ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 22-10-2021

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ: 156/2021 ಕಲಂ:188,290,291 ಸಂ 149 ಐಪಿಸಿ ಮತ್ತು ಕಲಂ 36,37,109 ಕೆಪಿ ಆಕ್ಟ್. : ಇಂದು ದಿನಾಂಕ 21/10/2021 ರಂದು 3.00 ಪಿಎಂ ಕ್ಕೆ ಫಿರ್ಯಾದಿದಾರರಾದ ಕಾಶಿನಾಥ ತಂದೆ ಭೀಮರಾಯ ನಾಯ್ಕೋಡಿ ವ|| 25ವರ್ಷ ಜಾ|| ಹಿಂದೂ ಕಬ್ಬಲಿಗ ಉ|| ಗ್ರಾಮ ಲೆಕ್ಕಾಧಿಕಾರಿಗಳು ಗೌಡಗೇರಾ ಹಾಗೂ ಕೋವಿಡ್-19 ನೋಡಲ್ ಅಧಿಕಾರಿ ಇವರು ಠಾಣೆಗೆ ಬಂದು ದೂರು ನೀಡಿದ್ದೇನೆಂದರೆ, ನಿನ್ನೆ ದಿನಾಂಕ: 20/10/2021 ರಂದು ಮುಂಜಾನೆ 11.00 ಗಂಟೆಯ ಸುಮಾರಿಗೆ ಮಾನ್ಯ ತಹಸೀಲ್ದಾರರು ಸುರಪೂರ ರವರ ಆದೇಶದಂತೆ ಗೌಡಗೇರಾ ಗ್ರಾಮದಲ್ಲಿ ನಾನು ಹಾಗೂ ಗ್ರಾಮ ಸಹಾಯಕರಾದ ಶಂಕ್ರೆಪ್ಪ ಜುಮ್ಮಪ್ಪ ನಾಟೀಕಾರ ಇವರೊಂದಿಗೆ ಕೂಡಿಕೊಂಡು ಕೋವೀಡ್-19 ಪ್ರಯುಕ್ತ ತಿರುಗಾಡುತ್ತಾ ಗೌಡಗೇರಾ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ತಿರುಗಾಡುತ್ತಿದ್ದಾಗ ದಿನಾಂಕ 20/10/2021 ರಂದು 11.30 ಎಎಮ್ ಸುಮಾರಿಗೆ ವಾಲ್ಮೀಕಿ ಸಮುದಾಯದ ಯುವಕರು ವಾಲ್ಮೀಕಿ ಜಯಂತಿ ಆಚರಣೆಯನ್ನು ಭಾರೀ ಜನಸಂದಣಿಯೊಂದಿಗೆ ಆಚರಿಸುತ್ತಾ ಸೌಂಡ್ ಬಾಕ್ಸ್ ಉಪಯೋಗಿಸಿ ವಾಲ್ಮೀಕಿ ವೃತ್ತದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜನರು ಮೆರವಣೆಗೆ ಮಾಡುತ್ತಾ ಹೊರಟಿದ್ದು ಸದರಿ ಮೆರವಣಿಗೆಯ ಉಸ್ತುವಾರಿಗಳಾದ 1] ಭೀಮಣ್ಣ ತಂದೆ ಹಣಮಂತ್ರಾಯ ಹಸನಾಪೂರ ಸಂಗಡ 9 ಜನರು ಸಾ|| ಗೌಡಗೇರಾ ಇವರೆಲ್ಲರೂ ಸೇರಿ ಕೋವಿಡ್ ನಿಯಮ ಉಲ್ಲಂಘಿಸಿ, ಧ್ವನಿವರ್ಧಕ ಬಳಸಲು ಯಾವುದೇ ಪರವಾನಿಗೆ ಪಡೆಯದೇ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಅತೀ ಹೊರಸೂಸುವ ಧ್ವನಿವರ್ಧಕ ಉಪಯೋಗಿಸಿ ಧ್ವನಿವರ್ಧಕ ಪರವಾನಿಗೆ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದು ಕ್ರಮ ಜರುಗಿಸಬೇಕು ಅಂತಾ ಅಜರ್ಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 156/2021 ಕಲಂ: 188,290,291 ಸಂ 149 ಐಪಿಸಿ ಮತ್ತು ಕಲಂ 36,37,109 ಕೆಪಿ ಆಕ್ಟ್ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 157/2021 ಕಲಂ: 143,147,341,323,355 504, 506 ಸಂ 149 ಐಪಿಸಿ : ಇಂದು ದಿನಾಂಕ 21.10.2021 ರಂದು 06.15 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಸುನಿತಾ ಗಂಡ ನಿಂಗಪ್ಪ ಹೊಸಮನಿ ವ|| 25 ಜಾ|| ಹಿಂದು ಹೊಲೆಯ ಉ|| ಕೂಲಿಕೆಲಸ ಸಾ|| ಯಕ್ತಾಪೂರ ತಾ|| ಸುರಪೂರ ಇದ್ದು ತಮ್ಮಲ್ಲಿ ಅಜರ್ಿ ನೀಡುವುದೇನೆಂದರೆ, ನನ್ನ ಗಂಡ ನಿಂಗಪ್ಪ ಹಾಗು ನಮ್ಮ ಸಂಬಂದಿಯಾದ ಶಿವಪ್ಪ ತಂದೆ ಗುತ್ತಪ್ಪ ಯಕ್ತಾಪೂರ ಇವರ ಮದ್ಯ ಹೊಲದ ವಿಷಯದಲ್ಲಿ ತಕರಾರು ನಡೆದು ಸದರಿಯವನು ನನ್ನ ಗಂಡನ ಮೇಲೆ ಹಗೆತನ ಸಾದಿಸುತ್ತಿದ್ದನು. ಹೀಗಿದ್ದು ನಿನ್ನೆ ದಿನಾಂಕ 20.10.2021 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದು ನನ್ನ ಗಂಡನು ನಮ್ಮ ಮನೆಯ ಮುಂದಿನ ರೋಡಿನಲ್ಲಿ ಹಾದು ಮನೆಗೆ ಬರುತ್ತಿದ್ದಾಗ ಅದೇ ಸಮಯಕ್ಕೆ ನಮ್ಮ ಜನಾಂಗದ 1] ಶಿವಪ್ಪ ತಂದೆ ಗುತ್ತಪ್ಪ ಹೊಸಮನಿ 2] ಶರಣಮ್ಮ ಗಂಡ ಶಿವಪ್ಪ ಹೊಸಮನಿ 3] ಕಾಂತಮ್ಮ ಗಂಡ ಗುತ್ತಪ್ಪ ಹೊಸಮನಿ ಸಾ|| ಎಲ್ಲರೂ ಯಕ್ತಾಪೂರ ಹಾಗು 4] ಯಮನಪ್ಪ ತಂದೆ ಚೆನ್ನಬಸಪ್ಪ ಮೂಲಿಮನಿ 5] ಶರಣಪ್ಪ ತಂದೆ ಬಸಪ್ಪ ಮೂಲಿಮನಿ 6] ಮಲ್ಲಪ್ಪ ತಂದೆ ಬಸಪ್ಪ ಮೂಲಿಮನಿ ಎಲ್ಲರೂ ಸಾ|| ಬೇವಿನಾಳ ಎಸ್ ಕೆ ಹಾಗು 7] ಬಸವರಾಜ ತಂದೆ ನಿಂಗಪ್ಪ ಕಟ್ಟಿಮನಿ 8] ಬಸವರಾಜ ತಂ ಗುತ್ತಪ್ಪ ದಂಡಕಾತಿ ಇಬ್ಬರೂ ಸಾ|| ಚಿಂಚೋಳಿ ಈ ಎಲ್ಲಾ ಜನರು ಗುಂಪು ಕಟ್ಟಿಕೊಂಡು ಬಂದವರೇ ನನ್ನ ಗಂಡನಿಗೆ ತಡೆದು ನಿಲ್ಲಿಸಿ ಏನಲೇ ಸೂಳೇ ಮಗನೇ ನಿನ್ನು ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ಕೈಯಿಂದ ಹೊಡೆಯುತ್ತಿದ್ದಾಗ ಅವರಲ್ಲಿಯ ಶರಣಪ್ಪ ಈತನು ತನ್ನ ಎಡಗಾಲ ಚೆಪ್ಪಲಿಯಿಂದ ನನ್ನ ಗಂಡನಿಗೆ ಹೊಡೆದನು ನಂತರ ಎಲ್ಲರೂ ಕೂಡಿ ನನ್ನ ಗಂಡನಿಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನನ್ನ ಗಂಡನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನಾನು ಹಾಗು ನಮ್ಮ ಸಂಬಂದಿ ಬಸಪ್ಪ ತಂದೆ ಶಿವಲಿಂಗಪ್ಪ ಮತ್ತು ಗಂಗಮ್ಮ ಗಂಡ ಬಸಪ್ಪ ನಾವು ಮೂರು ಜನರು ಸೇರಿ ಸದರಿಯವರು ನನ್ನ ಗಂಡನಿಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡೆವು. ನಂತರ ಎಲ್ಲರೂ ನನ್ನ ಗಂಡನಿಗೆ ಹೊಡೆಯುವದನ್ನು ಬಿಟ್ಟು ಸೂಳೇ ಮಗನೇ ಇನ್ನೊಮ್ಮೆ ನಮ್ಮ ತಂಟಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನಂತರ ನಾವು ಮನೆಯಲ್ಲಿ ವಿಚಾರಿಸಿ ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ಮೇಲ್ಕಾಣಿಸಿದ ಎಂಟು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 157/2021 ಕಲಂ 143,147,341,323,355,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 158/2021 ಕಲಂ: 143,147,341,323,355 504, 506 ಸಂ 149 ಐಪಿಸಿ : ಇಂದು ದಿನಾಂಕ 21.10.2021 ರಂದು 08.15 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಶಿವಪ್ಪ ತಂದೆ ಗುತ್ತಪ್ಪ ಹೊಸಮನಿ ವ|| 34 ಜಾ|| ಹಿಂದು ಹೊಲೆಯ ಉ|| ಕೂಲಿಕೆಲಸ ಸಾ|| ಯಕ್ತಾಪೂರ ತಾ|| ಸುರಪೂರ ಇದ್ದು ತಮ್ಮಲ್ಲಿ ಅಜರ್ಿ ನೀಡುವುದೇನೆಂದರೆ, ನನ್ನ ಹಾಗು ನಮ್ಮ ಸಂಬಂದಿಯಾದ ನಿಂಗಪ್ಪ ತಂದೆ ಶಿವಲಿಂಗಪ್ಪ ಹೊಸಮನಿ ಇವರ ಮದ್ಯ ಹೊಲದ ವಿಷಯದಲ್ಲಿ ತಕರಾರು ನಡೆದು ಸದರಿಯವನು ನನ್ನ ಪಾಲಿಗೆ ಬರಬೇಕಾದ ಹೊಲ ಕೊಡದೇ ಇರುವದರಿಂದ ನಾನು ಕೇಳಿದ್ದಕ್ಕೆ ಸದರಿಯವನು ನನ್ನ ಮೇಲೆ ಹಗೆತನ ಸಾದಿಸುತ್ತಿದ್ದನು. ಹೀಗಿದ್ದು ನಿನ್ನೆ ದಿನಾಂಕ 20.10.2021 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ನಮ್ಮ ಸಂಬಂದಿಯಾದ ನಿಂಗಪ್ಪ ಹೊಸಮನಿ ಇವರ ಮನೆಯ ಮುಂದಿನ ರೋಡಿನಲ್ಲಿ ಹಾದು ಮನೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ನಮ್ಮ ಜನಾಂಗದ ಹಾಗು ಸಂಬಂದಿಯವರಾದ 1] ನಿಂಗಪ್ಪ ತಂದೆ ಶಿವಲಿಂಗಪ್ಪ ಹೊಸಮನಿ 2] ಬಸಪ್ಪ ತಂದೆ ಶಿವಲಿಂಗಪ್ಪ ಹೊಸಮನಿ 3] ರವಿ ತಂದೆ ನಿಂಗಪ್ಪ ಹೊಸಮನಿ 4] ಸಾಹೇಬಣ್ಣ ತಂದೆ ಬಸಪ್ಪ ಹೊಸಮನಿ 5] ಗಂಗಮ್ಮ ಗಂಡ ಬಸಪ್ಪ ಹೊಸಮನಿ 6] ಸುನಿತಾ ಗಂಡ ನಿಂಗಪ್ಪ ಹೊಸಮನಿ 7] ಮಹೇಶ ತಂದೆ ಬಸಪ್ಪ ಹೊಸಮನಿ ಎಲ್ಲರೂ ಸಾ|| ಯಕ್ತಾಪೂರ ಈ ಎಲ್ಲಾ ಜನರು ಗುಂಪು ಕಟ್ಟಿಕೊಂಡು ಬಂದವರೇ ನನಗೆ ತಡೆದು ನಿಲ್ಲಿಸಿ ಏನಲೇ ಸೂಳೇ ಮಗನೇ ನಿನ್ನು ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈಯುತ್ತಾ ಮಗನೇ ಆಸ್ತಿ ಪಾಲು ಕೇಳುತ್ತೀಯಾ ಸೂಳೇ ಮಗನೇ ಅಂತ ಅನ್ನುತ್ತಾ ಎಲ್ಲರೂ ಕೈಯಿಂದ ಹೊಡೆಯುತ್ತಿದ್ದಾಗ ಅವರಲ್ಲಿಯ ನಿಂಗಪ್ಪ ಹೊಸಮನಿ ಈತನು ತನ್ನ ಎಡಗಾಲ ಚೆಪ್ಪಲಿಯಿಂದ ನನ್ನ ತಲೆಗೆ ಹೊಡೆದನು ನಂತರ ಎಲ್ಲರೂ ಕೂಡಿ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಹೊರಟಿದ್ದ ಬಸವರಾಜ ಕಟ್ಟಿಮನಿ ಸಾ|| ಚಿಂಚೋಳಿ ಹಾಗು ಮರೆಪ್ಪ ಮೂಲಿಮನಿ ಇವರು ಬಂದು ಸದರಿಯವರು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಎಲ್ಲರೂ ನನಗೆ ಹೊಡೆಯುವದನ್ನು ಬಿಟ್ಟು ಸೂಳೇ ಮಗನೇ ಇನ್ನೊಮ್ಮೆ ನಮ್ಮ ತಂಟಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನಂತರ ನಾನು ನೇರವಾಗಿ ಮನೆಗೆ ಹೋಗಿ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ಮೇಲ್ಕಾಣಿಸಿದ ಏಳು ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 158/2021 ಕಲಂ 143,147,341,323,355,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಸಂಚಾರಿ ಪೊಲೀಸ ಠಾಣೆ
ಗುನ್ನೆ ನಂ: 53/2021 ಕಲಂ 279, 338 ಐಪಿಸಿ : ಇಂದು ದಿನಾಂಕ 21/10/2021 ರಂದು 12 ಪಿ.ಎಂ.ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಚಾಮನಳ್ಳಿ ತಾಂಡ ಕ್ರಾಸ್ ಹತ್ತಿರ ರಸ್ತೆ ಬದಿಯಲ್ಲಿ ನಿಂತಿದ್ದ ಈ ಕೇಸಿನ ಗಾಯಾಳುವಿಗೆ ಈ ಕೇಸಿನ ಆರೋಪಿತನು ತನ್ನ ಲಾರಿ ನಂಬರ ಎಮ್.ಎಚ್-25, ಎಜೆ-1488 ನೆದ್ದನ್ನು ಯಾದಗಿರಿ ಕಡೆಯಿಂದ ವಾಡಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ಗಾಯಾಳುವಿಗೆ ನೆರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ಗಾಯಾಳುವಿಗೆ ತಲೆಗೆ ಭಾರೀ ಒಳಪೆಟ್ಟಾಗಿದ್ದು, ಮುಖಕ್ಕೆ ರಕ್ತಗಾಯವಾಗಿದ್ದು ಈ ಘಟನೆಗೆ ಕಾರಣನಾದ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಬಗ್ಗೆ ಪಿಯರ್ಾದಿ ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

 


ಯಾದಗಿರ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 141/2021 ಕಲಂ. 78 (3) ಕೆ.ಪಿ ಆಕ್ಟ್. : ಇಂದು ದಿನಾಂಕ 21-10-2021 ರಂದು ಮುಂಜಾನೆ 11-00 ಗಂಟೆಗೆ ಠಾಣೆಯಲ್ಲಿರುವಾಗ ಮಾಹಿತಿ ಬಂದಿದ್ದೆನೆಂದರೆ ಯಡ್ಡಳ್ಳಿ ಗ್ರಾಮದಲ್ಲಿ ಯಾರೊ ಒಬ್ಭ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಕೂಡಲೇ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ದತಾತ್ರಯ ಎ.ಎಸ್.ಐ,ಶ್ರೀ ಪ್ರಭುಗೌಡ ಸಿಪಿಸಿ-361, ಶ್ರೀ ಲಾಲ ಅಹ್ಮದ ಪಿಸಿ.367 ಹಾಗೂ ಪಂಚರಾದ 1) ಸಂತೋಷ ತಂದೆ ರಾಮಣ್ಣ ಚಿಂತನಳ್ಳಿ ವ:25 ಜಾ:ಕಬ್ಬಲಿಗ 2) ದೇವಿಂದ್ರಪ್ಪ ತಂದೆ ಶರಣಪ್ಪ ಅಚೊಲಾ ವ:37 ವರ್ಷ ಜಾ:ಕಬ್ಬಲಿಗ ಸಾ:ಇಬ್ಬರೂ ಹನುಮಾನ ನಗರ ಯಾದಗಿರಿ.ಇವರಿಗೆ ದಾಳಿಯ ಮಾಹಿತಿ ತಿಳಿಸಿ ಎಲ್ಲರೊ ಸೇರಿಕೊಂಡು ಠಾಣೆಯಿಂದ ನಮ್ಮ ಸಕರ್ಾರಿ ಜೀಪ ನಂ.ಕೆ.ಎ.33/ ಜಿ.-0115 ನೆದ್ದರಲ್ಲಿ ಕುಳಿತುಕೊಂಡು ಹೊರಟುದ ಯಡ್ಡಳ್ಳಿ ಗ್ರಾಮಕ್ಕೆ ತಲುಪಿ ಸಕರ್ಾರಿ ಪ್ರಾಥಮೀಕ ಶಾಲೆಯ ಹತ್ತಿರ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತು ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಗೆದ್ದು ಮಜಾ ಮಾಡಿರಿ ಅಂತಾ ಕೂಗಾಡುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಕರೆಯುತ್ತಿದ್ದನು ಮತ್ತು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನು, ಆಗ ನಾವೆಲ್ಲರೂ ಕೂಡಿ ಒಮ್ಮೆಲೆ ದಾಳಿ ಮಾಡಿ ಮುಂಜಾನೆ 11:30 ಗಂಟೆಗೆ ಅವನನ್ನು ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ದಂಡಪ್ಪ ತಂದೆ ದ್ಯಾವಪ್ಪ ದಂಡಯ್ಯನೊರ ವ:34 ವರ್ಷ ಜಾ:ಬೇಡರ ಸಾ:ಯಡ್ಡಳ್ಳಿ ಅಂತಾ ತಿಳಿಸಿದನು. ಅವನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 3030/ ರೂ ನಗದು ಹಣ, ಮೂರು ಮಟಕಾ ನಂಬರ ಬರೆದ ಚೀಟಿ ಮತ್ತು ಒಂದು ಬಾಲಪೆನ್ನ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ನಮ್ಮ ವಶಕ್ಕೆ ಪಡೆದುಕೊಂಡೆನು, ಈ ಎಲ್ಲಾ ಹಣ ಮತ್ತು ಮಟಕಾ ನಂಬರುಗಳು ಯಾರಿಗೆ ಕೊಡುತ್ತಿ ಅಂತಾ ಕೇಳಿದಾಗ ಅವನು ಈ ಮೂದಲು ನಮ್ಮ ಮಾವನಾದ ಸಾಬಣ್ಣ ಜಿನಕೆರಾ ಇತನಿಗೆ ಕೊಡುತ್ತಿದ್ದೆನು ಆದರೆ ಸದರಿ ನಮ್ಮ ಮಾವ ಇದೆ ಕಾರಣಕ್ಕಾಗಿ ಗಡಿಪಾರು ವಿಚಾರಣೆಯಲ್ಲಿದ್ದು ಕಾರಣ ಈಗ ನ್ಮಮ ಅಕ್ಕಳಾದ ಮಂಜುಳಾ ಗಂಡ ಸಾಬಣ್ಣ ವ:38 ವರ್ಷ ಸಾ:ಜಿನಕೇರಾ ಇವಳಿಗೆ ಕೊಡುವುದಾಗಿ ತಿಳಿಸಿದನು ಈ ಸವಿಸ್ತಾರವಾದ ಪಂಚನಾಮೆಯನ್ನು ಮಧ್ಯಾಹ್ನ 11:30 ಗಂಟೆಯಿಂದ 12:30 ಗಂಟೆಯವರೆಗೆ ಮಾಡಿಕೊಂಡು ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಮಧ್ಯಾಹ್ನ 1:00 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ. ರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿಯವನ ವಿರುಧ ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ 2021 ರ ಪ್ರಕಾರ ಕ್ರಮ ಜರುಗಿಸಲು ನಿಡಿದ ವರದಿ ಆಧಾರದ ಮೇಲಿಂದ . ಠಾಣಾ ಗುನ್ನೆ 141/2021 ಕಲಂ 78(3) ಕೆ.ಪಿ. ಆ್ಯಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 22-10-2021 09:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080