ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 22-01-2023ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ.08/2023 ಕಲಂ: 341, 323, 324, 354, 504, 506 ಸಂಗಡ 34 ಐಪಿಸಿ : ನಿನ್ನೆ ದಿನಾಂಕ 20.01.2023 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಮನೆಯಲ್ಲಿ ಊಟ ಮಾಡಿಕೊಂಡು ತನ್ನ ಭೀಮಶಪ್ಪ ಮಾಸ್ತರ ಹೊಲದಲ್ಲಿ ಕಟ್ಟಿರುವ ಹೊಲದಲ್ಲಿಯ ಮನೆಗೆ ಮಲಗಲು ಹೋಗುತ್ತಿದ್ದಾಗ ಆರೋಪಿತರು ಯಂಕಟ್ರಾಮಣ ಗುಡಿಯ ಹತ್ತಿರ ರೋಡಿನ ಮೇಲೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಕೈಯಿಂದ ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿದ್ದು ಜಗಳವನ್ನು ಬಿಡಿಸಲು ಬಂದ ಫಿರ್ಯಾಧಿಯ ಅಳೀಯನಾದ ಸೇವ್ಯಾನಿಗೂ ಕೂಡ ಹೊಡೆ-ಬಡೆ ಮಾಡಿದ್ದು ಅಲ್ಲದೇ ಫಿರ್ಯಾದಿಯ ಹೆಂಡತಿಗೆ ಅವಾಚ್ಯವಾಗಿ ಬೈದು ಆಕೆಯ ಮೈ ಮೇಲಿನ ಕುಪ್ಪಸವನ್ನು ಹರಿದು ಮಾನಭಂಗ ಮಾಡಲು ಯತ್ನಿಸಿದ್ದು ಅಲ್ಲದೇ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಬಗ್ಗೆ ಫೀರ್ಯಾದಿಯು ತನ್ನ ಮನೆಯಲ್ಲಿ ವಿಚಾರ ಮಾಡಿಕೊಂಡು ತಡವಾಗಿ ಇಂದು ಠಾಣೆಗೆ ಬಂದು ನೀಡಿದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ನಾನು ಶಿವಲಿಂಗಪ್ಪ ಪಿ.ಎಸ್.ಐ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 08/2023 ಕಲಂ: 341, 323, 324, 354, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
        

ಗುರಮಿಠಕಲ್ ಪೊಲೀಸ ಠಾಣೆ:-
ಗುನ್ನೆ ನಂ: 09/2023 ಕಲಂ. 279, 338 ಐಪಿಸಿ : ಈ ಪ್ರಕರಣದಲ್ಲಿ ಆರೊಪಿ ಪೃಥ್ವಿರಾಜ ಇತನು ಶಂಕರಪಲ್ಲಿ ಹೈದರಾಬಾದ ದಿಂದ ಅಶೋಕ ಲೇಲ್ಯಾಂಡ ಕಂಪನಿಯ ಲಾರಿ ನಂ. ಕೆ.ಎ-28-ಎ-6659 ನೇದ್ದರ ಬ್ರಿಕ್ಸಗಳನ್ನು ತುಂಬಿಕೊಂಡು ಯಾನಾಗುಂದಿ, ಗುರುಮಠಕಲ್ ಮಾರ್ಗವಾಗಿ ಭೀಮರಾಯನಗುಡಿಗೆ ಹೋಗುತ್ತಿರುವಾಗ ಲಾರಿಯನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗಿ ದಿನಾಂಕಃ 20/01/2023 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಧಮರ್ಾಪೂರ ಘಾಟ ಸೆಕ್ಷನದಲ್ಲಿರುವ ತಿರಿವು ಮತ್ತು ಇಳಿಜಾರು ರಸ್ತೆಯಲ್ಲಿ ಲಾರಿಯ ಮೇಲೆ ನಿಯಂತ್ರಣವನ್ನು ಕಳೆದುಕೊಂಡು ಪರಿಣಾಮ ಸದರಿ ಲಾರಿ ಹೆದ್ದಾರಿ ಪಕ್ಕದಲ್ಲಿರುವ ಘಾಟ ಸೆಕ್ಷನದ ತೆಗ್ಗಿನಲ್ಲಿ ಹೋಗಿದ್ದರಿಂದ ಲಾರಿ ಸುಮಾರು 3-4 ಸಲ ಪಲ್ಟಿಯಾಗಿ ಧಮರ್ಾಪೂರ ಕೆರೆ ಹತ್ತಿರ ಹೋಗಿ ಬಿದ್ದ ಪರಿಣಾಮ ಈ ಅಪಘಾತದಲ್ಲಿ ಲಾರಿ ಚಾಲಕನಿಗೆ ಗಂಭೀರ ಸ್ವರೂಪದ ರಕ್ತ ಮತ್ತು ಗುಪ್ತಗಾಯಗಳಾಗಿರುವ ಬಗ್ಗೆ ದೂರು.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 09/2023 ಕಲಂ 279, 337, 338 ಐಪಿಸಿ : ಇಂದು ದಿನಾಂಕ 21.01.2023 ರಂದು ರಾತ್ರಿ 7.15 ಗಂಟೆಗೆ ಸರಕಾರಿ ಆಸ್ಪತ್ರೆ ಸೈದಾಪೂರದಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ನಾನು ಸದರಿ ಆಸ್ಪತ್ರೆಗೆ ಭೇಟಿಕೊಟ್ಟು ಗಾಯಾಳು ತಂದೆ ಸಿದ್ದರೆಡ್ಡಿ ಇವರ ಫಿಯರ್ಾದಿ ಹೇಳಿಕೆ ಪಡೆದುಕೊಂಡಿದ್ದು ಸಾರಾಂಶವೇನೆಂದರೆ ದಿನಾಂಕ 21.01.2023 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ನಾನು ರಾಚನಳ್ಳಿ ಗ್ರಾಮದ ನಮ್ಮ ಮನೆಯಲ್ಲಿದ್ದಾಗ ನಮ್ಮೂರಾದ ರಾಚನಳ್ಳಿ ಕ್ರಾಸ ಹತ್ತಿರ ನನ್ನ ಮಗ ಮಹಿಪಾಲರೆಡ್ಡಿಗೆ ಆಕ್ಸಿಡೆಂಟ್ ಆದ ಸುದ್ದಿ ಗೊತ್ತಾಗಿ ನಾನು ಕೂಡಲೇ ಮನೆಯವರೊಂದಿಗೆ ಸ್ಥಳಕ್ಕೆ ಹೋಗಿ ಅಲ್ಲಿಗೆ ಬಂದಿದ್ದ 108 ಅಂಬುಲೆನ್ಸ್ದಲ್ಲಿ ಸರಕಾರಿ ಆಸ್ಪತ್ರೆ ಸೈದಾಪೂರಕ್ಕೆ ತಂದು ಸೇರಿಕೆ ಮಾಡಿದ್ದು, ನನ್ನ ಮಗನನ್ನು ನೋಡಲಾಗಿ  ತಲೆಗೆ ಭಾರಿ ರಕ್ತಗಾಯವಾಗಿದ್ದು, ಮುಖಕ್ಕೆ ಸಣ್ಣಪುಟ್ಟ ರಕ್ತಗಾಯ ಆಗಿರುತ್ತದೆ. ನನ್ನ ಮಗ ಗಾಬರಿಯಿಂದ ಸರಿಯಾಗಿ ಮಾತನಾಡುತ್ತಿಲ್ಲ. ಸದರಿ ಘಟನೆ ಹೇಗಾಯಿತು ಅಂತ ನನ್ನ ಮಗನ ಜೊತೆಗಿದ್ದ ನನ್ನ ಅಳಿಯ ಚನ್ನಾರೆಡ್ಡಿ ತಂದೆ ಬನ್ನಪ್ಪಗೌಡ ಇವನಿಗೆ ವಿಚಾರಿಸಲಾಗಿ ತಿಳಿಸಿದ್ದೇನೆಂದರೆ, ಇಂದು ದಿನಾಂಕ 21.01.2023 ರಂದು ಸಾಯಂಕಾಲ 6-15 ಗಂಟೆ ಸುಮಾರಿಗೆ ಮಹಿಪಾಲರೆಡ್ಡಿ ರಾಚನಳ್ಳಿ ಕ್ರಾಸ ಹತ್ತಿರ ಎನ್.ಹೆಚ್-150 ರೋಡ ಕ್ರಾಸ ಮಾಡಿಕೊಂಡು ವಿನೋದ ದಾಬಾ ಕಡೆಗೆ ಬರುತ್ತಿದ್ದಾಗ ರಾಯಚೂರ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದ ಲಾರಿ ಚಾಲಕ ನಡೆದುಕೊಂಡು ಹೊರಟಿದ್ದ ಮಹಿಪಾಲರೆಡ್ಡಿಗೆ ಡಿಕ್ಕಿಪಡಿಸಿ ಅಪಘಾತಪಡಿಸಿದ್ದು, ಅಪಘಾತದಲ್ಲಿ ರೋಡಿನ ಮೇಲೆ ಬಿದ್ದ ಮಹಿಪಾಲರೆಡ್ಡಿಗೆ ತಲೆಗೆ ಭಾರಿ ರಕ್ತಗಾಯ ಮತ್ತು ಮುಖಕ್ಕೆ ಸಣ್ಣಪುಟ್ಟ ರಕ್ತಗಾಯ ಆಗಿರುತ್ತದೆ. ನಂತರ ಅಪಘಾತ ಪಡಿಸಿದ ಲಾರಿ ನಂಬರ ನೋಡಲಾಗಿ ಎಮ್.ಹೆಚ್-18 ಬಿ.ಎ-4442 ಅಂತಾ ಇದ್ದು ಅದರ ಚಾಲಕನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಪುಷ್ಕರ ಜಾಮ ತಂದೆ ನಾನಕಚಂದ ವಯ|| 32 ವರ್ಷ, ಜಾ|| ಪಂಜಾಬಿ ಉ|| ಡ್ರೈವರ ಸಾ||ಮನೆ ನಂಬರ 09 ಶೇರಪುರ ಬುಜುಗರ್ಾ ಗ್ರಾಮ ಪೊಸ್ಟ- ಮಿನಾವದಾ ತಹಶೀಲ- ತಾಲ ಜಿ|| ರತ್ಲಾಮ ರಾಜ್ಯ ಮಧ್ಯ ಪ್ರದೇಶ ಪಿನ ನಂಬರ 457114 ಅಂತಾ ಗೊತ್ತಾಯಿತು. ಅಂತಾ ತಿಳಿಸಿದನು. ಕಾರಣ ಇಂದು ದಿನಾಂಕ 21.01.2023 ರಂದು ಸಾಯಂಕಾಲ 6-15 ಗಂಟೆ ಸುಮಾರಿಗೆ ನನ್ನ ಮಗ ಮಹಿಪಾಲರೆಡ್ಡಿ ಈತನು ರಾಚನಳ್ಳಿ ಕ್ರಾಸ ಹತ್ತಿರ ರೋಡಿನ ಮೇಲೆ ಹೊರಟಾಗ ರಾಯಚೂರ ಕಡೆಯಿಂದ ಬಂದ ಲಾರಿ ನಂಬರ ಎಮ್.ಹೆಚ್-18 ಬಿ.ಎ-4442 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿ ನಿಯಂತ್ರಣ ತಪ್ಪಿ ಎನ್-ಹೆಚ್-150 ರೋಡಿನ ಮೇಲೆ ರಸ್ತೆ ಕ್ರಾಸ ಮಾಡುತ್ತಿದ್ದ  ನನ್ನ ಮಗನಿಗೆ ಡಿಕ್ಕಿಪಡಿಸಿ ಗಂಭೀರ ಮತ್ತು ಸಾದಾ ಗಾಯಗಳನ್ನುಂಟು ಮಾಡಿದ್ದು, ಸದರಿ ಲಾರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ನೀಡಿದ ಫಿಯರ್ಾದಿ ಹೇಳಿಕೆ ಮೇಲಿಂದ ಮರಳಿ ಠಾಣೆಗೆ ರಾತ್ರಿ 8-30 ಗಂಟೆಗೆ ಬಂದು ಫಿಯರ್ಾದಿ ಹೇಳಿಕೆ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 09/2023 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: ಗುನ್ನೆ ನಂ 05/2023 ಕಲಂ: 279, 338 ಐಪಿಸಿ  : ಇಂದು ದಿನಾಂಕ 21/01/2023 ರಂದು 8.15 ಪಿಎಮ್ ಕ್ಕೆ ಅಜರ್ಿದಾರರಾದ ಶ್ರೀ ಲಾಳೆಮಶಾಕ ತಂದೆ ಆದಮಸಾಬ ಬಡಿಗೇರ ವ|| 38ವರ್ಷ ಜಾ|| ಮುಸ್ಲಿಂ ಉ|| ಚಾಲಕ ಸಾ|| ಸುಂಬಡ ತಾ|| ಯಡ್ರಾಮಿ ಜಿ|| ಕಲಬುರಗಿ ಇವರು ಠಾಣೆಗೆ ಹಾಜರಾಗಿ ನೀಡಿದ ಫಿಯರ್ಾದಿಯ ಸಾರಾಂಶವೇನೆಂದರೆ, ನಮ್ಮ ತಂಗಿಯಾದ ಸನಾ ಇವಳಿಗೆ ಅಸಂತಾಪೂರ ಗ್ರಾಮದ ಬಂದೇನವಾಜ ತಂದೆ ಖಾದರಸಾಬ ನದಾಫ ವ|| 25ವರ್ಷ ಜಾ|| ಮುಸ್ಲಿಂ ಉ|| ಕೂಲಿ ಈತನಿಗೆ ಕೊಟ್ಟು ಮದುವೆ ಮಾಡಿದ್ದು, ಈಗ್ಗೆ 3 ತಿಂಗಳುಗಳ ಹಿಂದಿನಿಂದ ನಮ್ಮ ತಂಗಿಯಾದ ಸನಾ ಮತ್ತು ನಮ್ಮ ಅಳಿಯನಾದ ಬಂದೇನವಾಜ ಇಬ್ಬರೂ ನಮ್ಮ ಊರಾದ ಸುಂಬಡ ಗ್ರಾಮದ ನಮ್ಮ ಮನೆಯಲ್ಲಿಯೇ ಇರುತ್ತಿದ್ದಾರೆ. ಹೀಗಿದ್ದು  ಇಂದು ದಿನಾಂಕ 21/01/2023 ರಂದು ಅಮವಾಸ್ಯೆ ಇದ್ದುದರಿಂದ ದೇವರ ದರ್ಶನಕ್ಕೆಂದು ತಾಳಿಕೋಟಿ ಹತ್ತಿರ ಮಾರಲಬಾವಿ ಗ್ರಾಮಕ್ಕೆ ನಾನು ಮತ್ತು ನಮ್ಮ ಅಳಿಯನಾದ ಬಂದೇನವಾಜ ತಂದೆ ಖಾದರಸಾಬ ನದಾಫ, ನನ್ನ ಹೆಂಡತಿಯಾದ ಮುಮತಾಜಬೀ ಗಂಡ ಲಾಳೆಮಶಾಕ ಬಡಿಗೇರ ಮತ್ತು ನಮ್ಮ ಸಂಬಂಧಿಕರಾದ ರೇಷ್ಮಾ ಗಂಡ ಬಂದೇನವಾಜ ಬಡಿಗೇರ ಎಲ್ಲರೂ ಕೂಡಿ ಎರಡು ಸೈಕಲ್ ಮೋಟಾರಗಳನ್ನು ತೆಗೆದುಕೊಂಡು ಇಂದು ಮುಂಜಾನೆ 7.00 ಗಂಟೆಯ ಸುಮಾರಿಗೆ ಸುಂಬಡದಿಂದ ಹೊರಟೆವು. ನನ್ನ ಸೈಕಲ್ ಮೋಟಾರ ಮೇಲೆ ನನ್ನ ಹೆಂಡತಿಯಾದ ಮುಮತಾಜಬೀ ಮತ್ತು ನಮ್ಮ ಸಂಬಂಧಿಕರಾದ ರೇಷ್ಮಾ ಮತ್ತು ನಾನು ಕುಳಿತು ಹೊರಟಿದ್ದು ನಮ್ಮ ಅಳಿಯನಾದ ಬಂದೇನವಾಜನು ತನ್ನ ಸೈಕಲ್ ಮೋಟಾರ ನಂ ಕೆಎ 33 ಇಎ 7351 ನೇದ್ದರ ಮೇಲೆ ಒಬ್ಬನೇ ಹೊರಟಿದ್ದು ಬಂದೇನವಾಜನು ಸ್ವಲ್ಪ ಮುಂದೆ ಹೋಗುತ್ತಿದ್ದು ನಾವು ಸ್ವಲ್ಪ ಹಿಂದೆ ಹೋಗುತ್ತಿದ್ದೆವು. ನಾವು ಕೆಂಭಾವಿ ತಾಳಿಕೋಟಿ ರಸ್ತೆಯ ಮೇಲೆ ಫತೇಪೂರ ಕ್ರಾಸ್ ಹತ್ತಿರ ಹೋಗುತ್ತಿದ್ದಾಗ 8.30 ಎಎಂ ಸುಮಾರಿಗೆ ಮುಂದೆ ಹೋಗುತ್ತಿದ್ದ ನಮ್ಮ ಅಳಿಯನಾದ ಬಂದೇನವಾಜನ ಸೈಕಲ್ ಮೋಟಾರಗೆ ಎದುರಿನಿಂದ ಅಶೋಕ ಲೈಲ್ಯಾಂಡ ಗೂಡ್ಸ್ ವಾಹನ ನಂ ಕೆಎ 33 ಬಿ 1959 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬಂದೇನವಾಜನ ಸೈಕಲ್ ಮೋಟಾರಗೆ ಜೋರಾಗಿ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಬಂದೇನವಾಜನು ಕೆಳಗೆ ಬಿದ್ದಿದ್ದು ತಕ್ಷಣ ನಾನು, ನನ್ನ ಹೆಂಡತಿ ಮತ್ತು ನಮ್ಮ ಸಂಬಂಧಿಕರಾದ ರೇಷ್ಮಾ ಎಲ್ಲರೂ ಕೂಡಿ ಬಂದೇನವಾಜನಿಗೆ ಎಬ್ಬಿಸಿ ನೋಡಲಾಗಿ ಬಲಗೈನ ಬೆರಳುಗಳಿಗೆ ರಕ್ತಗಾಯ, ಎಡಗಾಲಿನ ಪಾದದ ಮೇಲೆ ತರಚಿದ ಗಾಯ ಮತ್ತು ತಲೆಯ ಹಿಂದೆ ಭಾರೀ ರಕ್ತಗಾಯವಾಗಿ ಮಾತನಾಡದ ಸ್ಥಿತಿಯಲ್ಲಿ ಬಿದ್ದಿದ್ದರಿಂದ ಬಂದೇನವಾಜನಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿದ ಗೂಡ್ಸ ವಾಹನದಲ್ಲಿ ಹಾಕಿಕೊಂಡು ಕೆಂಭಾವಿ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ಚಿಕಿತ್ಸೆ ಕೊಡಿಸಿದ್ದು ಅಪಘಾತ ಮಾಡಿದ ಚಾಲಕನು ಅಲ್ಲಿಯೇ ಇದ್ದು ಅವನ ಹೆಸರು ವಿಳಾಸ ತಿಳಿದುಕೊಳ್ಳಲಾಗಿ ಮುನಾನಖಾನ್ ತಂದೆ ವಶೀಂಖಾನ್ ಸಾ|| ಉತ್ತರಪ್ರದೇಶ ಹಾ|| ವ|| ಕೆಂಭಾವಿ ಅಂತಾ ತಿಳಿದು ಬಂದಿದ್ದು ಇರುತ್ತದೆ. ಬಂದೇನವಾಜನಿಗೆ ಭಾರೀ ಗಾಯಗಳಾಗಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಉಪಚಾರ ಕುರಿತು ವಿಜಯಪೂರದ ವಾಸುದೇವ ಆಸ್ಪತ್ರೆಗೆ ನಾನು ಮತ್ತು ನಮ್ಮ ತಂದೆಯಾದ ಆದಮಸಾಬ ಬಡಿಗೇರ ಮತ್ತು ರೇಷ್ಮಾ ಎಲ್ಲರೂ ಕೂಡಿ ಅರ್ಜಂಟಾಗಿ ನಮ್ಮ ಅಳಿಯನಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ನಾನು ದೂರು ನೀಡಲು ಮರಳಿ ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ಕಾರಣ ನಮ್ಮ ಅಳಿಯನಾದ ಬಂದೇನವಾಜ ನದಾಫ ಈತನು ತನ್ನ ಸೈಕಲ್ ಮೋಟಾರ ನಂ ಕೆಎ 33 ಇಎ 7351 ನೇದ್ದರ ಮೇಲೆ ಕೆಂಭಾವಿ ತಾಳಿಕೋಟಿ ಮುಖ್ಯ ರಸ್ತೆಯ ಮೇಲೆ ಫತೇಪೂರ ಕ್ರಾಸ್ ಹತ್ತಿರ ಹೋಗುತ್ತಿದ್ದಾಗ ಎದುರಿನಿಂದ ಅಶೋಕ ಲೈಲ್ಯಾಂಡ ಗೂಡ್ಸ್ ವಾಹನ ನಂ ಕೆಎ 33 ಬಿ 1959 ನೇದ್ದರ ಚಾಲಕನಾದ ಮುನಾನಖಾನ್ ತಂದೆ ವಶೀಂಖಾನ್ ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬಂದೇನವಾಜನ ಸೈಕಲ್ ಮೋಟಾರಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಬಂದೇನವಾಜನಿಗೆ ಭಾರೀ ಪ್ರಮಾಣದ ಗಾಯವಾಗಲು ಕಾರಣನಾಗಿದ್ದು ಸದರಿ ಗೂಡ್ಸ ವಾಹನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 05/2023 ಕಲಂ 279, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 04/2023   ಕಲಂ 87  ಕೆ.ಪಿ ಯಾಕ್ಟ : ದಿನಾಂಕ:21/01/2023 ರಂದು  ಮದ್ಯಾಹ್ನ 14.30  ಗಂಟೆಗೆ ಫಿರ್ಯಾದಿದಾರರು ಠಾಣೆಯಲ್ಲಿದ್ದಾಗ,   ಹುಣಸಗಿ ಪೊಲೀಸ ಠಾಣಾ ವ್ಯಾಪ್ತಿಯ ಗುಂಡಲಗೇರಾ ಸೀಮಾಂತರದ ಯುಕೆಪಿ ಕೆನಾಲನ ರೋಡಿನ ದಂಡೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಕೂಡಿಕೊಂಡು ದುಂಡಾಗಿ ಕುಳಿತು  ಇಸ್ಪೀಟ್ ಎಲೆಗಳ ಸಹಾಯದಿಂದಾ ಹಣವನ್ನು ಪಣಕ್ಕೆ ಇಟ್ಟು ಅಂದರ್ ಬಾಹರ್ ಎಂಬ ನಶೀಭದ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಇಸ್ಪಟ್ ಜೂಜಾಟ ಆಡುವವರ ಮೇಲೆ ಗುನ್ನೆ ದಾಖಲಿಸಿ & ದಾಳಿ ಮಾಡುವ ಕುರಿತು ಮಾನ್ಯ ಜೆ.ಎಫ್.ಎಮ್ ಸಿ ಕೊರ್ಟ ಶೊರಾಪುರ ರವರಲ್ಲಿ ಪರವಾನಿಗೆ ಪಡೆದುಕೊಂಡು ಈ ಬಗ್ಗೆ ಗುನ್ನೆ ದಾಖಲಿಸಲು ಪಿಎಸ್ಐ ಸಾಹೇಬರು ಮದ್ಯಾಹ್ನ 15.30 ಗಂಟೆಗೆ ಗುನ್ನೆ ದಾಖಲಿಸಲು ಜ್ಞಾಪನ ಪತ್ರ & ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರ ಕೊಟ್ಟಿದ್ದು ಸದರಿ ಜ್ಞಾಪನ ಆಧಾರದ ಮೇಲಿಂದ ಗುನ್ನೆ ನಂ.04/2023 ಕಲಂ.87 ಕೆ.ಪಿ ಆಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡಿದ್ದು ಇರುತ್ತದೆ. ನಂತರ ಪಿಎಸ್ಐ ಸಾಹೇಬರು ರವರು 17.45 ಗಂಟೆಗೆ ಮರಳಿ ಠಾಣೆಗೆ ಬಂದು 7 ಜನ ಆರೋಪಿತರಾದ 1) ದೇವರಾಜ ತಂದೆ ಬಸಪ್ಪ ಅಗ್ನಿ ವಯ:24 ವರ್ಷ ಜಾತಿ:ಹಿಂದೂ ಉಪ್ಪಾರ ಉ:ಒಕ್ಕಲುತನ ಸಾ:ಇಸ್ಲಾಂಪೂರ 2) ಯಲ್ಲಪ್ಪ ತಂದೆ ದ್ಯಾಮಣ್ಣ ವಡಗೇರಿ ವಯ:29 ವರ್ಷ ಜಾತಿ: ಕುರುಬರು ಉ:ಒಕ್ಕಲುತನ ಸಾ:ಇಸ್ಲಾಂಪೂರ 3) ಮಾನಪ್ಪ ತಂದೆ ಬಸಪ್ಪ ಮೇಲ್ದಾಪೂರ ವಯ:36 ವರ್ಷ ಜಾತಿ:ಹಿಂದೂ ಉಪ್ಪಾರ ಉ:ಒಕ್ಕಲುತನ ಸಾ:ಇಸ್ಲಾಂಪೂರ 4) ನಿಂಗಪ್ಪ ತಂದೆ ನಾನಾಗೌಡ ಕವಿತಾಳ ವಯಾ-29 ವರ್ಷ, ಜಾ:ಲಿಂಗಾಯತ ಉ:ಒಕ್ಕಲುತನ ಸಾ:ಗುಂಡಲಗೇರಾ  5) ರಮೇಶ ತಂದೆ ಗುರುಲಿಂಗಪ್ಪ ಅಗ್ನಿ ವಯಾ-27 ವರ್ಷ, ಜಾ:ಉಪ್ಪಾರ ಉ:ಒಕ್ಕಲುತನ ಸಾ:ಇಸ್ಲಾಂಪೂರ.6)ವೆಂಕಟೇಶ ತಂದೆ ದೇವಪ್ಪ ಹುಡೇದಮನಿ ವಯಾ-28 ವರ್ಷ, ಜಾ:ಉಪ್ಪಾರ ಉ:ಒಕ್ಕಲುತನ ಸಾ:ಇಸ್ಲಾಂಪೂರ 7) ರಾಘವೇಂದ್ರ ತಂದೆ ದೇವಿಂದ್ರಪ್ಪ ಅಗ್ನಿ ವಯಾ-36 ವರ್ಷ, ಜಾ:ಉಪ್ಪಾರ ಉ:ಒಕ್ಕಲುತನ ಸಾ:ಇಸ್ಲಾಂಪೂರ ಹಾಗೂ ಆರೋಪಿತರಿಂದ ಜಪ್ತಿ ಮಾಡಿದ  ನಗದು ಹಣ 7150/- ರೂ.ಗಳು, 52 ಇಸ್ಪೀಟ್ ಎಲೆಗಳು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜಪ್ತಿ ಪಂಚನಾಮೆ & ವರದಿ ನೀಡಿದ್ದು  ಇರುತ್ತದೆ.  

 

ಇತ್ತೀಚಿನ ನವೀಕರಣ​ : 23-01-2023 11:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080