ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 23-01-2023


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 10/2023 ಕಲಂ: 78() ಕೆ.ಪಿ. ಆಕ್ಟ್ : ಇಂದು ದಿನಾಂಕ 22.01.2023 ರಂದು ಬೆಳಿಗ್ಗೆ 11:00 ಗಂಟೆಗೆ ಗುರುಮಟಕಲ್ ಪಟ್ಟಣದ ಚಪೆಟ್ಲಾ ಕ್ರಾಸ್ನಲ್ಲಿ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ ಸಾಹೇಬರು ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಸಮಯ ಬೆಳಿಗ್ಗೆ 11:00 ಗಂಟೆಗೆ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವರ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 1010/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ದಿನಾಂಕ 22.01.2023 ರಂದು ಸಮಯ ಮಧ್ಯಾಹ್ನ 12:15 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಠಾಣೆ ಗುನ್ನೆ ನಂಬರ 10/2023 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

ಗುರಮಿಠಕಲ್ ಪೊಲೀಸ ಠಾಣೆ:-
ಗುನ್ನೆ ನಂ. 11/2023 ಕಲಂ.ಮಹಿಳೆ ಕಾಣೆಯಾದ ಬಗ್ಗೆ. : ಈಗ್ಗೆ ಸುಮಾರು 6 ತಿಂಗಳಿಂದ ಈ ಪ್ರಕರಣದಲ್ಲಿ ಫಿಯರ್ಾದಿಯ ಹೆಂಡತಿ ಶೃತಿ @ ಸೋನಿ ಮನೆಯಲ್ಲಿ ಮಾನಸಿಕ ಅಸ್ವಸ್ಥಳಂತೆ ವತರ್ಿಸುತ್ತಾ ಕೋಪಗೊಳ್ಳುತ್ತಿದ್ದಳು. ನಾನು ಇಲ್ಲಿ ಇರಲ್ಲ, ತವರು ಮನೆಗೆ ಹೈದರಾಬಾದಗೆ ಹೋಗುತ್ತೇನೆಂದು ಸದಾ ಹೇಳುತ್ತಿದ್ದಳು. ದಿನಾಂಕಃ 18.01.2023 ರ ರಾತ್ರಿ 11 ಗಂಟೆಯ ಸುಮಾರಿಗೆ ಎಂದಿನಂತೆ ಫಿಯರ್ಾದಿ ಮತ್ತು ಆಕೆಯ ಹೆಂಡತಿ ಮಲಗಿಕೊಂಡಿದ್ದರು, ಫಿಯರ್ಾದಿಗೆ ದಿನಾಂಕಃ 19.01.2023 ರ ಬೆಳಗ್ಗೆ 05ಃ30 ಗಂಟೆಯ ಸುಮಾರಿಗೆ ಎಚ್ಚರಿಕೆವಾಗಿ ನೋಡಲಾಗಿ ತನ್ನ ಹೆಂಡತಿ ಮನೆಯಲ್ಲಿರಲಿಲ್ಲ. ಫಿಯರ್ಾದಿಯ ಹೆಂಡತಿ ಶೃತಿ @ ಸೋನಿ ಇವಳು ದಿನಾಂಕಃ 18.01.2023 ರಂದು ರಾತ್ರಿ 11 ಗಂಟೆಯಿಂದ ದಿನಾಂಕಃ19.01.2023 ರಂದು 05ಃ00 ಗಂಟೆಯ ಮದ್ಯದ ಅವಧಿಯಲ್ಲಿ ಮನೆಯಲ್ಲಿದ್ದ ಕಾಲೇಜ ಬ್ಯಾಗ ಮತ್ತು ಕೈ ಚೀಲಗಳಲ್ಲಿ ಬಟ್ಟೆ ಚಿನ್ನಾಭರಣ ಮತ್ತು ನಗದು ಹಣ ತೆಗೆದುಕೊಂಡು ಹೋಗಿದ್ದಾಳೆ. ಫಿಯರ್ಾದಿಯು ಎಲ್ಲಾ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರು ಸಿಕ್ಕಿರುವದಿಲ್ಲ. ಕಾರಣ ಕಾಣೆಯಾದ ನನ್ನ ಹೆಂಡತಿಗೆ ಪತ್ತೆ ಮಾಡಿಕೊಡಲು ವಿನಂತಿ ಅಂತಾ ಫಿಯರ್ಾದಿ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ. 15/2023 ಕಲಂ 317 ಐ.ಪಿ.ಸಿ : ಇಂದು ದಿನಾಂಕ 22/01/2023 ರಂದು ಸಾಯಂಕಾಲ 17-00 ಗಂಟೆಗೆ ಫಿಯರ್ಾದಿಯವರು ಠಾಣೆಗೆ  ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದರ ಸಾರಾಂಶವೇನೆಂದರೆ, ಫಿಯರ್ಾದಿಯವರು 3 ವರ್ಷಗಳಿಂದ ಶಹಾಪೂರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮಹಿಳಾ ಮೇಲ್ವಿಚಾರಕರು ಅಂತಾ ಕರ್ತವ್ಯ ನಿರ್ವಹಿಸಿಕೊಂಡಿರುತ್ತಾರೆ.ಹೀಗಿರುವಾಗ ನಿನ್ನೆ ದಿನಾಂಕ 21/01/2023 ರಂದು ಮುಂಜಾನೆ 07-30 ಗಂಟೆಗೆ ತಮ್ಮ  ಮನೆಯಲ್ಲಿದ್ದಾಗ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಶ್ರೀ ಗುರುರಾಜ ಶೆಟ್ಟಿ ಇವರು, ಫೋನ್ ಮಾಡಿ, ಶಹಾಪೂರ ಪಟ್ಟಣದ ಎ.ಪಿ.ಎಮ್.ಸಿ ಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಒಂದು ನವಜಾತ  ಹೆಣ್ಣು ಶಿಶು ಇರುವ ಬಗ್ಗೆ  ಮಾಹಿತಿ ಬಂದಿರುತ್ತದೆ ಆದ್ದರಿಂದ ತಾವು ಸ್ಥಳಕ್ಕೆ ಭೇಟಿ ಮಾಡಿರಿ ಅಂತಾ ತಿಳಿಸಿದ ಮೇರೆಗೆ ಫಿಯರ್ಾದಿಯವರು ಸ್ಥಳಕ್ಕೆ ಭೇಟಿ ಮಾಡಿ ಒಂದು ಹೆಣ್ಣು ನವಜಾತ ಶಿಶುವನ್ನು ರಕ್ಷಣೆ ಮಾಡಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ.ಕಾರಣ ಯಾರೋ ಅಪರಿಚಿತ ತಂದೆ-ತಾಯಿಯವರು ಅಥವಾ ಮಗುವಿನ ರಕ್ಷಣೆ ಹೊಣೆ ಹೊತ್ತಿರುವುವರು ಉದ್ದೇಶಪೂರ್ವಕವಾಗಿ ಶಿಶುವಿನ ಜನನವನ್ನು ಮರೆಮಾಚುವ ಉದ್ದೇಶದಿಂದ ಸಂಪೂರ್ಣವಾಗಿ ತೊರೆದು ಬಿಡುವ ಸಂಬಂಧ ಮಗುವನ್ನು ಬಿಟ್ಟು ಹೋಗಿರುವ ಅಪರಿಚಿತರ ವಿರುದ್ಧ  ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.

ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 04/2023 ಕಲಂ 279, 337, 338 ಐ.ಪಿ.ಸಿ : ದಿನಾಂಕ: 16/01/2023 ರಂದು 7.45 ಪಿ.ಎಮ್. ಸುಮಾರಿಗೆ ಫಿಯರ್ಾದಿ ಹಾಗೂ ಗಾಯಾಳು ಕೂಡಿತಮ್ಮ ಮೋಟರ್ ಸೈಕಲ್ ನಂ:ಕೆಎ-33, ಇಎ-4241 ನೇದ್ದರಲ್ಲಿ ಕುಳಿತು ಸನ್ನತ್ತಿಗ್ರಾಮದಿಂದಊರಕಡೆಗೆ ಹೊರಟಾಗಅವರಎದುರಿನಿಂದಆರೋಪಿತನುತನ್ನ ಮೋಟರ್ ಸೈಕಲ್ ನಂ:ಕೆಎ-33, ಎಕ್ಸ್-6774 ನೇದ್ದನ್ನುಅತಿವೇಗ ಮತ್ತುಅಲಕ್ಷತನದಿಂದ ಓಡಿಸಿಕೊಂಡು ಬಂದಿದ್ದರಿಂದಆರೋಪಿತನ ನಿಯಂತ್ರಣತಪ್ಪಿ ಫಿಯರ್ಾದಿಯ ಮೋಟರ್ ಸೈಕಲ್ಗೆಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಸದರಿಅಪಘಾತದಲ್ಲಿ ಫಿಯರ್ಾದಿಗೆ ಸಾದಾತರಚಿದರಕ್ತಗಾಯ ಮತ್ತು ಗಾಯಾಳುವಿಗೆ ಭಾರಿ ರಕ್ತಗಾಯಗಳಾಗಿದ್ದು, ಆರೋಪಿತನಿಗೆ ಸಹ ಸಣ್ಣಪುಟ್ಟ ಗಾಯಗಳಾದ ಬಗ್ಗೆ ದೂರು.
 

ಇತ್ತೀಚಿನ ನವೀಕರಣ​ : 23-01-2023 11:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080