ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 21-10-2022
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 118/2022 ಕಲಂ: 279, 337, 338 ಐಪಿಸಿ ಸಂಗಡ 304 (ಎ) ಅಳವಡಿಸಿಕೊಳ್ಳಲಾಗಿದೆ: ಇಂದು ದಿನಾಂಕ : 20/10/2022 ರಂದು 12-30 ಪಿಎಮ್ ಕ್ಕೆ ಶ್ರೀ ನಾಗೇಂದ್ರಪ್ಪ ತಂದೆ ಸಾಯಬಣ್ಣ ಅಗಸರ. ವ:60 ಜಾತಿ: ಅಗಸರ ಉ:ಒಕ್ಕಲುತನ ಸಾ:ಉಳ್ಳೆಸೂಗೂರು ಇವರು ಪೊಲೀಸ್ ಠಾಣೆಗೆ ಹಾಜರಾಗಿ ಪುರವಣಿ ಹೇಳಿಕೆ ಕೊಟ್ಟಿದ್ದರ ಸಾರಾಂಶವೇನೆಂದರೆ ದಿನಾಂಕ: 07/10/2022 ರಂದು 6-30 ಪಿಎಮ್ ಸುಮಾರಿಗೆ ಯಾದಗಿರಿ-ವಡಗೇರಾ ಮೇನ್ ರೋಡ ಆನಂದ ಮಿಲ್ಟ್ರಿ ಇವರ ಹೊಲದ ಹತ್ತಿರ ಜರುಗಿದ ಎರಡು ಮೋಟರ ಸೈಕಲ್ಗಳ ಮುಖಾಮುಖಿ ಢಿಕ್ಕಿಯಲ್ಲಿ ಭಾರಿ ಗಾಯಗೊಂಡಿದ್ದ ನನ್ನ ಮಗ ರವಿಕುಮಾರ ತಂದೆ ನಾಗೇಂದ್ರಪ್ಪ ಅಗಸರ ಈತನು ಕಲಬುರಗಿ ಯುನೈಟೆಡ್ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ತನಗಾದ ಭಾರಿ ಗಾಯಗಳ ಭಾದೆಯಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ:20/10/2022 ರಂದು 9-30 ಎಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ. ಕಲಬುರಗಿ ಯುನೈಟೆಡ್ ಆಸ್ಪತ್ರೆಯವರು ಡೆತ್ ಎಮ್ಎಲ್ಸಿ ಮಾಡಿಸಿರುತ್ತಾರೆ. ಮುಂದಿನ ಕ್ರಮ ಜುರುಗಿಸಿ ಎಂದು ಪುರವಣಿ ಹೇಳಿಕೆ ಕೊಟ್ಟಿದ್ದು ಸದರಿ ಪುರವಣಿ ಹೇಳಿಕೆ ಸಾರಾಂಶದ ಮೇಲಿಂದ ಈಗಾಗಲೇ ದಾಖಲಾದ ವಡಗೇರಾ ಠಾಣಾ ಗುನ್ನೆ ನಂಬರ:118/2022 ಕಲಂ: 279, 337, 338 ಐಪಿಸಿ ಪ್ರಕರಣದಲ್ಲಿ ಕಲಂ: 304 (ಎ) ಐಪಿಸಿ ಅಳವಡಿಸಿಕೊಳ್ಳುವಂತೆ ಮಾನ್ಯ ನ್ಯಾಯಲಯಕ್ಕೆ ಪತ್ರ ಬರೆದುಕೊಂಡು ತನಿಖೆ ಕೈಕೊಳ್ಳಲಾಗಿದೆ ಅಂತಾ ವಿನಂತಿ.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 153/2022. ಕಲಂ. 143, 147, 148, 341, 323, 324, 504, 506 ಸಂಗಡ 149 ಐ.ಪಿ.ಸಿ. ಕಾಯ್ದೆ: ಇಂದು ದಿನಾಂಕ 20/10/2022 ರಂದು ಸಾಯಂಕಾಲ 6-30 ಗಂಟೆಗೆ ಫಿರ್ಯಾಧಿದಾರನಾದ ದೇವರಾಮ ತಂದೆ ಶಂಕರ ರಾಠೋಡ ವ|| 22 ವರ್ಷ ಜಾ||ಲಮಾಣಿ ಉ||ಒಕ್ಕಲುತನ ಸಾ||ಕಂಚಗಾರಹಳ್ಳಿ ಇವರು ದೂರು ಅಜರ್ಿ ಹಾಜರು ಪಡಿಸಿದ್ದು ಸದರಿ ದೂರು ಅಜರ್ಿ ಸಾರಂಶವೆನೆಂದರೆ, ನಿನ್ನೆ ದಿನಾಂಕ:19-10-2022 ರಂದು ಸಮಯ ಬೆಳಗ್ಗೆ 08-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ತಂದೆ ಶಂಕರ ರಾಠೋಡ ಕೂಡಿಕೊಂಡು ನಮ್ಮ ಹೊಲದಲ್ಲಿರುವ ಕಟ್ಟಿಗೆಗಳನ್ನು ತಂದರಾಯಿತು ಅಂತ ಹೇಳಿ ಟ್ರ್ಯಾಕ್ಟ್ರ ತೆಗೆದುಕೊಂಡು ಹೋಗುತ್ತಿರುವಾಗ ನಮ್ಮ ತಾಂಡದ ಶ್ರೀ ಗೋಪಾಲ ತಂದೆ ಹಣಮಂತ ರಾಠೋಡ ಇವರ ಮನೆಯ ಮುಂದೆ ಹೋಗುತ್ತಿರುವಾಗ ನಮ್ಮ ಅಣ್ಣ ತಮ್ಮಕಿಯವರಾದ 1) ರಾಮು ತಂದೆ ಈಶ್ವರ ರಾಠೋಡ 2) ವಿಜ್ಜು ತಂದೆ ಈಶ್ವರ ರಾಠೋಡ 3) ದಿನೇಶ ತಂದೆ ರಾಮು ರಾಠೋಡ 4) ಕರಣ ತಂದೆ ವಿಜ್ಜು ರಾಠೋಡ 5) ಮೋತಿಲಾಲ ತಂದೆ ಮಾನಸಿಂಗ ರಾಠೋಡ 6) ಚೌಳಿಬಾಯಿ @ ಚಾಯಿ ಬಾಯಿ ಗಂಡ ರಾಮು ರಾಠೋಡ 7) ಸೀತಾ @ ಸೀತಿಬಾಯಿ ಗಂಡ ಈಶ್ವರ 8)ಸುನ್ನಿಬಾಯಿ @ ಸೋನಿಬಾಯಿ ಗಂಡ ವಿಜ್ಜು ರಾಠೋಡ 9) ಕಮಲಿಬಾಯಿ ಗಂಡ ಮಾನಸಿಂಗ ರಾಠೋಡ 10) ಜೋತಿ ತಂದೆ ವಿಜ್ಜು ರಾಠೋಡ ಸಾ|| ಎಲ್ಲರು ಕಂಚಗಾರಹಳ್ಳಿ ತಾಂಡ ಇವರೇಲ್ಲರು ಗುಂಪು ಕಟ್ಟಿಕೊಂಡು ಬಂದು ನಾವು ಹೋಗುತ್ತಿರುವ ಟ್ರ್ಯಾಕ್ಟರ ಅಡ್ಡಗಟ್ಟಿ ನೀಲ್ಲಿಸಿ ಬೋಸಡಿ ಮಕ್ಕಳೇ, ರಂಡಿ ಮಕ್ಕಳೇ, ನಿಮಗೆ ಎಷ್ಟು ಸಾರಿ ಹೇಳ ಬೇಕು ಆ ಹೊಲದ್ದಲಿನ ಕಟ್ಟಿಗೆಗಳು ತರಬಾರದು ಅಂತ ಹೇಳಿದರು ತರತಿರೇನಲೇ ನಿಮಗ ಸೊಕ್ಕು ಜಾಸ್ತಿ ಇದೇ ಇವತ್ತು ಒಂದು ಗತಿ ಕಾಣಿಸುತ್ತೆವೆ ಅಂತ ಅವಚ್ಯಾವಾಗಿ ಬೈಯುತ್ತಾ ಬಂದವರೇ ಅವರಲ್ಲಿ ವಿಜ್ಜು ಇತನು ತನ್ನ ಕೈಯಲ್ಲಿ ರಾಡು ತೆಗೆದುಕೊಂಡು ಬಂದು ನಮ್ಮ ತಂದೆ ಶಂಕರನ ತೆಲೆ ಮತ್ತು ಮೂಗಿಗೆ ರಾಡಿನಿಂದ ಹೊಡೆಯುತ್ತಿರುವಾಗ ನಾನು ನಮ್ಮ ತಂದೆಗೆ ಯಾಕೇ ಹೊಡಿಯುತಿದಿ ಅಂತ ಅಂದಾಗ ನಿಂದೇನು ಸೊಕ್ಕು ಸೊಳೇ ಮಗನೆ ಅಂತ ಹೇಳಿ ಕರಣ ಮತ್ತು ರಾಮು ಇಬ್ಬರು ಕೂಡಿಕೊಂಡು ಕೈಯಲ್ಲಿ ಕಟ್ಟಿಗೆ ಬಡಿಗೆ ಹಿಡಿದುಕೊಂಡು ಬಂದವರೇ ಇವತ್ತು ಯಾಂಗಾದರು ಇಬ್ಬರೇ ಸಿಕ್ಕಿರಿ ಸೂಳೇ ಮಕ್ಕಳೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತ ಹೇಳಿ ನೇಲಕ್ಕೆ ಹಾಕಿ ಕಾಲಿನಿಂದ ಒದ್ದು ಮನ ಬಂದಂತೆ ಹೊಡೆಯುತ್ತಿರುವಾಗ ನಾವು ಚಿರಾಡುವದನ್ನು ಕೇಳಿದ ನನ್ನ ಹೆಂಡತಿ ಓಡೋಡಿ ಬಂದು ಯಾಕೇ ಹೊಡೆಯುತ್ತಿರಿ ಅಂದಾಗ ಈ ರಂಡಿದು ಬಹಳ ಆಗ್ಯಾದ ಅಂತ ಹೇಳಿ ದಿನೇಶ, ಮೋತಿಲಾಲ್, ಚೌಳಿಬಾಯಿ, ಸುನ್ನಿಬಾಯಿ, ಸೀತಿಬಾಯಿ, ಕಮಲಿಬಾಯಿ ಮತ್ತು ಜೋತಿಬಾಯಿ ಇವರೇಲ್ಲರು ಕೂಡಿಕೊಂಡು ಇವತ್ತು ಈ ಸೂಳೇ ಮಕ್ಕಳಿಗೆ ಬೀಡೊದು ಬ್ಯಾಡ ಜೀವ ಸಹಿತಿ ಖಲಾಸ ಮಾಡಬೇಕು ಅಂತ ಹೇಳಿ ನಮಗೆ ನೆಲಕ್ಕೆ ಹಾಕಿ ಕಟ್ಟಿಗೆಯಿಂದ, ರಾಡಿನಿಂದ, ಮತ್ತು ಕೈ ಹಾಗು ಕಾಲಿನಿಂದ ಒದ್ದು ಗುಪ್ತಗಾಯ ಮಾಡಿರುತ್ತಾರೆ ನನ್ನ ಹೆಂಡತಿಗೆ ಕಮಲಿಬಾಯಿ ಮತ್ತು ಜೋತಿ, ಸೀತಿಬಾಯಿ ಇವರು ತೆಲೆ ಕೂದಲು ಹಿಡಿದು ಎಳದಾಡಿ ಹೊಡೆದಿರುತ್ತಾರೆ. ಜಗಳದಲ್ಲಿ ನನಗೆ ಬೇನ್ನಿಗೆ ಮತ್ತು ಮುಖದ ಎಡಗಡೆಗೆ, ಹಾಗು ತೆಲೆಗೆ ಹೊಡೆದು ಗುಪ್ತಗಾಯ ಮಾಡಿರುತ್ತಾರೆ. ಅಂತ ಫಿರ್ಯಾಧಿ ದೂರು ಇರುತ್ತದೆ.
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 154/2022 ಕಲಂ: 143,147,148,323,324,504,506 ಸಂ.149 ಐಪಿಸಿ: ಆಸ್ತಿಯ ವಿಷಯದಲ್ಲಿ ಹಾಗೂ ಎತ್ತುಗಳನ್ನು ಆರೋಪಿ ಭೀಮಶಪ್ಪನ ಮನೆಯ ಅಂಗಳದಲ್ಲಿ ಬಿಟ್ಟ ವಿಷಯಕ್ಕೆ ಈ ಪ್ರಕರಣದಲ್ಲಿ ಆಪಾದಿತರೆಲ್ಲರೂ ಕೂಡಿ ಅಕ್ರಮಕೂಟವನ್ನು ಕಟ್ಟಿಕೊಂಡು ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ಬಂದವರೆ ಫಿಯರ್ಾದಿ ಹಾಗೂ ಆತನ ಕುಟುಂಬದವರೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಬಡಿಗೆಯಿಂದ ಹೊಡೆಬಡೆ ಮಾಡಿ ರಕ್ತ ಮತ್ತು ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿ ಹೋಗಿರುವ ಬಗ್ಗೆ ದೂರು.
ಹುಣಸಗಿವ ಪೊಲೀಸ್ ಠಾಣೆ:-
ಗುನ್ನೆ ನಂ: ಕಲಂ. 279 337 338 ಐಪಿಸಿ:ದಿನಾಂಕ:19/10/2022 ರಂದು ಮದ್ಯಾಹ್ನ 12.30 ಪಿ.ಎಮ್ ಸುಮಾರಿಗೆ ಫಿರ್ಯಾದಿಯ ಚಿಕ್ಕಪ್ಪನಾದ ಸುಬ್ಬಣ್ಣ & ಸುಬ್ಬಣ್ಣನ ಹೆಂಡತಿ ಲಕ್ಷ್ಮೀಬಾಯಿ ಕೂಡಿ ಸೊನ್ನಾಪೂರ ತಾಂಡಾಕ್ಕೆ ಹೋಗಲು ಮೋಟಾರ್ ಸೈಕಲ್ ನಂ: ಕೆಎ-33 ಇಸಿ-2579 ನೇದ್ದರ ಮೇಲೆ ಹುಣಸಗಿ-ಕೆಂಭಾವಿ ರೋಡಿನ ಮೇಲೆ ಗುಂಡಲಗೇರಾ ಕ್ರಾಸ್ ದಾಟಿ ಹುಣಸಗಿಗೆ ಕಡೆಗೆ ಹೊರಟಾಗ, ಎದುರುಗಡೆಯಿಂದ ಒಂದು ಕ್ಯಾಂಟರ್ ನಂ: ಕೆಎ-63, 1455 ನೇದ್ದರ ಚಾಲಕನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಎಡಗಡೆ ಹೋಗುವದು ಬಿಟ್ಟು ಬಲಗಡೆಗೆ ಬಂದು ನಿಯಂತ್ರಣ ತಪ್ಪಿ ಗಾಯಾಳು ಸುಬ್ಬಣ್ಣ ಈತನು ಚಲಾಯಿಸುವ ಮೋಟಾರ್ ಸೈಕಲ್ಗೆ ಜೊರಾಗಿ ಡಿಕ್ಕಿ ಕೊಟ್ಟಿದ್ದರಿಂದ ಗಾಯಾಳು ಇಬ್ಬರೂ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದು ಗಾಯಾಳುದಾರರಿಬ್ಬರಿಗೂ ಭಾರಿ & ಸಾದಾ ರಕ್ತಗಾಯಳಾದ ಬಗ್ಗೆ ಅಪರಾಧ.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 177/2022 ಕಲಂ: 341, 323, 324, 307, 504, 506 ಸಂಗಡ 34 ಐಪಿಸಿ.: ಇಂದು ದಿನಾಂಕ: 20/10/2022 ರಂದು 6-00 ಪಿ.ಎಮ್ ಕ್ಕೆ ಪಿರ್ಯಾದಿ ಶ್ರೀ ರಾಜು ತಂದೆ ಭೀಮರಾಯ ಸಗರ ವಯಾ: 21 ಉ: ಕೂಲಿಕೆಲಸ ಜಾತಿ: ಕಬ್ಬಲಿಗ, ಸಾ:ಗುತ್ತಿಪೇಠ ಶಹಾಪೂರ ರವರು ಠಾಣೆಗೆ ಹಾಜರಾಗಿ ಪಿರ್ಯಾದಿ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ, ನಾನು ರಾಜ್ಯ ಮಟ್ಟದ ಕುಸ್ತಿ ಪಟು ಇರುತ್ತೇನೆ. ನಾನು ಆಗಾಗ ನಮ್ಮ ಮನೆಯ ದೇವರಾದ ಗುತ್ತಿಪೇಠದ ಮರೆಮ್ಮ ದೇವಸ್ಥಾನಕ್ಕೆ ಹೋಗಿ ಬರುವುದು ಮಾಡುತ್ತಿದ್ದೇನು. ದೇವಸ್ಥಾನಕ್ಕೆ ಹೋಗಿ ಬರುವಾಗ ಶಹಾಪೂರ ನಗರದ ಆರೀಪನು ನನ್ನ ಜೋತೆ ಬಾಯಿ ಮಾತಿನಿಂದ ಜಗಳ ತೆಗೆದು ಜಗಳ ಮಾಡಿರುತ್ತಾನೆ. ಇನ್ನೊಮ್ಮ ಈ ಕಡೆ ಬಂದರೆ ನಿನಗೆ ಬಿಡುವುದಿಲ್ಲ ಅಂತಾ ಆರೀಪನು ಬೇದರಿಕೆ ಹಾಕಿರುತ್ತಾನೆ, ನಾನು ನಮ್ಮ ಮನೆಯ ದೇವರು ಇದೆ, ನಾನು ಬಂದು ಹೋಗುವದು ಮಾಡುತ್ತೆನೆ ಅಂತಾ ಅಂದು ದೇವಸ್ಥಾನಕ್ಕೆ ಬಂದು ಹೋಗುವದು ಮಾಡುತ್ತಿದ್ದೇನು. ಆವಾಗಿನಿಂದಲೂ ಇಲ್ಲಿಯವರೆಗೆ ಆರೀಪನು ನನ್ನ ಮೇಲೆ ಹಗೆತನ ಸಾಧಿಸುತ್ತಿದ್ದನು.
ಹೀಗಿದ್ದು ಇಂದು ದಿನಾಂಕ 20/10/2022 ರಂದು ಬೆಳಿಗ್ಗೆ 09.10 ಗಂಟೆಗೆ ನಾನು ನಮ್ಮ ಮನೆಯ ದೇವರಾದ ಗುತ್ತಿಪೇಠ ಏರಿಯಾದ ಮರೆಮ್ಮ ಗುಡಿಗೆ ನಮಸ್ಕಾರ ಮಾಡುವ ಸಲುವಾಗಿ ಮರೆಮ್ಮ ಗುಡಿ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಶಹಾಪೂರ ನಗರದ ಆರೀಪ್ನು ತನ್ನ ಸಂಗಡ ಇತರ 3 ಜನರನ್ನು ಕೂಡಿಕೊಂಡು ಬಂದವರೇ ಮಗನೇ ಮರೆಮ್ಮ ದೇವಸ್ಥಾನಕ್ಕೆ ಬಂದಾಗ ನನ್ನ ಜೋತೆ ನೀನು ಜಗಳ ಆಡುತ್ತಿ ಸೂಳೆ ಮಗನೆ ನಿನ್ನದು ಬಹಾಳ ಆಗಿದೆ ಅಂತಾ ಎಲ್ಲರೂ ಕೂಡಿ ನನಗೆ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ, ತಲೆಗೆ ಹೊಡೆಯುತ್ತಿದ್ದರು ಯಾಕೆ ನನಗೆ ಸುಮ್ನೆ ಹೊಡೆಯುತ್ತಿರಿ ಅಂತಾ ಕೇಳಿದಾಗ ಎಲಾ ಸೂಳೆ ಮಗನೆ ನಿಂದು ಬಹಾಳ ಸೊಕ್ಕು ಬಂದಿದೆ ಇವತ್ತು ನಿನಗೆ ಬಿಡುವುದಿಲ್ಲ ಅಂತಾ ಅಂದವರೆ ಎಲ್ಲರೂ ಕೂಡಿ ನನಗೆ ನೆಲಕ್ಕೆ ಹಾಕಿ ಕಾಲಿನಿಂದ ಒದ್ದು ಮತ್ತು ಕೈಯಿಂದ ಹೊಡೆಯುತ್ತಾ, ಅವರಲ್ಲಿಯ ಆರೀಪನು ನನಗೆ ಕೊಲೆ ಮಾಡುವ ಉದ್ದೇಶದಿಂದ ತನ್ನಲ್ಲಿದ್ದ ಮಚ್ಚಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಆಗ ನಾನು ನೇಲಕ್ಕೆ ಬಿದ್ದು ಚಿರಾಡುವಾಗ ಅಲ್ಲೇ ಇದ್ದ ನಮ್ಮ ಸಂಬಂದಿಕನಾದ ತಿಪ್ಪಣ್ಣ ತಂದೆ ನಿಂಗಪ್ಪ ಕೊಡಮನಳ್ಳಿ ವಯಾ: 28 ಸಾ: ಗುತ್ತಿಪೇಠ ಶಹಾಪೂರ ಹಾಗು ಶಿವುಕುಮಾರ ತಂದೆ ಭೀಮರಾಯ ಶಿರವಾಳ ವಯಾ: 28 ಸಾ: ಶಖಾಪೂರ ಇವರಿಬ್ಬರೂ ನನಗೆ ಹೊಡೆಯುವುದನ್ನು ನೋಡಿ ಬಿಡಿಸಿಕೊಂಡು ನಂತರ ಅವರೆಲ್ಲರೂ ಇನ್ನೋಮ್ಮೆ ನಮ್ಮ ಕೈಯಲ್ಲಿ ಸಿಕ್ಕರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿ ಹೋದರು. ನಂತರ ತಿಪ್ಪಣ್ಣ ಮತ್ತು ಶಿವುಕುಮಾರ ಇಬ್ಬರೂ ನಾನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇರಿಕೆ ಆಗಿ ಉಪಚಾರ ಪಡೆದುಕೊಂಡು ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿದ್ದು ಇರುತ್ತದೆ.
ಕಾರಣ ನನಗೆ ವಿನಾಕಾರಣ ಮೇಲೆ ಹೇಳಿದ 4 ಜನರು ತಡೆದು ನಿಲ್ಲಿಸಿ ಕೈಯಿಂದ ಮತ್ತು ಕಾಲಿನಿಂದ ಒದ್ದು, ಕೊಲೆ ಮಾಡುವ ಉದ್ದೇಶದಿಂದ ಆರೀಪನು ತನ್ನಲ್ಲಿದ್ದ ಮಚ್ಚಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿ ಅವಾಚ್ಯವಾಗಿ ಬೈದ್ದು ಜೀವ ಬೇದರಿಕೆ ಹಾಕಿದ್ದು. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಪಿರ್ಯಾದಿ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 177/2022 ಕಲಂ: 341, 323, 324, 307, 504, 506 ಸಂಗಡ 34 ಐಪಿಸಿ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಗೋಗಿ ಪೊಲೀಸ ಠಾಣೆ:-
ಗುನ್ನೆ ನಂ: 77/2022 78(3) ಕೆ.ಪಿ.ಆ್ಯಕ್ಟ್: ಇಂದು ದಿನಾಂಕ: 20/10/2022 ರಂದು 04.45 ಪಿ.ಎಮ್ ಕ್ಕೆ ಚನ್ನೂರ ಕೆ ಗ್ರಾಮದ ರೇವಣಸಿದ್ದೇಶ್ವರ ಗುಡಿಯ ಮುಂದೆ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ಸಿಪಿಐ ಸಾಹೇಬರು ಶಹಾಪೂರ ರವರ ಮಾರ್ಗದರ್ಶನದಲ್ಲಿ, ಶ್ರೀ. ಅಯ್ಯಪ್ಪ ಪಿ.ಎಸ್.ಐ (ಕಾ&ಸು) ರವರು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ 05.35 ಪಿಎಮ್ ಕ್ಕೆ ದಾಳಿ ಮಾಡಿ ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ದೇವಿಂದ್ರಪ್ಪ ತಂದೆ ಸಂಗಣ್ಣ ಜಂಗಳಿ ವಯಾ:32 ಉ: ಕೂಲಿ ಜಾ: ಲಿಂಗಾಯತ ಸಾ: ಚನ್ನೂರ ಕೆ, ತಾ:ಶಹಾಪೂರ ಜಿ: ಯಾದಗಿರಿ ಈತನಿಗೆ ಹಿಡಿದು ಸದರಿಯವನಿಂದ ನಗದು ಹಣ 470/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ 05.35 ಪಿಎಮ್ ದಿಂದ 06.35 ಪಿ.ಎಮ್ ವರೆಗೆ ಪಂಚನಾಮೆ ಮೂಲಕ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ. ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 77/2022 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ