ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 21-11-2022

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 165/2022 ಕಲಂ 380, 448, 451 ಐಪಿಸಿ : ಇಂದು ದಿನಾಂಕ 20/11/2022 ರಂದು 5.00 ಪಿಎಂ ಕ್ಕೆ ಠಾಣೆಯ ಕೋರ್ಟ ಕರ್ತವ್ಯದ ಸಿಬ್ಬಂದಿಯಾದ ಶಬ್ಬೀರಲಿ ಪಿಸಿ 201 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ಫಿಯರ್ಾದಿ ಸಂಖ್ಯೆ 33/2019 ನೇದ್ದು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಖಾಸಗಿ ಫಿಯರ್ಾದಿಯ ಸಾರಾಂಶವೇನೆಂದರೆ, ಫಿಯರ್ಾದಿದಾರರಾದ ಮಹೇಬೂಬಸಾಬ ತಂದೆ ಖಾಸಿಂಸಾಬ ವ|| 67ವರ್ಷ ಜಾ|| ಮುಸ್ಲಿಂ ಉ|| ನಿವೃತ್ತ ನೌಕರ ಸಾ|| ಕೆಂಭಾವಿ ತಾ|| ಸುರಪೂರ ಇವರ ಮತ್ತು ಆರೋಪಿತರಾದ 1) ಸಿದ್ದರಾಮೇಶ್ವರ ಕಟ್ಟಿಮನಿ ವ|| 50ವರ್ಷ ಉ|| ಸಹಾಯಕ ಕಾರ್ಯ ನಿವರ್ಾಹಕ ಅಭಿಯಂತರರು ಕೆಬಿಜೆಎನ್ ಎಲ್ ಉಪವಿಭಾಗ ನಂ 2 ಕೆಂಭಾವಿ 2) ಅವಿನಾಶ ವ|| 45ವರ್ಷ ಸಹಾಯಕ ಅಭಿಯಂತರರು ಕೆಬಿಜೆಎನ್ ಎಲ್ ಉಪವಿಭಾಗ ನಂ 2 ಕೆಂಭಾವಿ 3) ಮುತರ್ುಜಾ ತಾಳಿಕೋಟಿ ವ|| 55ವರ್ಷ ಉ|| ವರ್ಕ ಇನ್ಸಪೆಕ್ಟರ್ ಕೆಬಿಜೆಎನ್ ಎಲ್ ಉಪವಿಭಾಗ ನಂ 2 ಕೆಂಭಾವಿ ಇವರ ಮಧ್ಯ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಕೆಂಭಾವಿಯ ಹಿಲಟಾಪ ಕಾಲೋನಿಯ ಮನೆ ನಂ 2-20/14 ನೇದ್ದರ ಮನೆಗೆ ಸಂಬಂಧಿಸಿದಂತೆ ತಕರಾರು ಇದ್ದು ನ್ಯಾಯಾಲಯದ ಸಿವಿಲ್ ದಾವೆ ಸಂ 137/2010 ನೇದ್ದು ಚಾಲ್ತಿಯಲ್ಲಿರುತ್ತದೆ. ಹೀಗಿದ್ದು ಸದರಿ ಮನೆಯಲ್ಲಿ ಫಿಯರ್ಾದಿದಾರರು ತಮ್ಮ ಗೃಹ ಬಳಕೆಯ ವಸ್ತುಗಳು, ಬೆಲೆಬಾಳುವ ಬಂಗಾರದ ಒಡವೆಗಳು ಇಟ್ಟು ಆರಾಮ ಇಲ್ಲದ ಕಾರಣ ದಿನಾಂಕ 08/07/2015 ರಂದು ಕುಲರ್ಾ ಆಸ್ಪತ್ರೆ ಕಲಬುರಗಿಗೆ ಹೋಗಿ ಸೇರಿಕೆಯಾಗಿ ದಿನಾಂಕ 23/07/2015 ರಂದು ಬಿಡುಗಡೆಯಾಗಿ ಜೇವಗರ್ಿಯಲ್ಲಿನ ತಮ್ಮ ಸಂಬಂಧಿಕರ ಮನೆಗೆ ಹೋಗಿ ಇದ್ದು ಅಲ್ಲಿಂದ ದಿನಾಂಕ 24/07/2015 ರಂದು ಕೆಂಭಾವಿಗೆ ಬಂದು ನನ್ನ ಮನೆಯನ್ನು ನೋಡಲಾಗಿ ಯಾರೋ ಮನೆಯ ಕೀಲಿ ಮುರಿದಿದ್ದು, ನಾನು ಮನೆಯೊಳಗೆ ಹೋಗಿ ನೋಡಲಾಗಿ ಮನೆಯಲ್ಲಿನ ಅಂದಾಜು 3,15,000/-(3ಲಕ್ಷದ 15 ಸಾವಿರ) ರೂಪಾಯಿ ಕಿಮ್ಮತ್ತಿನ 10 ತೊಲಿ 5 ಗ್ರಾಂ ಬಂಗಾರದ ಸಾಮಾನುಗಳು, ಸಾವಿರಾರು ರೂಪಾಯಿ ಬೆಲೆಬಾಳುವ ಗೃಹ ಬಳಕೆಯ ಸಾಮಾನುಗಳು, ಸಾವಿರಾರು ರೂಪಾಯಿ ಬೆಲೆಬಾಳುವ ಮನೆಯ ಶೆಡ್, ಟಿನ್, ಪವಿತ್ರವಾದ ಪುಸ್ತಕಗಳು ಕಳ್ಳತನ ಮಾಡಿದ ಬಗ್ಗೆ ಕಂಡು ಬಂದಿದ್ದು ಪಕ್ಕದ ಮನೆಯ ಮಹಿಬೂಬಸಾಬ ತಂದೆ ಬಾಬುಮಿಯಾ ಮತ್ತು ಅಯ್ಯುಬಸಾಬ ತಂದೆ ಮೋದಿನಸಾಬ ಇವರಿಗೆ ಸಾಮಾನುಗಳು ಮನೆಯಲ್ಲಿ ಇಲ್ಲದ ಬಗ್ಗೆ ವಿಚಾರಿಸಲಾಗಿ ದಿನಾಂಕ 23/07/2015 ರಂದು 12.30 ಪಿಎಂ ಸುಮಾರಿಗೆ ಆರೋಪಿತರು ಮನೆಯ ಕೀಲಿ ಮುರಿದು ಮನೆಯಲ್ಲಿನ ಸಾಮಾನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ್ದು ಆಗ ಸಾಕ್ಷಿದಾರರಿಗೆ ಸಾಮಾನು ಏಕೆ ಒಯ್ದರು ಅಂತಾ ಕೇಳಿದ್ದು ಆರೋಪಿತರಿಗೆ ಸಾಕ್ಷಿದಾರರು ಸಾಮಾನು ತೆಗೆದುಕೊಂಡು ಹೋಗಬೇಡರಿ ಅಂದಾಗ ನಿಮಗೆ ಏನು ಸಂಬಂಧ ಇಲ್ಲ ನಾವು ಮಾಡತಕ್ಕಂತಹ ಕೆಲಸದಿಂದ ನೀವು ಸುಮ್ಮನೆ ಹೋಗಿರಿ ಇಲ್ಲವೆಂದರೆ ನಿಮಗೂ ಜೀವ ತೆಗೆತೀವಿ ಅಂತಾ ಹೇಳಿರುತ್ತಾರೆ ಅಂತಾ ತಿಳಿಸಿದರು. ಆದ್ದರಿಂದ ನಮ್ಮ ಮನೆಯ ಕೀಲಿ ಮುರಿದು ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಮನೆಯಲ್ಲಿನ ಬಂಗಾರದ ಸಾಮಾನುಗಳು, ಗೃಹಬಳಕೆಯ ವಸ್ತುಗಳು ಕಳವು ಮಾಡಿಕೊಂಡು ಹೋದ ಆರೋಪಿತರ ಮೇಲೆ ಕ್ರಮ ಜರುಗಿಸಬೇಕು ಅಂತಾ ಇರುವ ಖಾಸಗಿ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 165/2022 ಕಲಂ 380, 448, 451 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 166/2022 ಕಲಂ 379, 143, 147, 447, 504, 506, 506(2), 120(ಬಿ) ಸಂಗಡ 34 ಐಪಿಸಿ : ಇಂದು ದಿನಾಂಕ 20/11/2022 ರಂದು 6.15 ಪಿಎಂ ಕ್ಕೆ ಠಾಣೆಯ ಕೋರ್ಟ ಕರ್ತವ್ಯದ ಸಿಬ್ಬಂದಿಯಾದ ಶಬ್ಬೀರಲಿ ಪಿಸಿ 201 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ಫಿಯರ್ಾದಿ ಸಂಖ್ಯೆ 08/2022 ನೇದ್ದು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಖಾಸಗಿ ಫಿಯರ್ಾದಿಯ ಸಾರಾಂಶವೇನೆಂದರೆ, ಫಿಯರ್ಾದಿದಾರರಾದ ಬಸವರಾಜಪ್ಪಗೌಡ ತಂದೆ ನಿಂಗನಗೌಡ ಹೊಸಮನಿ ವ|| 62ವರ್ಷ ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಮುನೀರ ಬೊಮ್ಮನಳ್ಳಿ ತಾ|| ಸುರಪೂರ ಇವರು ಮಾನ್ಯ ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ದಾವೆಯ ಸಾರಾಂಶವೇನೆಂದರೆ, ಫಿಯರ್ಾದಿದಾರರು ರೈತರಾಗಿದ್ದು 4 ಜನ ಅಣ್ಣ ತಮ್ಮಂದಿರರನ್ನು ಹೊಂದಿದ್ದು ಎಲ್ಲಾ ಅಣ್ಣ ತಮ್ಮಂದಿರರು ಬೇರೆ ಬೇರೆಯಾಗಿರುತ್ತಾರೆ. ಫಿಯರ್ಾದಿದಾರರು ಬಹಳ ದಿನಗಳ ಹಿಂದೆ ತಮ್ಮ ಆಸ್ತಿಯನ್ನು ಹಂಚಿಕೊಂಡು ಮುನೀರ ಬೊಮ್ಮನಳ್ಳಿ ಸೀಮಾಂತರದ ಸವರ್ೆ ನಂ 52 ರಲ್ಲಿ 11 ಎಕರೆ 38 ಗುಂಟೆ ಜಮೀನು ಎಲ್ಲರ ಒಪ್ಪಿಗೆಯ ಮೇರೆಗೆ ಪಡೆದುಕೊಂಡಿದ್ದು ಅದರಲ್ಲಿ 5 ಎಕರೆ ಜಮೀನು ತನ್ನ ತಾಯಿಗೆ ಉಪಜೀವನಕ್ಕಾಗಿ ಕೊಟ್ಟಿದ್ದು ಇರುತ್ತದೆ. ತಾಯಿಯ ಮರಣದ ನಂತರ ತಾಯಿಗೆ ನೀಡಿದ ಜಮೀನನ್ನು ಫಿಯರ್ಾದಿಯು ಮರಳಿ ಪಡೆದು ಇಂದಿನವರೆಗೂ ಸಾಗುವಳಿ ಮಾಡುತ್ತಾ ಬಂದಿದ್ದು ಇರುತ್ತದೆ. ಆರೋಪಿತರಾದ 1) ಸೋಮನಗೌಡ ತಂದೆ ಸಿದ್ದನಗೌಡ ಹೊಸಮನಿ ವ|| 42 ಜಾ|| ರೆಡ್ಡಿ ಉ|| ಒಕ್ಕಲುತನ 2) ಅಮರಣ್ಣಗೌಡ ತಂದೆ ಸಿದ್ದನಗೌಡ ಹೊಸಮನಿ ವ|| 40 ಜಾ|| ರೆಡ್ಡಿ ಉ|| ಒಕ್ಕಲುತನ 3) ಸಿದ್ದನಗೌಡ ತಂದೆ ನಿಂಗನಗೌಡ ಹೊಸಮನಿ ವ|| 60 ಜಾ|| ರೆಡ್ಡಿ ಉ|| ಒಕ್ಕಲುತನ 4) ಪರಮಣ್ಣ ತಂದೆ ಶಿವರಾಜಪ್ಪ ದೇಸಾಯಿ ವ|| 45 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಎಲ್ಲರೂ ಮುನೀರ ಬೊಮ್ಮನಳ್ಳಿ ಇವರು ಫಿಯರ್ಾದಿಯ ಸಂಬಂಧಿಕರಾಗಿದ್ದು ಫಿಯರ್ಾದಿಯ ಹೊಲದಲ್ಲಿ ಅಕ್ರಮವಾಗಿ ಪ್ರವೇಶಿಸಿ ತಮಗೂ ಹೊಲದಲ್ಲಿ ಪಾಲು ಬರುತ್ತದೆ ಅಂತಾ ತಕರಾರು ಮಾಡುತ್ತಿದ್ದಾರೆ. ಫಿಯರ್ಾದಿಯು ಮಕ್ಕಳ ಶಿಕ್ಷಣದ ಸಲುವಾಗಿ ಶಹಾಪೂರ ನಗರದಲ್ಲಿ ಮನೆ ಮಾಡಿಕೊಂಡು ವಾಸವಾಗಿರುತ್ತಾರೆ. ಫಿಯರ್ಾದಿಯು ಶಹಾಪೂರದಲ್ಲಿದ್ದಾಗ ಎ-1 ರಿಂದ ಎ-4 ಆರೋಪಿತರು ಫಿಯರ್ಾದಿಯ ಹೊಲದಲ್ಲಿನ ತೊಗರಿ ಬೆಳೆಯನ್ನು ಕೊಯ್ದು ರಾಶಿ ಮಾಡಿದ್ದು ಈ ವಿಷಯವನ್ನು ಈರಸಂಗಪ್ಪ ಕಾಮನಟಗಿ ಮತ್ತು ಗುರಪ್ಪ ಹಾರುಕಾನ್ ಇವರು ಫಿಯರ್ಾದಿಗೆ ತಿಳಿಸಿದ್ದರಿಂದ ಫಿಯರ್ಾದಿದಾರರು ಆರೋಪಿತರ ಮನೆಗೆ ಹೋಗಿ ನನ್ನ ಹೊಲದಲ್ಲಿನ ತೊಗರಿ ಬೆಳೆಯನ್ನು ನೀವೇಕೆ ರಾಶಿ ಮಾಡಿದ್ದೀರಿ ಅಂತಾ ಕೇಳಿದಾಗ ಆರೋಪಿತರು ಫಿಯರ್ಾದಿಗೆ ತೊಗರಿ ರಾಶಿ ಮಾಡಿದ್ದೇವೆ ಏನು ಮಾಡಕೋತಿ ಮಾಡಿಕೋ ಲೇ ಬೋಸಡಿ ಮಗನೇ ಅಂತಾ ಅವಾಚ್ಯವಾಗಿ ಬೈದು ಈಗ ಬರೀ ರಾಶಿ ಅಷ್ಟೇ ಮಾಡಿದ್ದೇವೆ ಇನ್ನು ಮುಂದೆ ನಿನ್ನ ಜೀವ ಸಹಿತ ಬಿಡುವುದಿಲ್ಲ ಎಂದು ಜೀವದ ಭಯ ಹಾಕಿರುತ್ತಾರೆ. ಆರೋಪಿತರು ಫಿಯರ್ಾದಿಯ ಹೊಲದಲ್ಲಿನ ಅಂದಾಜು 6,00,000/-(6ಲಕ್ಷ) ರೂಪಾಯಿ ಕಿಮ್ಮತ್ತಿನ 100 ಕ್ವಿಂಟಾಲ್ ತೊಗರಿ ಬೆಳೆಯನ್ನು ರಶಿ ಮಾಡಿ ಕಳವು ಮಾಡಿಕೊಂಡು ಹೋಗಿದ್ದು ಅವರಿಗೆ ಶ್ರೀಶೈಲ ತಂದೆ ನಿಂಗಪ್ಪ ತಳವಾರ ಮತ್ತು ಮುನ್ನಾ ತಂದೆ ಮೌಲಾನಿ ಇವರು ಸಹಕಾರ ಮಾಡಿದ್ದು ಈ ಕುರಿತು ಫಿಯರ್ಾದಿದಾರರು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ದಿನಾಂಕ 17/12/2022 ರಂದು ದೂರು ನೀಡಿದ್ದರಿಂದ ಕೆಂಭಾವಿ ಠಾಣೆ ಗುನ್ನೆ ನಂ 184/2020 ಕಲಂ 143, 147, 447, 504, 506, 379, 120(ಬಿ) ಸಂ 34 ಐಪಿಸಿ ನೇದ್ದು ದಾಖಲಾಗಿದ್ದು ಇರುತ್ತದೆ. ಈ ಕೇಸಿನಲ್ಲಿ ತನಿಖಾಧಿಕಾರಿಯಾಗಿದ್ದ ಎ-5 ಆರೋಪಿತರಾದ ಹಣಮಂತಪ್ಪ ಪಿ.ಎಸ್.ಐ ಕೆಂಭಾವಿ ಠಾಣೆ ರವರು ಆರೋಪಿತರ ವಿರುದ್ದ ಯಾವುದೇ ಕ್ರಮ ಜರುಗಿಸದೇ ಆರೋಪಿತರು 100 ಕ್ವಿಂಟಾಲ್ ತೊಗರಿ ಕಳ್ಳತನ ಮಾಡಿದರೂ ಅವರ ಮೇಲೆ ದಾಖಲಾದ ಪ್ರಕರಣದಲ್ಲಿ ಕಲಂ 379 ಐಪಿಸಿ ಕೈಬಿಟ್ಟು ದೋಷಾರೋಪಣೆ ಪತ್ರ ಸಲ್ಲಿಸಿದ್ದಾರೆ. ಆರೋಪಿತರು ರೂಡಿಗತ ಅಪರಾಧಿಗಳಾಗಿದ್ದು ಅವರು ಗುನ್ನೆ ನಂ 36/2020, 182/2020, 184/2020 ರಲ್ಲಿ ಆರೋಪಿತರಾಗಿದ್ದು ಇರುತ್ತದೆ. ಆರೋಪಿತರು ಊರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದ್ದು ಇರುತ್ತದೆ. ಈ ಕುರಿತು ಫಿಯರ್ಾದಿದಾರರು ಮೇಲಾಧಿಕಾರಿಗಳಲ್ಲಿ ದೂರು ನೀಡಿದರೂ ಹಣಮಂತಪ್ಪ ಪಿ.ಎಸ್.ಐ ಕೆಂಭಾವಿ ಠಾಣೆ ರವರು ಉದ್ದೇಶಪೂರ್ವಕವಾಗಿ ಆರೋಪಿತರ ವಿರುದ್ದ ಸಲ್ಲಿಸಿದ ದೋಷಾರೋಪಣೆದ ಪತ್ರದಲ್ಲಿ ಕಲಂ 379 ಐಪಿಸಿ ತೆಗೆದು ಹಾಕಿದ್ದು ಇರುತ್ತದೆ. ಆದ್ದರಿಂದ ಫಿಯರ್ಾದಿದಾರರ ಹೊಲದಲ್ಲಿನ 6,00,000/-(6ಲಕ್ಷ) ರೂಪಾಯಿ ಕಿಮ್ಮತ್ತಿನ 100 ಕ್ವಿಂಟಾಲ್ ತೊಗರಿ ಕಳ್ಳತನ ಮಾಡಿದ ಸೋಮನಗೌಡ, ಅಮರಣ್ಣಗೌಡ, ಸಿದ್ದನಗೌಡ, ಪರಮಣ್ಣ ರವರ ಮೇಲೆ ಮತ್ತು ಅವರ ಮೇಲೆ ಕ್ರಮ ಜರುಗಿಸದ ಹಣಮಂತಪ್ಪ ಪಿ.ಎಸ್.ಐ ರವರ ಮೇಲೆ ಕ್ರಮ ಜರುಗಿಸಬೇಕು ಅಂತಾ ಇರುವ ಖಾಸಗಿ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 166/2022 ಕಲಂ 379, 143, 147, 447, 504, 506, 506(2), 120(ಬಿ) ಸಂಗಡ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರಿ ಸಂಚಾರಿ ಪೊಲೀಸ ಠಾಣೆ:-
ಗುನ್ನೆ ನಂ: 57/2022 ಕಲಂ 279, 337, 338 ಐಪಿಸಿ : ಇಂದು ದಿನಾಂಕ 20/11/2022 ರಂದು 2-15 ಪಿ.ಎಂ.ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಪೋನ್ ಮೂಲಕ ಆರ್.ಟಿ.ಎ ಎಮ್.ಎಲ್.ಸಿ ಇರುತ್ತದೆ ಅಂತಾ ತಿಳಿಸಿದ್ದರಿಂದ ಎಮ್.ಎಲ್.ಸಿ ವಿಚಾರಣೆಗೆ ಶ್ರೀ ಚಂದ್ರಶೇಖರ ಎಚ್.ಸಿ-04 ರವರಿಗೆ ನೇಮಿಸಿ ಕಳಿಸಿದ್ದು, ಸದರಿಯವರು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದ ಗಾಯಾಳುಗಳ ವಿಚಾರಣೆ ನಂತರ, ಆಸ್ಪತ್ರೆಯಲ್ಲಿ ಹಾಜರಿದ್ದ ಈ ಘಟನೆಯ ಪ್ರತ್ಯಕ್ಷ ಸಾಕ್ಷಿದಾರರಾದ ಪಿಯರ್ಾದಿ ಶ್ರೀ ಶೇಕ್ ಜಿಲಾನಿ ತಂದೆ ಅಬ್ಬಾಸಲಿ ಶೇಕ್ ವಯ;38 ವರ್ಷ, ಉ;ಸೆಂಟ್ರಿಂಗ್ ಕೆಲಸ, ಜಾ;ಮುಸ್ಲಿಂ, ಸಾ;ಮದನಪುರ ಏರಿಯಾ, ಯಾದಗಿರಿ ತಾ;ಜಿ;ಯಾದಗಿರಿ ರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ ನಾನು ಸೆಂಟ್ರಿಂಗ್ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ಇಂದು ದಿನಾಂಕ 20/11/2022 ರಂದು ಮದ್ಯಾಹ್ನ 12-30 ಪಿ.ಎಂ.ದ ಸುಮಾರಿಗೆ ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಹತ್ತಿರದ ಹಳೆ ಜಿಲ್ಲಾಸ್ಪತ್ರೆಗೆ ಹೋಗುವ ಟನರ್ಿಂಗ್ ನಲ್ಲಿ ನನ್ನ ಸ್ನೇಹಿತನಾದ ಇಸಾಕ್ ಹೈಮದ್ ತಂದೆ ಜೈನುಲಾದ್ದೀನ್ ಖುರೇಷಿ ಸಾ;ಮೈಲಾಪುರ ಅಗಸಿ ಯಾದಗಿರಿ ಈತನೊಂದಿಗೆ ನಿಂತು ಮಾತನಾಡುತ್ತಿದ್ದಾಗ ಅದೇ ಸಮಯಕ್ಕೆ ನಾವಿಬ್ಬರು ನೋಡು ನೋಡುತ್ತಿದ್ದಂತೆ ನಮಗೆ ಈ ಮೊದಲೇ ಪರಿಚಯ ಇರುವ ಮಹಮದ್ ರಪೀಕ್ ತಂದೆ ಅಬ್ದುಲ್ ಕುತುಬ್ ಖುರೇಷಿ ಇವರು ತಮ್ಮ ಮೋಟಾರು ಸೈಕಲ್ ನಂಬರ ಕೆಎ-28, ಇಇ-7550 ನೇದ್ದನ್ನು ಹೊಸ ಬಸ್ ನಿಲ್ದಾಣದ ಕಡೆಯಿಂದ ಬರುತ್ತಾ ಹಳೆ ಆಸ್ಪತ್ರೆ ಕಡೆಗೆ ಯಾವುದೇ ಇಂಡಿಕೇಟರ್ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸದೇ ಒಮ್ಮೊಲೆ ತನ್ನ ಎಡಕ್ಕೆ ಟರ್ನ ಮಾಡುತ್ತಿದ್ದಾಗ, ಅದೇ ಸಮಯಕ್ಕೆ ನನ್ನ ಅಣ್ಣನಾದ ಅಬ್ದುಲ್ ರೆಹಮಾನ್ ತಂದೆ ಅಬ್ಬಾಸಲಿ ಶೇಕ್ ಈತನು ತನ್ನ ಮೊಟಾರು ಸೈಕಲ್ ನಂಬರ ಕೆಎ-33, ಎಲ್-1342 ನೇದ್ದನ್ನು ಹೊಸ ಬಸ್ ನಿಲ್ದಾಣದ ಕಡೆಯಿಂದ ಹೊಸಳ್ಳಿ ಕ್ರಾಸ್ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಮಹಮದ್ ರಪೀಕ್ ಇವರ ಮೋಟಾರು ಸೈಕಲ್ ನೇದ್ದಕ್ಕೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದು ಅಪಘಾತವುಂಟು ಮಾಡಿದನು, ಸದರಿ ಅಪಘಾತದಲ್ಲಿ ಮಹಮದ್ ರಪೀಕ್ ಈತನು ಮೋಟಾರು ಸೈಕಲ್ ಸಮೇತ ರಸ್ತೆ ಬದಿಗೆ ಬಂದು ಬಿದ್ದನು, ಡಿಕ್ಕಿ ಹೊಡೆದ ನನ್ನ ಅಣ್ಣನು ಕೂಡ ಮೋಟಾರು ಸೈಕಲ್ ಸಮೇತ ರಸ್ತೆ ಮೇಲೆ ಬಿದ್ದನು. ನಾವಿಬ್ಬರು ಹತ್ತಿರ ಹೋಗಿ ವಿಚಾರಿಸಿದ್ದು, ನನ್ನ ಅಣ್ಣ ಅಬ್ದುಲ್ ರೆಹಮಾನ್ ಈತನಿಗೆ ತಲೆಯ ಹಿಂಭಾಗಕ್ಕೆ ಭಾರೀ ಒಳಪೆಟ್ಟಾಗಿದ್ದು, ಹಣೆಗೆ ರಕ್ತಗಾಯ, ಎಡಗಣ್ಣಿಗೆ ಗುಪ್ತಗಾಯಗಳಾಗಿರುತ್ತವೆ. ಮಹಮದ್ ರಫೀಕ್ ಈತನಿಗೆ ತಲೆಯ ಹಿಂಭಾಗಕ್ಕೆ ಗುಪ್ತ & ರಕ್ತಗಾಯವಾಗಿ ಉಬ್ಬಿರುತ್ತದೆ. ನಂತರ ನಾವಿಬ್ಬರು ಗಾಯಾಳುಗಳಿಗೆ ನಡೀರಿ ಸಕರ್ಾರಿ ಆಸ್ಪತ್ರೆಗೆ ಹೋಗೋಣ ಅಂದಾಗ ಮಹಮದ್ ರಫೀಕ್ ಇವರು ನಾನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೇನೆ ನೀವು ಅಬ್ದುಲ್ ರೆಹಮಾನ್ ಈತನಿಗೆ ಕರೆದುಕೊಂಡು ಹೋಗಿರಿ ಅಂತಾ ತಿಳಿಸಿದನು. ಆಗ ನಾನು ಈ ಸುದ್ದಿಯನ್ನು ನನ್ನ ಅಣ್ಣನ ಮಗನಾದ ಇಮ್ರಾನ್ ಈತನಿಗೆ ಪೋನ್ ಮಾಡಿ ತಿಳಿಸಿ ಕೂಡಲೇ ಘಟನಾ ಸ್ಥಳಕ್ಕೆ ಬರಲು ಹೇಳಿದಾಗ ಸ್ವಲ್ಪ ಸಮಯದಲ್ಲೇ ಒಂದು ಖಾಸಗಿ ಆಟೋದಲ್ಲಿ ಇಮ್ರಾನ್ ಬಂದಿದ್ದು, ಇಮ್ರಾನ್ ಈತನು ತನ್ನ ತಂದೆಗೆ ಘಟನೆ ಬಗ್ಗೆ ವಿಚಾರಿಸಿದ್ದು ಇರುತ್ತದೆ. ಆಗ ಇಸಾಕ್ ಹೈಮದ್ ಈತನು ಮಹಮದ್ ರಫಿಕ್ ಈತನಿಗೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದನು. ನಾನು ಮತ್ತು ಇಮ್ರಾನ್ ನನ್ನ ಅಣ್ಣನಿಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತೇವೆ. ಹೀಗಿದ್ದು ದಿನಾಂಕ 20/11/2022 ರಂದು ಮದ್ಯಾಹ್ನ 12-30 ಪಿ.ಎಂ.ಕ್ಕೆ ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಮುಖ್ಯ ರಸ್ತೆಯ ಮೇಲೆ ಬರುವ ಯಾದಗಿರಿ ಹಳೆ ಜಿಲ್ಲಾಸ್ಪತ್ರೆ ಕ್ರಾಸ್ ಹತ್ತಿರ ಮೋಟಾರು ಸೈಕಲ್ ನಂಬರ ಕೆಎ-28, ಇಇ-7550 ನೇದ್ದರ ಸವಾರ ಮಹಮದ್ ರಪೀಕ್ ತಂದೆ ಅಬ್ದುಲ್ ಕುತುಬ್ ಖುರೇಷಿ ಈತನ ನಿರ್ಲಕ್ಷ್ಯತನ ಹಾಗೂ ಮೊಟಾರು ಸೈಕಲ್ ನಂಬರ ಕೆಎ-33, ಎಲ್-1342 ನೇದ್ದರ ಸವಾರ ಅಬ್ದುಲ್ ರೆಹಮಾನ್ ತಂದೆ ಅಬ್ಬಾಸಲಿ ಶೇಕ್ ಈತನ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದಾಗ ಇಬ್ಬರು ಮೋಟಾರು ಸೈಕಲ್ ಸವಾರರ ತಪ್ಪಿನಿಂದ ಅಪಘಾತ ಜರುಗಿದ್ದು ಇರುತ್ತದೆ ಇಬ್ಬರು ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 5-15 ಪಿ.ಎಂ.ಕ್ಕೆ ಬಂದು ಪಿಯರ್ಾದಿಯ ಹೇಳಿಕೆಯ ಅಸಲು ಪ್ರತಿಯನ್ನು ನನಗೆ ಹಾಜರುಪಡಿಸಿದ್ದು, ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 57/2022 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಸೈದಾಪೂರ ಪೊಲೀಸ ಠಾಣೆ:-
ಗುನ್ನೆ ನಂ: 124/2022 ಕಲಂ 379 ಐಪಿಸಿ ಮತ್ತು ಕಲಂ 21 ಎಂ.ಎಂ.ಆರ್.ಡಿ ಕಾಯ್ದೆ-1957 : ಇಂದು ದಿನಾಂಕ 20.11.2022 ರಂದು ಸಾಯಂಕಾಲ 5.30 ಗಂಟೆಗೆ ಕಿರಣ ಡಿ.ಆರ್. ಭೂವಿಜ್ಞಾನಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಯಾದಗಿರಿ ಜಿಲ್ಲೆ ಇವರು ಠಾಣೆಗೆ ಹಾಜರಾಗಿ ದೂರು ಹಾಗೂ ಪಂಚನಾಮೆಯನ್ನು ಹಾಜರುಪಡಿಸಿರುತ್ತಾರೆ. ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ ದೊಂದಡಗಿ ಗ್ರಾಮ ಸೀಮಾಂತರದ ಭೀಮಾನದಿಯಿಂದ ಉದ್ದ 40 ಮೀಟರ್, ಅಗಲ 16.50 ಮೀಟರ್ ಪ್ರದೇಶ ಹಾಗೂ ಆಳ 0.50 ಮೀಟರ್ ಒಟ್ಟು 660 ಘನ ಮೀಟರ್ ಪ್ರಮಾಣದ ಮರಳನ್ನು ಯಾರೋ ಕಳ್ಳರು ಅಕ್ರಮವಾಗಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ತಮ್ಮ ಸ್ವಂತ ಲಾಭಕ್ಕಾಗಿ ಕಳುವಿನಿಂದ ಮರಳು ಸಾಗಾಣಿಕೆ ಮಾಡಿ ಕನರ್ಾಟಕ ಸರಕಾರಕ್ಕೆ 90,816=00 ರೂಪಾಯಿಗಳು ನಷ್ಟ ಮಾಡಿರುತ್ತಾರೆ ಅಂತಾ ವಗೈರೆ ಆಪಾದನೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 196/2022. ಕಲಂ. 279.337 338. ಐ.ಪಿ.ಸಿ : ಇಂದು ದಿನಾಂಕ 20/11/2022 ರಂದು 14.15 ಗಂಟೆಗೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಬಸಪ್ಪ ತಂದೆ ನಾಗಪ್ಪ ನಾಯ್ಕೋಡಿ ವ|| 40 ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಕರಕಳ್ಳಿ ತಾ|| ಶಹಾಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ದಿನಾಂಕ 11.11.2022 ರಂದು ಶಹಾಪೂರದಲ್ಲಿ ಕೆಲಸವಿದ್ದ ನಿಮಿತ್ಯ ನಾನು ಹಾಗು ನನ್ನ ಮಗನಾದ ಪಂಪಾಪತಿ ತಂದೆ ಬಸಪ್ಪ ನಾಯ್ಕೋಡಿ ವ|| 17 ವರ್ಷ ನಾವಿಬ್ಬರೂ ಕೂಡಿಕೊಂಡು ನಮ್ಮ ಮೋಟರ ಸೈಕಲ ನಂಬರ ಕೆಎ-33 ಹೆಚ್-8904 ನೇದ್ದರಲ್ಲಿ ನಮ್ಮೂರಿನಿಂದ ಮದ್ಯಾಹ್ನ 01 ಗಂಟೆಗೆ ಹೊರಟು ಶಹಾಪೂರಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ ಹೋಗುವ ಕುರಿತು ನಮ್ಮ ಮೋಟರ ಸೈಕಲ ನಂಬರ ಕೆಎ-33 ಹೆಚ್-8904 ನೇದ್ದರಲ್ಲಿ ನಾನು ಹಾಗು ನಮ್ಮ ಮಗ ಪಂಪಾಪತಿ ಇಬ್ಬರೂ ಹೋಗುತ್ತಿದ್ದು ನಮ್ಮ ಮೋಟರ ಸೈಕಲನ್ನು ನಾನೇ ನಡೆಸುತ್ತಿದ್ದೆನು. ಹೀಗಿರುತ್ತಾ ಸಾಯಂಕಾಲ 4 ಗಂಟೆಯ ಸುಮಾರಿಗೆ ನಾವಿಬ್ಬರೂ ನಮ್ಮ ಮೋಟರ ಸೈಕಲ ಮೇಲೆ ಶಹಾಪೂರ ಪಟ್ಟಣದ ಡಾ|| ಸುಭೇದಾರ ಆಸ್ಪತ್ರೆಯ ಮುಂದೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಎದುರಿನಿಂದ ಒಂದು ಅಟೋ ರಿಕ್ಷಾ ನಂಬರ ಕೆಎ-33,8154 ನೇದ್ದರ ಚಾಲಕನು ತನ್ನ ಅಟೋ ರಿಕ್ಷಾವನ್ನು ಅತೀ ವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟರ ಸೈಕಲಗೆ ಬಲವಾಗಿ ಡಿಕ್ಕಿಪಡಿಸಿದನು. ಕಾರಣ ನಾನು ಹಾಗು ನನ್ನ ಮಗ ಪಂಪಾಪತಿ ಇಬ್ಬರೂ ಮೋಟರ ಸೈಕಲ ಸಮೇತ ಕೆಳಗೆ ಬಿದ್ದಿದ್ದು ಸದರಿ ಅಪಘಾತದಲ್ಲಿ ನನಗೆ ಯಾವದೇ ಗಾಯವಾಗಿರುವದಿಲ್ಲ ಆದರೆ ನನ್ನ ಮೋಟರ ಸೈಕಲ ಹಿಂದೆ ಕುಳಿತ ಮಗ ಪಂಪಾಪತಿ ಈತನಿಗೆ ಎಡಮೊಳಕಾಲಿನ ಹತ್ತಿರ ಕಾಲು ಮುರಿದಂತಾಗಿ ರಕ್ತಗಾಯ ಹಾಗು ಗುಪ್ತಗಾಯವಾಗಿದ್ದು ಅಲ್ಲದೇ ಎಡಗೈಗೆ ತರಚಿದ ರಕ್ತಗಾಯವಾಗಿದ್ದು ಇರುತ್ತದೆ. ನಂತರ ನಮಗೆ ಡಿಕ್ಕಿಪಡಿಸಿದ ಅಟೋ ರಿಕ್ಷಾ ಚಾಲಕನು ಅಲ್ಲಿಯೇ ಇದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಮರಲಿಂಗ ತಂದೆ ಮಲ್ಲಪ್ಪ ಸಾ|| ಶಿರವಾಳ ಅಂತ ಗೊತ್ತಾಯಿತು. ನಂತರ ನಾನು ಹಾಗು ಅಟೋ ರಿಕ್ಷಾ ಚಾಲಕ ಮರಲಿಂಗ ಇಬ್ಬರೂ ಕೂಡಿಕೊಂಡು ಮಗನಾದ ಪಂಪಾಪತಿ ಈತನಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಕರೆದುಕೊಂಡು ಹೋಗಿ ಉಪಚಾರ ಪಡಿಸಿದ್ದು, ನಂತರ ವೈದ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ ಶಹಾಪೂರ ರವರು ಹೆಚ್ಚಿನ ಉಪಚಾರ ಕುರಿತು ಬೇರೆ ಆಸ್ಪತ್ರೆಗೆ ಹೋಗಲು ತಿಳಿಸಿದ ಮೇರೆಗೆ ನಾನು ನನ್ನ ಮಗನನ್ನು ಹೆಚ್ಚಿನ ಉಪಚಾರ ಕುರಿತು ಮಿರಾಜದ ಜಿ ಎಸ್ ಕುಲಕಣರ್ಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಸದರಿ ಅಪಘಾತಕ್ಕೆ ಅಟೋ ರಿಕ್ಷಾ ನಂಬರ ಕೆಎ-33,8154 ನೇದ್ದರ ಚಾಲಕ ಮರಲಿಂಗ ತಂದೆ ಮಲ್ಲಪ್ಪ ಸಾ|| ಶಿರವಾಳ ತಾ|| ಶಹಾಪೂರ ಈತನ ಅತೀ ವೇಗ ಹಾಗು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 196/2022 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 21-11-2022 11:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080