ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 21-11-2021

ಯಾದಗಿರಿ ನಗರ ಪೊಲೀಸ ಠಾಣೆ
ಗುನ್ನೆ ನಂ 121/2021 ಕಲಂ 379 ಐಪಿಸಿ : ಫಿಯರ್ಾಧಿ ಸಾರಾಂಶವೇನೆಂದರೆ, ನಾನು ಎಲ್.ಎನ್.ಟಿ ಫೈನಾನ್ಸ್ ಯಾದಗಿರಿಯಲ್ಲಿ ಮಹೇಂದ್ರ ಟ್ರ್ಯಾಕ್ಟರ್ ತೆಗೆದುಕೊಂಡಿದ್ದು, ಅದರ ಮೇಲೆ ಇದ್ದ ಸಾಲದ ಕಂತು 6 ತಿಂಗಳಿಗೊಮ್ಮೆ ಕಟ್ಟಬೇಕಾಗಿರುತ್ತದೆ. ಸದರಿ ಕಂತು ಜಮಾ ಕಟ್ಟಲು ನಿನ್ನೆ ದಿನಾಂಕ 19/11/2021 ರಂದು ನಾನು ಮನೆಯಿಂದ 40,000/- ರೂಪಾಯಿ ಹಣ ತೆಗೆದುಕೊಂಡು ಬಂದಿದ್ದೆನು. ನನ್ನ ಹೆಂಡತಿಯಾದ ಶ್ರೀದೇವಿಯವರು ಬಿ.ಜೆ.ಪಿ ಪಕ್ಷದಲ್ಲಿ ರಾಜಕೀಯ ಮಹಿಳಾ ಕಾರ್ಯಕತರ್ೆಯಾಗಿ ಕೆಲಸ ಮಾಡುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ 19/11/2021 ರಂದು ಸಾಯಂಕಾಲ 05-00 ಗಂಟೆಯ ಸುಮಾರಿಗೆ ಯಾದಗಿರಿ ನಗರದ ವನಿಕೇರಿ ಲೇಔಟ್ದಲ್ಲಿ ಬಿ.ಜೆ.ಪಿ ಪಕ್ಷದ ವತಿಯಿಂದ ಜನಸ್ವರಾಜ ಸಮಾವೇಶ ಇತ್ತು. ಸದರಿ ಕಾರ್ಯಕ್ರಮಕ್ಕೆ ನಾನು ಮತ್ತು ನನ್ನ ಹೆಂಡತಿ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಕಾರ್ಯಕ್ರಮ ಮುಗಿದು ಪಕ್ಷದ ಮುಖಂಡರು ತೆರಳುವ ಕಾಲಕ್ಕೆ ಜನರ ನೂಕು ನುಗ್ಗಲಿನಲ್ಲಿ ನನ್ನ ಪ್ಯಾಂಟಿನ್ ಜೇಬಿನಲ್ಲಿ ಇದ್ದ ನಗದು ಹಣ 40,000/- ರೂಪಾಯಿಗಳು ಯಾರೋ ಕಳ್ಳರು ತೆಗೆದುಕೊಂಡು ಹೋಗಿರುತ್ತಾರೆ. ನಂತರ ನಾನು ನೋಡಿಕೊಂಡಾಗ ಗೊತ್ತಾಗಿದ್ದು, ಅಲ್ಲೆ ಇದ್ದ ನನ್ನ ಪತ್ನಿ ಹಾಗೂ ನನ್ನ ಗೆಳೆಯರಾದ ಮರೆಪ್ಪ ಕಟ್ಟಿಮನಿ ಮತ್ತು ಶರಣಗೌಡ ಪೊಲೀಸ್ ಪಾಟೀಲ್ ಶೇಟ್ಟಿಹಳ್ಳಿ ಇವರಿಗೆ ವಿಷಯ ತಿಳಿಸಿದೆನು. ಆಗ ಸಮಯ ಸಂಜೆ 6-30 ಗಂಟೆಯಾಗಿತ್ತು. ನಂತರ ಎಲ್ಲರು ಕೂಡಿ ಸುತ್ತಾ ಮುತ್ತಾ ಹಾಗೂ ಎಲ್ಲಾ ಕಡೆ ಹುಡುಕಾಡಿದರು ನಮ್ಮ ಹಣ ತೆಗೆದುಕೊಂಡವರ ಸುಳಿವು ಸಿಗಲಿಲ್ಲ. ಮನೆಯಲ್ಲಿ ವಿಚಾರಣೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ತಾವುಗಳು ಕಳ್ಳತನವಾದ ನನ್ನ ಹಣವನ್ನು ಪತ್ತೆ ಮಾಡಿ, ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 121/2021 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 241/2021 ಕಲಂ 87 ಕೆ.ಪಿ. ಆಕ್ಟ : ಇಂದು ದಿನಾಂಕ:20-11-2021 ರಂದು 6:30. ಎ.ಎಮ್.ಕ್ಕೆ ಸಕರ್ಾರಿ ತಫರ್ೆ ಫಿರ್ಯಾದಿ ಶ್ರೀ ಚಂದ್ರಕಾಂತ ಪಿ.ಎಸ್.ಐ. (ಕಾಸು) ಶಹಾಪುರ ಪೊಲೀಸ ಠಾಣೆ ರವರು ಒಂದು ವರದಿಯೊಂದಿಗೆ ಜಪ್ತಿ ಪಂಚನಾಮೆ, ಮುದ್ದೆಮಾಲು ಮತ್ತು 8 ಜನರು ಆರೋಪಿತರನ್ನು ಹಾಜರು ಪಡಿಸಿ ಕ್ರಮ ಜರುಗಿಲು ಸೂಚಿಸಿದ್ದು ಏನಂದರೆ , ಇಂದು ದಿನಾಂಕ 20-11-2021 ರಂದು ನಸುಕಿನಜಾವ 4:00 ಎ.ಎಮ್.ಕ್ಕೆ ಶಹಾಪುರ ನಗರದಲ್ಲಿ ರಾತ್ರಿಗಸ್ತು ಕರ್ತವ್ಯದಲ್ಲಿ ಪೆಟ್ರೋಲಿಂಗದಲ್ಲಿದ್ದಾಗ ಶಹಾಪೂರ ತಾಲೂಕಿನ ರಸ್ತಾಪುರ ಗ್ರಾಮದ ಶರಭಣ್ಣ ತಂದೆ ಅಮರಪ್ಪ ಅಂಗಡಿಯವರ ಹೊಟೆಲ ಮುಂದೆ ಅಂಗಡಿ ಪೂಜೆ ರಾತ್ರಿ ವೇಳೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ಕೆಲವು ಜನರು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದಿದ್ದು ದಾಳಿ ಕುರಿತು ಹೋಗುವ ಸಲುವಾಗಿ ರಾತ್ರಿ ಗಸ್ತು ಸಿಬ್ಬಂದಿಯವರಾದ ಮುತ್ತಪ್ಪ ಪಿ.ಸಿ.118, ಲಕ್ಕಪ್ಪ ಪಿ.ಸಿ.163, ಗುರುಶೇಖರ ಪಿ.ಸಿ.186 ಬಸವರಾಜ ಪಿ.ಸಿ. 346, ರಾಮಚಂದ್ರ ಪಿ.ಸಿ. 266 ರವರಿಗೆ ಚಾಂದ್ ಪೆಟ್ರೋಲ ಬಂಕ್ ಹತ್ತಿರ ಕರೆಯಿಸಿಕೊಂಡು ವಿಷಯ ತಿಳಿಸಿ ದಾಳಿಗಾಗಿ ಇಬ್ಬರು ಪಂಚರನ್ನು ಕರೆಯಿಸಲು ಮುತ್ತಪ್ಪ ಪಿ.ಸಿ. 118 ರವರಿಗೆ ತಿಳಿಸಿದೆನು. ಅವರು ಇಬ್ಬರು ಪಂಚಾದ ಶರಣಪ್ಪ ತಂದೆ ಸಿದ್ರಾಮಪ್ಪ ಬೆನಕನಹಳ್ಳಿ ವಯ: 48 ವರ್ಷ ಜಾ: ಲಿಂಗಾಯತ ಉ: ಒಕ್ಕಲುತನ ಸಾ: ರಸ್ತಾಪುರ ತಾ: ಶಹಾಪುರ 2) ಸುಭಾಷ ತಂದೆ ಅಯ್ಯಪ್ಪ ದೇವಿಕೇರಿ ವಯ: 32 ವರ್ಷ ಜಾ: ಎಸ್.ಸಿ. ಉ: ಒಕ್ಕಲುತನ ಸಾ: ರಸ್ತಾಪುರ ತಾ: ಶಹಾಪುರ ರವರನ್ನು 4:15 ಎ.ಎಮ್.ಕ್ಕೆ ಚಾಂದ್ ಪೆಟ್ರೋಲ ಬಂಕ್ ಹತ್ತಿರ ಕರೆಯಿಸಿದ್ದು ಸದರಿ ಪಂಚರಿಗೆ ವಿಷಯ ತಿಳಿಸಿ ಇಸ್ಪೀಟ ಜೂಜಾಟದ ಮೇಲೆ ದಾಳಿ ಮಾಡುವ ಕಾಲಕ್ಕೆ ಪಂಚರಾಗಿ ಸಹಕರಿಸಿರಿ ಎಂದು ಕೇಳಿಕೊಂಡ ಮೇರೆಗೆ ಅವರು ಒಪ್ಪಿಕೊಂಡರು. ಸದರಿ ದಾಳಿ ಕುರಿತು ಸರಕಾರಿ ಜೀಪ ನಂ. ಕೆ.ಎ.32-ಜಿ.618 ನೇದ್ದರಲ್ಲಿ ನಾನು ಮತ್ತು ಸಿಬ್ಬಂದಿಯವರು ಮತ್ತು ಪಂಚರು ಅಲ್ಲಿಂದ 4:30 ಎ.ಎಮ್.ಕ್ಕೆ ಹೊರಟೆವು ಹೀಗೆ ಹೊರಟು 4:45 ಎ.ಎಮ್.ಕ್ಕೆ ಬಾತ್ಮಿ ಬಂದ ಸ್ಥಳಕ್ಕೆ ತಲುಪಿ ಸ್ವಲ್ಪ ದೂರದಲ್ಲಿ ನಿಂತು ಮರೆಯಲ್ಲಿ ನೋಡಲಾಗಿ 7-8 ಜನರು ಅಂಗಡಿಯ ಮುಂದಿನ ರಸ್ತೆಯ ಮೇಲೆ ದುಂಡಾಗಿ ಕುಳಿತು 52 ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಜೂಜಾಟ ಆಡುತ್ತಿದ್ದು ಅವರಲ್ಲಿ ಒಬ್ಬರು ರಾಜಾಗೆ ಅಂದರ 50 ರೂ. ಅಂತಾ ಅಂದರೆ ಬಾಹರ 50 ರೂ. ಅಂತಾ ಇನ್ನೊಬ್ಬ ಅನ್ನುತ್ತಾ ಹಣನ್ನು ಪಣಕ್ಕೆ ಹಚ್ಚಿ ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ಕೂಡಿ 4:50 ಎ.ಎಮ್.ಕ್ಕೆ ದಾಳಿ ಮಾಡಲಾಗಿ 8 ಜನರು ಸಿಕ್ಕಿದ್ದು ಅವರ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ 1) ಪರಮಣ್ಣ ತಂದೆ ಮರೆಪ್ಪ ಕಜ್ಜಿ ವಯ: 26 ವರ್ಷ ಜಾ: ಎಸ್.ಸಿ ಹೊಲೆಯ ಉ: ಕೂಲಿಕೆಲಸ ಸಾ: ರಸ್ತಾಪುರ ತಾ: ಶಹಾಪರು 2) ದೇವಪ್ಪ ತಂದೆ ಭಾಗಪ್ಪ ಬಜೇರ ವಯ: 28 ವರ್ಷ ಜಾ: ಎಸ್.ಸಿ. ಉ: ಕೂಲಿ ಕೆಲಸ ಸಾ: ರಸ್ತಾಪುರ 3) ಶರಭಣ್ಣ ತಂದೆ ಅಮರಪ್ಪ ಅಂಗಡಿ ವಯ: 32 ವರ್ಷ ಜಾ: ಬಣಜಿಗ ಉ: ಹೊಟೆಲ ಕೆಲಸ ಸಾ: ರಸ್ತಾಪುರ 4) ಶಂಕ್ರಪ್ಪ ತಂದೆ ಮರೆಪ್ಪ ಕಜ್ಜಿ ವಯ: 35 ವರ್ಷ ಜಾ: ಎಸ್.ಸಿ. ಉ: ಒಕ್ಕಲುತನ ಸಾ: ರಸ್ತಾಪುರ 5) ಅಂಬ್ರಪ್ಪ ತಂದೆ ಕೊಟ್ರೆಪ್ಪ ಗಾಟೇಕಾರ ವಯ: 38 ವರ್ಷ ಜಾ: ಕಬ್ಬಲಿಗ ಉ: ಕೂಲಿಕೆಲಸ ಸಾ: ರಸ್ತಾಪುರ 6) ದೇವಪ್ಪ ತಂದೆ ನಾಗಪ್ಪ ಮಡಗಾನೋರ ವಯ: 40 ವರ್ಷ ಜಾ: ಕಬ್ಬಲಿಗ ಉ: ಕೂಲಿಕೆಲಸ ಸಾ: ರಸ್ತಾಪುರ 7) ನಿಂಗಪ್ಪ ತಂದೆ ಸುಬ್ಬಣ್ಣ ನಾಯ್ಕೋಡಿ ವಯ: 26 ವರ್ಷ ಜಾ: ಕಬ್ಬಲಿಗ ಉ: ಒಕ್ಕಲುತನ ಸಾ: ರಸ್ತಾಪುರ 8) ಭೀಮರಾಯ ತಂದೆ ಶರಭಣ್ಣ ತಳವಾರ ವಯ: 35 ವರ್ಷ ಜಾ: ಕಬ್ಬಲಿಗ ಉ: ಒಕ್ಕಲುತನ ಸಾ: ರಸ್ತಾಪುರ ಅಂತಾ ಹೇಳಿದ್ದು ಸದರಿಯವರು ಎಲ್ಲರೂ ಜೂಜಾಟಕ್ಕೆ ತಮ್ಮ ತಮ್ಮ ಮುಂದೆ ಇದ್ದ ನಗದು ಹಣವನ್ನು ಪರಿಶೀಲಿಸಲಾಗಿ ಒಟ್ಟು 4750- ರೂ. ಗಳು ಇದ್ದು ಮತ್ತು 52 ಇಸೀಟ ಎಲೆಗಳು ಇದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆ ಯನ್ನು 5:00 ಎ.ಎಮ್. ದಿಂದ 6:00 ಎ.ಎಮ್. ದ ವರೆಗೆ ಬೀದಿ ದೀಪದ ಬೆಳಕಿನಲ್ಲಿ ಮಾಡಿ ವಶಪಡಿಸಿಕೊಂಡ ಮುದ್ದೇಮಾಲಿಗೆ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಪೊಲೀಸ ತಾಬೆಗೆ ತೆಗೆದುಕೊಂಡೆನು. ನಂತರ 8 ಜನ ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಮರಳಿ ಠಾಣೆಗೆ ಬಂದಿದ್ದು ಇರುತ್ತದೆ. ಈ ವರದಿಯೊಂದಿಗೆ ಜಪ್ತಿ ಪಂಚನಾಮೆ, ಮುದೇಮಾಲು ಮತ್ತು 8 ಜನ ಆರೋಪಿತರನ್ನು ನಿಮ್ಮ ವಶಕ್ಕೆ ಒಪ್ಪಿಸುತ್ತಿದ್ದು ಆರೋಪಿತರ ವಿರುದ್ದ ಕಲಂ 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿ ಕ್ರಮಜರುಗಿಸಲು ಸೂಚಿಸಲಾಗಿದೆ ಅಂತಾ ಇದ್ದ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.241/2021 ಕಲಂ. 87 ಕೆ.ಪಿ. ಆಕ್ಟ ಅಡಿಯಲ್ಲಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು


ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂಬರ 242/2021 ಕಲಂ 78 (3) ಕೆ.ಪಿ ಆಕ್ಟ್ . : ಇಂದು ದಿನಾಂಕ 20/11/2021 ರಂದು, ಮಧ್ಯಾಹ್ನ 13-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಶ್ರೀನಿವಾಸ್ ವಿ. ಅಲ್ಲಾಪೂರ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿದರ ಸಾರಾಂಶವೆನೆಂದರೆ, ಇಂದು ದಿನಾಂಕ 20/11/2021 ರಂದು, 10-00 ಗಂಟೆಗೆ ಪೊಲೀಸ್ ಠಾಣೆಯಲ್ಲಿದ್ದಾಗ, ಆರೋಪಿತನು ಶಹಾಪೂರ ಹಳಿಸಗರ ಹನುಮಾನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆದುಕೊಳ್ಳುತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಫಿರ್ಯಾದಿಯವರು ಸರಕಾರಿ ಜೀಪ್ ನಂ ಕೆಎ-33-ಜಿ-0316 ರಲ್ಲಿ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ 11-00 ಗಂಟೆಗೆ ದಾಳಿ ಮಾಡಿ ಆರೋಪಿ ಮಲ್ಲಪ್ಪ ತಂದೆ ಹಣಮಂತ ಚಂಡು ವ|| 28 ಜಾ|| ಕಬ್ಬಲಿಗ ಉ|| ಮಟಕಾ ಬರೆದುಕೊಳ್ಳುವುದು ಸಾ|| ಹಳಿಸಗರ ಶಹಾಪೂರ. ಈತನ್ನು ಹಿಡಿದು ಅವನ ಹತ್ತಿರವಿದ್ದ ನಗದು ಹಣ 1400-00 ರೂಪಾಯಿ. 2) ಒಂದು ಬಾಲ್ ಪೆನ್. ಅಂ.ಕಿ 00-00 3) ಎರಡು ಮಟಕಾ ನಂಬರ ಬರೆದುಕೊಂಡ ಚೀಟಿ ಅಂ.ಕಿ 00-00. ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡು ಈ ಬಗ್ಗೆ ಸದರಿಯವನಿಗೆ ಹಣ ಪಡೆದು ಮಟಕಾ ಅಂಕಿಸಖ್ಯೆಗಳನ್ನು ಬರೆದುಕೊಂಡ ಹಣ ಮತ್ತು ಅಂಕಿಸಂಖ್ಯೆಗಳ ಚೀಟಿ ಯಾರಿಗೆ ಕೊಡುತ್ತಿ ಅಂತ ವಿಚಾರಿಸಲಾಗಿ ಅಂಬಣ್ಣ ತಂದೆ ಹಣಮಂತ್ರಾಯ ಟಣಖೆದಾರ ಸಾ|| ಹಳಿಸಗರ ಶಹಾಪೂರ ಇವರಿಗೆ ತೆಗೆದುಕೊಂಡು ಹೋಗಿ ಈ ಹಣ ಮತ್ತು ಮಟಕಾ ಅಂಕಿಸಂಖ್ಯೆಗಳ ಚೀಟಿಯನ್ನು ಕೊಡುತ್ತೆನೆ. ಆಗ ಅಂಬಣ್ಣ ಈತನು ನನಗೆ 100 ರೂಪಾಯಿಗೆ 15 ರೂಪಾಯಿ ಕಮಿಷನ್ ಕೊಡುತ್ತಾನೆ ಅಂತ ತಿಳಿಸಿದನು. ಜಪ್ತಿ ಪಂಚನಾಮೇಯನ್ನು ಕೈಕೊಂಡು ಮರಳಿ ಠಾಣೆಗೆ ಬಂದು ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿರ್ಯಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 242/2021 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 


ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 170/2021 ಕಲಂ: 279, 337, 338 ಐಪಿಸಿ : ಇಂದು ದಿನಾಂಕ 20/11/2021 ರಂದು 6.00 ಪಿ.ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ದ್ಯಾವಪ್ಪ ತಂದೆ ಭೀಮಣ್ಣಗೌಡ ಗೊಗಡಿಹಾಳ ವ|| 30ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಗೌಡಗೇರಾ ತಾ|| ಸುರಪೂರ ಇದ್ದು ತಮ್ಮಲ್ಲಿ ಅಜರ್ಿ ಸಲ್ಲಿಸುವುದೇನೆಂದರೆ, ಇಂದು ದಿನಾಂಕ 20/11/2021 ರಂದು ಮುಂಜಾನೆ 11.00 ಗಂಟೆಯ ಸುಮಾರಿಗೆ ನಾನು, ನಮ್ಮ ತಮ್ಮನಾದ ಹಣಮಂತ್ರಾಯ ತಂದೆ ಭೀಮಣ್ಣಗೌಡ ಗೊಗಡಿಹಾಳ ಮತ್ತು ನಮ್ಮ ಮಾವನಾದ ಮಲ್ಲನಗೌಡ ತಂದೆ ನಿಂಗನಗೌಡ ಪೊಲಿಸ್ ಬಿರಾದಾರ ವ|| 40ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಗೌಡಗೇರಾ ಮೂರೂ ಜನರು ಕೂಡಿಕೊಂಡು ನಮ್ಮ ಮಾವನಾದ ಮಲ್ಲನಗೌಡರ ಹತ್ತಿಯನ್ನು ಮಾರಾಟ ಮಾಡಲು ಗೌಡಗೇರಾ ಕ್ರಾಸ್ ಹತ್ತಿರ ಇರುವ ವೇಬ್ರಿಡ್ಜ್ ಹತ್ತಿರ ಇರುವ ಅಡತಿ ಅಂಗಡಿಗೆ ಹೋಗಿ ಹತ್ತಿಯನ್ನು ಮಾರಾಟ ಮಾಡಿದೆವು. ನಂತರ 12.00 ಗಂಟೆಯ ಸುಮಾರಿಗೆ ನಾವು ನಮ್ಮ ಮನೆಗೆ ಹೋಗಬೇಕೆಂದು ವೇಬ್ರಿಡ್ಜ್ ಕಡೆಯಿಂದ ರಸ್ತೆ ದಾಟಿ ಗೌಡಗೇರಾ ಕ್ರಾಸಗೆ ಬರುತ್ತಿದ್ದೆವು. ನಾನು ಮತ್ತು ನಮ್ಮ ತಮ್ಮನಾದ ಹಣಮಂತ್ರಾಯ ಇಬ್ಬರೂ ಸ್ವಲ್ಪ ಹಿಂದೆ ಇದ್ದೆವು. ನಮ್ಮ ಮಾವನಾದ ಮಲ್ಲನಗೌಡನು ಸ್ವಲ್ಪ ಮುಂದೆ ಇದ್ದನು. ಮಲ್ಲನಗೌಡನು ರಸ್ತೆ ದಾಟುತ್ತಿದ್ದಾಗ ಮಾಲಗತ್ತಿ ಕಡೆಯಿಂದ ಒಂದು ಸೈಕಲ್ ಮೋಟಾರ ಚಾಲಕನು ತನ್ನ ಸೈಕಲ್ ಮೋಟಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದವನೇ ನಮ್ಮ ಮಾವನಾದ ಮಲ್ಲನಗೌಡನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದನು. ಅಪಘಾತದಿಂದ ಮಲ್ಲನಗೌಡನು ಕೆಳಗೆ ಬಿದ್ದಿದ್ದು ಮತ್ತು ಸೈಕಲ್ ಮೋಟಾರ ಚಾಲಕನೂ ಕೂಡಾ ಕೆಳಗೆ ಬಿದ್ದಿದ್ದು ಇಬ್ಬರಿಗೂ ಎಬ್ಬಿಸಿ ನೋಡಲಾಗಿ ಮಲ್ಲನಗೌಡನ ತಲೆಗೆ ರಕ್ತಗಾಯ, ಬಲಗಾಲಿನ ಮೊಣಕಾಲಿಗೆ ತರಚಿದ ಗಾಯ ಮತ್ತು ಎಡಗಾಲಿನ ಮೊಣಕಾಲಿನ ಕೆಳಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿ ಕಾಲು ಮುರಿದಂತೆ ಆಗಿದ್ದು, ಸೈಕಲ್ ಮೋಟಾರ ಚಾಲಕನಿಗೆ ತಲೆಗೆ, ಎಡಭುಜಕ್ಕೆ, ಎಡಗಣ್ಣಿನ ಹತ್ತಿರ ತರಚಿದ ಗಾಯಗಳಾಗಿದ್ದುದು ಕಂಡು ಬಂದಿದ್ದು ಅಪಘಾತ ಮಾಡಿದ ಸೈಕಲ್ ಮೋಟಾರ ನಂಬರ ನೋಡಲಾಗಿ ಅದು ಹೋಂಡಾ ಕಂಪನಿಯದು ಇದ್ದು ಅದರ ನಂ ಕೆಎ 33 ಇಎ 4571 ನೇದ್ದು ಇದ್ದು ಅಪಘಾತ ಮಾಡಿದ ಸೈಕಲ್ ಮೋಟಾರ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಸಿದ್ದಣ್ಣ ತಂದೆ ದೇವಿಂದ್ರಪ್ಪ ಕಟ್ಟಿಮನಿ ಸಾ|| ಚನ್ನೂರ ತಾ|| ಶಹಾಪೂರ ಅಂತಾ ತಿಳಿಸಿದ್ದು ನಾನು ಮತ್ತು ನಮ್ಮ ತಮ್ಮ ಇಬ್ಬರೂ ಕೂಡಿ ಅಂಬುಲೆನ್ಸ್ನಲ್ಲಿ ಗಾಯಾಳುಗಳಿಗೆ ಕರೆದುಕೊಂಡು ಕೆಂಭಾವಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿದ್ದು ನಮ್ಮ ಮಾವನಾದ ಮಲ್ಲನಗೌಡನಿಗೆ ಭಾರೀ ಸ್ವರೂಪದ ಗಾಯಗಳಾಗಿದ್ದರಿಂದ ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಎ.ಎಸ್.ಎಂ ಆಸ್ಪತ್ರೆ ಕಲಬುರಗಿಗೆ ಕಳುಹಿಸಿ ನಾನು ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ನಮ್ಮ ಮಾವನಾದ ಮಲ್ಲನಗೌಡ ತಂದೆ ನಿಂಗನಗೌಡ ಪೊಲೀಸ್ ಬಿರಾದಾರ ಇವನಿಗೆ ಗಾಯವಾಗಲು ಅಪಘಾತಪಡಿಸಿದ ಸೈಕಲ್ ಮೋಟಾರ ನಂ ಕೆಎ 33 ಇಎ 4571 ನೇದ್ದರ ಚಾಲಕನಾದ ಸಿದ್ದಣ್ಣ ತಂದೆ ದೇವಿಂದ್ರಪ್ಪ ಕಟ್ಟಿಮನಿ ಸಾ|| ಚನ್ನೂರ ಈತನ ಅತೀವೇಗ ಮತ್ತು ಅಲಕ್ಷತನದ ಚಾಲನೆಯೇ ಕಾರಣವಾಗಿದ್ದು, ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 170/2021 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 23-11-2021 09:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080