ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 23-03-2022


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 44/2022 ಕಲಂ 279, 304 (?) ಐಪಿಸಿ : ಪಿರ್ಯಾಧಿಯ ಗಂಡನು ದಿನಾಂಕ:21.03.2022 ರಂದು ಗಾಜರಕೋಟ್ ಗ್ರಾಮಕ್ಕೆ ತನ್ನ ತಾಯಿಯನ್ನು ಕರೆದುಕೊಂಡು ಮೋಟರ್ ಸೈಕಲ್ ನಂ:ಕೆಎ-33 ಡಬ್ಲೂ-9111 ನೇದ್ದರ ಮೇಲೆ ಬಂದಿದ್ದು. ನಿನ್ನೆ ರಾತ್ರಿ ಮೃತನ ಅಕ್ಕನ ಗಂಡನ ಜೋತೆ ಹೊಲಕ್ಕೆ ಹೋಗಿದ್ದು ಅವರ ಹೊಲದಲ್ಲಿ ಊಟ ಮಾಡಿದ ನಂತರ ಮೃತನ ಅಕ್ಕನ ಗಂಡನು ಮೊದಲು ತನ್ನ ಮೋಟರ್ ಸೈಕಲ್ ತೆಗೆದುಕೊಂಡು ಮನೆಗೆ ಬಂದಿದ್ದು. ನಂತರ ಮೃತನು ದಿನಾಂಕ:21.03.2022 ರಂದು ರಾತ್ರಿ 10.30 ಗಂಟೆಯಿಂದ ದಿನಾಂಕ:22.03.2022 ರಂದು ಬೆಳಗಿನ 6.00 ಮಧ್ಯದ ಅವಧಿಯಲ್ಲಿ ಗಾಜರಕೋಟ್ ಸಮೀಪದ ಗಾಜರಕೊಟ ದಿಂದ ಗುರುಮಠಕಲ್ ಕಡೆಗೆ ಹೋಗುವ ಮುಖ್ಯ ರಸ್ತೆ ಮೇಲೆ ಮೃತನು ಮೋಟರ್ ಸೈಕಲ್ನಂ:ಕೆಎ-33 ಡಬ್ಲೂ-9111 ನೇದ್ದನ್ನು ಅತೀವೇಗ ಅಲಕ್ಷತನದಿಂದ ನಡೆಸಿಕೊಂಡು ತನ್ನ ಮೋಟರ್ ಸೈಕಲನ್ನು ಸ್ಕಿಡ್ ಮಾಡಿಕೊಂಡು ತೆಲೆಗೆ ಭಾರಿ ಸ್ವರೂಪದ ರಕ್ತಗಾಯ ಮತ್ತು ಬಲಬುಜಕ್ಕೆ ತೆರಚಿದ ಗಾಯ ಮಾಡಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ಪಿರ್ಯಾಧಿಯ ವಗೈರೆ ಸಾರಾಂಶ ಇರುತ್ತದೆ.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 36/2022 ಕಲಂ 379 ಐಪಿಸಿ : ದಿನಾಂಕ 22-03-2022 ರಂದು ಮಧ್ಯಾಹ್ನ 01-00 ಗಂಟೆಗೆ ಪಿಯಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ಯಾದಗಿರಿ ತಾಲ್ಲೂಕಿನ ಹೋನಗೇರ ಗ್ರಾಮದ ಜಮೀನ ಸರ್ವ ನಂ 260 ಕ್ಷೇತ್ರ 04 ಎಕರೆ 00 ಗುಂಟೆ ಜಮೀನು ಇದ್ದು. ಈ ಜಮೀನು ನನ್ನ ಹೆಸರಿನಲ್ಲಿ ಮತ್ತು ನನ್ನ ಅಣ್ಣತಮ್ಮಂದಿರಾದ ಜಲಾಲಸಾಬ್ ಇವರ ಹೆಸರಿನಲ್ಲಿ ಜಂಟಿಯಾಗಿ ಇರುತ್ತವೆ. ಈ ಜಂಟಿ ಜಮೀನಿನಲ್ಲಿ ಜಲಾಲಸಾಬ್ ತಂದೆ ಕಾಸೀಂಸಾಬ್ ಇತನ ಭಾಗಕ್ಕೆ ಬಂದ 1 ಎಕರೆ ಹೊಲವನ್ನು ದಿನಾಂಕ:-07/07/2020 ರಂದು ನಾನು, ಜಲಾಲಸಾಬನಿಗೆ 5,00,000 ಲಕ್ಷ ರೂಪಾಯಿ ಕೊಟ್ಟು ನಾನು ನಮ್ಮ ಊರಿನ ಹಿರಿಯ ಸಮಕ್ಷೇಮದಲ್ಲಿ ಖರೀದಿ ಮಾಡಿ ಖರೀದ ಮಾಡಿದ ಬಗ್ಗೆ ಸ್ಟಾಂಪ್ ಪೇಪರ ಮೇಲೆ ಬರೆದು ಜಲಾಲಸಾಬ್ ನಿಂದ ಸಹಿ ಮಾಡಿಸಿಕೊಂಡಿದ್ದು. ಆದರೆ ಆ ಹೊಲವನ್ನು ಇನ್ನು ನಮ್ಮ ಹೆಸರಿಗೆ ಮಾಡಿಸಿಕೊಂಡಿರುವುದಿಲ್ಲ ಖರೀದಿ ಮಾಡಿದಾಗಿನಿಂದಲು ಆ ಹೊಲವನ್ನು ನಾವು ಸಾಗುವಳೆ ಮಾಡುತ್ತಾ ಬಂದಿರುತ್ತೆವೆ. ಈ ವರ್ಷ ಆ ಹೊಲದಲ್ಲಿ ಜೋಳ ಬಿತ್ತೆನೆ ಮಾಡಿರುತ್ತವೆ. ಹಿಗಾ 8 ದಿನಗಳ ಹಿಂದೆ ನಮ್ಮ ಹೊಲದಲ್ಲಿ ಜೋಳದ ಸೋಪ್ಪೆ ಕಿತ್ತಿ ಹಾಕಿ ತೆನೆ ಓಣಗಲು ಬಿಟ್ಟಿರುತ್ತವೆ. ಹೀಗಾ ಅರ್ಧ ಹೊಲದ ಜೋಳ ಮತ್ತು ತೆನೆ ಸೋಪ್ಪೆ ರಾಶಿ ಮಾಡಿದ್ದು ಇನ್ನು ಅರ್ಧ ಹೊಲ ಅಂಗೆ ಇತ್ತು. ಇದು ರಾಶಿ ಮಾಡಿದ ನಂತರ ಅದನ್ನು ಮಾಡಬೇಕು ಅಂತ ಬಿಟ್ಟಿದ್ದೇವು ದಿನಾಂಕ 09/03/2022 ರಂದು ಬೆಳ್ಳಗೆ 05:00 ಗಂಟೆಯ ಸುಮಾರಿಗೆ ನಮಾಜಗೆ ಹೋಗಬೇಕಂತ ಮಸೀದಿ ಕಡೆಗೆ ಹೋಗುವಾಗ ಅಲ್ಲಾವುದ್ದೀನ್ ತಂದೆ ಖಾಜಸಾಬ್ .ಈತನು ನಿಮ್ಮ ಹೊಲದ ಜೋಳದ ಸೋಪ್ಪೆಯನ್ನು ಟ್ರ್ಯಾಕ್ಟರನಲ್ಲಿ 1] ಸಿಕಂದರ ತಂದೆ ಕಾಸಿಂಸಾಬ್ 2] ಚಾಂದಪಾಶ ತಂದೆ ಕಾಸೀಂ ಸಾಬ್ 3] ಶಬ್ಬೀರ ತಂದೆ ಕಾಸಿಂಸಾಬ್ 4] ಜಲಾಲಸಾಬ್ ತಂದೆ ಕಾಸಿಂಸಾಬ್ 5] ಮೈಬೂಬಿ ಗಂಡ ಜಲಾಲಸಾಬ್ ಸಾ: ಹೋನಗೇರ ಇವರೆಲ್ಲರು ಕೂಡಿ ತೆನೆ ಸಮೇತ ಸೊಪ್ಪಿ ಏರಿಕೊಂಡು ಹೋದರು ಅಂತ ತಿಳಿಸಿದ ಮೇರೆಗೆ ಆಗ ನಾನು ನಮ್ಮವರೊಂದಿಗೆ ಹೊಲಕ್ಕೆ ಹೋಗಿ ನೋಡಲಾಗಿ ನಮ್ಮ ಹೊಲದಲ್ಲಿ ಜೋಳದ ತೆನೆಯ ಸೊಪ್ಪೆ ಇರಲಿಲ್ಲ ನಮ್ಮ ಹೊಲದ ಜೋಳದ ಸೊಪ್ಪೆಯನ್ನು ಈ ಮೇಲ್ಕಂಡ ಆರೋಪಿತರು ದಿ: 09-03-2022 ರಂದು ರಾತ್ರಿ 09-00 ಗಂಟೆಯಿಂದ ದಿ: 10-03-2022 ರಂದು ಬೆಳಿಗ್ಗೆ 05-00 ಗಂಟೆ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಪಿಯರ್ಾಧಿ.

 


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 40/2022 ಕಲಂ 143, 147, 323, 324, 504, 506 ಸಂ 149 ಐ.ಪಿ.ಸಿ : ಇಂದು ದಿನಾಂಕ 22/03/2022 ರಂದು, ಮಧ್ಯಾಹ್ನ 13-30 ಗಂಟೆಗೆ ಫಿಯರ್ಾದಿ ಕುಮಾರಿ ರೇಣುಕಾ ಇವರು ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 19/03/2022 ರಂದು, ಸಾಯಂಕಾಲದ ಸುಮಾರಿಗೆ ಕುಟುಂಬದವರೊಂದಿಗೆ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ, ಸಾಯಂಕಾಲ 4-00 ಗಂಟೆಯ ಸುಮಾರಿಗೆ ಆರೋಪಿತರಾದ 1) ಪ್ರಶಾಂತ ತಂದೆ ಸಿದ್ದಲಿಂಗಪ್ಪ ಕರೆವಂಟಗಿ ವಯಸ್ಸು 36 ವರ್ಷ 2) ಷಣ್ಮುಖಪ್ಪ ತಂದೆ ಸಿದ್ದಲಿಂಗಪ್ಪ ಕೆರವಂಟಗಿ, ವಯಸ್ಸು 40 ವರ್ಷ 3) ರಾಘವೇಂದ್ರ ತಂದೆ ಸಿದ್ದಲಿಂಗಪ್ಪ ಕೆರವಂಟಗಿ, ವಯಸ್ಸು 28 ವರ್ಷ, 4) ಸಿದ್ದಲಿಂಗಪ್ಪ ತಂದೆ ಚೌಡಪ್ಪ ಕೆರವಂಟಗಿ ವಯಸ್ಸು 62 ವರ್ಷ, 5) ಅನ್ನಪೂರ್ಣ ಗಂಡ ಸಿದ್ದಲಿಂಗಪ್ಪ ಕೆರವಂಟಗಿ, ವಯಸ್ಸು 58 ರವೆಲ್ಲರೂ ಗುಂಪು ಕಟ್ಟಿಕೊಂಡು ಜಗಳ ತೆಗೆಯುವ ಉದ್ದೇಶದಿಂದ ನಮ್ಮ ಮನೆಗೆ ಬಂದು ನಮ್ಮ ತಂದೆಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ದೈಹಿಕವಾಗಿ ಹಲ್ಲೆ ಮಾಡಿರುತ್ತಾರೆ ಮತ್ತು ತನಗೆ ಅನ್ನಪೂರ್ಣ ಇವರು ಕೈಯಿಂದ ಹೊಡೆದಿರುತ್ತಾರೆ. ಜಗಳದ ಗದ್ದಲದಲ್ಲಿ ನನ್ನ ತಾಯಿಯ ಕೊರಳಲ್ಲಿದ್ದ 25 ಗ್ರಾಂ ಚಿನ್ನದ ಸರ ಮತ್ತು ನನ್ನ ತಂದೆಯ ಜೇಬಿನಲ್ಲಿ 1 ಲಕ್ಷ ರೂಪಾಯಿ ಬಿದ್ದಿರುತ್ತವೆ ಹುಡಕಾಡಿದರು ಸಿಕ್ಕಿರುವುದಿಲ್ಲ ಅಂತಾ ಫಿಯರ್ಾದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 40/2022 ಕಲಂ 143, 147, 323, 324, 504, 506 ಸಂಗಡ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ಇತ್ತೀಚಿನ ನವೀಕರಣ​ : 23-03-2022 10:52 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080