ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 22-08-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 126/2022 ಕಲಂ. 279,337 ,338 ಐಪಿಸಿ:ದಿನಾಂಕ: 21-08-2022 ಮದ್ಯಾಹ್ನ 2-30 ಗಂಟೆಗೆ ಪಿರ್ಯಾಧಿಧಾರನು ಠಾಣೆಗೆ ಹಾಜರಾಗಿ ಫಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 20-08-2022 ರಂದು ಯಾದಗಿರಿಯಲ್ಲಿ ಕೆಲಸ ಮುಗಿಸಿಕೊಂಡು ನಂತರ ಊರಿಗೆ ಹೋಗಬೆಕೆಂದು ದುಂಡಪ್ಪ ತಂದೆ ಮಾನಸಪ್ಪ ಅರಿಕೇರಾ (ಬಿ) ಇವರ ನಡೆಸುವ ಆಟೋ ನಂ. ಕೆಎ-33 ಎ-7985 ನೇದ್ದರಲ್ಲಿ ನಾವೆಲ್ಲಾ ಕುಳಿತುಕೊಂಡು ಅಲ್ಲಿಪೂರ ಮಾರ್ಗವಾಗಿ ಅರಿಕೇರಾ (ಬಿ)ಗೆ ಹೋಗುತ್ತಿರುವಾಗ ಮಧ್ಯಾಹ್ನ 4-00 ಗಂಟೆಗೆ ಅರಿಕೇರಾ (ಬಿ) ಗ್ರಾಮದ ಮುಖ್ಯೆ ಕಾಲುವೆ ಹತ್ತಿರ ಹೋಗುತ್ತಿರುವಾಗ ಆಟೋ ಚಾಲಕನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಆಟೊ ಪಲ್ಟಿಯಾಗಿ ರಸ್ತೆ ಅಪಘಾತಪಡಿಸಿದ ಪರಿಣಾಮವಾಗಿ ಫಿರ್ಯಾಧಿದಾರನಿಗೆ ಸಾದ ಸ್ವರೂಪದ ಗಾಯಗಳಾಗಿದ್ದು ಇನ್ನುಳಿದ ಮೂವರಿಗೆ ತೀವ್ರ ಸ್ವರೂಪದ ಗಾಯಳಾಗಿದ್ದು ಕಾರಣ ಅಪಘಾತಕ್ಕೆ ಕಾರಣನಾದ ಆಟೋ ಚಾಲಕನ ಮೇಲೆ ಕಾನೂನು ರಿತಿ ಕ್ರಮ ಕೈಕೋಳ್ಳಿರಿ ಅಂತ ಫಿರ್ಯಾಧಿಯ ದೂರು ಇರುತ್ತದೆ.


ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 66/2022 ಕಲಂ 87 ಕೆಪಿ ಯ್ಯಾಕ್ಟ : ಇಂದು ದಿನಾಂಕ 21/08/2022 ರಂದು 3 ಪಿ.ಎಮ್.ಕ್ಕೆ ಫಿಯರ್ಾದಿ ಠಾಣೆಯಲ್ಲಿದ್ದಾಗಶಿರವಾಳ ಗ್ರಾಮದ ಭೀರಪ್ಪದೇವರಗುಡಿ ಮುಂದೆ ಸಾರ್ವಜನಿಕಖುಲ್ಲಾಜಾಗದಲ್ಲಿಕೆಲವು ಜನರುದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿಅಂದರ ಬಾಹರಅಂತಇಸ್ಪೇಟಜೂಜಾಟಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ 4.10 ಪಿ.ಎಮ್ ಕ್ಕೆ ದಾಳಿ ಮಾಡಿದಾಗ 05 ಜನಆರೋಪಿತರು ಸಿಕ್ಕಿದ್ದು 13 ಜನಆರೋಪಿತರುಓಡಿಹೋಗಿದ್ದು ಹಾಗು ಕಣದಲ್ಲಿಂದ ನಗದುಒಟ್ಟು ಹಣ 2600/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕುರಿತು ವರದಿ ಸಲ್ಲಿಸಿರುತ್ತಾರೆ.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 62/2022 ಕಲಂ.32, 34 ಕನರ್ಾಟಕ ಅಬಕಾರಿ ಕಾಯ್ದೆ : ಇಂದು ದಿನಾಂಕ: 21.08.2022 ರಂದು 14:40 ಪಿ.ಎಮ್ ಗಂಟೆಗೆ ಪಿಎಸ್ಐ ಸಾಹೇಬರು ಠಾಣೆಗೆ ಹಾಜರಾಗಿ ತಾವು ಪುರೈಸಿದ ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾ ಪತ್ರ ಮತ್ತು ಮುದ್ದೇಮಾಲನ್ನು ಹಾಪಡಿಸಿದ್ದು, ಪಿಎಸ್ಐ ರವರು ಹಾಜರುಪಡಿಸಿದ ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾ ಪತ್ರ ಸಾರಾಂಶವೆನೆಂದರೆ, ಇಂದು ದಿನಾಂಕ:20/08/2022 ರಂದು 12:00 ಗಂಟೆಗೆ ನಾನು ಕಕ್ಕೇರಾ ಠಾಣೆಯಲ್ಲಿದ್ದಾಗ ಕಕ್ಕೇರಾ ಪಟ್ಟಣದ ಕಾವೇರಿ ಡಾಬಾದಲ್ಲಿ ಒಬ್ಬ ವ್ಯಕ್ತಿ ಅಬಕಾರಿ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಮದ್ಯ ಸಂಗ್ರಹಣೆ ಮಾಡಿಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಸುರಪೂರ & ಮಾನ್ಯ ಸಿಪಿಐ ಸಾಹೇಬರು ಹುಣಸಗಿ ರವರ ಮಾರ್ಗದರ್ಶನದಲ್ಲಿ, ದಾಳಿ ಮಾಡುವ ಕುರಿತು ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಅಕ್ರಮವಾಗಿ ಮದ್ಯ ಸಂಗ್ರಹಣೆ ಮಾಡಿ ಮದ್ಯ ಮಾರಾಟ ಮಾಡುತ್ತಿದ್ದ ಒಬ್ಬ ವ್ಯಕ್ತಿಗೆ ಹಿಡಿದಿದ್ದು, ಸದರಿ ಡಾಬಾದ ಮ್ಯಾನೇಜರ್ ಹೆಸರು & ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಲ್ಲನಗೌಡ ತಂದೆ ಬಸವಂತ್ರಾಯಗೌಡ ಬೋವೇರ ವ:56 ವರ್ಷ ಉ:ದಾಬಾದಲ್ಲಿ ಮ್ಯಾನೇಜರ್ ಜಾ:ಹಿಂದೂ ಕಬ್ಬಲಿಗ ಸಾ:ದ್ಯಾಮವ್ವನ ಗುಡಿ ಹತ್ತಿರ ಕಕ್ಕೇರಾ ಅಂತಾ ತಿಳಿಸಿದ್ದು, ಸದರಿ ಡಾಬಾದಲ್ಲಿ ಮಾರಾಟ ಮಾಡಲು ಇಟ್ಟಿದ್ದ 1) ಕಿಂಗ್ಫೀಶರ್ ಸ್ಟ್ರಾಂಗ್ ಬಿಯರ್ ಬಾಟಲಿಗಳು 650 ಎಮ್ಎಲ್ದವು ಒಂದಕ್ಕೆ 160/- ರೂಗಳಂತೆ, ಒಟ್ಟು 14 ಬಾಟಲಿಗಳು ಇವುಗಳ ಒಟ್ಟು ಕಿಮ್ಮತ್ತು :2240/- ರೂ.ಗಳು, 2) ಕಿಂಗಫೀಶರ್ ಟೀನ್ ಬಾಟಲಿಗಳು 330 ಎಮ್.ಎಲ್ ಇದ್ದು, ಒಂದಕ್ಕೆ 95/- ರೂಗಳಂತೆ, ಒಟ್ಟು 4 ಟೀನ್ ಬಾಟಲಿಗಳು ಇವುಗಳ ಒಟ್ಟು ಕಿಮ್ಮತ್ತು :380/- ರೂ.ಗಳು ಆಗುತ್ತಿದ್ದು ಸದರಿ ಮದ್ಯವನ್ನು ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆಯನ್ನು ಡಾಬಾದಲ್ಲಿ 12:40 ಪಿಎಮ್ ದಿಂದ 13:40 ಪಿ.ಎಮ್ ವರಗೆ ಸ್ಥಳದಲ್ಲಿ ಬರೆದುಕೊಂಡು ಮುದ್ದೇಮಾಲು ಹಾಗೂ ಆರೋಪಿತನನ್ನು ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ತಂದು ಒಪ್ಪಿಸಿದ್ದು ಸೂಕ್ತ ಕಾನೂನ ಕ್ರಮ ಜರುಗಿಸಲು ಸೂಚಿಸಿದ್ದು ಪಿ.ಎಸ್.ಐ ಸಾಹೇಬರು ರವರು ಹಾಜರು ಪಡಿಸಿದ ಪಂಚನಾಮೆ ಮತ್ತು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 62/2022 ಕಲಂ: 32, 34 ಕೆ.ಇ ಎಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 100/2022 ಕಲಂ 457, 380 ಐಪಿಸಿ : ದಿನಾಂಕ 21.08.2022 ರಂದು ಬೆಳಿಗ್ಗೆ 9 ಗಂಟೆಗೆ ಹಜರತಅಲಿ ತಂದೆ ಅಹ್ಮದಅಲಿ ಗಡ್ಡೆಪಲ್ಲಿ, ವ|| 45 ವರ್ಷ, ಜಾ|| ಮುಸ್ಲಿಂ, ಉ|| ವ್ಯಾಪಾರ, ಸಾ|| ತಾಯಿ ಕಾಲೋನಿ ಸೈದಾಪೂರ, ತಾ||ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ನಾನು ಸೈದಾಪೂರ ಬಸ್ ನಿಲ್ದಾಣದ ಎದುರುಗಡೆ ಪಾನ್ ಬೀಡಿ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತ ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ಎಂದಿನಂತೆ ನಾನು ನಿನ್ನೆರಾತ್ರಿ 8.30 ಗಂಟೆಗೆ ನನ್ನ ಪಾನ್ಬೀಡಿ ಅಂಗಡಿ ಮುಚ್ಚಿಕೊಂಡು ಬೀಗಹಾಕಿ ಮನೆಗೆ ಹೋಗಿದ್ದೆ. ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ನಾನು ನನ್ನ ಅಂಗಡಿ ತೆಗೆಯಲು ಅಂಗಡಿಯತ್ತಿರ ಹೋದಾಗ ನನ್ನ ಅಂಗಡಿಯ ಬೀಗ ಮುರಿದಿತ್ತು. ಒಳಗಡೆ ಹೋಗಿ ನೋಡಿದಾಗ ಅಂಗಡಿಯಲ್ಲಿದ್ದ ಸಾಮಾನು ಚೆಲ್ಲಾಪಿಲ್ಲಿಯಾಗಿ ಅಂಗಡಿಯಲ್ಲಿದ್ದ ನನ್ನ ಗಲ್ಲಾಪೆಟ್ಟಿಗೆ ಮತ್ತು ಮೊಬೈಲ್ ಫೋನ್ ಇರಲಿಲ್ಲ. ಈ ವಿಷಯ ನಾನು ನನ್ನ ಭಾಮೈದುನನಾದ ಮಹ್ಮದ ಲತೀಫ್ ತಂದೆ ಮಹ್ಮದ ಹನೀಫ್ ಈತನಿಗೆ ಫೋನ್ಮಾಡಿ ತಿಳಿಸಿದ್ದೆ. ಅದಕ್ಕೆ ಅವರು ನನಗೆ ಹೇಳಿದ್ದೇನೆಂದರೆ ರಾತ್ರಿ 3 ಗಂಟೆ ಸುಮಾರಿಗೆ ಯಾವನೋ ಒಬ್ಬ ವ್ಯಕ್ತಿ ಸೂಗುರೇಶ್ವರ ವೈನ್ಶಾಪ ಪಕ್ಕದ ಭವಾನಿ ಗುಡಿ ಹತ್ತಿರ ಅಡಗಿಕೊಂಡು ಕುಂತಿದ್ದನ್ನು ಜನ ನೋಡಿ ಪೊಲೀಸರಿಗೆ ತಿಳಿಸಿದ್ದರಿಂದ ಅವನಿಗೆ ಪೊಲೀಸರು ಹಿಡಿದುಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಅಂತಾ ಹೇಳಿದ್ದ. ಇಂದು ಬೆಳಿಗ್ಗೆ ನಾನು ಮತ್ತು ನನ್ನ ಭಾಮೈದುನ ಠಾಣೆಗೆ ಬಂದು ವಿಚಾರಿಸಿದಾಗ ರಾತ್ರಿ ಸಿಕ್ಕ ವ್ಯಕ್ತಿ ಸೈದಾಪೂರ ಸರಕಾರಿ ಆಸ್ಪತ್ರೆಯಲ್ಲಿದ್ದಾನೆ ಅಂತಾ ಪೊಲೀಸರು ತಿಳಿಸಿದ್ದರಿಂದ ನಾವು ಸೈದಾಪೂರ ಸರಕಾರಿ ದವಾಖಾನೆಗೆ ಹೋಗಿ ಸದರಿ ವ್ಯಕ್ತಿಗೆ ವಿಚಾರಿಸಿದ್ದೆವು. ಮೌನೇಶ ತಂದೆ ಗುರಣ್ಣ ಬಡಿಗೇರ, ವ|| 30 ವರ್ಷ, ಜಾ|| ವಿಶ್ವಕರ್ಮ, ಉ|| ಬಡಿಗೆತನ, ಸಾ|| ಬಿಳಿಭಾವಿ, ತಾ|| ತಾಳಿಕೋಟ, ಜಿ|| ಬಿಜಾಪೂರ ಅಂತಾ ತನ್ನ ಹೆಸರು, ವಿಳಾಸ ಹೇಳಿ ನಿನ್ನೆರಾತ್ರಿ 1 ಗಂಟೆ ಸುಮಾರಿಗೆ ತಾನೇ ಸೈದಾಪೂರ ಬಸ್ ನಿಲ್ದಾಣದ ಎದುರುಗಡೆಯ ಅಂಗಡಿ ಬೀಗ ಮುರಿದು ಅಂಗಡಿಯೊಳಗಡೆ ಹೋಗಿ ಗಲ್ಲಾಪೆಟ್ಟಿಗೆ ಮತ್ತು ಮೊಬೈಲ್ ಫೋನ್ ಕಳುವು ಮಾಡಿರುವದಾಗಿ ತಿಳಿಸಿದ್ದಲ್ಲದೆ ನಾನು ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸುವಾಗ ದೇವಸ್ಥಾನದಲ್ಲಿ ಕಾಲ್ಜಾರಿ ಕೆಳೆಗೆ ಬಿದ್ದಿದ್ದರಿಂದ ನನಗೆ ಕಾಲಿಗೆ ಮತ್ತು ಟೊಂಕಕ್ಕೆ ಪೆಟ್ಟಾಗಿದೆ ಅಂತಾ ಹೇಳಿದ್ದ. ಗಲ್ಲಾಪೆಟ್ಟಿಗೆ ಮತ್ತು ಮೊಬೈಲ್ ಫೋನ್ ಹ್ಯಾಂಡಸೆಟ್ ಎಲ್ಲಿ ಇಟ್ಟಿದಿ ಅಂತಾ ಆತನಿಗೆ ವಿಚಾರಿಸಿದಾಗ ಬಸ್ ನಿಲ್ದಾಣದಿಂದ ಸ್ವಲ್ಪ ದೂರ ಒಂದು ಮನೆಯ ಗೋಡೆಯ ಪಕ್ಕಕ್ಕೆ ಗಲ್ಲಾಪೆಟ್ಟಿಗೆ ಇಟ್ಟಿದ್ದೇನೆ ಮೊಬೈಲ್ ನನ್ನತ್ತಿರ ಇದೆ ಅಂತಾ ಹೇಳಿ ಮೊಬೈಲ್ ಫೋನ್ ತೋರಿಸಿದ್ದಾನೆ. ಮೊಬೈಲ್ಫೋನ್ ಹ್ಯಾಂಡಸೆಟ್ ನನ್ನದೆ ಇದೆ.ಮೌನೇಶ ತಂದೆ ಗುರಣ್ಣ ಬಡಿಗೇರ, ಸಾ|| ಬಿಳಿಭಾವಿ, ತಾ|| ತಾಳಿಕೋಟ, ಜಿ|| ಬಿಜಾಪೂರ ಈತನು ನಿನ್ನೆರಾತ್ರಿ ಅಂದರೆ ದಿನಾಂಕ 21.08.2022 ರಂದು 0100 ಗಂಟೆ ಸುಮಾರಿಗೆ ಸೈದಾಪೂರ ಬಸ್ ನಿಲ್ದಾಣದ ಮುಂದುಗಡೆ ಇದ್ದ ನನ್ನ ಪಾನ್ಬೀಡಿ ಅಂಗಡಿ ಬೀಗ ಮುರಿದು ಅಂಗಡಿಯೊಳಗಡೆ ಪ್ರವೇಶ ಮಾಡಿ ನಾನು ಅಂಗಡಿಯಲ್ಲಿ ಇಟ್ಟಿದ್ದ ಒಂದು ಮೊಬೈಲ್ ಫೋನ್ ಹ್ಯಾಂಡಸೆಟ್ ಅಂದಾಜು ಕಿಮ್ಮತ್ತು 500 ರೂಪಾಯಿ ಹಾಗೂ ಗಲ್ಲಾ ಪೆಟ್ಟಿಗೆಯಲ್ಲಿದ್ದ ಚಿಲ್ಲರ ಕ್ವೈನ್ ಸಮೇತ ಸುಮಾರು 2 ಸಾವಿರ ರೂಪಾಯಿಗಳು ಕಳುವು ಮಾಡಿರುತ್ತಾನೆ. ಕಾರಣ ಸದರಿಯವನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೋರಿದೆ ಅಂತಾ ಆಪಾದನೆ.

ಇತ್ತೀಚಿನ ನವೀಕರಣ​ : 22-08-2022 01:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080