ಅಭಿಪ್ರಾಯ / ಸಲಹೆಗಳು

                                                                                                            ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 21-12-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 173/2022 ಕಲಂ 341, 323, 332, 353, 504, 506 ಸಂ. 149 ಐಪಿಸಿ:ದಿನಾಂಕ: 20-12-2022 ರಂದು ದಿನಾಂಕ: 20-12-2022 ರಂದು ರಾತ್ರಿ 07-30 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನಿಡಿದ ಸಾರಂಸವೆನೆಂದರೆ ನಾನು ಮತ್ತು ನಮ್ಮ ಬಸ್ ನಿವರ್ಾಹಕ ಮಲ್ಲಿಕಾಜರ್ುನ ತಂದೆ ತಿಪ್ಪಣ್ಣ ಇಬ್ಬರು ಕೂಡಿ ಗುರುಮಿಠಕಲ್ ಡೀಪೋದಿಂದ ಬಸ್ ನಂ. ಕೆಎ-33 ಎಫ್. 0268 ನೇದ್ದನ್ನು ನಡೆಸಿಕೊಂಡು ಗುರಮಿಠಕಲ್ ದಿಂದ ವಯಾ ಕಲಬುರಗಿಗೆ ಹೋಗುತಿದ್ದೆವು, ಯಾದಗಿರಿ ದಾಟಿದ ನಂತರ  ಭೀಮಾನಗರ  ಹತ್ತಿರ ರೋಡಿನ ಮೇಲೆ ಹೋಗುತ್ತಿರುವಾಗ  ಆನಂದ ದಾಬಾ ಹತ್ತಿರ ಒಂದು ಟ್ರ್ಯಾಕ್ಟರದಲ್ಲಿ ಜನರು ಕುಳಿತು ಹೋಗುತಿದ್ದರು ಒಂದು ಕಾರು ಕೂಡ ನಮ್ಮ ಮುಂದೆ ಹೋಗುತ್ತಿತ್ತು ಟ್ರ್ಯಾಕ್ಟರ ಮತ್ತು ಕಾರು ಎರಡು ನಿಧಾನಕ್ಕೆ ಹೋಗುತ್ತಿರುವಾಗ ಆಗ ನಾನು ಸೈಡ್ ಕೊಡಲು ಹಾರ್ನ ಮಾಡಿದೆನು  ಅವರು ಸೈಡ್ ಕೊಡಲಿಲ್ಲ ಮತ್ತೆ ನಾನು 2-3 ಸಲ ಹಾರ್ನ ಮಾಡಿದರು ಕೂಡ ಸೈಡ್ ಕೊಡಲಿಲ್ಲ ಆಗ ನಾನು ಅವರಿಗೆ ಓವರ್ ಟೇಕ್ ಮಾಡಿಕೊಂಡು ಮುಂದೆ ಹೋದೆನು, ಆಗ ಕಾರ ನಂ. ಕೆಎ-59 ಎಮ್-2705 ನೇದ್ದರಲ್ಲಿದ್ದವರು ಎಸ್,ಆರ್ ಪೆಟ್ರೋಲ್ ಬಂಕ್ ಹತ್ತಿರ ಬೆಳಿಗ್ಗೆ 11-40 ಗಂಟೆಗೆ ನಾನು ನಡೆಸುವ ಬಸ್ಸಿಗೆ ಓವರ ಟೆಕ್ ಮಾಡಿ ಮುಂದೆ ಹೋಗಿ ಅದೆ ಕಾರಿನಿಂದ ಬಸ್ಸಿಗೆ ಅಡ್ಡಗಟ್ಟಿ ನಿಲ್ಲಿಸಿ ಕಾರಿನಿಂದ ಇಳಿದು ನಾನು ನಡೆಸುವ ಬಸ್ ಡೋರ್ ಹತ್ತಿರ ಬಂದು ಡೋರನಿಂದ ನನಗೆ ಆನಂದ ಎಂಬುವವನು, ಕೈಯಿಂದ ಎರಡು ಏಟು ಕಪಾಳಕ್ಕೆ ಹೊಡೆದನು ಆಗ ನಮ್ಮ  ಕಂಡೆಕ್ಟರ  ಬಸ್ ಇಳಿದು ಹೊರಗೆ ಹೋಗಿ ಯಾಕೆ ಹೊಡೆಯುತ್ತಿರಿ ಅಂತಾ ಕೇಳಿದಾಗ ಆತನಿಗೆ ಆನಂದ ಮತ್ತು ಆತನ ಸಂಗಡ ಇತರೆ  9 ಜನರು ಹೆಸರು ವಿಳಾಸ ಗೋತ್ತಿರುವದಿಲ್ಲ ಅವರೆಲ್ಲರು ಸೇರಿ ಲೇ ಸುಳೆ ಮಗನೆ ನಮ್ಮ ಕಾರಿಗೆ ಓವರ ಟೇಕ್ ಮಾಡುತ್ತಿರೇನು ಸುಳೆ ಮಕ್ಕಳೆ ಅಂತಾ ಬೈದು ಕೈಯಿಂದ  ಎದೆಗೆ, ಹೊಟ್ಟೆಗೆ ಬೆನ್ನಿಗೆ ಒದ್ದು ನೆಲಕ್ಕೆ ಹಾಕಿ ಕಾಲಿನಿಂದ ಮನಬಂದಂತೆ ಎಲ್ಲರು ಸೇರಿ ಒದ್ದಿರುತ್ತಾರೆ ಆಗ ನಾನು ಬಸ್ ನಲ್ಲಿ ಕುಳಿತು ಮೋಬೈಲದಿಂದ ವಿಡಿಯೋ ಮಾಡುತ್ತಿರುವಾಗ ಅವರೆಲ್ಲರು ಸೇರಿ ಲೇ ಸೂಳೆ ಮಗನೆ ನೀನೇನು ವಿಡಿಯೋ ಮಾಡುತ್ತಿ ಸೂಳೆ ಮಗನೆ ಅಂತಾ ಅಂಗಿ ಹಿಡಿದು ಬಸ್ಸಿನಿಂದ ಎಳೆದು ಮೊಬೈಲ್ ಕಸಿದುಕೊಳ್ಳುತ್ತಿರುವಾಗ ಹಿಂದೆ ಸಿಟಿನಲ್ಲಿ ಕುಳಿತ ಶಂಕ್ರಮ್ಮ ಗಂಡ ಮರೆಪ್ಪ ಸಾ|| ಬಳಿಚಕ್ರ ಈಕೆಯು ಮೊಬೈಲ್ ಕೊಡುತ್ತಿರುವಾಗ ಆಕೆಗೆ ಲೇ ಸುಳೆ ಮಗಳೆ ಆತನ ಮೋಬೈಲ್ ಯಾಕೆ ತೆಗೆದುಕೊಳ್ಳುತಿ ಅಂತಾ ಬೈದು ಕೈಯಿಂದ ಬಲಗಡೆ ಭುಜಕ್ಕೆ ಆನಂದ ಎಂಬುವವನು ಹೊಡೆದು ಲೇ ಸೂಳೆ ಮಗಳೆ ನೀನು ಸುಮ್ಮನೆ ಕೂಡು ಅಂತಾ ಬೇದರಿಸಿದನು, ಆಕೆ ಸುಮ್ಮನೆ ಕುಳಿತಾಗ ನನಗೆ ಕೆಳಗೆ ಎಳದು ರೋಡಿಗೆ ನಿಲ್ಲಿಸಿ ಅವರಲ್ಲಿ 3 ಜನರು ನನಗೆ ಎರಡು ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಆನಂದ ಎಂಬುವವನು ಮತ್ತು ಇತರೆ 6 ಜನರು ಸೇರಿ ನನಗೆ ಕೈಯಿಂದ ಎರಡು ಕಪಾಳಕ್ಕೆ ಮತ್ತು ಎದೆಗೆ, ಬೆನ್ನಿಗೆ ಹೊಟ್ಟೆಗೆ ಮನ ಬಂದಂತೆ ಹೊಡೆದು ಲೇ ಸೂಳೆ ಮಗನೆ ನೀನು ಈ ರೂಟಿಗೆ ಹೆಂಗ್ ಕರ್ತವ್ಯ ಮಾಡುತಿ  ನೋಡುತ್ತೇನೆ, ಅಂತಾ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಇನ್ನೊಂದು ಸಲ ಈ ರೂಟಿಗೆ ಬಂದರೆ ನಿನಗೆ ಖಲಾಸ ಮಾಡುತ್ತೇನೆ ಅಂತಾ ಬೇದರಿಕೆ ಹಾಕಿದ ಬಗ್ಗೆ

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 134/2022 ಕಲಂ: 143, 341, 323, 324, 504, 506 ಸಂ. 149 ಐಪಿಸಿ: ಇಂದು ದಿನಾಂಕ; 20/12/2022 ರಂದು 11-00 ಎಎಮ್ ಕ್ಕೆ ಪಿರ್ಯಾಧಿದಾರರಾದ ಶ್ರೀ ಮಹಿಮೂದ್ಖಾನ್ ತಂದೆ ಅಬ್ದುಲ್ ಹಮೀದ್ಖಾನ್ ವ: 55 ವರ್ಷ ಜಾತಿ: ಮುಸ್ಲಿಂ ಸಾ: ಹೆಡಗಿಮದ್ರಾ ತಾ:ಜಿ: ಯಾದಗಿರಿ ಪ್ರಸ್ತುತ ವಿಳಾಸ ಮಹ್ಮದ ಹನೀಫ್ ಕೂಡ್ಲೂರು ಅಜೀಜ್ ಕಾಲೋನಿ ಸಷೇಷನ್ ಏರಿಯಾ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ನೀಡಿದ್ದರ ಸಾರಾಂಸವೆನೆಂದರೆ, ನಾನು ಪ್ರತಿದಿನದಂತೆ ದಿನಾಂಕ 17/12/2022 ರಂದು ಬೆಳಗಿನ ಜಾವದಲ್ಲಿ ಸನಾ ಮಸೀದನಲ್ಲಿ ನಮಾಜ ಮುಗಿಸಿಕೊಂಡು ಮರಳಿ ನನ್ನ ಮನೆಯ ಕಡೆಗೆ ಅದೇ ಏರಿಯಾದಲ್ಲಿರುವ ಶಕೀಲ್ ಮೀರಾನ್ ಇವರ ಮನೆಯ ಮುಂದಿನಿಂದ ಹೊರಟಿರುವಾಗ ಬೆಳಿಗ್ಗೆ 06.20 ಗಂಟೆಯ ಸುಮಾರಿಗೆ ಮಹ್ಮದ ಶಕೀಲ್ ಮೀರಾನ್ ಆತನ ಪತ್ನಿಯಾದ ಖುಷರ್ಿದಾಬೇಗಂ, ಹಾಗೂ ಅವರ ಮಕ್ಕಳಾದ  ಮೀರಾನ್, ಇಮ್ರಾನ್ ಹಾಗೂ ಹೀನಾ ಇವರೆಲ್ಲರೂ ಸೇರಿಕೊಂಡು ಬಂದವರೇ ನನ್ನನ್ನು ತಡೆದು ನನ್ನ ಮೇಲೆ ಹಲ್ಲೆ ಮಾಡಿ ಮಾದರಚೋದ್ ತೆರೆಖೋ ಹಾಜ್ ನಹಿ ಚೋಡುಂಗಾ ತೇರಿ ಬಿಬಿಕು ಖತಂ ಕರುಂಗಾ, ಸಾಲೇ ಮೈ ಎಕ್ ತಹಸೀಲದಾರ ಹೂಂ ತೆರೆಕು ಏಕ ಮಿನಿಟ್ ಮೇ ಘರ ಖಾಲಿ ಕರಾವುಂಗಾ ಕ್ಯಾ ಸಮಜಾ ಮೇರೆಕು ಅಂತಾ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಮಹ್ಮದ ಶಕೀಲ್ ಈತನು ಕಲ್ಲಿನಿಂದ ನನ್ನ ಬಲಗಾಲಿನ ಪಾದಕ್ಕೆ ಹೊಡೆದು ಗುಪ್ತ ಗಾಯಪಡಿಸಿದ್ದು, ಮೀರಾನ್ ಮತ್ತು ಇಮ್ರಾನ್ ಇವರು ಕೈಗಳಿಂದ ನನಗೆ ಮೈಯಲ್ಲ ಹೊಡೆದಿದ್ದು ಆಗ ನನ್ನ ಪತ್ನಿ ರುಕ್ಸಾನಾ ಇವಳು ಬಿಡಿಸಲು ಅಡ್ಡ ಬಂದಾಗ ಶಕೀಲ್ ಈತನ ಪತ್ನಿಯಾದ ಖುಷರ್ಿದಾಬೇಗಂ ಹಾಗೂ ಅವರ ಮಗಳಾದ ಹೀನಾ ಇವರು ನನ್ನ ಪತ್ನಿಗೆ ಬೋಸಡಿ ರಂಡಿ ಅಂತಾ ಬೈಯ್ದು ನಿವೇಲ್ಲರೂ ಸೇರಿ ನನ್ನ ಮಗಳ ಜೀವ ನುಂಗಿದಿರಿ ಅಂತಾ ಕೈಗಳಿಂದ ಹೊಡೆದಿದ್ದು ಇವತ್ತು ನಿಮಗೆ ಜೀವ ಸಹೀತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಜಗಳ ಮಾಡುತ್ತಿದ್ದಾಗ ನಮ್ಮ ಮಕ್ಕಳಾದ, ಮಹ್ಮದ ಮಜರಖಾನ್, ಅಜರ ಹಾಗು ಹತೀಖಾನ್ ಇವರು ಬಂದು ಇವರೊಂದಿಗೆ ಏನು ಜಗಳ ಮಾಡುತ್ತೀರಿ ನಡೆಯಿರಿ ಅಂತಾ ಬಿಡಿಸಿಕೊಂಡು ಮನೆಗೆ ಕರೆದುಕೊಂಡು ಹೋಗಿದ್ದು ಇರುತ್ತದೆ. ಈಗ್ಗೆ ಸುಮಾರು 6-7 ವರ್ಷಗಳ ಹಿಂದೆ ನನ್ನ ಮಗನಾದ ಮಹ್ಮದ ಮಜರಖಾನ್ ಹಾಗೂ ಮಹ್ಮದ ಶಕೀಲ್  ಇವರ ಮಗಳು ಸನಾ ಕೌಸರ ಇವರು ಪ್ರೆಮೀಸಿದ್ದು ಈ ವಿಷಯದಲ್ಲಿ ಅವರಿಗೆ ಮತ್ತು ನಮಗೆ ತಕರಾರುಗಳಾಗಿ ಸಮಾದ ಮುಖಂಡರು ಸೇರಿ ನಮಗೆ ರಾಜಿ ಮಾಡಿ ಮುಕ್ತಾಯ ಮಾಡಿದ್ದರು, ಅದೇ ವೈಷಮ್ಯದಿಂದ ಮೇಲ್ಕಂಡ ಶಕೀಲ್ ಅವರ ಹೆಂಡತಿ, ಮಕ್ಕಳು ಸೇರಿಕೊಂಡು ನನಗೆ ತಡೆದು ನನಗೆ ಮತ್ತು ನನ್ನ ಪತ್ನಿಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈಯ್ದು ಜೀವದ ಬೆದರಿಕೆ ಹಾಕಿದ್ದು ನಾನು ಮನೆಯಲ್ಲಿ ವಿಚಾರಿಸಿ ಇಂದು ಠಾಣೆಗೆ ಬಂದು ದೂರು ಅಜರ್ಿ ನೀಡುತ್ತಿದ್ದು ಸದರಿಯವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.134/2022 ಕಲಂ.143, 341, 323, 324, 504, 506 ಸಂ. 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 135/2022 ಕಲಂ: 341, 323, 504, 506 ಐಪಿಸಿ: ಇಂದು ದಿನಾಂಕ; 20/12/2022 ರಂದು 6-30 ಪಿಎಮ್ ಕ್ಕೆ ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ನಾನು ಸುಮಾರು 13 ವರ್ಷಗಳಿಂದ ಮಾನ್ಯ ಯಾದಗಿರಿ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಕೆಲಸ ಮಾಡಿಕೊಂಡಿರುತ್ತೇನೆ. ಇತ್ತೀಚೆಗೆ ನೋಟರಿ ಕೆಲಸ ಕೂಡ ಮಾಡಿಕೊಂಡಿರುತ್ತೇನೆ. ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಯಾದಗಿರಿ ರವರ ಎಸ್.ಸಿ ನಂಬರ 18/2022 ಕೇಸಿನಲ್ಲಿ ಆರೋಪಿತನಾದ ಗುರಪ್ಪ ತಂದೆ ಭೀಮರಾಯ ಡಿ.ಎ.ಆರ್ ಘಟಕ ಯಾದಗಿರಿ ಈತನು ಆಗಾಗ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದು ಸದರಿ ಪ್ರಕರಣದಲ್ಲಿ ಪಿಯರ್ಾದಿದಾರರು ನನ್ನ ಕ್ಲೈಂಟ್ ಇರುವುದರಿಂದ ನೊಂದವರು ನ್ಯಾಯಲಯದಲ್ಲಿ ನನ್ನ ಹತ್ತಿರ ಬರುತ್ತಿರುವುದರಿಂದ ಗುರಪ್ಪ ಈತನು ಇಂದು ದಿನಾಂಕ; 20/12/2022 ರಂದು 2-30 ಪಿಎಮ್ ಸುಮಾರಿಗೆ ನನ್ನ ಮೇಲೆ ಸಿಟ್ಟಾಗಿ ನನ್ನಲ್ಲಿಗೆ ಬಂದು ನನಗೆ ಲೇ ಸೂಳೇ ಮಗನೆ ನೀನು ಏನಾದರು ಅವರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದರೆ ನೋಡು ಅಂತಾ ಅಂಜಿಕೆ ಹಾಕಿ ಹೆಲ್ಮೇಟ್ದಿಂದ ನನ್ನ ತಲೆಯ ಹಿಂಭಾಗದಲ್ಲಿ ಹೊಡೆಯಲು ಬಂದಾಗ ನಾನು ಅವನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಆಗ ನನ್ನನ್ನು ಅಡ್ಡಗಟ್ಟಿ ನಿಲ್ಲಿಸಿ ಕೋರ್ಟ ಆವರಣದಲ್ಲಿ ನನ್ನ ಸಮವಸ್ತ್ರ ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ಅವಮಾನ ಮಾಡಿದ್ದು ಇರುತ್ತದೆ. ಆಗ ಅಲ್ಲಿಯೇ ಇದ್ದ ಗೋಪಾಲ, ರಾಜೇಶ, ಹಾಗೂ ಸುಭಾಸ ಎಲ್ಲರೂ ಬಂದು ಜಗಳ ಬಿಡಿಸಿದ್ದು ಇರುತ್ತದೆ. ಕಾರಣ ನನ್ನ ಮೇಲೆ ಹಲ್ಲೆ ಮಾಡಿ ನನ್ನನ್ನು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಕೈಗಳಿಂದ ಹೊಡೆದು ಜೀವದ ಬೆದರಿಕೆ ಹಾಕಿದ ಗುರಪ್ಪ ಎ.ಪಿ.ಸಿ ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.135/2022 ಕಲಂ.341, 323, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 99/2022 ಕಲಂ. 279 337 338 ಐಪಿಸಿ: ಹುಣಸಗಿ ಪಟ್ಟಣದ ಎಪಿಎಮ್ಸಿ ಒಳಗಡೆ ಡಾಂಬರ್ ರಸ್ತೆ ಕಾಮಗಾರಿ ನಡೆದಿದ್ದು, ಸದರಿ ಕೆಲಸಕ್ಕೆ ಮರಮ್ ಅವಶ್ಯಕತೆ ಇದ್ದು, ಫಿರ್ಯಾದಿ ಚಲಾಯಿಸುವ ಟಿಪ್ಪರ ನಂ: ಕೆಎ-ಕೆಎ-53, ಸಿ-3079 ನೇದ್ದನ್ನು ಲೋಹಿತ ಎನ್ನುವವರು ಬಾಡಿಗೆಗೆ ತೆಗೆದುಕೊಂಡು ತಮ್ಮ ಹೊಲದಿಂದ ಮರಮ್ ಹೊಡೆಸುತ್ತಿದ್ದು, ಫಿರ್ಯಾದಿಯು ತಾನು ಚಲಾಯಿಸುವ ಟಿಪ್ಪರದಲ್ಲಿ ಮರಮ್ ಹಾಕಿಕೊಂಡು ಎಪಿಎಮ್ಸಿ ಒಳಗೆ ಹಾಕುಲು ಹೊರಟು ದಿನಾಂಕ:20/12/2022 ರಂದು ಬೆಳಿಗ್ಗೆ 10.45 ಗಂಟೆಯ ಸುಮಾರಿಗೆ ಹುಣಸಗಿ-ನಾರಾಯಣಪೂರ ರಸ್ತೆಯ ಮೇಲೆ ಹುಣಸಗಿ ಪಟ್ಟಣದ ತಹಶೀಲ್ದಾರ ಆಪೀಸ್ ಸಮೀಪ ನೀಲಕಂಠೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯ ಹತ್ತಿರ ಹೊರಟಾಗ, ಮುಂದೆ ಒಂದು ವಾಹನ ಬಂದಿದ್ದರಿಂದ ಫಿರ್ಯಾದಿಯು ಟಿಪ್ಪರನ್ನು ನಿಧಾನವಾಗಿ ನಿಲ್ಲಿಸಿದ್ದು, ಹಿಂದೆ ಕೆ.ಎ.ಸ್.ಆರ್.ಟಿ.ಸಿ ಬಸ್ ಚಾಲಕನು ತಾನು ಚಲಾಯಿಸುವ ಬಸ್ಸನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸುವ ಟಿಪ್ಪರಗೆ ಹಿಂದಿನಿಂಡ ಜೋರಾಗಿ ಡಿಕ್ಕಿ ಕೊಟ್ಟಿದ್ದರಿಂದ ಬಸ್ಸಿನಲ್ಲಿದ್ದ 12 ಜನ ಪ್ರಯಾಣಿಕರಿಗೆ ಭಾರಿ & ಸಾದಾ ರಕ್ತಗಾಯ ಹಾಗೂ ಒಳಪೆಟ್ಟುಗಳಾದ ಬಗ್ಗೆ ಅಪರಾಧ.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 212/2022 ಕಲಂ: 78 (3) ಕೆಪಿ ಆಕ್ಟ್: ಇಂದು ದಿನಾಂಕ: 20/12/2022 ರಂದು 4.00 ಗಂಟೆ ಸುಮಾರಿಗೆ ಬೊಮ್ಮನಳ್ಳಿ ಕ್ರಾಸ್ ಹತ್ತಿರ ರಸ್ತೆ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಸಾ ಖಚಿತ ಮಾಹಿತಿ ಬಂದ ಮೇರೆಗೆ ಪಿರ್ಯಾದಿ ಚನ್ನಯ್ಯ ಹಿರೆಮಠ ಪಿ.ಐ ಮತ್ತು ಸಿಬ್ಬಂದಿಯವರಾದ ಶ್ರೀ ಲಕ್ಕಪ್ಪ ಹೆಚ್ಸಿ-102, ನಿಂಗಪ್ಪ ಪಿ.ಸಿ-114 ಹಾಗೂ ಧರ್ಮರಾಜ ಪಿ.ಸಿ-45, ರವರ ಸಂಗಡ ಕರೆದುಕೊಂಡು, ಹಾಗೂ ದಾಳಿಗಾಗಿ ಇಬ್ಬರ ಪಂಚರನ್ನು ಕರೆಯಿಸಲು ಲಕ್ಕಪ್ಪ ಹೆಚ್ಸಿ-102 ರವರಿಗೆ ತಿಳಿಸಿದ್ದು, ಇಬ್ಬರೂ ಪಂಚರನ್ನು ಬರಮಾಡಿಕೊಂಡು, ಮಾಹಿತಿ ಬಂದ ಸ್ಥಳಕ್ಕೆ ಬೇಟಿ ನೀಡಿ ಇಬ್ಬರೂ ಆರೋಪಿತನನ್ನು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಅವನಿಂದ 1510=00 ನಗದು ಹಣ ಹಾಗೂ 1 ಬಾಲ್ ಪೆನ್ ಹಾಗೂ 1 ಮಟಕ ನಂಬರ ಬರೆದು ಚೀಟಿಯನ್ನು ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿಗಳಲ್ಲಿ ವರದಿ ಸಲ್ಲಿಸಿದ್ದು ಸದರಿ ವರದಿ ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 212/2022 ಕಲಂ: 78(3) ಕೆ.ಪಿ ಯಾಕ್ಟ ಅಡಿಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.                                                                                             
 

ಇತ್ತೀಚಿನ ನವೀಕರಣ​ : 21-12-2022 10:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080