ಅಭಿಪ್ರಾಯ / ಸಲಹೆಗಳು

                                                   ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 22-08-2021

ಯಾದಗಿರ ನಗರ ಪೊಲೀಸ್ ಠಾಣೆ
"ಗುನ್ನೆ ನಂ: 91/2021 ಕಲಂ 78(3) ಕೆ.ಪಿ ಎಕ್ಟ್ : ಇಂದು ದಿನಾಂಕ; 21/08/2021 ರಂದು 12-50 ಪಿಎಮ್ ಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ರವರು ಠಾಣೆಗೆ ಬಂದು ಒಂದು ಜ್ಞಾಪನ ಪತ್ರ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ.21/08/2021 ರಂದು 12-00 ಪಿಎಂ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಯಾದಗಿರಿ ನಗರದ ಶುಭಂ ಪೆಟ್ರೋಲ ಬಂಕ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾರೋ ವ್ಯಕ್ತಿಗಳು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಕಲ್ಯಾಣಿ ಮಟಕಾ 1/ -ರೂ ಗೆ 80/-ರೂ. ಕೊಡುತ್ತೇನೆ ಅಂತಾ ಅವರಿಂದ ಹಣವನ್ನು ಪಡೆದು ಚಿಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಸದರಿ ಪ್ರಕರಣವೂ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಕೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, 12-40 ಪಿಎಮ್ ಕ್ಕೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆಗೆ 12-50 ಪಿಎಮ್ ಕ್ಕೆ ಬಂದಿದ್ದು ನೀವು ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಲಾಗಿದೆ. ಅಂತಾ ನೀಡಿದ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.91/2021 ಕಲಂ.78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.ನಾರಾಯಣಪೂರ ಪೊಲೀಸ್ ಠಾಣೆ
"ಗುನ್ನೆ ನಂ.51/2021  ಕಲಂ: 143, 147, 148, 323, 324, 354, 504, 506 ಸಂ 149 ಐಪಿಸಿ : ಇಂದು ದಿನಾಂಕ : 21/08/2021 ರಂದು 8:15 ಪಿ.ಎಂ ಕ್ಕೆ ಶ್ರೀಮತಿ ಬಾಳಮ್ಮ ಗಂಡ ದಿ:ರಾಮು ರಾಠೋಡ ವ:45 ಸಾ:ಜಂಗಿರಾಂಪೂರ ತಾಂಡಾ ತಾ:ಲಿಂಗಸೂರ ಹಾ:ವ: ಮಾರನಾಳ ದೊಡ್ಡತಾಂಡಾ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿಕೊಂಡು ಬಂದ ಪಿಯರ್ಾದಿ ಹಾಜರು ಪಡಿಸಿದ್ದು ಸದರಿ ಪಿಯರ್ಾದಿಯ ಅಜರ್ಿಯ ಸಂಕ್ಷಿಪ್ತ ಸಾರಾಂಶವೆನೆಂದರೆ ನನ್ನ ತಂಗಿ ರುಕ್ಮಾಬಾಯಿಗೆ ಮಾರನಾಳ ದೊಡ್ಡತಾಂಡಾದ ಸೋಮು ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ನನ್ನ ತಂಗಿಗೆ 1) ರಾಜು, 2)ಅರುಣ, 3) ಪವನ, 4) ಸುರೇಶ ಅಂತಾ ನಾಲ್ಕು ಜನ ಮಕ್ಕಳಿದ್ದು ನನ್ನ ತಂಗಿಯ ಗಂಡ ಸೋಮು ಈತನು ಮರಣಹೊಂದಿದ್ದರಿಂದ ನಾನು ನನ್ನ ತಂಗಿಯ ಜೊತೆಗೆ ಮಾರನಾಳ ದೊಡ್ಡತಾಂಡಾದಲ್ಲಿಯೇ ಇರುತ್ತೇನೆ. ನನ್ನ ತಂಗಿಯ ಗಂಡನ ಆಸ್ತಿಯ ವಿಷಯದಲ್ಲಿ ನಮ್ಮ ತಂಗಿಗೆ ಮತ್ತು ನನ್ನ ತಂಗಿ ರುಕ್ಮಾಬಾಯಿ ಗಂಡನ ಮಲತಾಯಿಯ ಮಕ್ಕಳಿಗೆ ಸುಮಾರು ದಿನಗಳಿಂದ ಜಗಳ ನಡೆದಿದ್ದು ಆಸ್ತಿಯ ಜಗಳವು ಮಾನ್ಯ ಸುರಪೂರ ನ್ಯಾಯಾಲಯದಲ್ಲಿ ದಾವೆ ನಡೆದಿರುತ್ತದೆ. ಸದರಿ ಆಸ್ತಿಯ ವಿಷಯದಲ್ಲಿ ನನ್ನ ತಂಗಿ ರುಕ್ಮಾಬಾಯಿ ಗಂಡನ ಮಲತಾಯಿ ಮಕ್ಕಳಾದ ಗೋಪಿಲಾಲ ಹಾಗೂ ಅವರ ಮನೆಯವರು ಸುಮಾರು ದಿನಗಳಿಂದ ಕಿರಿಕಿರಿ ಮಾಡುತ್ತಾ ಬಂದಿದ್ದು ಇರುತ್ತದೆ. ಹೀಗಿದ್ದು ದಿನಾಂಕ 12/08/2021 ರಂದು 2:55 ಪಿ.ಎಂ ಸುಮಾರಿಗೆ ನಾನು ಮತ್ತು ನನ್ನ ತಂಗಿ ರುಕ್ಮಾಬಾಯಿ ಇವಳು ಮಾರನಾಳ ದೊಡ್ಡತಾಂಡಾದ ನಮ್ಮ ಮನೆಯ ಮುಂದೆ ಇದ್ದಾಗ ಅಲ್ಲಿಗೆ ಬಂದ 1) ಗೋಪಿಲಾಲ, 2) ಮೌನೇಶ, 3) ಸಂತೋಷ, 4) ಬಾಲಚಂದ್ರ 5), ನಾರಾಯಣಪ್ಪ, 6) ಗೂರಬಾಯಿ  7) ಶಿಲ್ಪಾ ಗಂಡ ಗೋಪಿಲಾಲ ಸಾ: ಎಲ್ಲರೂ ಮಾರನಾಳ ದೊಡ್ಡತಾಂಡಾ ಹಾಗೂ  8) ಲಾಲಪ್ಪ ತಂದೆ ರೂಪಲೇಪ್ಪ ಸಾ: ಬ್ಯಾಲದಗಿಡದ ತಾಂಡಾ ಇವರು ಅಕ್ರಮ ಕೂಟವನ್ನು ರಚಿಸಿಕೊಂಡು ಕೈಯಲ್ಲಿ ಕಲ್ಲು ಬಡಿಗೆಗಳನ್ನು ಹಿಡಿದುಕೊಂಡು ಅಲ್ಲಿಗೆ ಬಂದವರೆ ನನ್ನ ತಂಗಿಗೆ ಆಸ್ತಿಯ ವಿಷಯದಲ್ಲಿ ಜಗಳ ತಗೆದು ಅವರಲ್ಲಿಯ ಗೋಪಿಲಾಲ ಈತನು ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ತಂಗಿ ರುಕ್ಮಾಬಾಯಿ ಬಲಗಡೆ ಚೆಪ್ಪಿಗೆ ಹಾಗೂ ಬೆನ್ನಿಗೆ ಹೊಡೆದು ಗುಪ್ತ ಪೆಟ್ಟುಪಡಿಸಿದ್ದು ಇರುತ್ತದೆ. ಮೌನೇಶ ಈತನು ನನ್ನ ತಂಗಿ ರುಕ್ಮಾಬಾಯಿಯ ಸೀರೆಯನ್ನು ಹಿಡಿದು ಎಳೆದಾಡಿ ಅವಮಾನ ಮಾಡಿ ಕೈಯಿಂದ ಕಪಾಳಕ್ಕೆ ಹಾಗೂ ಬೆನ್ನಿಗೆ ಹೊಡೆದು ಗುಪ್ತ ಪೆಟ್ಟುಪಡಿಸಿರುತ್ತಾನೆ, ಮತ್ತು ಸಂತೋಷ ಈತನು ನನ್ನ ತಂಗಿಯ ರುಕ್ಮಾಬಾಯಿ ತಲೆ ಕೂದಲೂ ಹಿಡಿದು ಎಳೆದಾಡಿ ಕಾಲಿನಿಂದ ಸೊಂಟಕ್ಕೆ ಒದ್ದು ಒಳಪೆಟ್ಟು ಮಾಡಿರುತ್ತಾನೆ, ಬಾಲಚಂದ್ರ ಈತನು ತನ್ನ ಕೈಯಿಂದ ನನ್ನ ತಂಗಿಯ ಕಪಾಳಕ್ಕೆ ಹೊಡೆದನು, ಗೂರಿಬಾಯಿ ಈಕೆಯು ನನ್ನ ತಂಗಿಗೆ ಲೇ ಸೂಳಿ ಆಸ್ತಿ ಕೇಳಲಕ್ಕೆ ನೀನು ಯಾರು ಎಂದು ತನ್ನ ಕಾಲಿನಿಂದ ದುಬ್ಬಕ್ಕೆ ಹೊಡೆದಳು  ಶಿಲ್ಪಾ ಈಕೆಯು ಲೇ ಬೋಸುಡಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದ ಎದೆಗೆ ಹೊಡೆದು ಗುಪ್ತ ಪೆಟ್ಟು ಪಡಿಸಿದಳು, ನಾರಾಯಣಪ್ಪ ಈತನು ಲೇ ಸೂಳಿ ಆಸ್ತಿಯನ್ನು ಕೊಡುವದಿಲ್ಲ ನೀನು ಏನು ಮಾಡಿಕೊಂತಿಯೇ ಮಾಡು ಎಂದು ಅವಾಚ್ಯವಾಗಿ ಬೈದು ಕಾಲಿಗೆ ಹೊಟ್ಟೆಗೆ ಒದ್ದನು, ಲಾಲಪ್ಪ ತಂದೆ ರೂಪಲೇಪ್ಪ ಈತನು ನನಗೆ ಬೋಸುಡಿ ಸೂಳಿ ನೀನು ಬಿಡಸಲು ಬಂದರೆ ನೀನಗೂ ಖಲಾಸ ಮಾಡಿ ಬಿಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿದನು, ಈ ಜಗಳವನ್ನು ನಮ್ಮ ಮನೆಯ ಮುಂದೆ ಇದ್ದ ನಮ್ಮ ತಾಂಡಾದ ಸೂರಪ್ಪ ತಂದೆ ಮೇಘಪ್ಪ , ಲಕ್ಷ್ಮೀಂಬಾಯಿ ಗಂಡ ಸೂರಪ್ಪ ಇವರು ಜಗಳವನ್ನು ಬಿಡಿಸಿದರು ಈ ಮೇಲೆ ತೋರಿಸಿದ ವೆಕ್ತಿಗಳು ನನಗೆ ಮತ್ತು ನನ್ನ  ತಂಗಿಗೆ ಲೇ ಸೂಳೆರ ಇನ್ನೊಂದು ಸಲ ಸಿಕ್ಕರೆ ನಿಮ್ಮನ್ನು ಜೀವಂತವಾಗಿ ಬಿಡುವದಿಲ್ಲ ಕೊಂದು ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದರು. ತದನಂತರ ನಮಗೆ ಜೀವದ ಬೆದರಿಕೆ ಹಾಕಿದ್ದರಿಂದ ಜೀವಕ್ಕೆ ಹೆದರಿಕೊಂಡು ನಾನು ಮತ್ತು ನನ್ನ ತಂಗಿ ಇಬ್ಬರು ಮಾರನಾಳ ದೊಡ್ಡತಾಂಡಾ ಬಿಟ್ಟು ಜಂಗಿ ರಾಂಪೂರ ತಾಂಡಾಕ್ಕೆ ಹೋಗಿ ನಮ್ಮ. ಇಲ್ಲಿಯ ವರೆಗೆ ಅಲ್ಲಿಯೇ ಇದ್ದೇವು. ಇಂದು ನನ್ನ ತಂಗಿಯು ಜಗಳದಲ್ಲಿ ಆದ ಪೆಟ್ಟುಗಳು ತನಗೆ ನೋವು ಆಗುತ್ತಿವೆ ಅಂತಾ ಅಂದಿದ್ದರಿಂದ ಇಂದು ನನ್ನ ತಂಗಿ ರುಕ್ಮಾಬಾಯಿಗೆ ಲಿಂಗಸೂರ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ಕಳುಹಿಸಿ ನಾನು ಇಂದು ಇಲ್ಲಿಗೆ ಬಂದು ಪಿಯರ್ಾದಿಕೊಟ್ಟಿದ್ದು ಇರುತ್ತದೆ. ಅಂತಾ ನೀಡಿದ ಪಿಯರ್ಾದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 51/2021 ಕಲಂ 143,147,148,323,324,354,504,506, ಸಂಗಡ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು."

ಇತ್ತೀಚಿನ ನವೀಕರಣ​ : 22-08-2021 11:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080