ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 22-05-2022
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 81/2022 ಕಲಂ 279, 338, 304(ಎ) ಐಪಿಸಿ: ದಿನಾಂಕ 21.05.2022 ರ ಬೆಳಿಗ್ಗೆ 6.30 ಗಂಟೆಯ ಸುಮಾರಿಗೆ ಕೋಟಗೇರಾ ಸೀಮಾತರ ಕೋಟಗೇರಾ- ಯಾದಗಿರಿ ಮುಖ್ಯ ರಸ್ತೆಯ ಮೇಲೆ ಕ್ವಾಣಿನ ಕಟ್ಟಿ ಹತ್ತಿರ ಮೃತನು ತನ್ನ ಮೋಟರ್ ಸೈಕಲ್ ಚೆಸ್ಸಿ ನಂ: ಒಃಐಊಂಘ116ಓ5016006 ನೇದ್ದನ್ನು ಅತಿವೇಗ, ಅಲಕ್ಷತದಿಂದ ಚಾಲನೆ ಮಾಡಿಕೊಂಡು ಮೋಟರ್ ಸೈಕಲ್ ನ್ನು ನಿಯಂತ್ರಿಸಲು ಆಗದೇ ರಸ್ತೆ ತಿರುವಿನಲ್ಲಿ ಕಲ್ಲಿಗೆ ಡಿಕ್ಕಿ ಪಡಿಸಿದ್ದು ಮೃತನು ಸ್ಥಳದಲ್ಲಿ ಮೃತಪಟ್ಟಿದ್ದು ಇನ್ನೊಬ್ಬನಿಗೆ ಭಾರಿ ಸ್ವರೂಪದ ಗಾಯಗೊಳಿಸಿದ್ದು ಗಾಯಗೊಂಡವನ್ನು ಉಪಚಾರಕ್ಕಾಗಿ ಆಸ್ಪತ್ರೆಗೆ ಕಳುಹಿಸಿದ್ದು ಮೃತನ ಶವವನ್ನು ಗುರುಮಠಕಲ್ ಸಮೂದಾಯ ಆರೋಗ್ಯ ಕೇಂದ್ರಕ್ಕೆ ತಂದು ಹಾಕಿದ್ದು ಇರುತ್ತದೆ ಅಂತಾ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 70/2022 ಕಲಂ: 15(ಎ) ಮತ್ತು 32(3) ಕೆ.ಇ ಎಕ್ಟ 1965: ಇಂದು ದಿನಾಂಕ:21/05/2022 ರಂದು 8-15 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ:21/05/2022 ರಂದು ಸಾಯಂಕಾಲ ನಾನು ಮತ್ತು ತಾಯಪ್ಪ ಹೆಚ್.ಸಿ 79, ವೇಣುಗೋಪಾಲ ಪಿಸಿ 36 ಮತ್ತು ಸಾಬರೆಡ್ಡಿ ಪಿಸಿ 290 ಎಲ್ಲರೂ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ಗೊಂದೆನೂರು ಸೀಮಾಂತರದ ಗೊಂದೆನೂರು ಕ್ರಾಸ ಕ್ರಾಸದಿಂದ ಅನತಿ ದೂರದಲ್ಲಿರುವ ಸಾಯಿ ಪಾನಶಾಪ ಮುಂದೆ ಮದ್ಯ ಸೇವನೆ ಮಾಡುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಸದರಿ ಪಂಚರಿಗೆ ದಾಳಿ ವಿಷಯ ತಿಳಿಸಿ, ಸದರಿ ಪಂಚರು ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದ್ದರಲ್ಲಿ ಕರೆದುಕೊಂಡು 4-10 ಪಿಎಮ್ ಕ್ಕೆ ಠಾಣೆಯಿಂದ ಹೊರಟು 4-30 ಪಿಎಮ್ ಕ್ಕೆ ಗೊಂದೆನೂರು ಕ್ರಾಸ ಗೆ ತಲುಪಿ ಕ್ರಾಸನಲ್ಲಿರುವ ಸಂಗೊಳ್ಳಿ ರಾಯಣ್ಣ ಬೋರ್ಡ ಹತ್ತಿರ ಜೀಪನ್ನು ನಿಲ್ಲಿಸಿ, ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ಅಲ್ಲಿರುವ ಸಾಯಿ ಪಾನಶಾಪ ಮುಂದೆ ಹೋಗಿ ನೋಡಿದಾಗ ಯಾರೋ 2-3 ಜನ ಕ್ವಾಟರ ಪೌಚುಗಳನ್ನು ಇಟ್ಟುಕೊಂಡು ಕುಡಿಯುತ್ತಾ ಕುಳಿತ್ತಿದ್ದು, ನೋಡಿ ಖಚಿತಪಡಿಸಿಕೊಂಡು 4-45 ಪಿಎಮ್ ಕ್ಕೆ ನಾವು ಒಮ್ಮೆಲೆ ಅವರ ಮೇಲೆ ದಾಳಿ ಮಾಡಿದಾಗ ಕುಡಿಯಲು ಕುಂತಿದ್ದವರು ಅಲ್ಲಿಂದ ಓಡಿ ಹೋದರು. ಸಾಯಿ ಪಾನಶಾಪ ಮಾಲಿಕನಾದ ಗೋವಿಂದರಾಯ ತಂದೆ ಬಸವಂತ್ರಾಯ ವರಕೇರಿ, ವ:45, ಜಾ:ಕುರುಬರ, ಉ:ವ್ಯಾಪಾರ ಸಾ:ಗೊಂದೆನೂರು ಈತನು ತನ್ನ ಪಾನಶಾಪದಲ್ಲಿ ಇದ್ದು, ಸದರಿಯವನು ತನ್ನ ಪಾನಶಾಪ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾನೆ. ಸದರಿ ಸ್ಥಳದಲ್ಲಿ ಓರಿಜಿನಲ್ ಚಾಯ್ಸ್ 180 ಎಮ್.ಎಲ್ ದ ಎರಡು ಖಾಲಿ ಪೌಚುಗಳು ಮತ್ತು ಒಂದು ಅರ್ಧ ಮದ್ಯ ಇದ್ದ ಪೌಚು, ನಾಲ್ಕು ಖಾಲಿ ಪ್ಲಾಸ್ಟಿಕ ಗ್ಲಾಸಗಳು ಮತ್ತು ಲೇಸ್ ಚಿಪ್ಸ ಸ್ನಾಕ್ಸದ ಎರಡು ಖಾಲಿ ಪಾಕಿಟಗಳು ಒಟ್ಟು ಅ:ಕಿ:00=00 ಇದ್ದವು. ಸದರಿ ಸ್ಥಳದಲ್ಲಿ ದೊರೆತ ವಸ್ತುಗಳನ್ನು ಕೇಸಿನ ಪುರಾವೆ ಕುರಿತು ಪಿ.ಎಸ್.ಐ ಸಾಹೇಬರು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ಜಪ್ತಿ ಮಾಡಿಕೊಂಡರು. ಗೋವಿಂದರಾಯನು ತನ್ನ ಪಾನಶಾಪ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ತಾನು ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿರುವುದಾಗಿ ಒಪ್ಪಿಕೊಂಡನು. 4-45 ಪಿಎಮ್ ದಿಂದ 5-45 ಪಿಎಮ್ ದ ವರೆಗೆ ಜಪ್ತಿ ಪಂಚನಾಮೆ ಜರುಗಿಸಿ, ಸದರಿ ಜಪ್ತಿ ಪಂಚನಾಮೆ, ಮುದ್ದೆಮಾಲು ಮತ್ತು ಆರೋಪಿತನೊಂದಿಗೆ ಮರಳಿ ಬಂದು ಈ ವರದಿ ಸಲ್ಲಿಸುತ್ತಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 70/2022 ಕಲಂ: 15(ಎ) ಮತ್ತು 32 (3) ಕೆ.ಇ ಎಕ್ಟ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 69/2022 ಕಲಂ: 15(ಎ) ಮತ್ತು 32(3) ಕೆ.ಇ ಎಕ್ಟ 1965: ಇಂದು ದಿನಾಂಕ: 21/05/2022 ರಂದು 3-30 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ:21/05/2022 ರಂದು ಮದ್ಯಾಹ್ನ ನಾನು ಮತ್ತು ತಾಯಪ್ಪ ಹೆಚ್.ಸಿ 79, ವೇಣುಗೋಪಾಲ ಪಿಸಿ 36 ಮತ್ತು ಸಾಬರೆಡ್ಡಿ ಪಿಸಿ 290 ಎಲ್ಲರೂ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ಗೊಂದೆನೂರು ಸೀಮಾಂತರದ ಗೊಂದೆನೂರು ಕ್ರಾಸ ಹತ್ತಿರ ಇರುವ ಬಾಲಾಜಿ ದಾಭಾದಲ್ಲಿ ಯಾರೋ ಮೂರು-ನಾಲ್ಕು ಜನ ಕುಳಿತುಕೊಂಡು ಮದ್ಯ ಸೇವನೆ ಮಾಡುತ್ತಿದ್ದಾರೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರೂ ಪಂಚರನ್ನು ಬರಮಾಡಿಕೊಂಡು ಸದರಿ ಪಂಚರಿಗೆ ದಾಳಿ ವಿಷಯ ತಿಳಿಸಿ, ಸದರಿ ಪಂಚರು ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದ್ದರಲ್ಲಿ ಕರೆದುಕೊಂಡು 1-10 ಪಿಎಮ್ ಕ್ಕೆ ಠಾಣೆಯಿಂದ ಹೊರಟು 1-30 ಪಿಎಮ್ ಕ್ಕೆ ಗೊಂದೆನೂರು ಕ್ರಾಸ ಗೆ ತಲುಪಿ ಕ್ರಾಸನಲ್ಲಿ ಜೀಪನ್ನು ನಿಲ್ಲಿಸಿ, ಅಲ್ಲಿರುವ ಬಾಲಾಜಿ ದಾಭಾದಲ್ಲಿ ಹೋಗಿ ನೋಡಿದಾಗ ಯಾರೋ 3-4 ಜನ ಬಿಯರ್ ಬಾಟಲಿ ಮತ್ತು ಕ್ವಾಟರ ಪೌಚುಗಳನ್ನು ಇಟ್ಟುಕೊಂಡು ಕುಡಿಯುತ್ತಾ ಕುಳಿತ್ತಿದ್ದು, ನೋಡಿ ಖಚಿತಪಡಿಸಿಕೊಂಡು 1-45 ಪಿಎಮ್ ಕ್ಕೆ ನಾವು ಒಮ್ಮೆಲೆ ಅವರ ಮೇಲೆ ದಾಳಿ ಮಾಡಿದಾಗ ಕುಡಿಯಲು ಕುಂತಿದ್ದವರು ಅಲ್ಲಿಂದ ಓಡಿ ಹೋದರು. ದಾಭಾದ ಮಾಲಿಕನಾಗಿರುವ ಬಸವರಾಜ ತಂದೆ ಶಿವಯ್ಯ ಕಲಾಲ, ವ:50, ಜಾ:ಇಳಗೇರ, ಉ:ವ್ಯಾಪಾರ ಸಾ:ಕುರಿಹಾಳ ಈತನು ಅಲ್ಲಿಯೇ ಇದ್ದು, ಸದರಿಯವನು ತನ್ನ ಧಾಬಾದಲ್ಲಿ ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾನೆ. ಸ್ಥಳದಲ್ಲಿ ಕಿಂಗಫಿಶಯರ್ 650 ಎಮ್.ಎಲ್ ದ ಅರ್ಧ ಬಿಯರ ಬಾಟಲಿ, ಓರಿಜಿನಲ್ ಚಾಯ್ಸ್ 180 ಎಮ್.ಎಲ್ ದ ಎರಡು ಖಾಲಿ ಪೌಚುಗಳು, ನಾಲ್ಕು ಖಾಲಿ ಪ್ಲಾಸ್ಟಿಕ ಗ್ಲಾಸಗಳು ಮತ್ತು ಕುರಕುರೆ ಸ್ನಾಕ್ಸ ಎರಡು ಖಾಲಿ ಪಾಕಿಟಗಳು ಒಟ್ಟು ಅ:ಕಿ:00=00 ಇದ್ದವು. ಸದರಿ ಸ್ಥಳದಲ್ಲಿ ದೊರೆತ ವಸ್ತುಗಳನ್ನು ಕೇಸಿನ ಪುರಾವೆ ಕುರಿತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ಜಪ್ತಿ ಮಾಡಿಕೊಳ್ಳಲಾಯಿತು. ಸದರಿ ಬಸವರಾಜನು ತನ್ನ ದಾಭಾದಲ್ಲಿ ತಾನು ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿರುವುದಾಗಿ ಒಪ್ಪಿಕೊಂಡನು. 1-45 ಪಿಎಮ್ ದಿಂದ 2-45 ಪಿಎಮ್ ದ ವರೆಗೆ ಜಪ್ತಿ ಪಂಚನಾಮೆ ಜರುಗಿಸಿ, ಸದರಿ ಜಪ್ತಿ ಪಂಚನಾಮೆ, ಮುದ್ದೆಮಾಲು ಮತ್ತು ಆರೋಪಿತನೊಂದಿಗೆ ಮರಳಿ ಠಾಣೆಗೆ ಬಂದು ಈ ವರದಿ ಸಲ್ಲಿಸುತ್ತಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 69/2022 ಕಲಂ: 15(ಎ) ಮತ್ತು 32(3) ಕೆ.ಇ ಎಕ್ಟ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 41/2022 ಕಲಂ: 143, 147, 323, 307, 504, 506 ಸಂ.149 ಐಪಿಸಿ: ಇಂದು ದಿನಾಂಕ:21/05/2022 ರಂದು ಸಾಯಂಕಾಲ 79.45 ಗಂಟೆಗೆ ಕು.ನಿಂಗಪ್ಪ ತಂದೆ ಸಿದ್ದಪ್ಪ ಪೂಜಾರಿ ಸಾ:ಕೊಳಿಹಾಳ ಈತನು ಠಾಣೆಗೆ ಹಾಜರಾಗಿ ಟೈಪ್ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೇ, ನಮ್ಮ ತಂದೆಗೆ ಮೂರು ಜನ ಗಂಡು ಮಕ್ಕಳಿದ್ದು,ನಾನು ಹಿರಿಯವನಿದ್ದು ಹೊಲದ ಕೆಲಸಮಾಡಿಕೊಂಡು ತಂದೆ ತಾಯಿಯೊಂದಿಗೆ ಇರುತ್ತೇನೆ. ಹಿಗಿದ್ದು ದಿನಾಂಕ:17/05/2022 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ನಾನು ನಮ್ಮೂರ ಬೀರಪ್ಪನ ಗುಡಿಯ ಹತ್ತಿರ ಕುಳಿತ್ತಿದ್ದಾಗ ನಮ್ಮೂರ ಬನ್ನೆಪ್ಪ ತಂದೆ ಕರಿನಿಂಗಪ್ಪ ಪೂಜಾರಿ ಈತನು ತನ್ನ ಮೊಟಾರ ಸೈಕಲ್ ಹಿಂದೆ ನನ್ನ ತಾಯಿಯಾದ ಮಲ್ಲಮ್ಮಾಳಿಗೆ ಕೂಡಿಸಿಕೊಂಡು ನವದಗಿ ರೋಡಿನ ಕಡೆಗೆ ಹೋಗಿದ್ದನ್ನು ನೋಡಿ ನಾನು ಗಾಬರಿಗೊಂಡು ನಮ್ಮ ತಾಯಿಗೆ ಬನ್ನೆಪ್ಪನು ಯಾಕೆ ಕರೆದುಕೊಂಡು ಹೋಗಿರಬಹುದು ಅಂತಾ ಸಂಶಯ ಬಂದು ನಾನು ನಾವದಗಿ ರೋಡಿನ ಕಡೆಗೆ ಹೋಗಿದ್ದಾಗ ಬನ್ನೆಪ್ಪನು ತನ್ನ ಮೊಟಾರ ಸೈಕಲನ್ನು ನಮ್ಮ ಹೊಲದ ಕಡೆಗೆ ಹೋಗಿ ಮೊಟಾರ ಸೈಕಲನ್ನು ನಮ್ಮ ಹೊಲದ ಒಡ್ಡಿನ ಹತ್ತಿರ ಇರುವ ಬೆವಿನಗಿಡದ ಹತ್ತಿರ ನಿಲ್ಲಿಸಿ ನನ್ನ ತಾಯಿಯನ್ನು ಒಡ್ಡಿನ ಕಡೆಗೆ ಕರೆದುಕೊಂಡು ಹೋಗಿ ನನ್ನ ತಾಯಿಗೆ ನೆಲಕ್ಕೆ ಕೆಡವಿದಾಗ ನಾನು ಏ ಬನ್ನೆಪ್ಪ ಪೂಜಾರಿ ನನ್ನ ತಾಯಿಗೆ ಏನು ಮಾಡತಾ ಇದ್ದಿಯಾ ಅಂತಾ ಕೇಳಿ ಅವನ ಸಮೀಫಕ್ಕೆ ಹೋದಾಗ ಬನ್ನೆಪ್ಪನು ನನಗೆ ಏ ಬೋಸುಡಿ ಸೂಳೇ ಮಗನೇ ನಿಮ್ಮ ತಾಯಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಿನಿ ನೀನು ನಮ್ಮ ಬೆನ್ನು ಹತ್ತಿ ಬಂದಿದ್ದಿಯಾ ನಿನಗೆ ಇವತ್ತು ಬಿಡುವದಿಲ್ಲಾ ಖಲಾಸ್ ಮಾಡುತ್ತೇನೆ ಅಂತಾ ಮದ್ಯಾಹ್ನ 2 ಗಂಟೆಯ ಸುಮಾರಿಗೆ ನನಗೆ ಹಿಡಿದುಕೊಂಡು ನನಗೆ ಕೊಲೆಮಾಡುವ ಉದ್ದೇಶದಿಂದ ನೆಲಕ್ಕೆ ಕೆಡವಿ ನನ್ನ ಕುತ್ತಿಗೆಯನ್ನುಹಿಡಿದು ಹಿಸುಕುತ್ತಿದ್ದಾಗ ನಾನು ಚಿರ್ಯಾಡುತ್ತಾ ಅವನಿಂದ ಕೊಸರಿಕೊಂಡು ಹೋಗುವಾಗ ನನ್ನ ತಾಯಿಯಾದ ಮಲ್ಲಮ್ಮಾಳು ನನಗೆ ನೀನು ನಮ್ಮ ಸಂಬಂಧಕ್ಕೆ ಅಡ್ಡ ಆಗಿದ್ದಿಯಾ ನಿನಗೆ ಇವತ್ತು ಬಿಡುವದಿಲ್ಲಾ ಅಂತಾ ಕೊಲೆಮಾಡುವ ಉದ್ದೇಶದಿಂದ ನನ್ನ ಕುತ್ತಿಗಿಗೆ ಕೈ ಹಾಕಿ ಹಿಸುಕಲು ಪ್ರಯತ್ನಮಾಡುತ್ತಿದ್ದಾಗ ನಾನು ಅವಳಿಂದ ಕೊಸರಿಕೊಂಡು ಏನಮ್ಮಾ ನೀನು ಬನ್ನೆಪ್ಪನ ಸಂಗಡ ಸೇರಿಕೊಂಡು ನನಗೆ ಕೊಲೆಮಾಡುತ್ತಿಯಾ ಅಂತಾ ಕೇಳಿದಾಗ ನನ್ನ ತಾಯಿಯು ನಮ್ಮ ಬೆನ್ನು ಹತ್ತಿ ಯಾಕೇ ಬಂದಿದ್ದಿಯಾ ನಮ್ಮಿಬ್ಬರ ಸಂಬಂಧಕ್ಕೆ ಅಡ್ಡ ಆಗಿದ್ದಿ ನೀನು ಇವತ್ತು ಉಳಿದುಕೊಂಡಿದಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೇ ನಿನಗೆ ಒಂದು ದಿವಸ ಇಬ್ಬರೂ ಸೇರಿಕೊಂಡು ಕೊಲೆಮಾಡುತ್ತೇವೆ ಅಂತಾ ಬೇದರಿಕೆ ಹಾಕಿದಾಗ ಬನ್ನೆಪ್ಪನು ನನ್ನ ತಾಯಿಗೆ ಕರೆದುಕೊಂಡು ಕರಿಬಾಯಿ ಕಡೆಗೆ ಹೋಗಿದ್ದು, ನಾನು ಅಳುತ್ತಾ ನಮ್ಮ ಮನೆಗೆ ಬಂದು ನನ್ನ ತಂದೆಯಾದ ಸಿದ್ದಪ್ಪ ಹಾಗೂ ಸಂಬಂಧಿಕರಾದ ಚಂದ್ರು ತಂದೆ ನಿಂಗಪ್ಪ ಪೂಜಾರಿ, ಹಣಮಂತ್ರಾಯ ತಂದೆ ನಿಂಗಪ್ಪ ಪೂಜಾರಿ, ಬಸಪ್ಪ ತಂದೆ ಜುಮ್ಮಣ್ಣ ಪೂಜಾರಿ, ನಿಂಗಪ್ಪ ತಂದೆ ಬಸವರಾಜ ಪೂಜಾರಿ ಇವರಿಗೆ ತಿಳಿಸಿದಾಗ ಬನ್ನೆಪ್ಪನ ಮನೆಯ ಹತ್ತಿರ ಈ ವಿಷಯ ಬಗ್ಗೆ ಕೇಳಲು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ಹೋಗಿದ್ದಾಗ 1] ಪರಮಣ್ಣ ತಂದೆ ಈರಪ್ಪ ಬೂದಿಹಾಳ,2]ಜೋತೆಪ್ಪ ತಂದೆ ಕರಿನಿಂಗಪ್ಪ ಪೂಜಾರಿ 3]ಸಿದ್ದಪ್ಪ ತಂದೆ ಯಲ್ಲಪ್ಪ ಪೂಜಾರಿ 4]ಶಿವಣ್ಣ ತಂದೆ ಶಾಂತಪ್ಪ ಪೂಜಾರಿ 5]ಭೀಮಣ್ಣ ತಂದೆ ಮಾಳಪ್ಪ ಪತ್ತೆಪೂರ 6]ಮದಲಿಂಗಪ್ಪ ತಂದೆ ಮತ್ತೆದಾರ 7]ಗುಡದಪ್ಪ ತಂದೆ ರೇವಣಸಿದ್ದಪ್ಪ ಪೂಜಾರಿ 8]ನಂದಪ್ಪ ತಂದೆ ಶಿವಣ್ಣ ಪೂಜಾರಿ ಇವರೆಲ್ಲರೂ ನಮ್ಮ ಹತ್ತಿರ ಬಂದು ನನಗೆ ಮತ್ತು ನನ್ನ ತಂದೆಗೆ '' ಏನಲೇ ಬೊಸುಡಿ ಸೂಳೇ ಮಕ್ಕಳೇ ನಮ್ಮ ಸಂಬಂಧಿ ಬನ್ನೆಪ್ಪನ ಮನೆಯತನಕ ಬಂದಿದ್ದಿರಿ ಅಂತಾ '' ಅವಾಚ್ಯ ಶಬ್ದಗಳಿಂದ ಬೈದು ನಿಮಗೆ ಇವತ್ತು ಖಲಾಸ್ ಮಾಡುತ್ತೇವೆ ಅಂತಾ ನನಗೆ ಮತ್ತು ನನ್ನ ತಂದೆಗೆ ಹೊಡೆಯಲು ಬಂದಾಗ ಚಂದ್ರು ತಂದೆ ನಿಂಗಪ್ಪ ಪೂಜಾರಿ, ಹಣಮಂತ್ರಾಯ ತಂದೆ ನಿಂಗಪ್ಪ ಪೂಜಾರಿ,ಬಸಪ್ಪ ತಂದೆ ಜುಮ್ಮಣ್ಣ ಪೂಜಾರಿ, ನಿಂಗಪ್ಪ ತಂದೆ ಬಸವರಾಜ ಪೂಜಾರಿ ಇವರು ಜಗಳವನ್ನು ನೋಡಿ ಬಿಡಿಸಿರುತ್ತಾರೆ,
ಕಾರಣ ನನಗೆ ಕೊಲೆಮಾಡುವ ಉದ್ದೇಶದಿಂದ ಬನ್ನೆಪ್ಪನು ಮತ್ತು ನನ್ನ ತಾಯಿ ಮಲ್ಲಮ್ಮ ನನಗೆ ಕುತ್ತಿಗೆ ಹಿಸುಕುತ್ತಿದ್ದಾಗ ನಾನು ಅವರಿಂದ ಕೊಸರಿಕೊಂಡಿದ್ದರಿಂದ ನನ್ನ ಜೀವ ಉಳಿದಿರುತ್ತದೆ ಅಲ್ಲದೇ ಈ ವಿಷಯದ ಬಗ್ಗೆ ಕೇಳಲು ಹೋಗಿದ್ದ ನನಗೆ ಮತ್ತು ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು, ಈ ಬಗ್ಗೆ ನಾನು ನನ್ನ ತಂದೆಯು ನಮ್ಮ ಸಂಬಂಧಿಕರೊಂದಿಗೆ ವಿಚಾರಿಸಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ಫಿರ್ಯಾದಿಯನ್ನು ನೀಡಿರುತ್ತೇನೆ. ಕಾರಣ ಮಾನ್ಯರವರು ನನಗೆ ಕೊಲೆಮಾಡಲು ಪ್ರಯತ್ನಿಸಿದವರ ಮೇಲೆ ಹಾಗೂ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನಕ್ರಮ ಜರುಗಿಸಬೇಕು ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.