ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 22-06-2022


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 51/2022 78 (3) ಕೆ.ಪಿ ಯಾಕ್ಟ : ದಿನಾಂಕ:21/06/2022 ರಂದು 17.10 ಪಿ.ಎಮ್ ಕ್ಕೆ, ಶ್ರೀ. ದೌಲತ್ ಎನ್.ಕೆ ಸಿಪಿಐ ಹುಣಸಗಿ ವೃತ್ತ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾಳನೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಹಾಗೂ ಜನರಿಗೆ ಕರೆದು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೆರೆಗೆ, ಮಟಕಾ ಬರೆದುಕೊಳ್ಳುವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:51/2022 ಕಲಂ. 78(3) ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ ನಂತರ ಸಿಪಿಐ ಸಾಹೇಬರು ರವರು 19.10 ಗಂಟೆಗೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ & ನಗದು ಹಣ 2620/- ರೂ.ಗಳು, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲಪೆನ್ನ ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಆದೇಶ ನೀಡಿದ್ದು ಇರುತ್ತದೆ. ಆರೋಪಿತರ ಹೆಸರು 1) ಮಲ್ಲಿಕಾಜರ್ುನ ತಂದೆ ಸುಭಾಷ ಗೋಗಿ ವಯಾ-38 ವರ್ಷ, ಜಾ:ಹಿಂದೂ ಲಿಂಗಾಯತ ಉ:ಮಟಕಾ ಬರೆಯುವದು ಸಾ:ಮಾಳನೂರ ತಾ:ಹುಣಸಗಿ ಜಿ:ಯಾದಗಿರಿ, 2) ಗಿರಿಯಪ್ಪ ತಂದೆ ನಿಂಗಪ್ಪ ವಜ್ಜಲ ವಯಾ-38 ವರ್ಷ, ಜಾ:ಬೇಡರ ಉ:ಮಟಕಾ ಬರೆಯುವದು ಸಾ:ಮಾಳನೂರ ಅಂತಾ ಇರುತ್ತದೆ.


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 52/2022 ಕಲಂ. 279 337 338 ಐಪಿಸಿ : ಇಂದು ದಿನಾಂಕ:21/06/2022 ರಂದು 20.10 ಗಂಟೆಗೆ ಹುಣಸಗಿ ಸರಕಾರಿ ಆಸ್ಪತ್ರೆಯಿಂದ ವೈದ್ಯಾಧಿಕಾರಿಗಳು ಪೋನ ಮುಖಾಂತರ ರಸ್ತೆಯ ಅಪಘಾತದ ಎಂ.ಎಲ್.ಸಿ ಮಾಹಿತಿ ತಿಳಿಸಿದ ಮೇರೆಗೆ ನಾನು ಸರಕಾರಿ ಆಸ್ಪತ್ರಗೆ ಬೇಟಿ ಕೊಟ್ಟು ಗಾಯಾಳುವಿನೊಂದಿಗೆ ಬಸವರಾಜ ತಂದೆ ಮಾಳಿಂಗಪ್ಪ ಮೇಲಿನಮನಿ ಸಾ:ಹುಣಸಗಿ ಈತನಿಗೆ ವಿಚಾರಣೆ ಮಾಡಲು ಹೇಳಿಕೆ ಕೊಟ್ಟಿದ್ದು ಏನೆಂದರೆ, ಇಂದು ದಿನಾಂಕ:21/06/2022 ರಂದು ಸಾಯಂಕಾಲ 7.15 ಗಂಟೆಯ ಸುಮಾರಿಗೆ ಮೋಟಾರ್ ಸೈಕಲ್ ನಂ. ಕೆಎ-33 ಎಲ್-1179 ನೇದ್ದರ ಮೇಲೆ ಆರೋಪಿ ನಾಗಪ್ಪ ಈತನು ಹಿಂದೆ ಚಂದ್ರಶೇಖರ ಈತನಿಗೆ ಕೂಡಿಸಿಕೊಂಡು ಹುಣಸಗಿಯಿಂದ ಕಾಮನಟಗಿಗೆ ಹೊರಟಾಗ ಕಾಮನಟಗಿ ಸೀಮಾಂತರ ಎರಿಕೆನಾಲ್ ಬ್ರೀಡ್ಜ್ ಸಮೀಪ್ ಹುಣಸಗಿ-ನಾರಾಯಣಪೂರ ರೋಡಿನಲ್ಲಿ ಆರೋಪಿತನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಯಿಸಿ ರಸ್ತೆಯ ಮೇಲೆ ಒಮ್ಮಲೆ ರೋಡಿನ ಬಲ ಬಾಗಕ್ಕೆ ಕಟ್ ಹೊಡೆದು ನಿಯಂತ್ರಣ ತಪ್ಪಿ ಸ್ಕಿಡ್ಡಾಗಿ ಅಪಘಾತ ಮಾಡಿದ್ದು, ಅಪಘಾತದಲ್ಲಿ ಚಂದ್ರಶೇಖರ ಈತನಿಗೆ ಭಾರಿನ ರಕ್ತಗಾಯ ಮತ್ತು ಒಳಪೆಟ್ಟು, ಚಾಲಕ ಆರೋಪಿಗೆ ಸಣ್ಣಪುಟ್ಟ ತರಚಿದ ರಕ್ತಗಾಯವಾಗಿದ್ದು ಅಂತಾ ಇತ್ಯಾದಿ ದೂರು ಕೊಟ್ಟ ಬಗ್ಗೆ ಅಪರಾಧ.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 108/2022 ಕಲಂ, 379 ಐ.ಪಿ.ಸಿ : ಇಂದು ದಿನಾಂಕ 21/06/2022 ರಂದು, ಸಂಜೆ 6-15 ಪಿಎಂ ಕ್ಕೆ ಫಿರ್ಯಾದಿ ಠಾಣೆಗೆ ಫೀರ್ಯಾದಿ ಶ್ರೀ ಪ್ರಕಾಶ ತಂದೆ ವಿರುಪಣ್ಣ ನಾಗೋಲಿ ಸಾ: ಮುನಮುಟಗಿ ರವರು ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ದೂರು ಅಜರ್ಿ ಸಲ್ಲಿದ್ದರ ಸಾರಾಂಶವೆನೇಂದರೆ. ನನ್ನದೊಂದು ಸಿ ಡಿ ಡಿಲಕ್ಸ ಮೋಟರ್ ಸೈಕಲ್ ನಂ ಕೆಎ-33-ಕೆ-9795 ಅಂದಾಜು 15000=00 ರೂಪಾಯಿ ಕಿಮ್ಮತ್ತಿನದು ಇರುತ್ತದೆ. ಸದರಿ ಮೋಟರ ಸೈಕಲ್ ನನ್ನ ಹೊಲ ಮನೆ ಕೆಲಸಕ್ಕೆ ನಾನು ಉಪಯೋಗ ಮಾಡಿಕೊಂಡಿರುತ್ತೇನೆ. ಹಿಗಿದ್ದು ದಿನಾಂಕ: 03/06/2022 ರಂದು ರಾತ್ರಿ 9.00 ಪಿ.ಎಂ ಸುಮಾರಿಗೆ ನಾನು ನನ್ನ ಮೋಟಾರ ಸೈಕಲನ್ನು ನಮ್ಮೂರ ನಮ್ಮ ಮನೆಯ ಮುಂದೆ ನಿಲ್ಲಿಸಿ ನಾನು ನಮ್ಮ ಮನೆಯಲ್ಲಿ ಮಲಗಿದ್ದೆನು. ನಂತರ ದಿನಾಂಕ: 04/06/2022 ರಂದು ಬೆಳಗಿನ ಜಾವ 5.00 ಎ.ಎಂ ಕ್ಕೆ ಎದ್ದು ಮನೆಯ ಹೊರಗಡೆ ಬಂದು ನೋಡಲಾಗಿ ನಮ್ಮ ಮನೆಯ ಮುಂದೆ ನಿಲ್ಲಿಸಿದ ನನ್ನ ಮೋಟಾರ ಸೈಕಲ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ನಾನು ಓಮ್ಮೆಲೆ ಗಾಬರಿಯಾಗಿ ಈ ವಿಷಯವನ್ನು ನಾನು ನನ್ನ ಗೆಳೆಯನಾದ ಚನ್ನಪ್ಪ ತಂದೆ ನಾಗಪ್ಪಗೌಡ ಬಿರಾದಾರ ವಯ: 32 ವರ್ಷ ಉ: ಒಕ್ಕಲತನ ಜಾ:ಲಿಂಗಾಯತ ಸಾ; ಮುನಮುಟಗಿ ಈತನಿಗೆ ನನ್ನ ಮೋಟಾರ ಸೈಕಲ ಕಳ್ಳತನ ಮಾಡಿಕೊಂಡು ಹೋದ ವಿಷಯ ತಿಳಿಸಿದೆನು. ಸ್ವಲ್ಪ ಸಮಯದ ನಂತರ ನನ್ನ ಗೆಳೆಯ ಚನ್ನಪ್ಪನು ನಮ್ಮ ಮನೆಯ ಹತ್ತಿರ ಬಂದನು. ಆಗ ನಾನು ಮತ್ತು ನನ್ನ ಗೆಳೆಯ ಚನ್ನಪ್ಪ ಇಬ್ಬರೂ ಕೂಡಿ ನಮ್ಮೂರ ಸತ್ತಮುತ್ತ ಹಾಗೂ ಅಟೋ ಸ್ಟ್ಯಾಂಡನಲ್ಲಿ ಇಬ್ಬರೂ ಹುಡುಕಾಡಲಾಗಿ ನನ್ನ ಮೋಟಾರ ಸೈಕಲ ಸಿಗಲಿಲ್ಲ. ನಂತರ ನಮ್ಮ ಊರಿನ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಹೋಗಿ ಹುಡುಕಾಡಲಾಗಿ ಎಲ್ಲಿ ನನ್ನ ಮೋಟಾರ ಸೈಕಲ ಸಿಗಲಿಲ್ಲ. ಈ ಬಗ್ಗೆ ನಾನು ನಮ್ಮ ಹಿರಿಯರಲ್ಲಿ ವಿಚಾರ ಮಾಡಿಕೊಂಡು ಇಂದು ದಿನಾಂಕ: 21/06/2022 ರಂದು ಠಾಣೆಗೆ ತಡವಾಗಿ ಹಾಜರಾಗಿ ಕಳುವಾದ ಮೋಟರ್ ಸೈಕಲ್ ಬಗ್ಗೆ ದೂರು ಸಲ್ಲಿಸುತಿದ್ದೇನೆ. ಕಾರಣ ದಿನಾಂಕ: 03/06/2022 ರ ರಾತ್ರಿ 09-00 ಪಿಎಂ ದಿಂದ ದಿನಾಂಕ: 04/06/2022 ರ ಬೆಳಗಿನ ಜಾವ 5.00 ಎ.ಎಂ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ಮುನಮುಟಗಿ ಗ್ರಾಮದ ನಮ್ಮ ಮನೆಯ ಮುಂದೆ ನಿಲ್ಲಿಸಿದ ನನ್ನ ಮೋಟಾರ ಸೈಕಲ ನಂ: ಕೆಎ-33-ಕೆ-9795 (ಚೆಸ್ಸಿ ನಂಬರಃ- ಒಃಐಊಂ11ಇಖಅ9ಂ02187 & ಇಂಜಿನ್ ನಂಬರ ಊಂ11ಇಆಃ9ಒ43916) ಮೋಟರ್ ಸೈಕಲ್ ಅಂದಾಜು 15000=00 ರೂಪಾಯಿ ಕಿಮ್ಮತ್ತಿನ ಮೋಟಾರ ಸೈಕಲ್ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಹುಡಕಾಡಿದ್ದು ಸಿಕ್ಕಿರುವುದಿಲ್ಲ. ಕಾರಣ ಕಳುವಾದ ಮೋಟರ ಸೈಕಲ್ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 108/2022 ಕಲಂ: 379 ಐಪಿಸಿ ರಿಚಿತಚಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

ಇತ್ತೀಚಿನ ನವೀಕರಣ​ : 22-06-2022 09:11 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080