ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 22-09-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 19/2022, ಕಲಂ, 174 ಸಿ.ಆರ್.ಪಿ.ಸಿ: ದಿನಾಂಕ: 21-09-2022 ರಂದು ಮಧ್ಯಾಹ್ನ 02-00 ಗಂಟೆಗೆ ಪಿಯಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸರಂಶವೆನೆಂದರೆ ದಿನಾಂಕ: 21-09-2022 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ನನ್ನ ಮಕ್ಕಳಾದ ಮಲ್ಲಿಕಾಜರ್ುನ ಮತ್ತು ಆಕಾಶ ಇಬ್ಬರು ಶಾಲೆಗೆ ಹೋಗಿದ್ದರು ಅವರು ಶಾಲೆಗೆ ಹೋದ ನಂತರ ನಾನು ಮನೆಯಲ್ಲಿ ಕೆಲಸ ಮುಗಿಸಿಕೊಂಡು ನಮ್ಮೂರಿನ ಮರೆಪ್ಪ ತಂದೆ ಯಂಕಪ್ಪ ಇವರ ಹೊಲಕ್ಕೆ ಶೇಂಗಾ ಅರಿಯಲು ಹೋಗಿದ್ದೆನು, ನಾನು ಹೊಲದಲ್ಲಿ ಶೇಂಗಾ ಅರಿಯುತ್ತಿರುವಾಗ ಮರೆಪ್ಪನ ಅಣ್ಣನ ಮಗನಾದ ಶರಣಬಸವ ಈತನು ಬಂದು ತಿಳಿಸಿದ್ದನೆದರೆ ನಿನ್ನ ಮಗ ಮಲ್ಲಿಕಾಜರ್ುನ ಇತನು ಲಿಂಗೇರಿ ಸ್ಟೇಶನ್ ಶಾಲೆಯ ಮುಂದುಗಡೆ ಇರುವ ನೀರಿನ ತಗ್ಗಿನಲ್ಲಿ ಬಿದ್ದಿದ್ದಾನಂತೆ ಹುಡುಕಾಡುತಿದ್ದಾರೆ ಅಂತಾ ಹೇಳಿದನು, ಆಗ ನಾನು ನನ್ನ ತಮ್ಮನ ಹೆಂಡತಿ ಬಸಲಿಂಗಮ್ಮ ಊರಿಗೆ ಬಂದು ಅಲ್ಲಿಂದ ಒಂದು ಆಟೋದಲ್ಲಿ ಲಿಂಗೇರಿ ಸ್ಟೆಶನ್ ಶಾಲೆಯ ಹತ್ತಿರ ಬಂದೆವು ಅಲ್ಲಿ ಜನರು ಸೇರಿದ್ದರು ನನ್ನ ಮಗನಿಗೆ ಅಗ್ನಿಶಾಮಕ ದಳದವರು ಮತ್ತು ಇತರರು ನೀರಿನಲ್ಲಿ ನನ್ನ ಮಗನಿಗೆ ಹುಡುಕಾಡುತಿದ್ದರು, ಆಗ ನಾನು ನನ್ನ ಮಗನ ಸಂಗಡ ಶಾಲೆಗೆ ಬಂದಿರುವ ಲಕ್ಷ್ಮಣ ತಂದೆ ದೇವಪ್ಪ ಈತನಿಗೆ ಹೇಗಾಯಿತು ಅಂತಾ ಕೇಳಲಾಗಿ ಆತನು ಹೇಳಿದ್ದೆನೆಂದರೆ ನಾವು ಶಾಲೆಯಲ್ಲಿರುವಾಗ ಮಲ್ಲಿಕಾಜರ್ುನ ಈತನು ನನಗೆ ಸಂಡಾಸ್ ಬಂದಿದೆ ಹೋಗಿ ಬರೊಣ ಅಂತಾ ಹೇಳಿದ್ದರಿಂದ ಶಾಲೆಯ ಮುಂದುಗಡೆ ಇರುವ ಶೆಟ್ಟಿಗೇರಾ ಗ್ರಾಮದ ಮೋನಪ್ಪ ತಂದೆ ಭಿಮಶಪ್ಪ ಇವರ ಹೊಲದ ಹತ್ತಿರ ಸಂಡಾಸ್ ಮಾಡಿ ಕುಂಡಿ ತೊಳೆದುಕೊಳ್ಳಲು ನೀರಿನ ತಗ್ಗಿನಲ್ಲಿ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಮಲ್ಲಿಕಾಜರ್ುನ ಈತನು ನೀರಿನಲ್ಲಿ ಬಿದ್ದಿರುತ್ತಾನೆ, ಆಗ ಸಮಯ ಬೆಳಿಗ್ಗೆ 11-00 ಗಂಟೆ ಆಗಿತ್ತು ಅಂತಾ ತಿಳಿಸಿದನು, ನನ್ನ ಮಗನಿಗೆ ನೀರಿನಲ್ಲಿ ಎಲ್ಲರು ಹುಡಿಕಾಡುತ್ತಿರುವಾಗ ಶಟ್ಟಿಕೇರಾ ಗ್ರಾಮದ ಪರಮೇಶ ತಂದೆ ಹಣಮಂತ ಕುಂಟಿಮರಿ ಈತನು ನೀರಿನಲ್ಲಿ ಹಾಳಕ್ಕೆ ಹೋಗಿ ನನ್ನ ಮಗ ಮಲ್ಲಿಕಾಜರ್ುನ ಈತನನ್ನು ನೀರಿನಿಂದ ಹೋರಗೆ ತೆಗೆದುಕೊಂಡು ಬಂದನು, ಅಷ್ಟೊತ್ತಿಗೆ ನನ್ನ ಮಗ ಮಲ್ಲಿಕಾಜರ್ುನ ತಂದೆ ಆಂಜನೇಯ ವ|| 15 ವರ್ಷ ಈತನು ಮೃತಪಟ್ಟಿದ್ದನು. ಆಗ ನನ್ನ ಮಗನ ಶವವನ್ನು ಜಿಲ್ಲಾ ಸರಕಾರಿ ಆಸ್ಪತ್ರೆ ಶವಗಾರ ಕೋಣೆಯಲ್ಲಿ ತಂದು ಹಾಕಿರುತ್ತೇವೆ ನನ್ನ ಮಗನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲ.

ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 28/2022 ಕಲಂ 174 ಸಿಆರ್ಪಿಸಿ: ಇಂದು ದಿನಾಂಕ 21/9/2022 ರಂದು 9.00 ಎಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀ ಪ್ರಭುಗೌಡ ತಂದೆ ಸಾಹೇಬಗೌಡ ಬಿರಾದಾರ ವ|| 54ವರ್ಷ ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಬನ್ನೆಟ್ಟಿ ತಾ|| ತಾಳಿಕೋಟಿ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನೆಂದರೆ, ನಮ್ಮ ಮಗಳಾದ ಶಿವಮ್ಮ @ ಸುವರ್ಣ ವ|| 28ವರ್ಷ ಇವಳಿಗೆ 5 ವರ್ಷಗಳ ಹಿಂದೆ ಸುರಪೂರ ತಾಲೂಕಿನ ವಂದಗನೂರ ಗ್ರಾಮದ ಬಾಪುಗೌಡ ಬಿರಾದಾರ ಎಂಬುವವರಿಗೆ ಕೊಟ್ಟು ಮದುವೆ ಮಾಡಿದ್ದು ನಮ್ಮ ಮಗಳು ಮತ್ತು ಅಳಿಯನಾದ ಬಾಪುಗೌಡ ಇಬ್ಬರೂ ಚನ್ನಾಗಿ ಸಂಸಾರ ಸಾಗಿಸುತ್ತಾ ಬಂದಿದ್ದು ಅವರಿಗೆ 3 ವರ್ಷದ ಗಂಡು ಮಗ ಇರುತ್ತಾನೆ. ನಮ್ಮ ಮಗಳಾದ ಶಿವಮ್ಮ @ ಸುವರ್ಣ ಇವಳಿಗೆ ಮೊದಲಿನಿಂದಲೂ ಫಿಟ್ಸ್ ಕಾಯಿಲೆ ಇದ್ದು ಫೀಟ್ಸ್ ರೋಗದ ಮಾತ್ರೆಗಳನ್ನು ದಿನನಿತ್ಯ ಸೇವಿಸುತ್ತಿದ್ದಳು. ಹೀಗಿದ್ದು 2 ತಿಂಗಳುಗಳ ಹಿಂದೆ ತವರುಮನೆಯಾದ ನಮ್ಮ ಮನೆಗೆ ಬಂದುೊಂದು ವಾರ ನಮ್ಮ ಮನೆಯಲ್ಲಿ ಇದ್ದು ಮತ್ತೆ ಮರಳಿ ತನ್ನ ಗಂಡನ ಮನೆಗೆ ಹೋಗಿದ್ದಳು. ಹೀಗಿದ್ದು ದಿನಾಂಕ 15/09/2022 ರಂದು ಮುಂಜಾನೆ 11.00 ಗಂಟೆಯ ಸುಮಾರಿಗೆ ನಮ್ಮ ಅಳಿಯನಾದ ಬಾಪುಗೌಡ ತಂದೆ ಗೌಡಪ್ಪಗೌಡ ಬಿರಾದಾರ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ಸುವರ್ಣ ಇವಳು ದಿನನಿತ್ಯದಂತೆ ಫೀಟ್ಸ್ ಕಾಯಿಲೆಯ ಮಾತ್ರೆ ತೆಗೆದುಕೊಳ್ಳುವಾಗ 1 ಮಾತ್ರೆಯ ಬದಲಾಗಿ ಒಮ್ಮೆಲೇ 4 ಮಾತ್ರೆಗಳನ್ನು ನುಂಗಿದ್ದು ಅವಳಿಗೆ ಗುಳಗಿ ಹೊಟ್ಟೆಗೆ ಹೋಗಿ ಒದ್ದಾಡುತ್ತಾ ಸುಸ್ತಾಗಿ ಬಿದ್ದಿದ್ದು ಅವಳಿಗೆ ನಾನು ಮತ್ತು ನಮ್ಮ ಅಣ್ಣನಾದ ಹಳ್ಳೆಪ್ಪಗೌಡ ಬಿರಾದಾರ ಇಬ್ಬರೂ ಕೂಡಿ ಯಾದಗಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ನೀವು ಅಲ್ಲಿಗೆ ಬರ್ರಿ ಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ಮಗನಾದ ಸೋಮನಗೌಡ ತಂದೆ ಪ್ರಭುಗೌಡ ಬಿರಾದಾರ ಇಬ್ಬರೂ ಕೂಡಿ ಯಾದಗಿರಿ ಆಸ್ಪತ್ರೆಗೆ ಹೋಗಿ ನೋಡಲಾಗಿ ನಮ್ಮ ಮಗಳು ಯಾದಗಿರಿ ಆಸ್ಪತ್ರೆಯಲ್ಲಿ ಮಾತನಾಡದ ಸ್ಥಿತಿಲ್ಲಿ ಇದ್ದು ಅವಳಿಗೆ ಚಿಕಿತ್ಸೆ ನೀಡಿದ್ದು ಅಲ್ಲಿ 2 ದಿನ ಚಿಕಿತ್ಸೆ ಕೊಡಿಸಿ ಹೆಚ್ಚಿನ ಉಪಚಾರ ಕುರಿತು ರಾಯಚೂರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಿಸದೇ ಇಂದು ದಿನಾಂಕ 21/09/2022 ರಂದು 5.00 ಎಎಂ ಸುಮಾರಿಗೆ ಮೃತಪಟ್ಟಿರುತ್ತಾಳೆ. ನಮ್ಮ ಮಗಳಾದ ಶಿವಮ್ಮ @ ಸುವರ್ಣ ಫೀಟ್ಸ್ ಕಾಯಿಲೆಯ ಮಾತ್ರೆ ತೆಗೆದುಕೊಳ್ಳುವಾಗ ಆಕಸ್ಮಿಕವಾಗಿ ಹೆಚ್ಚು ಮಾತ್ರೆಗಳನ್ನು ಸೇವಿಸಿ ಬಿದ್ದು ಒದ್ದಾಡುತ್ತಿದ್ದಾಗ ಅವಳ ಗಂಡನಾದ ಬಾಪುಗೌಡ ಮತ್ತು ಭಾವನಾದ ಹಳ್ಳೆಪ್ಪಗೌಡ ಇವರು ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು ಅವಳ ಸಾವಿನಲ್ಲಿ ಯಾರ ಮೇಲೂ ಯಾವುದೇ ಸಂಶಯ ದೂರು ಇರುವುದಿಲ್ಲ. ನಮ್ಮ ಮಗಳಾದ ಶಿವಮ್ಮ @ ಸುವರ್ಣ ಗಂಡ ಬಾಪುಗೌಡ ಬಿರಾದಾರ ವ|| 28ವರ್ಷ ಜಾ|| ರೆಡ್ಡಿ ಉ|| ಮನೆಗೆಲಸ ಸಾ|| ವಂದಗನೂರ ತಾ|| ಸುರಪೂರ ಇವಳು ಆಕಸ್ಮಿಕವಾಗಿ ಮಾತ್ರೆ ಸೇವಿಸಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುತ್ತಾಳೆ. ಕಾರಣ ನಮ್ಮ ಮಗಳ ಮೃತದೇಹದ ಮುಂದಿನ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂಬರ 28/2022 ಕಲಂ 174 ಸಿ.ಆರ್.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ:16/09/2022 174 ಸಿ.ಆರ್.ಪಿ.ಸಿ: ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ:-ಮೃತಳಾದ ಶರಣಮ್ಮ @ ರೇಣುಕಾಗಂಡ ಶಿವಪ್ಪ ಛಲವಾದಿಗೆ ಈಕೆಗೆ 5 ವರ್ಷಗಳ ಹಿಂದೆ ಮದುವೆಯಾಗಿದ್ದು. ಇಬ್ಬರುಗಂಡು ಮಕ್ಕಳಿರುತ್ತಾರೆ ಮದುವೆಯಾಗಿನಿಂದಗಂಡ-ಹೆಂಡತಿಇಬ್ಬರುಅನೋನ್ಯವಾಗಿರುತ್ತಾರೆ. ಹೀಗಿದ್ದುಮೃತಶರಣಮ್ಮ @ ರೇಣುಕಾಈಕೆಗೆ ಸುಮಾರು ದಿವಸಗಳಿಂದ ಆಗಾಗ್ಗೆ ಹೋಟ್ಟೆನೋವು ಕಾಣಿಸಿ ಆಗುತ್ತಿತ್ತುಅದಕ್ಕೆ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಮರೆಮ್ಮಅಳಿಯ ಶಿವಪ್ಪ ಹಾಗೂ ಇತರರುಕೂಡಿಶರಣಮ್ಮ @ ರೇಣುಕಾ ಇವಳಿಗೆ ಖಾಸಗಿಯಾಗಿಅಲ್ಲಲ್ಲಿಆಸ್ಪತ್ರೆಗೆ ತೋರಿಸಿರುತ್ತದೆ. ಮತ್ತುಆರ್ಯವೇದಿಕಔಷದವನ್ನು ಕೊಡಿಸಿದ್ದರೂ ಕೂಡ ಹೊಟ್ಟೆನೋವುಕಡಿಮೆಆಗಿರಲಿಲ್ಲ ಶರಣಮ್ಮ @ ರೇಣುಕಾ ಇವಳು ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡುಜೀವನದಲ್ಲಿಜೀಗುಪ್ಸೆ ಹೊಂದಿ ದಿನಾಂಕ:20/09/2022 ರಂದು ಮಧ್ಯಾಹ್ನ 12:30 ಪಿಎಮ್ ಸುಮಾರಿಗೆತನ್ನಗಂಡನ ಮನೆಯಲ್ಲಿಕ್ರಿಮಿನಾಶಕಔಷದ ಸೇವನೆ ಮಾಡಿದ್ದು,ಉಪಚಾರಕ್ಕೆತೆಗೆದುಕೊಂಡುಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರಗೆ ಹೋಗುತ್ತಿರವಾಗ ದಾರಿಯಲ್ಲಿ ಮಾರ್ಗ ಮಧ್ಯ2:45 ಪಿಎಮ್ಕ್ಕೆಮೃತಪಟ್ಟಿರುತ್ತಾಳೆ.ಮೃತಳ ಮರಣದಲ್ಲಿ ನಮಗೆ ಯಾರ ಮೇಲೆ ಯಾವುದೇ ಪಿಯರ್ಾಧಿ-ಸಂಶಯ ವೈಗಾರೆ ಇರುವುದಿಲ್ಲ ಎಂದು ಮುಂದಿನ ಕಾನೂನು ಕ್ರಮ ಜರಗಿಸುವ ಕುರಿತು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂಬರ: 16/2022 ಕಲಂ:174 ಸಿಆರ್ಪಿಸಿ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ಇತ್ತೀಚಿನ ನವೀಕರಣ​ : 15-11-2022 10:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080