ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 21-09-2022


ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 72/2022 ಕಲಂ 279, 304(ಎ) ಐ.ಪಿ.ಸಿ: ದಿನಾಂಕ: 20/09/2022 ರಂದು ಬೆಳಿಗ್ಗೆ 09:00 ಗಂಟೆಗೆ ಸಂಗಮ್ಮ ಗಂಡ ಗುರುಲಿಂಗಪ್ಪ ಕುಂಬಾರ ವಯಾ: 60 ವರ್ಷ ಸಾ: ಕಕ್ಕಸಗೇರಾ ಹಾಗೂ ಇತರರು ಕೂಡಿ ಕಂಚಲಕವಿ ಸೀಮಾಂತರದ ಶರಣಗೌಡ ಬಿರಾದರ ಇವರ ಗದ್ದೆಗೆ ಕೂಲಿ ಕೆಲಸಕ್ಕೆ ಹೋಗಿ ಮದ್ಯಾಹ್ನ ಊಟಕ್ಕೆ ಬಿಟ್ಟಾಗ ಗದ್ದೆಯ ಪಕ್ಕದಲ್ಲಿ ಕಚ್ಚಾ ರಸ್ತೆಯ ಮೇಲೆ 02:10 ಪಿ.ಎಮ್.ಕ್ಕೆ ನಿಂತಾಗ ಅದೇ ಸ್ಥಳದಲ್ಲಿದ್ದ ಅಶೋಕ ಲೇಲ್ಯಾಂಡ್ ವಾಹನ ನಂ: ಕೆ.ಎ-33 ಬಿ-1327 ನೇದ್ದರ ಚಾಲಕನಾದ ಮಲ್ಲಿಕಾಜರ್ುನ ತಂದೆ ಮಾನಪ್ಪ ಹೈಯಾಳದವರ ಸಾ: ಬೈರಿಮಡ್ಡಿ ತಾ: ಸುರಪುರ ಈತನು ತನ್ನ ವಾಹನವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಹಿಮ್ಮುಖವಾಗಿ ಚಲಾಯಿಸಿ ಸಂಗಮ್ಮಳಿಗೆ ಡಿಕ್ಕಿಪಡಿಸಿ ಭಾರಿ ರಕ್ತಗಾಯ ಮಾಡಿದ್ದು, ಉಪಚಾರ ಕುರಿತು ಶಹಾಪುರ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರಿಸಿ ನಂತರ ಹೆಚ್ಚಿನ ಉಪಚಾರ ಕುರಿತು ರಾಯಚೂರಗೆ ಕಡೆಗೆ ಹೋಗುವ ಕುರಿತು ವಿಭೂತಿಹಳ್ಳಿ ಹತ್ತಿರ ಹೋಗುತ್ತಿರುವಾಗ ಸುಮಾರು 04:15 ಪಿ.ಎಮ್.ಕ್ಕೆ ಮೃತಪಟ್ಟಿರುತ್ತಾಳೆ. ನನ್ನ ತಾಯಿಯಾದ ಸಂಗಮ್ಮ ಕುಂಬಾರ ಇವಳಿಗೆ ಅಪಘಾತಪಡಿಸಿ ಸಾವಿಗೆ ಕಾರಣವಾದ ಚಾಲಕನ ಮೇಲೆ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಸಾರಾಂಶವಿರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 06/2022 ಕಲಂ: 341, 323, 504, 506 ಸಂ. 34 ಐಪಿಸಿ: ಇಂದು ದಿನಾಂಕ. 20/09/2022 ರಂದು 6-30 ಪಿಎಮ್ಕ್ಕೆ ಪಿರ್ಯಾಧಿ ಶ್ರೀ ರವೀಂದ್ರ ತಂದೆ ಗೋಪಾಲ ಬಂದಳ್ಳಿ ವ: 42 ಜಾತಿ: ಕಬ್ಬಲಿಗ ಉ: ಒಕ್ಕಲುತನ ಸಾ:ಹೊನಗೇರಾ ತಾ; ಜಿ; ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಒಕ್ಕಲುತನ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪಜೀವನ ಮಾಡಿಕೊಂಡಿರುತ್ತೇನೆ. ಹಿಗೀದ್ದು ದಿನಾಂಕ; 18/09/2022 ರಂದು ಯಾದಗಿರಿ ನಗರದಲ್ಲಿ ಭಜರಂಗದಳ ವತಿಯಿಂದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ಮಾಡಿದ್ದರಿಂದ ದರ್ಶನಕ್ಕಾಗಿ ನಾನು ಮತ್ತು ನಮ್ಮೂರಿನ ಭೀಮರಾಯ ತಂದೆ ಬಸ್ಸಣ್ಣ ಬೈರಪ್ಪನೊರ, ಅಮಾತೆಪ್ಪ ತಂದೆ ತಿಮ್ಮಣ್ಣ ಜಾಳಿ ಮತ್ತು ಸತೀಶರೆಡ್ಡಿ ತಂದೆ ಪರ್ವತರೆಡ್ಡಿ ಸಾ; ಕಟಗಿ ಶಹಾಪೂರ ಮತ್ತು ಇತರರು ಯಾದಗಿರಿಗೆ ಬಂದು ಗಣೇಶ ಪ್ರತಿಷ್ಠಾಪನಾ ಸ್ಥಳದ ಹತ್ತಿರವಿರುವಾಗ 11-30 ಎಎಮ್ ಸುಮಾರಿಗೆ ನಮ್ಮ ಊರಿನ ನಮಗೆ ಪರಿಚಯವಿರುವ ದೇವಿಂದ್ರಪ್ಪ ತಂದೆ ಸಾಬಣ್ಣ ನಾಗಣ್ಣೋರ ಇತನು ತನ್ನ ಮೊಬೈಲ ನಂ.9591156356 ನೇದ್ದರ ವಾಟ್ಸಾಪ ಸ್ಟೇಟಸ್ದಲ್ಲಿ'' ಹೊನಗೇರಾ ಗ್ರಾಮ ಪಂಚಾಯತಿಯಲ್ಲಿ 15 ನೆಯ ಹಣಕಾಸು ಯೋಜನೆಯ ಅನುದಾನವನ್ನು ರೂಪಾಯಿ 83 ಲಕ್ಷಾ ಎಕಾ ಎಕಿ ಲೂಟಿ ಹೊಡೆಯಲು ತಯಾರಿ ನಡಿತಾ ಇದೆ ಮಾನ್ಯ ಶರಣಗೌಡ ಕಂದಕೂರ ಅಣ್ಣನವರೇ ಇದೆನಾ ಅಬಿವೃದ್ದಿ ತಮ್ಮದು... ತಮ್ಮ ಕಾರ್ಯಕರ್ತರು'' ಅಂತಾ ಬರೆದು ಹಾಕಿದ್ದು ಇದನ್ನು ನೋಡಿದ ಭೀಮರಾಯ ತಂದೆ ಬಸ್ಸಣ್ಣ ಬೈರಪ್ಪನೊರ ಸಾ; ಹೊನಿಗೇರಾ ಇವರು ದೇವಿಂದ್ರಪ್ಪನಿಗೆ ತಮ್ಮ ಮೊಬೈಲ್ ನಂ.9845207116 ನೇದ್ದರಿಂದ ಫೋನ ಮಾಡಿ ನನ್ನ ಹೆಂಡತಿ ಹೊನಗೇರಾ ಗ್ರಾಮ ಪಂಚಾಯತಿ ಅಧ್ಯಕ್ಷರು ಇದ್ದಾಳೆ ಈ ಪಂಚಾಯತಿಗೆ ಹಣ ಬಿಡುಗಡೆಯಾದ ಬಗ್ಗೆ ನೀನು ನಮಗೆ ಕೇಳಬೇಕಾಗಿದ್ದು ಅದು ಬಿಟ್ಟು ಶರಣಗೌಡ ಕಂದಕೂರ ಅಣ್ಣನವರ ಹೆಸರು ಹಾಕಿ ಅವರ ಮಯರ್ಾದೆಗ ಧಕ್ಕೆ ತಂದಿರುವೆ ನಿನ್ನೊಂದಿಗೆ ಮಾತನಾಡುವುದಿದೆ ಯಾದಗಿರಿ ನಗರದ ಹಿಂದೂ ಮಹಾ ಗಣಪತಿಯ ಪ್ರತಿಷ್ಠಾಪನೆಯ ಸ್ಥಳಕ್ಕೆ ಬಾ ಅಂತಾ ಕರೆದಿದ್ದು ಆ ಸಮಯಕ್ಕೆ ದೇವಿಂದ್ರಪ್ಪನು ಬರದೇ ಸಾಯಂಕಾಲ ಭೀಮರಾಯ ಇತನಿಗೆ ಫೋನ ಮಾಡಿ ಅವನು ಯಾದಗಿರಿ ನಗರದ ಆರ್.ಟಿ.ಓ ಆಫೀಸ ಹತ್ತಿರದ ವಿಶ್ವರಾಧ್ಯ ಹೊಟೇಲ ಮುಂದುಗಡೆ ಇರುವುದಾಗಿ ತಿಳಿಸಿದನು. ಆಗ ಮೇಲ್ಕಂಡ ನಾವೆಲ್ಲರೂ 7-00 ಪಿಎಮ್ ಸುಮಾರಿಗೆ ಅಲ್ಲಿಗೆ ಹೋದಾಗ ಅಲ್ಲಿ ದೇವಿಂದ್ರಪ್ಪ ಮತ್ತು ಆತನ ಅಣ್ಣ ಸಾಬರೆಡ್ಡಿ @ ರೆಡ್ಡಿ ತಂದೆ ಸಾಬಣ್ಣ ನಾಗಣ್ಣೋರ, ನಿಂಗಪ್ಪ ತಂದೆ ದೇವಿಂದ್ರಪ್ಪ ಗುಡಗುಡಿ ಸಾ; ಎಲ್ಲರೂ ಹೊನಿಗೇರಾ ಇವರುಗಳು ಇದ್ದು, ಆಗ ನಾವು ದೇವಿಂದ್ರಪ್ಪನಿಗೆ ನೀನು ನಿನ್ನ ವಾಟ್ಸಾಪ್ ಸ್ಟೇಟಸದಲ್ಲಿ ಶರಣು ಅಣ್ಣನವರ ಹೆಸರು ಹಾಕಿ ಅವರ ಮಯರ್ಾದೆಗೆ ಧಕ್ಕೆ ತರುವ ಕೆಲಸ ಮಾಡಿರುವೆ ಇದು ಸರಿಯಲ್ಲ ಅಂತಾ ಅಂದಾಗ ದೇವಿಂದ್ರಪ್ಪ ಇತನು ಲೇ ಸೂಳೇ ಮಕ್ಕಳೇ ಸಕರ್ಾರದಿಂದ ಮಂಜೂರಾದ ಹಣ ನೀವು ದುರುಪಯೋಗ ಮಾಡುತ್ತಿದ್ದೀರಾ ಅಂತಾ ಭೀಮರಾಯನೊಂದಿಗೆ ಜಗಳ ಮಾಡುತ್ತಾ ಅವನ ಎದೆಯ ಮೇಲಿನ ಅಂಗಿ ಹಿಡಿದಿದ್ದು, ಆಗ ಭೀಮರಾಯನು ಅವನಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಈ ಮೇಲ್ಕಂಡ ಎಲ್ಲರೂ ಎಲ್ಲಿಗೆ ಹೋಗುತ್ತೀಯಾ ಮಗನೇ ಅಂತಾ ತಡೆದು ನಿಲ್ಲಿಸಿ ನಿನ್ನದು ಬಹಳ ಆಗಿದೆ ಇವತ್ತು ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕುತ್ತಿರುವಾಗ ನಾನು ಮಧ್ಯಸ್ತಿಕೆ ವಹಿಸಿ ದೇವಿಂದ್ರಪ್ಪನಿಗೆ ನಿನೇ ತಪ್ಪು ಮಾಡಿ ಮತ್ತೆ ನಮ್ಮೊಂದಿಗೆ ಜಗಳ ಮಾಡುತ್ತೀಯಾ ಅಂತಾ ಅಂದಾಗ, ಅವರೆಲ್ಲರೂ ಇವನದು ಕೂಡಾ ಬಹಳ ಆಗಿದೆ ಅಂತಾ ನನಗೆ ಮೈಮೇಲಿನ ಅಂಗಿ ಹಿಡಿದು ಎಳೆದಾಡಿದರು. ಆಗ ನಮ್ಮೊಂದಿಗೆ ಇದ್ದ ಸತೀಶರೆಡ್ಡಿ, ಅಮಾತೆಪ್ಪ, ಅಲ್ಲೇ ಇದ್ದ ಈಶಪ್ಪ ತಂದೆ ಸಣ್ಣ ಬಸವರಾಜಪ್ಪ ಸಾ; ಹೊನಿಗೇರಾ ಇವರುಗಳು ಜಗಳ ಬಿಡಿಸಿದ್ದು ಇರುತ್ತದೆ. ನಮಗೆ ಅಷ್ಟೇನು ಗಾಯಗಳಾಗಿರದೇ ಇದ್ದುದರಿಂದ ನಾವು ಆಸ್ಪತ್ರೆಗೆ ಉಪಚಾರ ಕುರಿತು ಸೇರಿಕೆಯಾಗಿರುವುದಿಲ್ಲ. ನಾವು ಜಗಳದ ಬಗ್ಗೆ ನಮ್ಮ ಮನೆಯಲ್ಲಿ ಮತ್ತು ನಮ್ಮೂರಿನ ಹಿರಿಯರೊಂದಿಗೆ ಚಚರ್ಿಸಿ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ನಮಗೆ ತಡೆದು ನಿಲ್ಲಿಸಿ, ಹೊಡೆಬಡೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವದ ಬೆದರಿಕೆ ಹಾಕಿದ ಈ ಮೇಲಿನವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಯಾದಗಿರಿ ನಗರ ಠಾಣೆ ಗುನ್ನೆ ನಂಬರ. 106/2022 ಕಲಂ 341, 323, 504, 506 ಸಂ. 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 106/2022 ಕಲಂ 279, 337, 338 ಐಪಿಸಿ: ಇಂದು ದಿನಾಂಕ 20.09.2022 ರಂದು ಸಾಯಂಕಾಲ 5 ಗಂಟೆಗೆ ದೇವಿಂದ್ರಪ್ಪ ತಂದೆ ಶಂಕ್ರಪ್ಪ ಕೌಳೂರು, ವ|| 32 ವರ್ಷ, ಜಾ|| ಕುರುಬರು, ಉ|| ಕೂಲಿಕೆಲಸ, ಸಾ|| ಕನಕನಗರ ಯಾದಗಿರಿ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ತನ್ನ ಅಕ್ಕ ಭಾಗಮ್ಮ ಗಂಡ ನಿಂಗಪ್ಪ ಹಾಗೂ ಇನ್ನಿತರರು ಕೂಡಿ ತಮ್ಮ ಸಂಬಂಧಿಕರೊಬ್ಬರ ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾದಗಿರಿಯಿಂದ ಮುನಗಲ್ ಗ್ರಾಮದ ಕಡೆಗೆ ಹೋಗುವಾಗ ಆಪಾದಿತ ಆಟೋ ಚಾಲಕ ತನ್ನ ಆಟೋ ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಆಟೋ ನಿಯಂತ್ರಿಸದೆ ದಿನಾಂಕ 18.09.2022 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಿಲ್ಲನಕೇರಾ ಗೇಟ ಸಮೀಪ ಮುಖ್ಯ ರಸ್ತೆಯ ಮೇಲೆ ಆಟೋ ಪಲ್ಟಿಮಾಡಿರುತ್ತಾನೆ. ರಸ್ತೆ ಅಪಘಾತ ದುರ್ಘಟನೆಯಲ್ಲಿ ಆಟೋ ವಾಹನದಲ್ಲಿದ್ದ ಚಾಲಕ ಸಮೇತ 9 ಜನರಿಗೆ ಗಂಭೀರ ಮತ್ತು ಸಾದ ಸ್ವರೂಪದ ಗಾಯಗಳಾಗಿರುತ್ತವೆ. ಗಾಯಾಳು ಜನರಿಗೆ ಉಪಚಾರ ಮಾಡಿಸುವ ಕೆಲಸದಲ್ಲಿ ನಿರತನಾಗಿದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದೆ. ಅಂತಾ ವಗೈರೆ ಆಪಾದನೆ.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 110/2022 ಕಲಂ: ಮನುಷ್ಯ ಕಾಣೆಯಾದ ಬಗ್ಗೆ: ಇಂದು ದಿನಾಂಕ:20/09/2022 ರಂದು 5-30 ಪಿಎಮ್ ಕ್ಕೆ ಶ್ರೀ ಭೀಮಪ್ಪ ತಂದೆ ಬಸವರಾಜ ಕುಂಬಾರ, ವ:32, ಜಾ:ಕುಂಬಾರ, ಉ:ಕೂಲಿ ಸಾ:ಹಾಲಗೇರಾ ತಾ:ವಡಗೇರಾ ಜಿ:ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಮ್ಮ ತಂದೆ-ತಾಯಿಗೆ ನಾನು ಮತ್ತು ನಮ್ಮಕ್ಕ ಸಿದ್ದಮ್ಮ, ನಮ್ಮಣ್ಣ ಹಣಮಂತ ಹೀಗೆ ಒಟ್ಟು ಮೂರು ಜನ ಮಕ್ಕಳಿರುತ್ತೇವೆ. ನಮ್ಮಕ್ಕ ಸಿದ್ದಮ್ಮ ಇವಳಿಗೆ ಯಾದಗಿರಿ ತಾಲೂಕಿನ ಆನೂರು (ಕೆ) ಗ್ರಾಮದ ಮಾರೆಪ್ಪ ಕುಂಬಾರನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೇವೆ. ನಮ್ಮಣ್ಣ ಹಣಮಂತನು ತನ್ನ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿರುತ್ತಾನೆ. ನಮ್ಮಣ್ಣನು ಊರ ಕಡೆ ಜಾಸ್ತಿ ಬರುವುದಿಲ್ಲ. ನಮ್ಮ ತಾಯಿ ಬಸಮ್ಮ ಇವಳು 2006 ನೇ ಸಾಲಿನಲ್ಲಿ ಬಸ್ಸಿನ ಅಪಘಾತದಲ್ಲಿ ತೀರಿಕೊಂಡಿರುತ್ತಾಳೆ. ಮನೆಯಲ್ಲಿ ನಾನು ಮತ್ತು ನಮ್ಮ ತಂದೆ ಬಸವರಾಜ ಹಾಗೂ ನನ್ನ ಹೆಂಡತಿ ಪದ್ಮಾವತಿ ಮತ್ತು ನನ್ನ ಮಕ್ಕಳಾದ ವಿಜಯ ವ:10 ವರ್ಷ, ಪೂಜಾ ವ:07 ವರ್ಷ ಇಷ್ಟು ಜನ ಮಾತ್ರ ಇರುತ್ತೆವೆ. ನಾನು ದಿನಾಲು ಕೂಲಿ ಕೆಲಸಕ್ಕೆ ಯಾದಗಿರಿಗೆ ಹೋಗುತ್ತೇನೆ. ನನ್ನ ಹೆಂಡತಿ ಊರಲ್ಲಿಯೇ ಕೂಲಿ ಕೆಲಸಕ್ಕೆ ಹೋಗುತ್ತಾಳೆ. ನನ್ನ ಮಕ್ಕಳು ಶಾಲೆಗೆ ಹೋಗುತ್ತಿದ್ದರು. ನಮ್ಮ ತಂದೆಯು ಈ ಮೊದಲಿನಿಂದಲು ಲಗ್ನ ಕಾರ್ಯಕ್ರಮದ ಅಡಿಗೆ ಗುತ್ತಿಗೆ ಹಿಡಿದು ಲಗ್ನದ ಅಡಿಗೆ ಕೆಲಸ ಮತ್ತು ಜೊತೆಗೆ ಒಕ್ಕಲುತನ ಕೆಲಸ ಕೂಡಾ ಮಾಡಿಕೊಂಡಿದ್ದನು. ನಮ್ಮ ತಂದೆ ಹೆಸರಿನಲ್ಲಿ ಗಡ್ಡೆಸೂಗೂರು ಸೀಮಾಂತರದಲ್ಲಿ ಸವರ್ೆ ನಂ. 98/2 ರಲ್ಲಿ ವಿಸ್ತೀರ್ಣ 4 ಎಕರೆ 09 ಗುಂಟೆ ಜಮೀನು ಇದ್ದು, ಅದರಲ್ಲಿ ಒಕ್ಕಲುತನ ಕೆಲಸ ಮಾಡಿಕೊಂಡು ಇರುತ್ತಿದ್ದನು. ನಮ್ಮ ತಂದೆಗೆ ಸಕ್ಕರೆ ಮತ್ತು ಹೃದಯದ ಕಾಯಿಲೆ ಇದ್ದುದ್ದರಿಂದ ನಾವು ಆತನಿಗೆ ನಿಯಮಿತವಾಗಿ ಕಲಬುರಗಿ ಜಯದೇವ ಆಸ್ಪತ್ರೆಗೆ ಆಗಾಗ ತೋರಿಸುತ್ತಿದ್ದೇವು. ಹೀಗಾಗಿ ಇತ್ತಿಚ್ಚೆಗೆ ಆಸ್ಪತ್ರೆಗೆ ಅಂತಾ ತುಂಬಾ ಹಣ ವೆಚ್ಚವಾಗುತ್ತಿತ್ತು. ಈ ವರ್ಷ ನಮ್ಮ ಹೊಲದಲ್ಲಿ ಹತ್ತಿ ಬೆಳೆ ಬಿತ್ತಿದ್ದು, ಅತಿ ಹೆಚ್ಚು ಮಳೆ ಬಂದು ಬಿತ್ತಿದ ಎಲ್ಲಾ ಹತ್ತಿಬೆಳೆ ರೋಗಕ್ಕೆ ತುತ್ತಾಗಿದ್ದರಿಂದ ನಮ್ಮ ತಂದೆಯು ಮನೆಯಲ್ಲಿ ಹತ್ತಿ ಬೆಳೆ ನಷ್ಟವಾಗಿರುತ್ತದೆ. ಈಗ ನನ್ನ ಆಸ್ಪತ್ರೆಯ ಖಚರ್ಿಗೆ ಹಣ ಎಲ್ಲಿಂದ ತರಲಿ ಎಂದು ದಿನಾಲು ಚಿಂತೆ ಮಾಡುತ್ತಿದ್ದನು. ಆಗ ನಾನು ಮತ್ತು ನನ್ನ ಹೆಂಡತಿ ಪದ್ಮಾವತಿ ಇಬ್ಬರೂ ನಮ್ಮ ತಂದೆಗೆ ನೀನು ಚಿಂತೆ ಮಾಡಬೇಡ ಈ ವರ್ಷ ಇಲ್ಲಾಂದ್ರ ಮುಂದಿನ ವರ್ಷ ಬೆಲೆ ಬೆಳೆಯುತ್ತದೆ ಅದಕ್ಯಾಕೆ ಚಿಂತೆ ಮಾಡುತ್ತಿ ಈಗ ನಾವು ನಿನಗೆ ಕೂಲಿನಾಲಿ ಮಾಡಿ ಆಸ್ಪತ್ರೆಗೆ ತೋರಿಸುತ್ತೇವೆ ಎಂದು ಹೇಳಿದರೆ ಅವನು ಕೇಳದೆ ದಿನಾಲು ಒಬ್ಬನೆ ಹತ್ತಿ ಬೆಳೆ ಮತ್ತು ಆಸ್ಪತ್ರೆಯ ಖಚರ್ಿನ ಬಗ್ಗೆ ಚಿಂತೆ ಮಾಡುತ್ತಾ ಕೂಡುತ್ತಿದ್ದನು. ಇತ್ತಿಚ್ಚೆಗೆ ಸುಮಾರು 10-12 ದಿವಸಗಳ ಹಿಂದೆ ದಿನಂಪ್ರತಿಯಂತೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಲಿ ಕೆಲಸಕ್ಕೆ ಹೋದಾಗ ನಮ್ಮ ತಂದೆಯು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಗೂಗಲ್ ಬ್ರಿಡ್ಜಗೆ ಹೋಗಿ ಅಲ್ಲಿಯ ಬ್ರಿಡ್ಜ ಮೇಲೆ ಏರಿ ಬ್ರಿಡ್ಜ ಮೇಲಿಂದ ನೀರಿಗೆ ಧುಮುಕಲು ನಿಂತಿದ್ದು, ಆಗ ಯಾರೋ ದಾರಿ ಮೇಲೆ ಹೋಗುವವರು ಇದನ್ನು ನೋಡಿ ನಮ್ಮ ತಂದೆಗೆ ಕೆಳಗಡೆ ಕರೆದು ಆತನ ಹತ್ತಿರದ ಡೈರಿಯಲ್ಲಿರುವ ನನ್ನ ಮೊಬೈಲ ನಂಬರಗೆ ಕರೆ ಮಾಡಿ ನನಗೆ ಹೇಳಿದ್ದರಿಂದ ನಾನು ಹೋಗಿ ನಮ್ಮ ತಂದೆಗೆ ವಾಪಸ ಮನೆಗೆ ಕರೆದುಕೊಂಡು ಬಂದಿರುತ್ತೇನೆ. ಆ ನಂತರ ನಾವು ನನ್ನ ತಂದೆಗೆ ಸರಿಯಾಗಿ ಆರೈಕೆ ಮಾಡಿ ಮನೆಯಲ್ಲಿ ಇಟ್ಟುಕೊಂಡು 4-5 ದಿವಸಗಳಾದ ನಂತರ ದಿನಾಂಕ:16/09/2022 ರಂದು ಬೆಳಗ್ಗೆ ನಾನು ಎಂದಿನಂತೆ ಯಾದಗಿರಿಗೆ ಕೂಲಿ ಕೆಲಸಕ್ಕೆ ಹೋದೆನು. ನನ್ನ ಹೆಂಡತಿ ಕೂಡಾ ಹತ್ತಿಯಲ್ಲಿ ಕಳೆ ತೆಗೆಯಲು ಕೂಲಿ ಕೆಲಸಕ್ಕೆ ಹೋಗಿದ್ದು, ನನ್ನ ಮಕ್ಕಳು ಶಾಲೆಗೆ ಹೋಗಿದ್ದರು. ಮನೆಯಲ್ಲಿ ನಮ್ಮ ತಂದೆ ಒಬ್ಬರೆ ಇದ್ದರು. ನಾನು ಕೂಲಿ ಕೆಲಸಕ್ಕೆ ಹೋಗಿ ಯಾದಗಿರಿಯಲ್ಲಿದ್ದಾಗ ಮದ್ಯಾಹ್ನ 12-30 ಗಂಟೆ ಸುಮಾರಿಗೆ ನಮ್ಮೂರ ಬಸಲಿಂಗಪ್ಪ ತಂದೆ ಶಿವಪ್ಪ ಮಡಿವಾಳ ಈತನು ನನಗೆ ಫೋನ ಮಾಡಿ ಹೇಳಿದ್ದೇನಂದರೆ ನಾನು ಮತ್ತು ನಾಗಪ್ಪ ನಾಯ್ಕೋಡಿ ಇಬ್ಬರೂ ಅಟೋದಲ್ಲಿ ಸೈದಾಪೂರಕ್ಕೆ ರಸಗೊಬ್ಬರ ತರಲು ಹೋಗುತ್ತಿದ್ದಾಗ ನಿಮ್ಮ ತಂದೆಯಾದಬಸವರಾಜನು ಕಂದಳ್ಳಿ ಬ್ರಿಡ್ಜ ಕಮ್ ಬ್ಯಾರೇಜ ಮೇಲೆ ಏರಿದ್ದನು. ನಾವು ನೋಡ ನೋಡುವಷ್ಟರಲ್ಲಿ ನಿಮ್ಮ ತಂದೆಯು ಬ್ಯಾರೇಜ್ ನೀರಿನಲ್ಲಿ ಬ್ರಿಡ್ಜ ಮೇಲಿಂದ ಜಿಗಿದನು ಎಂದು ಹೇಳಿದನು. ಆಗ ಗಾಬರಿಯಾದ ನಾನು ತಕ್ಷಣ ನಮ್ಮ ಸಂಬಂಧಿಕ ನಾಗಪ್ಪ ತಂದೆ ಕುರುಮಣ್ಣ ಕುಂಬಾರ ಮತ್ತು ನಮ್ಮೂರ ಭೀಮಣ್ಣ ತಂದೆ ಅಯ್ಯಪ್ಪ ನಾಟೇಕಾರ ಇವರಿಗೆ ಹೇಳಿ ಅವರನ್ನು ನನ್ನ ಜೊತೆಗೆ ಕರೆದುಕೊಂಡು ಕಂದಳ್ಳಿ ಬ್ರಿಡ್ಜ ಕಮ್ ಬ್ಯಾರೇಜಗೆ ಹೋಗಿ ನೋಡಿದೇವು. ಅಲ್ಲಿಯೇ ಇದ್ದ ನಮ್ಮೂರ ಬಸಲಿಂಗಪ್ಪ ಮತ್ತು ನಾಗಪ್ಪ ನಾಯ್ಕೋಡಿ ಇಬ್ಬರು ನಮ್ಮ ತಂದೆ ನೀರಿಗೆ ಧುಮುಕಿದ ಸ್ಥಳವನ್ನು ತೋರಿಸಿ, ನನಗೆ ವಿವರವಾಗಿ ಮೇಲಿನಂತೆ ಹೇಳಿದರು. ನಂತರ ಈ ವಿಷಯ ವಡಗೇರಾ ಪೊಲೀಸ್ ಠಾಣೆಗೆ ಗೊತ್ತಾಗಿ ಅವರು ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆ ಯಾದಗಿರಿ ರವರಿಗೆ ಮಾಹಿತಿ ತಿಳಿಸಿ, ಅಗ್ನಿಶಾಮಕ ಮತ್ತು ಎನ್.ಡಿ.ಆರ್.ಎಫ್ ತಂಡದವರನ್ನು ಹಾಗೂ ಪರಿಣಿತ ಈಜುಗಾರರನ್ನು ಕರೆಸಿ, ನಮ್ಮ ತಂದೆಯ ಶವವನ್ನು ಭೀಮಾ ನದಿಯಲ್ಲಿ ಶೋಧನೆ ಮಾಡಿಸಿದರು. ಇಲ್ಲಿಯವರೆಗೆ ನಮ್ಮ ತಂದೆಯ ಶವ ಸಿಕ್ಕಿರುವುದಿಲ್ಲ. ಕಾರಣ ನಮ್ಮ ತಂದೆಯು ಹತ್ತಿ ಬೆಳೆ ನಷ್ಟವಾಗಿದ್ದರಿಂದ ಆಸ್ಪತ್ರೆಯ ಖಚರ್ಿಗೆ ಹಣ ಎಲ್ಲಿಂದ ತರಲಿ ಎಂದು ಚಿಂತೆ ಮಾಡಿ ಕಂದಳ್ಳಿ ಹತ್ತಿರದ ಬ್ರಿಡ್ಜ ಮೇಲಿಂದ ಭೀಮಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ನಮ್ಮ ತಂದೆಯ ಶವವನ್ನು ಹುಡುಕಿ ಈಗ ಠಾಣೆಗೆ ಬಂದು ಫಿಯರ್ಾದಿ ನೀಡುವುದಕ್ಕೆ ತಡವಾಗಿರುತ್ತದೆ. ನಮ್ಮ ತಂದೆಯು ಕಾಣೆಯಾದ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ಲಿಖಿತ ದೂರು ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 110/2022 ಕಲಂ: ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 164/2022 ಕಲಂ ಮನುಷ್ಯ ಕಾಣೆ : ಇಂದು ದಿನಾಂಕ 20/09/2022 ರಂದು 4.30 ಪಿ ಎಮ್ ಕ್ಕೆ ಪಿಯರ್ಾದಿ ಶ್ರೀಮತಿ ವಿಜಯಲಕ್ಷ್ಮಿ ಗಂ. ಯಶವಂತರಾವ ಮಾ|| ಪಾಟೀಲ ವ|| 56 ವರ್ಷ ಜಾ|| ಹಿಂದು ಲಿಂಗಾಯತ್ ಉ|| ಮನೆಕೆಲಸ ಸಾ|| ಎಕಲೂರ ತಾ|| ಬಸವಕಲ್ಯಾಣ ಜಿ|| ಬೀದರ ಹಾ||ವ|| ಚಂದ್ರಶೇಖರ ಚನ್ನಿ ವೆಂಕಟೇಶ್ವರ ನಗರ ಶಹಾಪೂರ ನಾನು ನನ್ನ ಗಂಡನಾದ ಯಶವಂತರಾವ ಇವರು ಸುಮಾರು 8 ತಿಂಗಳಿಂದ ಬೀದರ ಅಗ್ನಿಶಾಮಕ ಠಾಣೆಯಿಂದ ವಗರ್ಾವಣೆ ಗೊಂಡು ಶಹಾಪೂರದಲ್ಲಿ ಕೆಲಸ ಮಾಡಿಕೊಂಡು ವಾಸವಾಗಿದ್ದು ಇರುತ್ತದೆ ನಮಗೆ ಮಹೇಶ - 26 ವರ್ಷ, ಶಿವಾನಂದ- ವ22 ವರ್ಷದ ಮಕ್ಕಳಿದ್ದು ಮಹೇಶ ಈತನು ಬೀದರ ಜಿಲ್ಲೆಯಲ್ಲಿ ನಾಗರೀಕ ಪೊಲೀಸ್ ಪೇದೆಯಾಗಿ ಭತರ್ಿಯಾಗಿದ್ದು ಇರುತ್ತದೆ ಮತ್ತು ಶಿವಾನಂದ ಈತನು ನಮ್ಮ ಸಂಗಡ ಇರುತ್ತಾನೆ. ಹೀಗಿದ್ದು ದಿನಾಂಕ 10/09/2022 ರಂದು ನಾನು ಮತ್ತು ನನ್ನ ಮಗನಾದ ಶಿವಾನಂದ ಇವರು ನಮ್ಮ ಸಂಬಂದಿಯವರ ಮನೆಯಾದ ಕಲಬುಗರ್ಿಗೆ ಹೋಗಿದ್ದೇವು ಹೀಗಿದ್ದು ದಿನಾಂಕ 11/09/2022 ರಂದು ಮದ್ಹಾನ 12.00 ಗಂಟೆಗೆ ಕರ್ತವ್ಯ ಮುಗಿದ ಮೇಲೆ ನನ್ನ ಗಂಡ ಯಶವಂತ ಈತನು ನನ್ನ ಮಗನ ಮೊಬೈಲಗೆ ಪೋನ ಮಾಡಿ ತಿಳಿಸಿದ್ದೇನೆಂದರೆ ನಾನು ಕೆಲವು ದಿನಗಳ ಮಟ್ಟಿಗೆ ದೇವಸ್ಥಾನ ನೋಡಲು ಪ್ರವಾಸ ಹೊರಟಿರುವದಾಗಿ ತಿಳಿಸಿ ಮೊಬೈಲ ಕಟ್ ಮಾಡಿದನು ನಂತರ ನಾವು ದಿನಾಂಕ 12/09/2022 ರಂದು ಮರಳಿ ಊರಿಂದ ಬಂದು ನಾವು ಮನೆಯಲ್ಲಿ ಇದ್ದೇವು ನಂತರ ನನ್ನ ಗಂಡನ ಮೊಬೈಲಗೆ ನನ್ನ ಮಕ್ಕಳು ನಾವು ಪೋನ ಮಾಡಿ ನೋಡಲಾಗಿ ಸ್ವಿಚ್ ಆಪ್ ಆಗಿದ್ದು ಕಂಡು ಬಂದಿತು ಪ್ರವಾಸ ಹೋದಲ್ಲಿ ನೆಟ್ವರ್ಕ ತೊಂದರೆ ಆಗಿರ ಬಹುದು ಎಂದು ನಾವು ಸುಮ್ಮನೆ ಇದ್ದೇವು ನಂತರ 1-2 ದಿನ ಬಿಟ್ಟು ಮತ್ತೆ ಮತ್ತೆ ನನ್ನ ಗಂಡನ ಮೊಬೈಲಗೆ ಕಾಲ ಮಾಡಲಾಗಿ ಸದರಿಯವರ ಮೊಬೈಲ ಬಂದ್ ಆಗಿದ್ದು ಇರುತ್ತದೆ ನಂತರ ನಾವು ಅಗ್ನಿಶಾಮಕ ಠಾಣೆಗೆ ಹೋಗಿ ವಿಚಾರಣೆ ಮಾಡಲಾಗಿ ನಿಮ್ಮ ತಂದೆ ದಿನಾಂಕ 12/09/2022 ರಂದು ಒಂದು ದಿನಮಾತ್ರ ರಜೆ ಪಡೆದಿದ್ದು ಇರುತ್ತದೆ ಈಗ 2-3 ದಿನಗಳಿಂದ ಕರ್ತವ್ಯಕ್ಕೆ ಬಂದಿರುವದಿಲ್ಲ ಎಂದು ಹೇಳಿದರು ನಂತರ ನಾವು ನಮ್ಮ ಊರಾದ ಎಕಲೂರಕ್ಕೆ ಹೋಗಿ ಅಲ್ಲಿ ಸಂಬಂದಿಕರು ಇರುವ ಊರೂಗಳಲ್ಲಿ ಹುಡುಕಾಡಿ ಪೋನ ಮಾಡಿ ಕೇಳಲಾಗಿ ಎಲ್ಲಿಯೂ ನನ್ನ ಗಂಡನ ಬಗ್ಗೆ ಯಾವುದೇ ಮಾಹಿತಿ ದೊರೆತಿರುವದಿಲ್ಲ. ಕಾರಣ ನನ್ನ ಗಂಡನಾದ ಯಶವಂತರಾವ ತಂ. ರಾಮಚಂದ್ರಪ್ಪ ಮಾ|| ಪಾಟೀಲ ವ|| 56 ವರ್ಷ ಜಾ|| ಹಿಂದು ಲಿಂಗಾಯತ್ ಉ|| ಸಹಾಯಕ ಅಗ್ನಿಶಾಮಕ ಠಾಣಾದಿಕಾರಿ ಶಹಾಪೂರ ಸಾ|| ಎಕಲೂರ ತಾ|| ಬಸವಕಲ್ಯಾಣ ಜಿ|| ಬೀದರ ಹಾ||ವ|| ಹಾ||ವ|| ಚಂದ್ರಶೇಖರ ಬಳ್ಳೋಳ್ಳಿ ವೆಂಕಟೇಶ್ವರ ನಗರ ಶಹಾಪೂರ ಈತನು ಶಹಾಪೂರದ ನಾವು ಬಾಡಿಗೆ ಇದ್ದ ಮನೆಯಿಂದ ಹೋದವ ಇನ್ನು ಮನೆಗೆ ಬರದೆ ಕಾಣೆಯಾಗಿದ್ದು ಅವನು ನಮ್ಮ ಸಂಬಂದಿಕರು ಇರುವ ಊರುಗಳಲ್ಲಿ ಹುಡುಕಾಡಿ ಇಂದು ತಡವಾಗಿ ಠಾಣೆಗೆ ಬಂದು ಪಿಯರ್ಾದಿ ನೀಡುತ್ತಿದ್ದು ಕಾಣೆಯಾದ ನನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಿ ಪತ್ತೆ ಮಾಡಿಕೊಡಲು ವಿನಂತಿ.
ಕಾಣೆಯಾದ ನನ್ನ ಗಂಡನ ಚಹರೆ ಪಟ್ಟಿ ಈ ಕೇಳಗಿನಂತಿರುತ್ತವೆ.
ಹೆಸರು ಃ- ಯಶವಂತರಾವ ತಂ. ರಾಮಚಂದ್ರಪ್ಪ ಮಾ|| ಪಾಟೀಲ
ಬಣ್ಣ ಃ- ಸಾದಕಪ್ಪು ಬಣ್ಣ ಸಾದಾರಣ ಮೈಕಟ್ಟು
ಎತ್ತರ ಃ- 5.8 ಫೀಟ್ ಇದ್ದು.
ಭಾಷೆ ಃ- ಕನ್ನಡ, ಹಿಂದಿ, ತೆಲಗು
ಧರಿಸಿದ ಬಟ್ಟೆ ಃ- ಬಾದಾಮಿ ಬಣ್ಣದ ಅಂಗಿ ಮತ್ತು ಕರಿ ಬಣ್ಣದ ಪ್ಯಾಂಟ ಹಾಕಿದ್ದು ಅದೆ
ವಿನಂತಿ. ಅಂತ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 164/2022 ಕಲಂ ಮನುಶ್ಯ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 21-09-2022 04:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080