ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 22-07-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 85/2022 ಕಲಂ , 454, 457, 380 ಐಪಿಸಿ: ಫಿಯರ್ಾದಿ ಸಾರಾಂಶವೇನೆಂದರೆ, ನಾನು ಯಾದಗಿರಿ ನಗರದ ಚಿರಂಜೀವಿ ನಗರದಲ್ಲಿ ಇರುವ ಐವಾನ್ ತಂದೆ ಶಾಂತರಾಜ ಬೆಲ್ಲಿ ಇವರ ಮನೆಯಲ್ಲಿ 4 ವರ್ಷಗಳಿಂದ ಬಾಡಿಗೆ ಮನೆ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನ ಮನೆಯಲ್ಲಿ ನಾನು, ನನ್ನ ಹೆಂಡತಿ ರೇಖಾ ಹಾಗೂ ಮೂರು ಜನ ಸಣ್ಣ ಮಕ್ಕಳು ಇರುತ್ತೇವೆ. ಹೀಗಿದ್ದು ನಮ್ಮೂರಾದ ಗೌಡಿಗೇರಾ ತಾಂಡಾದಲ್ಲಿ ದೇವರ ಕಾರ್ಯಕ್ರಮ ಇರುವುದ್ದರಿಂದ ದಿನಾಂಕ 18/07/2022 ರಂದು ಸಾಯಂಕಾಲ 05-45 ಗಂಟೆಯ ಸುಮಾರಿಗೆ ನಮ್ಮ ಮನೆ ಬೀಗ ಹಾಕಿಕೊಂಡು ಕುಟುಂಬದೊಂದಿಗೆ ಗೌಡಿಗೇರಾ ತಾಂಡಾಕ್ಕೆ ಹೋದೆವು. ನಂತರ ದಿನಾಂಕ 19/07/2022 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ಹೆಂಡತಿ ರೇಖಾ ಇಬ್ಬರು ಕೂಡಿ ಮನೆಗೆ ಬಂದು ನೋಡಿದಾಗ ನಮ್ಮ ಮನೆಯ ಕೀಲಿ ಮುರಿದು ಕಳ್ಳತನವಾಗಿದ್ದು ಕಂಡು ಬಂತು. ಇಬ್ಬರು ಕೂಡಿ ಮನೆ ಒಳಗೆ ಹೋಗಿ ನೋಡಿದಾಗ ಮನೆಯಲ್ಲಿಯ ಬಟ್ಟೆ ಬರೆ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು, ಅಲಮರಿ ಬಾಗಿಲು ರಾಡ್ ನಿಂದ ಬೆಂಡ್ ಮಾಡಿ, ಮುರಿದಿದ್ದು, ಕಂಡು ಬಂತು. ಪರಿಶೀಲಿಸಿ ನೋಡಿದಾಗ ಅಲಮರಿಯಲ್ಲಿ ಇದ್ದ 1] 10. ಗ್ರಾಂ. ಬಂಗಾರದ ಒಂದು ಲಾಕೇಟ್, ಅ.ಕಿ 45,000/- ರೂ|| ಗಳು, 2] 10. ಗ್ರಾಂ. ಬಂಗಾರದ 2 ಜೊತೆ ಕಿವಿಯಲ್ಲಿಯ ಜುಮಕಿ, ಅ.ಕಿ 45,000/- ರೂ|| ಗಳು, ಮತ್ತು 3] ನಗದು ಹಣ 40,000/- ರೂ|| ಗಳು, ಹೀಗೆ ಒಟ್ಟು 1,30,000/-ರೂ|| ಕಿಮ್ಮತ್ತಿನ ಬಂಗಾರದ ಆಭರಣಗಳು ಹಾಗೂ ನಗದು ಹಣ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಮ್ಮೂರಿನ ನನ್ನ ಮನೆಯಲ್ಲಿ ದೇವರ ಕಾರ್ಯಕ್ರಮ ಇದ್ದ ಕಾರಣ ಸದರಿ ಕಾರ್ಯ ಮುಗಿಸಿಕೊಂಡು ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 85/2022 ಕಲಂ 454, 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 96/2022 ಕಲಂ: 323, 324, 504, 506 ಸಂ 149 ಐಪಿಸಿ: ಇಂದು ದಿನಾಂಕ:21/07/2022 ರಂದು 1:00 ಪಿಎಮ್ ಕ್ಕೆ ಶ್ರೀ ಸಿದರಾಯ ಬಳೂಗರ್ಿ ಪಿ.ಎಸ್.ಐ ಸಿ.ಇ.ಎನ್ ಪೊಲೀಸ್ ಠಾಣೆ ಯಾದಗಿರಿ ರವರು ಬೆಂಗಳೂರಿನಿಂದ ಠಾಣೆಗೆ ಬಂದು ಶ್ರೀಮತಿ ಬಸಮ್ಮ ಗಂಡ ದಿ:ಬಸವಂತ್ರಾಯ ಸಾ:ಹಿರೆವಡಗೇರಾ ಜಿ:ಯಾದಗಿರಿ ರವರು ನೀಡಿದ ಗಣಕೀಕೃತ ದೂರು ಹಾಜರಪಡಿಸಿದ್ದು, ಸದರಿ ದೂರಿನ ಸಾರಾಂಶವೇನಂದರೆ ನಾನು ಅಂದರೆ ಬಸಮ್ಮ ಗಂಡ ದಿ:ಬಸವಂತ್ರಾಯ ಹಿರೆವಡಗೇರಾ ಜಿ:ಯಾದಗಿರಿ ಆದ ನನಗೆ ಒಬ್ಬಳೆ ಮಗಳು ಶಶಿಕಲಾ ಗಂಡ ಮಾಂತಗೌಡ ಮತ್ತು ಮಾಂತಗೌಡ ಎಂಬುವ ಅಳಿಯನಿದ್ದಾನೆ. ಒಬ್ಬಳೆ ಮಗಳು ಇದ್ದಾಳೆ ಎಂದು ನನ್ನ ಆಸ್ತಿಯನ್ನು ಅವಳ ಹೆಸರಿಗೆ ವಗರ್ಾಯಿಸಲು ಹಾಗೂ ಚನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಪ್ರೇರೆಪಿಸಿ, ನನ್ನ ಅಳಿಯನು ನನ್ನನ್ನು ನಂಬಿಸಿ, ಆಸ್ತಿಯನ್ನು ವಗರ್ಾಯಿಸಲು ಹೇಳಿದ್ದರಿಂದ ಅಳಿಯನ ಮಾತು ಕೇಳಿ ಆಸ್ತಿಯನ್ನು ಮಗಳ ಹೆಸರಿಗೆ ವಗರ್ಾಯಿಸಿದೆ. ತದನಂತರ ಸ್ವಲ್ಪ ದಿನಗಳ ಕಾಲ ಚನ್ನಾಗಿ ನೋಡಿಕೊಂಡು 4 ವರ್ಷಗಳ ಹಿಂದೆ ಅಂದ್ರೆ ದಿನಾಂಕ:12/05/2018 ರಂದು ಅಂದ್ರೆ ಚುನಾವಣೆ ನಡೆದ ದಿನಗಳಿಂದ ಚಿತ್ರ ಹಿಂಸೆ ಕೊಡಲು ಪ್ರಾರಂಭಿಸಿದರು. ಕಾರಣ ಅವನು ತುಂಬಾ ದುಶ್ಚಟಗಳಿಂದ ಕೂಡಿದನು. ಸರಾಯಿ ಕುಡಿಯುವುದು ಗಾಂಜಾ ಸೇವನೆ ಮಾಡುವುದು ನಂತರ ನನಗೆ ಬಂದು ಹೊಡೆಯುವುದು, ತಲೆಯನ್ನು ಗೋಡೆಗೆ ಜಜ್ಜುವುದು, ಕುತ್ತಿಗೆಗೆ ಒತ್ತುವುದು ಮಾಡಲು ಪ್ರಾರಂಭಿಸಿದನು. ಈ ಚಿತ್ರಹಿಂಸೆಯಿಂದ ಅನೇಕ ಬಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಶರಣಾದೆನು. ಕೊನೆಗೆ ನನ್ನ ಅಳಿಯನಾದ ಮಾಂತಗೌಡನು ನನ್ನನ್ನು ಮುಗಿಸಿಬಿಡುವುದಾಗಿ ಹೇಳಿ ನನಗೆ ಮನಬಂದಂತೆ ಥಳಿಸಿದನು. ಆ ಸಮಯದಲ್ಲಿ ನನ್ನ ತಲೆಗೆ ಪೆಟ್ಟಾಯಿತು ಹಾಗೂ ನನ್ನ ಕಣ್ಣಿಗೆ ಬಲವಾಗಿ ಪೆಟ್ಟಾಗಿ ಕಣ್ಣು ಕಾಣದಂತಾಗಿ, ಕಣ್ಣಿನ ಶಸ್ತ್ರ ಚಿಕಿತ್ಸೆಯಿಂದ ಸ್ವಲ್ಪ ಗುಣಮುಖಳಾಗಿದ್ದೇನೆ. ಕಾರಣ ಆಸ್ತಿ ಕಬಳಿಸುವ ದುರಾಸೆ ದುಶ್ಚಟಗಳಿಂದ ಕೂಡಿದ ನನ್ನ ಅಳಿಯನು. ತನ್ನ ದುಶ್ಚಟಕ್ಕಾಗಿ ಸಾಲ ಮಾಡಿಕೊಂಡು 3 ಎಕರೆ ಹೊಲ ಮಾರಿಬಿಟ್ಟನು. ಅದಕ್ಕೆ ಪ್ರತಿಕ್ರಿಯಿಸಿದ ನಾನು ತುಂಬಾ ಕಷ್ಟದಿಂದ ಜೀವನವಿಡಿ ದುಡಿದು ಗಳಿಸಿದ ಆಸ್ತಿಯನ್ನು ಈ ರೀತಿ ದುಷ್ಚಟಕ್ಕಾಗಿ ಮಾರುವುದು ಸರಿಯಲ್ಲ. ಇದು ನನ್ನ ಮಗಳ ಹಾಗೂ ಮೊಮ್ಮಕ್ಕಳ ಸ್ವತ್ತು ಎಂದು ವಿರೋಧ ವ್ಯಕ್ತಪಡಿಸಿದೆ. ಆದುದರಿಂದ ನನ್ನ ಅಳಿಯನಾದ ಮಾಂತಗೌಡ ಹಾಗೂ ಮೊಮ್ಮಕ್ಕಳು ಹಾಗೂ ಅವರ ಹೆಂಡತಿಯರಾದ (ಹಿರೆ ಹೆಂಡತಿ ಶಿಲ್ಲವ್ವ, ಶೀಲ್ಲವ್ವನ ಅಕ್ಕ ಭಾರತಿ ಹಾಗೂ ಇನ್ನೊಬ್ಬ ಮೊಮ್ಮಗ ನಾನೆಗೌಡ ಮತ್ತು ಇವರ ಹೆಂಡತಿ ಲಕ್ಷ್ಕೀ) ಇವರ ಜೊತೆಗೆ ಕೂಡಿಕೊಂಡು ಹೊಡೆಯುವುದು ಬಡೆಯುವುದು ಮಾಡಿ ನನ್ನನ್ನು ಹುಚ್ಚಿ ಎಂದು ಸಾಬಿತು ಮಾಡಲು ಪ್ರಯತ್ನಿಸಿದ್ದಾರೆ. ನಾನು ಈ ಚಿತ್ರಹಿಂಸೆಯಿಂದ ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಅಜರ್ಿಯನ್ನು ನೀಡಿದ ಕೆಲ ಕಾಲ ಸುಮ್ಮನೆ ಇದ್ದು, ನಂತರ ನಶೆಯಲ್ಲಿ ಚಿತ್ರಹಿಂಸೆ ಕೊಡುವುದು ಪ್ರಾರಂಭಿಸಿದರು. ಈ ರೀತಿ ನಾನು ಜೀವ ಸಹಿತ ಉಳಿಯುವುದಿಲ್ಲವೆಂದು ಮನಗಂಡ ನಾನು ಬೇಸತ್ತು ನಾನು ಪೊಲೀಸ್ ಅಧಿಕಾರಿಗೆ ಮತ್ತೊಮ್ಮೆ ಅಜರ್ಿಯ ಮೂಲಕ ಭೇಟಿಯಾಗಿದ್ದೆ. ಆಗ ನನ್ನನ್ನು ರಾತ್ರಿ 9-30 ಗಂಟೆ ವರೆಗೆ ಕೂಡಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಈ ಮೇಲೆ ಹೆಸರಿಸಿದ ಎಲ್ಲರನ್ನು ಕರೆಸಿದರು. ಆ ಸಮಯದಲ್ಲಿ ನನ್ನನ್ನು ಕಛೇರಿ ಹೊರಗಡೆ ಕೂಡಿಸಿ, ಅವರ ಜೊತೆ ಸಮಾಲೋಚನೆ ಮಾಡಿದ ನಂತರ ಪೊಲೀಸರೆ ನನ್ನನ್ನು ಅಲ್ಲಿಂದ ಓಡಿಸಿಬಿಟ್ಟರು. ಮನೆಗೆ ತೆರಳಿದ ನನ್ನನ್ನು ಹೊಲಕ್ಕೆ ಎಳೆದುಕೊಂಡು ಹೋಗಿ ಮನಬಂದಂತೆ ಹೊಡೆದು ಬಡೆದರು ಮತ್ತು ನನಗೆ ಇನ್ನೊಂದು ಸಲ ಪೊಲೀಸರ ಬಳಿಗೆ ಹೊದರೆ ಜೀವ ಉಳಿಸುವುದಿಲ್ಲವೆಂದು ಬೆದರಿಕೆ ಹಾಕಿದರು. ಇವರ ಹೊಡೆಬಡೆಯಿಂದ ನನ್ನ ಕಿವಿಗೆ ಪೆಟ್ಟಾಗಿದ್ದರಿಂದ ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಹಾಗೂ ಕಣ್ಣು ಸಹ ಸರಿಯಾಗಿ ಕೇಳಿಸುವುದಿಲ್ಲ. ಮತ್ತೆ ನಾನು ಪೊಲೀಸರ ಬಳಿ ಹೊದರೆ ಪೊಲೀಸರೆ ನನ್ನನ್ನು ಅವರಿಗೆ ಒಪ್ಪಿಸುತ್ತಾರೆ. ಇದರಿಂದ ನನ್ನ ಜೀವನ ಸಂಕಷ್ಟದಲ್ಲಿ ಬಿಳ ಬಹುದು ಎನ್ನುವ ಭಯವು ಕಾಡುತ್ತಿದೆ. ನಾನು ಸತ್ತೆ ಆಸ್ತಿಯನ್ನು ಲಪಟಾಯಿಸಿ, ಮಜಾ ಮಾಡುವ ದುರುದ್ದೇಶ ಇರುವುದರ ಫಲವೇ ಅವನು ನನ್ನನ್ನು ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾನೆ. ಅದಕ್ಕಾಗಿ ನಾನು ಜೀವ ಉಳಿಸಿಕೊಳ್ಳಲು ತಲೆಮರೆಸಿಕೊಂಡು ಉಪವಾಸ ವನವಾಸ ಗುಡಿ-ಗುಂಡಾರಗಳಲ್ಲಿ ಕಾಲ ಕಳೆಯುತ್ತಾ ಅಲೆದಾಡುತ್ತಿದ್ದೆನೆ. ದಯವಿಟ್ಟು ನನ್ನ ಆಸ್ತಿ ಹಾಗೂ ಜೀವನ ರಕ್ಷಣೆಗಾಗಿ ಮತ್ತು ನನ್ನ ಜೀವನವನ್ನು ನರಕ ಸದಸೃಗೊಳಿಸಿದ ನನ್ನ ಅಳಿಯ ಮಾಂತಗೌಡ ವಿರುದ್ಧ ಕಾನೂನು ಪ್ರಕಾರ ಸೂಕ್ತವಾದ ಕಠಿಣ ಕ್ರಮ ಕೈಗೊಳ್ಳುವಂತೆ ಅಂಗಲಾಚಿ ಬೇಡಿಕೊಳ್ಳುತ್ತೇನೆ. ನನ್ನ ರಕ್ಷಣೆಗೆ ಇದೆ ಕೊನೆ ಪ್ರಯತ್ನವಾಗಿದೆ. ಏಕೆಂದರೆ ಈಗ ನನಗೆ 70 ವರ್ಷದ ಮುದುಕಿಯಾಗಿದ್ದೇನೆ. ಇಲ್ಲಿಯವರೆಗೆ ಹೇಗೋ ಜೀವ ಉಳಿಸಿಕೊಂಡು ಹೋರಾಟ ಮಾಡುತ್ತಾ ಬಂದಿದೇನೆ. ಈಗ ನನ್ನ ಕೈಯಿಂದ ಆಗುವುದಿಲ್ಲ. ಈ ವೃದ್ದಳ ಕಷ್ಟಕ್ಕೆ ನನ್ನ ಜೀವನ ರಕ್ಷಣೆಗೆ ನಿಮ್ಮ ಹತ್ತಿರ ಅಂಗಲಾಚಿ ಬೇಡಿಕೊಳ್ಳುತ್ತೇನೆ. ದಯವಿಟ್ಟು ನನಗೆ ನ್ಯಾಯ ದೊರಕಿಸಿಕೊಡಿ. ಇಲ್ಲದಿದ್ದಲ್ಲಿ ನಾನು ಎಲ್ಲಿಯಾದ್ರೂ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಆಸ್ತಿಪಾಸ್ತಿ ಇದ್ದು, ಇನ್ನೊಬ್ಬರ ದುಷ್ಚಟದಿಂದಾಗಿ ಬೀದಿಯ ಹೆಣವಾಗುವುದರಲ್ಲಿ ಸಂಶಯವೇ ಇಲ್ಲ. ನನ್ನ ಕಷ್ಟಕ್ಕೆ ಕಿವಿ ಕೊಟ್ಟು ನನಗೆ ನ್ಯಾಯ ದೊರಕಿಸುವಿರೆಂದು ಹಾಗೂ ತಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳವಿರೆಂದು ಕಳಕಳಿಯ ಮನವಿ ಮಾಡಿಕೊಳ್ಳುತ್ತೇನೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 96/2022 ಕಲಂ: 323, 324, 504, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 56/2022 ಕಲಂ:87 ಕೆ ಪಿ ಆಕ್ಟ: ಇಂದು ದಿನಾಂಕ: 21.07.2022 ರಂದು ಮಧ್ಯಾಹ್ನ 1:30 ಪಿಎಮ್ ಗಂಟೆಗೆೆ ಎಎಸ್ಐ ಮಡಿವಾಳಪ್ಪ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರವನ್ನು ನೀಡಿದ್ದು ಎಎಸ್ಐ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶವೆನೆಂದರೆ ಇಂದು ದಿನಾಂಕ:21.07.2022 ರಂದು ಮಧ್ಯಾಹ್ನ 12.30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ನನಗೆ ಸೊನ್ನಾಪೂರ ತಾಂಡಾದ ಹತ್ತಿರದ ಹಿರಪ್ಪ ತಂದೆ ರಾಮಜೀ ನಾಯಕ ರವರ ಹೊಲದ ಹತ್ತಿರ ಕಾಲುವೆ ಪಕ್ಕದಲ್ಲಿ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಅಂದರ್ ಬಾಹರ್ ಎಂಬುವ ಇಸ್ಪೇಟ್ ಜೂಜಾಟ ಆಡುತ್ತಿದ್ದು, ಅವರವರಲ್ಲಿ ಹಣವನ್ನು ಪಣಕ್ಕೆ ಕಟ್ಟಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತ ಹೆಚ್ಸಿ-120 ರವರಿಂದ ಮಾಹಿತಿ ಬಂದಿದ್ದು. ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೆಯ ಅಪರಾಧವಾಗುತ್ತಿದ್ದುದರಿಂದ ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಧೀಶರು ಜೆಎಮ್ಎಫ್ಸಿ ನ್ಯಾಯಾಲಯ ಸುರಪೂರ ರವರಿಗೆ ಯಾದಿ ಬರೆದು ಈ-ಮೇಲ್ ಮುಖಾಂತರ ಮಧ್ಯಾಹ್ನ 12:45 ಗಂಟೆಗೆ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಧೀಶರು ಆರೋಪಿತರ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು 1:25 ಪಿಎಮ್ ಗಂಟೆಗೆ ಅನುಮತಿ ನೀಡಿದ ಪ್ರತಿಯು ಈ-ಮೇಲ್ ಮುಖಾಂತರ ವಸೂಲಾಗಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯವು ನೀಡಿದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಡಲಾಗಿದೆ. ಅಂತ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:56/2022 ಕಲಂ:87 ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ಆರೋಪಿತರ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
1) ಅಯ್ಯಪ್ಪ ತಂದೆ ನಿಂಗಪ್ಪ ಸಾಲವಾಡಗಿ ವ:60 ವರ್ಷ ಉ:ಒಕ್ಕಲುತನ ಜಾ:ಹಿಂದೂ ಕುರಬರ ಸಾ:ಕಾಮನಟಗಿ ತಾ:ಹುಣಸಗಿ
2) ಯಂಕಪ್ಪ ತಂದೆ ಗುಡದಪ್ಪ ಚಿಂಚೋಡಿ ವ:55 ವರ್ಷ ಉ:ಒಕ್ಕಲುತನ ಜಾ:ಹಿಂದೂ ಬೇಡರ ಸಾ:ಚಿಂಚೋಡೇರ ದೊಡ್ಡಿ ಕಕ್ಕೇರಾ ತಾ:ಸುರಪುರ
3) ಮಲ್ಲಣ್ಣ ತಂದೆ ಬಸವರಾಜ ಮೇಟಿ ವ:35 ವರ್ಷ ಉ:ಕೂಲಿ ಕೆಲಸ ಜಾ:ಹಿಂದೂ ಕುರುಬರ ಸಾ:ಬಲಶೆಟ್ಟಿಹಾಳ ತಾ:ಹುಣಸಗಿ
4) ಬಸವರಾಜ ತಂದೆ ಬೀಮಣ್ಣ ಕಟ್ಟಿಮನಿ ವ:33 ವರ್ಷ ಉ:ಒಕ್ಕಲುತನ ಜಾ:ಹಿಂದೂ ಉಪ್ಪಾರ ಸಾ:ಹುಣಸಗಿ

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 27/2022, ಕಲಂ: 323, 324, 307, 504, 506 ಸಂಗಡ 34 ಐ.ಪಿ.ಸಿ : ಇಂದು ದಿನಾಂಕ: 27-07-2022 ರಂದು 07-45 ಪಿ.ಎಮ್.ಕ್ಕೆ ಜಿಲ್ಲಾ ಸರಕಾರಿ ಆಸ್ಪತೆ ಯಾದಗಿರಿಯಿಮದ ಎಮ್ ಎಲ್ ಸಿ ಇದೆ ಅಂತಾ ತಿಳಿಸಿದ ಮೇರೆಗೆ ನಾನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೆಟಿ ನೀಡಿ ಅಲ್ಲಿ ಉಪಚಾರ ಪಡೆಯುತಿದ್ದ ಗಾಯಾಳುವಿಗೆ ಘಟನೆ ಬಗ್ಗೆ ವಿಚಾರಿಸಿದ್ದು ಆತನು ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ನಮ್ಮ ಹೊಲ ಮತ್ತು ನಮ್ಮ ಅಣ್ಣತಮ್ಮರಾದ ಮಹಾದೇವಪ್ಪ ತಂದೆ ಭೀಮಶಪ್ಪ ಇವರ ಹೊಲಗಳು ಒಂದಕೊಂದು ಹೊಂದಿಕೊಂಡಿದ್ದು ಮಳೆಗಾಲದಲ್ಲಿ ಮಳೆ ನೀರು ಹೋಗುವ ವಿಷಯದಲ್ಲಿ ಈ ಮೊದಲು ಕೂಡ ಅವರಿಗೆ ನಮಗೆ ಜಗಳವಾಗಿದ್ದು ಇರುತ್ತದೆ, ಈ ಮೊದಲಿನಿಂದಲು ಕೂಡ ಮಹಾದೇವಪ್ಪ ಮತ್ತು ಆತನ ಮಗ ಹೊಲದಲ್ಲಿ ನೀರು ಹೋಗುವ ವಿಷಯದಲ್ಲಿ ಆಗಾಗ ಜಗಳ ಮಾಡುತ್ತ ನಮ್ಮ ಮೇಲೆ ಸಿಟ್ಟು ಇಟ್ಟುಕೊಂಡಿದ್ದರು. ಈಗ 4-5 ದಿನಗಳಿಂದ ಮಳೆ ಬಂದಿದ್ದು ಮಳೆಯ ನೀರು ಮಹಾದೇವಪ್ಪನ ಹೊಲದಿಂದ ನಮ್ಮ ಹೊಲದಲ್ಲಿ ಡೊಣದ ಮೇಲೆ ಈ ಹಿಂದಿನಿಂದಲು ಬರುತಿದ್ದವು, ಈಗ ಮಹಾದೇವಪ್ಪ ಮತ್ತು ಆತನು ಮಗ ಅವರ ಹೊಲದಲ್ಲಿ ತಗ್ಗಿಗೆ ನೀರು ನಿಂತಿದ್ದರಿಂದ ಅವರು ನಮ್ಮ ಮತ್ತು ಅವರ ಹೊಲದ ನಡುವಿನ ಡೋಣ ಕಡಿದು ನಮ್ಮ ಹೊಲದಲ್ಲಿ ನೀರು ಬರುವಂತೆ ಮಾಡಿದ್ದರು ಇದರಿಂದ ನಮ್ಮ ಹೊಲದಲ್ಲಿ ನೀರು ಬಂದು ನಿಂತಿದ್ದವು ಅದಕ್ಕೆ ನಾನು ನೀರು ಬಂದು ನಮ್ಮ ಹೊಲ ಹಾಳು ಆಗಬಾರದು ಅಂತಾ ಡೋಣದ ಮೇಲಿಂದ ನೀರು ಬರಲಿ ಅಂತಾ ಅವರು ಡೊಣ ಕಡಿದು ತಗ್ಗು ಮಾಡಿರುವದನ್ನು ನಾನು ಮುಚ್ಚಿ ಕಲ್ಲು ಇಟ್ಟಿರುತ್ತೇನೆ. ಇಂದು ದಿನಾಂಕ: 21-07-2022 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಹೊಲ ನೋಡಲು ಹೋಗಿದ್ದು ನಾನು ಸಾಯಂಕಾಲ 06-00 ಗಂಟೆ ಸುಮಾರಿಗೆ ನಮ್ಮ ಹೊಲದಲ್ಲಿರುವಾಗ ನಮ್ಮ ಹೊಲದ ಪಕ್ಕದ ನಮ್ಮ ಅಣ್ಣತಮ್ಮರಾದ 1) ಮಹಾದೇವಪ್ಪ ತಂದೆ ಭೀಮಶಪ್ಪ ತಳವಡಿ 2) ಸಾಬಣ್ಣ ತಂದೆ ಮಹಾದೇವಪ್ಪ ತಳವಡಿ ಇವರಿಬ್ಬರು ಕೂಡಿಕೊಂಡು ಬಂದು ನಮ್ಮ ಹೊಲದ ಡೊಣದ ಹತ್ತಿರ ಬಂದು ಅವರಲ್ಲಿ ಮಹಾದೇವಪ್ಪ ಈತನು ಲೇ ಸೂಳೆ ಮಗನೆ ಡೊಣಕ್ಕೆ ಯಾಕೆ ಕಲ್ಲು ಇಟ್ಟು ನೀರು ಹೋಗುವದನ್ನು ಮುಚ್ಚಿದ್ದಿ ಲೇ ಕಳ್ಳ ಸೂಳೆ ಮಗನೆ ಯಾವಾಗ ನೋಡಿದರು ಇದೆ ಮಾಡುತಿ ಸೂಳೆ ಮಗನೆ ಅಂತಾ ಬೈದಾಗ ಆಗ ನಾನು ಅವರಿಗೆ ಪ್ರತಿ ವರ್ಷ ಮಳೆ ನೀರು ಡೊಣದ ಮೇಲೆ ಹೋಗುತ್ತವೆ ಹಾಗೆ ಹೋಗಲಿ ನೀವು ಯಾಕೆ ಈಗ ಡೋಣ ಕಡಿದು ನಮ್ಮ ಹೊಲದಲ್ಲಿ ನೀರು ಬಿಟ್ಟಿದ್ದರಿ ಅಂತಾ ಅಂದಾಗ ಆಗ ಸಾಬಣ್ಣ ಈವನು ನನಗೆ ಗಟ್ಟಿಯಾಗಿ ಹಿಡದುಕೊಂಡು ಕಲ್ಲಿನಿಂದ ಬಲಗಡೆ ಬೆನ್ನಿಗೆ ಮತ್ತು ಪಕ್ಕಿಗೆ ಹೊಡೆದು ಗುಪ್ತಗಾಯ ಮಾಡಿದನು, ಆಗ ನಾನು ಯಾಕೆ ಹೊಡೆಯುತ್ತಿರಿ ಅಂತಾ ತಪ್ಪಿಸಿಕೊಂಡಾಗ ಮಹಾದೇವಪ್ಪ ಇತನು ಲೇ ಸುಳೆ ಮಗನೆ ನೀನು ಯಾವಾಗ ನೋಡಿದರು ಇದೆ ಕಥೆ ಮಾಡುತಿ ಇವತ್ತು ನಿನಗೆ ಜೀವ ಸಹಿತ ಬಿಡುವದಿಲ್ಲ ಮಗನೆ ಇವತ್ತು ನಮ್ಮ ಕೈಯಾಗ ಸಿಕ್ಕಿದಿ ಅಂತಾ ನನಗೆ ಕೊಲೆ ಮಾಡಬೇಕೆಂಬ ಉದ್ದೇಶದಿಂದ ತನ್ನ ಕೈಯಲ್ಲಿರುವ ಕೊಡಲಿಯಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿ ಅದೆ ಕೊಡಲಿಯಿಂದ ಮತ್ತೆ ನನಗೆ ತಲೆಗೆ ಹೊಡೆದಾಗ ಆ ಎಟಿನಿಂದ ನಾನು ತಪ್ಪಿಸಿಕೊಂಡಿರುತ್ತೇನೆ ಆ ಎಟು ತಲೆಗೆ ಬಿದ್ದರೆ ನನ್ನ ಪ್ರಾಣ ಹೋಗುತ್ತಿತ್ತು ಆಗ ಅವರು ಖಲಾಸ ಮಾಡುತ್ತೇವೆ ಲೇ ಅಂತಾ ಒದರಾಡುತ್ತಿರುವಾಗ ಅವರಿಂದ ನಾನು ತಪ್ಪಿಸಿಕೊಂಡು ಓಡಿ ನಮ್ಮ ಹೊಲದ ಕಡೆಗೆ ಬಂದು ನನ್ನ ತಂದೆಗೆ ಮತ್ತು ನಮ್ಮ ಮಾವ ತಿಪ್ಪಣ್ಣನಿಗೆ ಪೊನ್ ಮಾಡಿ ವಿಷಯ ತಿಳಿಸಿರುತ್ತೇನೆ ಆಗ ನಮ್ಮ ಮಾವ ಮೋಟರ ಸೈಕಲ್ ತೆಗೆದುಕೊಂಡು ಬಂದನು ಆಗ ನಾನು ಆತನ ಮೋಟರ ಸೈಕಲ್ ಮೇಲೆ ಊರಿಗೆ ಬಂದಾಗ ನಮ್ಮ ತಂದೆ ಮಲ್ಲಿಕಾಜರ್ುನ ನನ್ನ ತಾಯಿ ಕುಮಲಮ್ಮ ಇಬ್ಬರು ಆಂಜನೇಯ ಗುಡಿಯ ಹತ್ತಿರ ಬಂದರು ಆಗ ನಾನು ನಮ್ಮ ಮಾವ ತಿಪ್ಪಣ್ಣ ಊರಲ್ಲಿ ಪ್ರಥಮ ಚಿಕಿತ್ಸೇ ಮಾಡಿಸಿಕೊಂಡು ನಂತರ ನಮ್ಮ ತಂದೆ ತಾಯಿ ಮತ್ತು ನಮ್ಮ ಮಾವ ಎಲ್ಲರು ಸೇರಿ ನನಗೆ ವೈದ್ಯಕೀಯ ಉಪಚಾರ ಕುರಿತು ನಮ್ಮೂರಿನ ಮಹಿಬೂಬಸಾಬ ತಂದೆ ಹುಸೇನಸಾಬ ಕಟಗರ ಇವರ ಆಟೋದಲ್ಲಿ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದ್ದು ಇರುತ್ತದೆ.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 127/2022 ಕಲಂ: 78 (3) ಕೆಪಿ ಆಕ್ಟ್: ಇಂದು ದಿನಾಂಕ: 21/07/2022 ರಂದು 08-15 ಪಿ.ಎಮ್ ಸರಕಾರಿ ತಪರ್ೆ ಪಿರ್ಯಾದಿ ಶ್ರೀ ಶಾಮಸುಂದರ ಪಿ.ಎಸ್.ಐ(ತನಿಖಾ-1) ಶಹಾಪೂರ ಪೊಲೀಸ ಠಾಣೆ ರವರು ಠಾಣೆಗೆ ಬಂದು ವರದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ದಿನಾಂಕ:21/07/2022 ರಂದು 05.00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಹತ್ತಿಗುಡುರ ಗ್ರಾಮದ ಅಂಬೆಡ್ಕರ ಚೌಕ ಹತ್ತಿರ ರಸ್ತೆ ಮೇಲೆ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಶ್ರೀ ಬಾಬು ಹೆಚ್.ಸಿ-162, ಶ್ರೀ ನಾರಾಯಣ ಹೆಚ್.ಸಿ-49 ಶ್ರೀ ಶಂಕರಲಿಂಗ ಹೆಚ್.ಸಿ-131, ರವರನ್ನು ಕರೆದು ಸದರಿ ವಿಷಯವನ್ನು ತಿಳಿಸಿ, ಬಾಬು ಹೆಚ್.ಸಿ-162 ರವರಿಗೆ ದಾಳಿಗಾಗಿ ಇಬ್ಬರ ಪಂಚರನ್ನು ಕರೆಯಿಸಲು ತಿಳಿಸಿದ್ದರಿಂದ ಪಂಚರಾದ 1)ಶ್ರೀ ಅಂಬರೀಶ ತಂದೆ ಸಂಗಣ್ಣ ಸಜ್ಜನ ವಯಾ: 40 ವರ್ಷ ಜಾತಿ: ಗಾಣಿಗ ಉ: ಗುತ್ತಿಗೆದಾರ ಸಾ: ಬಸವೇಶ್ವರ ನಗರ ಶಹಾಪೂರ 2) ಶ್ರೀ ಮಲ್ಲಯ್ಯ ತಂದೆ ಶಿವಪ್ಪ ಹೊಸಮನಿ ವಯಾ: 62 ವರ್ಷ ಜಾತಿ: ಪ.ಜಾತಿ(ಹೊಲೆಯ) ಉ: ಸಮಾಜ ಸೇವೆ ಸಾ: ಹತ್ತಿಗುಡುರ ತಾ: ಶಹಾಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ನಾನು, ಪಂಚರು ಮತ್ತು ಸಿಬ್ಬಂದಿವರೊಂದಿಗೆ ಠಾಣೆಯಿಂದ 05.30 ಪಿ.ಎಮ್.ಕ್ಕೆ ಒಂದು ಖಾಸಗಿ ವಾಹನದಲ್ಲಿ ಹೊರಟು 06.00 ಪಿ.ಎಮ್.ಕ್ಕೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಜನರನ್ನು ಕೂಗಿ ಕರೆಯುತ್ತಾ ಬರ್ರಿ ಬರ್ರಿ ಇದು ದೈವಲೀಲೆಯ ಆಟ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕೂಗಿ ಕರೆಯುತ್ತಾ ನಂಬರ ಬರೆದುಕೊಂಡು ಚೀಟಿ ಬರೆದು ಕೊಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ಕೂಡಿ 06.05 ಪಿ.ಎಮ್.ಕ್ಕೆ ದಾಳಿ ಮಾಡಿದ್ದು ಮಟಕಾ ನಂಬರ ಬರೆಯಿಸಲು ಬಂದಿದ್ದ ಜನರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಲಕ್ಷ್ಮಣ ತಂದೆ ದಂಡಪ್ಪ ನಾಟೆಕಾರ ವಯಾ: 41 ವರ್ಷ ಜಾ: ಪ.ಜಾತಿ(ಹೊಲೆಯ) ಉ: ಮಟಕ ಬರೆದುಕೊಳ್ಳುವದು ಸಾ: ಹತ್ತಿಗುಡುರ ತಾ: ಶಹಾಪೂರ ಅಂತಾ ತಿಳಿಸಿದ್ದು ಸದರಿಯವರಿಗೆ ಪರಿಶೀಲನೆ ಮಾಡಲಾಗಿ ಆತನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ 1) 1850 ರೂ. ನಗದು ಹಣ 2) ಒಂದು ಮಟಕಾ ನಂಬರ ಬರೆದ ಚೀಟಿ ಅ.ಕಿ.00=00 ಮತ್ತು 3) ಒಂದು ಬಾಲ್ ಪೆನ್ ಅ.ಕಿ. 00=00 ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ನಾನು ಜಪ್ತಿ ಪಂಚನಾಮೆಯನ್ನು 06.05 ಪಿ.ಎಮ್ ದಿಂದ 07:05 ಪಿ.ಎಮ್.ದ ವರೆಗೆ ಸ್ಥಳದಲ್ಲೆ ಕುಳಿತು ಖಾಸಗಿ ಜೀಪಿನ ಲೈಟಿನ ಬೆಳಕಿನಲ್ಲಿ ಪಂಚನಾಮೆಯನ್ನು ಬರೆದು ಮುಗಿಸಲಾಯಿತು. ಒಬ್ಬ ಆರೋಪಿ ಮತ್ತು ಮುದ್ದೇಮಾಲನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಮರಳಿ ಠಾಣೆಗೆ ಬಂದು ವರದಿ ಸಲ್ಲಿಸಿದ ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 127/2022 ಕಲಂ: 78(3) ಕೆ.ಪಿ ಯಾಕ್ಟ ಅಡಿಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 128/2022 ಕಲಂ 78 (3) ಕೆ.ಪಿ ಆಕ್ಟ್ : ಇಂದು ದಿನಾಂಕ 21/07/2022 ರಂದು, 21-300 ಗಂಟೆಗೆ ಸರಕಾರಿ ತಫರ್ೇ ಫಿಯರ್ಾದಿ ಶ್ರೀ ಬಾಬುರಾವ ಪಿ.ಎಸ್.ಐ.(ಕಾ.ಸು-2) ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು ಸದರಿ ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ 21/07/2022 ರಂದು, ಮಧ್ಯಾಹ್ನ 16-30 ಗಂಟೆಗೆ ಶಹಾಪೂರ ಪೊಲೀಸ್ ಠಾಣೆಯಲ್ಲಿದ್ದಾಗ, ಶಹಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಎಂ.ಕೊಳ್ಳೂರ ಗ್ರಾಮದ ಹುನುಮಾನ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತಿದ್ದಾನೆ ಅಂತಾ ಖಚಿತ ಮಾಹಿತಿ ಬಂದಿರುತ್ತದೆ. ಆಗ ನಾನು ಪೊಲೀಸ್ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಶರಣಪ್ಪ ಹೆಚ್.ಸಿ.164. ಬಾಗಣ್ಣ ಪಿ.ಸಿ.194. ಭೀಮನಗೌಡ.ಪಿ.ಸಿ.402. ರವಿಕುಮಾರ ಪಿ.ಸಿ.376. ರವರಿಗೆ ಮೇಲ್ಕಂಡ ಬಾತ್ಮಿಯ ವಿಷಯ ತಿಳಿಸಿ, ದಾಳಿ ಕುರಿತು ಹೋಗುವ ಸಂಬಂಧ ಠಾಣೆಯಲ್ಲಿ ಹಾಜರಿರಲು ತಿಳಿಸಿ, 16-40 ಗಂಟೆಗೆ ಭೀಮನಗೌಡ ಪಿ.ಸಿ.402. ರವರಿಗೆ ಇಬ್ಬರೂ ಪಂಚರನ್ನು ಕರೆದುಕೊಂಡು ಬರಲು ಕಳುಹಿಸಿದ್ದು, ಸದರಿಯವರು ನಗರದಲ್ಲಿ ಹೋಗಿ ಇಬ್ಬರೂ ವ್ಯಕ್ತಿಗಳನ್ನು ಕರೆದುಕೊಂಡು ಬಂದು ನನ್ನ ಮುಂದೆ 16-50 ಗಂಟೆಗೆ ಹಾಜರ ಪಡಿಸಿದ್ದು, ನಾನು ಸದರಿ ಇಬ್ಬರೂ ವ್ಯಕ್ತಿಗಳ ಹೆಸರು ವಿಳಾಸ ವಿಚಾರಿಸಲು 1) ಶ್ರೀ ಮಲ್ಲಿಕಾಜರ್ುನ ತಂದೆ ರಾಮಣ್ಣ ಬೈರಿಮಡ್ಡಿ ವ|| 34 ಜಾ|| ಬೇಡರ ಉ|| ಒಕ್ಕಲುತನ ಸಾ|| ಎಂ.ಕೊಳ್ಳೂರ 2) ಶ್ರೀ ಮಲ್ಲಿನಾಥ ತಂದೆ ವೆಂಕೊಬರಾವ ಸುರಪೂರ ವ|| 50 ಜಾ|| ಬೇಡರ ಉ|| ಒಕ್ಕಲುತನ ಸಾ|| ಎಂ. ಕೊಳ್ಳೂರ. ತಾಃ ಶಹಾಪೂರ ಜಿಃ ಯಾದಗಿರಿ. ಅಂತಾ ಹೇಳಿದ್ದು, ಸದರಿಯವರಿಗೆ ಮೇಲ್ಕಂಡ ಬಾತ್ಮಿಯ ವಿಷಯ ತಿಳಿಸಿ ದಾಳಿ ಕುರಿತು ಹೋಗುವುದಿದೆ ತಾವು ನಮ್ಮ ಜೊತೆಯಲ್ಲಿ ಬಂದು ಜಪ್ತಿ ಪಂಚನಾಮೆಯ ಪಂಚರಾಗಿ ಸಹಕರಿಸಬೇಕು ಅಂತಾ ಕೇಳಿಕೊಂಡ ಮೇರೆಗೆ ಇಬ್ಬರೂ ವ್ಯಕ್ತಿಗಳು ಪಂಚರಾಗಿ ನಮ್ಮ ಜೊತೆಯಲ್ಲಿ ಬರಲು ಒಪ್ಪಿಕೊಂಡರು. ಮೇಲಾಧೀಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ಕುರಿತು ನಾನು ಮತ್ತು ಮೇಲ್ಕಂಡ ಪೊಲೀಸ್ ಸಿಬ್ಬಂದಿಯವರು ಹಾಗೂ ಪಂಚರು ಒಂದು ಖಾಸಗಿ ಜೀಪ ನೇದ್ದರಲ್ಲಿ ಠಾಣೆಯಿಂದ 17-00 ಗಂಟೆಗೆ ಹೊರಟೇವು. ನೇರವಾಗಿ ಎಂ.ಕೊಳ್ಳೂರ ಗ್ರಾಮದ ಹನುಮಾನ ಗುಡಿಯ ಹತ್ತಿರ ಸಾಯಂಕಾಲ 17-50 ಗಂಟೆಗೆ ಹೋಗಿ ಜೀಪ್ ನಿಲ್ಲಿಸಿ ಅಲ್ಲಿಂದ ನಾವು ನಡೆದುಕೊಂಡು ಹನುಮಾನ ಗುಡಿಯ ಕಡೆಗೆ ಹೋಗಿ ನೋಡಲಾಗಿ ಹನುಮಾನ ಗುಡಿಯ ಮುಂದೆ ಒಬ್ಬ ವ್ಯಕ್ತಿ ಕುಳಿತುಕೊಂಡು ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ನಂಬರ ಹತ್ತಿದವರಿಗೆ ಹಣ ಕೊಡುತ್ತೇನೆ ಮಟಕಾ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತಿದ್ದನು. ಇದನ್ನು ಗಮನಿಸಿ ಸದರಿ ವ್ಯಕ್ತಿ ಮಟಕಾ ನಂಬರ ಬರೆದುಕೊಳ್ಳುತಿದ್ದ ಬಗ್ಗೆ ದೃಢಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ 18-00 ಗಂಟೆಗೆ ದಾಳಿ ಮಾಡಿದಾಗ ಮಟಕಾ ನಂಬರ ಬರೆಯಿಸಲು ಬಂದ ಜನರು ಓಡಿ ಹೋಗಿದ್ದು, ಮಟಕಾ ನಂಬರ ಬರೆದುಕೊಳ್ಳುತಿದ್ದ ವ್ಯಕ್ತಿ ದಾಳಿಯಲ್ಲಿ ನಮ್ಮ ಕೈಗೆ ಸಿಕ್ಕಿದ್ದು, ಸದರಿಯವನ ಹೆಸರು ವಿಳಾಸ ವಿಚಾರಿಸಲು ಯಮನಪ್ಪ ತಂದೆ ಹುಲಗಪ್ಪ ಮನ್ಯಾಳ ವ|| 42 ವರ್ಷ ಜಾ|| ಬೇಡರ ಉ|| ಮಟಕಾಬರೆದುಕೊಳ್ಳೂವುದು ಸಾ|| ಎಂ ಕೊಳ್ಳೂರ. ತಾಃ ಶಹಾಪೂರ. ಜಿಃ ಯಾದಗಿರಿ ಅಂತಾ ಹೇಳಿದನು. ಈತನ ಹತ್ತಿರ 1) ನಗದು ಹಣ 1520=00 ರೂಪಾಯಿ ಇದ್ದು ಅವುಗಳನ್ನು ವಿಂಗಡನೆ ಮಾಡಿ ನೋಡಲಾಗಿ 500 ರೂಪಾಯಿ ಮುಖ ಬೆಲೆಯ 1 ನೋಟು, 200 ರೂಪಾಯಿ ಮುಖ ಬೆಲೆಯ 2 ನೋಟುಗಳು, 100 ರೂಪಾಯಿ ಮುಖ ಬೆಲೆಯ 6 ನೋಟುಗಳು, 20 ರೂಪಾಯಿ ಮುಖಬೆಲೆಯ 2 ನೋಟುಗಳು ಇದ್ದು, 2) ಒಂದು ಬಿಳಿ ಹಾಳೆ ಇದ್ದು, ಅದರಲ್ಲಿ ಮಟಕಾ ನಂಬರ ಬರೆದುಕೊಂಡಿದ್ದು ಇರುತ್ತದೆ ಅ.ಕಿ 00-00. 3) ಒಂದು ಬಾಲ್ ಪೆನ್ ಸಿಕ್ಕಿದು,್ದ ಅ.ಕಿ 00-00 ಸದರಿಯವನಿಗೆ ವಿಚಾರಣೆ ಮಾಡಲಾಗಿ ಸಾರ್ವಜನಿಕರಿಂದ ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿ ಮತ್ತು ಮಟಕಾ ನಂಬರಗಳು ಬರೆಯಲು ಉಪಯೋಗಿಸಿದ ಪೆನ್ನು ಇದೆ ಇರುತ್ತದೆ. ಸದರಿ ಹಣ ಮಟಕಾ ನಂಬರಗಳು ಬರೆದುಕೊಂಡಿದ್ದರಿಂದ ಜಮಾ ಆದ ಹಣ ಇರುತ್ತವೆ ಅಂತಾ ಹೇಳಿ ಹಾಜರ ಪಡಿಸಿದನು. ಸದರಿ ಮುದ್ದೆಮಾಲುಗಳನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು, ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ತೆಗೆದುಕೊಂಡೆನು. ಸದರಿ ಜಪ್ತಿ ಪಂಚನಾಮೇಯು ಹನುಮಾನ ಗುಡಿಯ ಲೈಟಿನ ಬೆಳಕಿನಲ್ಲಿ ಜಪ್ತಿ ಪಂಚನಾಮೆಯನ್ನು 18-00 ರಿಂದ 19-00 ಗಂಟೆಯವರೆಗೆ ಜಪ್ತಿ ಪಂಚನಾಮೆಮಾಡಿ. ದಾಳಿಯಲ್ಲಿ ಸಿಕ್ಕ ವ್ಯಕ್ತಿಯನ್ನು ತಾಬೆಗೆ ತೆಗೆದು ಕೊಂಡು ಎಲ್ಲರೂ ಕೂಡಿ ಮರಳಿ ಠಾಣೆಗೆ 20-30 ಗಂಟೆಗೆ ಬಂದು ಜಪ್ತಿ ಪಂಚನಾಮೆ, ಮುದ್ದೆಮಾಲನ್ನು ಮತ್ತು ಒಬ್ಬ ಆರೋಪಿಯನ್ನು ಹಾಜರು ಪಡಿಸಿ ಒಂದು ವರದಿಯನ್ನು ತಯಾರಿಸಿ 21-30 ಗಂಟೆಗೆ ಮುಂದಿನ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿಯರ್ಾದಿಯವರ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 128/2022 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ಇತ್ತೀಚಿನ ನವೀಕರಣ​ : 22-07-2022 01:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080