ಅಭಿಪ್ರಾಯ / ಸಲಹೆಗಳು

                                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23/04/2021
ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 52/2021 ಕಲಂ 143, 147, 504, 506,ಸಂಗಡ 149 ಐ.ಪಿ.ಸಿ : ಇಂದು ದಿನಾಂಕ 22-04-2021 ರಂದು 11-45 ಎ.ಎಮ್ ಕ್ಕೆ ಅಜರ್ಿದಾರರಾದ ಶ್ರೀ ಮಹಿಪಾಲರೆಡ್ಡಿ ತಂದೆ ಪರ್ವತರೆಡ್ಡಿ ಪೋಲಿಸ್ ಪಾಟೀಲ್ ವಯಾ:40 ಉ:ಒಕ್ಕಲುತನ ಸಾ: ಕಟಗಿ ಶಹಾಪೂರ ತಾ:ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ಗಣಕೀಕರಿಸಿದ ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ದಿನಾಂಕ 19-04-2021 ರಂದು 9 ಗಂಟೆಯ ರಾತ್ರಿ ಸುಮಾರಿಗೆ ಕಟಗಿ ಶಹಾಪೂರ ಗ್ರಾಮದವರಾದ 1) ಭೀಮನ್ಣಾ ತಂದೆ ಆಶಪ್ಪಾ ಕೊಟ್ರಕಿ 2) ಭೀಮಣ್ಣಾ ತಂದೆ ಭಿಮಣ್ಣಾ ಕೊಟ್ರಕಿ 3) ಹಣಮಂತ ತಂದೆ ಭೀಮಣ್ಣಾ ಕೊಟ್ರಕಿ 4) ಹಣಮಂತ ತಂದೆ ದ್ಯಾವಪ್ಪಾ ರಾಮಯ್ಯನೋರ 5) ಮಲ್ಲಮ್ಮಾ ಗಂಡ ಭೀಮಣ್ಣಾ ಕೊಟ್ರಕಿ 6) ದೇವಿಂದ್ರಮ್ಮಾ ಗಂಡ ಭೀಮಣ್ಣಾ ಕೊಟ್ರಕಿ ಮತ್ತು 7) ಸಾಬಮ್ಮಾ ಗಂಡ ಭಿಮಣ್ಣಾ ಕೊಟ್ರಕಿ ಮತ್ತು ಇತರರು ಇವರೆಲ್ಲರೂ ಕೂಡಿಕೊಂಡು ನನ್ನ ಮನೆಗೆ ಏಕಾಏಕಿ ಬಂದು ಭೀಮಣ್ಣಾ ಇತನು ಲೇ ಮಹೀಪ್ಯಾ ಏನ್ ಲೇ ಸುದ್ದಿ ನಿಮ್ಮವನ ಸೂಳಿ ಮಗನೇ ನಿನ್ನ ಸೊಕ್ಕ ಬಹಳಾಗ್ಯಾದ ನಿಮ್ಮವರೆಲ್ಲರನ್ನು ಕೊಡಲಿಯಿಂದ ಸಣ್ಣಾಗಿ ಕಡಿದು ನಿಮ್ಮ ಜೀವ ಸಹಿತ ಖಲಾಸ ಮಾಡುತ್ತಿನಲೇ ಮಗನೇ ಎಂದು ಬೀಮಣ್ಣಾ ತಂದೆ ಆಶಪ್ಪಾ ಕೊಟ್ರಕಿ ಇತನು ಬೈಯ್ಯುತ್ತಿರುವಾಗ ಉಳಿದವರೆಲ್ಲರೂ ಬಂದು ನಮ್ಮ ಕುಟುಂಬದವರ ಮೇಲೆ ಹಲ್ಲೆ ಮಾಡಲು ಯತ್ನ ಮಾಡುತ್ತಿದ್ದರು. ಆಸಮಯದಲ್ಲಿ ನಮ್ಮೂರಿನವರಾದ 1) ಅಮತೆಪ್ಪಾ ತಂದೆ ನಿಂಗಪ್ಪಾ ಮುದುಕನಳ್ಳಿ 2) ಕಾಶಪ್ಪಾ ತಂದೆ ದ್ಯಾವಪ್ಪಾ ನಾಟೇಕಾರ 3)ಮರೆಪ್ಪಾ ತಂದೆ ರಾಮಣ್ಣಾ ಕೊಂಕಲ್ ಇವರುಗಳು ಬಂದು ಜಗಳವನ್ನು ಬಿಡಿಸಿರುತ್ತಾರೆ. ನಾನು 112 ಕ್ಕೆ ಪೋನ ಮಾಡಿ ಈ ವಿಷಯವನ್ನು ತಿಳಿಸಿದಾದ ಸದರಿ ವಾಹನವು ರಾತ್ರಿ 11 ಗಂಟೆಯ ಸುಮಾರಿಗೆ ಬಂದ ಕೂಡಲೇ ಈ ಮೇಲೆ ಹೇಳಲಾದ ಇವರೆಲ್ಲರೂ ಓಡಿ ಹೋಗಿರುತ್ತಾರೆ. ನನ್ನ ಮತ್ತು ನನ್ನ ಕುಟುಂಬದವರ ಮೇಲೆ ಹಲ್ಲೆ ಮತ್ತು ಜೀವ ಬೆದರಿಕೆ ಹಾಕಿದ್ದರಿಂದ ನಾನು ನನ್ನ ಅಣ್ಣನಾದ ಸತೀಶರೆಡ್ಡಿ ತಂದೆ ಪರ್ವತರೆಡ್ಡಿ ಇವರಿಗೆ ವಿಷಯವನ್ನು ತಿಳಿಸಿದಾಗ ತಕ್ಷಣವೇ ಠಾಣೆಗೆ ಹೋಗಿ ಸದರಿಯವರ ಹೆಸರುಗಳನ್ನು ಮಾನ್ಯರಾದ ತಮ್ಮ ಗಮನಕ್ಕೆ ತಂದು ಅವರುಗಳ ಹೆಸರುಗಳನ್ನು ಬರೆಯಿಸಿರುತ್ತಾರೆ. ಇಷ್ಟೇಲ್ಲಾದರೂ ಕೂಡಾ ಭೀಮಣ್ಣಾ ಇತನು ಕುಡಿದ ಅಮಲಿನಲ್ಲಿ ನಮ್ಮ ಮನೆಗೆ ಬಂದು ನಮಗೆ ಅವಾಚ್ಯ ಬೈದು ಜೀವ ಬೆದರಿಕೆ ಹಾಕಿ ನಡೆದುಕೊಂಡು ತಮ್ಮ ಮನೆಗೆ ಹೋಗುವ ಸಂಧರ್ಭದಲ್ಲಿ ಕಾಲು ಜಾರಿ ಬಿದ್ದಿರುತ್ತಾನೆ. ಇದನ್ನು ತನ್ನ ಮನದಲ್ಲಿಟ್ಟುಕೊಂಡು ನಮ್ಮ ಮೇಲೆ ಯಾವುದೇ ಪ್ರಕರಣವನ್ನು ದಾಖಲಿಸುವುದು ದುರುದ್ದೇಶದಿಂದ ಸುಳ್ಳು ಪ್ರಕರಣವನ್ನು ನಮ್ಮ ಮೇಲೆ ದಾಖಲಿಸಿರುತ್ತಾರೆ. ಆದ ಕಾರಣ ಮಾನ್ಯರಾದ ತಾವುಗಳು ನನಗೆ ಹಾಗೂ ನನ್ನ ಕುಟುಂಬಕ್ಕೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 52/2021 ಕಲಂ 143, 147, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ :- 40/2021 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 22/04/2021 ರಂದು 5-00 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಸೋಮಲಿಂಗ ಒಡೆಯರ ಪಿ.ಎಸ್.ಐ (ಕಾಸು) ಸಾಹೇಬರು ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು, ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 22/04/2021 ರಂದು ಗೋಗಿಪೇಠ ಗ್ರಾಮದ ಬಸ್ ನಿಲ್ದಾಣದ ಹತ್ತಿರ ರೋಡಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ, ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಅಶೋಕ ತಂದೆ ಸಾಬಯ್ಯ ಗುತ್ತೇದಾರ ವಯ|| 50 ವರ್ಷ ಜಾ|| ಈಳಿಗೇರ ಉ|| ಒಕ್ಕಲುತನ ಸಾ|| ಗೋಗಿಪೇಠ ತಾ|| ಶಹಾಪೂರ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 3-55 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 1490/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿ ವರದಿ ನೀಡಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 40/2021 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಸ್ಶೆದಾಪೂರ ಪೊಲೀಸ್ ಠಾಣೆ :- 65/2021, ಕಲಂ. 323,354, 504.506. ಸಂ.34 ಐ ಪಿ ಸಿ : ದಿನಾಂಕ: 22-04-2021 ರಂದು 05-30 ಪಿ ಎ.ಎಮ್ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 21-04-2021 ರಂದು ಸಾಯಂಕಾಲ 05-00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಬಸವರಾಜ ಮತ್ತು ನೀಲಮ್ಮ ಎಲ್ಲರೂ ಮನೆಯ ಮುಂದೆ ಇರುವಾಗ ನಮ್ಮ ಅಣ್ಣತಮ್ಮರಾದ ಶೇಕ್ರಪ್ಪ ತಂದೆ ಚಂದ್ರಾಮಪ್ಪ, ದೋಡ್ಡಸಾಬಣ್ಣ ತಂದೆ ಚಂದ್ರಾಮಪ್ಪ, ಶರಣಪ್ಪ ತಂದೆ ಚಂದ್ರಾಮಪ್ಪ ಇವರೆಲ್ಲರೂ ಕೂಡಿಕೊಂಡು ಬಂದು ಲೇ ಸೂಳೆ ಮಗಳೆ ನಮ್ಮ ಮೇಲೆ ಯಾಕೆ ಎಸ್.ಪಿ ಸಾಹೇಬರಲ್ಲಿ ಅಜರ್ಿ ಕೊಟ್ಟಿದ್ದಿ ಮಗಳೆ ನಮಗೆ ತಿರುಗಾಡಿಸಬೇಕಂತ ಮಾಡಿದೆನು ಗೊಡ್ಡಿ ಸೂಳೆ ಮಗಳೆ ಅಂತಾ ಅವಾಚ್ಯವಾಗಿ ಬೈದು ಅವರಲ್ಲಿ ಶೇಕ್ರಪ್ಪ ಇವನು ನನಗೆ ಕೈಯಿಂದ ಕಪಾಳಕ್ಕೆ ಹೊಡೆದನು. ದೊಡ್ಡಸಾಬಣ್ಣ ಇವನು ಲೇ ಸೂಳೆ ಮಗಳೆ ನೀನು ಇರತನಕ ನಿನ್ನ ಹೊಲವನ್ನು ಸುಮ್ಮನೆ ನೀನು ಮಾಡಿಕೊಂಡು ತಿನ್ನು ಇಲ್ಲಂದರೆ ನಿನಗೆ ಜೀವ ಸಹಿತ ಉಳಿಸುವದಿಲ್ಲ ನೋಡು ಹುಷಾರ ಮಗಳೆ ಅಂತಾ ಬೇದರಿಸಿ ಕೂದಲು ಹಿಡಿದು ಎಳದಾಡಿ ಅವಮಾನ ಮಾಡಿದನು. ಶರಣಪ್ಪ ಇವನು ಈ ಸೂಳೆ ಮಗಳಿಗೆ ಸುಮ್ಮನೆ ಬಿಡಬಾರದು ಎಲ್ಲಲ್ಲೋ ಹೋಗಿ ನಮ್ಮ ಮೇಲೆ ದೂರು ಕೊಡುತಿದ್ದಾಳೆ ಈಕೆಗೆ ಒಂದು ಗತಿ ಕಾಣಿಸಿ ಬಿಟ್ಟರೆ ನಮಗೆ ಕೀರಿಕಿರಿ ತಪ್ಪುತ್ತದೆ ಅಂದು ಒಮ್ಮಲೆ ಕೈಯಿಂದ ಕಪಾಳಕ್ಕೆ ಹೊಡೆದು ಲೇ ಮಗಳೆ ನೀನು ಸುಮ್ಮನೆ ಮನೆಯಲ್ಲಿ ಇದ್ದರೆ ಸರಿ ಇಲ್ಲಂದರೆ ನಿನಗೆ ಖಲಾಸ ಮಾಡಿ ಬಿಡುತ್ತೇವೆ ಅಂತಾ ಬೇದರಿಕೆ ಹಾಕಿದ್ದು ಇರುತ್ತದೆ

ಭೀಗುಡಿ ಪೊಲೀಸ್ ಠಾಣೆ :- 37/2021 ಕಲಂ 78(3) ಕೆಪಿ ಯ್ಯಾಕ್ಟ : ದಿನಾಂಕ 22/04/2021 ರಂದು 02.00 ಪಿ.ಎಮ್.ಕ್ಕೆಶಿರವಾಳ ಗ್ರಾಮದವಾಲ್ಮೀಕಿಚೌಕ್ಹತ್ತಿರಸಾರ್ವಜನಿಕ ಸ್ಥಳದಲ್ಲಿಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಬಾತ್ಮಿ ಬಂದಿದ್ದು ಪ್ರಕರಣ ದಾಖಲಿಸಿಕೊಂಡು ದಾಳಿ ಕೈಕೊಳ್ಳಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು5 ಪಿ.ಎಮ್.ಕ್ಕೆ ಪ್ರಕರಣ ದಾಖಲಿಸಿ ನಂತರ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ6.15 ಪಿ.ಎಮ್.ಕ್ಕೆ ದಾಳಿ ಮಾಡಿಆರೋಪಿತನಿಂದ 1) ನಗದು ಹಣರೂಪಾಯಿ1500=00, 2) ಮಟಕಾ ನಂಬರ ಬರೆದಒಂದುಚೀಟಿ 3) ಒಂದು ಬಾಲ್ ಪೆನ್ ನೇದ್ದವುಗಳನ್ನು ಪಂಚನಾಮೆ ಮೂಲಕ ವಶಪಡಿಸಿಕೊಂಡಿದ್ದು ಆರೋಪಿತರ ವಿರುದ್ದಕ್ರಮ ಜರುಗಿಸಿದ ಬಗ್ಗೆ.

ಇತ್ತೀಚಿನ ನವೀಕರಣ​ : 23-04-2021 11:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080