ಅಭಿಪ್ರಾಯ / ಸಲಹೆಗಳು

                                                                               ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 22-12-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 174/2022 ಕಲಂ 279, 304 (ಎ)  ಐಪಿಸಿ:21/12/2022 ರಂದು ಬೆಳಗ್ಗೆ 07-00 ಗಂಟೆಗೆ ಪಿಯರ್ಾಧಿದಾರಳಾದ ಶರಭಮ್ಮ ಗಂಡ ಶರಬಣ್ಣ ನಾಯ್ಕೋಡಿ, ವಯ: 25 ವರ್ಷ, ಜಾ: ತಳವಾರ, ಉ: ಕೂಲಿ ಕೆಲಸ, ಸಾ: ರಸ್ತಾಪೂರ, ತಾ: ಶಹಾಪೂರಕಿ: ಯಾದಗಿರಿ ಈಕೆಯು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ  ನನ್ನ ಗಂಡ ಶರಭಣ್ಣ ಈತನು ನಮ್ಮ ಆಟೋ ನಂಬರ ಕೆ ಎ 33 - 8637 ಇದನ್ನು ನಡೆಸಿಕೊಂಡು ಮತ್ತು ಗಾರೆ ಕೆಲಸ ಮಾಡಿಕೊಂಡು ಇರುತ್ತಾನೆ. ಈಗ ನಾಲ್ಕು ಐದು ದಿನಗಳ ಹಿಂದೆ ನನ್ನ ತವರೂರಾದ ಭೀಮನಳ್ಳಿ ಗ್ರಾಮದಲ್ಲಿ ದೇವರ ಕಾರ್ಯಕ್ರಮ ಇರುವುದರಿಂದ ನಾನು ಮತ್ತು ನನ್ನ ಗಂಡ ಶರಭಣ್ಣ ಇಬ್ಬರೂ ಕೂಡಿ ನಮ್ಮ ಆಟೋದಲ್ಲಿ ಭೀಮನಳ್ಳಿ ಗ್ರಾಮಕ್ಕೆ ಬಂದಿದ್ದೇವೆ. ನಿನ್ನೆ ರಾತ್ರಿ ದೇವರ ಕಾರ್ಯಕ್ರಮ ಎಲ್ಲ ಮುಗಿದಿರುತ್ತದೆ. ರಾತ್ರಿ 10.00 ಗಂಟೆ ಸುಮಾರಿಗೆ ನನ್ನ ಗಂಡ ಶರಭಣ್ಣ ಈತನು ನನಗೆ ದೇವರ ಕಾರ್ಯಕ್ರಮ ಮುಗಿತು ನಾನು ಊರಿಗೆ ಹೋಗುತ್ತೇನೆ ಎಂದು ಹೇಳಿದನು ಆಗ ನಾನು ಬೇಡ ರಾತ್ರಿ ಆಗಿದೆ ಮುಂಜಾನೆ ಹೋಗುವಂತೆ ಅಂದೆನು ಆಗ ನನ್ನ ಗಂಡ ಇಲ್ಲ ಕೆಲಸ ಇದೆ ಆಜರ್ೆಂಟ ಹೋಗಬೇಕು ಅಂತಾ ಹೇಳಿ ದಿನಾಂಕ : 20/12/2022 ರಂದು ರಾತ್ರಿ 10-30 ಗಂಟೆ ಸುಮಾರಿಗೆ ಭೀಮನಳ್ಳಿ ಗ್ರಾಮದಿಂದ ರಸ್ತಾಪೂರಕ್ಕೆ ಹೋಗುತ್ತೇನೆ ಅಂತಾ ಆಟೋ ತೆಗೆದು ಹೋದನು.
  ರಾತ್ರಿ 12-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಇರುವಾಗ ನಮ್ಮ ದೊಡ್ಡಪ್ಪನ ಮಗ ಸಿದ್ದಣ್ಣ ತಂದೆ ದೇವಿಂದ್ರಪ್ಪ ಈತನು ಮನೆಗೆ ಬಂದು ತಿಳಿಸಿದ್ದೇನೆಂದರೆ ನಿನ್ನ ಗಂಡ ಶರಭಣ್ಣ ಈತನು ಭೀಮನಳ್ಳಿ ಯಿಂದ ರಸ್ತಾಪೂರಕ್ಕೆ ಹೋಗುವಾಗ ಯಾದಗಿರಿ-ಸೇಡಂ ಮುಖ್ಯ ರಸ್ತೆಯ ಮೇಲೆ ಬಾಚವಾರ ಕ್ರಾಸ ಹತ್ತಿರ ರೋಡಿನ ಕವರ್ಿಗೆ ಆಟೋವನ್ನು ವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ರೋಡಿನ ಪಕ್ಕಕ್ಕೆ ಆಟೋ ಪಲ್ಟಿ ಮಾಢಿಕೊಂಡು ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಬಿದ್ದು ಸತ್ತಿರುತ್ತಾನೆ ಅಂತಾ ತಿಳಿಸಿದ್ದರಿಂದ ಆಗ ನಾನು ನನ್ನ ತಂದೆ ಯಂಕಣ್ಣ ಮತ್ತು ನಮ್ಮೂರಿನ ನಾಗಪ್ಪ ತಂದೆ ಶಿವಣ್ಣ ನಾಯ್ಕೋಡಿ ಎಲ್ಲರು ಕೂಡಿ ಅಪಘಾತ ಸ್ಥಳಕ್ಕ ಬಂದು ನೋಡಲಾಗಿ ನಮ್ಮ ಆಟೋ ರೋಡಿನ ಪಕ್ಕದಲ್ಲಿ ಪಲ್ಟಿಯಾಗಿಬಿದ್ದಿದ್ದು  ನನ್ನ ಗಂಡನಿಗೆ ನೋಡಲಾಗಿ ಆತನಿಗೆ ತಲೆಯ ಬಲಭಾಗಕ್ಕೆ ಭಾರಿ ರಕ್ತಗಾಯವಾಗಿತ್ತು. ಎಡಗಡೆ ಭುಜಕ್ಕೆ ತರಚಿದ ಗಾಯವಾಗಿತ್ತು ಸ್ಥಳದಲ್ಲಿ ಮೃತ ಪಟ್ಟಿದ್ದನು. ಆಗ ನಾನು ನಮ್ಮ ಸಿದ್ದಣ್ಣನಿಗೆ ಹೇಗಾಯಿತು ಅಂತಾ ಕೇಳಲಾಗಿ ನಾನು ದಿನಾಂಕ: 20/12/2022 ರಂದು ರಾತ್ರಿ 11-30 ಗಂಟೆ ಸುಮಾರಿಗೆ  ಹತ್ತಿಕುಣಿ ಗ್ರಾಮದಿಂದ ಭೀಮನಳ್ಳಿಗೆ ಮೋ.ಸೈಕಲ್ ಮೇಲೆ ಹೋಗುತ್ತಿರುವಾಗ ಬಾಚವಾರ ಕ್ರಾಸ ಹತ್ತಿರ ಶರಭಣ್ಣ ಈತನು ತಾನು ನಡೆಸುವ ಆಟೋ ನಂ ಕೆಎ33-8637 ಇದನ್ನು ರೋಡಿನ ಕವರ್ಿನಲಿ ್ಲ ಅತಿ ವೇಗ ಮತ್ತು ನಿರ್ಲಕ್ಷ್ಯತನದಿಂದ ನಡೆಸಿ ಆಟೋ ಕಂಟ್ರೋಲ್ ಮಾಡಲಾಗದೆ ರೋಡಿನ ಪಕ್ಕಕ್ಕೆ ಆಟೋ ಪಲ್ಟಿ ಮಾಡಿರುತ್ತಾನೆ ಅಂತಾ ತಿಳಿಸಿರುತ್ತಾನೆ. ಕಾರಣ ನಮ್ಮ ಆಟೋ ನಂಬರ ಕೆಎ33-8637 ಇದನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಪಲ್ಟಿ ಮಾಡಿ ನನ್ನ ಗಂಡ ಶರಭಣ್ಣ ತಂದೆ ಹಣಮಂತ ನಾಯ್ಕೊಡಿ, ವಯ:28ವರ್ಷ, ಸಾ: ರಸ್ತಾಪೂರ ಈತನು ಮೃತಪಟ್ಟಿದ್ದು ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಪಿಯರ್ಾಧಿ ಸಾರಂಶ.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 174 ಸಿ.ಆರ್.ಪಿ.ಸಿ: ಇಂದು ದಿನಾಂಕ:21/12/2022 ರಂದು 6-30 ಪಿಎಮ್ ಕ್ಕೆ ಶ್ರೀ ಮಲ್ಲಿಕಾಜರ್ುನ ತಂದೆ ಬಸವರಾಜಪ್ಪ ಸಾಹುಕಾರ, ವ:38, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ಬಬಲಾದ ತಾ:ವಡಗೇರಾ ರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರನ್ನು ಸಲ್ಲಿಸಿದ್ದು, ಸ್ವಿಕೃತ ಮಾಡಿಕೊಂಡೆನು. ಸದರಿ ದೂರಿನ ಸಾರಾಂಶವೇನಂದರೆ ಬಬಲಾದ ಮತ್ತು ಬೀರನಾಳ ಎರಡು ಗ್ರಾಮಗಳ ಸೀಮಾಂತರಗಳಲ್ಲಿ ನಮ್ಮ ಜಮೀನು ಇರುವುದರಿಂದ ನಾವು ನಮ್ಮ ಜಮೀನುಗಳಿಗೆ ಭೀಮಾ ನದಿಯಿಂದ ಪೈಪಲೈನ ಮುಖಾಂತರ ನೀರಾವರಿ ಮಾಡಿಕೊಂಡಿರುತ್ತೇವೆ. ಸದರಿ ನಮ್ಮ ಹೊಲಗಳಿಗೆ ನೀರನ್ನು ಚಾಲು ಮಾಡಲು ಬೀರನಾಳ ಸೀಮಾಂತರದ ಭೀಮಾ ನದಿ ದಂಡೆ ಮೇಲೆ ಸಾರ್ವಜನಿಕ ರುದ್ರಭೂಮಿ ಸಮೀಪ ಮೋಟರ್ ಪಂಪಸೆಟಗಳನ್ನು ಕೂಡಿಸಿಕೊಂಡಿರುತ್ತೇವೆ. ನಮ್ಮ ಹೊಲಕ್ಕೆ ನೀರು ಬೇಕಾದಾಗ ನಾನು ಹೋಗಿ ನಮ್ಮ ಮೋಟರ್ಗಳನ್ನು ಚಾಲು ಮಾಡಿ ನೀರು ಹರಿಸುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ:20/12/2022 ರಂದು ಸಾಯಂಕಾಲ 5-45 ಗಂಟೆ ಸುಮಾರಿಗೆ ನಾನು ನಮ್ಮ ಮೇಲ್ಕಂಡ ಮೋಟರ್ ಗಳನ್ನು ಚಾಲು ಮಾಡಲು ಹೋದಾಗ ಸದರಿ ಬೀರನಾಳ ರುದ್ರಭೂಮಿ ಸಮೀಪ ಭೀಮಾ ನದಿ ನೀರಿನಲ್ಲಿ ದಂಡೆಗೆ ಒಂದು ಅಪರಿಚಿತ ಗಂಡಸಿನ ಶವ ಬೋರಲು ಬಿದ್ದಿದ್ದು ನೋಡಿದೆನು. ಅಷ್ಟರಲ್ಲಿ ಅಲ್ಲಿಯೇ ಅಕ್ಕಪಕ್ಕದ ಜಮೀನುದವರಾದ ಶಿವಪ್ಪ ತಂದೆ ಶರಣಪ್ಪ ಅಂಗಡಿ ಮತ್ತು ದೇವಪ್ಪ ಪೂಜಾರಿ ಇಬ್ಬರೂ ಸಾ:ಬೀರನಾಳ ಇವರು ಕೂಡಾ ಬಂದರು. ನಾವೆಲ್ಲರೂ ಸೇರಿ ಶವವನ್ನು ನಿಧಾನವಾಗಿ ದಂಡೆಗೆ ತಂದು ನೋಡಿದಾಗ ಅಪರಚಿತ ಗಂಡಸಿನ ಶವ ಇದ್ದು, ಅಂದಾಜು 30 ರಿಂದ 35 ವರ್ಷ ವಯಸ್ಸು ಇರಬಹುದು. ಮುಖದ ಮೇಲೆ ಸಣ್ಣ ದಾಡಿ ಇದ್ದು, ತಲೆ ಮೇಲೆ 3 ಇಂಚ ಕಪ್ಪು ಕೂದಲು ಇರುತ್ತವೆ. ಉದ್ದನೆ ಮೂಗು ಇರುತ್ತದೆ. ಗೋಧಿ ಬಣ್ಣ ಇರುತ್ತದೆ. ಮೈಮೇಲೆ ಒಂದು ತಿಳಿ ನೀಲಿ ಬಣ್ಣದ ಕಂಪನಿ ಆಫ ಬನಿಯನ್ ಮತ್ತು ನೀಲಿ ಕಪ್ಪು ಮಿಶ್ರಿತ ಚೌಕಡಿ ಲುಂಗಿ ಧರಿಸಿರುತ್ತಾನೆ. ಸದರಿಯವನ ಮೈಮೇಲೆ ಯಾವುದೇ ರೀತಿಯ ಗಾಯದ ಗುರುತು ಮತ್ತು ಕಲೆಗಳು ಕಂಡುಬಂದಿರುವುದಿಲ್ಲ. ಸದರಿಯವನು ಅಪರಿಚಿತನಿದ್ದು, ಸುಮಾರು ಒಂದೆರಡು ದಿನಗಳ ಹಿಂದೆ ನೀರು ಕುಡಿಯಲು, ಸ್ನಾನ ಮಾಡಲು ಅಥವಾ ಮೀನು ಹಿಡಿಯಲು ಭೀಮಾ ನದಿಗೆ ಬಂದು ಆಕಸ್ಮಿಕವಾಗಿ ಆಳವಾದ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಂತೆ ಕಂಡುಬರುತ್ತದೆ. ಸದರಿ ಮೃತ ಅಪರಿಚಿತ ಶವವನ್ನು ವಡಗೇರಾ ಠಾಣೆ ಪೊಲೀಸರ ಮತ್ತು ಸ್ವಯಂ ಸೇವಕರ ಸಹಾಯದಿಂದ ಯಾದಗಿರಿ ಸರಕಾರಿ ಆಸ್ಪತ್ರೆ ಶವಗಾರಕ್ಕೆ ಸಾಗಿಸಿ, ಶವಗಾರದಲ್ಲಿ ಇಟ್ಟಿರುತ್ತೇವೆ. ಯಾರಾದರೂ ಅಕ್ಕಪಕ್ಕದ ಗ್ರಾಮದವರು ಬಂದು ಗುರುತು ಹಿಡಿಯಬಹುದು ಎಂದು ಇಲ್ಲಿಯರೆಗೆ ಕಾಯ್ದಿದ್ದು, ಯಾರು ಬಂದು ಗುರುತಿಸಿದ ಕಾರಣ ಠಾಣೆಗೆ ಬಂದು ದೂರು ಸಲ್ಲಿಸಲು ತಡವಾಗಿರುತ್ತದೆ. ಕಾರಣ ಮೃತನ ಮರಣದಲ್ಲಿ ಮೇಲ್ನೋಟಕ್ಕೆ ಯಾರ ಮೇಲೆ ಯಾವುದೇ ಸಂಶಯ-ಫಿರ್ಯಾಧಿ ಕಂಡುಬರುತ್ತಿಲ್ಲ. ಆದ್ದರಿಂದ ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ. 25/2022 ಕಲಂ: 174 ಸಿ.ಆರ್.ಪಿ.ಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 98/2022 ಕಲಂ. 143,147,148,323,324,326,307,504,506 ಸಂ 149 ಐಪಿಸಿ: 2020ರಲ್ಲಿ ಜರುಗಿದಗ್ರಾಮ ಪಂಚಾಯತಚುನಾವಣೆ ಕಾಲಕ್ಕೆ ಫಿಯರ್ಾದಿ ಮತ್ತುಆರೋಪಿತರ ನಡುವೆತಕರಾರು ಆಗಿ ಇಬ್ಬರ ನಡುವೆರಾಜಕೀಯ ವೈಷಮ್ಯ ಬೆಳೆದಿರುತ್ತದೆ. ಅಲ್ಲದೇ ಪರಮೇಶಈತನ ಸಂಬಂಧಿ ಶಂಕರಈತನುಫಿಯರ್ಾದಿ ಚಿಕ್ಕಪ್ಪ ಸುಭಾಸ ನಾಟೆಕಾರಈತನ ಮಗಳಿಗೆ ಪ್ರೀತಿಸಿ ಮದುವೆಯಾದ ವಿಷಯದಲ್ಲಿ ಸಹ ಇಬ್ಬರ ನಡುವೆ ವೈಷಮ್ಯ ಬೆಳೆದಿರುತ್ತದೆ. ಚುನಾವಣೆ ಕಾಲಕ್ಕೆ ಪರಮೇಶಈತನಕಡೆಇದ್ದದೇವಿಂದ್ರಪ್ಪ ಹಲಗಿ ಈತನು ಈಗ ಕೆಲವು ದಿನಗಳ ಹಿಂದೆಯೇಸುಮಿತ್ರಈತನೊಂದಿಗೆರಾಜಿಯಾಗಿ ನಿನ್ನೆ ದಿನಾಂಕ:20/12/2022 ರಂದುಯೇಸುಮಿತ್ರ ಮತ್ತುದೇವಿಂದ್ರಪ್ಪಇವರುಕೂಡಿದೇವರಕಾರ್ಯಕ್ರಮ ಮಾಡಿರುತ್ತಾರೆ. ಇದೇ ಹಿನ್ನೆಲೆಯಲ್ಲಿ ದಿನಾಂಕ:21/12/2022 ರಂದು ಮದ್ಯಾಹ್ನ 3 ಪಿ.ಎಮ್. ಸುಮಾರಿಗೆ ಫಿಯರ್ಾದಿ ಸಂಗಡಇತರರುಕೂಡಿತಮ್ಮ ಮನೆಯ ಹತ್ತಿರಇದ್ದಾಗಆರೋಪಿತರೆಲ್ಲರೂಕೂಡಿಕಲ್ಲು ಬಡಿಗೆ ಹಿಡಿದುಕೊಂಡು ಬಂದು ಫಿಯರ್ಾದಿಗೆ ಮತ್ತು ಜಗಳ ಬಿಡಿಸಲು ಬಂದ ಫಿಯರ್ಾದಿ ಮನೆಯವರು ಮತ್ತುಇತರರಿಗೆಕಲ್ಲು ಬಡಿಗೆಯಿಂದ ಹೊಡೆಬಡೆ ಮಾಡಿ ಸಾದಾ ಮತ್ತು ಭಾರಿರಕ್ತಗಾಯಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿ ಕೊಲೆ ಮಾಡಲು ಪ್ರಯತ್ನ ಮಾಡಿದ ಬಗ್ಗೆ ದೂರು.

ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 99/2022 ಕಲಂ. 143,147,148,323,324,354,307,504,506 ಸಂ 149 ಐಪಿಸಿ: 2020ರಲ್ಲಿ ಜರುಗಿದಗ್ರಾಮ ಪಂಚಾಯತಚುನಾವಣೆ ಕಾಲಕ್ಕೆ ಫಿಯರ್ಾದಿ ಮತ್ತುಆರೋಪಿತರ ನಡುವೆತಕರಾರು ಆಗಿ ಇಬ್ಬರ ನಡುವೆರಾಜಕೀಯ ವೈಷಮ್ಯ ಬೆಳೆದಿರುತ್ತದೆ. ಅಲ್ಲದೇ ಪರಮೇಶಈತನ ಸಂಬಂಧಿ ಶಂಕರಈತನುಯೇಸುಮಿತ್ರತಮ್ಮಸುಭಾಸ ನಾಟೆಕಾರಈತನ ಮಗಳಿಗೆ ಪ್ರೀತಿಸಿ ಮದುವೆಯಾದ ವಿಷಯದಲ್ಲಿಇಬ್ಬರ ನಡುವೆ ವೈಷಮ್ಯ ಬೆಳೆದಿರುತ್ತದೆ. ಚುನಾವಣೆ ಕಾಲಕ್ಕೆ ಪರಮೇಶಈತನಕಡೆಇದ್ದದೇವಿಂದ್ರಪ್ಪ ಹಲಗಿ ಈತನು ಈಗ ಕೆಲವು ದಿನಗಳ ಹಿಂದೆಪರಮೇಶಈತನೊಂದಿಗೆತಕರಾರು ಮಾಡಿಯೇಸುಮಿತ್ರಈತನೊಂದಿಗೆರಾಜಿಯಾಗಿ ನಿನ್ನೆ ದಿನಾಂಕ:20/12/2022 ರಂದುಯೇಸುಮಿತ್ರಮತ್ತುದೇವಿಂದ್ರಪ್ಪಇವರುಕೂಡಿದೇವರಕಾರ್ಯಕ್ರಮ ಮಾಡಿರುತ್ತಾರೆ. ಇದೇ ಹಿನ್ನೆಲೆಯಲ್ಲಿ ದಿನಾಂಕ:21/12/2022 ರಂದು ಮದ್ಯಾಹ್ನ 3.15 ಪಿ.ಎಮ್. ಸುಮಾರಿಗೆ ಫಿಯರ್ಾದಿ ಸಂಗಡಇತರರುಕೂಡಿತಮ್ಮ ಮನೆಯ ಹತ್ತಿರಇದ್ದಾಗಆರೋಪಿತರೆಲ್ಲರೂಕೂಡಿಕಲ್ಲು ಬಡಿಗೆ ಹಿಡಿದುಕೊಂಡು ಬಂದು ಫಿಯರ್ಾದಿಗೆ ಮತ್ತು ಜಗಳ ಬಿಡಿಸಲು ಬಂದ ಫಿಯರ್ಾದಿ ಮನೆಯವರು ಮತ್ತುಇತರರಿಗೆಕಲ್ಲು ಬಡಿಗೆಯಿಂದಹೊಡೆಬಡೆ ಮಾಡಿ ಸಾದಾರಕ್ತಗಾಯಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿ, ಫಿಯರ್ಾದಿ ತಾಯಿಗೆ ಮಾನಭಂಗಪಡಿಸಿ, ಕೊಲೆ ಮಾಡಲು ಪ್ರಯತ್ನ ಮಾಡಿದ ಬಗ್ಗೆ ದೂರು.
 

ಇತ್ತೀಚಿನ ನವೀಕರಣ​ : 22-12-2022 11:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080