ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 21-10-2021

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 163/2021 ಕಲಂ 323, 324 504 506 ಸಂ 34 ಐ.ಪಿ.ಸಿ : ಪಿರ್ಯಾಧಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು ಗಂಡು ಮಕ್ಕಳು ಇರುವದಿಲ್ಲಾ ಆರೋಪಿತರ ತಂದೆಯು ಪಿರ್ಯಾಧಿಯ ಅಣ್ಣನಾಗಿದ್ದು ಪಿರ್ಯಾಧಿಯು ತನ್ನ ಆಸ್ತಿಯನ್ನು ಹೆಣ್ಣು ಮಕ್ಕಳಿಗೆ ಮಾಡುತ್ತಾನೆ ಅಂತಾ ಸಿಟ್ಟುಮಾಡಿಕೊಂಡು ತೊಂದರೆ ನೀಡುತ್ತಾ ಬಂದಿದ್ದು ದಿನಾಂಕ: 19.10.2021 ರಂದು 2.00 ಪಿಎಮ್ ಕ್ಕೆ ಪಿರ್ಯಾಧಿಯು ಕುಂಟಿ ಭೀಮಣ್ಣನ ಹೊಲದ ಹತ್ತಿರ ತನ್ನ ಎತ್ತುಗಳನ್ನು ಮೋಯಿಸುತ್ತಿರುವಾಗ ಆರೋಪಿತರು ಎತ್ತುಗಳನ್ನು ಹೊಡೆದುಕೊಂಡು ಹೋಗುತ್ತಿರುವಾಗ ಪಿರ್ಯಾಧಿಯ ಎತ್ತುಗಳು ಆರೋಪಿತರ ಎತ್ತುಗಳ ಮೇಲೆ ಹೋಗಿದ್ದರಿಂದ ಅವುಗಳು ಬೆದರಿ ಹೋಗಿದ್ದು ಇದೇ ಸಿಟ್ಟಿನಿಂದ ಪಿರ್ಯಾಧಿಗೆ ಆರೋಪಿತರು ಅವಾಚ್ಯ ಶಬ್ದಗಳಿಂದ ಕಲ್ಲು ಮತ್ತು ಕೈಯಿಂದ ಹೊಡೆ-ಬಡೆ ಮಾಡಿ ಜೇವ ಬೆದರಿಕೆ ಹಾಕಿ ಹೋಗಿದ್ದು ಅಂತಾ ವಗೈರೆ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.

 

ಭೀಗುಡಿ ಪೊಲೀಸ್ ಠಾಣೆ
ಗುನ್ನೆ ನಂ: 81/2021 ಕಲಂ 143,147,148,323,324,354,504,506 ಸಂಗಡ 149 ಐ.ಪಿ.ಸಿ. : ಈಗ ಸುಮಾರು 6 ತಿಂಗಳಿನಿಂದ ಆರೋಪಿತರು ಫಿಯರ್ಾದಿ ಮನೆಯ ಮುಂದಿನ ಅಂಗಳದಲ್ಲಿ ತಮ್ಮಟ್ರಾಕ್ಟರ್ ನಿಲ್ಲಿಸುತ್ತಾ ಬಂದಿದ್ದು ಈ ವಿಷಯದಲ್ಲಿ ಫಿಯರ್ಾದಿ ಮತ್ತುಆರೋಪಿತರ ನಡುವೆತಕರಾರುಆಗುತ್ತಾ ಬಂದಿರುತ್ತದೆ. ಇಂದು ದಿನಾಂಕ:20/10/2021 ರಂದು ಮುಂಜಾನೆಯಾರೋ ಹುಡುಗರುಟ್ರಾಕ್ಟರಗೆ ಪೇಂಟ ಹಚ್ಚಿದ ವಿಷಯದಲ್ಲಿ 10.30 ಎ.ಎಮ್. ಸುಮಾರಿಗೆಆರೋಪಿತರು ಫಿಯರ್ಾದಿದಾರರೊಂದಿಗೆ ನೀವೇ ಪೇಂಟ ಹಚ್ಚೀರಿಅಂತಾ ಜಗಳ ತೆಗೆದುಅವಾಚ್ಯವಾಗಿ ಬೈದುಕೈಯಿಂದ, ಕಲ್ಲಿನಿಂದ ಹೊಡೆಬಡೆ ಮಾಡಿರಕ್ತಗಾಯ ಗುಪ್ತಗಾಯಪಡಿಸಿ ಜಗಳ ಬಿಡಿಸಲು ಬಂದ ಫಿಯರ್ಾದಿಯ ಹೆಂಡತಿಗೆ ಎಳೆದಾಡಿ ಮಾನಭಂಗ ಮಾಡಿಜೀವ ಬೆದರಿಕೆ ಹಾಕಿದ ಬಗ್ಗೆ ದೂರು.

 

ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂಬರ 234/2021 ಕಲಂ 279, 337, 338 ಐ.ಪಿ.ಸಿ : ಇಂದು ದಿನಾಂಕ 20/10/2021 ರಂದು, ಸಾಯಂಕಾಲ 18-30 ಗಂಟೆಗೆ ಫಿಯರ್ಾದಿ ಶ್ರೀ ರುಕ್ಮಾಜೀ ತಂದೆ ದಶರಥರಾವ ಬಾಸುತ್ಕರ್, ವಯಸ್ಸು 65 ವರ್ಷ, ಜಾತಿ ಬಾವಸಾರ ಕ್ಷತ್ರೀಯ, ಉಃ ಕೂಲಿ ಕೆಲಸ ಸಾಃ ವಿದ್ಯಾನಗರ ಶಹಾಪೂರ ಹಾಲಿವಸತಿ ಎನ್.ಜಿ.ಓ ಕಾಲೋನಿ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 17/10/2021 ರಂದು, ಮನೆಯ ಚತ್ ಹಾಕುವ ಸಂಬಂಧ ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ನನ್ನ ಎರಡನೇ ಮಗ ದಶರಥ ಈತನು ಮೋಟರ್ ಸೈಕಲ್ ನಂ ಕೆಎ-32-ಇ.ಎಕ್ಸ್-5709 ನೇದ್ದನ್ನು ಚಲಾಯಿಸಿಕೊಂಡು ಮನೆಯ ಸಾಮಾನುಗಳನ್ನು ತೆಗೆದುಕೊಂಡು ಬರಲು ಶಹಾಪೂರ ಪಟ್ಟಣಕ್ಕೆ ಹೋಗಿ ಬರುತ್ತೇನೆ ಅಂತ ಹೇಳಿ ಹೋದನು. ಸ್ವಲ ಸಮಯದ ನಂತರ ಮದ್ಯಾಹ್ನ 1-00 ಗಂಟೆಯ ಸುಮಾರಿಗೆ ನಮಗೆ ಪರಿಚಯವಿದ್ದ ಸೂಗು ತಂದೆ ಗುರುಬಸಪ್ಪ ಹರನೂರ, ರವರು ಫೊನ್ ಮಾಡಿ ನನ್ನ ಕೆಲಸದ ನಿಮಿತ್ಯ ಯಲ್ಲಾಲಿಂಗ ಮಠಕ್ಕೆ ನಡೆದುಕೊಂಡು ಹೋಗುತಿದ್ದಾಗ, ಮಧ್ಯಾಹ್ನ 12-45 ಗಂಟೆಯ ಸುಮಾರಿಗೆ ಶಹಾಪೂರ ಭೀ ಗುಡಿ ಮುಖ್ಯೆ ರಸ್ತೆಯ ಮೇಲೆ ಎನ್.ಜಿ.ಓ ಕಾಲೋನಿ ಕ್ರಾಸ್ ಇನ್ನೂ 40 ರಿಂದ 50 ಫೀಟ್ ಅಂತರದಲ್ಲಿ ಮುಂದೆ ಇರುವಾಗ ಎದರುಗಡೆಯಿಂದ ಅಂದರೆ ಭೀ ಗುಡಿ ಕಡೆಯಿಂದ ಒಬ್ಬ ಮೋಟರ್ ಸೈಕಲ್ ಸವರಾನು ತನ್ನ ಮೋಟರ್ ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಓವರಟೇಕ್ ಮಾಡಲು ಹೋಗಿ ನಿಮ್ಮ ಮಗ ದಶರಥ ಈತನು ಚಲಾಯಿಸಿಕೊಂಡು ಹೊರಟಿದ್ದ ಮೋಟರ್ ಸೈಕಲ್ಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ಎರಡು ಮೋಟರ್ ಸೈಕಲ್ ಮೇಲೆ ಇದ್ದವರು ರೋಡಿನ ಮೇಲೆ ಬಿದ್ದರು. ನಾನು ಹೋಗಿ ನೋಡಲಾಗಿ ನಿಮ್ಮ ಮಗ ದಶರಥನಿಗೆ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿರುತ್ತವೆ ಸ್ಥಳಕ್ಕೆ ಬನ್ನಿ ಅಂತಾ ತಿಳಿಸಿದ ಮೇರೆಗೆ, ನಾನು ಮತ್ತು ನನ್ನ ಹಿರಿಯ ಮಗ ಮಲ್ಲಿಕಾಜರ್ುನ ಇಬ್ಬರೂ ಕೂಡಿ ಎನ್.ಜಿ..ಓ ಕಾಲೋನಿ ಕ್ರಾಸ್ ಹತ್ತಿರ ಬಂದು ನೋಡಲಾಗಿ ನನ್ನ ಮಗ ದಶರಥನಿಗೆ ಗದ್ದಕ್ಕೆ ರಕ್ತಗಾಯ, ಎಡಭಾಗದ ಹಣೆಗೆ ರಕ್ತಗಾಯ, ತಲೆಯ ಹಿಂದುಗಡೆ ಭಾರಿ ರಕ್ತಗಾಯ ಮತ್ತು ಬಲಗಾಲ ಮೊಳಕಾಲಿಗೆ ಎಲಬು ಮುರಿದು ಭಾರಿ ಗುಪ್ತಗಾಯವಾಗಿತ್ತು. ನಿಮ್ಮ ಮಗನಿಗೆ ಅಪಘಾತ ಪಡಿಸಿದ ಮೋಟರ್ ಸೈಕಲ್ ಸವಾರ ಈತನೆ ಇರುತ್ತಾನೆ ಅಂತಾ ಅಲ್ಲಿಯೇ ಇದ್ದ ಸೂಗು ಹರನೂರ ರವರು ತಿಳಿಸಿದ ಮೇರೆಗೆ, ಅಪಘಾತ ಪಡಿಸಿದ ಮೋಟರ್ ಸೈಕಲ್ ಸವಾರನ ಹೆಸರು ವಿಳಾಸ ವಿಚಾರಿಸಲು ಮಹಾಂತೇಶ ತಂದೆ ಮಹಾದೇವಪ್ಪ ನಾಯ್ಕೋಡಿ, ವಯಸ್ಸು 28 ವರ್ಷ, ಜಾತಿ ಕಬ್ಬಲಿಗ, ಉಃ ಡ್ರೈವರ ಕೆಲಸ ಸಾಃ ಮಮದಾಪೂರ ಅಂತಾ ಹೇಳಿದ್ದು, ಸದರಿಯವನಿಗೆ ಮೇಲ್ನೋಟಕ್ಕೆ ಯಾವುದೇ ಗಾಯ ಕಂಡು ಬಂದಿರುವುದಿಲ್ಲ ಸಣ್ಣ-ಪುಟ್ಟಗಾಯವಾಗಿರಬಹುದು ಅಪಘಾತದಲ್ಲಿ ಒಂದು ಹುಡಗನಿಗೆ ಗಾಯವಾಗಿದ್ದು, ಆತನ ಹೆಸರು ವಿಳಾಸ ವಿಚಾರಿಸಲು ಭಾಗೇಶ ತಂದೆ ತಿರುಪತಿ ನಾಯ್ಕೋಡಿ, ವಯಸ್ಸು 18 ವರ್ಷ, ಜಾತಿ ಕಬ್ಬಲಿಗ, ಉಃ ವಿದ್ಯಾಥರ್ಿ, ಸಾಃ ದೇವಿನಗರ ಶಹಾಪೂರ ಅಂತಾ ಹೇಳಿದ್ದು, ಆತನಿಗೆ ಹಣೆಯ ಮೇಲೆ ಕಟ್ಟಾದ ರಕ್ತಗಾಯ, ಎಡಭುಜಕ್ಕೆ, ಎರಡು ಕೈಗಳಿಗೆ ಎದೆಗೆ ತರಚಿದ ರಕ್ತಗಾಯ, ತಲೆಯ ಹಿಂದೆ ಗುಪ್ತಗಾಯವಾಗಿದ್ದು, ಇದೆ ಹುಡುಗ ಮಹಾಂತೇಶ ಈತನ ಮೋಟರ್ ಸೈಕಲ್ ಹಿಂದುಗಡೆ ಕುಳಿತಿದ್ದ ಹುಡಗನಿರುತ್ತಾನೆ ಅಂತ ತಿಳಿಸಿದರು. ಅಪಘಾತ ಪಡಿಸಿದ ಮೋಟರ್ ಸೈಕಲ್ ನಂ ನೋಡಲಾಗಿ ಕೆಎ-33-ಇ.ಎ-8420 ಇರುತ್ತದೆ ಮತ್ತು ನಮ್ಮ ಮೋಟರ್ ಸೈಕಲ್ ನಂ ಕೆಎ-32-ಇ.ಎಕ್ಸ್-5709 ಇದ್ದು ಎರಡು ವಾಹನಗಳು ಅಪಘಾತದಲ್ಲಿ ಜಖಂಗೊಂಡಿರುತ್ತವೆ. ನಂತರ ನಾವೆಲ್ಲರೂ ಕೂಡಿ ಗಾಯಗೊಂಡ ನನ್ನ ಮಗ ದಶರಥ ಮತ್ತು ಇನ್ನೊಬ್ಬ ಹುಡಗ ಭಾಗೇಶ ಈತನಿಗೆ ಒಂದು ಆಟೋದಲ್ಲಿ ಕೂಡಿಸಿಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಮೋಟರ್ ಸೈಕಲ್ ಸವಾರ ಮಹಾಂತೇಶ ಈತನು ಆಸ್ಪತ್ರೆಗೆ ಬಂದಿದ್ದು, ತನಗೆ ಗಾಯಗಳಾಗಿರುವುದಿಲ್ಲ ಅಂತಾ ಹೇಳಿ ಉಪಚಾರ ಪಡೆದುಕೊಂಡಿರುವುದಿಲ್ಲ. ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಲು ತಿಳಿಸಿದ ಮೇರೆಗೆ ಶಹಾಪೂರ ಸರಕಾರಿ ಆಸ್ಪತ್ರೆಯಿಂದ ಅಂಬುಲೆನ್ಸ ವಾಹನದಲ್ಲಿ ಕರೆದುಕೊಂಡು ಕಲಬುರಗಿಗೆ ಹೋಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ಅದೇ ದಿನ ರಾತ್ರಿ ಸಮಯದಲ್ಲಿ ಕಲಬುರಗಿ ಕುರಾಳ್ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿರುತ್ತೇವೆ ಸದ್ಯ ನನ್ನ ಮಗ ದಶರಥನು ಕುರಾಳ್ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದಾನೆ ನನ್ನ ಮಗನು ಅಪಘಾತದಲ್ಲಿ ಭಾರಿ ಗಾಯಹೊಂದಿದ್ದರಿಂದ ಆತನಿಗೆ ಉಪಚಾರದ ಅತ್ಯವಶ್ಯಕತೆ ಇದ್ದುದ್ದರಿಂದ ಆತನ ಜೊತೆಯಲ್ಲಿಯೇ ಇದ್ದು ಆತನ ಯೋಗಕ್ಷೆಮ ನೋಡಿಕೊಂಡು ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರು ಸಲ್ಲಿಸುತಿದ್ದೇನೆ.ಸದರಿ ಅಪಘಾತಕ್ಕೆ ಕಾರಣಿ ಭೂತನಾದ ಮೋಟರ್ ಸೈಕಲ್ ನಂ ಕೆಎ-33-ಇಎ-8420 ನೇದ್ದರ ಚಾಲಕ ಮಹಾಂತೇಶ ತಂದೆ ಮಹಾದೇವಪ್ಪ ನಾಯ್ಕೋಡಿ, ಸಾಃ ಮಮದಾಪೂರ ಶಹಾಪೂರ ಈತನ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 234/2021 ಕಲಂ 279, 337, 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 


ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 155/2021 ಕಲಂ: 323, 324, 504, 506 ಸಂ 34 ಐಪಿಸಿ : ಇಂದು ದಿನಾಂಕ 20/10/2021 ರಂದು 6.00 ಪಿ.ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಸಾಹೇಬಣ್ಣ ತಂದೆ ಬಸಪ್ಪ ಚಲುವಾದಿ ವ|| 36 ಜಾ|| ಹಿಂದು ಹೊಲೆಯ ಉ|| ಟಿಪ್ಪರ ಚಾಲಕ ಸಾ|| ಆಲಾಳ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನೆಂದರೆ, ನಾನು ಸುಮಾರು 15 ವರ್ಷಗಳ ಹಿಂದೆ ತಾಳಿಕೋಟಿ ತಾಲೂಕಿನ ನೀರಲಗಿ ಗ್ರಾಮದ ಚಂದಮ್ಮ ಇವಳನ್ನು ಮದುವೆ ಮಾಡಿಕೊಂಡಿದ್ದು ಸದ್ಯ ನನಗೆ ನಾಲ್ಕು ವರ್ಷದ ಪ್ರವೀಣ ಅನ್ನುವ ಒಬ್ಬ ಗಂಡು ಮಗನಿರುತ್ತಾನೆ. ನಾನು ಹಾಗು ನನ್ನ ಹೆಂಡತಿ ಚೆನ್ನಾಗಿದ್ದು ಆದರೆ ನನ್ನ ಹೆಂಡತಿಯ ತಮ್ಮ ಪರಸಪ್ಪ ತಂದೆ ಮರೆಪ್ಪ ನೀರಲಗಿ ಸಾ|| ನೀರಲಗಿ, ಹೆಂಡತಿಯ ಅಕ್ಕ ಜಯಶ್ರೀ ಗಂಡ ಹಣಮಂತ್ರಾಯ ಗುಡಿಮನಿ ಸಾ|| ತೆಗ್ಗೆಳ್ಳಿ ಹಾಗು ಹೆಂಡತಿಯ ತಾಯಿ ಗುರವ್ವ ಗಂಡ ಮರೆಪ್ಪ ನೀರಲಗಿ ಸಾ|| ನೀರಲಗಿ ಈ ಮೂರು ಜನರು ನನ್ನ ಮೇಲೆ ವಿನಾಕಾರಣವಾಗಿ ಸಂಶಯ ಮಾಡಿಕೊಂಡು ನೀನು ಸರಿಯಾಗಿ ಸಂಸಾರ ಮಾಡುವದಿಲ್ಲ ಅಂತ ನನ್ನ ಮೇಲೆ ಹಗೆತನ ಸಾಧಿಸುತ್ತಿದ್ದರು. ಹೀಗಿದ್ದು ಇಂದು ದಿನಾಂಕ 20.10.2021 ರಂದು ಬೆಳಿಗ್ಗೆ 9 ಗಂಟೆಗೆ ನಮ್ಮೂರ ಗೌಡಪ್ಪಗೌಡ ತಂದೆ ಭೀಮಣಗೌಡ ಪೊಲೀಸ್ ಪಾಟೀಲ ಇವರು ನನಗೆ ಪೋನ ಮಾಡಿ ನಿನ್ನ ಹೆಂಡತಿಯ ಕಡೆಯವರು ನಮ್ಮ ಮನೆಗೆ ಬಂದಿದ್ದಾರೆ ಬಾ ಅಂತ ತಿಳಿಸಿದಾಗ ನಾನು ಗೌಡರ ಮಾತಿಗೆ ಬೆಲೆಕೊಟ್ಟು ಅವರ ಮನೆಗೆ ಹೋಗಿದ್ದು, ಹೀಗಿರುತ್ತಾ ಗೌಡರು ನಮ್ಮೆಲ್ಲರಿಗೂ ತಿಳಿಸಿ ಹೇಳುತ್ತಿದ್ದಾಗ ಅಲ್ಲಿಯೇ ಇದ್ದ ಅಳಿಯ ಪರಸಪ್ಪ ತಂದೆ ಮರೆಪ್ಪ ನೀರಲಗಿ ಸಾ|| ನೀರಲಗಿ, ಹೆಂಡತಿಯ ಅಕ್ಕ ಜಯಶ್ರೀ ಗಂಡ ಹಣಮಂತ್ರಾಯ ಗುಡಿಮನಿ ಸಾ|| ತೆಗ್ಗೆಳ್ಳಿ ಹಾಗು ಹೆಂಡತಿಯ ತಾಯಿ ಗುರವ್ವ ಗಂಡ ಮರೆಪ್ಪ ನೀರಲಗಿ ಸಾ|| ನೀರಲಗಿ ಈ ಮೂರು ಜನರು ಸೇರಿ ನನಗೆ ಈ ಸೂಳೇ ಮಗನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆಬಡೆ ಮಾಡುತ್ತಾ ಎತ್ತಿ ನೆಲಕ್ಕೆ ಒಗೆದು ಕಾಲಿನಿಂದ ಒದೆಯುತ್ತಿದ್ದಾಗ ಅವರಲ್ಲಿಯ ಅಳಿಯ ಪರಸಪ್ಪ ಈತನು ಅಲ್ಲಿಯೇ ಬಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ನನ್ನ ಎದೆಗೆ ಹೊಡೆದು ಗುಪ್ತಗಾಯ ಪಡಿಸಿದನು. ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ಗೌಡಪ್ಪಗೌಡ ಪೊಲೀಸ್ ಪಾಟೀಲ ಇವರು ಬಂದು ಸದರಿಯವರು ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ನನಗೆ ಹೊಡೆಯುವದನ್ನು ಬಿಟ್ಟು ಮಗನೇ ಇವತ್ತು ಇಷ್ಟಕ್ಕೆ ಬಿಟ್ಟಿದ್ದೇವೆ ಮುಂದೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನಂತರ ನನಗೆ ಎದೆಗೆ ನೋವಾಗುತ್ತಿದ್ದರಿಂದ ನಾನು ನೇರವಾಗಿ ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದು ಉಪಚಾರ ಪಡೆದುಕೊಂಡು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ಮೇಲ್ಕಾಣಿಸಿದ ಮೂರು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಂತ ಕೊಟ್ಟ ಫಿಯಾದಿ ಅಜರ್ಿ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂಬರ 155/2021 ಕಲಂ 323,324,504,506, ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಸಂಚಾರಿ ಪೊಲೀಸ ಠಾಣೆ
ಗುನ್ನೆ ನಂ: 52/2021 ಕಲಂ 279, 337, 338 ಐಪಿಸಿ : ಇಂದು ದಿನಾಂಕ 20/10/2021 ರಂದು ಸಮಯ 07;00 ಪಿ.ಎಂ.ದ ಸುಮಾರಿಗೆ ಯಾದಗಿರಿ ನಗರದ ಲಕ್ಷ್ಮೀ ನಗರದ ಲಕ್ಷ್ಮೀಗುಡಿ ಹತ್ತಿರ ಮುಖ್ಯ ರಸ್ತೆಯ ಮೇಲೆ ಈ ಕೇಸಿನ ಪಿಯರ್ಾದಿ ಗಾಯಾಳು ಇವರು ತಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಡಬ್ಲ್ಯು-8889 ನೇದ್ದರ ಮೇಲೆ ಪ್ರೇರಣಾ ಕಾಲೇಜಿನಿಂದ ಮನೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಯಾದಗಿರಿನಗರದ ಸಿ.ಎಂ. ಪಾಟೀಲ್ ಆಸ್ಪತ್ರೆ ಕಡೆಯಿಂದ ಕಾಡ್ಲೂರ್ ಪೆಟ್ರೋಲ್ ಬಂಕ್ ಕಡೆಗೆ ಹೊರಟಿದ್ದ ಈ ಕೇಸಿನ ಆರೋಪಿತನು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ವಾಯ್-8774 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಪಿಯರ್ಾದಿಯವರ ಮೋಟರು ಸೈಕಲ್ ನೇದ್ದಕ್ಕೆ ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು ಇರುತ್ತದೆ ಈ ಅಪಘಾತದಲ್ಲಿ ಪಿಯರ್ಾದಿಗೆ ಹಾಗೂ ಪಿಯರ್ಾದಿಯವರ ಮೊಟಾರು ಸೈಕಲ್ ಸವಾರನಿಗೆ ಮತ್ತು ಆರೋಪಿತನಿಗೆ ಸಾದಾಗಾಯ ಮತ್ತು ಭಾರೀ ಗುಪ್ತಗಾಯವಾಗಿದ್ದು, ಅಪಘಾತಪಡಿಸಿದ ಮೋಟಾರು ಸೈಕಲ್ ಸವಾರನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಂತಾ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 52/2021 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಕೊಡೆಕಲ್ ಪೊಲೀಸ ಠಾಣೆ
ಗುನ್ನೆ ನಂ: 66/2021 ಕಲಂ: 143, 147, 323, 504, 506, 354 ಖ/ಘ 149 ಕಅ : ಇಂದು ದಿನಾಂಕ:20.10.2021 ರಂದು ರಾತ್ರಿ 9:00 ಗಂಟೆಗೆ ಪಿರ್ಯಾಧಿ ಶ್ರೀಮತಿ ನೀಲಮ್ಮ ಗಂಡ ಹಣಮಂತ್ರಾಯ ಅಗ್ನಿ ವ||37 ವರ್ಷ ಜಾ||ಹಿಂದೂ ಹಂಡೆವಜೀರ ಉ||ಕೂಲಿಕೆಲಸ ಸಾ||ಬೊಮ್ಮಗುಡ್ಡ ತಾ||ಹುಣಸಗಿ ಜಿ||ಯಾದಗಿರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದು ಪಿರ್ಯಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಸದರಿ ಪಿರ್ಯಾದಿಯ ದೂರು ಅಜರ್ಿಯ ಸಾರಾಂಶವೆನೇಂದರೆ ನಾನು ನನ್ನ ಗಂಡ ಮಾವ ಮತ್ತು ಮಕ್ಕಳೊಂದಿಗೆ ಕೂಲಿಕೆಲಸ ಮಾಡಿಕೊಂಡು ಉಪ-ಜೀವನ ಸಾಗಿಸುತ್ತಿದ್ದು ಇರುತ್ತದೆ. ನನ್ನ ಗಂಡನಾದ ಹಣಮಂತ್ರಾಯ ಇವರ ಅಕ್ಕ ಮಲ್ಲಮ್ಮ ಇವರಿಗೆ ಅಗ್ನಿ ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದು ನನ್ನ ನಾದಿನಿಯಾದ ಮಲ್ಲಮ್ಮಳು ತನ್ನ ಗಂಡ ಗೊಲ್ಲಾಳಪ್ಪಗೌಡ ಹಾಗೂ ಮಕ್ಕಳೊಂದಿಗೆ ನಮ್ಮೂರಲ್ಲಿಯೇ ಬೇರೆ ಮನೆ ಮಾಡಿಕೊಂಡು ಈಗ ಸುಮಾರು 20 ವರ್ಷಗಳಿಂದ ಇರುತ್ತಾರೆ. ಹೀಗಿದ್ದು ದಿನಾಂಕ:17.10.2021 ರಂದು ರವಿವಾರ ಬೆಳಿಗ್ಗೆ ನಾನು ಮತ್ತು ನನ್ನ ಗಂಡ ಹಣಮಂತ್ರಾಯ ಇಬ್ಬರೂ ನಮ್ಮ ಹೊಲಕ್ಕೆ ಹೋಗಿ ಸಾಯಂಕಾಲ 6:30 ಪಿಎಮ್ ಗಂಟೆಯ ಸುಮಾರಿಗೆ ನಾವಿಬ್ಬರೂ ನಮ್ಮ ಹೊಲದಲ್ಲಿ ಕೆಲಸ ಮುಗಿಸಿಕೊಂಡು ನಮ್ಮೂರ ಹರಿಜನ ಕೇರಿಯಲ್ಲಿಯ ಚಂದ್ರಮ್ಮ ದೇವಿಯ ಗುಡಿಯ ಹತ್ತಿರದಿಂದ ಮರಳಿ ಮನೆಗೆ ಬರುತ್ತಿರುವಾಗ ಅಲ್ಲಿಯೇ ನಿಂತಿದ್ದ ಸಂಗಪ್ಪ ತಂದೆ ಪೀರಪ್ಪ ಇತನು ನಮ್ಮನ್ನು ನೋಡಿದವನೇ ನಮಗೆ ಲೇ ಹಂಡೆವಜೀರ ಸೂಳೆ ಮಕ್ಕಳೆ ನಿಮ್ಮ ಹೆಂಡತಿಯರ ತುಲ್ಲು ಹಡುತ್ತೇನೆ ಸೂಳೆ ಮಕ್ಕಳೇ ನೀವು ನಮ್ಮ ಮನೆ ಹೆಣ್ಣು ಮಗಳನ್ನು ಓಡಿಸಿಕೊಂಡು ಹೋಗುತ್ತಿರೆನಲೇ ಅಂತ ಬೈಯುತ್ತಿರುವಾಗ ನಾನು ಮತ್ತು ನನ್ನ ಗಂಡ ಹಣಮಂತ್ರಾಯ ರವರು ಸಂಗಪ್ಪ ತಂದೆ ಪೀರಪ್ಪ ಇತನಿಗೆ ನೋಡು ತಮ್ಮ ನಿಮ್ಮ ಮನೆ ಹೆಣ್ಣು ಮಗಳನ್ನು ಯಾರೂ ಓಡಿಸಿಕೊಂಡು ಹೋಗ್ಯಾರ ಅವರ ಮೇಲೆ ಕೇಸು ಮಾಡು ಇಲ್ಲವಾದರೆ ಅವನೊಂದಿಗೆ ತಕರಾರು ಮಾಡು ಸಮಾಜವೆತ್ತಿ ಬೈಯಬೇಡಪ್ಪ ನೀ ಶಿಕ್ಷೆ ಕೊಡುವದಾದರೆ ತಪ್ಪು ಮಾಡಿದವನಿಗೆ ಬಿಟ್ಟು ಇಡಿ ಸಮಾಜಕ್ಕೆ ಬೈದರೆ ಸರಿ ಕಾಣುವದಿಲ್ಲಪ್ಪಾ ಅಂತ ಅಂದಾಗ ಸಂಗಪ್ಪ ತಂದೆ ಪೀರಪ್ಪ ಇತನು ನನ್ನ ಗಂಡನಿಗೆ ಲೇ ಹಂಡೆವಜೀರ ಸೂಳೆ ಮಗನೇ ಹಣಮ್ಯಾ ನಾ ಬೈಯುತ್ತಿನಿ ನೋಡು ನೀವು ಏನು ಶಂಟ ಕಿತೊಗೊಂತಿರಿ ಅಂತ ಅಂದಿದ್ದಲ್ಲದೇ ಅಲ್ಲಿಯೇ ಇದ್ದ ತಮ್ಮ ಸಮಾಜದವರಾದ ತಿರುಪತಿ ತಂದೆ ಶಿವಪ್ಪ, ಮಾಂತೇಶ ತಂದೆ ಈರಗಪ್ಪ ಕಟ್ಟಿಮನಿ, ತಿಮ್ಮಪ್ಪ ತಂದೆ ಮಾನಪ್ಪ, ತಿರುಪತಿ ತಂದೆ ಹಣಮಪ್ಪ, ಪರಸಪ್ಪ ತಂದೆ ಸ್ವಾಮಪ್ಪ, ನಾಗಪ್ಪ ತಂದೆ ಬಸಪ್ಪ, ಪರಮಪ್ಪ ತಂದೆ ಹಣಮಪ್ಪ, ಯಂಕಪ್ಪ ತಂದೆ ಪೀರಪ್ಪ, ಶೇಖಪ್ಪ ತಂದೆ ಈರಗಪ್ಪ ಕಟ್ಟಿಮನಿ ಇವರೆಲ್ಲರಿಗೂ ಕರೆದಿದ್ದು ಇವರೆಲ್ಲರೂ ಗುಂಪಾಗಿ ಬಂದವರೇ ನನಗೆ ಮತ್ತು ನನ್ನ ಗಂಡ ಹಣಮಂತ್ರಾಯ ರವರಿಗೆ ತಡೆದು ನಿಲ್ಲಿಸಿ ಬೋಸಡಿ ಮಕ್ಕಳೇ ನಿಮ್ಮ ಸಮಾಜದವನಾದ ನಿನಗೆ ಅಳಿಯನಾಗಬೇಕಾದ ರಾಮನಗೌಡ ತಂದೆ ಗೊಲ್ಲಾಳಪ್ಪಗೌಡ ಮಾಲಿಪಾಟೀಲ ಇತನು ನನ್ನ ತಮ್ಮ ಗದ್ದೆಪ್ಪನ ಹೆಂಡತಿಯಾದ ಜಯಶ್ರೀ ಇವಳಿಗೆ ಓಡಿಸಿಕೊಂಡು ಹೋಗಿದ್ದಾನೆ ಲೇ ಸೂಳೆ ಮಕ್ಕಳೇ ತಿಂಡಿ ಇದ್ದರ ನಿಮ್ಮ ಹಂಡೆವಜೀರ ಜಾತಿಯವರಿಗೆ ಬಾ ಅಂತ ಹೇಳಲೇ ನಮ್ಮ ತಂಟೆಗೆ ಬಂದರೆ ನಿಮ್ಮ ಮೇಲೆ ಅಟ್ರಾಸಿಟಿ ಕೇಸ್ ಮಾಡುತ್ತೇನೆ ಸೂಳೆ ಮಕ್ಕಳೇ ಅಂತ ಬೈದು ನನಗೆ ಮತ್ತು ನನ್ನ ಗಂಡನನ್ನು ತಳ್ಳಾಡುತ್ತಿರುವಾಗ ನಾನು ಮತ್ತು ನನ್ನ ಗಂಡ ಅವರಿಗೆ ಯಾಕೆ ನಮಗೆ ತಳ್ಳಾಡುತ್ತಿರಿ ಅಂತ ಅಂದಾಗ ಅವರಲ್ಲಿಯ ತಿರುಪತಿ ತಂದೆ ಶಿವಪ್ಪ ಇತನು ನನ್ನ ಗಂಡನಿಗೆ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡಿ ಎಡಕಪಾಳದ ಮೇಲೆ ಕೈಯಿಂದ ಜೋರಾಗಿ ಹೊಡೆದಿದ್ದು ಆಗ ನಾನು ಚೀರಾಡಲು ಸಂಗಪ್ಪ ತಂದೆ ಪೀರಪ್ಪ ಇತನು ನನ್ನ ಕೈ ಹಿಡಿದು ಜಗ್ಗಾಡಿ ಕೂದಲು ಹಿಡಿದು ಎಳೆದಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿದ್ದು ಉಳಿದವರು ತಿರುಪತಿ ಮತ್ತು ಸಂಗಪ್ಪನಿಗೆ ಈ ಸೂಳಿ ನೀಲಿಗೆ ಹಾಗೂ ಆಕೆಯ ಗಂಡ ಹಣಮ್ಯಾನಿಗೆ ಬಿಡಬೇಡಿರಿ ಇವತ್ತು ಸಿಕ್ಕಿದ್ದಾರೆ ಇವರಿಗೆ ಸರಿಯಾಗಿ ಹೊಡೆದು ಮೈ ಮೆತ್ತಗೆ ಮಾಡಿರಿ ಅಂತ ಒದರಾಡ ಹತ್ತಿದ್ದು ಆಗ ನಾನು ನನಗೆ ಮತ್ತು ನನ್ನ ಗಂಡನಿಗೆ ಉಳಿಸಿರಪ್ಪೋ ಅಂತ ಚೀರಾಡಲು ಅಲ್ಲಿಂದಲೇ ಹೋಗುತ್ತಿದ್ದ ನಮ್ಮೂರವರಾದ ಗದ್ದೆಪ್ಪ ತಂದೆ ಬಸಣ್ಣ ಜಾಲಹಳ್ಳಿ, ಮಾನಾಪತಿ ತಂದೆ ಬಸಪ್ಪ ಚಿಂಚೋಡಿ, ಯಮನಪ್ಪ ತಂದೆ ಹಣಮಪ್ಪ ಮಾರಲಬಾವಿ, ಮುದಕಪ್ಪ ತಂದೆ ಮಾದೇವಪ್ಪ ಜಾಲಹಳ್ಳಿ, ನೀಲಕಂಠರಾಯ ತಂದೆ ಮುದ್ದಣ್ಣ ಗುಳಬಾಳ, ತೊರೆಪ್ಪ ತಂದೆ ಸಿದ್ದಣ್ಣ ಜಗಲರ, ಚಂದ್ರಶೇಖರ ತಂದೆ ಹಣಮಂತ್ರಾಯ ಕದರಾಪೂರ ಇವರುಗಳು ಬಂದು ನೋಡಿ ಬಿಡಿಸಿದ್ದು ಹೋಗುವಾಗ ಅವರೆಲ್ಲರೂ ನನಗೆ ಮತ್ತು ನನ್ನ ಗಂಡ ಹಣಮಂತ್ರಾಯನಿಗೆ ಲೇ ಬೋಸಡಿ ಸೂಳೆ ಮಕ್ಕಳೆ ಇವತ್ತು ನಿಮಗೆ ಜೀವಂತ ಬಿಟ್ಟಿದ್ದಿವಿ ನೀವೆನಾದರೂ ಪೊಲೀಸ್ ಕೇಸು-ಗೀಸು ಅಂತ ಮಾಡಿದರೆ ನಿಮ್ಮನ್ನ ಜೀವಂತ ಬಿಡುವದಿಲ್ಲ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು, ನಂತರ ನಾನು ಮತ್ತು ನನ್ನ ಗಂಡ ನಮ್ಮ ಊರಿನಲ್ಲಿಯ ನಮ್ಮ ಸಮಾಜದ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಮ್ಮ ಠಾಣೆಗೆ ತಡವಾಗಿ ಬಂದು ದೂರು ಕೊಡುತ್ತಿದ್ದು. ಈ ಘಟನೆಯಲ್ಲಿ ನನಗೆ ಮತ್ತು ನನ್ನ ಗಂಡನಿಗೆ ಯಾವುದೇ ಗಾಯ ವಗೈರೆ ಆಗಿರುವದಿಲ್ಲ, ನಾವು ಉಪಚಾರಕ್ಕಾಗಿ ಆಸ್ಪತ್ರೆಗೆ ಹೋಗುವದಿಲ್ಲ ನನಗೆ ಮತ್ತು ನನ್ನ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ನನಗೆ ಮಾನಭಂಗ ಮಾಡಲು ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ ಮೇಲೆ ನಮೂದಿಸಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತಾ ನೀಡಿದ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ.66/2021 ಕಲಂ: 143, 147, 323, 504, 506, 354 ಖ/ಘ 149 ಕಅ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 21-10-2021 01:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080