Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 21-04-2022


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 57/2022.ಕಲಂ, 143,147,148,323,324,354,504,506ಸಂ,149. ಐ.ಪಿ.ಸಿ. : ಇಂದು ದಿನಾಂಕ 20/04/2022 ರಂದು 14-00 ಗಂಟೆಗೆ ಪಿಯರ್ಾದಿ ಶ್ರೀ ಸಾಯಬಣ್ಣ ತಂದೆ ಬಚ್ಚಣ್ಣ ವಗ್ಗಾಲಿ ವ|| 45 ಜಾ|| ಯಾದವ ಉ|| ಕೂರಿಕಾಯುವದು ಸಾ|| ವಿರುಪಾಪೂರದೊಡ್ಡಿ -9901203047 ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ೀ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ. ದಿನಾಂಕ 18/04/2022 ರಂದು ಸಾಯಂಕಾಲ ನನಗು ಮತ್ತು ನಮ್ಮ ಸಂಬಂದಿಕನಾದ ಭೈಲಪ್ಪ ತಂದೆ ಅಮರಪ್ಪ ಪುಲರ್ೆ ಈತನಿಗು ಬಾಯಿಮಾತಿನ ತಕರಾರು ಆಗಿದ್ದು ನಾನು ಹೋಗಲಿ ಅಂತ ಸುಮ್ಮನಾಗಿದ್ದೆನು. ಹೀಗಿದ್ದು ನಾನು ಮತ್ತು ನಮ್ಮ ಅಣ್ಣತಮಕಿಯ ಲಕ್ಷ್ಮಣ್ಣ ತಂದೆ ಸೋಪಣ್ಣ ವಗ್ಗಾಲಿ, ಹಾಗೂ ದೇವಿಂದ್ರಪ್ಪ ತಂದೆ ಸೋಪಣ್ಣ ಮೂಲಿಮನಿ, ಎಲ್ಲರು ಕೂಡಿ ಕೂರಿಗಳನ್ನು ಮೇಯಿಸುತ್ತಿದ್ದು ಸದರಿ ಕೂರಿಗಳನ್ನು ಸಗರ (ಬಿ) ಸಿಮಾಂತದಲ್ಲಿ ಇರುವ ನಮಗೆ ಪರಿಚಯದವರಾದ ಸೋಪಣ್ಣ ತಂದೆ ಭೀರಪ್ಪ ದೇವಿಕೇರಿ. ಇವರ ಹೋಲದಲ್ಲಿ ನಾವು ಕುರಿ ಹಟ್ಟಿ ಹಾಕಿದ್ದೆವು. ದಿನಾಂಕ 19/04/2022 ರಂದು ಬೆಳಿಗ್ಗೆ 6-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ನಿಂಗಮ್ಮ ಗಂಡ ಸಾಯಬಣ್ಣ ವಗ್ಗಾಲಿ, ನನ್ನ ಮಕ್ಕಳಾದ ಸಿದ್ದಪ್ಪ ತಂದೆ ಸಾಯಬಣ್ಣ ವಗ್ಗಾಲಿ, ಯಲ್ಲಪ್ಪ ತಂದೆ ಸಾಯಬಣ್ಣ ವಗ್ಗಾಲಿ, ಮತ್ತು ನಮ್ಮ ಅಣ್ಣತಮಕಿಯ ಲಕ್ಷ್ಮಣ್ಣ ತಂದೆ ಸೋಪಣ್ಣ ವಗ್ಗಾಲಿ. ದೇವಿಂದ್ರಪ್ಪ ತಂದೆ ಸೋಪಣ್ಣ ಮೂಲಿಮನಿ, ಸೋಪಣ್ಣ ತಂದೆ ಯಲ್ಲಪ್ಪ ಮೂಲಿಮನಿ, ಎಲ್ಲರು ಕುರಿ ಹಟ್ಟಿಯ ಹತ್ತಿರ ಇದ್ದಾಗ ನಮ್ಮ ಸಂಬಂದಿಕರಾದ 1) ಬೈಲಪ್ಪ ತಂದೆ ಅಮರಪ್ಪ ಪುಲರ್ೆ, 2) ಮಲ್ಲಪ್ಪ ತಂದೆ ಭೀಮಣ್ಣ ಪುಲರ್ೆ, 3) ಸೋಪಣ್ಣ ತಂದೆ ಭೀಮಣ್ಣ ಪುಲರ್ೆ, 4] ಸಾಯಬಣ್ಣ ತಂದೆ ಯಲ್ಲಪ್ಪ ಪುಲರ್ೆ, 5) ಅಮಲಪ್ಪ ತಂದೆ ಮಲ್ಲಪ್ಪ ಪುಲರ್ೆ, 6] ಅಮರಪ್ಪ ತಂದೆ ಕಲ್ಲಪ್ಪ ಪುಲರ್ೆ, 7) ಯಲ್ಲಪ್ಪ ತಂದೆ ಭೀಮಣ್ಣ ಪುಲರ್ೆ, 8) ಸಾಯಬಣ್ಣ ತಂದೆ ಬೈಲಪ್ಪ ಪುಲರ್ೆ, ಎಲ್ಲರು ಕೂಡಿಕೊಂಡು ಅವರಲ್ಲಿ ಕೆಲವರಲ್ಲಿ ಬಡಿಗೆ ಹಿಡಿಗುಕೊಂಡು ನಮ್ಮ ಹತ್ತಿರ ಬಂದವರೆ ಲೇ ಸಾಬ್ಯಾ ಸೂಳಿ ಮಗನೆ ನಿನ್ನೆ ಭೈಲಪ್ಪನ ಜೋತೆ ಜಗಳ ಮಾಡಿದಿ ಸೂಳಿಮಗನೆ ಅಂತ ಅವಾಶ್ಚ ಶಬ್ದಗಳಿಂದ ಬೈಯುತ್ತ ಅವರಲ್ಲಿ ಬೈಲಪ್ಪನು ಸಾಬ್ಯಾ ನಿನ್ನೆ ನನಗೆ ಸುಮ್ಮನೆ ಇದ್ದವನಜೋತೆ ಜಗಳ ತೆಗೆದಿದ್ದಿ ಇವತ್ತು ಬಾರಲೆ ಅಂತ ಅಂದನು ಆಗ ನಾನು ಯಾಕ ಜಗಳ ತೆಗಿಲಿ ನಿನೆ ನನ್ನೊಂದಿಗೆ ಜಗಳ ಮಾಡಿ ಅಂತ ಅಂದಾಗ. ಎದರು ಮಾತನಾಡುತ್ತೇನಲೆ ಅಂತ ಅಂದವನೆ ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನಗೆ ತಲೆಯ ಮೇಲೆ ಹೋಡೆದು ರಕ್ತಗಾಯ ಮಾಡಿದನು. ಅದೆ ಬಡಿಗೆಯಿಂದ ಬಲಗೈ ರಟ್ಟೆಗೆ, ಹಿಂದಿನ ಎಡಗೆ ಬೆನ್ನಿಗೆ, ಬಲಗೈ ಬೆರಳುಗಳಿಗೆ , ಎಡಗೈಗೆ ಹಸ್ತದ ಮಣಿಕಟ್ಟಿಗೆ ಹೋಡೆದು ಗುಪ್ತಗಾಯ ಮಾಡಿದನು. ಮಲ್ಲಪ್ಪ ಈತನು ತನ್ನ ಕೈಯಿಂದ ನನಗೆ ಎಡಗಡೆ ರಟ್ಟೆಗೆ ಹೊಡೆದನು. ಸೋಪಣ್ಣ ಈತನು ತನ್ನ ಕೈಯಿಂದ ನನಗೆ ಎದೆಗೆ ಗುದ್ದಿದನು, ನನಗೆ ಹೋಡೆಯುವದನ್ನು ಬಿಡಿಸಿಕೊಳ್ಳಲು ಲಕ್ಷ್ಮಣ್ಣ ಈತನು ಬಂದಾಗ ಸಾಯಬಣ್ಣ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಲಕ್ಷ್ಮಣ್ಣನಿಗೆ ತಲೆಯ ಎಡಬಾಗಕ್ಕೆ ಹೋಡೆದು ರಕ್ತಗಾಯ ಮಾಡಿದನು. ಅಮಲಪ್ಪನು ಲಕ್ಷ್ಮಣ್ಣನಿಗೆ ಬೆನ್ನಿಗೆ ಹೋಡೆದನು. ಅಮರಪ್ಪನು ತನ್ನ ಕೈಯಿಂದ ನನ್ನ ಹೆಂಡತಿ ನಿಂಗಮ್ಮಳಿಗೆ ಎಡಗಡೆ ಕಣ್ಣಿಗೆ ಹೊಡೆದನು. ತಲೆಗೆಲೆಗೆ, ಎದೆಗೆ ಹೊಡೆದನು. ಯಲ್ಲಪ್ಪ ಈತನು ನನಗೆ ಎಡಗೈಯಿಗೆ ಹೋಡೆದನು, ಸಾಯಬಣ್ಣ ಈತನು ತನ್ನ ಕೈಯಿಂದ ನನಗೆ ಎಡಗೈಯಿಗೆ ಹೋಡೆನು. ಆಗ ಅಲ್ಲೆ ಇದ್ದ ನನ್ನ ಮಕ್ಕಳಾದ ಸಿದ್ದಪ್ಪ ತಂದೆ ಸಾಯಬಣ್ಣ ವಗ್ಗಾಲಿ, ಯಲ್ಲಪ್ಪ ತಂದೆ ಸಾಯಬಣ್ಣ ವಗ್ಗಾಲಿ, ಮತ್ತು ನಮ್ಮ ಅಣ್ಣತಮಕಿಯ ದೇವಿಂದ್ರಪ್ಪ ತಂದೆ ಸೋಪಣ್ಣ ಮೂಲಿಮನಿ,. ಸೋಪಣ್ಣ ತಂದೆ ಯಲ್ಲಪ್ಪ ಮೂಲಿಮನಿ, ಇವರು ಸದರಿ ಜಗಳವನ್ನು ನೋಡಿ ನಮಗೆ ಹೋಡೆಯುವದನ್ನು ಬಿಡಿಸಿಕೊಂಡರು. ಆಗ ಈ ಮೇಲಿನ 8 ಜನರು ನಮಗೆ ಇವತ್ತು ಉಳಿದುಕೊಂಡಿದ್ದಿರಿ ಮಕ್ಕಳೆ ಇನ್ನೋಮ್ಮಿ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವಸಹಿತ ಬಿಡುವದಿಲ್ಲಾ ಅಂತ ಜೀವಬೆದರಿಕೆ ಹಾಕಿ ಹೋದರು. ಸದರಿ ಜಗಳವು ಸಗರ (ಬಿ) ಸಿಮಾಂತದಲ್ಲಿ ಸೋಪಣ್ಣ ತಂದೆ ಭೀರಪ್ಪ ದೇವಿಕೇರಿ. ಇವರ ಹೋಲದಲ್ಲಿ ಘಟನೆ ಜರುಗಿರುತ್ತದೆ. ನಂತರ ನನಗೆ ಮತ್ತು ನನ್ನ ಹೆಂಡತಿ ನಿಂಗಮ್ಮ ಹಾಗು ಲಕ್ಷ್ಮಣ್ಣ ಎಲ್ಲರಿಗು ದೆವಿಂದ್ರಪ್ಪ ಈತನು ಕರೆದುಕೊಂಡು ಬಂದು ಶಹಾಪೂರದ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಮಾಡಿದ್ದು ಇರುತ್ತದೆ, ನಮಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ದೆವಿಂದ್ರಪ್ಪ ಈತನು ಒಂದು ಅಂಬುಲೇನ್ಸದಲ್ಲಿ ನಮಗೆ ಕರೆದುಕೊಂಡು ಹೋಗಿ ಯಾದಗಿರಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಮಾಡಿದ್ದರಿಂದ ಉಪಚಾರ ಪಡೆದಿರುತ್ತೇವೆ. ನಾನು ಉಪಚಾರ ಪಡೆದು ಮತ್ತು ನಮ್ಮ ಹಿರಿಯರೊಂದಿಗೆ ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದು ಇರುತ್ತದೆ. ಕಾರಣ ನಮಗೆ ಅವಾಶ್ಚಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ಜೀವದ ಭಯ ಹಾಕಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ನಿಡಿದ್ದು ಇರುತ್ತದೆ, ಸದರಿ ದೂರಿನ ಸಾರಾಂಶದ ಮೆಲಿಂದ ಠಾಣೆಯ ಗುನ್ನೆ ನಂ 57/2022 ಕಲಂ 143,147,148,323,324,354,504,506,ಸಂ,149 ಐ,ಪಿ,ಸಿ, ನ್ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಗೆ ಕೈಕೊಂಡೆನು.

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 58/2022 ಕಲಂ 87 ಕೆಪಿ ಆಕ್ಟ್ : ಇಂದು ದಿನಾಂಕ: 20/04/2022 ರಂದು ಸಾಯಾಂಕಾಲ 7-00 ಗಂಟೆಗೆ ಪಿರ್ಯಾರಿ ಶ್ರೀ ಶ್ರೀನಿವಾಸ್ ಅಲ್ಲಾಪೂರ ಪಿ.ಐ ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ದಿನಾಂಕ: 20/04/2022 ರಂದು ರಂದು 3.00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಶಾರದಳ್ಳಿ ಗ್ರಾಮದ ಯಲ್ಲಮ್ಮ ಗುಡಿ ಕಡೆಗೆ ಹೋಗುವ ಕೆನಾಲ್ ರಸ್ತೆ ಪಕ್ಕದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಬಾಬುರಾವ ಪಿ.ಎಸ್.ಐ ಕಾಸು ರವರೊಂದಿಗೆ ಠಾಣೆಯ ಸಿಬ್ಬಂದಿಯವರಾದ ಶ್ರೀ ಹೊನ್ನಪ್ಪ ಎ.ಎಸ್.ಐ, ಶ್ರೀ ಭಾಗಣ್ಣ ಪಿಸಿ-194, ಮುತ್ತಪ್ಪ ಪಿಸಿ-118, ಭೀಮನಗೌಡ ಪಿಸಿ-402, ಹಣಮಂತ ಪಿಸಿ-250, ನಾಗರಾಜ ಪಿಸಿ-12, ಧರ್ಮರಾಜ ಪಿಸಿ-45 ಹಾಗೂ ಮಂಜುನಾಥ ಪಿಸಿ-73 ರವರನ್ನು ಕರೆದು ಸದರಿ ವಿಷಯವನ್ನು ತಿಳಿಸಿ, ಭಾಗಣ್ಣ ಪಿಸಿ-194 ರವರಿಗೆ ದಾಳಿಗಾಗಿ ಇಬ್ಬರ ಪಂಚರನ್ನು ಕರೆಯಿಸಲು ತಿಳಿಸಿದ್ದರಿಂದ ಪಂಚರಾದ 1) ಶ್ರೀ ಪರಶುರಾಮ ತಂದೆ ಭೀಮಣ್ಣ ಗುಡ್ಡಕಾಯಿ ವಯಾ: 28 ವರ್ಷ ಜಾತಿ: ಬೇಡರ ಉ: ಚಾಲಕ ಸಾ: ಕುಂಬಾರಪೇಟ ಸುರಪೂರ 2) ಶ್ರೀ ರೆಡ್ಡೆಪ್ಪ ತಂದೆ ಅಮಲಪ್ಪ ಸಗರಕರ ವಯಾ: 29 ವರ್ಷ ಜಾತಿ: ಪ.ಜಾತಿ(ಮಾದಿಗ) ಉ: ಪೆಂಟಿಂಗ ಸಾ: ಹಳಿಪೇಠ ಶಹಾಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ನಾನು, ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ನಂತರ ಸದರಿಯವರ ಮೇಲೆ ದಾಳಿ ಮಾಡಲು ನಾನು, ಪಂಚರು ಮತ್ತು ಸಿಬ್ಬಂದಿಯವರು ಕೂಡಿ ಒಂದು ಖಾಸಗಿ ಜೀಪಿನಲ್ಲಿ ಕುಳಿತುಕೊಂಡು, ಠಾಣೆಯಿಂದ 3.30 ಪಿ.ಎಂ ಕ್ಕೆ ಹೊರಟು ಶಾರದಳ್ಳಿ ಗ್ರಾಮದಿಂದ ಯಲ್ಲಮ್ಮ ಗುಡಿ ಕಡೆಗೆ ಹೋಗುವ ದೇವಿಕೇರಿ ಇವರ ಹೊಲದ ಹತ್ತಿರ ಕೆನಾಲ್ ರಸ್ತೆ ಮೇಲೆ 4.10 ಪಿ.ಎಂ.ಕ್ಕೆ ಹೋಗಿ ಜೀಪ ನಿಲ್ಲಿಸಿ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಕೆನಾಲ್ ರಸ್ತೆ ಮೇಲೆ ಖುಲ್ಲಾ ಜಾಗೆಯಲ್ಲಿ ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿದ್ದು ಅದರಲ್ಲಿ ಒಬ್ಬ ಅಂದರ 50 ರೂ ಇನ್ನೊಬ್ಬ ಬಾಹರ 50 ರೂ. ಎಂದು ಹೇಳಿ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ನಾನು ಮತ್ತು ಸಿಬ್ಬಂದಿಯವರು ಸೇರಿ 4.15 ಪಿ.ಎಮ್ ಕ್ಕೆ ಒಮ್ಮೆಲೆ ದಾಳಿ ಮಾಡಿ ಹಿಡಿಯಲಾಗಿ, ದಾಳಿಯಲ್ಲಿ 4 ಜನರು ಸಿಕ್ಕಿದ್ದು ಸದರಿಯವರಿಗೆ ಹೆಸರು ಮತ್ತು ವಿಳಾಸ್ ವಿಚಾರಿಸಲಾಗಿ 1) ನಾಗರಾಜ ತಂದೆ ಯಲ್ಲಪ್ಪ ಗುಡ್ಡಕಾಯಿ ವ|| 32 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಡೊಣ್ಣಿಗೇರಿ ಸುರಪೂರ ಇತನ ಅಂಗಶೋಧನ ಮಾಡಲಾಗಿ ಆತನ ಹತ್ತಿರ 600/-ರೂಗಳು ಸಿಕ್ಕಿದ್ದು, 2) ಅಮರೇಶ ತಂದೆ ಮಲ್ಲಿಕಾಜರ್ುನ ಕೊಳೂರ ವ|| 41 ವರ್ಷ ಜಾ|| ಬೇಡರ ಉ|| ವ್ಯಾಪಾರ ಸಾ|| ಬೈರಿಮಡ್ಡಿ ತಾ: ಸುರಪೂರ ಇತನ ಅಂಗಶೋಧನ ಮಾಡಲಾಗಿ ಆತನ ಹತ್ತಿರ 550/-ರೂಗಳು ಸಿಕ್ಕಿದ್ದು, 3) ಪರ್ವತರೆಡ್ಡಿ ತಂದೆ ಕಾಳಪ್ಪ ದೇವಿಕೇರಿ ವ|| 29 ವರ್ಷ ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಶಾರದಳ್ಳಿ ಇತನ ಅಂಗಶೋಧನ ಮಾಡಲಾಗಿ ಆತನ ಹತ್ತಿರ 950/-ರೂಗಳು ಸಿಕ್ಕಿದ್ದು 4) ಕಂಠೆಪ್ಪ ತಂದೆ ಯಲ್ಲಪ್ಪ ಕಡಿಮನಿ ವ|| 35 ವರ್ಷ ಜಾ|| ಪ.ಜಾತಿ ಉ|| ಗೌಂಡಿಕೆಲಸ ಸಾ|| ಲಕ್ಷ್ಮಿಪೂರ ಸುರಪೂರ ಇತನ ಅಂಗಶೋಧನ ಮಾಡಲಾಗಿ ಆತನ ಹತ್ತಿರ 850/-ರೂಗಳು ಸಿಕ್ಕಿದ್ದು, ಎಲ್ಲರ ಮುಂದಿನ ಕಣದಲ್ಲಿ 1590/-ರೂ. ಮತ್ತು 52 ಇಸ್ಪೀಟ ಎಲೆಗಳು ಇದ್ದು ಹೀಗೆ ಒಟ್ಟು 4040/- ರೂ. ನಗದು ಹಣ ಮತ್ತು 52 ಇಸ್ಪೀಟ ಎಲೆಗಳು ಸದರಿ ಮುದ್ದೆಮಾಲುಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡಿದ್ದು, ಸಿಕ್ಕ ಮುದ್ದೆಮಾಲನ್ನು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು 4.15 ಪಿ.ಎಮ್ ದಿಂದ 5.15 ಪಿ.ಎಂ ವರೆಗೆ ಜಪ್ತಿ ಪಂಚನಾಮೆಯನ್ನು ಮಾಡಿ ಪಂಚರ ಸಮಕ್ಷಮ ತಾಬೆಗೆ ತೆಗೆದುಕೊಂಡೆನು. ದಾಳಿಯಲ್ಲಿ ಸಿಕ್ಕ 4 ಜನ ಆರೋಪಿತರೊಂದಿಗೆ ಮರಳಿ ಠಾಣೆಗೆ 6.00 ಪಿ.ಎಂ ಕ್ಕೆ ಬಂದು, 04 ಜನ ಆರೋಪಿತರು, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ ವರದಿ ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 58/2022 ಕಲಂ: 87 ಕೆ.ಪಿ ಯಾಕ್ಟ ಅಡಿಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 22/2022 ಕಲಂ 279, 338 ಐಪಿಸಿ : ಇಂದು ದಿನಾಂಕ 20/04/2022 ರಂದು ಬೆಳಿಗ್ಗೆ ಸಮಯ 11-45 ಎ.ಎಂ.ಕ್ಕೆ ಪಿಯರ್ಾದಿ ಶ್ರೀ ದೇವಪ್ಪ ತಂದೆ ರಾಮುನಾಯಕ ಚವ್ಹಾಣ ವಯ;65 ವರ್ಷ, ಜಾ;ಲಂಬಾಣಿ, ಉ;ಒಕ್ಕುಲುತನ, ಸಾ;ಕನ್ಯಾಕೊಳ್ಳುರ ತಾಂಡ, ತಾ;ಶಹಾಪುರ, ಜಿ;ಯಾದಗಿರಿ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ನಿನ್ನೆ ದಿನಾಂಕ 19/04/2022 ರಂದು ರಾತ್ರಿ 9 ಪಿ.ಎಂ.ಕ್ಕೆ ಜರುಗಿದ ರಸ್ತೆ ಅಪಘಾತದ ಘಟನೆ ಬಗ್ಗೆ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ದೂರನ್ನು ಹಾಜರುಪಡಿಸಿದ್ದು, ದೂರಿನ ಸಾರಾಂಶವೇನೆಂದರೆ ನನ್ನ ಖಾಸಾ ತಮ್ಮನಾದ ಶೇಕ್ಯಾ ಇವರ ಮಗನಾದ ಗೋವಿಂದ ತಂದೆ ಶೇಕ್ಯಾ ವಯ;35 ವರ್ಷ, ಸಾ;ಕನ್ಯಾಕೊಳ್ಳುರ ತಾಂಡ ಈತನು ಶ್ರೀ ಬಸವರಾಜ ತಂದೆ ಗುಂಡುರಾಯ ಕೊಟನೋರ ಸಾ;ಕಲಬುರಗಿ ಇವರ ಹತ್ತಿರ ಅವರ ಟಿಪ್ಪರ್ ಲಾರಿಯನ್ನು ಚಾಲನೆ ಮಾಡಿಕೊಂಡು ತನ್ನ ಕುಟುಂಬದೊಂದಿಗೆ ಇರುತ್ತಾನೆ. ಹೀಗಿದ್ದು 19/04/2022 ರಂದು ರಾತ್ರಿ 9-15 ಪಿ.ಎಂ. ಸುಮಾರಿಗೆ ನನ್ನ ತಮ್ಮನ ಮಗನಾದ ಗೋವಿಂದ ಈತನು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ನಡೆಸುವ ಟಿಪ್ಪರ್ ನಂಬರ ಕೆಎ-32, ಡಿ-6431 ನೇದ್ದನ್ನು ನಡೆಸಿಕೊಂಡು ಯಾದಗಿರಿಯಿಂದ ಕಲಬುರಗಿ ಕಡೆಗೆ ಹೊರಟಿದ್ದಾಗ ಮಾರ್ಗ ಮದ್ಯೆ ಕಂಚಗಾರಹಳ್ಳಿ ತಾಂಡಾದ ಹತ್ತಿರ ಸಮಯ ರಾತ್ರಿ ಅಂದಾಜು 8 ಪಿ.ಎಂ.ದ ಸುಮಾರಿಗೆ ನನ್ನ ಟಿಪ್ಪರ್ ನೇದ್ದರ ಟಯರು ಪಂಚರ್ ಆಗಿದ್ದು, ನಾನು ಟಿಪ್ಪರನ್ನು ರಸ್ತೆ ಬದಿಗೆ ನಿಲ್ಲಿಸಿ ಟಯರನ್ನು ಚೇಂಜ್ ಮಾಡಿ, ಇನ್ನೇನು ಹೊರಟು ಹೋಗಬೇಕೆಂದು ರಸ್ತೆ ಬದಿಗೆ ನಿಂತಿದ್ದಾಗ ಒಬ್ಬ ಕಾರ್ ಚಾಲಕನು ಯಾದಗಿರಿ ಕಡೆಯಿಂದ ವಾಡಿ ಕಡೆಗೆ ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ರಸ್ತೆ ಬದಿಗೆ ನಿಂತಿದ್ದ ನನಗೆ ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ನಾನು ಪುಟಿದು ರಸ್ತೆ ಬದಿಗೆ ಬಿದ್ದಾಗ ಸದರಿ ಅಪಘಾತದಲ್ಲಿ ನನ್ನ ಎಡಗಾಲಿನ ಮೊಣಕಾಲಿನ ಕೆಳಗೆ ಭಾರೀ ರಕ್ತಗಾಯವಾಗಿ ಮುರಿದಿರುತ್ತದೆ, ಹಾಗೂ ಎಡಗೈ ಮೊಣಕೈಗೆ ತರಚಿದ ರಕ್ತಗಾಯವಾಗಿರುತ್ತದೆ ಈ ಅಪಘಾತವು ಇಂದು ದಿನಾಂಕ 19/04/2022 ರಂದು ರಾತ್ರಿ 9 ಪಿ.ಎಂ.ಕ್ಕೆ ಜರುಗಿದ್ದು, ನನಗೆ ಅಪಘಾತಪಡಿಸಿದ ಕಾರ್ ನಂಬರ ವಾಹನಗಳ ಬೆಳಕಿನಲ್ಲಿ ನೋಡಲಾಗಿ ಕೆಎ-56, ಎಮ್-1304 ನೇದ್ದು ಇದ್ದು, ಅದರ ಚಾಲಕನು ಸ್ಥಳದಲ್ಲಿ ಹಾಜರಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಿದ್ದು ತನ್ನ ಹೆಸರು ಅನೀಲಕುಮಾರ ತಂದೆ ಪ್ರಭು ರಾಠೋಡ ಸಾ;ಬಾಂಬೆ ಅಂತಾ ತಿಳಿಸಿದ್ದು ಇರುತ್ತದೆ. ಘಟನಾ ಸ್ಥಳಕ್ಕೆ ಪೊಲೀಸ್ ಮತ್ತು 108 ಅಂಬುಲೆನ್ಸ್ ವಾಹನಗಳು ಬಂದಿದ್ದು ನನಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದು, ಈ ಘಟನೆ ಬಗ್ಗೆ ನಮ್ಮ ಮಾಲೀಕರಿಗೆ ಕೂಡ ಪೋನ್ ಮಾಡಿ ತಿಳಿಸಿದ್ದು, ಅವರು ಸದ್ಯ ಯಾದಗಿರಿಗೆ ಬರುತ್ತಿದ್ದು, ನೀವು ಕೂಡ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬರ್ರೀ ಅಂತಾ ತಿಳಿಸಿದಾಗ ನಾನು ಈ ವಿಷಯವನ್ನು ನಮ್ಮ ಮನೆಯ ಪಕ್ಕದ ಸಂಬಂಧಿಯಾದ ಪ್ರಕಾಶ ತಂದೆ ಧಮರ್ು ರಾಠೋಡ ಸಾ;ಕನ್ಯಾಕೊಳ್ಳುರ ತಾಂಡ ಈತನಿಗೆ ತಿಳಿಸಿ ನನ್ನ ಜೊತೆ ಬರಲು ಕೇಳಿಕೊಂಡಾಗ ಆತನು ನಡೀರಿ ಹೋಗೋಣ ಅಂದಾಗ ಆತನ ಮೊಟಾರು ಸೈಕಲ್ ಮೇಲೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲಾಗಿ ಗೋವಿಂದ ಈತನು ಉಪಚಾರ ಹೊಂದುತ್ತಿದ್ದು, ನನಗೆ ಈ ಮೇಲೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಗೋವಿಂದ ಇವರ ಟಿಪ್ಪರ್ ಮಾಲೀಕರಾದ ಬಸವರಾಜ ಮತ್ತು ಅವರ ಸಂಗಡ ನಾಗರಾಜ ತಂದೆ ಶರಣಪ್ಪ ಪಂಡರ್ ಸಾ;ಕಲಬುರಗಿ ಇವರುಗಳು ಸಹ ಬಂದಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ 19/04/2022 ರಂದು ರಾತ್ರಿ 9 ಪಿ.ಎಂ. ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಕಂಚಗಾರಹಳ್ಳಿ ತಾಂಡಾದ ಹತ್ತಿರ ನನ್ನ ತಮ್ಮನ ಮಗನಾದ ಗೋವಿಂದ ಈತನು ರಸ್ತೆ ಬದಿಯಲ್ಲಿ ನಿಂತಿದ್ದಾಗ ಕಾರ್ ನಂಬರ ಕೆಎ-56, ಎಮ್-1304 ನೇದ್ದರ ಚಾಲಕನು ಯಾದಗಿರಿಯಿಂದ ಕಲಬುರಗಿ ಕಡೆಗೆ ಹೊರಟಿದ್ದಾಗ ಡಿಕ್ಕಿಹೊಡೆದು ಅಪಘಾತಪಡಿಸಿದ ಕಾರ್ ಚಾಲಕ ಅನೀಲಕುಮಾರ ಈತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ, ಈ ಘಟನೆ ಬಗ್ಗೆ ಕೇಸು ಕೊಡಲು ನಮಗೆ ಕಾನೂನಿನ ಬಗ್ಗೆ ಹೆಚ್ಚಿನ ತಿಳುವಳಿಕೆ ಇಲ್ಲದ ಕಾರಣ ಮನೆಯಲ್ಲಿ ಹಿರಿಯರಿಗೆ ವಿಚಾರಿಸಿ ತಡವಾಗಿ ದೂರು ನೀಡುತ್ತಿದ್ದೇನೆ ಮಾನ್ಯರವರು ಮುಂದಿನ ಕಾನೂನು ಕ್ರಮ ಜರುಗಿಸಿರಿ ಅಂತಾ ವಿನಂತಿ ಅಂತಾ ಕೊಟ್ಟ ಪಿಯರ್ಾದಿಯ ಅಜರ್ಿ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 22/2022 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 41/2022 ಕಲಂ. 87 ಕೆ.ಪಿ ಎಕ್ಟ್ : ಇಂದು ದಿನಾಂಕ.20/04/2022 ರಂದು 6-30 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುಂದಿನ ಕ್ರಮಕ್ಕಾಗಿ ಒಂದು ಜ್ಞಾಪನಾ ಪತ್ರವನ್ನು ಒಪ್ಪಿಸಿದ್ದು ಸಾರಾಂಶವೆನಂದರೆ, ಈ ಮೂಲಕ ನಿಮಗೆ ಜ್ಞಾಪನಾ ಪತ್ರ ನೀಡುವುದೆನೆಂದರೆ, ನಾನು ಇಂದು ದಿನಾಂಕ.20/04/2022 ರಂದು 3-45 ಪಿಎಮ್ ಕ್ಕೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಗಂಜ ಏರಿಯಾದ ಶಂಕರ ರೈಸ್ಮಿಲ್ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ನಾನು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಸ್ಥಳಕೆ ಹೋಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 07 ಜನರನ್ನು 5-00 ಪಿಎಮ್ ಕ್ಕೆ ಹಿಡಿದು ವಿಚಾರಿಸಲು 1) ರಾಜಶೇಖರ ತಂ. ಚಂದ್ರಕಾಂತ ಕಡೆಚೂರ ವಃ 35 ಜಾಃ ಕುರುಬರು ಉಃ ವ್ಯಾಪಾರ ಸಾಃ ಕೋಲಿವಾಡ ಯಾದಗಿರಿ 2) ನರಸಿಂಹ ತಂದೆ ಶಂಕರ ತೆಲಗರ ವಃ28 ಜಾಃ ಕಬ್ಬಲಿಗ ಉಃ ವ್ಯಾಪಾರ ಸಾಃಬಂಡಿಗೇರಾ ಯಾದಗಿರಿ 3) ಮಹೇಶ ತಂದೆ ಭಿಮಯ್ಯ ವಡ್ಲಾ ವಃ 40 ಜಾಃ ಪಂಚಾಳ ಉಃ ಖಾಸಗಿ ಕೆಲಸ ಸಾಃ ಗಂಜ ಏರಿಯಾ ಯಾದಗಿರಿ 4) ನಾಗಭೂಷಣ ತಂದೆ ಭಿಮಶಪ್ಪ ಅಂಬಿಗೇರ ವಃ44 ಜಾಃ ಕಬ್ಬಲಿಗ ಉಃ ಗುಮಾಸ್ತ ಕೆಲಸ ಸಾಃಕೋಲಿವಾಡ ಯಾದಗಿರಿ 5) ಬಸವರಾಜ ತಂದೆ ಶ್ರೀಗುರು ದಂಡೋತಿ ವಃ27 ಜಾಃ ಲಿಂಗಾಯತ ಉಃಕೂಲಿಕೆಲಸ ಸಾಃಚಟಾನ ಏರಿಯಾ ಯಾದಗಿರಿ 6) ನಾಗರಾಜ ತಂದೆ ಸಾಬಣ್ಣ ಮುಂಡರಗಿ ವಃ25 ಜಾಃ ಕಬ್ಬಲಿಗ ಉಃ ಗುಮಾಸ್ತ ಕೆಲಸ ಸಾಃಬೋವಿವಾಡ ಯಾದಗಿರಿ 7) ಹಣಮಂತ ತಂದೆ ಬಸ್ಸಣ್ಣ ಚಾಪಲ್ ವಃ35 ಜಾಃ ಕಬ್ಬಲಿಗ ಉಃಗುಮಾಸ್ತ ಸಾಃ ಗಂಜ ಎರಿಯಾ ಯಾದಗಿರಿ ರವರಿಂದ ಒಟ್ಟು ನಗದು ಹಣ 8350-00 ರೂ. ಮತ್ತು 52 ಇಸ್ಪೀಟ ಎಲೆಗೆಳು ಸಿಕ್ಕಿದ್ದು ಮುಂದಿನ ಪುರಾವೆ ಕುರಿತು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು 5-00 ಪಿಎಂದಿಂದು 6-00 ಪಿಎಂದವರೆಗೆ ಮುಗಿಸಿಕೊಂಡು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ 6-30 ಪಿಎಂ ಕ್ಕೆ ಬಂದು ಜಪ್ತಿಪಂಚನಾಮೆಯ ಸಮೇತ ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದೊಂದಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.41/2022 ಕಲಂ.87 ಕೆಪಿ ಆ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 52/2022 ಕಲಂ 78 (3) ಕೆ.ಪಿ ಯಾಕ್ಟ್ : ಇಂದು ದಿನಾಂಕ: 20-04-2022 ರಂದು ಸಾಯಂಕಾಲ 05-45 ಗಂಟೆಗೆ ಶ್ರಿ ರಾಜಕುಮಾರ ಪಿ.ಎಸ್.ಐ(ಕಾ.ಸು) ರವರು ಠಾಣೆಗೆ ಹಾಜರಾಗಿ ಮಲ್ಹಾರ ಗ್ರಾಮದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ವ್ಯಕ್ತಿಯನ್ನು ದಾಳಿ ಮಾಡಿಕೊಂಡು ಆತನಿಂದ ಮೂರು ಮಟಕಾ ನಂಬರ ಬರೆದ ಚೀಟಿ, ಒಂದು ಪೆನ್ನ ಮತ್ತು ಹಾಗೂ ನಗದು ಹಣ 2500=00 ರೂಪಾಯಿ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆ ಮತ್ತು ಒಬ್ಬ ಆರೋಪಿತನನ್ನು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಮತ್ತು ವರದಿಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.52/2022 ಕಲಂ 78(3) ಕೆ.ಪಿ ಯಾಕ್ಟ್ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

Last Updated: 22-04-2022 12:31 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080