ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 22-10-2022

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 178/2022 ಕಲಂ. 354(ಡಿ), 504, 506, ಐ.ಪಿ.ಸಿ. ಮತ್ತು 11 ಪೋಕ್ಸೊ-2012: ಇಂದು ದಿನಾಂಕ 21.10.2022 ರಂದು 4 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಅಮೀನಾಬೇಗಂ ಗಂಡ ಮಹ್ಮದ್ ಖಾಲೀದ್ ಸಗರಿ ವ|| 37 ಜಾ|| ಮುಸ್ಲೀಂ ಉ|| ಮನೆಕೆಲಸ ಸಾ|| ಗುತ್ತಿಪೇಠ ಶಹಾಪೂರ ಹಾ||ವ|| ಶಹಾ ಕಾಲೋನಿ ಶಹಾಪೂರ ತಾ|| ಶಹಾಪೂರ. ಇವರು ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿ ಅಜರ್ಿ ಸಾರಾಂಶವೇನಂದರೆ ನನಗೆ ದಿಲ್ಶಾದಬೇಗಂ ವ|| 19, ಕೈರೂನ್ ಬೇಗಂ ವ|| 18, ತಾಹೀರಾ ವ|| 12 ಹೀಗೆ ಮೂರು ಜನ ಹೆಣ್ಣು ಮಕ್ಕಳಿರುತ್ತಾರೆ. ಹಾಗು ಮಹ್ಮದ್ ಆರೀಫ್ ವ|| 21 ಎನ್ನುವ ಒಬ್ಬ ಗಂಡು ಮಗನಿರುತ್ತಾನೆ. ನನ್ನ ಕಿರಿಯ ಮಗಳಾದ ತಾಹೀರಾ ತಂದೆ ಮಹ್ಮದ್ ಖಾಲೀದ್ ಸಗರಿ ವ|| 12 ಇವಳು ಶಹಾಪೂರ ಪಟ್ಟಣದ ಸುಮಿತ್ರಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುತ್ತಾಳೆ. ಅವಳಿಗೆ ದಿನಾಲು ನಾನೇ ಕರೆದುಕೊಂಡು ಹೋಗಿ ಶಾಲೆಗೆ ಬಿಟ್ಟು ಬರುವದು ಹಾಗು ಶಾಲೆ ಬಿಟ್ಟ ನಂತರವೂ ಸಹ ನಾನೇ ಮನೆಗೆ ಕರೆದುಕೊಂಡು ಬರುತ್ತೇನೆ. ನನ್ನ ಮಗಳಾದ ತಾಹೀರಾ ಇವಳು ನನ್ನ ಮುಂದೆ ತಿಳಿಸಿದ್ದೇನಂದರೆ ಅವಳು ಶಾಲೆಗೆ ಹೋಗಿ ವಿಶ್ರಾಂತಿ ಸಮಯದಲ್ಲಿ ಶಾಲೆಯ ಮೈದಾನದಲ್ಲಿ ತಿರುಗಾಡುತ್ತಿದ್ದಾಗ ಶಹಾಪೂರ ಪಟ್ಟಣದ ಗುತ್ತಿಪೇಠ ಏರಿಯಾದ ಕಬ್ಬಲಿಗ ಜನಾಂಗದ ರಾಜು ತಂದೆ ಭೀಮರಾಯ ಸಗರ ಈತನು ನನ್ನ ಹಿಂದೆ ಹಿಂದೆ ಬರುವದು, ಹಾಗು ನನಗೆ ನಿಮ್ಮ ವೈನಿ ಬಂದಳು ಅಂತ ಆತನ ಗೆಳೆಯರ ಮುಂದೆ ಹಿಯ್ಯಾಳಿಸಿ ಮಾತನಾಡುವದು ಹಾಗು ಚೂಡಾಯಿಸುವದು ಹಾಗು ದಬ್ಬಿಸಿಕೊಡುವದು ಮಾಡುತ್ತಿದ್ದಾನೆ ಅಂತ ತಿಳಿಸಿದಾಗ ನಾನು ಹಾಗು ನಮ್ಮ ಮಗನಾದ ಮಹ್ಮದ್ ಆರೀಫ್ ಇಬ್ಬರೂ ಕೂಡಿ ನಮ್ಮ ಮಗಳಿಗೆ ಚೂಡಾಯಿಸುತ್ತಿದ್ದ ರಾಜು ಸಗರ ಈತನಿಗೆ ತಿಳಿಸಿ ಬುದ್ದಿ ಹೇಳಿದ್ದು ಇರುತ್ತದೆ. ಹೀಗಿದ್ದು ದಿನಾಂಕ 19.10.2022 ರಂದು ಬೆಳಿಗ್ಗೆ 09.30 ಗಂಟೆಗೆ ಮಗಳಾದ ತಾಹೀರಾ ಇವಳಿಗೆ ಶಾಲೆಗೆ ಬಿಟ್ಟು ಬಂದಿದ್ದು ನಂತರ ಸಾಯಂಕಾಲ 4.30 ಗಂಟೆಗೆ ಮಗಳ ಶಾಲೆಗೆ ಹೋಗಿ ಮನೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ಮಗಳಿಗೆ ಮನಗೆ ಕರೆದುಯಕೊಂಡ ಬಂದ ಕೂಡಲೇ ಮಗಳಾದ ತಾಹೀರಾ ಇವಳು ಅಳುತ್ತಾ ಇಂದು 11.30 ಗಂಟೆಗೆ ನಮ್ಮ ಶಾಲೆಯಲ್ಲಿ ಮದ್ಯಂತರ ವಿರಾಮಕ್ಕೆ ಬಿಟ್ಟಾಗ ಈ ಹಿಂದಿನಿಂದಲೂ ನನಗೆ ಚೂಡಾಯಿಸುತ್ತಾ ಬಂದಿದ್ದ ಶಹಾಪೂರ ಪಟ್ಟಣದ ಗುತ್ತಿಪೇಠ ಏರಿಯಾದ ಕಬ್ಬಲಿಗ ಜನಾಂಗದ ರಾಜು ತಂದೆ ಭೀಮರಾಯ ಸಗರ ಈತನು ನನಗೆ ದಿಟ್ಟಿಸಿ ನೋಡುವದು, ಸನ್ನೆ ಮಾಡಿ ಕರೆಯುತ್ತಿದ್ದಾಗ ನಾನು ಹೋಗದಿದ್ದಕ್ಕೆ ಆತನೇ ನನ್ನ ಹತ್ತಿರ ಬಂದು ನನ್ನ ಓಡಣಿ ಹಾಗು ಕೈಹಿಡಿದು ಎಳೆದಾಡಿ ಶಾಲೆಯ ಹುಡುಗರ ಮುಂದೆ ಅವಮಾನ ಮಾಡಿದ್ದು ಅಲ್ಲದೇ ಈ ವಿಷಯ ನಿಮ್ಮ ತಾಯಿ ಹಾಗು ಅಣ್ಣನ ಮುಂದೆ ಹೇಳಿದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಮಗಳೆ ಅಂತ ಅವಾಚ್ಯವಾಗಿ ಬೈದು ಜೀವದ ಭಯ ಹಾಕಿ ಹೋಗಿರುತ್ತಾನೆ ಅಂತ ತಿಳಿಸಿದಾಗ ಈ ವಿಷಯದಲ್ಲಿ ನಾನು ಹಾಗು ನಮ್ಮ ಮಗ ಮಹ್ಮದ್ ಆರೀಫ್ ಇಬ್ಬರೂ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಅಲ್ಲದೇ ನನ್ನ ಮಗಳಿಗೆ ರಾಜು ಸಗರ ಈತನು ದೈಹಿಕ ಹಲ್ಲೆ ಹಾಗು ದೈಹಿಕ ಸ್ಪರ್ಶ ಮಾಡದ ಕಾರಣ ನನ್ನ ಮಗಳಿಗೆ ಯಾವದೇ ವೈಧ್ಯಕೀಯ ಪರೀಕ್ಷೆ ಒಳಪಡಿಸಲು ಇಚ್ಛಿಸುವದಿಲ್ಲ ಕಾರಣ ನನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿ ಮನೆಯಲ್ಲಿ ಹೇಳಿದರೆ ಅವಳ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿದ ಶಹಾಪೂರ ಪಟ್ಟಣದ ಗುತ್ತಿಪೇಠ ಏರಿಯಾದ ಕಬ್ಬಲಿಗ ಜನಾಂಗದ ರಾಜು ತಂದೆ ಭೀಮರಾಯ ಸಗರ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಈ ವಿನಂತಿ ಅಜರ್ಿ ಇರುತ್ತದೆ. ಅಂತ ಇದ್ದ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 178/2022 ಕಲಂ 354[ಡಿ], 504, 506 ಐಪಿಸಿ ಮತ್ತು ಕಲಂ 11 ಪೊಕ್ಸೋ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 155/2022 ಕಲಂ 379 ಐಪಿಸಿ: :- ದಿನಾಂಕ 21-10-2022 ರಂದು ರಾತ್ರಿ 8-30 ಗಂಟೆಗೆ ಪಿಯಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ಈಗ ಸುಮಾರು 2 ತಿಂಗಳ ಹಿಂದೆ ನಾಗರಾಜ ತಂದೆ ಸಾಯಿಬಣ್ಣ ನಾಯ್ಕೋಡಿ ಸಾ|| ಮುಡಬೂಳ ತಾ|| ಶಹಾಪೂರ ಇವರ ಕಡೆಯಿಂದ ಅಂಬೇಂಡ್ಕರ ನಿಗಮಕ್ಕೆ 3 ಎಕರೆ 13 ಗುಂಟೆ ಜಮೀನನ್ನು ಮಾರಾಟ ಮಾಡಿಸಿದ್ದು ಇರುತ್ತದೆ ಮಾರಾಟ ಮಾಡಿಸಿದ ಹಣ ನಾಗರಾಜ ಈತನ ಖಾತೆಗೆ ಜಮಾ ಆಗಿದ್ದರಿಂದ ಜಮಾ ಆದ ಹಣವನ್ನು ಡ್ರಾ ಮಾಡಲು ನಾನು ಮತ್ತು ನಾಗರಾಜ ಇಬ್ಬರು ಶಹಾಪೂರದ ಎಕ್ಸೀಸ್ ಬ್ಯಾಂಕ್ ಗೆ ಹೋಗಿ ನನಗೆ ಕೊಡಬೇಕಾದ ಒಟ್ಟು ಹಣ ಹಣ 188000=00 ಹಣವನ್ನು ಡ್ರಾ ಮಾಡಿ ನಾಗರಾಜ ಈತನು ಡ್ರಾ ಮಾಡಿದ ಹಣವನ್ನು ನನಗೆ ಕೊಟ್ಟಿರುತ್ತಾನೆ. ಆತನು ಕೊಟ್ಟ ಹಣದಲ್ಲಿ 8000=00 ರೂಪಾಯಿಯನ್ನು ನಾನು ತೆಗೆದುಕೊಂಡು ಕೀಸೆದಲ್ಲಿ ಇಟ್ಟುಕೊಂಡಿದ್ದು, ಉಳಿದ ಹಣವನ್ನು ಬ್ಯಾಗಿನಲ್ಲಿ ಇಟ್ಟಿದ್ದೆನು, ನಂತರ ಹಣ ತೆಗೆದುಕೊಂಡು ಮೋಟರ ಸೈಕಲ್ ಮೇಲೆ ನಾಗರಾಜ ಈತನು ನನಗೆ ಬ್ಯಾಂಕನಿಂದ ಶಹಾಪೂರದ ವಿಧ್ಯಾರಣ್ಯ ಶಾಲೆ ವರೆಗೆ ಬಿಟ್ಟನು, ಅಲ್ಲಿಂದ ನಾನು ಭೀಮರೆಡ್ಡಿ ಇವರ ಕಾರಿನಲ್ಲಿ ಕುಳಿತು ಶಹಾಪೂರದಿಂದ ಯಾದಗಿರಿ ಕಡೆಗೆ ಬರುತಿದ್ದೆವು, ನಾವು ಖಾನಪೂರದಲ್ಲಿ ಬಂದು ಈ ಮೋದಲು ನಮಗೆ ಯಾದಗಿರಿಯ ಹತ್ತಿರ ಇರುವ ಹೊಲವನ್ನು ತೋರಿಸಿದ ಶ್ರೀಮಂತ ತಂದೆ ಸಾಯಿಬಣ್ಣ ಮತ್ತು ಮರೆಪ್ಪ ತಂದೆ ಮಲ್ಲಪ್ಪ ಇವರಿಗೆ ಕರೆ ಮಾಡಿ ನಾವು ಖಾನಪೂರದಲ್ಲಿ ಇದ್ದೆವೆ ಯಾದಗಿರಿಗೆ ಹೋಗೋಣ ಬರ್ರಿ ಅಂತಾ ತಿಳಿಸಿ ಅವರು ಬರುವರೆಗೆ ಖಾನಾಪೂರದಲ್ಲಿ ನಿಂತಿದ್ದೆವು, ಸ್ವಲ್ಪ ಸಮಯದ ನಂತರ ಅವರಿಬ್ಬರು ಮೋಟರ ಸೈಕಲ್ ಮೇಲೆ ಬಂದರು. ಅವರು ತಂದ ಮೋಟರ ಸೈಕಲ್ ಖಾನಾಪೂರದಲ್ಲಿ ನಿಲ್ಲಿಸಿ ಎಲ್ಲರು ಸೇರಿ ನಮ್ಮ ಕಾರಿನಲ್ಲಿ ಯಾದಗಿರಿಯ ಹತ್ತಿರ ಇರುವ ಅಶೋಕ ನಗರ ಸಿಮಾಂತರದಲ್ಲಿ ಬರುವ ಹೊಲವನ್ನು ನೋಡಲು ಹೋಗಬೇಕಂತ ನಾವು ಆಶನಾಳ ಕ್ರಾಸ ಮಾರ್ಗವಾಗಿ ಹೊಲಕ್ಕೆ ಹೋಗಬೆಕಂತ ಮಾಡಿದ್ದು ಮಳೆ ಬಂದ ಕಾರಣ ದಾರಿ ಕೆಟ್ಟಿದ್ದರಿಂದ ನಮ್ಮ ಕಾರನ್ನು ಯಾದಗಿರಿ - ರಾಯಚೂರ ಮುಖ್ಯ ರಸ್ತೆಯ ಮೇಲೆ ಆಶನಾಳ ಕ್ರಾಸ ಹತ್ತಿರ ನಿಲ್ಲಿಸಿ ಕಾರಿನಲ್ಲಿ ಒಟ್ಟು 180000-00 ರೂಪಾಯಿ ಇಟ್ಟು ಕಾರನ್ನು ಲಾಕ್ ಮಾಡಿಕೊಂಡು ಎಲ್ಲರು ಸೇರಿ ಹೊಲ ನೋಡಲು ಹೋಗಿದ್ದೆವು, ನಂತರ ಮರಳಿ ಸಮಯ ಮದ್ಯಾಹ್ನ 2-30 ಗಂಟೆಗೆ ಬಂದು ನೋಡಲಾಗಿ ನಮ್ಮ ಕಾರಿನ ಎಡಗಡೆಯ ಕಿಟಕಿ ಗಾಜು ಹೊಡೆದಿದ್ದು ನೋಡಿ ಗಾಬರಿಯಾಗಿ ನಾನು ಇಟ್ಟಿದ್ದ ಹಣ ನೋಡಲಾಗಿ ಹಣ ಇರಲಿಲ್ಲ ಎಲ್ಲರು ಸೇರಿಕೊಂಡು ಕಾರಿನಲ್ಲಿ ಎಲ್ಲ ಕಡೆಗೆ ಹುಡುಕಾಡಿ ನೋಡಲಾಗಿ ಹಣ ಇರಲಿಲ್ಲ ನಾನು ಇಟ್ಟಂತ ಹಣವನ್ನು ಯಾರೋ ಕಳ್ಳರು ಕಾರಿನ ಗಾಜು ಹೊಡೆದು ನಾನು ಕಾರಿನಲ್ಲಿ ಇಟ್ಟಿದ್ದ ಒಟ್ಟು ಹಣ 1,80,000/- ರೂ ಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 154/2022, ಕಲಂ, 323, 324, 504.506. ಸಂಗಡ 34 ಐ ಪಿ ಸಿ: ಇಂದು ದಿನಾಂಕ: 21-10-2022 ರಂದು ಮಧ್ಯಾಹ್ನ 12-00 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನಿಡಿದ ಸಾರಂಶವೆನೆಂದರೆ ದಿನಾಂಕ: 19-10-2022 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಮನೆಯವರಾದ ಸೋನಿಬಾಯಿ ಗಂಡ ವಿಜಯ, ಸಿತಾಬಾಯಿ ಗಂಡ ಈಶ್ವರ, ದಿನೇಶ ತಂದೆ ರಾಮು ಎಲ್ಲರು ಮನೆಯ ಹತ್ತಿರ ಇರುವಾಗ ನಮ್ಮೂರಿನ ಶಂಕರ ತಂದೆ ರಾಮಚಂದ್ರ, ದೇವರಾಮ ತಂದೆ ಶಂಕರ, ಮೋನಿಬಾಯಿ ಗಂಡ ದೇವರಾಮ ಇವರೆಲ್ಲರು ಸೇರಿ ನಮಗೆ ಬೈಯುತ್ತ ಲೇ ಸುಳೆ ಮಕ್ಕಳೆ ನಿಮ್ಮ ಸೊಕ್ಕು ಬಹಳ ಆಗಿದೆ ಅಂತಾ ಬೈಯುತ್ತಿರುವಾಗ ಆಗ ನಾನು ಅವರಿಗೆ ಯಾಕೆ ಬೈಯುತ್ತಿರಿ ಅಂತಾ ಕೇಳಿದ್ದಕ್ಕೆ ಲೇ ಸುಳೆ ಮಕ್ಕಳೆ ನಮ್ಮ ಹೊಲ ರಜೀಸ್ಟರ ಮಾಡು ಅಂತಾ ಪದೇ ಪದೇ ನಮಗೆ ಏನ ಕೆಳುತ್ತಿರಲೇ ಸೂಳೆ ಮಕ್ಕಳೆ ಅಂತಾ ಬೈದು ಅವರಲ್ಲಿ ಶಂಕರ ಈತನು ನನಗೆ ಹೊಟ್ಟೆಗೆ, ಎಡಗೈ ಮೊಣಕೈಗೆ ಹೊಡೆದು ಒಳಪೆಟ್ಟು ಮಾಡಿದನು ಆಗ ನಮ್ಮ ಸೋನಿಬಾಯಿ, ಈಕೆಯು ಜಗಳದಲ್ಲಿ ಅಡ್ಡ ಬಂದಾಗ ಆಕೆಗೆ ಮೋನಿಬಾಯಿ ಈಕೆಯು ಎಡಗೈಗೆ ಮತ್ತು ಬೆನ್ನಿಗೆ ಕೈಯಿಂದ ಹೊಡೆದು ಗುಪ್ತ ಪೆಟ್ಟು ಮಾಡಿದಳು ಆಕೆಗೆ ಹೊಡೆಯುವದನ್ನು ನೋಡಿ ಸೀತಾಬಾಯಿ ಜಗಳದಲ್ಲಿ ಅಡ್ಡ ಬಂದಾಗ ಆಕೆಗೂ ಕೂಡ ಕೈಯಿಂದ ಎಡಕಿವಿಗೆ ಮತ್ತು ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿರುತ್ತಾಳೆ. ಆಗ ನಮಗೆ ಹೊಡೆಯುವದನ್ನು ನೋಡಿ ನಮ್ಮ ದಿನೇಶ ಈತನು ಅವರಿಗೆ ಯಾಕೆ ಹೊಡೆಯುತ್ತಿರಿ ಅಂತಾ ಕೇಳಿದ್ದಕ್ಕೆ ಶಂಕರ ಈತನು ಕಟ್ಟಿಗೆಯಿಂದ ದಿನೇಶನಿಗೆ ಎಡಗಡೆ ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿ ಲೇ ಸೂಳೆ ಮಕ್ಕಳೆ ಇನ್ನೊಂದು ಸಲ ನಮಗೆ ಹೊಲ ರಜೀಸ್ಟರ ಮಾಡು ಅಂತಾ ಕೇಳಿದರೆ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ ಬಗ್ಗೆ

ಇತ್ತೀಚಿನ ನವೀಕರಣ​ : 22-10-2022 10:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080