ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 22-12-2021

ಯಾದಗಿರಿ ನಗರ ಪೊಲೀಸ ಠಾಣೆ
ಗುನ್ನೆ ನಂ 131/2021 ಕಲಂ 454, 380, 506 ಐಪಿಸಿ : ಸಾರಾಂಶವೆನೆಂದರೆ, ದಿನಾಂಕ; 09/08/2021 ರಂದು ನಾಗರ ಪಂಚಮಿ ಹಬ್ಬದ ನಿಮಿತ್ಯವಾಗಿ ನಾನು ಸಿಂದಗಿಯಲ್ಲಿರುವ ನನ್ನ ಅಕ್ಕಳ ಮನೆಗೆ ಮಕ್ಕಳೊಂದಿಗೆ ಹೋಗಿದ್ದೆನು. ನಂತರ ದಿನಾಂಕ; 15/08/2021 ರಂದು ನಾನು ಸಿಂದಗಿಯ ನಮ್ಮ ಅಕ್ಕನ ಮನೆಯಲ್ಲಿರುವಾಗ ಮಧ್ಯಾಹ್ನದ ಸುಮಾರಿಗೆ ಯಾದಗಿರಿಯಿಂದ ನಮ್ಮ ಮನೆಯ ಅಕ್ಕಪಕ್ಕದಲ್ಲಿರುವ 2-3 ಜನರು ನನಗೆ ಫೋನ ಮಾಡಿ, ನಿಮ್ಮ ಭಾವ ನಾಗಪ್ಪ ತಂದೆ ಬೆನಕಪ್ಪ ಮತ್ತು ಈತರರು ಕೂಡಿಕೊಂಡು ನಿಮ್ಮ ಮನೆಯ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಅಂತಾ ತಿಳಿಸಿದ್ದರಿಂದ ಯಾದಗಿರಿಯ ನನ್ನ ಮನೆಗೆ ಬಂದು ನೋಡಲಾಗಿ ನನ್ನ ಮನೆಯ ಬಾಗಿಲು ತೆರೆದಿತ್ತು ಗಾಬರಿಯಾಗಿ ಒಳಗಡೆ ಹೋಗಿ ನೋಡಲಾಗಿ ಮನೆಯಲ್ಲಿ ಸಾಮಾನುಗಳು ಇರಲಿಲ್ಲ. ಮನೆಯಲ್ಲಿರುವ 1) 3 1/2 ತೊಲೆ ಬಂಗಾರದ ತಾಳಿಚೈನ್ ಅ.ಕಿ.1,40,000/-ರೂ. 2) ಒಂದೊಂದು ತೊಲೆಯ 4 ಬಂಗಾರದ ಸುತ್ತು ಉಂಗುರಗಳು ಅ.ಕಿ.1,60,000/-ರೂ. 3) ಒಂದು ತೊಲೆಯ ಬಂಗಾರದ ಅವಲಕ್ಕಿ ಮಾಟ ಚೈನ್ ಅ.ಕಿ.40,000/-ರೂ. 4) ಮೂರು ತೊಲೆಯ ಬಂಗಾರದ ಚೈನ್ ಅ.ಕಿ.1,20,000/-ರೂ. 5) ಒಂದು ತೊಲೆಯ ನೆಕಲೆಸ್ ಅ.ಕಿ.40,000/-ರೂ. 6) ಒಂದು ತೊಲೆಯ ಬಂಗಾರದ ಚೈನ್ ಅ.ಕಿ.40,000/-ರೂ. 7) ನನ್ನ ಮಕ್ಕಳ ಒಂದೊಂದು ತೊಲೆಯ ಎರಡು ಬಂಗಾರದ ಚೈನ್ ಅ.ಕಿ.80,000/-ರೂ. 8) ಒಂದು ಮೂರು ಗ್ರಾಂದ ವಂಕಿ ಉಂಗುರ ಅ.ಕಿ.12,000/-ರೂ. 9) ಮೂರು ಗ್ರಾಂದ ಒಂದೊಂದು ಎರಡು ಕಿವಿಯೊಲೆಗಳು ಒಟ್ಟು ಆರು ಗ್ರಾಂ ಅ.ಕಿ.24,000/-ರೂ. 10) ನಾಲ್ಕು ತೊಲೆಯ ಬಂಗಾರದ ಪಾಟ್ಲಿಗಳು ಅ.ಕಿ.1,60,000/-ರೂ. 11) ಆರು ಗ್ರಾಂ ತಾಳಿಯ ಗುಂಡುಗಳು ಅ.ಕಿ.24,000/-ರೂ. 12) 2 1/2 ತೊಲೆ ಬಂಗಾರದ ತಾಳಿಯ ಸಾಮಾನುಗಳು ಅ.ಕಿ.1,00,000/-ರೂ. 13) ಒಂದು ತೊಲೆಯ ಇತರೆ ಬಂಗಾರದ ಸಾಮಾನುಗಳು ಅ.ಕಿ.40,000/-ರೂ. ಮತ್ತು 14) ನಗದು ಹಣ 2,00,000/-ರೂ. 15) ಮನೆಯಲ್ಲಿದ್ದ ಬಟ್ಟೆಗಳು ಅ.ಕಿ.2,00,000/-ರೂ. ಹಾಗೂ ಮನೆಯ ಗೃಹ ಬಳಕೆ ಸಾಮಾನುಗಳಾದ 16) ಪ್ರಿಡ್ಜ್ ಅ.ಕಿ.12,000/-ರೂ. 17) ವಾಷಿಂಗ್ ಮಷಿನ್ ಅ.ಕಿ. 7,500/-ರೂ. 18) ಹೇರ ಕೂಲರ್ ಅ.ಕಿ.10,000/-ರೂ. 19) ಎಲ್.ಇ.ಡಿ 24 ಇಂಚ್ ಎಲ್.ಜಿ ಕಂಪನಿ ಟಿವಿ ಅ.ಕಿ.15,000/-ರೂ. ಮತ್ತು 20) ಗೃಹ ಬಳಕೆಯ ಇನ್ನೀತರ ಸಾಮಾನುಗಳು ಅ.ಕಿ. 50,000/-ರೂ. ಹಿಗೇ ಒಟ್ಟು ಮೇಲಿನ ಎಲ್ಲಾ ಸಾಮಾನುಗಳ ಕಿಮ್ಮತ್ತು 14,74,500/-ರೂ. ಹಾಗೂ ನನ್ನ ಹಾಗೂ ಮಕ್ಕಳ ದಾಖಲಾತಿಗಳು ಇರಲಿಲ್ಲ. ಸದರಿ ಘಟನೆಯು ದಿನಾಂಕ; 15/08/2021 ರಂದು ಬೆಳೆಗ್ಗೆ 9-00 ಗಂಟೆಯಿಂದ ಸಾಯಂಕಾಲ 5-00 ಗಂಟೆಯ ಮಧ್ಯದ ಅವಧಿಯಲ್ಲಿ ಜರುಗಿದ್ದು ಇರುತ್ತದೆ. ಕಾರಣ 1) ಶಿವಪ್ಪ ದಿಮ್ಮೆನೊರ 2) ಪರಶುರಾಮ ತಂದೆ ಶಿವಮ್ಮ ದಿಮ್ಮೆನೊರ 3) ನಾಗಪ್ಪ ತಂದೆ ಬೆನಕಪ್ಪ ದೊಡ್ಡಮನಿ 4) ಸೀತಮ್ಮ ಗಂಡ ಬೆನಕಪ್ಪ ದೊಡ್ಡಮನಿ 5) ವಿಶ್ವರಾಧ್ಯ ತಂದೆ ಶಿವಪ್ಪ ದಿಮ್ಮೆನೊರ 6) ರೇಣುಕಾದೇವಿ ಗಂಡ ನಾಗಪ್ಪ ದೊಡ್ಡಮನಿ 7) ಅಂಬಿಕಾ ತಂದೆ ಶಿವಪ್ಪ ದಿಮ್ಮೆನೊರ 8) ಶಾಂತಮ್ಮ ಗಂಡ ಶಿವಪ್ಪ ದಿಮ್ಮೆನೊರ ಸಾ; ಎಲ್ಲರೂ ಯಾದಗಿರಿ ರವರು ಕೂಡಿಕೊಂಡು ನಾನು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನನ್ನ ಮನೆಯ ಬಾಗಿಲ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ, ಮನೆಯಲ್ಲಿದ್ದ ಈ ಮೇಲ್ಕಂಡ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಿರಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.131/2021 ಕಲಂ.454, 380, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 141/2021 ಕಲಂ:279, 337, 338, 304(ಎ) ಐಪಿಸಿ & 187 ಐ.ಎಮ್.ವಿ. ಆಕ್ಟ್ : ದಿನಾಂಕ:21/12/2021 ರಂದು 10:30 ಎ.ಎಮ್.ಕ್ಕೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ. ಮಾಹಿತಿ ವಸೂಲಾಗಿದ್ದರಿಂದ ನಾನು ಯಾದಗಿರಿ ಜಿಲ್ಲಾ ಸರಕಾರಿ ಅಸ್ಪತ್ರೆಗೆ ಭೇಟಿಕೊಟ್ಟು ಗಾಯಾಳು ಸಾಬಮ್ಮ ಗಂಡ ಸಾಬಣ್ಣ ಕುಮ್ಮನೋರ್, ವಯ:35 ವರ್ಷ, ಜಾತಿ:ಎಸ್.ಸಿ (ಹೊಲೆಯ), ಉ||ಕೂಲಿಕೆಲಸ, ಸಾ||ನಾಯ್ಕಲ್, ತಾ||ವಡಗೇರಾ ಹೇಳಿ ಇವರ ಹೇಳಿಕೆ ಫಿಯರ್ಾದಿಯನ್ನು ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ಇಂದು ದಿನಾಂಕ:21/12/2021 ರಂದು ಬೆಳಗ್ಗೆ ನಮ್ಮೂರಿನ ಅಬ್ಬಾಸಅಲಿ ತಂದೆ ಇಸ್ಮಾಯಿಲಸಾಬ ಬ್ಯಾಲೇಸ್ನೋರ್ ಇವರ ಹೊಲಕ್ಕೆ ಹತ್ತಿಬಿಡಿಸಲು ಕೂಲಿ ಕೆಲಸಕ್ಕಾಗಿ ನಾನು ಮತ್ತು ನಮ್ಮೂರಿನ 1)ಮಾನಮ್ಮ ಗಂಡ ಹಣಮಂತ ಬೆಳ್ಳಕ್ಕೇರ್, 2)ಪವರ್ಿನ್ ಬಾನು ಗಂಡ ಸಲೀಂ ಶೇಖ್ ಗೋಡಿಕಾರ್, 3)ಇಫರ್ಾನಾಬೇಗಂ ಗಂಡ ದಾವೂದ ಚೌದರಿ, 4)ಲಕ್ಷ್ಮೀ@ಮಾಳಮ್ಮ ಗಂಡ ತಿಪ್ಪಣ್ಣ ಕುರಕುಂದಿ, 5)ಮರೆಮ್ಮ ಗಂಡ ಲಚಮಪ್ಪ ಕಜ್ಜೇರ್, 6)ಅಯ್ಯಮ್ಮ ಗಂಡ ಧರ್ಮರಾಜ ಬರೊಳ್ಳೆರ್, 7)ಅಶ್ವಿನಿ ಗಂಡ ರೆಡ್ಡಿ ಬರೊಳ್ಳೆರ್, 8)ದೇವಮ್ಮ ಗಂಡ ರಮೇಶ ನಾಟೇಕಾರ್, 9)ಮರೆಮ್ಮ ಗಂಡ ದೇವಪ್ಪ ಚಟ್ನಳ್ಳಿ, 10)ಮಾಳಮ್ಮ ಗಂಡ ಸಾಬಣ್ಣ ಮಗ್ದಂಪೂರ, 11)ಭಾಗಮ್ಮ ಗಂಡ ಭೀಮರಾಯ ಪೋತರಾಜ, 12)ಹನೀಫಬೇಗಂ ಗಂಡ ಸಿರಾಜಭಾಷಾ ಬುರಾನವಾಲೆ, 13)ಫತಿಮಾ ಬೇಗಂ ಗಂಡ ನಬಿರಸೂಲ್ ಬಹರಪೇಟ್, 14)ಹುಸೇನಬೀ ಗಂಡ ಅಬ್ಬಾಸಅಲಿ ಬ್ಯಾಲೇಸ್ನೋರ್, 15)ಖಾಸಿಂಬೀ ಗಂಡ ಅಬ್ಬಾಸಅಲಿ ಗೋಡಿಕಾರ್, 16)ದೌಲತಬೀ ಗಂಡ ಮಹೆಬೂಬ ಗೋಡಿಕಾರ್ ರವರೆಲ್ಲರು ಕೂಡಿಕೊಂಡು ನಮ್ಮೂರಿನ ಮಲ್ಲಿಕಾಜರ್ುನ ತಂದೆ ಲಕ್ಷ್ಮಣ@ಲಚಮಣ್ಣ ಮಿಡೆತನೋರ್@ಕಣಜಿಕರ್ ಈತನ ನೋಂದಣಿ ನಂಬರ್ ಇಲ್ಲದ ಮಹಿಂದ್ರಾ 475 ಡಿಐ ಟ್ರ್ಯಾಕ್ಟರ್ ಇಂಜಿನ್ ನಂ:ಚಎಖಿಘಿ00897 ರ ಜೊತೆ ಇರುವ ನೋಂದಣಿ ನಂಬರ್ ಇಲ್ಲದ ನೀಲಿ ಬಣ್ಣದ ಟ್ರ್ಯಾಲಿಯಲ್ಲಿ ಕುಳಿತುಕೊಂಡು ಬೆಳಗ್ಗೆ 06:00 ಗಂಟೆ ಸುಮಾರಿಗೆ ನಮ್ಮೂರಿನ ಸೀಮಾಂತರದಲ್ಲಿರುವ ಅಬ್ಬಾಸಅಲಿ ರವರ ಹೊಲಕ್ಕೆ ಹೋಗಿ ಬೆಳಗ್ಗೆ 09:00 ಗಂಟೆಯವರೆಗೆ ಹತ್ತಿಯನ್ನು ಬಿಡಿಸಿದೆವು. ಕೂಲಿ ಕೆಲಸ ಮುಗಿದ ನಂತರ ಮೇಲ್ಕಂಡ ನಾವೆಲ್ಲರು ಅಬ್ಬಾಸಅಲಿರವರ ಹೊಲದಿಂದ ಮರಳಿ ಮಲ್ಲಿಕಾಜರ್ುನನ ಟ್ರ್ಯಾಕ್ಟರ್ನ ಟ್ರ್ಯಾಲಿಯಲ್ಲಿ ಕುಳಿತಿದ್ದು, ಮಲ್ಲಿಕಾಜರ್ುನನು ಟ್ರ್ಯಾಕ್ಟರನ್ನು ನಡೆಸಿಕೊಂಡು ನಾಯ್ಕಲ್ಗೆ ಮಳ್ಳಳ್ಳಿ-ನಾಯ್ಕಲ್ ರಸ್ತೆಯ ಮೇಲೆ ಹೊರಟಿದ್ದನು. ಬೆಳಗ್ಗೆ 09:30 ಗಂಟೆಯ ಸುಮಾರಿಗೆ ನಾಯ್ಕಲ್ ಇನ್ನು ಅಂದಾಜು ಒಂದು ಕಿ.ಮೀ ದೂರ ಇರುವಾಗ ಮರೆಪ್ಪ ಬದ್ದೆಳ್ಳಿ ಇವರ ಹೊಲದ ಹತ್ತಿರ ಇರುವ ರಸ್ತೆಯ ತಿರುವಿನಲ್ಲಿ ಟ್ರ್ಯಾಕ್ಟರ್ ಚಾಲಕ ಮಲ್ಲಿಕಾಜರ್ುನನು ತನ್ನ ಟ್ರ್ಯಾಕ್ಟರನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಎಡಕ್ಕೆ ಕಟ್ ಹೊಡೆದಿದ್ದರಿಂದ ಟ್ರ್ಯಾಲಿಯ ಹುಕ್ ರಾಡ್ ಮುರಿದು ಟ್ರ್ಯಾಲಿ ಪಲ್ಟಿಯಾಗಿ ರಸ್ತೆಯ ಪಕ್ಕದಲ್ಲಿ ಬಿದ್ದು ಅಪಘಾತವಾಗಿದ್ದು, ಅಪಘಾತದಲ್ಲಿ ಟ್ರ್ಯಾಲಿಯಲ್ಲಿ ಕುಳಿತಿದ್ದ ನಾವೆಲ್ಲರು ಟ್ರ್ಯಾಲಿ ಕೆಳಗಡೆ ಸಿಕ್ಕುಬಿದ್ದೆವು. ಆಗ ಅಲ್ಲಿಂದ ಹೋಗುತ್ತಿದ್ದ ಹೊನ್ನಪ್ಪ ತಂದೆ ರಾಮಣ್ಣ ತುಮಕೂರ, ಖಾಸಿಂ ತಂದೆ ಲಾಳೆಸಾಬ ಬಂದಗಿ, ಇಬ್ರಾಹಿಂ ತಂದೆ ದಾವೂದಸಾಬ ಮುನ್ಸಿರವರು ಅಪಘಾತವನ್ನು ನೋಡಿ ಟ್ರ್ಯಾಲಿ ಕೆಳಗಡೆ ಸಿಕ್ಕುಬಿದ್ದ ನಮ್ಮನ್ನು ಹೊರಗಡೆ ತೆಗೆದಿದ್ದು, ಅಪಘಾತದಲ್ಲಿ ನನಗೆ ತಲೆಗೆ, ಬಲಭುಜಕ್ಕೆ ಗುಪ್ತಗಾಯಗಳಾಗಿದ್ದು, 1)ಮಾನಮ್ಮ ಗಂಡ ಹಣಮಂತ ಬೆಳ್ಳಕ್ಕೇರ್, ವಯ:28 ವರ್ಷ, ಜಾತಿ:ಎಸ್.ಸಿ (ಹೊಲೆಯ) ಉ||ಕೂಲಿ, ಸಾ||ತಡಿಬಿಡಿ, ಹಾ||ವ||ನಾಯ್ಕಲ್ ಇವಳಿಗೆ ಬಲಗಡೆ ತಲೆಗೆ, ಕಪಾಳಕ್ಕೆ, ಗದ್ದಕ್ಕೆ, ಕುತ್ತಿಗೆಗೆ ಭಾರಿ ರಕ್ತಗಾಯ ಹಾಗು ಭಾರಿ ಗುಪ್ತಗಾಯಗಳಾಗಿ ಎರಡೂ ಕಿವಿಗಳಿಂದ ರಕ್ತ ಬಂದಿದ್ದು, ಎಡಕೈ ಮುಂಗೈಗೆ ಭಾರಿರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು ಮತ್ತು 2)ಪವರ್ಿನ್ ಬಾನು ಗಂಡ ಸಲೀಂ ಶೇಖ್ ಗೋಡಿಕಾರ್, ವಯ:32 ವರ್ಷ, ಜಾತಿ:ಮುಸ್ಲಿಂ, ಉ||ಕೂಲಿ, ಜಾತಿ:ಮುಸ್ಲಿಂ, ಸಾ||ನಾಯ್ಕಲ್ ಇವಳಿಗೆ ಬಲಗಡೆ ಪಕ್ಕೆಯ ಮೇಲೆ ಟ್ರ್ಯಾಲಿಬಿದ್ದಿದ್ದರಿಂದ ಭಾರಿ ಒಳಪೆಟ್ಟಾಗಿ ಎರಡೂ ಕಡೆಯ ಪಕ್ಕೆಲುಬುಗಳು ಮುರಿದು ಸೊಂಟಕ್ಕೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಟ್ರ್ಯಾಲಿಯಲ್ಲಿದ್ದ ಇನ್ನುಳಿದ ಎಲ್ಲಾರಿಗೂ ಭಾರಿ ಹಾಗು ಸಾಧಾರಣ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದವು. ಅಪಘಾತದ ನಂತರ ಟ್ರ್ಯಾಕ್ಟರ್ ಚಾಲಕ ಮಲ್ಲಿಕಾಜರ್ುನನು ಟ್ರ್ಯಾಕ್ಟರನ್ನು ಬಿಟ್ಟು ಓಡಿಹೋಗಿದ್ದನು. ನಂತರ ಬಂದ 108 ಅಂಬುಲೆನ್ಸ್ ವಾಹನದಲ್ಲಿ ಗಾಯಗೊಂಡ ನಮಗೆಲ್ಲಾ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆಗಾಗಿ ಸೇರಿಕೆ ಮಾಡಿರುತ್ತಾರೆ. ಸದರಿ ಅಪಘಾತವು ಇಂದು ದಿನಾಂಕ:21/12/2021 ರಂದು ನಾಯ್ಕಲ್-ಮಳ್ಳಳ್ಳಿ ರಸ್ತೆಯ ಮೇಲೆ ಮರೆಪ್ಪ ಬದ್ದೆಳ್ಳಿ ಇವರ ಹೊಲದ ಹತ್ತಿರ ರಸ್ತೆಯ ತಿರುವಿನಲ್ಲಿ ಬೆಳಗ್ಗೆ 09:30 ಗಂಟೆ ಸುಮಾರಿಗೆ ಮಹಿಂದ್ರಾ 475 ಡಿಐ ಟ್ರ್ಯಾಕ್ಟರ್ ಇಂಜಿನ್ ನಂ:ಚಎಖಿಘಿ00897 ಮತ್ತು ನೋಂದಣಿ ನಂಬರ್ ಇಲ್ಲದ ನೀಲಿ ಬಣ್ಣದ ಟ್ರ್ಯಾಲಿಯ ಚಾಲಕನಾದ ಮಲ್ಲಿಕಾಜರ್ುನ ತಂದೆ ಲಕ್ಷ್ಮಣ@ಲಚಮಣ್ಣ ಮಿಡೆತನೋರ್@ಕಣಜಿಕರ್ ಸಾ||ನಾಯ್ಕಲ್ ಈತನ ನಿರ್ಲಕ್ಷ್ಯತನದಿಂದ ಸಂಭವಿಸಿದ್ದು, ಆತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಹೇಳಿಕೆಯನ್ನು 11:00 ಎ.ಎಮ್. ದಿಂದ 12:00 ಪಿ.ಎಮ್. ವರೆಗೆ ಪಡೆದುಕೊಂಡು ಮರಳಿ ಠಾಣೆಗೆ 12:30 ಪಿ.ಎಮ್.ಕ್ಕೆ ಬಂದು ಸದರಿ ಹೇಳಿಕೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 141/2021 ಕಲಂ:279, 337, 338, 304(ಎ) ಐಪಿಸಿ & 187 ಐ.ಎಮ್.ವಿ ಆಕ್ಟ್ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 251/2021 ಕಲಂ 419, 420, 465 ಐ.ಪಿ.ಸಿ : ಇಂದು ದಿನಾಂಕ 21/12/2021 ರಂದು ಮಧ್ಯಾಹ್ನ 15-00 ಗಂಟೆಗೆ ಫಿಯರ್ಾದಿ ಶ್ರೀಮತಿ ಶಿವಲೀಲಾ ಗಂಡ ಶರಣಪ್ಪ ವಯಸ್ಸು 37 ವರ್ಷ, ಜಾತಿ ಕಬ್ಬಲಿಗ, ಸಾಃ ಬಿಳೆಕಲ್, ತಾಃ ಕುಷ್ಟಗಿ ಹಾಲಿವಸತಿ 161 ಎಮ್.ಐ.ಜಿ ಕೆ.ಹೆಚ್.ಬಿ ಕಾಲೋನಿ ಹೌಸಿಂಗ್ ಬೋಡರ್್ ಹಳೆ ಜೇವಗರ್ಿ ರೋಡ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನಂದರೆ, ನಾನು ಸಗರ(ಬಿ) ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ 10 ವರ್ಷಗಳಿಂದ ದೈಹಿಕ ಶಿಕ್ಷಕಿ ಅಂತಾ ಕರ್ತವ್ಯ ಮಾಡಿಕೊಂಡಿರುತ್ತೇನೆ. ನನ್ನ ಗಂಡ ಶರಣಪ್ಪ ತಂದೆ ಶಂಕ್ರಪ್ಪ ಗುಜ್ಜಲ್ ಸಾಃ ನಿಲೋಗಲ್ ತಾಃ ಕುಷ್ಟಗಿ ಇವರ ಜೊತೆಯಲ್ಲಿ 21/03/2007 ರಲ್ಲಿ ಮದುವೆಯಾಗಿರುತ್ತದೆ ಇವರು ಸಗರ(ಬಿ) ಗ್ರಾಮದ ಉದರ್ು ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತಿದ್ದಾರೆ ನಮಗೆ ಶಶಾಂಕ ಎಂಬ 10 ವರ್ಷದ ಮಗನಿರುತ್ತಾನೆ. ನಾವು ಶಹಾಪೂರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದೆವು. ನನ್ನ ಮತ್ತು ನನ್ನ ಗಂಡನ ಮಧ್ಯ ಸಂಸಾರದ ಬಿರಕು ಇದ್ದು, ಆಗಾಗ ಸಣ್ಣ-ಪುಟ್ಟವಿಷಯಕ್ಕೆ ತಕರಾರಗಳು ಮಾಡುತಿದ್ದನು ನಾನೇ ಸಮಾಧಾನ ಮಾಡಿಕೊಂಡು ಗಂಡನ ಜೊತೆಯಲ್ಲಿಯೇ ಇದ್ದೆನು. ನಂತರ ನನ್ನ ಗಂಡನು ನನಗೆ ಜನೇವರಿ 2020 ನೇ ಸಾಲಿನಲ್ಲಿ ಮನೆಯಿಂದ ಹೊರಗಡೆ ಹಾಕಿ ನೀನು ಬೇರೆ ಮನೆ ಮಾಡಿಕೊಂಡು ಸಂಸಾರ ನಡೆಸು ಅಂತಾ ಕಿರಿ ಮಾಡಿದ್ದರಿಂದ ನಾನು ಕಲಬುರಗಿಯಲ್ಲಿ ಮಗನೊಂದಿಗೆ ವಾಸವಾಗಿದ್ದೆನು. ಆಗಾಗ ನನ್ನ ಗಂಡ ಅಲ್ಲಿಯೂ ಬಂದು ನನ್ನ ಜೊತೆ ಕಿರಿಕಿರಿ ಮಾಡಿದ್ದರಿಂದ ನಾನು ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ಕೊಟ್ಟಿದ್ದರಿಂದ ಕೇಸ್ ನಂ 25/2020 ದಾಖಲಾಗಿದ್ದು, ಸದರಿ ಕೇಸ್ ನ್ಯಾಯಾಲಯದಲ್ಲಿ ವಿಚಾರಣೆಲ್ಲಿರುತ್ತವೆ. ಅಲ್ಲದೇ ನ್ಯಾಯಾಲಯದ ಕ್ರಿಮಿನಲ್ ಮಿಸಿಲೆನ್ಸ್ ನಂ 139/20 ಮತ್ತು ಎಮ್.ಸಿ (ಮಿಚ್ಯೂವೆಲ್ ಕನ್ಸೆಂಟ್) ನಂ 69/2020 ನ್ಯಾಯಾಲಯದ ವಿಚಾರಣೆಯಲ್ಲಿರುತ್ತವೆ. ಶಹಾಪೂರದ ಎಸ್.ಬಿ.ಐ ಶಾಖೆಯಲ್ಲಿ ನನ್ನ ಎಸ್.ಬಿ ಖಾತೆ ನಂ 31875873162 ಇದ್ದು ಸದರಿ ಖಾತೆಗೆ ಪ್ರತಿ ತಿಂಗಳು ವೇತನ ಜಮಾ ಆಗುತಿತ್ತು. ದಿನಾಂಕ 10/11/2021 ರಂದು, ಸಾಯಂಕಾಲ 4-30 ಗಂಟೆಯಿಂದ 4-35 ಗಂಟೆಯ ಅವಧಿಯಲ್ಲಿ ನನ್ನ ಖಾತೆ ನಂ. 31875873162 ಈ ಖಾತೆಯಿಂದ ರೂಪಾಯಿ 3,60,000=00 ಹಣವನ್ನು ಖಾತೆ ನಂ. 31658680271 ಈ ಖಾತೆಗೆ ಅಕ್ರಮವಾಗಿ ವಗರ್ಾವಣೆ ಮಾಡಿಕೊಂಡಿರುತ್ತಾರೆ. ಈ ಖಾತೆ ನಂ 31658680271 ನೇದ್ದರ ವ್ಯಕ್ತಿಗೂ ನನಗೂ ಯಾವುದೇ ಸಂಬಂಧವಿರುವುದಿಲ್ಲ. ಆದರೆ ನನ್ನ ಖಾತೆಯಿಂದ ಮಾತ್ರ ಹಣ ವಗರ್ಾವಣೆಯಾಗಿರುತ್ತದೆ. ನನ್ನ ಗಂಡನಾದ ಶರಣಪ್ಪ ತಂದೆ ಶಂಕ್ರಪ್ಪ ಗುಜ್ಜಲ್ (ದೈಹಿಕ ಶಿಕ್ಷಕರು) ಇವರು ನನ್ನ ಬ್ಯಾಂಕ್ ಪಾಸ್ ಬುಕ್ ಹಾಗೂ ಚೆಕ್ನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಹೆಗೆಂದರೆ ನನ್ನ ಮತ್ತು ನನ್ನ ಗಂಡನ ನಡುವೆ ಕೌಟುಂಬಿಕ ಕಲಹ ನಡೆದು ಸುಮಾರು 2 ವರ್ಷಗಳಾಗಿದ್ದು, ಆ ಸಮಯದಲ್ಲಿ ನಾನು ಮನೆ ಬಿಟ್ಟು ಬರುವಾಗ ನನ್ನ ಎಲ್ಲಾ ಹಣಕಾಸಿಗೆ ಸಂಬಂಧಿಸಿದ ವ್ಯವಹಾರದ ದಾಖಲೆಗಳು ನನ್ನ ಗಂಡನ ಹತ್ತಿರವೇ ಉಳಿದಿದ್ದವು. ಅದರಲ್ಲಿ ನನ್ನ ಬ್ಯಾಂಕ್ ಪಾಸ್ ಬುಕ್ ಮತ್ತು ಬ್ಲ್ಯಾಂಕ್ ಚೆಕ್ ಬುಕ್ ಸಹಿತ ಇದ್ದು, ಚೆಕ್ ಬುಕ್ ಮೇಲೆ ನನ್ನ ಖೊಟ್ಟಿ ಸಹಿ ಮಾಡಿ ಅಥವಾ ಬೇರೊಬ್ಬರಿಂದ ಮಾಡಿಸಿ ನನ್ನ ಖಾತೆಯಲ್ಲಿದ್ದ 3,60,000=00 ಹಣವನ್ನು ಖಾತೆ ನಂ. 31658680271 ನೇದ್ದಕ್ಕೆ ವಗರ್ಾವಣೆ ಮಾಡಿ ನನಗೆ ಮೋಸ ವಂಚನೆ ಮಾಡಿರುತ್ತಾನೆ. ಇದರ ಬಗ್ಗೆ ಬ್ಯಾಂಕಿಗೆ ಹೋಗಿ ದೃಢ ಪಡಿಸಿಕೊಂಡು ಮತ್ತು ನನ್ನ ಕುಟುಂಬದವರಲ್ಲಿ ವಿಚಾರಣೆ ಮಾಡಿ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರು ಸಲ್ಲಿಸುತಿದ್ದೇನೆ.
ಕಾರಣ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ನನ್ನ ಖಾತೆಯಿಂದ ಯಾರ ಖಾತೆಗೆ ಹಣ ವಗರ್ಾವಣೆಯಾಗಿದೆ ಎಂಬುದನ್ನು ಪತ್ತೆ ಮಾಡಿ ವಗರ್ಾವಣೆಯಾದ ಹಣವನ್ನು ಮರಳಿ ನನಗೆ ದೊರಕಿಸಿಕೊಡಬೇಕು ಮತ್ತು ನನಗೆ ಮೋಸ ವಂಚನೆ ಮಾಡಿದ ಶರಣಪ್ಪ ಗುಜ್ಜಲ್ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 251/2021 ಕಲಂ 419, 420, 465 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 183/2021 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 21/12/2021 ರಂದು 2.30 ಪಿಎಂ ಕ್ಕೆ ಮಾನ್ಯ ಗಜಾನಂದ ಪಿ ಎಸ್ ಐ ಸಾಹೇಬರು ಕೆಂಭಾವಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ಗಜಾನಂದ ಬಿರಾದಾರ ಪಿ.ಎಸ್.ಐ(ಕಾ.ಸು) ಕೆಂಭಾವಿ ಪೊಲೀಸ್ ಠಾಣೆ ಇದ್ದು ವರದಿ ನೀಡುವುದೇನೆಂದರೆ, ನಾನು ಇಂದು ದಿನಾಂಕ 21/12/2021 ರಂದು 12.30 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಮಾಲಗತ್ತಿ ಗ್ರಾಮದಲ್ಲಿ ಇರುವ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ಠಾಣೆಯ ಶಂಕರಗೌಡ ಹೆಚ್.ಸಿ 33 ಮತ್ತು ಬಸವರಾಜ ಪಿಸಿ 363 ರವರನ್ನು ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಠಾಣೆಯಿಂದ 12.40 ಪಿಎಂ ಕ್ಕೆ ಹೊರಟು 1.00 ಪಿಎಂ ಕ್ಕೆ ಮಾಲಗತ್ತಿ ಗ್ರಾಮಕ್ಕೆ ಹೋಗಿ ಮಾಲಗತ್ತಿ ಗ್ರಾಮದ ಹನುಮಾನ ಗುಡಿಯ ಹತ್ತಿರ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು 1.10 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿ ಮಟಕಾ ನಂಬರ ಬರೆಯುತ್ತಿದ್ದ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಗುರಪ್ಪ ತಂದೆ ಗೊಲ್ಲಾಳಪ್ಪ ಮಲ್ಲೇದ ವ|| 50 ಜಾ|| ಲಿಂಗಾಯತ ಉ|| ಕೂಲಿ ಮತ್ತು ಮಟಕಾ ಬರೆದುಕೊಳ್ಳುವುದು ಸಾ|| ಮಾಲಗತ್ತಿ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 1260/- ರೂಪಾಯಿ ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 1.10 ಪಿಎಂ ದಿಂದ 2.10 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 183/2021 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 184/2021 ಕಲಂ: 143,147,323,324,504,506, ಸಂಗಡ 149 ಐಪಿಸಿ : ಇಂದು ದಿನಾಂಕ 21/12/2021 ರಂದು 4.00 ಪಿ.ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಮದಾರ ಗನಿಶಾ ತಂದೆ ನಬಿಶಾ ಮಕಾನದಾರ ವ|| 38 ಜಾ|| ಮುಸ್ಲಿಂ ಉ|| ಖಾಸಗಿ ವಕೀಲ ಸಾ|| ಮಾಲಗತ್ತಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನನಗೆ 6 ವರ್ಷಗಳ ಹಿಂದೆ ವಿಜಯಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರ ಗ್ರಾಮದ ಮೈನುದ್ದೀನ್ ಮಕಾನದಾರ ಇವರ ಮಗಳಾದ ಫಜರ್ಾನಾಬೇಗಂ ಇವಳೊಂದಿಗೆ ಮದುವೆಯಾಗಿದ್ದು ಮದುವೆಯಾದ ನಂತರ 1ವರ್ಷದ ತನಕ ಇಬ್ಬರೂ ಚೆನ್ನಾಗಿದ್ದು ಸಂಸಾರ ಸಾಗಿಸಿದ್ದು ನಮಗೆ 1 ಗಂಡು ಮಗು ಜನಿಸಿರುತ್ತದೆ. ನಂತರ ಅವಳು ಹೆಚ್ಚಾಗಿ ತನ್ನ ತವರು ಮನೆಗೆ ಹೋಗಲು ಪ್ರಾರಂಭಿಸಿದಳು. ಆಗ ನಾನು ಅವಳಿಗೆ ನೀನು ತವರುಮನೆಯಲ್ಲಿ ಹೋಗಿ ಕುಳಿತರೆ ನಾನು ಊಟ, ಉಪಚಾರ ಹೇಗೆ ಮಾಡಲಿ ಅಂತಾ ಕೇಳಿದರೆ ಏನಾದರೂ ಮಾಡು ಹೇಗಾದರೂ ಮಾಡು ನಾನು ನನ್ನ ಮನಸ್ಸಿಗೆ ಬರುವಂತಾದಾಗ ಮಾತ್ರ ನಿಮ್ಮ ಹತ್ತಿರ ಬರುತ್ತೇನೆ ಅಂದಳು. ಆಗ ನಾನು ಸುಮ್ಮನಾಗಿ ಸ್ವಲ್ಪ ದಿನಗಳ ಬಳಿಕ ಹಿರಿಯರ ಸಮಕ್ಷಮ ನ್ಯಾಯ ಪಂಚಾಯತಿ ಮಾಡಿಸಿದೆನು. ಆದರೂ ಅವಳು ನಮ್ಮ ಮನೆಗೆ ಬರದೇ ತನ್ನ ತವರು ಮನೆಯಲ್ಲಿ ಇರುವುದನ್ನು ಮುಂದುವರೆಸಿದಳು. ನಾನು ವಿಚ್ಚೇದನ ನೀಡಲು ಕೇಳಿದಾಗ ಅವಳು ನನಗೆ ಇನ್ನೊಂದು ಮದುವೆ ಬೇಕಾದರೂ ಆಗು ಆದರೆ ನಾನು ಅಲ್ಲಿಗೆ ಬರುವುದಿಲ್ಲ, ವಿಚ್ಚೇದನವೂ ಕೊಡುವುದಿಲ್ಲ ಅಂದಳು. ಅವಳು ಇನ್ನೊಂದು ಮದುವೆಯಾಗು ನನ್ನದೇನು ಅಭ್ಯಂತರ ಇರುವುದಿಲ್ಲ ಅಂತಾ ಹೇಳಿದ್ದಕ್ಕೆ ಅವಳಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ಕಳುಹಿಸಿದರೂ ಅವಳು ಕೋಟರ್ಿಗೆ ಹಾಜರಾಗಲಿಲ್ಲ. ನಂತರ ನಾನು 3ವರ್ಷಗಳ ಹಿಂದೆ ರೇಷ್ಮಾ ಇವಳೊಂದಿಗೆ 2ನೇ ಮದುವೆ ಮಾಡಿಕೊಂಡೆನು. ನಾನು ನನ್ನ 2ನೇ ಹೆಂಡತಿಯೊಂದಿಗೆ ಸಂಸಾರ ಸಾಗಿಸುತ್ತಾ ಬಂದಿದ್ದು ಇರುತ್ತದೆ. ಹೀಗಿದ್ದು ದಿನಾಂಕ 18/12/2021 ರಂದು ನಾನು ನಮ್ಮ ಮನೆಯಲ್ಲಿದ್ದಾಗ ನನ್ನ ಮೊದಲನೇ ಹೆಂಡತಿಯಾದ ಫಜರ್ಾನಾಬೇಗಂ ಇವಳು ನನ್ನ ಮೊಬೈಲಗೆ ಅವಾಚ್ಯವಾಗಿ ಮೆಸೇಜ್ ಮಾಡಿ ನೀನು ನನ್ನ ವಿಚ್ಚೇದನ ಆಗಲಾರದೇ 2ನೇ ಮದುವೆ ಹೇಗೆ ಮಾಡಿಕೊಂಡಿರುವಿ ಅಂತಾ ಮೆಸೇಜ್ ಮಾಡಿದಾಗ ನಾನು ಅವಳ ಮೊಬೈಲ್ ನಂಬರ ಬ್ಲಾಕ್ ಮಾಡಿದೆನು. ನಂತರ ದಿನಾಂಕ 20/12/2021 ರಂದು 1.00 ಪಿಎಂ ಸುಮಾರಿಗೆ ನಾನು ಮಾಲಗತ್ತಿ ಗ್ರಾಮದ ನಮ್ಮ ಮನೆಯಲ್ಲಿದ್ದಾಗ ನನ್ನ ಮೊದಲನೇ ಹೆಂಡತಿಯಾದ 1) ಫಜರ್ಾನಾಬೇಗಂ ಗಂಡ ಮದಾರ ಗನಿಶಾ ಮಕಾನದಾರ ಇವಳು ತನ್ನೊಂದಿಗೆ ತನ್ನ ತಂದೆಯಾದ 2) ಮೈನುದ್ದೀನ್ ತಂದೆ ಮಾಬುಶಾ ಮಕಾನದಾರ, ತನ್ನ ತಾಯಿಯಾದ 3) ಹಲೀಮಾಬೀ ಗಂಡ ಮೈನುದ್ದೀನ್ ಮಕಾನದಾರ, ತನ್ನ ತಮ್ಮನಾದ 4) ಇಫರ್ಾನ್ ತಂದೆ ಮೈನುದ್ದೀನ್ ಮಕಾನದಾರ ಹಾಗೂ ಇನ್ನೊಬ್ಬ ತಮ್ಮನಾದ 5) ರಿಯಾಜ್ ತಂದೆ ಮೈನುದ್ದೀನ್ ಮಕಾನದಾರ ಇವರಿಗೆ ಕರೆದುಕೊಂಡು ಎಲ್ಲರೂ ಕೂಡಿ ನಮ್ಮ ಮನೆಗೆ ಬಂದು ನನಗೆ ಏನಲೇ ಗನ್ಯಾ ನಿನಗೆ ಸೊಕ್ಕು ಜಾಸ್ತಿಯಾಗಿದೆ ನೀನು ನಮ್ಮ ಪರವಾನಿಗೆ ಇಲ್ಲದೇ ಇನ್ನೊಂದು ಮದುವೆಯಾಗುತ್ತಿಯಾ ಅಂತಾ ಬೈಯುತ್ತಿದ್ದಾಗ ಸುಮ್ಮನೇ ಯಾಕೆ ಬೈಯುತ್ತೀರಿ ಅಂತಾ ನಾನು ಕೇಳಿದ್ದಕ್ಕೆ ನನ್ನ ಹೆಂಡತಿಯಾದ ಫಜರ್ಾನಾಬೇಗಂ ಇವಳು ಕೈಯಿಂದ ನನ್ನ ಕಪಾಳಕ್ಕೆ ಹೊಡೆದಳು, ಆಗ ಮೈನುದ್ದೀನನು ಅಲ್ಲಿಯೇ ಮನೆಯ ಹೊರಗಡೆ ಇದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ಬಂದು ನನ್ನ ಬೆನ್ನಿಗೆ ಹೊಡೆದನು. ನನಗೆ ಹೊಡೆಯುತ್ತಿದ್ದಾಗ ನನ್ನ ಹೆಂಡತಿಯಾದ ರೇಷ್ಮಾ ಇವಳು ಜಗಳ ಬಿಡಿಸಲು ಬಂದಿದ್ದು ಫಜರ್ಾನಾಬೇಗಂ ಇವಳು ರೇಷ್ಮಾಳಿಗೆ ಎಲೇ ಸೂಳಿ ನೀನು ನನ್ನ ಜಾಗದಲ್ಲಿ ಅವನ ಹೆಂಡತಿಯಾಗಿ ಬರಲು ಅಧಿಕಾರವಿಲ್ಲ. ನಾನು ಅವನ ಮೊದಲನೇ ಹೆಂಡತಿ ಇದ್ದೀನಿ ಅಂತಾ ಅನ್ನುತ್ತಾ ತನ್ನ ತಾಯಿಯಾದ ಹಲೀಮಾಬೀ ಇವಳೊಂದಿಗೆ ಕೂಡಿ ರೇಷ್ಮಾಳ ಕೂದಲು ಹಿಡಿದು ನೆಲಕ್ಕೆ ಕೆಡವಿ ಕಾಲಿನಿಂದ ಒದ್ದರು. ಇಫರ್ಾನ್ ಮತ್ತು ರಿಯಾಜ್ ಇವರು ಕೈಯಿಂದ ನನ್ನ ಬೆನ್ನಿಗೆ ಮತ್ತು ಕಪಾಳಕ್ಕೆ ಹೊಡೆಯುತ್ತಿದ್ದಾಗ ಜಗಳ ನೋಡಿ ನಮ್ಮ ಮಾವನಾದ ಇಮಾಮಸಾಬ ಜೈನಾಪೂರ ಮತ್ತು ನಾಗರಾಜ ತೋಟದವರ ಇವರು ಬಂದು ಜಗಳ ಬಿಡಿಸಿಕೊಂಡರು. ಆಗ ಎಲ್ಲರೂ ನಮಗೆ ಹೊಡೆಯುವದನ್ನು ಬಿಟ್ಟು ಸೂಳೇ ಮಕ್ಕಳೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನನಗೆ ಅಷ್ಟೊಂದು ಗಾಯಗಳಾಗದ ಕಾರಣ ದವಾಖಾನೆಗೆ ತೋರಿಸಿಕೊಂಡಿಲ್ಲ. ನಾನು ಊರಲ್ಲಿ ಹಿರಿಯರಿಗೆ ವಿಚಾರಿಸಿ ತಡವಾಗಿ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ನನ್ನೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹಾಗೂ ಬಡಿಗೆಯಿಂದ ಹೊಡೆಬಡೆ ಮಾಡಿ ಗುಪ್ತಗಾಯ ಪಡಿಸಿ ನನಗೂ ಹಾಗು ನನ್ನ ಹೆಂಡತಿಯಾದ ರೇಷ್ಮಾಳಿಗೆ ಅವಾಚ್ಯವಾಗಿ ಬೈದು, ಜೀವದ ಭಯ ಹಾಕಿದ ಮೇಲ್ಕಾಣಿಸಿದ 05 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 184/2021 ಕಲಂ 143,147,323,324,504,506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 185/2021 ಕಲಂ: 87 ಕೆಪಿ ಯಾಕ್ಟ : ಇಂದು ದಿನಾಂಕ 21/12/2021 ರಂದು 7.00 ಪಿಎಂ ಕ್ಕೆ ಮಾನ್ಯ ಗಜಾನಂದ ಪಿ ಎಸ್ ಐ ಸಾಹೇಬರು ಕೆಂಭಾವಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ 5 ಜನ ಆರೋಪಿತರು, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ಗಜಾನಂದ ಬಿರಾದಾರ ಪಿ.ಎಸ್.ಐ(ಕಾ.ಸು) ಕೆಂಭಾವಿ ಪೊಲೀಸ್ ಠಾಣೆ ಇದ್ದು ವರದಿ ನೀಡುವುದೇನೆಂದರೆ, ನಾನು ಇಂದು ದಿನಾಂಕ 21/12/2021 ರಂದು 4.15 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಕಿರದಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ದೇವಸ್ಥಾನದ ಮುಂದಿನ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ಠಾಣೆಯ ಶಿವರಾಜ ಹೆಚ್.ಸಿ 85, ಶಂಕರಗೌಡ ಹೆಚ್.ಸಿ 33, ಹುಲಿಗೆಪ್ಪ ಪಿಸಿ 340, ಆನಂದ ಪಿಸಿ 43, ಪೆದ್ದಪ್ಪಗೌಡ ಪಿಸಿ 214 ಮತ್ತು ಬಸವರಾಜ ಪಿಸಿ 363 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಮತ್ತು ಮಕ್ತುಮಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 228 ನೇದ್ದರಲ್ಲಿ ಠಾಣೆಯಿಂದ 4.30 ಪಿಎಂ ಕ್ಕೆ ಹೊರಟು 5.10 ಪಿಎಂ ಕ್ಕೆ ಕಿರದಳ್ಳಿ ಗ್ರಾಮದ ಗ್ರಾಮದೇವತೆ ದೇವಸ್ಥಾನದ ಹತ್ತಿರ ಹೋಗಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ 4-5 ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಹಣ ಪಣಕ್ಕಿಟ್ಟು ಅಂದರ್ ಬಾಹರ್ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 5.15 ಪಿಎಂ ಕ್ಕೆ ನಾನು ಮತ್ತು ಸಿಬ್ಬಂದಿ ಜನರು ಕೂಡಿ ಒಮ್ಮೆಲೇ ದಾಳಿ ಮಾಡಿದ್ದು ದಾಳಿಯಲ್ಲಿ 5 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಸುರೇಶ ತಂದೆ ಶಾಂತಪ್ಪ ಸಾಹುಕಾರ ವ|| 49 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಕಿರದಳ್ಳಿ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಹತ್ತಿರ 450 ರೂ ಸಿಕ್ಕಿದ್ದು, 2) ವಿಶ್ವನಾಥರೆಡ್ಡಿ ತಂದೆ ಈರಣ್ಣಗೌಡ ಪರಸನಳ್ಳಿ ವ|| 28 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಕಿರದಳ್ಳಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಹತ್ತಿರ 550 ರೂ ಸಿಕ್ಕಿದ್ದು, 3) ಹಣಮಂತ ತಂದೆ ಬಸಪ್ಪ ಟಣಕೆದಾರ ವ|| 22 ಜಾ|| ಬೇಡರ ಉ|| ಒಕ್ಕಲುತನ ಸಾ|| ಕಿರದಳ್ಳಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಹತ್ತಿರ 700 ರೂ ಸಿಕ್ಕಿದ್ದು, 4) ಬಸವರಾಜ ತಂದೆ ಹಣಮಂತ್ರಾಯ ಬೋವಿ ವ|| 30 ಜಾ|| ವಡ್ಡರ ಉ|| ಒಕ್ಕಲುತನ ಸಾ|| ಕಿರದಳ್ಳಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಹತ್ತಿರ 350 ರೂ ಸಿಕ್ಕಿದ್ದು, 5) ಬಾಲಪ್ಪ ತಂದೆ ಹಣಮಂತ್ರಾಯ ಮಂಗಳೂರು ವ|| 28 ಜಾ|| ಬೇಡರ ಉ|| ಕೂಲಿ ಸಾ|| ಕಿರದಳ್ಳಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಹತ್ತಿರ 900 ರೂ ಸಿಕ್ಕಿದ್ದು, ಹಾಗೂ ಎಲ್ಲರ ಮಧ್ಯದ ಕಣದಲ್ಲಿ 200 ರೂ ಹಾಗೂ 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 5.15 ಪಿಎಂ ದಿಂದ 6.15 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿತರು ಮತ್ತು ಮುದ್ದೆಮಾಲು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 185/2021 ಕಲಂ 87 ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 93/2021 ಕಲಂ. 143, 147, 323, 324, 354, 109, 504, 506 ಸಂ. 149 ಐಪಿಸಿ : ದಿನಾಂಕ:18/12/2021 ರಂದು ತನ್ನ ಮನೆಯ ಹತ್ತಿರ ಇದ್ದಾಗ, ಆರೋಪಿತರೆಲ್ಲರೂ ಕುಡಿಕೊಂಡು ಏ ಸೂಳಿ ನಿಮ್ಮ ತಮ್ಮಂದಿರು ಬೆಳಿಗ್ಗೆ, ನಮ್ಮ ಮನೆಯ ಮುಂದೆ ಕಟ್ಟೆ ಕಟ್ಟಬೇಡ ಅಂದಿದ್ದರು. ನಾವು ಕಟ್ಟೆ ಕಟ್ಟಿದ್ದೇವೆ ನೋಡು ಅಂದು ಒದರಾಡಹತ್ತಿದ್ದು, ಆಗ ನಾನು ಏನ್ರೆಪಾ ರಸ್ತೆಯ ಮೇಲೆ ತಿರುಗಾಡಲು ತೊಂದರೆ ಮಾಡಿದ್ದಿರಿ ಅಂತಾ ಅಂದಿದ್ದಕ್ಕೆ, ಆರೋಪಿರೆಲ್ಲರೂ ಸೇರಿ ಫಿರ್ಯಾದಿಗೆ ಕೈ ಹಿಡಿದು ಎಳೆದಾಡಿದ್ದು, ಅಲ್ಲದೆ ಸೀರೆ ಹಿಡಿದು ಎಳೆದಾಡಿ ಕೈಯಿಂದ & ಸಣ್ಣಕಟ್ಟಿಗೆಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಇತ್ತೀಚಿನ ನವೀಕರಣ​ : 22-12-2021 10:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080