್ಯಾಕಗಳು ಖಾಲಿ ಇದ್ದವು ಅಕಿ 00:00 ಹಾಗೂ ಎರಡು ಪ್ಲಾಸ್ಟಿಕ್ ಗ್ಲಾಸಗಳು ಅಕಿ 00:00 ಇದ್ದವು. ಸದರಿ ವಸ್ತುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಜಪ್ತುಪಡಿಸಿಕೊಂಡು. ನಂತರ ಸಾರಾಯಿ ಇದ್ದ 180 ಎಂ.ಎಲ್.ದ 4 ಒಲ್ಡ ಟವರಿನ್ ವಿಸ್ಕಿಯ ಟೆಟ್ರಾಪ್ಯಾಕಗಳನ್ನು ರಾಸಾಯನಿಕ ತಜ್ಞರ ಪರಿಕ್ಷೆಗೆ ಒಳಪಡಿಸುವ ಕುರಿತು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ಅರಗಿನಿಂದ ಎನ್ ಎಂಬ ಅಕ್ಷರದ ಶೀಲ್ನಿಂದ ಶೀಲ್ಮಾಡಿ ಪಂಚರು ಸಹಿ ಮಾಡಿದ ಚೀಟಿಗಳನ್ನು ಅಂಟಿಸಿ ವಶಕ್ಕೆ ತಗೆದುಕೊಂಡೆನು. ನಂತರ ಎರಡು ಖಾಲಿ ಇದ್ದ ಒಲ್ಡ ಟವೆರಿನ್ ವಿಸ್ಕಿಯ ಟೆಟ್ರಾಪ್ಯಾಕಗಳನ್ನು ಹಾಗೂ ಎರಡು ಪ್ಲಾಸ್ಟಿಕ ಗ್ಲಾಸಗಳನ್ನು ಒಂದು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲೆದು ಪಂಚರ ಸಹಿ ಮಾಡಿದ ಚೀಟಗಳನ್ನು ಅಂಟಿಸಿ ವಶಕ್ಕೆ ಪಡೆದುಕೊಂಡು. ಗುನ್ನೆ ಸ್ಥಳದ ಚೆಕ್ ಬಂದಿಯನ್ನು ಪರಿಶೀಲಿಸಿ ನೋಡಲಾಗಿ ಪೂರ್ವಕ್ಕೆ ನಾರಾಯಣಪೂರ ಗ್ರಾಮದೊಳಗೆ ಹೋಗುವ ಕಚ್ಚಾರಸ್ತೆ ಇದ್ದು ಪಶ್ವಿಮಕ್ಕೆ ಸುಂದರ ಕಿರಾಣಿ ಅಂಗಡಿಯವರಿಗೆ ಸಂಬಂದ ಪಟ್ಟ ಖಾಲಿ ಕಾಂಪಲೆಕ್ಸ ಇರುತ್ತದೆ. ಉತ್ತರಕ್ಕೆ ಗುರು ಪೊಟೊಸ್ಟುಡಿಯೋದ ಬೆನ್ನುಗೋಡೆ ದಕ್ಷಿಣಕ್ಕೆ ನಾರಾಯಣಪೂರದೊಳಗೆ ಹೋಗುವ ಕಚ್ಚಾರಸ್ತೆ ಇರುತ್ತದೆ ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ: 20/08/2022 ರಂದು 9:30 ಎ.ಎಮ್. ದಿಂದ 10:30 ಎ.ಎಮ್ ವರೆಗೆ ಸ್ಥಳದಲ್ಲೇ ಸಿಬ್ಬಂದಿಯಾದ ರಮೇಶ ಪಿಸಿ-287 ಇವರಿಂದ ಜಪ್ತಿ ಪಂಚನಾಮೆಯನ್ನು ಲ್ಯಾಪ್ಟಾಪ್ನಲ್ಲಿ ಹೇಳಿ ಟೈಪ ಮಾಡಿಸಿದ್ದು ಇರುತ್ತದೆ. ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಗೂ ಒಬ್ಬ ಆರೋಪಿತನೊಂದಿಗೆ ಮರಳಿ 10:40 ಎ.ಎಂಕ್ಕೆ ಠಾಣೆಗೆ ಬಂದು ಜ್ಞಾಪನ ಪತ್ರ ಹಾಜರು ಪಡಿಸಿದ್ದು ಈ ಬಗ್ಗೆ ಆರೋಪಿತನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಈ ಮೂಲಕ ಸೂಚಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 31/2022 ಕಲಂ 15(ಎ), 32(3) ಕೆ.ಇ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 59/2022 ಕಲಂ: 498(ಎ), 323, 504, 506 ಸಂಗಡ 149 ಐಪಿಸಿ ಮತ್ತು 3&4 ಡಿಪಿ ಯಾಕ್ಟ : ಇಂದು ದಿನಾಂಕ: 20/09/2022 ರಂದು 08.30 ಪಿ.ಎಮ್ ಕ್ಕೆ ಫಿಯರ್ಾದಿದಾರರು ಠಾಣೆಗೆ ಹಾಜರಾಗಿ ಒಂದು ಫಿಯರ್ಾದಿ ಅಜರ್ಿಯನ್ನು ನೀಡಿದ್ದು ಸದರಿ ಅಜರ್ಿ ಸಾರಾಂಶವೇನಂದರೆ, ನಮ್ಮ ತಂದೆ-ತಾಯಿಗೆ ನಾವು ಇಬ್ಬರು ಹೆಣ್ಣು ಮಕ್ಕಳು, ಒಬ್ಬನು ಗಂಡು ಮಗ ಇದ್ದು, ನನಗೆ ಒಂದು ವರ್ಷ 3 ತಿಂಗಳ ಹಿಂದೆ ಗೋಗಿ ಪೇಠ ಗ್ರಾಮದ ಗೋಪಿಚಂದ ತಂದೆ ಚಂದಪ್ಪ ಶಿರವಾಳಕರ್ ಅವರೊಂದಿಗೆ ನನ್ನ ತಂದೆ- ತಾಯಿಯವರು ಮದುವೆ ಮಾಡಿಕೊಟ್ಟಿರುತ್ತಾರೆ. ಗೋಪಿಚಂದನು ನನ್ನನ್ನು ಮದುವೆ ಮಾಡಿಕೊಳ್ಳುವ ಕಾಲಕ್ಕೆ ಮಾತುಕತೆ ಸಂದರ್ಭದಲ್ಲಿ ಗೋಪಿಚಂದ ಅವರ ತಾಯಿ ದೇವಕ್ಕೆಮ್ಮ, ತಂದೆ ಚಂದಪ್ಪ, ಅಣ್ಣ ಲಕ್ಷ್ಮೀಕಾಂತ ಹಾಗೂ ಗೋಪಿಚಂದನ ಅಕ್ಕ ಭಾಗ್ಯಶ್ರೀ ರವರುಗಳು ವರದಕ್ಷಿಣೆಯಾಗಿ ನಮಗೆ 5 ತೊಲಿ ಬಂಗಾರ ಮತ್ತು 02 ಲಕ್ಷ ರೂಪಾಯಿ ಹಣ ಕೇಳಿದರು. ನಾವು ಬಡವರಾಗಿದ್ದು ಅಷ್ಟು ವರದಕ್ಷಣೆ ನೀಡಲು ಆಗುವುದಿಲ್ಲ ಸ್ವಲ್ಪ ಕಡಿಮೆ ಮಾಡಿ ಎಂದು ನಮ್ಮ ಸಂಬಂಧಿಕರ ಮತ್ತು ಹಿರಿಯರ ಸಮಕ್ಷಮದಲ್ಲಿ ಚಚರ್ಿಸಿ ಅವರು ಕೇಳಿದಂತೆ ನಮ್ಮಿಂದ 03 ತೊಲಿ ಬಂಗಾರ, 01 ಲಕ್ಷ ರೂಪಾಯಿ ನಗದು ಹಣವನ್ನು ನನ್ನ ತಂದೆಯಾದ ಗಿರಿಮಲ್ಲಪ್ಪ, ಕಾಕಾ ಚಂದಪ್ಪ, ತಾಯಿಯಾದ ಭಾರತಿಬಾಯಿ, ನನ್ನ ಅಣ್ಣ ಮಲ್ಲಿಕಾಜರ್ುನ, ನಮ್ಮ ಊರಿನವರಾದ ಯಂಕಪ್ಪ ದೇವರಮನಿ, ಮರಿಲಿಂಗಪ್ಪ ದಿಗ್ಗಿ ಹಾಗೂ ನಮ್ಮ ಕುಟುಂಬಕ್ಕೆ ಆತ್ಮೀಯರಾದ ಶಾಂತಪ್ಪ ಸಾಲಿಮನಿ ಹಾರಣಗೇರಾ ಹಾಗೂ ಶಿವಪ್ಪಗೌಡ ಅರಳಳ್ಳಿ ರವರ ಸಮಕ್ಷಮದಲ್ಲಿ ನನ್ನ ತಂದೆ-ತಾಯಿಯವರಿಂದ ಪಡೆದುಕೊಂಡಿರುತ್ತಾರೆ. ನನ್ನ ಗಂಡ ಹಾಗೂ ಆತನ ಮನೆಯವರು ನಮ್ಮೂರಿನವರ ಸಮಕ್ಷಮದಲ್ಲಿ ಹಾಗೂ ಸಂಬಂಧಿಕರುಗಳು, ಗುರು ಹಿರಿಯರ ಸಮಕ್ಷಮದಲ್ಲಿ ನನ್ನ ಗಂಡನಾದ ಗೋಪಿಚಂದ ಈತನು ಗೋಗಿ ಪೇಠ ಗ್ರಾಮದಲ್ಲಿರುವ ತನ್ನ ಮನೆಯ ಮುಂದೆ ದಿನಾಂಕ:21/05/2021 ರಂದು ನಮ್ಮ ಸಮಾಜದ ಸಂಪ್ರದಾಯದಂತೆ ನನ್ನನ್ನು ಮದುವೆ ಮಾಡಿಕೊಂಡಿರುತ್ತಾರೆ. ಹೀಗಿದ್ದು ಮದುವೆಯಾದ 2 ತಿಂಗಳುಗಳ ಕಾಲ ನನ್ನ ಗಂಡ ಗೋಪಿಚಂದ, ಅತ್ತೆ ದೇವಕ್ಕೆಮ್ಮ, ಮಾವ ಚಂದಪ್ಪ, ನಾದನಿ ಭಾಗ್ಯಶ್ರೀ ಹಾಗೂ ಭಾವನಾದ ಲಕ್ಷ್ಮೀಕಾಂತ ಇವರು ನನ್ನೊಂದಿಗೆ ಸ್ವಲ್ಪ ದಿನ ಸರಿಯಾಗಿದ್ದು ನಂತರದ ದಿನಗಳಲ್ಲಿ ಇವರುಗಳು ನನ್ನ ಗಂಡ ಗೋಪಿಚಂದ ಈತನಿಗೆ ಬೇರೆ ಕಡೆ ಮದುವೆ ಮಾಡಿದ್ದರೆ ನಮಗೆ ಇನ್ನೂ ಹೆಚ್ಚು ವರದಕ್ಷಣೆ ಬರುತ್ತಿತ್ತು, ಈ ಮೂದೇವಿಗೆ ಮದುವೆ ಮಾಡಿಕೊಂಡಿದ್ದಕ್ಕೆ ನಮಗೆ ಕಾಡಾಟ ಹತ್ತಿದೆ ಅಂತ ಬೈಯ್ದು ನನ್ನನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದರು. ನನ್ನನ್ನು ಯಾಕೆ ಬೈಯುತ್ತಿರಿ ಅಂತಾ ನಾನು ಕೇಳಿದಾಗ ನೀನು ನಮ್ಮ ಮನೆಯಲ್ಲಿ ಇರಬೇಕಾದರೆ, ಇನ್ನು 02 ತೊಲಿ ಬಂಗಾರ 01 ಲಕ್ಷ ರೂಪಾಯಿ ತರಬೇಕು ಅಂತಿದ್ದರು. ಹಾಗೂ ನನ್ನ ಗಂಡನ ಮನೆಯವರು ನಿನಗೆ ಅಡುಗೆ ಮಾಡಲು ಬರುವದಿಲ್ಲ, ನೀನು ನೋಡಲು ಸರಿಯಾಗಿಲ್ಲ, ಮನೆ ಕೆಲಸ ಮಾಡಲು ಬರುವದಿಲ್ಲ ರಂಡೆ ಅಂತಾ ನನಗೆ ಅವಾಚ್ಯವಾಗಿ ಬೈಯ್ದು ನನಗೆ ಕೈಯಿಂದ ಹೊಡೆ-ಬಡೆ ಮಾಡಿ ನಾವು ಕೇಳಿದಷ್ಟು ಹೆಚ್ಚಿನ ವರದಕ್ಷಿಣೆ ಹಣ ಮತ್ತು ಬಂಗಾರ ತರುವವರೆಗೆ ನಮ್ಮ ಮನೆಗೆ ಬರಬೇಡ ಎಂದು ನನ್ನನ್ನು ನನ್ನ ತವರು ಮನೆ ತಡಬಿಡಿ ಗ್ರಾಮಕ್ಕೆ ಕಳುಹಿಸಿದರು. ನಾನು ನನ್ನ ತವರು ಮನೆಗೆ ಹೋಗಿ ಈ ವಿಷಯವನ್ನು ನನ್ನ ತಂದೆ- ತಾಯಿಗೆ ಹಾಗೂ ಹಿರಿಯರಿಗೆ ಹೇಳಿದೆ. ಗಂಡನ ಮನೆಯವರಿಗೆ ನಾವು ತಿಳುವಳಿಕೆ ಹೇಳುತ್ತೇವೆ ನೀನು ಹೋಗಿ ಗಂಡನ ಮನೆಯಲ್ಲಿ ತಾಳಿಕೊಂಡು ಹೋಗು ಅಂತಾ ನಮ್ಮ ತಂದೆ-ತಾಯಿಯವರು ಮತ್ತು ಹಿರಿಯರು ನನಗೆ ಹೇಳಿದ್ದರಿಂದ ಸ್ವಲ್ಪ ದಿನ ತವರ ಮನೆಯಲ್ಲಿ ಇದ್ದು ನಂತರ ಗಂಡನ ಮನೆಗೆ ಬಂದೆನು. ನಂತರ ಇದೇ ರೀತಿ ನನ್ನ ಗಂಡ ಮತ್ತು ಆತನ ಮನೆಯವರು ನನಗೆ ವರದಕ್ಷಣೆ ತರಲು ಹಿಂಸೆ ನೀಡುತ್ತಿದ್ದುದರಿಂದ ಒಂದೆರಡು ಸಲ ನನ್ನ ತಂದೆ, ತಾಯಿ, ಕಾಕಾ, ಅಣ್ಣ ಹಾಗೂ ನಮ್ಮ ಊರಿನವರಾದ ಯಂಕಪ್ಪ ದೇವರಮನಿ, ಮರಿಲಿಂಗಪ್ಪ ದಿಗ್ಗಿ ಹಾಗೂ ಹಿರಿಯರಾದ ಶಾಂತಪ್ಪ ಸಾಲಿಮನಿ ಹಾರಣಗೇರಾ ಹಾಗೂ ಶಿವಪ್ಪಗೌಡ ಅರಳಳ್ಳಿ ರವರುಗಳು ನನ್ನ ಗಂಡನ ಮನೆಗೆ ಬಂದು ನಾವು ಬಡವರಿರುವ ಬಗ್ಗೆ ತಿಳಿಸಿ ಹೆಚ್ಚಿನ ವರದಕ್ಷಣೆ ಕೇಳಿ ಹಿಂಸಿಸಬೇಡಿ, ನಿಮ್ಮ ಸೊಸೆಯನ್ನು ಚನ್ನಾಗಿ ನೋಡಿಕೊಳ್ಳಿ ಎಂದು ನನ್ನ ಗಂಡ ಮತ್ತು ಅವರ ಮನೆಯವರಿಗೆ ಬುದ್ದಿ ಹೇಳಿ ಹೋಗಿದ್ದರು. ಇದನ್ನೇ ದ್ವೇಷವಾಗಿಟ್ಟುಕೊಂಡು ನನ್ನ ಗಂಡ ಗೋಪಿಚಂದ ಈತನು ತನ್ನ ತಂದೆ-ತಾಯಿ, ಅಣ್ಣ ಹಾಗೂ ಅಕ್ಕ ಭಾಗ್ಯಶ್ರೀರವರ ಮಾತು ಕೇಳಿ ನಾನು ಇನ್ನೂ ದೊಡ್ಡ ವ್ಯಾಪಾರ ಮಾಡಬೇಕಾಗಿದೆ, ನೀವು ವರದಕ್ಷಣೆ ಹಣ ಮತ್ತು ಬಂಗಾರ ಕೊಡಲೇಬೇಕು, ಇಲ್ಲದಿದ್ದರೆ ನೀನು ನಮ್ಮ ಮನೆಯಲ್ಲಿ ಇರಬ್ಯಾಡ ಅಂತಾ ನನ್ನ ಗಂಡ ಹಾಗು ಗಂಡನ ಮನೆಯವರು ನನಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳವನ್ನು ನೀಡಿ ನನಗೆ ಹೊಡೆ ಬಡೆ ಮಾಡುತ್ತಿದ್ದರು. ಅಷ್ಟರಲ್ಲಿ ನಾನು ಗಭರ್ಿಣಿಯಾಗಿದ್ದು, ನನ್ನ ಹೊಟ್ಟೆಯಲ್ಲಿ 2 ತಿಂಗಳ ಮಗು ಬೆಳೆಯುತ್ತಿದೆ ಹೀಗೆ ನೀವು ಹಿಂಸಿಸಬೇಡಿ ಎಂದು ನಾನು ಮತ್ತು ನನ್ನ ತವರು ಮನೆಯವರು ಎಷ್ಟೆ ಕೇಳಿಕೊಂಡರು ಕೇಳುತ್ತಿರಲಿಲ್ಲ. ನನ್ನ ನಾದಿನಿ ಭಾಗ್ಯಶ್ರೀ ಕಲಬುರಗಿಯಿಂದ ಮತ್ತು ನನ್ನ ಭಾವ ಲಕ್ಷ್ಮೀಕಾಂತ ರವರು ಬೆಂಗಳೂರಿನಿಂದ ಆಗಾಗ್ಗೆ ಗೋಗಿಗೆ ಬಂದು ಈ ರಂಡಿ ತನ್ನ ತವರು ಮನೆಯಿಂದ ವರದಕ್ಷಣೆ ತರದೇ ಇದ್ದರೆ ಈ ದರಿದ್ರ ಮುಂಡೆಯನ್ನು ಮನೆ ಬಿಟ್ಟು ಓಡಿಸಬೇಕು ಎಂದು ನನ್ನನ್ನು ಅವಾಚ್ಯವಾಗಿ ಬೈಯ್ಯುತ್ತಿದ್ದರು. ನಾನು ಎಷ್ಟೆ ಅತ್ತು ಗೋಗರೆೆದರೂ ಒಂದು ದಿನ ನನ್ನ ಗಂಡ ಗೋಪಿಚಂದ, ಮಾವ ಚಂದಪ್ಪ, ಅತ್ತೆ ದೇವಕ್ಕೆಮ್ಮ ಭಾವ ಲಕ್ಷ್ಮೀಕಾಂತ ಹಾಗೂ ನನ್ನ ನಾದಿನಿ ಭಾಗ್ಯಶ್ರೀ ಎಲ್ಲರೂ ಸೇರಿಕೊಂಡು ನನಗೆ ಹೊಡೆ ಬಡೆ ಮಾಡಿ ನನಗೆ ತಿಳಿಯದ 02 ಮಾತ್ರೆಗಳನ್ನು ಒತ್ತಾಯ ಪೂರ್ವಕವಾಗಿ ನನಗೆ ನುಂಗಿಸಿರುತ್ತಾರೆ. ಸ್ವಲ್ಪ ಸಮಯದ ನಂತರ ನನಗೆ ಹೊಟ್ಟೆ ನೋವು ಪ್ರಾರಂಭವಾಗಿ ಒದ್ದಾಡುತ್ತಿರುವಾಗ ಉಪಚಾರಕ್ಕಾಗಿ ಕಲಬುರಗಿಯ ಗಣೇಶ ನಸರ್ಿಂಗ್ ಹೋಂಗೆ ಸೇರಿಕೆಯಾಗಿದ್ದು ದಿನಾಂಕ: 23/08/2021 ರಂದು ನನಗೆ ಗರ್ಭಪಾತ ಆಗಿರುತ್ತದೆ. ಇದನ್ನೆಲ್ಲ ಇವರು ಪೂರ್ವ ನಿಯೋಜಿತವಾಗಿ ಮಾಡಿದ್ದರು ಎಂದು ತದನಂತರ ನನಗೆ ತಿಳಿಯಿತು. ನಿನಗೆ ಗರ್ಭಪಾತವಾಗಿದೆ ಸ್ವಲ್ಪ ತವರು ಮನೆಯಲ್ಲಿರು, ಬರುವಾಗ ವರದಕ್ಷಣೆ ಹಣ ಮತ್ತು ಬಂಗಾರ ತೆಗೆದುಕೊಂಡು ಬರಲೇಬೇಕು ಅಂತ ನನ್ನ ಗಂಡ ಹಾಗು ಆತನ ಮನೆಯವರು ನನಗೆ ಹೇಳಿ ಕಳಿಸಿದ್ದರು. ಒಂದು ವರ್ಷ ಹತ್ತಿರವಾದರೂ ಸಹ ನನ್ನ ಗಂಡನು ನನ್ನನ್ನು ಕರೆದುಕೊಂಡು ಹೋಗಲು ಬರಲಿಲ್ಲ. ಈ ಮಧ್ಯದಲ್ಲಿ 3-4 ಬಾರಿ ನಾನು ನನ್ನ ತಂದೆತಾಯಿ, ಸಂಬಂಧಿಕರು ಹಾಗು ಹಿರಿಯರ ಸಮಕ್ಷಮದಲ್ಲಿ ನಾನು ನನ್ನ ಗಂಡನ ಮನೆಗೆ ಬಂದು ಇರಲು ಪ್ರಯತ್ನಿಸಿದರೂ ನನ್ನ ಗಂಡ ಹಾಗು ಆತನ ಮನೆಯವರು ನನಗೆ ಮನೆಯಲ್ಲಿ ಸೇರಿಸಿಕೊಳ್ಳಲಿಲ್ಲ. ಹೀಗಿದ್ದು ನಿನ್ನೆ ದಿನಾಂಕ:19/08/2022 ರಂದು ಸಾಯಂಕಾಲ 05.00 ಗಂಟೆ ಸುಮಾರಿಗೆ ನಾನು ನಮ್ಮ ತಂದೆಯಾದ ಗಿರಿಮಲ್ಲಪ್ಪ, ಕಾಕಾ ಚಂದಪ್ಪ, ತಾಯಿಯಾದ ಭಾರತಿಬಾಯಿ, ನನ್ನ ಅಣ್ಣ ಮಲ್ಲಿಕಾಜರ್ುನ, ನಮ್ಮ ಗ್ರಾಮಸ್ಥರಾದ ಯಂಕಪ್ಪ ದೇವರಮನಿ, ಮರಿಲಿಂಗಪ್ಪ ದಿಗ್ಗಿ ಹಾಗೂ ಹಿರಿಯರಾದ ಶಾಂತಪ್ಪ ಸಾಲಿಮನಿ ಹಾರಣಗೇರಾ ಹಾಗೂ ಶಿವಪ್ಪಗೌಡ ಅರಳಹಳ್ಳಿ ರವರೊಂದಿಗೆ ನನ್ನ ಗಂಡನ ಮನೆಗೆ ಬಂದಾಗ, ಮನೆಯಲ್ಲಿದ್ದ ನನ್ನ ಗಂಡ ಗೋಪಿಚಂದ ಈತನು ಎಲೇ ರಂಡಿ ಮತ್ತ್ಯಾಕೆ ನಮ್ಮ ಮನೆಗೆ ಬಂದಿದ್ದೀಯಾ ಎಂದು ನನಗೆ ಕೈಯಿಂದ ಹೊಡೆದು ಕಾಲಿನಿಂದ ಒದ್ದು ನನ್ನ ಕೈಯಲ್ಲಿದ್ದ ಓಪೋ ಕಂಪನಿಯ ಮೊಬೈಲ್ ಫೋನ್ ಕಸಿದುಕೊಂಡು ಮುರಿದು ನೆಲಕ್ಕೆ ಬೀಸಾಡಿದನು. ನಮ್ಮ ಅತ್ತೆ ಮತ್ತು ಮಾವರವರು ಈ ಸೂಳೇಯನ್ನು ಮನೆಯಲ್ಲಿ ಕರೆದುಕೊಳ್ಳಬೇಡ, ಇವಳನ್ನು ಜೀವಂತ ಬಿಡದೇ ಸಾಯಿಸಬೇಕು ಎಂದು ಅವಾಚ್ಯವಾಗಿ ಬೈಯ್ಯುತ್ತಿದ್ದಾಗ ನನ್ನ ತಂದೆತಾಯಿ ಹಾಗು ನನ್ನೊಂದಿಗೆ ಬಂದ ಹಿರಿಯರು ಬುದ್ದಿ ಹೇಳಿ ರಾತ್ರಿವರೆಗೆ ನ್ಯಾಯಪಂಚಾಯತಿ ಮಾಡಿದರೂ ನನ್ನ ಗಂಡ, ಅತ್ತೆಮಾವನವರು ನನ್ನನ್ನು ತಮ್ಮ ಮನೆಯೊಳಗಡೆ ಕರೆದುಕೊಳ್ಳಲಿಲ್ಲ. ನನ್ನ ಗಂಡ ನನಗೆ ಹೊಡೆದಿದ್ದಕ್ಕೆ ನನಗೆ ಮೈ ಕೈ ನೋವಾಗಿದ್ದು ನಾನು ಶಹಾಪೂರದ ಸರಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ರಾತ್ರಿಯಾಗಿದ್ದರಿಂದ ನನ್ನ ತವರು ಮನೆಯಾದ ತಡಿಬಿಡಿ ಗ್ರಾಮಕ್ಕೆ ಹೋಗಿ ಈ ದಿನ ಬಂದು ದೂರು ನೀಡುತ್ತಿದ್ದೇನೆ. ಮೇಲ್ಕಂಡಂತೆ ನನಗೆ ವರದಕ್ಷಣೆಗಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿ ಅವಾಚ್ಯವಾಗಿ ಬೈದು ಜೀವಬೆದರಿಕೆ ಹಾಕಿದ ನನ್ನ ಗಂಡ ಗೋಪಿಚಂದ, ನಮ್ಮ ಮಾವ ಚಂದಪ್ಪ, ಅತ್ತೆಯಾದ ದೇವಕ್ಕೆಮ್ಮ, ಭಾವ ಲಕ್ಷ್ಮೀಕಾಂತ ಹಾಗೂ ನಾದನಿಯಾದ ಭಾಗ್ಯಶ್ರೀ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಅಜರ್ಿ ನೀಡಿದ್ದು ಅದರ ಆಧಾರದ ಮೇಲಿಂದ ಗೋಗಿ ಠಾಣೆಯ ಗುನ್ನೆ ನಂ: 59/2022 ಕಲಂ: 498(ಎ), 323, 504, 506 ಸಂಗಡ 149 ಐಪಿಸಿ ಮತ್ತು 3&4 ಡಿಪಿ ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 60/2022 ಕಲಂ 15(ಎ) 32(3) ಕೆ.ಇ ಆ್ಯಕ್ಟ್: ಇಂದು ದಿನಾಂಕ: 20/08/2022 ರಂದು 11.55 ಪಿಎಮ್ ಕ್ಕೆ ಆರೋಪಿತನಾದ ಶ್ರೀನಿವಾಸ ತಂದೆ ಖೂಬು ಚಿನ್ನಾ ರಾಠೋಡ ವಯಾ:23 ವರ್ಷ ಉ: ಕಿರಾಣಿ ವ್ಯಾಪಾರ ಜಾ: ಲಂಬಾಣಿ ಸಾ:ಉಕ್ಕನಾಳ ಖೇಮುನಾಯಕ ತಾಂಡಾ ತಾ: ಶಹಾಪೂರ ತಾ: ಶಹಾಪೂರ. ಇವನು ಸರಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ಉಕ್ಕನಾಳ ಖೇಮುನಾಯಕ ತಾಂಡಾದ ತನ್ನ ಕಿರಾಣಿ ಅಂಗಡಿಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಅನುಕೂಲ ಮಾಡಿಕೊಟ್ಟಿದ್ದು, ಆಗ ಪಿ.ಎಸ್.ಐ ರವರು ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮ 10.30 ಪಿಎಮ್ ಕ್ಕೆ ದಾಳಿ ಮಾಡಿದಾಗ ಮದ್ಯ ಕುಡಿಯಲು ಬಂದ ಜನರು ಓಡಿ ಹೋದರು. ಆಗ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟ ಶ್ರೀನಿವಾಸ ತಂದೆ ಖೂಬು ಚಿನ್ನಾ ರಾಠೋಡ ಇವನಿಗೆ ಹಿಡಿದು ಅವನಿಂದ ಸ್ಥಳದಲ್ಲಿದ್ದ 1) 180 ಎಮ್.ಎಲ್. ನ ಬ್ಯಾಗ್ಪೇಪರ್ ವಿಸ್ಕಿಯ 6 ಪೌಚ್ ಗಳು ಒಂದಕ್ಕೆ ಅಂ.ಕಿ: ಅಂ.ಕಿ: 106=23 ರೂ ಒಟ್ಟು ಅ.ಕಿ: 637=38/-, ರೂ. ನೇದ್ದವು 2) 90 ಎಮ್.ಎಲ್. ಓರಿಜನಲ್ ಚಾಯಿಸ್ ವಿಸ್ಕಿಯ 7 ಪೌಚ್ ಗಳು ಒಂದಕ್ಕೆ ಅಂ.ಕಿ: 35=13 ರೂ ಒಟ್ಟು ಅ.ಕಿ: 245=91/-, ರೂ. ನೇದ್ದವು ಮತ್ತು 3) ಎರಡು ಪ್ಲಾಸ್ಟಿಕ್ ಗ್ಲಾಸ್ ಗಳು ಅಂ.ಕಿ: 00=00, ನೇದ್ದವುಗಳನ್ನು ಜಪ್ತಿಪಂಚನಾಮೆಯ ಮೂಲಕ ವಶಕ್ಕೆ ಪಡೆದು 11.55 ಪಿಎಮ್ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಜರುಗಿಸಲು ಒಂದು ವರದಿಯನ್ನು ನೀಡಿದ್ದರ ಆಧಾರದ ಮೇಲಿಂದ ಠಾಣಾ ಗುನ್ನೆ ನಂ: 60/2022 ಕಲಂ 15(ಎ),32(3) ಕೆಇ ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ. 95/2022 ಕಲಂ. 15(ಎ), 32(3) ಕೆ.ಇ ಆಕ್ಟ್ : ಇಂದು ದಿನಾಂಕ:20/08/2022 ರಂದು 8-00 ಪಿ.ಎಮ್.ಕ್ಕೆ ಆರೋಪಿತನು ಯಾದಗಿರಿ ನಗರದ ದುಗರ್ಾ ನಗರದ ತನ್ನ ಕಿರಾಣಿ ಅಂಗಡಿಯ ಮುಂದುಗಡೆ ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿ ಸಮಯದಲ್ಲಿ ಸ್ಥಳದಲ್ಲಿ ಸಿಕ್ಕ ಅಂದಾಜು 632.34/- ರೂ ಕಿಮ್ಮತ್ತಿನ 1.620 ಎಮ್.ಎಲ್ ಮದ್ಯವನ್ನು ಜಪ್ತಿಪಡಿಸಿಕೊಂಡು ಆರೋಪಿತನೊಂದಿಗೆ ಠಾಣೆಗೆ ಬಂದು ಕಾನೂನು ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆ ಆರೋಪಿತನ ವಿರುದ್ದ ಈ ಮೇಲಿನಂತೆ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 21-08-2022 10:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080