ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 22-02-2022


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ. 34/2022 ಕಲಂ 506 ಐಪಿಸಿ : ಫಿರ್ಯಾದಿದಾರಯ ಮನೆಯ ಮ್ಯಾಳಗಿಯ ಮೇಲೆ ಅನಾಮಿದೇವಿ ಪತ್ರ ಸಿಕ್ಕಿದ್ದು ಅದರಲ್ಲಿ ನೀನು ಒಂದು ಕುಟುಂಕ್ಕೆ ಮೋಸ ಮಾಡಿದೇ ಅವರಿಗೆ ನೀನು 10 ಲಕ್ಷ ರೂಪಾಯಿಗಳನ್ನು ನೀಡಬೇಕು ಇಲ್ಲದಿದ್ದರೇ ನಿನ್ನ ಕುಟುಂದ ಒಬ್ಬೋಬ್ಬ ಸದಸ್ಯರನ್ನು ಕಳೆದುಕೊಳ್ಳಬೇಕಾಗುತ್ತದೆ ಅಂತಾ ಇದ್ದ ಪಿರ್ಯಾಧಿ ಸಲ್ಲಿಸಿ ದೂರು ಅಜರ್ಿಯ ಸಾರಾಂಶವು ಅಸಂಜ್ಞ ಅಪರಾಧವಾಗುತ್ತಿರುವದಿಂದ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಪಿರ್ಯಾಧಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಗುನ್ನೆ ನಂ. 34/2022 ಕಲಂ 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 18/2022 ಕಲಂ: 143, 147, 148, 341, 323, 324, 355, 307, 308, 504, 506 ಸಂ: 149 ಐಪಿಸಿ : ಇಂದು ದಿನಾಂಕ: 21/02/2022 ರಂದು 11.30 ಎ.ಎಮ್ ಕ್ಕೆ ಶಿವಮಹಾಂತಪ್ಪ @ ಮಹಾಂತಪ್ಪ ತಂದೆ ಖಂಡಪ್ಪ ನರಬೋಳಿ ವಯಾ:45 ಉ: ಒಕ್ಕಲುತನ ಜಾ: ಕುರುಬರ ಸಾ: ಚಂದಾಪೂರ ತಾ: ಶಹಾಪೂರ. ಇವರು ಒಂದು ಲಿಖಿತ ಅಜರ್ಿ ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ನಾನು ನನ್ನ ತಾಯಿಯವರೊಂದಿಗೆ ಚಂದಾಪೂರ ಗ್ರಾಮದಲ್ಲಿ ವಾಸವಾಗಿರುತ್ತೇನೆ. ಹೀಗಿದ್ದು, ನಾನು ದಿನಾಂಕ-19/02/2022 ರಂದು ಸಾಯಂಕಾಲ 4.00 ಗಂಟೆ ಸುಮಾರಿಗೆ ಹಣಮಂತ್ರಾಯಗೌಡ ಇವರ ಕಿರಾಣಿ ಅಂಗಡಿ ಮುಂದೆ ನಾನು ಹಾಗೂ ನಮ್ಮೂರಿನ ನಿಂಗಯ್ಯ ತಂದೆ ಭೀಮಣ್ಣ ಗೂಣಗುಣೆ, ರಾಜು ತಂದೆ ತಿಪ್ಪಣ್ಣ ಚಂದಾಪೂರಕರ, ಬಸವರಾಜ ತಂದೆ ಮಾರ್ಥಂಡಪ್ಪ ಬಿರೆದಾರ, ಮಲ್ಲಪ್ಪ ತಂದೆ ಹಣಮಂತ ಸಾದ್ಯಾಪೂರ, ಮಡಿವಾಳಪ್ಪಗೌಡ ತಂದೆ ಸಿದ್ರಾಮಪ್ಪಗೌಡ ಇವರೊಂದಿಗೆ ದೂರದಲ್ಲಿ ನಿಂತು ಮಾತಾಡುತ್ತಿದ್ದಾಗ ಆಗ ಅಲ್ಲಿಗೆ ನಮ್ಮ ಊರಿನವರಾದ 1) ಚಿದಾನಂದ ತಂದೆ ಭೀಮಪ್ಪ ದೋರನಳ್ಳಿ 2) ಶರಣಪ್ಪ ತಂದೆ ಭೀಮಪ್ಪ ದೋರನಳ್ಳಿ 3) ಭೀಮಪ್ಪ ತಂದೆ ಶರಣಪ್ಪ ದೋರನಳ್ಳಿ 4) ಮಾನಪ್ಪ ತಮದೆ ದಂಡಪ್ಪ ದೋರನಳ್ಳಿ 5) ಶರಣಪ್ಪ ತಂದೆ ಬಸ್ಸಪ್ಪ ತೋಟದ 6) ದೇವಪ್ಪ ತಂದೆ ಬಸ್ಸಪ್ಪ ತೋಟದ 7) ಶರಣಪ್ಪ ತಂದೆ ಬೈಲಪ್ಪ ತೋಟದ 8) ಶಿವರಾಜ ತಂದೆ ಶರಣಪ್ಪ ತೋಟದ ಎಲ್ಲರೂ ಜಾ: ಮಾದರ ಸಾ; ಚಂದಾಪೂರ ಇವರು ಎಲ್ಲರೂ ಕೂಡಿ ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ನಾನು ನಿಂತಲ್ಲಿಗೆ ಬಂದು ಎಲೆ ಬೋಸಡಿ ಮಗನೆ ಶಿವಮಾಂತ್ಯಾ ನಿನಗೆ ಸೋಕ್ಕು ಬಂದಾದಲೇ ಕುರುಬ ಸೂಳೆ ಮಗನೆ ಊರಲ್ಲಿ ನಿಂದೆ ದಿಮಾಕು ಬಹಳ ಆಗಿದೆ ಕುರುಬರ ಗುಂಪು ಕಟ್ಟಿಕೊಂಡು ಹೋದ ವರ್ಷ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನಮ್ಮ ಪ್ಯಾನಲದವರಿಗೆ ಸೋಲಿಸಿದ್ದೀರಿ ಮಕ್ಕಳೆ ಎಂದು ಒಮ್ಮೆಲೆ ಬೈಯುತ್ತಾ ಬಂದರು. ಆಗ ನಾನು ಯಾಕೆ ಬೈಯುತ್ತಿರಿ ಚುನಾವಣೆಯಲ್ಲಿ ಜನರು ಸೋಲಿಸಿದ್ದಾರೆ, ಜನರು ಗೆಲ್ಲಿಸಿದ್ದಾರೆ, ಜನರು ಆಶಿವರ್ಾದ ಮಾಡಿ ಓಟು ಹಾಕಿದರೆ ಗೆಲುತ್ತಾರೆ. ನಾನೇಕೆ ಸೋಲಿಸಲಿ ಅಂತಾ ಅಂದಾಗ ಮಗನೆ ಊರಲ್ಲಿ ನಿನೇ ಮುಂದ ನಿಂತು ನಮ್ಮ ಪ್ಯಾನಲದವರಿಗೆ ಸೋಲಿಸಿದಿ ಇವತ್ತು ನಿಂದು ಒದು ಕೈ ನೋಡಿಬಿಡುತ್ತೆವೆ ಇವತ್ತು ಸಿಕ್ಕಿದಿ ಇವತ್ತು ನಿನ್ನ ಮುಗಿಸಿಬಿಟ್ಟರೆ ಊರಲ್ಲಿ ಎಲ್ಲರೂ ಅಂಜಿಕೆಯಿಂದ ಇದ್ದು ಊರಲ್ಲಿ ನಂದೆ ನಡೆಯುತ್ತದೆ ಅಂತಾ ಅಂದು ಹಳೆ ವೈಷ್ಯಮ್ಯ ಇಟ್ಟುಕೊಂಡು ಕೋಲೆ ಮಾಡುವ ಉದ್ದೇಶದಿಂದ ಚಿದಾನಂದ ತಂದೆ ಭೀಮಪ್ಪ ದೋರನಳ್ಳಿ ಈತನು ಒಮ್ಮೆಲೆ ತನ್ನ ಬೆನ್ನ ಹಿಂದೆ ಇಟ್ಟುಕೊಂಡು ಬಂದಿದ್ದ ಒಂದು ಚಾಕುವಿನಿಂದ ನನ್ನ ಎಡಗಡೆ ಕುತ್ತಗೆಗೆ ಹೊಡೆದು ಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ. ಆಗ ಅಲ್ಲಿ ಇದ್ದ ಮರೆಪ್ಪ ತಂದೆ ದಂಡಪ್ಪ ದೋರನಳ್ಳಿ ಈತನು ಒಂದು ಬಡಿಗೆಯಿಂದ ನನ್ನ ಬೆನ್ನಿಗೆ ಮತ್ತು ಎದೆಗೆ ಹೊಡೆದು ಒಳಪೆಟ್ಟು ಮಾಡಿದನು. ಶರಣಪ್ಪ ತಂದೆ ಬಸ್ಸಪ್ಪ ತೋಟದ ಈತನು ಕಾಲಿನಿಂದ ನನಗೆ ಜೋರಾಗಿ ಒದ್ದನು. ಆಗ ನಾನು ಕೆಳಗಡೆ ಬಿದ್ದಾಗ ಶರಣಪ್ಪ ತಂದೆ ಬೈಲಪ್ಪ ತೋಟದ ಈತನು ತನ್ನ ಕಾಲಿನಿಂದ ನನ್ನ ತೊಡ್ಡಿಗೆ ಒದ್ದು ಒಳಪೆಟ್ಟು ಮಾಡಿದನು ನಂತರ ಶರಣಪ್ಪ ತಂದೆ ಭೀಮಪ್ಪ ದೋರನಳ್ಳಿ ಈತನು ನನಗೆ ಚಪ್ಪಲಿಯಿಂದ ತೆಲೆಗೆ ಮತ್ತು ಕಪಾಳಕ್ಕೆ ಹೊಡೆದು ಗಾಯಗೋಳಿಸಿದನು. ಭೀಮಪ್ಪ ತಂದೆ ಶರಣಪ್ಪ, ಶಿವರಾಜ ತಂದೆ ಶರಣಪ್ಪ ಇವರು ಈ ಮಗಂದು ಸೊಕ್ಕು ಬಹಳ ಬಂದಿದೆ ಹೊಡೆದು ಖಲಾಸ ಮಾಡರಿ ಬಿಡಬ್ಯಾಡರಿ, ನಾವು ಚುನಾವಣೆಗೆ ಸೋಲಲು ಇವನೆ ಪ್ರಮುಖ ಕಾರಣ ಇರುತ್ತಾನೆ. ಅಂತಾ ನನಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಹೊಡೆದಿರುತ್ತಾರೆ. ಆಗ ಅಲ್ಲಿಯೇ ಇದ್ದ ನಿಂಗಯ್ಯ, ರಾಜು ಮಲ್ಲಪ್ಪ, ಬಸವರಾಜ ಮಡಿವಾಳಪ್ಪಗೌಡ ಇವರು ಬಿಡಿಸಿದಾಗ ನನಗೆ ಹೊಡೆದವರು ಮಗನೆ ಇವತ್ತು ನಿನ್ನ ದೈವ ಚೋಲ ಇದೆ ಉಳದಿದಿ ಇನ್ನೊಮ್ಮೆ ನೋಡಿಕೊಳ್ಳುತ್ತೇವೆ. ಈ ಬಗ್ಗೆ ಒಂದೆ ಕೇಸ್ ಕೊಟ್ಟರೆ ಮುಂದೆ ಇದೆ ನಿಗನೆ ಹಬ್ಬ ಅಂತಾ ಜೀವದ ಬೇದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಆಗ ಜಗಳ ಬಿಡಿಸಿದವರು ನನಗೆ ಶಹಾಪೂರ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ.
ನನಗೆ ಕೊಲೆ ಮಾಡಲು ಪ್ರಯತ್ನ ಮಾಡಿದವರು ಹೊದ ವರ್ಷ ನಡೆದ ಚುನಾವಣೆಯಲ್ಲಿ ಸೋತಿದ್ದರಿಂದ ಹಳೆ ವೈಶ್ಯಮ್ಯ ಇಟ್ಟುಕೊಂಡು ನನಗೆ ಹೊಡೆದು ಕೋಲೆ ಮಾಡಲು ಪ್ರಯತ್ನ ಮಾಡಿ ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.
ನನಗೆ ಗಾಯವಾಗಿದ್ದರಿಂದ ಮೊದಲು ಆಸ್ಪತ್ರೆಗೆಯಲ್ಲಿ ಉಪಚಾರ ಪಡೆದು ತಡವಾಗಿ ಇಂದು ದಿನಾಂಕ:21/02/2022 ರಂದು ಅಜರ್ಿ ನೀಡಿರುತ್ತೇನೆ ನನ್ನ ಅಜರ್ಿಯನ್ನು ಸ್ವೀಕರಿಸಿ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಅಜರ್ಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 18/2022 ಕಲಂ: 143, 147, 148, 341, 323, 324, 355, 307, 308, 504, 506 ಸಂ: 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 22-02-2022 10:15 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080