ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 23-02-2022


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 38/2022 ಕಲಂ: 279, 304(ಎ) ಐ.ಪಿ.ಸಿ : ಇಂದು ದಿನಾಂಕ 22.02.2022 ರಂದು 02.15 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ತಿರುಪತಿ ತಂದೆ ಸಿರಸಪ್ಪ ಬಡಿಗೇರ ವಯಾ|| 40 ಜಾತಿ|| ವಿಶ್ವಕರ್ಮ ಉ|| ಬಡಗಿತನ ಸಾ: ಕೆಂಭಾವಿ ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನೆಂದರೆ, ನಮ್ಮ ಮಾವನವರಾದ ಮನೋಹರ ಪತ್ತಾರ ಇವರದು ಯಡ್ರಾಮಿ ತಾಲೂಕಿನ ವಡಗೇರಾ ಗ್ರಾಮವಿದ್ದು ಅವರಿಗೆ ಮೂರು ಜನ ಗಂಡು ಮಕ್ಕಳು ಹಾಗು ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಆದರೆ ಹಿರಿಯ ಮಗನಾದ ಹಣಮಂತ್ರಾಯ ತಂದೆ ಮನೋಹರ ಪತ್ತಾರ ವ|| 18 ವರ್ಷ ಈತನು ನಮ್ಮ ಹತ್ತಿರವೇ ಇದ್ದು ಕೆಂಭಾವಿ ಪಟ್ಟಣ್ದ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ 2ನೇ ವರ್ಷದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ಇರುತ್ತಾನೆ. ಮನೆಯಲ್ಲಿ ಎನೋ ಕೆಲಸವಿಒದೆ ಅಂತ ನಮ್ಮ ಅಳಿಯನಾದ ಹಣಮಂತ್ರಾಯ ಈತನು ನಿನ್ನೆ ದಿನಾಂಕ 21.02.2022 ರಮದು ತಮ್ಮ ಊರಾದ ವಡಗೇರಾ ಗ್ರಾಮಕ್ಕೆ ಹೋಗಿದ್ದನು. ಆತನದು ಒಂದು ಯಮಾಹ ಕಂಪನಿಯ ಕೆ-11ಇಡಿ-7587 ಮೋಟರ್ ಸೈಕಲ್ ಇದ್ದು ಸದರಿ ಮೋಟರ ಸೈಕಲ್ ಮೇಲೆ ಹೋಗುವದು ಬರುವದು ಮಾಡುತ್ತಿದ್ದನು. ಅದರಂತೆ ನಿನ್ನೆ ಆ ಮೋಟರ ಸೈಕಲ್ ಮೇಲೆ ವಡಗೇರಾ ಗ್ರಾಮಕ್ಕೆ ಹೋಗಿದ್ದನು. ಹೀಗಿದ್ದು ಇಂದು ದಿನಾಂಕ 22.02.2022 ರಂದು 12.30 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನಗೆ ಪೋನ ಮಾಡಿ ನಮ್ಮ ಅಳಿಯನಾದ ಹಣಮಂತ್ರಾಯ ತಂದೆ ಮನೋಹರ ಪತ್ತಾರ ಈತನು ಮಲ್ಲಾ ಕೆಂಭಾವಿ ರಸ್ತೆಯ ನಗನೂರ ಕ್ರಾಸ ಇನ್ನೂ 500 ಮೀಟರ ದೂರದಲ್ಲಿ ಮಲ್ಲಾದಿಂದ ಬರುವಾಗ ತನ್ನ ಮೋಟಾರ ಸೈಕಲ್ ಸ್ಕಿಡ್ಡಾಗಿ ರೋಡಿನ ಬಲಮಗ್ಗಲಿನಲ್ಲಿ ಕವಳಿ ಹೊಲದಲ್ಲಿ ಬಿದ್ದಿರುತ್ತಾನೆ ಅಂತ ತಿಳಿಸಿದಾಗ ನಾನು ಕೂಡಲೇ ಆ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಅಳಿಯ ಹಣಮಂತ್ರಾಯ ಈತನಿಗೆ ತಲೆಗೆ ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಸತ್ತು ಬಿದ್ದಿದ್ದನು. ನನ್ನ ಅಳಿಯನ ಮೋಟರ ಸೈಕಲ ಸಹ ಕವಳಿ ಗದ್ದೆಯಲ್ಲಿ ಬಿದ್ದಿದ್ದು ನನ್ನ ಅಳಿಯನು ತನ್ನ ಮೋಟರ ಸೈಕಲನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿ ಒಮ್ಮಲೆ ಬಲಭಾಗಕ್ಕೆ ಕಟ್ ಮಾಡಿದಾಗ ಸ್ಕಿಡ್ಡಾಗಿ ರೋಡಿನ ಬಲಭಾಗದ ಹೊಲದಲ್ಲಿ ಬಿದ್ದು ತಲೆಗೆ ಭಾರೀ ರಕ್ತಗಾಯವಾಗಿ ಮೃತಪಟ್ಟಿದ್ದು ಈ ಅಪಘಾತಕ್ಕೆ ನನ್ನ ಅಳಿಯನ ಅತೀವೇಗ ಹಾಗು ಅಲಕ್ಷತನದ ಚಾಲನೆಯೇ ಕಾರಣವಿದ್ದು ಆತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 38/2022 ಕಲಂ 279,304[ಎ] ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 28/2022 ಕಲಂ:279, 337, 338, 304(ಎ) ಐಪಿಸಿ & 187 ಐ.ಎಮ್.ವಿ. ಆಕ್ಟ್ : ದಿನಾಂಕ:22/02/2022 ರಂದು 8:30 ಪಿ.ಎಮ್.ಕ್ಕೆ ಜಿ.ಜಿ.ಹೆಚ್. ಯಾದಗಿರಿಯಿಂದ ಆರ್.ಟಿ.ಎ. ಡೆತ್ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ನಾನು ಸದರಿ ಎಮ್.ಎಲ್.ಸಿ. ವಿಚಾರಣೆ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಭೇಟಿನೀಡಿ ಎಮ್.ಎಲ್.ಸಿ. ಸ್ವೀಕರಿಸಿಕೊಂಡು ಗಾಯಾಳುಗಳಿಗೆ ವಿಚಾರಿಸಿದಾಗ ಶ್ರೀಮತಿ.ನಿಂಗಮ್ಮ ಗಂಡ ತಿಮ್ಮಯ್ಯ ಹೊಸಮನಿ, ವಯ:38 ವರ್ಷ, ಜಾತಿ:ಮಾದಿಗ, ಉ||ಕೂಲಿ, ಸಾ||ಖಾನಾಪೂರ ಇವರು ದೂರು ಅಜರ್ಿ ಸಲ್ಲಿಸಿದ್ದು, ಸಾರಾಂಶವೇನೆಂದರೆ, ಇಂದು ದಿನಾಂಕ:22/02/2022 ರಂದು ಬೆಳಗ್ಗೆ ಮಡ್ನಾಳ ಕ್ಯಾಂಪ್ ಹತ್ತಿರ ಇರುವ ಬುಕ್ಕಣ್ಣಗೌಡ ಅನ್ನುವವರ ಹೊಲದಲ್ಲಿ ಮೆಣಸಿನಕಾಯಿ ಬಿಡಿಸುವ ಕೂಲಿ ಕೆಲಸಕ್ಕೆ ನಾನು ಮತ್ತು ನನ್ನ ಮಗಳಾದ 1)ತಾಯಮ್ಮ ತಂದೆ ತಿಮ್ಮಯ್ಯ ಹೊಸಮನಿ ಮತ್ತು ನಮ್ಮೂರಿನವರಾದ 2)ತಿಪ್ಪಮ್ಮ ತಂದೆ ಲಕ್ಷ್ಮಣ ಹೊಸಮನಿ, 3)ಸುಮಿತ್ರಾ ತಂದೆ ಭೀಮರಾಯ ಬಂಗಾಳಿ, 4)ಅಯ್ಯಮ್ಮ ತಂದೆ ಭೀಮರಾಯ ಬಂಗಾಳಿ, 5)ಲಕ್ಷ್ಮೀ ತಂದೆ ಅಮಲಪ್ಪ ಆಲೂರು, 6)ಶರಣಮ್ಮ ತಂದೆ ಲಕ್ಷ್ಮಣ ಮಳ್ಳಳ್ಳಿ, 7)ದೇವಮ್ಮ ತಂದೆ ಲಕ್ಷ್ಮಣ ಮಳ್ಳಳ್ಳಿ, 8)ಜಗಮ್ಮ ಗಂಡ ಮೌನೇಶ ಹಳಿಮನಿ, 9)ಯಲ್ಲಮ್ಮ ತಂದೆ ಅಮಲಪ್ಪ ಆಲೂರು, 10)ದೇವಮ್ಮ ಗಂಡ ಭೀಮರಾಯ ಕುರಕುಂದಿ, 11)ಪವಿತ್ರ ತಂದೆ ಶೇಖಪ್ಪ ದಾಸರ್ ಹೀಗೆ ಒಟ್ಟ 12 ಜನರು ಸೇರಿಕೊಂಡು ನಮ್ಮೂರಿನ ಮಾಳಪ್ಪ ತಂದೆ ದೇವಿಂದ್ರಪ್ಪ ಟಣಕೆದಾರ ಇವರ ಆಟೋರಿಕ್ಷಾ ನಂ:ಕೆಎ-33/8187 ರಲ್ಲಿ ಹೋಗಿದ್ದು, ಸಾಯಂಕಾಲ ಕೂಲಿ ಕೆಲಸ ಮುಗಿಸಿಕೊಂಡು ಮರಳಿ ಅದೇ ಆಟೋರಿಕ್ಷಾದಲ್ಲಿ ಎಲ್ಲಾರು ಕುಳಿತುಕೊಂಡಿದ್ದು, ಆಟೋರಿಕ್ಷಾದಲ್ಲಿ ಮುಂದುಗಡೆ ಚಾಲಕ ಮಾಳಪ್ಪನ ಬಲಗಡೆ ದೇವಮ್ಮ ತಂದೆ ಲಕ್ಷ್ಮಣ ಮಳ್ಳಳ್ಳಿ ಮತ್ತು ಯಲ್ಲಮ್ಮ ತಂದೆ ಅಮಲಪ್ಪ ಆಲೂರು ಇವರು ಕುಳಿತಿದ್ದು, ಇನ್ನುಳಿದ ನಾವೆಲ್ಲರು ನಡುವಿನ ಸೀಟಿನಲ್ಲಿ ಮತ್ತು ಹಿಂದುಗಡೆಯ ಸೀಟಿನಲ್ಲಿ ಆಟೋ ಒಳಗಡೆ ಕುಳಿತಿದ್ದೆವು. ಆಟೋರಿಕ್ಷಾವನ್ನು ಮಾಳನ್ನು ನಡೆಸಿಕೊಂಡು ಶಹಾಪೂರ-ಯಾದಗಿರಿ ಮಾರ್ಗವಾಗಿ ನಮ್ಮೂರಿಗೆ ಹೋಗುತ್ತಿದ್ದಾಗ ಗುಂಡಳ್ಳಿ ದಾಟಿದ ನಂತರ 6:30 ಪಿ.ಎಮ್. ಸುಮಾರಿಗೆ ನಮ್ಮೂರ ಶರಣಪ್ಪ ಬರೆಗಾಲರವರ ಹೊಲದ ಹತ್ತಿರ ಖಾನಾಪೂರ ಕಡೆಯಿಂದ ಒಂದು ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ನೋಡು ನೋಡುತ್ತಲೇ ನಮ್ಮ ಆಟೋರಿಕ್ಷಾಕ್ಕೆ ಎದುರುಗಡೆಯಿಂದ ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಅಪಘಾತದಲ್ಲಿ ನನಗೆ ಯಾವುದೇ ಗಾಯಗಳಾಗಿರುವುದಿಲ್ಲಾ. ಆಟೋರಿಕ್ಷಾದಲ್ಲಿ ಮುಂದುಗಡೆ ಚಾಲಕನ ಪಕ್ಕದಲ್ಲಿ ಕುಳಿತಿದ್ದ ದೇವಮ್ಮ ತಂದೆ ಲಕ್ಷ್ಮಣ ಮಳ್ಳಳ್ಳಿ ಇವಳಿಗೆ ನೋಡಲಾಗಿ ಅವಳಿಗೆ ಬಲಗಡೆ ಗದ್ದಕ್ಕೆ ತೂತುಬಿದ್ದ ಭಾರಿರಕ್ತಗಾಯವಾಗಿದ್ದು, ಎಗಡೆ ಗದ್ದಕ್ಕೆ, ಹಣೆ ಮೇಲೆ ತರುಚಿದಗಾಯಗಳು, ಬಲಭುಜಕ್ಕೆ ಭಾರಿ ಹರಿದ ರಕ್ತಗಾಯ, ಬಲಗಾಲು ತೊಡೆಗೆ ಭಾರಿಗುಪ್ತಗಾಯ, ಬಲಕಾಲು ಮೊಳಕಾಲಿಗೆ ಭಾರಿರಕ್ತಗಾಯವಾಗಿದ್ದು, ಎಡಗಡೆ ಎದೆಗೆ ಪಕ್ಕೆಗೆ ತರುಚಿದಗಾಯಗಳಾಗಿದ್ದು, ಬೇವೋಶ್ ಆಗಿ ಬಿದ್ದಿದ್ದಳು. ಯಲ್ಲಮ್ಮ ತಂದೆ ಅಮಲಪ್ಪ ಆಲೂರು ಇವಳಿಗೂ ಸಹ ತಲೆಗೆ ಭಾರಿರಕ್ತಗಾಯವಾಗಿದ್ದು, ಬಲಕೈಗೆ, ಮುಖಕ್ಕೆ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದವು. ಇನ್ನುಳಿದವರಿಗೆ ಸಣ್ಣಪುಟ್ಟ ತರುಚಿದ ಮತ್ತು ಗುಪ್ತಗಾಯಗಳಾಗಿದ್ದವು. ಅಪಘಾತಪಡಿಸಿದ ಟ್ರ್ಯಾಕ್ಟರ್ ಚಾಲಕನು ಸ್ವಲ್ಪ ಮುಂದೆ ಟ್ರ್ಯಾಕ್ಟರ್ ನಿಲ್ಲಿಸಿದ್ದು, ನಾವು ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಬೀರಪ್ಪ ತಂದೆ ಬಸಪ್ಪ ಮಲಗೊಂಡರ, ಸಾ||ಚಟ್ನಳ್ಳಿ ಅಂತಾ ತಿಳಿಸಿದ್ದು ನಮ್ಮೆಲ್ಲರನ್ನು ನೋಡಿ ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿಹೋದನು. ಟ್ರ್ಯಾಕ್ಟರ್ ನೋಡಲಾಗಿ ನೋಂದಣಿ ನಂಬರ್ ಇಲ್ಲದ ಸ್ವರಾಜ್ ಟ್ರ್ಯಾಕ್ಟರ್ ಮತ್ತು ಹಸಿರುಬಣ್ಣದ ಟ್ರ್ಯಾಲಿ ಇದ್ದು, ಟ್ರ್ಯಾಕ್ಟರ್ ಇಂಜಿನ್ ನಂ:39.1340/ಉಉ002617 ಚಾಸಿಸ್ ನಂ:ಕಿಗಿಅಊ31618010024 ಇರುತ್ತದೆ. ನಂತರ ಆಟೋರಿಕ್ಷಾ ಚಾಲಕ ಮಾಳಪ್ಪನು 108 ಅಂಬುಲೆನ್ಸ್ಗೆ ಫೋನ್ ಮಾಡಿದ್ದು, ಸ್ವಲ್ಪ ಸಮಯದ ನಂತರ ಬಂದ ಅಂಬುಲೆನ್ಸ್ನಲ್ಲಿ ನಮಗೆಲ್ಲಾ ಗಾಯಾಗಳಿಗೆ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಭಾರಿಗಾಗೊಂಡಿದ್ದ ದೇವಮ್ಮ ತಂದೆ ಲಕ್ಷ್ಮಣ ಮಳ್ಳಳ್ಳಿ, ವಯ:15 ವರ್ಷ ಇವಳು ಅಪಘಾತದಲ್ಲಿ ಆದ ಭಾರಿಗಾಯಗಳಿಂದ 8:15 ಪಿ.ಎಮ್. ಸುಮಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ. ಕಾರಣ ನಮಗೆ ಅಪಘಾತಪಡಿಸಿ ಓಡಿಹೋದ ಟ್ರ್ಯಾಕ್ಟರ್ ಚಾಲಕ ಬೀರಪ್ಪ ತಂದೆ ಬಸಪ್ಪ ಮಲಗೊಂಡರ, ಸಾ||ಚಟ್ನಳ್ಳಿ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ವಿನಂತಿ ಎಂದು ಕೊಟ್ಟ ದೂರು ಅಜರ್ಿಯನ್ನು ಸ್ವೀಕೃತಮಾಡಿಕೊಂಡು ಮರಳಿ ಠಾಣೆಗೆ 11:30 ಪಿ.ಎಮ್.ಕ್ಕೆ ಬಂದು ಸದರಿ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 28/2022 ಕಲಂ: 279, 337, 338, 304(ಎ) ಐಪಿಸಿ & 187 ಐ.ಎಮ್.ವಿ. ಆಕ್ಟ್ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಕೊಡೇಕಲ್ ಪೊಲೀಸ್ ಠಾಣೆ:-
19/2022 ಕಲಂ:143, 147, 323, 504, 506, 354 ಸಂಗಡ 149 ಐಪಿಸಿ : ಇಂದು ದಿನಾಂಕ:22/02/2022 ರಂದು ಸಾಯಂಕಾಲ 6:30 ಪಿ.ಎಮ್ ಕ್ಕೆ ಫಿಯರ್ಾದಿ ಶ್ರೀಮತಿ ಸೇವಲಾಬಾಯಿ ಗಂಡ ನಿಂಗಪ್ಪ ಪವಾರ ವ:45 ವರ್ಷ, ಜಾ:ಹಿಂದೂ ಲಂಬಾಣಿ, ಉ:ಹೊಲಮೆನೆಗೆಲಸ, ಸಾ||ಸೊನ್ನಾಪೂರ ದೊಡ್ಡ ತಾಂಡಾ ತಾ||ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಫಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನಾನು ಗಂಡ ಮಕ್ಕಳೊಂದಿಗೆ ಹೊಲಮನೆ ಕೆಲಸ ಮಾಡಿಕೊಂಡು ಉಪಜೀವಿಸುತ್ತೇನೆ. ಏದಲಬಾವಿ ಸೀಮಾಂತರದ ನಮ್ಮ ಜಮೀನು ಸವರ್ೇ ನಂ:22 ರಲ್ಲಿ ನಾವು ಮನೆ ಕಟ್ಟಿಕೊಂಡು ಇರುತ್ತೇವೆ. ನಮ್ಮಂತೆಯೇ ನಮ್ಮ ಎರಡನೇ ಅಣ್ಣತಮ್ಮಕೀಯ ಶಿವಪ್ಪ ತಂದೆ ಬಾಂಬಲೆಪ್ಪ ಪವಾರ ಹಾಗೂ ಅವರ ಅಣ್ಣನಾದ ಶಾಂತಪ್ಪ ತಂದೆ ಬಾಂಬಲೆಪ್ಪ ಪವಾರ ಇವರುಗಳು ಕೂಡ ತಮ್ಮ ಹೊಲದಲ್ಲಿ ಮನೆ ಕಟ್ಟಿಕೊಂಡು ಇದ್ದು, ಇವರ ಮನೆಗಳು ಮತ್ತು ನಮ್ಮ ಮನೆಗಳು ಸಮೀಪದಲ್ಲಿಯೇ ಇರುತ್ತವೆ. ನಮ್ಮ ಎರಡನೇ ಅಣ್ಣತಮ್ಮಕೀಯ ಶಿವಪ್ಪನ ಮಗಳಾದ ಸುನೀತಾ ಇವಳಿಗೆ ಏದಲಬಾವಿ ತಾಂಡಾಕ್ಕೆ ಮದುವೆ ಮಾಡಿ ಕೊಟ್ಟಿದ್ದು, ಈಗ ಸುಮಾರು 2 ವರ್ಷಗಳಿಂದ ಸುನೀತಾಳು ಏದಲಬಾವಿ ತಾಂಡಾದಿಂದ ತನ್ನ ಗಂಡನೊಂದಿಗೆ ಬಂದು ತನ್ನ ತಂದೆ ಶಿವಪ್ಪನ ಮನೆಯಲ್ಲಿಯೇ ಇರುತ್ತಾರೆ. ಈಗ ಕೆಲದಿನಗಳಿಂದ ಸುನೀತಾಳ ಮನೆಗೆ ಬೇರೆ ಬೇರೆ ಜನರು ಬಂದು ಹೋಗುವದು ಮಾಡುತ್ತಿದ್ದು, ಇದರಿಂದ ನಾನು ಮತ್ತು ಅವರ ಪಕ್ಕದ ಮನೆಯ ಅವಳ ದೊಡ್ಡವ್ವಳಾದ ಅನುಸುಬಾಯಿ ಗಂಡ ಶಾಂತಪ್ಪ ಪವಾರ ಇಬ್ಬರು ಸುನೀತಾಳಿಗೆ ಹೀಗೆಲ್ಲ ಮಾಡುವುದು ಸರಿಯಲ್ಲ ಇದು ನಮ್ಮ ಮಾನ ಮಯರ್ಾದೆ ಪ್ರಶ್ನೆ ಇರುತ್ತದೆ ಅಂತಾ ತಿಳುವಳಿಕೆ ಹೇಳಿದರೇ ನಮ್ಮ ಮೇಲೆ ಸುನೀತಾ ಮತ್ತು ಆಕೆಯ ತಂದೆ-ತಾಯಿ, ಅಣ್ಣ ರವರು ನಮ್ಮ ಮೇಲೆ ಸಿಟ್ಟಾಗಿದ್ದು ಇರುತ್ತದೆ. ಹೀಗಿರುವಾಗ ದಿನಾಂಕ:18/02/2022 ರಂದು ಮುಂಜಾನೆ 08:00 ಗಂಟೆ ಸುಮಾರಿಗೆ ನಾನು ನಮ್ಮ ಅಣ್ಣತಮ್ಮಕ್ಕೀಯ ಸುನೀತಾಳ ದೊಡ್ಡವ್ವಳಾದ ಅನುಸುಬಾಯಿ ಪವಾರ ರವರ ಮನೆಗೆ ಹಾಲು ತರಲು ಹೋದಾಗ ಅನುಸುಬಾಯಿ ಮನೆಯ ಪಕ್ಕದಲ್ಲಿಯೇ ಮನೆ ಇರುವ ಶಿವಪ್ಪ ತಂದೆ ಬಾಂಬಲೆಪ್ಪ ಪವಾರ, ವಿರೇಶ ತಂದೆ ಶಿವಪ್ಪ ಪವಾರ, ಸುನೀತಾ ಗಂಡ ಮೌನೇಶ ಜಾಧವ, ಮಾನಾಬಾಯಿ ಗಂಡ ಶಿವಪ್ಪ ಪವಾರ ಹಾಗೂ ಏದಲಬಾವಿ ತಾಂಡಾದ ಸುನೀತಾಳ ಗಂಡನಾದ ಮೌನೇಶ ತಂದೆ ಸಂಗಪ್ಪ ಜಾಧವ ಇವರೆಲ್ಲರೂ ತಮ್ಮ ಮನೆಯ ಮುಂದಿನ ಅಂಗಳದಲ್ಲಿ ಕುಳಿತಿದ್ದು, ಅವರೆಲ್ಲರೂ ನನ್ನನ್ನು ನೋಡಿದವರೇ ಗುಂಪಾಗಿ ಅನುಸುಬಾಯಿ ರವರ ಮನೆಯ ಹತ್ತಿರ ಬಂದು ನನಗೆ ಎಲೇ ಸೂಳೇ ಶೆವಲಿ ರಂಡಿ ನಿನ್ನದು ಬಹಳ ಆಗಿದೆ, ನೀನು ಮತ್ತು ಅನುಸುಬಾಯಿ ಇಬ್ಬರೂ ಕೂಡಿ ನಮ್ಮ ಸುನೀತಾಳ ಮೇಲೆ ಅಪವಾದ ಹೊರಿಸುತ್ತೀರಿ ಇವತ್ತು ನಿಮ್ಮಿಬ್ಬರಿಗೂ ಬಿಡುವುದಿಲ್ಲ ಅಂದು ಬೈದವರೆ ಅವರಲ್ಲಿಯ ಶಿವಪ್ಪ ತಂದೆ ಬಾಂಬಲೆಪ್ಪ ಇತನು ನನ್ನ ತೆಕ್ಕೆಗೆ ಬಿದ್ದು ಕೈ ಯಿಂದ ಹೊಟ್ಟೆಯ ಮೇಲೆ ಮತ್ತು ಸೊಂಟದ ಮೇಲೆ ಗುದ್ದಿ ಗುಪ್ತಗಾಯ ಪಡಿಸಿದ್ದು, ವಿರೇಶ ತಂದೆ ಶಿವಪ್ಪ ಇತನು ನನ್ನ ತಲೆಯ ಮೇಲಿನ ಒಡನಿಯನ್ನು ಹಿಡಿದು ಜಗ್ಗಾಡಿ ಕೂದಲು ಹಿಡಿದು ಎಳದಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿದ್ದು, ಆಗ ಬಿಡಿಸಲು ಬಂದ ಅನುಸುಬಾಯಿಗೆ ಸುನೀತಾ ಗಂಡ ಮೌನೇಶ ಮತ್ತು ಮಾನಾಬಾಯಿ ಗಂಡ ಶಿವಪ್ಪ ಪವಾರ ಇವರುಗಳು ನೆಲಕ್ಕೆ ಕೆಡವಿ ಹೊಟ್ಟೆಯ ಮೇಲೆ ಎದೆಯ ಮೇಲೆ ಒದ್ದು ತುಳಿದು ಗುಪ್ತಗಾಯ ಪಡಿಸಿದ್ದು, ಮೌನೇಶ ತಂದೆ ಸಂಗಪ್ಪ ಜಾಧವ ಇತನು ಈ ಇಬ್ಬರು ಸೂಳೇಯರದು ಬಹಳ ಆಗಿದೆ ಇವರಿಗೆ ಬಿಡಬೇಡಿರಿ ಅಂತಾ ಒದರಾಡಹತ್ತಿದ್ದು, ಆಗ ನಮಗೆ ಹೊಡೆಯುವದನ್ನು ನೋಡಿ ಅಲ್ಲಿಯೇ ಇದ್ದ ಶಾಂತಪ್ಪ ತಂದೆ ಬಾಂಬಲೆಪ್ಪ ಪವಾರ ಮತ್ತು ಸಮೀಪದಲ್ಲಿಯೇ ಇದ್ದ ಸೂರಪ್ಪ ತಂದೆ ಕೇಶಪ್ಪ ಪವಾರ, ಅವರ ಮಗನಾದ ಪೀರಪ್ಪ ತಂದೆ ಸೂರಪ್ಪ ಪವಾರ ಮತ್ತು ಠಾಕ್ರೆಪ್ಪ ತಂದೆ ಭೋಜಪ್ಪ ಪವಾರ, ಚಂದ್ರು ತಂದೆ ಜಯರಾಮ ಪವಾರ ಇವರುಗಳು ಬಂದು ನೋಡಿ ಬಿಡಿಸಿದ್ದು ಹೋಗುವಾಗ ಐದು ಜನರು ನನಗೆ ಮತ್ತು ಅನುಸುಬಾಯಿಗೆ ಸೂಳೇರೆ ಇವತ್ತು ನಮ್ಮ ಕೈಯಲ್ಲಿ ಉಳಿದುಕೊಂಡಿರಿ ಇನ್ನೊಂದು ಸಲ ಸಿಕ್ಕಾಗ ನಿಮಗೆ ಜೀವಂತ ಬಿಡುವುದಿಲ್ಲಾ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು, ನಂತರ ನಾನು ಮತ್ತು ಅನುಸುಬಾಯಿ ಇಬ್ಬರು ಆ ದಿನ ದಿನಾಂಕ:18/02/2022 ರಂದು ಕೊಡೇಕಲ್ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡು ಮನೆಗೆ ಹೋಗಿದ್ದು, ನಮ್ಮಿಬ್ಬರಿಗೂ ಈ ಜಗಳದಲ್ಲಿ ಅಷ್ಟೇನು ಪೆಟ್ಟಾಗಿರುವುದಿಲ್ಲಾ. ನಂತರ ನಾವು ನಮ್ಮೊಂದಿಗೆ ಜಗಳ ಮಾಡಿದ ಎಲ್ಲರೂ ನಮ್ಮ ಅಣ್ಣತಮ್ಮಕ್ಕೀಯವರೆ ಇದ್ದುದ್ದರಿಂದ ಈ ಬಗ್ಗೆ ನಮ್ಮ ಮನೆಯಲ್ಲಿ ಹಿರಿಯರೊಂದಿಗೆ ವಿಚಾರ ಮಾಡಿ ಈ ದಿವಸ ತಡವಾಗಿ ಬಂದು ದೂರು ಕೊಡುತ್ತಿದ್ದು, ನನಗೆ ಮತ್ತು ಅನುಸುಬಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿ ನನಗೆ ಮಾನಭಂಗ ಪಡಿಸಲು ಪ್ರಯತ್ನಿಸಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಫಿಯರ್ಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:19/2022 ಕಲಂ:143, 147, 323, 504, 506, 354 ಸಂ 149 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 24/2022, ಕಲಂ, 341, 323, 504.506. ಸಂ.34 ಐ ಪಿ ಸಿ : ದಿನಾಂಕ: 22-02-2022 ರಂದು 06-00 ಪಿ ಎ.ಎಮ್ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ಈಗ ಸುಮಾರು 8-10 ವರ್ಷಗಳಿಂದ ನಮಗೆ ಮತ್ತು ನಮ್ಮ ಕಾಕ ನಾಗಪ್ಪ ಮತ್ತು ನಮ್ಮ ಅತ್ತೆ ಗಂಡ ಲಕ್ಷ್ಮಣ ಇವರ ನಡುವೆ ಆಸ್ತಿ ವಿಷಯದಲ್ಲಿ ಹಳೆ ದ್ವೇಷ ಇರುತ್ತದೆ. ನಾವು ಎಲ್ಲಿಯಾದರು ಕಂಡರೆ ನಿಮಗೆ ಎಂದಾನೊಂದಿನ ಖಲಾಸ ಮಾಡುತ್ತೇವೆ ಮಕ್ಕಳ ಅಂತಾ ಅನ್ನುತಿದ್ದರು. ದಿನಾಂಕ: 20-02-2022 ರಂದು ತಾನುನಾಯಕ ತಾಂಡಕ್ಕೆ ಶಂಕರ ಈತನ ಮೊಮ್ಮಗನ ಮದುವೆಗೆ ಹೋಗಿ ಆತನ ಮನೆಯ ಹತ್ತಿರ ಊಟ ಮಾಡಲು ಕುಳಿತುಕೊಂಡಿರುವಾಗ ಮಧ್ಯಾಹ್ನ 02-30 ಗಂಟೆ ಸುಮಾರಿಗೆ ನಮ್ಮ ಅತ್ತೆ ಗಂಡ ಲಕ್ಷ್ಮಣ ಮತ್ತು ನಮ್ಮ ಕಾಕ ನಾಗಪ್ಪ ಇಬ್ಬರು ಬಂದು ಅವರಲ್ಲಿ ಲಕ್ಷ್ಮಣ ಈತನು ಲೇ ಸೂಳೆ ಮಗನೆ ನಿಮಗೆ ಯಾವಾಗೋ ಹೊಡೆದು ಊರ ಬಿಡಸಬೇಕಾಗಿತ್ತು ಇವತ್ತು ನಮ್ಮ ಕೈಯಾಗ ಸಿಕ್ಕಿದಿ ಸೂಳೆ ಮಗನೆ ನಿಮಗೆ ಒಂದು ಗತಿ ಕಾಣಿಸುತ್ತೇವೆ ನಿಮ್ಮದು ಸೊಕ್ಕು ಬಹಳ ಆಗಿದೆ ಲಂಗಾ ಸೂಳೆ ಮಕ್ಕಳೆ ಅಂತಾ ಬೈಯುತ್ತ ನನ್ನ ಹತ್ತಿರ ಬರುತಿದ್ದನು ಆಗ ನಾನು ಅಂಜಿ ಊಟದ ತಟ್ಟೆ ಕೇಳಗೆ ಇಟ್ಟು ಹೋಗುತ್ತಿರುವಾಗ ಲಕ್ಷ್ಮಣ ಈತನು ಎದೆಯ ಮೇಲಿನ ಅಂಗಿ ಹಿಡಿದು ಲೇ ಅಡ್ಡಗಟ್ಟಿ ನಿಲ್ಲಿಸಿ ಲೇ ಸೂಳೆ ಮಗನೆ ಎಲ್ಲಿಗೆ ಹೋಗುತಿ ನಾನು ನನ್ನ ಮಗ ನಿಮಗೆ ಕಾಯಕತ್ತಿವಿ ಸೂಳೆ ಅಂತಾ ಅಂದು ಕೈಯಿಂದ ಕಪಾಳಕ್ಕೆ ಹೊಡೆದು ದಬ್ಬಿಸಿಕೊಟ್ಟು ಕೆಳಗೆ ಬಿಳಿಸಿ ಕಾಲಿನಿಂದ ಬೆನ್ನಿಗೆ ಹೊಟ್ಟೆಗೆ ಒದ್ದನು ನಾಗಪ್ಪ ಇವನು ಲೇ ಸೂಳೆ ಮಗನೆ ನಿಮ್ಮ ಮೇಲೆ ನನಗೆ ಬಹಳ ಸಿಟ್ಟಾದಲೇ ಸೂಳೆ ಮಕ್ಕಳೆ ಊರಲ್ಲಿ ನೀವನ ಇರಬೇಕು ಇಲ್ಲಾ ನಾವನ ಇರಬೇಕು ಇವತ್ತು ನಿನ್ನ ಕಥೆ ಮುಗಿಸಿ ಬಿಡುತ್ತೇವೆ ಇಲ್ಲಾ ಊರ ಬಿಟ್ಟು ಹೋಗಬೇಕಲೇ ಸೂಳೆ ಮಕ್ಕಳೆ ಇಲ್ಲಂದಿರೆ ನಿನಗೆ ಜೀವ ಖಲಾಸ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ.

 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ:09/2022 ಕಲಂ 279, 337, 338 ಐಪಿಸಿ : ಇಂದು ದಿನಾಂಕ 22/02/2022 ರಂದು ಸಮಯ 6-30 ಪಿ.ಎಂ.ಕ್ಕೆ ಯಾದಗಿರಿ ಜಿಜಿಎಚ್ ನಿಂದ ರಸ್ತೆ ಅಪಘಾತದ ಬಗ್ಗೆ ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮೂಲಕ ತಿಳಿಸಿದಾಗ ಆಸ್ಪತ್ರೆಗೆ ಭೇಟಿ ನೀಡಿದ್ದು ಗಾಯಾಳುಗಳಿಗೆ ವಿಚಾರಿಸಿದ್ದು, ನಂತರ ಆಸ್ಪತ್ರೆಯಲ್ಲಿದ್ದ ಗಾಯಾಳು ಮಲ್ಲಿಕಾಜರ್ುನ ಇವರ ತಂದೆಯಾದ ಪಿಯರ್ಾದಿ ಶ್ರೀ ಬಸವರಾಜ ತಂದೆ ಮಹಾದೇವಪ್ಪ ವಿಶ್ವಕರ್ಮ ವಯ;52 ವರ್ಷ, ಜಾ;ವಿಶ್ವಕರ್ಮ, ಉ;ಕೂಲಿ, ಸಾ;ಹಾಲಗೇರಿ, ತಾ;ವಡಗೇರಾ, ಜಿ;ಯಾದಗಿರಿ ರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನನ್ನ ಮಗನಾದ ಮಲ್ಲಿಕಾಜರ್ುನ ವಯ;29 ವರ್ಷ ಈತನು ಯಾದಗಿರಿಯಲ್ಲಿ ಕಾಪರ್ೆಂಟರ್ ಕೆಲಸ ಮಾಡಿಕೊಂಡು ಬಂದಿರುತ್ತಾನೆ. ದಿನಾಲು ಯಾದಗಿರಿಗೆ ನಮ್ಮೂರಿನಿಂದ ಹೋಗಿ ಬರುವುದು ಮಾಡುತ್ತಾನೆ. ಇಂದು ಕೂಡ ದಿನಾಂಕ 22/02/2022 ರಂದು ಬೆಳಿಗ್ಗೆ ಸುಮಾರಿಗೆ ತನ್ನ ಮೋಟಾರು ಸೈಕಲ್ ನಂಬರ ಕೆಎ-33, ವಿ-5877 ನೇದ್ದನ್ನು ನಡೆಸಿಕೊಂಡು ಹೋಗಿರುತ್ತಾನೆ. ಹೀಗಿದ್ದು ಇಂದು ದಿನಾಂಕ 22/02/2022 ರಂದು ಸಾಯಂಕಾಲ 6 ಪಿ.ಎಂ.ದ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮೂರಿನ ಶ್ರೀ ರಾಮಯ್ಯ ತಂದೆ ಬೀಮರಾಯ ಕಲಾಲ್ ಇವರು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ನನ್ನ ಕೆಲಸದ ಮೇಲೆ ಯಾದಗಿರಿಗೆ ಬಂದು ಮರಳಿ ನಮ್ಮುರಿಗೆ ಬರುವ ಸಲುವಾಗಿ ಯಾದಗಿರಿ ಹಳೆ ಬಸ್ ನಿಲ್ದಾಣದ ಹತ್ತಿರ ನಿಂತಿದ್ದಾಗ ನಿಮ್ಮ ಮಗನು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ವಿ-5877 ನೇದ್ದರ ಮೇಲೆ ವಡಗೇರಾ ಕಡೆಗೆ ಹೊರಟಿದ್ದಾಗ ರೇಲ್ವೇ ಬ್ರಿಡ್ ಕಡೆಯಿಂದ ಯಾದಗಿರಿಗೆ ಬರುತ್ತಿದ್ದ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲ್ನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಿಮ್ಮ ಮಗನ ಮೋಟಾರು ಸೈಕಲ್ ನೇದ್ದಕ್ಕೆ ನಾನು ನೋಡು ನೋಡುತ್ತಿದ್ದಂತೆ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ. ನಾನು ಹತ್ತಿರ ಓಡೋಡಿ ಹೋಗಿ ನೋಡಲಾಗಿ ಸದರಿ ಅಪಘಾತದಲ್ಲಿ ನಿಮ್ಮ ಮಗನಿಗೆ ಮುಖಕ್ಕೆ ರಕ್ತಗಾಯ ಮತ್ತು ತಲೆಗೆ ಭಾರೀ ಗುಪ್ತಗಾಯವಾದಂತೆ ಕಂಡು ಬರುತ್ತಿದ್ದು, ಅಲ್ಲಲ್ಲಿ ಮೈಗೆ ತರಚಿದ ಗಾಯಗಳಾಗಿರುತ್ತವೆ. ನಿಮ್ಮ ಮಗನಿಗೆ ಡಿಕ್ಕಿಹೊಡೆದ ಮೋಟಾರು ಸೈಕಲ್ ನೇದ್ದಕ್ಕೆ ನೊಂದಣಿ ನಂಬರ್ ಇರುವುದಿಲ್ಲ, ಅದರ ಚೆಸ್ಸಿ ನಂಬರ ನೊಡಲಾಗಿ ಒಃಐಊಂಘ124ಊ5ಂ18189 ನೇದ್ದು ಕಂಡು ಬಂದಿರುತ್ತದೆ. ಅದರ ಸವಾರನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಅಹ್ಮದ್ ಹುಸೇನ್ ತಂದೆ ಖಲೀಲಸಾಬ ಜಿಲೇಬಿ ಸಾ;ನಾಯ್ಕಲ್ ಅಂತಾ ತಿಳಿಸಿದ್ದು ಆತನಿಗೆ ಕೂಡ ಸದರಿ ಅಪಘಾತದಲ್ಲಿ ಹಣೆಗೆ ರಕ್ತಗಾಯ ಮತ್ತು ತಲೆಗೆ ಗುಪ್ತಗಾಯ ವಾಗಿದ್ದು ಇರುತ್ತದೆ. ಈ ಘಟನೆಯು ಇಂದು ದಿನಾಂಕ 22/02/2022 ರಂದು ಸಾಯಂಕಾಲ ಅಂದಾಜು 5-45 ಪಿ.ಎಂ.ಕ್ಕೆ ಜರುಗಿರುತ್ತದೆ. ಘಟನೆಯ ಸ್ಥಳದಲ್ಲಿ ಒಂದು ಖಾಸಗಿ ಆಟೋ ಬಂದಾಗ ನಾನು ಗಾಯಾಳು ಇಬ್ಬರಿಗೆ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತೇನೆ ನೀನು ಕೂಡಲೇ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಾ ಅಂತಾ ತಿಳಿಸಿದಾಗ ನಾನು ಒಂದು ಖಾಸಗಿ ವಾಹನದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಮಗ ಬಸವರಾಜ ಈತನು ಚಿಕಿತ್ಸೆ ಪಡೆಯುತ್ತಿದ್ದು, ನನಗೆ ಈ ಮೇಲೆ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ನನ್ನಂತಯೇ ಸುದ್ದಿ ಗೊತ್ತಾಗಿ ನನ್ನ ಮಗನಿಗೆ ಅಪಘಾತ ಪಡಿಸಿದ ಮೋಟಾರು ಸೈಕಲ್ ಸವಾರ ಅಹ್ಮದ್ ಹುಸೇನ್ ಈತನ ತಾಯಿ ರಜಿಯಾಬೇಗಂ ಮತ್ತು ಅವರ ಸಂಬಂದಿ ಶೇಕ್ ಫಾರುಕ್ ತಂದೆ ಶೇಕ್ ಅಲಿ ಸಾ;ಸುರಪುರ ಇವರುಗಳು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ವಿಚಾರಿಸಿರುತ್ತಾರೆ. ಹೀಗಿದ್ದು ಇಂದು ದಿನಾಂಕ 22/02/2022 ರಂದು ಸಾಯಂಕಾಲ 5-45 ಪಿ.ಎಂ.ದ ಸುಮಾರಿಗೆ ಯಾದಗಿರಿ-ಶಹಾಪುರ ಮುಖ್ಯ ರಸ್ತೆಯ ಯಾದಗಿರಿ ಹಳೆ ಬಸ್ ನಿಲ್ದಾಣದ ಹತ್ತಿರ ರೇಲ್ವೇ ಬ್ರಿಡ್ಜ್ ಹತ್ತಿರ ನನ್ನ ಮಗ ಮಲ್ಲಿಕಾಜರ್ುನನು ತನ್ನ ಮೋಟಾರು ಸೈಕಲ್ ಮೇಲೆ ಯಾದಗಿರಿಯಿಂದ ವಡಗೇರಾ ಕಡೆಗೆ ಬರುತ್ತಿದ್ದಾಗ ಮೋಟಾರು ಸೈಕಲ್ ನೊಂದಣಿ ನಂಬರ ಇಲ್ಲದ್ದು ಅದರ ಚೆಸ್ಸಿ ನಂಬರ ಒಃಐಊಂಘ124ಊ5ಂ18189 ನೇದ್ದರ ಸವಾರ ಅಹ್ಮದ್ ಹುಸೇನ್ ಈತನು ತನ್ನ ವಾಹನವನ್ನು ಶಹಾಪುರ ರಸ್ತೆ ಕಡೆಯಿಂದ ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನನ್ನ ಮಗನ ಮೋಟಾರು ಸೈಕಲ್ ಡಿಕ್ಕಿಹೊಡೆದಿದ್ದರಿಂದ ಅಪಘಾತವಾಗಿದ್ದು, ಆತನ ಮೇಲೆ ಮುಂದಿನ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದು ದೂರು ಇರುತ್ತದೆ. ಅಂತಾ ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡು ಮರಳಿ ಠಾಣೆಗೆ 8-15 ಪಿ.ಎಂ.ಕ್ಕೆ ಬಂದು ಪಿಯರ್ಾದಿಯ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 09/2022 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 26/2018.ಕಲಂ 279.ಐ.ಪಿ.ಸಿ. : ಇಂದು ದಿನಾಂಕ 22/02/2022 ರಂದು ಸಾಯಂಕಾಲ 16-30 ಗಂಟೆಗೆ ಪಿಯರ್ಾದಿ ಶ್ರೀ ಗುಂಡಪ್ಪ ತಂದೆ ಬಸವರಾಜಪ್ಪ ತುಂಬಗಿ ವ|| 55 ಜಾ|| ಲಿಂಗಾಯತ ಉ|| ವ್ಯಾಪಾರ, ಸಾ|| ಗಾಂಧಿ ಚೌಕ ಶಹಾಪೂರ, ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ಸಲ್ಲಿಸಿದರ ಸಾರಾಂಶವೆನೆಂದರೆ. ಹೀಗಿದ್ದು ದಿನಾಂಕ 13/02/2022 ರಂದು ಮದ್ಯಾಹ್ನ 14-25 ಗಂಟೆಯ ಸುಮಾರಿಗೆ ನಾನು ಮತ್ತು ಅಕ್ಷಯ ಕುಮಾರ ತಂದೆ ಗದಿಗೇಪ್ಪ ದೇಶಾಯಿ ಸಾ|| ಹಳಿಸಗರ ಶಹಾಪೂರ ಇಬ್ಬರು ಶಹಾಪೂರ ನಗರದ ಇಂಡಸ್ಟ್ರೀಯಲ್ ಏರಿಯಾದಲ್ಲಿ ಇರುವ ನಮ್ಮ ಗೋದಾಮೀನ ಮುಂದೆ ನಿಂತಿದ್ದಾಗ ನನ್ನ ಮಗ ಆಕಾಶನು ನಮ್ಮ ಕಾರ ನಂ ಕೆಎ-33 ಎಂ-7121 ನೇದ್ದನ್ನು ತೆಗೆದುಕೊಂಡು ನಮ್ಮ ಗೋದಾಮಿನ ಹತ್ತಿರ ಮುಖ್ಯ ರಸ್ತೆಕಡೆಯಿಂದ ಇಂಡಸ್ಟ್ರೀಯಲ್ ಏರಿಯಾ ರಸ್ತೆಯ ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಒಮ್ಮಲೇ ಆಕಳು ಅಡ್ಡ ಬಂದಿದ್ದರಿಂದ ಆಕಾಶನು ತನ್ನ ಕಾರನ್ನು ಒಮ್ಮಲೆ ಬಲಕ್ಕೆ ಕಟ್ಟ ಮಾಡಿದ್ದರಿಂದ ರಸ್ತೆಯ ಪಕ್ಕದಲ್ಲಿ ಇರುವ ಕಲ್ಲುಗಳಿಗೆ ಗುದ್ದಿ ಕಂಪೌಂಡಿಗೆ ಗುದ್ದಿ ಅಪಘಾತಮಾಡಿದ್ದು. ಸದರಿ ಅಪಘಾತವನ್ನು ನೋಡಿ ನಾನು ಮತ್ತು ಅಲ್ಲೆ ನಮ್ಮ ಗೋದಾಮಿನ ಮುಂದೆ ನಿಂತ್ತಿದ್ದ ಅಕ್ಷಯಕುಮಾರ ಇಬ್ಬರು ಹೋಗಿ ನೋಡಿ ನನ್ನ ಮಗ ಆಕಾಶನಿಗೆ ವಿಚಾರಿಸಲಾಗಿ ಸದರಿ ಅಪಘಾತದಲ್ಲಿ ಆಕಾಶನಿಗೆ ಯಾವುದೆ ಗಾಯವಾಗಿರುವುದಿಲ್ಲಾ. ನಮ್ಮ ಮಾರುತಿ ವಿಟ್ರಾ ಬ್ರೀಜಾ ಜಡ್ಡಿಐ ಕಾರ ನಂ ಕೆಎ-33 ಎಂ-7121 ನೇದ್ದು ಮುಂದೆ ಸಂಪೂರ್ಣ ಜಖಂಗೊಂಡು ಕಾರಿನ ಓಳಗಡೆ ಮುಂದೆ ಇರುವ ಏರ್ ಬ್ಯಾಗಗಳು ಓಪನ್ ಆಗಿರುತ್ತವೆ. ಮತ್ತು ಕಾರಿನ ಹಿಂದೆ ಜಖಂಗೊಂಡಿರುತ್ತದೆ. ಸದರಿ ಅಪಘಾತವು ನಮ್ಮ ಗೋದಾಮೀನ ಮುಂದೆ ಸಮಯ ಮದ್ಯಾಹ್ನ 14-25 ಗಂಟೆಗೆ ಜರುಗಿರುತ್ತದೆ. ನಾನು ನಮ್ಮ ಹಿರಿಯರೊಂದಿಗೆ ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿರುತ್ತೆನೆ. ಕಾರಣ ಈ ಅಪಘಾತಕ್ಕೆ ನಮ್ಮ ಕಾರ ನಂ ಕೆಎ-33 ಎಂ-7121 ನೇದ್ದರ ಚಾಲಕ ಆಕಾಶ ಇತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ನಿಡಿದ್ದರ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 26/2022 ಕಲಂ 279 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು

ಇತ್ತೀಚಿನ ನವೀಕರಣ​ : 23-02-2022 11:08 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080