ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 22-06-2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ : 91/2021 ಕಲಂ 279,337,338 ಐ.ಪಿ.ಸಿ : ದಿನಾಂಕ 21-06-2021 ರಂದು 8-00 ಎ.ಎಮಕ್ಕೆ ಆರೋಪಿತನು ತನ್ನ ಲಾರಿ ನಂ ಕೆಎ-22 ಸಿ-2097 ನೇದ್ದನ್ನು ಕೋಡ್ಲಾ ಸಿಮೆಂಟ ಪ್ಯಾಕ್ಟರಿಯಿಂದ ಸಿಮೆಂಟ ತುಂಬಿಕೊಂಡು ಯಾದಗಿರಿ ಕಡೆಗೆ ಬರುವಾಗ ಮಾರ್ಗ ಮದ್ಯೆ ಸೌದಾಗಾರ ತಾಂಡ ಕ್ರಾಸ ಇಳಿಜಾರು ಪ್ರದೇಶಲ್ಲಿ ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಹೋಗಿ ಅಪಘಾತ ಮಾಡಿದ್ದು ಇರುತ್ತದೆ. ಸದರಿ ಅಪಘಾತದಲ್ಲಿ ಚಾಲಕನಿಗೆ ಕಾಲಿನ ಹಿಮ್ಮಡಿಗೆ ಭಾರಿ ರಕ್ತಗಾಯ, ಗುಪ್ತಗಾಯ ಹಾಗೂ ತರಚಿದ ಗಾಯಗಳು ಆಗಿರುತ್ತದೆ.

 


ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 95/2021 ಕಲಂ 279, 337, 338 ಐಪಿಸಿ : ನಿನ್ನೆ ದಿನಾಂಕ 20.06.2021 ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಆರೋಪಿ ಶರಣಪ್ಪ ಇಬರು ಮೋಟಾರು ಸೈಕಲ್ ನಂಬರ ಕೆಎ-33-ಕ್ಯೂ-3276 ನೇದ್ದರ ಮೇಲೆ ಬೂದುರ ಗ್ರಾಮ ಕಡೆಯಿಂದ ಗುಂಜೂರು ಗೇಟ್ ಮಾರ್ಗವಾಗಿ ತಮ್ಮ ತಾಂಡಾಕ್ಕೆ ಹೋಗುತ್ತಿದ್ದಾಗ ಅದೇ ರೀತಿ ಗಾಯಾಳು ಹರ್ಷವರ್ಧನರಡ್ಡಿ ಮತ್ತು ಆರೋಪಿ ರಘುನಾಥರಡ್ಡಿ ಇವರು ಮೋಟಾರು ಸೈಕಲ್ ನಂಬರ ಕೆಎ-33-ವೈ-9234 ನೇದ್ದರ ಮೇಲೆ ಯಾದಗಿರಿ ಕಡೆಯಿಂದ ಗುಂಜನೂರು ಗೇಟ್ ಮಾರ್ಗವಾಗಿ ಅನಪೂರ ಗ್ರಾಮಕ್ಕೆ ಹೋಗುತ್ತಿದ್ದಾಗ ಎರಡೂ ಮೋಟಾರು ಸೈಕಲ್ಗಳ ಚಾಲಕತು ತಮ್ಮ-ತಮ್ಮ ಮೋಟಾರು ಸೈಕಲ್ಗಳನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಗುಂಜನುರು ಗೇಟ್ನ ಹತ್ತಿರ ಯಾದಗಿರಿ ರೋಡಿನ ಮೇಲೆ ಪರಸ್ಪರ ಮುಖಾ-ಮುಖಿಯಾಗಿ ಅಪಘಾತಯಪಡಿಸಿದ್ದರಿಂದ ಶರಣಪ್ಪ, ರಘುನಾಥರಡ್ಡಿ, ಹರ್ಷವರ್ಧನರಡ್ಡಿ ರವರಿಗೆ ಸಾಧಾ ಹಾಗೂ ಬಾರಿ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಳಾಗಿದ್ದು ಆ ಬಗ್ಗೆ ಫಿರ್ಯಾದಿಯು ದೂರು ನೀಡಲು ತಡವಾಗಿ ಇಂದು ದಿನಾಂಕ 21.06.2021 ರಂದು ದೂರು ನೀಡಿದ್ದರಿಂದ ಫಿರ್ಯಾದಿಯ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 95/2021 ಕಲಂ: 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 112/2021 ಕಲಂ 87 ಕೆ.ಪಿ.ಕಾಯ್ದೆ : ಇಂದು ದಿನಾಂಕ: 21/06/2021 ರಂದು 12:30 ಪಿ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಶ್ರೀ ಶ್ರೀ ಚಂದ್ರಶೆಕರ ಪಿ.ಎಸ್.ಐ(ಕಾ&ಸು-2) ಸಾಹೇಬರು 06 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:21/06/2021 ರಂದು 8:30 ಎ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಪೇಠ ಅಮ್ಮಾಪುರ ಬಸ್ ನಿಲ್ದಾಣದ ಹತ್ತಿರ ಇವರು ಲಕ್ಷ್ಮಿ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176, 2) ಶ್ರೀ ಮನೋಹರ ಹೆಚ್ಸಿ-105, 3)ಶ್ರೀ ಮಂಜುನಾಥ ಪಿಸಿ-271, 4) ಶ್ರೀ ರವಿಕುಮಾರ ಸಿಪಿಸಿ-376, 5) ಶ್ರೀ ಹೊನ್ನಪ್ಪ ಸಿಪಿಸಿ-427, 6) ವಿರೇಶ ಸಿಪಿಸಿ-374, 7) ಶ್ರೀ ಬಸವರಾಜ ಸಿಪಿಸಿ-395, 8)ಕು. ಕುಮಾರ ಪಿಸಿ-139 ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರು ಇಬ್ಬರು ಪಂಚರಾದ 1) ಹಣಮಂತ ತಂದೆ ಪರಸಪ್ಪ ಪ್ಯಾಟಿ ವ|| 34 ವರ್ಷ ಜಾ|| ಯಾದವ ಉ|| ಒಕ್ಕಲುತನ ಸಾ|| ಪೇಠ್ ಅಮ್ಮಾಪುರ 2) ಮಲ್ಲಿಕಾಜರ್ುನ ತಂದೆ ಹಣಮಂತ ಯರಮರ ವ|| 30 ವರ್ಷ ಜಾ|| ಯಾದವ ಉ|| ಒಕ್ಕಲುತನ ಸಾ|| ಪೇಠ್ ಅಮ್ಮಾಪುರ ಸುರಪುರ ಇವರನ್ನು 9 ಎ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 9:15 ಎ.ಎಂ ಕ್ಕೆ ಠಾಣೆಯ ಜೀಪ್ ನಂ. ಕೆಎ-33 ಜಿ-0094 ನೇದ್ದರಲ್ಲಿ ಠಾಣೆಯಿಂದ ಹೊರಟು 9:55 ಎ.ಎಂ ಕ್ಕೆ ಪೇಠ್ ಅಮ್ಮಾಪುರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇರುವ ಲಕ್ಷ್ಮಿ ಗುಡಿಯ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಶ್ರೀ ಲಕ್ಷ್ಮಿ ಗುಡಿಯ ಮುಂದೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 10:00 ಎ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 06 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಶಾಂತಪ್ಪ ತಂದೆ ಸಣ್ಣಪರಮಣ್ಣ ಟಣಕೇದಾರ ವ|| 31 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ಪೇಠ್ ಅಮ್ಮಾಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1300/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಈಶ್ವರ ತಂದೆ ನಿಂಗಪ್ಪ ಪ್ಯಾಟಿ ವ|| 31 ವರ್ಷ ಜಾ|| ಯಾದವ್ ಉ|| ಕೂಲಿ ಸಾ|| ಬೈರಿಮಡ್ಡಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1900/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಸುಭಾನ ತಂದೆ ಇಜಲ್ ರೈಹೆಮಾನ ಚೌದ್ರಿ ವ|| 30 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಪೇಠ್ ಅಮ್ಮಾಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1150/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಭೀಮಣ್ಣ ತಂದೆ ಬಸಪ್ಪ ಬಲವಂತನೂರ ವ|| 38 ವರ್ಷ ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ಪೇಠ್ ಅಮ್ಮಾಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1350/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಯಂಕೋಬ ತಂದೆ ನರಸಪ್ಪ ಯಾದವ ವ|| 29 ವರ್ಷ ಜಾ|| ಯಾದವ ಉ|| ಕೂಲಿ ಸಾ|| ಪೇಠ್ ಅಮ್ಮಾಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1100/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಬಸಪ್ಪ ತಂದೆ ಬಸುರಾಜಪ್ಪ ಗುಡ್ಡಡಗಿ ವ|| 38 ವರ್ಷ ಜಾ|| ನೇಕಾರ ಉ|| ಒಕ್ಕಲುತನ ಸಾ|| ಪೇಠ್ ಅಮ್ಮಾಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1200/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 7,770/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 15,770/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 10:00 ಎ.ಎಮ್ ದಿಂದ 11:00 ಎ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 06 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸುತ್ತಿದ್ದು, ಸದರ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 112/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

 

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 113/2021 ಕಲಂ 87 ಕೆ.ಪಿ.ಕಾಯ್ದೆ: ಇಂದು ದಿನಾಂಕ: 21-06-2021 ರಂದು 7-15ಪಿ.ಎಂ.ಕ್ಕೆ ಠಾಣೆಯಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಶ್ರೀ ವೆಂಕಟೇಶ ಡಿ.ಎಸ್.ಪಿ. ಸುರಪುರ ಉಪ-ವಿಭಾಗ ಸುರಪುರಸಾಹೇಬರು 8 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ,ಇಂದು ದಿನಾಂಕ:21/06/2021 ರಂದು 4 ಪಿ.ಎಂ ಸುಮಾರಿಗೆ ಉಪ-ವಿಭಾಗದ ಕಛೆರಿಯಲ್ಲಿರುವಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ,ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯ ನರಸಿಂಗಪೇಠ ಸೀಮಾಂತರದ ಹಣಮೇಶಗೌಡ ಪಾಟೀಲ್ ಇವರ ತೋಟದ, ಗುಡ್ಡದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ-ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಉಪ-ವಿಭಾಗದ ಕಛೇರಿಯಲ್ಲಿದ್ದ ಶಹಾಪೂರ ಠಾಣೆಯ ಸಿಬ್ಬಂದಿಯಾದ 1) ಶ್ರೀ ಮಂಜುನಾಥ ಸಿಪಿಸಿ-73, ಕೊಡೆಕಲ್ ಠಾಣೆಯ ಸಿಬ್ಬಂದಿಯಾದ 2) ಶ್ರೀ ಶಾಂತಪ್ಪ ಸಿಪಿಸಿ- 91, ಕೆಂಭಾವಿ ಠಾಣೆಯ ಸಿಬ್ಬಂದಿಯವರಾದ 3) ಚಂದಪ್ಪ ಸಿಪಿಸಿ-316, 4) ಶ್ರೀ ಭೀರಪ್ಪ ಸಿಪಿಸಿ-195, ಸುರಪೂರ ಠಾಣೆಯ ಸಿಬ್ಬಂಧಿಯವರಾದ 5) ಶ್ರೀ ಮನೋಹರ್ ಹೆಚ್ಸಿ-105, 6) ಶ್ರೀ ಹೊನ್ನಪ್ಪ ಸಿಪಿಸಿ-427, 7) ಶ್ರೀ ವಿರೇಶ ಸಿಪಿಸಿ-374 ಇವರೆಲ್ಲರಿಗೂ ವಿಷಯ ತಿಳಿಸಿ, ಮನೋಹರ್ ಹೆಚ್ಸಿ-105 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದಂತೆ, ಮನೋಹರ್ ಹೆಚ್ಸಿ ಇವರು ಇಬ್ಬರು ಪಂಚರಾದ 1) ಶ್ರೀ ಬಸವರಾಜ ತಂದೆ ಪರಮಣ್ಣ ಗುಡ್ಡಕಾಯವರು ವಯಾ:30 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ಕುಂಬಾರಪೇಠ ತಾ|| ಸುರಪುರ 2) ಶ್ರೀ ಶಿವಪ್ಪ ತಂದೆ ಶಿವಲಿಂಗಪ್ಪ ಬೋವಿ ವಯಾ:35 ವರ್ಷ ಜಾ:ಕುರುಬರ ಉ:ಹಮಾಲಿ ಸಾ:ಕುಂಬಾರಪೇಠ ತಾ|| ಸುರಪುರ ಇವರನ್ನು 4-30 ಪಿ.ಎಂ ಕ್ಕೆ ಕಛೇರಿಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಸದರಿ ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 4-45 ಪಿ.ಎಂ ಕ್ಕೆ ಸರಕಾರಿ ಜೀಪ್ ನಂ. ಕೆಎ-33.ಜಿ-0253 ನೇದ್ದರಲ್ಲಿ ಹೊರಟು, 5-15 ಪಿ.ಎಂ ಕ್ಕೆ ನರಸಿಂಗಪೇಠ ಸೀಮಾಂತರದ ಹಣಮೇಶಗೌಡ ಪಾಟೀಲ್ ಇವರ ತೋಟದ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಹಣಮೇಶಗೌಡ ಪಾಟೀಲ್ ಇವರ ತೋಟದ, ಗುಡ್ಡದ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ-ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 5-20 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 8 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಶರಣಪ್ಪ ತಂದೆ ಯಲ್ಲಪ್ಪ ಕೊಂಡಡಗಿ ವಯಾ:45 ವರ್ಷ ಜಾ:ಬೇಡರ ಉ:ಒಕ್ಕಲುತನ ಸಾ:ಡೊಣ್ಣಿಗೇರಿ ಸುರಪೂರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1250/- ರೂಗಳು ವಶಪಡಿಸಿಕೊಳ್ಳಲಾಯಿತು. 2) ತಿರುಪತಿ ತಂದೆ ಸೂಗಪ್ಪ ಮುದೋಳ ವಯಾ:35 ವರ್ಷ ಜಾ:ಲಿಂಗಾಯತ ಉ:ಒಕ್ಕಲುತನ ಸಾ:ನರಸಿಂಗಪೇಠ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1050/- ರೂಗಳು ವಶಪಡಿಸಿಕೊಳ್ಳಲಾಯಿತು. 3) ನಿಂಗಣ್ಣ ತಂದೆ ಶಿವಲಿಂಗಪ್ಪ ಬೋವಿಯರ ವಯಾ:42 ವರ್ಷ ಜಾ:ಕುರುಬರ ಉ:ಒಕ್ಕಲುತನ ಸಾ:ಕುಂಬಾರಪೇಠ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1350/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಸಣ್ಣೆಪ್ಪ ತಂದೆ ಹಣಮಂತ ಹೊರಕನಳ್ಳಿ ವಯಾ:40 ವರ್ಷ ಜಾ:ಬೇಡರ ಉ:ಹಮಾಲಿ ಸಾ:ಕುಂಬಾರಪೇಠ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1150/- ರೂಗಳು ವಶಪಡಿಸಿಕೊಳ್ಳಲಾಯಿತು 5) ಮರೆಪ್ಪ ತಂದೆ ಭೀಮಣ್ಣ ದೊರೆ ವಯಾ:40 ವರ್ಷ ಜಾ:ಬೇಡರ ಉ:ಕೂಲಿ ಸಾ:ಕುಂಬಾರಪೇಠ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 950/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಹಣಮಂತ ತಂದೆ ಭೀಮಣ್ಣ ಹರಪ್ಪನಳ್ಳಿ ವಯಾ:25 ವರ್ಷ ಜಾ:ಬೇಡರ ಉ:ಡ್ರೈವರ ಸಾ:ಕುಂಬಾರಪೇಠ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1100/- ರೂಗಳು ವಶಪಡಿಸಿಕೊಳ್ಳಲಾಯಿತು, 7) ಹೊನ್ನಪ್ಪ ತಂದೆ ಆದಪ್ಪ ಕೆಂಗೂರಿ ವವಯಾ:30 ವರ್ಷ ಜಾ:ಕುರುಬರ ಉ:ಕೂಲಿ ಸಾ:ಕುಂಬಾರಪೇಠ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1050/- ರೂಗಳು ವಶಪಡಿಸಿಕೊಳ್ಳಲಾಯಿತು, 8) ಕಂಡಪ್ಪ ತಂದೆ ಭೀಮಪ್ಪ ಅರಸಣಗಿ ವಯಾ:26 ವರ್ಷ ಜಾ:ಮಾದಿಗ ಉ:ಕೂಲಿ ಸಾ:ಕುಂಬಾರಪೇಠ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 900/- ರೂಗಳು ವಶಪಡಿಸಿಕೊಳ್ಳಲಾಯಿತು, ಇದಲ್ಲದೆ ಪಣಕ್ಕೆ ಇಟ್ಟ ಹಣ 19030/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 27,830/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 5-20 ಪಿ.ಎಮ್ ದಿಂದ 6-20 ಪಿ.ಎಮ್ ಬರೆದುಕೊಂಡಿದ್ದು ಇರುತ್ತದೆ. ನಂತರ 8 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸುತ್ತಿದ್ದು, ಸದರ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲುವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 113/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

 

ಯಾದಗಿರ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ: 35/2021 ಕಲಂ 279, 338 ಐಪಿಸಿ : ಇಂದು ದಿನಾಂಕ 21/06/2021 ರಂದು ಸಾಯಂಕಾಲ 7-30 ಪಿ.ಎಂ. ದ ಸುಮಾರಿಗೆ ಯಾದಗಿರಿ - ಹೈದ್ರಾಬಾದ್ ಮುಖ್ಯ ರಸ್ತೆಯ ಯಾದಗಿರಿ ನಗರದ ಸೈದಾಪುರ ಉಡುಪಿ ಹೊಟೆಲ್ ಮುಂದಿನ ಮುಖ್ಯ ರಸ್ತೆ ಮೇಲೆ ಈ ಕೇಸಿನ ಪಿಯರ್ಾದಿಯ ತಂದೆಯಾದ ಗಾಯಾಳು ಶರಣಪ್ಪ ವಯ;52 ವರ್ಷ ಇವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಕೇಸಿನ ಆರೋಪಿತ ಮೋಟಾರು ಸೈಕಲ್ ನಂಬರ ಕೆಎ-36, ಇಎಸ್-5976 ಸವಾರ ಅಮಿತಸಿಂಗ್ ಈತನು ತನ್ನ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಗಾಯಾಳುವಿಗೆ ನೇರವಾಗಿ ಡಿಕ್ಕಿಕೊಟ್ಟಿದ್ದರಿಂದ ಅಪಘಾತ ಜರುಗಿದ್ದು, ಈ ಅಪಘಾತದಲ್ಲಿ ಎಡಗೈ, ಎಡಗಾಲಿಗೆ ಭಾರೀ ರಕ್ತಗಾಯ ಮತ್ತು ಒಳಪೆಟ್ಟಾಗಿ ಮುರಿದಿರುತ್ತವೆ ಅಲ್ಲದೇ ತಲೆಯ ಹಿಂಭಾಗಕ್ಕೆ ಭಾರೀ ಒಳಪೆಟ್ಟಾಗಿದ್ದು ಪ್ರಜ್ಞೆ ತಪ್ಪಿರುತ್ತಾರೆ. ಈ ಅಪಘಾತಕ್ಕೆ ಕಾರಣರಾದ ಮೋಟಾರು ಸೈಕಲ್ ಸವಾರನ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 35/2021 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 


ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 87/2021 ಕಲಂ: 143,147,148,447, 323,324,354,504,506 ಸಂಗಡ 149 ಐಪಿಸಿ : ಇಂದು ದಿನಾಂಕ 21.06.2021 ರಂದು 10 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಪಾರ್ವತಿ ತಂದೆ ಬಾಪುಗೌಡ ಕಾಮನಟಗಿ ವಯಾ|| 38 ಜಾ|| ಹಿಂದೂ ರಡ್ಡಿ ಉ|| ಮನೆಗೆಲಸ ಸಾ|| ಕೆಂಭಾವಿ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ಏವೂರ ಸೀಮಾಂತರದಲ್ಲಿ ನಮ್ಮ ತಂದೆಯವರಾದ ಬಾಪುಗೌಡ ಇವರು ಖರದಿ ಆಸ್ತಿ ಸವರ್ೆ ನಂಬರ 37 ಮತ್ತು 60 ನೇದ್ದರಲ್ಲಿ 44 ಎಕರೆ ಹೊಲವಿದ್ದು ಈ ಜಮೀನು ನಮ್ಮ ತಂದೆಯವರ ಹೆಸರಿನಲ್ಲಿದ್ದು ಅವರಿಗೆ ಯಾವದೇ ಗಂಡು ಮಕ್ಕಳು ಇಲ್ಲದ ಕಾರಣ ಖಾಸ ಮಗಳಾದ ನನಗೆ ಸದರಿ ಎರಡು ಜಮೀನುಗಳನ್ನು ನನಗೆ ಮರಣ ಶಾಸನ ಮಾಡಿಸಿಕೊಟ್ಟಿದ್ದು ಇರುತ್ತದೆ. ಅದರಂತೆ ಸದರಿ ಜಮೀನು ಇಲ್ಲಿಯವರೆಗೆ ನನ್ನ ಕಬ್ಜಾದಲ್ಲಿರುತ್ತದೆ. ಆದರೆ ನಾನು ನಮ್ಮ ತಂದೆಯವರಿಂದ ಮರಣ ಶಾಸನ ಮಾಡಿಕೊಂಡಿದ್ದರಿಂದ ನಮ್ಮ ಸಂಬಂದಿಕರಾದ ವಿಜಯರಡ್ಡಿ ತಂದೆ ಗೌಡಪ್ಪಗೌಡ ಕಾಮನಟಗಿ ಈತನು ನಮ್ಮ ಮೇಲೆ ಹಗೆತನ ಸಾದಿಸುತ್ತಿದ್ದನು. ಹೀಗಿದ್ದು ಇಂದು ದಿನಾಂಕ 21.06.2021 ರಂದು ನನಗೆ ನಮ್ಮ ತಂದೆಯವರು ವೀಲ್ ಬರೆದುಕೊಟ್ಟ ಹೊಲ ಸವರ್ೆ ನಂಬರ 37 ರಲ್ಲಿ ಉಳಿಮೆ ಮಾಡುವ ಕುರಿತು ನಾನು ನಮ್ಮ ತಾಯಿ ದಂಡಮ್ಮ ಗಂಡ ಬಾಪುಗೌಡ, ಹಾಗು ನಮ್ಮ ಗಂಡನಾದ ವಿಶ್ವನಾಥರಡ್ಡಿ ಅಲ್ಲದೇ ನಮ್ಮ ಸಂಬಂದಿಕರಾದ ಮಲ್ಲರಡ್ಡಿ ಹಾಗು ಚೆನ್ನಾರಡ್ಡಿ ಎಲ್ಲರೂ ಕೂಡಿಕೊಂಡು ಉಳಿಮೆ ಮಾಡುತ್ತಿದ್ದಾಗ ಅಂದಾಜು ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಾವು ಎಲ್ಲರೂ ನಮ್ಮ ಹೊಲದಲ್ಲಿದ್ದಾಗ ನಮ್ಮ ಮೇಲೆ ಹಗೆತನ ಸಾದಿಸುತ್ತಿದ್ದ 1] ಗೌಡಪ್ಪಗೌಡ ತಮದೆ ಶಂಕ್ರೆಪ್ಪಗೌಡ ಕಾಮನಟಗಿ 2] ವಿಜಯರಡ್ಡಿ ತಂದೆ ಗೌಡಪ್ಪಗೌಡ ಕಾಮನಟಗಿ 3] ಶಿವುಕುಮಾರ ತಂದೆ ಗೌಡಪ್ಪಗೌಡ ಕಾಮನಟಗಿ 4] ಹರ್ಷರಡ್ಡಿ ತಂದೆ ಗುರುನಾಥರಡ್ಡಿ ಕಾಮನಟಗಿ 5] ದೇವಪ್ಪ ತಂದೆ ಹಣಮಂತ್ರಾಯ ಕೋಸಗಿ 6] ಬಸಪ್ಪ ತಂದೆ ಭೀಮರಾಯ ಕಕ್ಕೇರಾ ಈ ಎಲ್ಲಾ ಜನರು ಕೈಯಲ್ಲಿ ಕಲ್ಲು, ಬಡಿಗೆ, ಸಲಿಕೆ ಕಾವು ಹಿಡಿದುಕೊಂಡು ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಎಲ್ಲರೂ ನನ್ನಲ್ಲಿಗೆ ಬಂದು ಏನಲೇ ಸೂಳಿ ಹೊಲ ವೀಲ್ ಬರೆದುಕೊಟ್ಟರೆ ನಿನಗೆ ಬಿಡುವವರು ಯಾರು ಸೂಳಿ ಅಂತ ಅಂದಾಗ ನಾನು ನಮ್ಮ ತಂದೆಯವರ ಹೊಲವಿದ್ದು ಅದನ್ನು ಕೇಳಲು ನೀನು ಯಾರು ಅಂತ ಅಂದಾಗ ಎಲ್ಲರೂ ನನಗೆ ಕೈಯಿಂದ ಹೊಡೆಬಡೆ ಮಾಡುತ್ತಿದ್ದಾಗ ಅವರಲ್ಲಿಯ ವಿಜಯರಡ್ಡಿ ಹಾಗು ಶಿವುಕುಮಾರ ಇವರು ನನಗೆ ಮಾನಭಂಗ ಮಾಡುವ ಉದ್ದೇಶದಿಂದ ನನ್ನ ಕೂದಲು ಹಿಡಿದು ಎಳೆದಾಡುತ್ತಿದ್ದಾಗ ಅಲ್ಲಿಯೇ ಇದ್ದ ನನ್ನ ಗಂಡ ವಿಶ್ವಾಥರಡ್ಡಿ ಹಾಗು ನಮ್ಮ ತಾಯಿ ದಂಡಮ್ಮ ಇವರು ಬಿಡಿಸಿಕೊಳ್ಳಲು ಬಂದಾಗ ನನ್ನ ಗಂಡನವರಿಗೆ ವಿಜಯರಡ್ಡಿ ಈತನು ಸಲಿಕೆ ಕಾವಿನಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿ ಎಡಗಲ್ಲಕ್ಕೆ ಹೊಡೆದು ಗಾಯ ಪಡಿಸಿದ್ದು ಇರುತ್ತದೆ. ಅಲ್ಲದೇ ನಮ್ಮ ತಾಯಿಯವರಾದ ದಂಡಮ್ಮ ಇವರಿಗೆ ವಿಜಯರಡ್ಡಿ ಹಾಗು ಶಿವುಕುಮಾರ ಇವರು ಕಲ್ಲಿನಿಂದ ಟೊಂಕಕ್ಕೆ ಹಾಗು ಬೆನ್ನಿಗೆ ಗುದ್ದಿ ಗುಪ್ತಗಾಯ ಪಡಿಸಿದ್ದು ಅಲ್ಲದೇ ನಾವು ಮೂರು ಜನರಿಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾವು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊಲದ ಇನ್ನೊಂದು ಬಾಂದಾರಿಯಲ್ಲಿರುವ ನಮ್ಮ ಸಂಬಂದಿಕರಾದ ಮಲ್ಲರಡ್ಡಿ ಹಾಗು ಚೆನ್ನರಡ್ಡಿ ಇವರು ಓಡಿ ಬಂದಾಗ ಸದರಿಯವರು ನಮಗೆ ಹೊಡೆಯುವದನ್ನು ಬಿಟ್ಟು ಹೋದರು. ನಂತರ ಎಲ್ಲರೂ ಕೇಕೆ ಹಾಕುತ್ತಾ ಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಸದರಿಯವರು ಸುಮಾರು 2011 ರಿಂದ ತಕಾರಾರು ಮಾಡುತ್ತಾ ಬಂದಿದ್ದಲ್ಲದೇ ಸುಮಾರು ಸಲ ನಮಗೆ ಹೊಡೆದು ಗಾಯಪಡಿಸಿದ್ದು ಈ ಬಗ್ಗೆ ಸದರಿಯವರ ಮೇಲೆ ಮಾನ್ಯ ನ್ಯಾಯಾಲಯದಲ್ಲಿ ಸಿಸಿ ನಂಬರ 64/1984, 22/2012 ಹಾಗು 115/2019 ನೇದ್ದರಡಿಯಲ್ಲಿ ಕೆಸ್ ನಡೆದಿದ್ದು ಅಲ್ಲದೇ ಶಿಕ್ಷೆಯು ಸಹ ಅನುಭವಿಸಿರುತ್ತಾರೆ. ಕಾರಣ ಮೇಲ್ಕಾಣಿಸಿದ 06 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 87/2021 ಕಲಂ 143,147,148,447, 323,324,354,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 22-06-2021 12:36 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080