ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 23-04-2022
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ 51/2022 ಕಲಂ78(3) ಕೆ.ಪಿ ಕಾಯ್ದೆ : ಇಂದು ದಿನಾಂಕ: 22.04.2022 ರಂದು ಮಧ್ಯಾಹ್ನ 3.00 ಗಂಟೆಗೆ ವಿಜಯಕುಮಾರ ಪಿ.ಐ ಸಾಹೇಬರು ಸೈದಾಪುರ ಪೊಲೀಸ್ ಠಾಣೆ ರವರು ಸ್ಥಳಿಯ ಸ್ಟೇಷನ್ ಸೈದಾಪುರದ ಹಲಾಯಿ ಪೀರ ಮಸೀದಿ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ ಒಬ್ಬ ಆಪಾದಿತನನ್ನು ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದೊಂದಿಗೆ ಜಪ್ತಿಪಂಚನಾಮೆ, ಆಪಾದಿತ ಮತ್ತು ಮುದ್ದೆಮಾಲು ಒಪ್ಪಿಸಿದ್ದು ಮೂಲ ಜಪ್ತಿ ಪಂಚನಾಮೆ ಸಾರಾಂಶವೇನೆಂದರೆ, ನಾವು ಸೈದಾಪೂರ ಪೊಲೀಸ್ ಠಾಣೆಯ ವಿಜಯಕುಮಾರ ಪಿ.ಐ ಸೈದಾಪುರ ರವರು ಠಾಣೆಗೆ ಬರುವಂತೆ ಸೂಚಿಸಿದ ಮೇರೆಗೆ ಸೈದಾಪುರ ಠಾಣೆಗೆ ಹೋಗಿ ಪಿ.ಐ ಸಾಹೇಬರವರ ಮುಂದೆ ಹಾಜರಾದೆವು. ಪಿ.ಐ ಸಾಹೇಬರು ಪಂಚರಾದ ನಮಗೆ ಮತ್ತು ಅಲ್ಲಿದ್ದ ಠಾಣೆಯ ಸಿಬ್ಬಂದಿಯವರಾದ ಚಂದ್ರಕಾಂತ ಎ.ಎಸ್.ಐ, ರಮೇಶರೆಡ್ಡಿ ಸಿಪಿಸಿ-133 ರವರಿಗೆ ತಿಳಿಸಿದ್ದೇನೆಂದರೆ, ಇಂದು ಮಧ್ಯಾಹ್ನ 1.00 ಗಂಟೆಗೆ ಸ್ಟೇಷನ್ ಸೈದಾಪುರದ ರೈಲ್ವೆ ಸ್ಟೇಷನ್ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಗೆ ಮಟಕಾ ಜೂಜಾಟದ ನಂಬರ ಬರೆಸಿ 1 ರೂಪಾಯಿಗೆ 80 ರೂಪಾಯಿಗಳು ಸಿಗುತ್ತವೆ ಇದು ದೈವಲೀಲೆ ಆಟ ಅಂತಾ ಕೂಗುತ್ತ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆಯುತ್ತಿದ್ದಾನೆ ಅಂತಾ ಮಾಹಿತಿ ಇದೆ. ಮಟಕಾ ನಂಬರ ಬರೆಯುವ ವ್ಯಕ್ತಿ ಮೇಲೆ ದಾಳಿಮಾಡಿ ಕಾನೂನು ಕ್ರಮ ಕೈಗೊಳ್ಳುವದು ಅವಶ್ಯಕತೆಯಿದೆ. ಕಾರಣ ದಾಳಿ ಕಾಲಕ್ಕೆ ನಮ್ಮನ್ನು ಹಾಜರಿರಲು ಮತ್ತು ಜಪ್ತಿ ಪಂಚನಾಮೆಗೆ ಪಂಚರಂತ ಸಹಕರಿಸುವಂತೆ ಕೋರಿಕೊಂಡ ಮೇರೆಗೆ ನಾವು ಉಭಯ ಪಂಚರು ಒಪ್ಪಿಕೊಂಡೆವು. ನಂತರ ಅಲ್ಲಿಂದ 01.15 ಗಂಟೆಗೆ ಸರಕಾರಿ ವಾಹನ ಸಂಖ್ಯೆ ಕೆಎ-33-ಜಿ-0065 ವಾಹನದಲ್ಲಿ ಎಲ್ಲರನ್ನು ಕೂಡಿಸಿಕೊಂಡು ಭಾತ್ಮೀ ಬಂದ ಸ್ಥಳದ ಹತ್ತಿರ ಹೋಗಿ ವಾಹನ ನಿಲ್ಲಿಸಿ ಸಿಬ್ಬಂದಿಯವರು ಹಲಾಯಿ ಪೀರ ಮಸೀದ ಪಕ್ಕದ ಸಂದಿನಲ್ಲಿ ಹೋಗಿ ಮರೆಯಾಗಿ ನಿಂತು ಯಾರೋ ಒಬ್ಬ ವ್ಯಕ್ತಿ ಹಲಾಯಿ ಪೀರ ಮುಂದುಗಡೆ ಹೋಗಿ ಬರುವ ಜನರಿಗೆ ಮಟಕಾ ಚೀಟಿ ಬರೆಸಿರಿ ಕಲ್ಯಾಣ ಮಟಕಾ 1 ರೂಪಾಯಿಗೆ 80 ರೂಪಾಯಿ ಸಿಗುತ್ತವೆ ಅಂತಾ ಕೂಗುತ್ತಿದ್ದನು ಮಧ್ಯಾಹ್ನ 1.30 ಗಂಟೆ ಸುಮಾರಿಗೆ ಸಿಬ್ಬಂದಿಯವರು ಸಾರ್ವಜನಿಕರಿಗೆ ಕೂಗಿ ಕರೆಯುತ್ತಿದ್ದ ವ್ಯಕ್ತಿಯನ್ನು ಹಿಡಿದುಕೊಂಡು ನಮ್ಮ ಸಮಕ್ಷಮದಲ್ಲಿ ವ್ಯಕ್ತಿಯ ಹೆಸರು, ವಿಳಾಸ ವಿಚಾರಿಸಿದ್ದು 1. ಚಂದಪ್ಪ ತಂದೆ ಯಂಕಪ್ಪ ದಾಸರ ವಯ|| 60 ವರ್ಷ, ಜಾ|| ದಾಸರ ಉ|| ಕೂಲಿ ಸಾ|| ಭೀಮನಳ್ಳಿ ಅಂತಾ ತಿಳಿಸಿದನು. ಸದರಿಯವನ ಅಂಗಶೋಧನೆ ಮಾಡಿದಾಗ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ್ ಹಾಗೂ ನಗದು ಹಣ 3150=00 ರೂಪಾಯಿ ಸಿಕ್ಕವು. ಮುದ್ದೆಮಾಲು ಜಪ್ತಿಪಡಿಸಿಕೊಂಡು ಪಿ.ಐ ಸಾಹೇಬರು ಮುದ್ದೆಮಾಲುಗಳನ್ನು ಪ್ರತ್ಯೇಕ ಕವರನಲ್ಲಿ ಹಾಕಿ ಅದಕ್ಕೆ ಪಂಚರಾದ ನಾವು ಮತ್ತು ಪಿ.ಐ ಸಾಹೇಬರು ಸಹಿ ಮಾಡಿ ಅವುಗಳಿಗೆ ಪಂಚರ ಚೀಟಿ ಅಂಟಿಸಿ ಪಂಚನಾಮೆ ಕೈಗೊಂಡೆವು. ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ 22.04.2022 ರಂದು ಮಧ್ಯಾಹ್ನ 1-30 ಗಂಟೆಯಿಂದ 2-30 ಗಂಟೆಯ ಮಧ್ಯದ ಅವಧಿಯಲ್ಲಿ ಸ್ಥಳದಲ್ಲಿಯೇ ರಮೇಶ ರೆಡ್ಡಿ ಪಿಸಿ-133 ರವರ ಕಡೆಯಿಂದ ಲ್ಯಾಪ ಟ್ಯಾಪದಲ್ಲಿ ಟೈಪ ಮಾಡಿಸಲಾಯಿತು. ಅಂತಾ ನೀಡಿದ ಮೂಲ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 51/2022 ಕಲಂ 78(3) ಕೆ.ಪಿ. ಆಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 58/2022 ಕಲಂ: 323, 324, 354, 504, 506 ಐಪಿಸಿ : ಇಂದು ದಿನಾಂಕಃ 22/04/2022 ರಂದು 2:30 ಪಿ.ಎಂ ಕ್ಕೆ ಪಿಯರ್ಾದಿದಾರರಾದ ಶ್ರೀಮತಿ ದೇವಮ್ಮ ಗಂಡ ಹೈಯಾಳಪ್ಪ ಕಮತಗಿ ವ|| 50 ವರ್ಷ ಜಾ|| ಯಾದವ ಉ|| ಹೊಲಮನೆಗೆಲಸ ಸಾ|| ದೇವಿಕೇರಾ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ ಸಾರಂಶವೆನೆಂದರೆ, ನನಗೆ ಒಟ್ಟು 3 ಜನ ಮಕ್ಕಳಿದ್ದು ಇಬ್ಬರು ಹೆಣ್ಣುಮಕ್ಕಳು, ಒಬ್ಬ ಗಂಡು ಮಗನಿರುತ್ತಾನೆ ಎಲ್ಲರದು ಮದುವೆಯಾಗಿರುತ್ತದೆ. ನಮ್ಮ ಮನೆಯ ಹಿಂದೆ ನಮ್ಮ ಭಾವನಾದ ದಿ.ನಿಂಗಪ್ಪ ಇತನ ಮನೆ ಇರುತ್ತದೆ. ಮನೆಯ ಜಾಗದ ವಿಷಯದಲ್ಲಿ ನಮಗೂ ಮತ್ತು ನಮ್ಮ ಭಾವನಾದ ದಿ. ನಿಂಗಪ್ಪ ಈತನ ಮದ್ಯ ತಕರಾರು ನಡೆದು, ಆತನು ಬದುಕಿರುವಾಗಲೆ ಬಗೆಹರಿಸಿಕೊಂಡಿದ್ದೆವು. ಆದರೆ ಇತ್ತೀಚೆಗೆ ಆತನ ಮಗನಾದ ಮಲ್ಲಿಕಾಜರ್ುನ ಕಮತಗಿ ಈತನು ಇದೇ ವಿಷಯವಾಗಿ ಆಗಾಗ ನಮ್ಮೊಂದಿಗೆ ತಕರಾರು ಮಾಡುತ್ತಾ ಬರುತ್ತಿದ್ದನು. ಆದರೂ ಕೂಡ ಮುಂದೆ ಸರಿ ಹೊಗಬಹುದು ಅಂತಾ ನಾನು ಮತ್ತು ನನ್ನ ಮನೆಯವರಾದ ಹೈಯಾಳಪ್ಪ ಇಬ್ಬರು ಸುಮ್ಮನೆ ಇದ್ದೆವು. ಹೀಗಿದ್ದು ಇಂದು ದಿನಾಂಕ:22/04/2022 ರಂದು ಮುಂಜಾನೆ 7:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ರಾಯಪ್ಪ ಇಬ್ಬರು ಕೂಡಿ ನಮ್ಮ ಮನೆಯ ಸಂದಿಯಲ್ಲಿ ಸಲಿಕೆಯಿಂದ ಚರಂಡಿ ನೀರು ಮುಂದೆ ಹೋಗುವಂತೆ ಕವಲಿ ಮಾಡುತ್ತಿದ್ದಾಗ ನಮ್ಮ ಭಾವನ ಮಗನಾದ ಮಲ್ಲಿಕಾಜರ್ುನ ತಂದೆ ನಿಂಗಪ್ಪ ಕಮತಗಿ ಈತನು ಸಂದಿ ಹತ್ತಿರ ಬಂದವನೇ ಏನಲೇ ಸೂಳೆ ಇಲ್ಲಿ ಏನು ಕೆಲಸ ಮಾಡುತ್ತೀರಿ ಸುಮ್ಮನೆ ಇರಲಿಕ್ಕೆ ಬರುದಿಲ್ಲೇನು ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಆತನಿಗೆ ಮನೆಯ ಚರಂಡಿ ನೀರು ಮುಂದೆ ಹೋಗಲು ಕವಲಿ ಮಾಡುತ್ತಿದ್ದೇನೆ ಯಾಕೆ ಸುಮ್ಮನೆ ಬೈಯುತ್ತಿ ಅಂತ ಅಂದಾಗ ಮಲ್ಲಿಕಾಜರ್ುನ ಈತನು ಅಲ್ಲಿಯೇ ಬಿದ್ದ ಒಂದು ಬಡಿಗೆಯಿಂದ ನನ್ನ ತಲೆಯ ಹಿಂದುಗಡೆ ಹೊಡೆದು ರಕ್ತಗಾಯ ಮಾಡಿ ನನ್ನ ಸೀರೆ ಸೆರಗ ಹಿಡಿದು ಜೊಗ್ಗಾಡಿ ಮಾನ ಭಂಗ ಮಾಡುತ್ತಿದ್ದಾಗ, ನನ್ನ ಮಗ ರಾಯಪ್ಪ, ಮತ್ತು ಅಲ್ಲೆ ಹೊರಟಿದ್ದ ದೇವಪ್ಪ ತಂದೆ ಆಶಪ್ಪ ತಳವಾರ ಇಬ್ಬರು ಕೂಡಿ ಜಗಳವನ್ನು ನೋಡಿ ಬಿಡಿಸಿಕೊಂಡರು. ಇನ್ನೊಮ್ಮೆ ಈ ಜಾಗದಲ್ಲಿ ಏನಾದರೂ ಕೆಲಸ ಮಾಡಿದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಅಲ್ಲಿಂದ ಹೋದನು. ನನಗೆ ನನ್ನ ಮಗ ರಾಯಪ್ಪ ಇತನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಸುರಪುರಕ್ಕೆ ತಂದು ಸೇರಿಕೆ ಮಾಡಿದನು. ನಂತರ ಉಪಚರ ಪಡೆದುಕೊಂಡು ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನನಗೆ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು, ಸೀರೆ ಸೆರಗ ಹಿಡಿದು ಎಳೆದಾಡಿ ಅವಮಾನ ಮಾಡಿದ ಮಲ್ಲಿಕಾರ್ಜನ ತಂದೆ ನಿಂಗಪ್ಪ ಕಮತಗಿ ಇತನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ನೀಡಿದ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 58/2022 ಕಲಂ: 323, 324, 354, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 59/2022 ಕಲಂ 363 ಐ.ಪಿ.ಸಿ. : ಇಂದು ದಿನಾಂಕ:22-04-2022 ರಂದು 7 ಪಿ.ಎಂ.ಕ್ಕೆ ಠಾಣೆಯಲ್ಲ್ಲಿದ್ದಾಗ ಶ್ರೀಮತಿ ಲತಾ ಗಂಡ ದಿ|| ಬೈಲಪ್ಪ ಹಡಪದ ವಯಾ:32 ವರ್ಷ ಉ:ಮನೆ ಕೆಲಸ ಸಾ|| ಸುರಪೂರ ಇವರು ಠಾಣೆಗೆ ಬಂದು ಒಂದು ಗಣಕೀಕರಿಸಿದ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ನನ್ನ ಮಗ ಅಂಬರೇಶ ಕುಮಾರ ವ|| 10 ವರ್ಷ ಈತನು ದಿನಾಂಕ: 17/04/2022 ರಂದು ಸುರಪೂರದ ವಾಲ್ಮೀಕಿ ಚೌಕನಲ್ಲಿರುವ ನನ್ನ ಮನೆಯಿಂದ ಆಟವಾಡಲು ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ನನ್ನನ್ನು ಕೇಳಿ ಸಾಯಂಕಾಲ 6 ಗಂಟೆಯಿಂದ 6:30 ಸಮಯದಲ್ಲಿ ಆಟವಾಡಲು ತನ್ನ ಸ್ನೇಹಿತನ ಸೈಕಲ್ ತೆಗೆದುಕೊಂಡು ಹೋಗಿರುತ್ತಾನೆ. ಆಟವಾಡಿ ಮನೆಗೆ ಬಂದಿರುವದಿಲ್ಲ. ನನ್ನ ಮಗ ಮತ್ತು ಅವನು ಆಡುತ್ತಿದ್ದ ಸೈಕಲ್ ಜೊತೆಗೆ ಕಾಣೆಯಾಗಿರುತ್ತಾನೆ. ಈ ಮುಂಚೆ ಇದೆ ರೀತಿ ಕಾಣೆಯಾದಾಗ ಸಿಕ್ಕಿರುತ್ತಾನೆ. ಈ ಬಾರಿ ಕಾಣೆಯಾಗಿ 5 ದಿನಗಳಾದರೂ ಸಿಕ್ಕಿರುವುದಿಲ್ಲ. ನನ್ನ ಈ ಕಂಪ್ಲೆಂಟನ್ನು ಸ್ವೀಕರಿಸಿ ಹುಡುಕಿಕೊಡಬೇಕಾಗಿ ಕೆಳಿಕೊಳ್ಳುತ್ತೇನೆ. ನನಗೆ ಅನುಮಾನ ಇರುವ ವ್ಯಕ್ತಿಗಳು 1) ಬಸವರಾಜ 2) ವಿಠಲ್ 3) ಶಿವಶರಣ ದೇಸಾಯಿ. ಕಾಣೆಯಾದ ನನ್ನ ಮಗನನ್ನು ಹುಡುಕಿಕೊಡಲು ತಮ್ಮಲ್ಲಿ ವಿನಂತಿ ಇರುತ್ತದೆ ಅಂತಾ ಕೊಟ್ಟ ಅಜರ್ಿಯ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 53/2022 ಕಲಂ: 143, 147, 504, 341, 324, 323, 114, 506 ಸಂ 149 ಐಪಿಸಿ : ಇಂದು ದಿನಾಂಕ:22/04/2022 ರಂದು 2-30 ಪಿಎಮ್ ಕ್ಕೆ ಶ್ರೀಮತಿ ತಾರಾಬೀ ಗಂಡ ಖಾದರಪಟೇಲ್, ವ:65, ಜಾ:ಮುಸ್ಲಿಂ, ಉ:ಮನೆಕೆಲಸ ಸಾ:ಗುಂಡ್ಲೂರು ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ನನ್ನ ಗಂಡ ಮಕ್ಕಳೊಂದಿಗೆ ಹೊಲಮನೆ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನಮಗೆ ಮತ್ತು ನಮ್ಮೂರ ಮಹಿಬೂಬ ಬಾಷಾ ತಂದೆ ಹಸನ ಅಲಿ ದಳಪತಿ ಇಬ್ಬರ ಮಧ್ಯ ಕಳೆದ ಗ್ರಾಮ ಪಂಚಾಯತ ಚುನಾವಣೆ ಸಂಬಂಧ ತಕರಾರು ಆಗಿತ್ತು. ಆಗಿನಿಂದ ಅವರು ನಮ್ಮ ಮೇಲೆ ದ್ವೇಷ ಸಾಧಿಸುತ್ತಾ ಬರುತ್ತಿದ್ದರು. ನಿನ್ನೆ ದಿನಾಂಕ:21/04/2022 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನನ್ನ ಮಗ ಸೈಯದ ಪಟೇಲ್ ತಂದೆ ಖಾದರ ಪಟೇಲ್ ಈತನು ನಮ್ಮ ಗದ್ದೆಗಳ ಬಾಜು ಇರುವ ಆಂದ್ರದವರ ಕವಳೆ ಗದ್ದೆಗಳು ಕಟಾವ ಆಗಿದ್ದು, ಕವಳೆ ಹುಲ್ಲನ್ನು ಆಂದ್ರದವರಿಗೆ ಹೇಳಿ ಹುಲ್ಲು ಜಮಾ ಮಾಡಲು ಹೋಗಿದ್ದನು. ನಾನು ನಮ್ಮ ಮನೆ ಹತ್ತಿರ ಇದ್ದೆನು. ನಂತರ ಬೆಳಗ್ಗೆ 10-30 ಗಂಟೆ ಸುಮಾರಿಗೆ ನಾನು ನಮ್ಮ ಮನೆ ಮುಂದೆ ಇದ್ದಾಗ ನನ್ನ ಮಗ ಸೈಯದ ಪಟೇಲ್ ತಂದೆ ಖಾದರ ಪಟೇಲ್ ಈತನು ಆಂದ್ರದವರ ಗದ್ದೆಯಿಂದ ಮನೆಗೆ ಬರುತ್ತಿದ್ದವನಿಗೆ ನಮ್ಮ ಮನೆಯ ಮುಂದೆ ರೋಡಿನ ಮೇಲೆ 1) ಸೈಯದ ಬಾಷಾ ತಂದೆ ಮಹಿಬೂಬ ಬಾಷಾ ದಳಪತಿ, 2) ಖತಾಲ ಹುಸೇನ ತಂದೆ ಮಹಿಬೂಬ ಬಾಷಾ ದಳಪತಿ, 3) ನಬಿಸಾಬ ತಂದೆ ಮಹಿಬೂಬ ಬಾಷಾ ದಳಪತಿ, 4) ಖಾಸಿಂಸಾಬ ತಂದೆ ಮಹಿಬೂಬ ಬಾಷಾ ದಳಪತಿ, 5) ಹಸನ ಅಲಿ ತಂದೆ ಮಹಿಬೂಬ ಬಾಷಾ ದಳಪತಿ, 6) ಖಾಜಾಹುಸೇನ ತಂದೆ ಹಸನ ಅಲಿ ನದಾಫ ಮತ್ತು 7) ಮಹಿಬೂಬ ತಂದೆ ಅಹ್ಮದಸಾಬ ನದಾಫ ಎಲ್ಲರೂ ಸಾ:ಗುಂಡ್ಲೂರು ಇವರೆಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಬಂದವರೆ ನನ್ನ ಮಗ ಸೈಯದ ಪಟೇಲನಿಗೆ ತಡೆದು ನಿಲ್ಲಿಸಿ ಅಬ್ಬೆ ಸಾಲೆ ಸೈದ್ಯಾ ತು ಹಮಾರೆ ಸೈಯದ ಬಾಷಾಕೊ ಆಂದ್ರವಾಲೆ ಕೆ ಧಾನ ಮಡಿಮೆ ಸೇ ಘಾಂಸ ನಕೊ ಲೇ ಬೋಲ್ತಾ ಕ್ಯಾ ಬೇ ಭೊಸುಡಿಕೆ ಆಜ್ ದೆಕ್ ತೆರೆಕೋ ಕ್ಯಾ ಹಾಲ್ ಕರತೆ ಬೇಟೆ ಎಂದು ಅವಾಚ್ಯ ಬೈದು ಜಗಳ ತೆಗೆದವರೆ ಸೈಯದ ಪಟೇಲ್ ನಿಗೆ ಖಾಸಿಂಸಾಬ ಮತ್ತು ಹಸನ ಅಲಿ ಇಬ್ಬರೂ ಗಟ್ಟಿಯಾಗಿ ಹಿಡಿದುಕೊಂಡಾಗ ಸೈಯದ ಬಾಷಾ ಈತನು ಅಲ್ಲಿಯೇ ಬಿದ್ದ ಕಟ್ಟಿಗೆ ತೆಗೆದುಕೊಂಡು ನನ್ನ ಮಗನ ಎಡ ಮುಡ್ಡಿಗೆ ಮತ್ತು ಎಡಗಾಲಿಗೆ ಹೊಡೆದು ಒಳಪೆಟ್ಟು ಮಾಡಿದನು. ಇದನ್ನು ನೋಡಿ ಬಿಡಿಸಲು ಬಂದ ನನ್ನ ಇನ್ನೊಬ್ಬ ಮಗ ಹುಸೇನ ಪಟೇಲ್ ತಂದೆ ಖಾದರ ಪಟೇಲ್ ಈತನಿಗೆ ನಬಿಸಾಬನು ಹಿಡಿದುಕೊಂಡಾಗ ಖತಾಲ ಹುಸೇನ ಈತನು ಕೈ ಮುಷ್ಟಿ ಮಾಡಿ ಬಾಯಿಗೆ ಗುದ್ದಿದ್ದರಿಂದ ತುಟಿಗಳು ಒಡೆದು ಹಲ್ಲಿಗೆ ಪೆಟ್ಟಾಗಿ ರಕ್ತಗಾಯವಾಯಿತು. ಮಹಿಬೂಬ ತಂದೆ ಅಹ್ಮದಸಾಬ ಈತನು ಬಂದು ಕೈ ಮುಷ್ಟಿ ಮಾಡಿ ಹೊಟ್ಟೆಗೆ ಮತ್ತು ಬೆನ್ನಿಗೆ ಗುದ್ದಿ ಒಳಪೆಟ್ಟು ಮಾಡಿದನು. ಆಗ ಅವರೊಂದಿಗೆ ಜಗಳಕ್ಕೆ ಬಂದಿದ್ದ ಖಾಜಾ ಹುಸೇನ ತಂದೆ ಹಸನ ಅಲಿ ನದಾಫ ಈತನು ಏ ಸಾಲೋಂ ಕೊ ಆಜ್ ಖಲಾಸ ಕರಕೆ ಛೋಡನಾ ಜಿಂದಾ ನಹಿ ಛೋಡನಾ ಎಂದು ಅಲ್ಲಿಯೇ ನಿಂತು ಜಗಳಕ್ಕೆ ಪ್ರಚೋದನೆ ಮಾಡುತ್ತಿದ್ದನು. ಅಷ್ಟರಲ್ಲಿ ಅಲ್ಲಿಯೇ ಇದ್ದ ನಮ್ಮೂರ ಅನ್ವರ ತಂದೆ ಸೈಯದ ಅಲಿ, ಇಮಾಮಪಟೇಲ್ ತಂದೆ ಮಹ್ಮದ ಪಟೇಲ್ ಮತ್ತು ಸಾಹೇಬ ಪಟೇಲ್ ತಂದೆ ಹುಸೇನ ಪಟೇಲ್ ಎಲ್ಲರು ಬಂದು ಜಗಳ ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಆಜ್ ಬಚ್ ಗಯೇ ಬೇಟೆ ಔರ ಏಕ ಬಾರ ಮಿಲೆತೋ ತುಮೆ ಖಲಾಸ ಕರತೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಗಾಯಗೊಂಡ ನನ್ನ ಇಬ್ಬರೂ ಮಕ್ಕಳಿಗೆ ನಾವು ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ. ಅಲ್ಲಿನ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದರು. ಆಗ ನಾವು ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ಹೇಳಿರುತ್ತೇವೆ. ನಂತರ ನಮ್ಮ ಹಿರಿಯರಿಗೆ ವಿಚಾರಿಸಿದಾಗ ದೂರು ಕೊಡುವುದಿದ್ದರೆ ಪೊಲೀಸ್ ಠಾಣೆಗೆ ಹೋಗಿ ಕೊಡಬಹುದು ಎಂದು ಹೇಳಿದ್ದರಿಂದ ಈಗ ನಾವು ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಹಳೆ ವೈಷಮ್ಯದಿಂದ ಕವಳೆ ಹುಲ್ಲಿನ ವಿಷಯದಲ್ಲಿ ಜಗಳ ತೆಗೆದು ತಡೆದು ನಿಲ್ಲಿಸಿ, ಅವಾಚ್ಯ ಬೈದು ನನ್ನ ಮಕ್ಕಳ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಮತ್ತು ಜಗಳಕ್ಕೆ ಪ್ರಚೋದನೆ ನೀಡಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 53/2022 ಕಲಂ: 143, 147, 504, 341, 324, 323, 114, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 16/2022 ಕಲಂ: 78 (3) ಕೆ.ಪಿ ಯಾಕ್ಟ್ : ಇಂದು ದಿನಾಂಕ22/04/2022 ರಂದು 2:30 ಪಿ. ಎಂ ಕ್ಕೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಜಪ್ತಿಪಂಚನಾಮೆಯೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಂಕ್ಷಿಪ್ತ ಸಾರಾಂಶವೆನೆಂದರೆ ಇಂದು ದಿನಾಂಕ: 22/04/2022 ರಂದು 1:00 ಪಿ.ಎಂ ಕ್ಕೆ ಹಗರಟಗಿ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವೆಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರಿಗೆ ಕರೆದು 1/- ರೂ 80/- ಕೊಡುತ್ತೆನೆೆ ಅಂತಾ ಹೇಳಿ ಮಟಕಾ ನಂಬರ ಬರೆದುಕೊಡುತ್ತಿದ್ದಾಗ ದಾಳಿಮಾಡಿ ಆರೋಪಿತನಿಂದ 1060/- ರೂ ನಗದು ಹಣ ಹಾಗೂ ಒಂದು ಬಾಲಪೆನ್ನು ಹಾಗೂ ಒಂದು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿಯನ್ನು ಜಪ್ತುಪಡಿಸಿಕೊಂಡು ತಾವು ಪೂರೈಸಿದ ಜಪ್ತಿಪಂಚನಾಮೆಯೊಂದಿಗೆ ಜ್ಞಾಪನ ಪತ್ರ ಹಾಜರುಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 16/2022 ಕಲಂ 78(3) ಕೆ.ಪಿ.ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 26/2022 ಕಲಂ. 279, 337, 338, 304(ಎ) ಐಪಿಸಿ ಮತ್ತು ಕಲಂ. 187 ಐಎಂವಿ ಕಾಯ್ದೆ: ದಿನಾಂಕ:22/04/2022 ರಂದು ಪಿರ್ಯಾದಿ ಮತ್ತು ಗಾಯಳು ಹಾಗೂ ಮೃತ ಮೂರು ಜನರು ಕೂಡಿ ಮೋಟಾರ್ ಸೈಕಲ ನಂ. ಕೆಎ-05 ಜೆಎಂ-1230 ನೇದ್ದರ ಮೇಲೆ ಕಾಚಾಪೂರಕ್ಕೆ ಹೊಗಲು ಹುಣಸಗಿ-ಕೆಂಭಾವಿ ರೋಡಿನ ಮೇಲೆ ಮದ್ದಿನಮನಿ ಕ್ಯಾಂಪ್ ಹತ್ತಿರ ರಸ್ತೆಯ ಮೇಲೆ ಹೊರಟಾಗ, ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಮುಂದೆ ಒಂದು ಟ್ಯಾಕ್ಟರ್ ಹೊರಟಿದ್ದು, ಸದರಿ ಟ್ಯಾಕ್ಟರ್ ಚಾಲಕನು ತನ್ನ ಟ್ಯಾಕ್ಟರನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಯಾವುದೇ ಮುನ್ಸೂಚನೆ ನೀಡದೆ ಒಮ್ಮೆಲೆ ಬಲಗಡೆ ರಸ್ತೆಗೆ ಹೊರಳಿಸಿದಾಗ, ಟ್ಯಾಕ್ಟರ್ ಇಂಜಿನ್ ದೊಡ್ಡ ಗಾಲಿ ಫಿರ್ಯಾದಿಯ ಮೋಟಾರ್ ಸೈಕಲ್ಲಗೆ ಡಿಕ್ಕಿ ಹೊಡೆದಿದ್ದರಿಂದ ಪಿರ್ಯಾದಿ ಮತ್ತು ಗಾಯಳು ಹಾಗೂ ಮೃತ ಮೂರು ಜನರು ಮೋಟಾರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದಿದ್ದು, ಅಪಘಾತದಲ್ಲಿ ಫಿರ್ಯಾದಿ ಗುರುರಾಜ & ಗಾಯಾಳು ತಾನಾಜಿ ಇವರಿಗೆ ಭಾರಿ & ಸಾದಾ ರಕ್ತಗಾಯ ಹಾಗೂ ತರಚಿದ ರಕ್ತಗಾಯಗಳಾಗಿದ್ದು, ಮೃತನಿಗೆ ತಲೆಯ ಬಲಬಾಗಕ್ಕೆ ಭಾರಿ ರ್ಕತಗಾಯವಾಗಿ ಮುಖದ ಮೇಲೆ ರಕ್ತ ಸೋರಿದ್ದು ಬಾಯಿಗೆ ರಕ್ತಗಾಯವಾಗಿ ಮೂಗಿನಿಂದ ರಕ್ತ ಸೋರಿ ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ಅಪರಾಧ.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 27/2022 ಕಲಂ. 279 337 338 ಐಪಿಸಿ : ದಿನಾಂಕ:22/04/2022 ರಂದು ಫಿರ್ಯಾದಿಯು ತನ್ನ ಗೆಳೆಯನ ಮೋಟಾರ್ ಸೈಕಲ್ ನಂ: ಕೆಎ-36 ಇಪಿ-7855 ನೇದ್ದನ್ನು ತೆಗೆದುಕೊಂಡು ತನ್ನ ಗೆಳೆಯರಾದ ಜೋಗಪ್ಪ, ನಿಂಗಪ್ಪ ರವರೊಂದಿಗೆ ಹುಣಸಗಿಗೆ ಬಂದು ಸಿ.ಇ.ಟಿ ಕೋಚಿಂಚ್ ಪಡೆದುಕೊಂಡು ಮದ್ಯಾಹ್ನ 2.00 ಗಂಟೆಯ ನಂತರ ವಾಪಸು ತಮ್ಮೂರಿಗೆ ಹೋಗಲು ತಾವು ತಂದ ಮೋಟಾರ್ ಸೈಕಲ್ ಮೇಲೆ ಹೊರಟು ಮದ್ಯಾಹ್ನ 14.40 ಗಂಟೆಗೆ ಹುಣಸಗಿ-ಕಕ್ಕೇರಾ ರೋಡಿನ ಮೇಲೆ ಮಂಜಲಾಪೂರ ಹಳ್ಳಿ ಸೀಮಾಂತರದ ಜುಮ್ಮಣ್ಣ ಮೇಟಿ ಇವರ ಹೊಲದ ಹತ್ತಿರ ರಸ್ತೆಯ ಮೇಲೆ ಹೊರಟಾಗ ಆರೋಪಿತನು ತನ್ನ ಶಿಪ್ಟ ಕಾರ್ ನಂ:ಕೆಎ-25 ಎಮ್.ಎ-4288 ನೇದ್ದನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ಲಗೆ ಜೋರಾಗಿ ಡಿಕ್ಕಿ ಕೊಟ್ಟಿದ್ದರಿಂದ ಫಿರ್ಯಾದಿ & ಫಿರ್ಯಾದಿಯ ಗೆಳೆಯರಾದ ಜೋಗಪ್ಪ, ನೀಂಗಪ್ಪ ಮೂರು ಜನರು ಮೋಟಾರ್ ಸೈಕಲ್ ಸಮೇತ ಕೆಳಗಡೆ ಬಿದ್ದಿದ್ದು, ಫಿರ್ಯಾದಿಗೆ ತಲೆಗೆ & ಮೈಯೆಲ್ಲಾ ಒಳಪೆಟ್ಟಾಗಿದ್ದು ಎಡಗಾಲ ತೊಡೆಯಲ್ಲಿ ಭಾರಿ ಒಳಪೆಟ್ಟಾಗಿದ್ದು, ಜೋಗಪ್ಪನಿಗೆ ಎಡಗಾಲ ತೊಡೆಗೆ & ಮೊಳಕಾಲ ಕೆಳಗೆ ಭಾರಿ ಒಳಪೆಟ್ಟಾಗಿ ಕಾಲು ಮುರಿದಿದ್ದು, ನಿಂಗಪ್ಪನಿಗೆ ಎಡಗಾಲ ತೊಡೆಯಲ್ಲಿ ಭಾರಿ ಒಳಪೆಟ್ಟಾಗಿದ್ದು, & ಎಡಗಾಲ ಮೊಳಗಾಲ ಕೆಳಗೆ ಬಾದದ ಮೇಲೆ ಭಾರಿ ರಕ್ತಗಾಯವಾಗಿದೆ. & ಮೊಳಕಾಲ ಹತ್ತಿರ ಚಿಪ್ಪಿಗೆ ಭಾರಿ ರಕ್ತಗಾಯವಾಗಿರುತ್ತದೆ. ಆರೋಪಿತನಿಗೂ ಸಹ ಎದೆಗೆ & ಮೈಯೆಲ್ಲಾ ಒಳಪೆಟ್ಟಾದ ಬಗ್ಗೆ ಅಪರಾಧ.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನ: 28/2022 ಕಲಂ.15(ಎ), 32 (3) ಕನರ್ಾಟಕ ಅಭಕಾರಿ ಕಾಯ್ದೆ : ದಿನಾಂಕ:22/04/2022 ರಂದು ಸಾಯಂಕಾಲ 16.35 ಗಂಟೆಯ ಸುಮಾರಿಗೆ ಆರೋಪಿತನು ಅಭಕಾರಿ ಇಲಾಖೆಯಿಂದಾ ಅಧೀಕೃತವಾಗಿ ಯಾವುದೇ ಪರವಾನಿಗೆಯನ್ನು ಪಡೆಯದೇ ಇರುವ ಸ್ಥಳದಲ್ಲಿ ಮದ್ಯ ಸೇವನೆಯನ್ನು ಮಾಡಲು ಅನುವು ಮಾಡಿಕೊಟ್ಟಿದ್ದು, ಕಂಡ ಪಿಯರ್ಾದಿ ಹಾಗೂ ಪಂಚರು ಮತ್ತು ಸಿಬ್ಬಂದಿಯಾದ ಹೆಚ್.ಸಿ-178, ಪಿಸಿ-264, 87, 119 ರವರೊಂದಿಗೆ ದಾಳಿ ಮಾಡಿ ಆರೋಪಿತನ ಹತ್ತಿರ ಇದ್ದ ಕಾಲಂ ನಂ.10 ರಲ್ಲಿ ನಮೂದ ಮಾಡಿದ ಒಟ್ಟು 84-00/-ರೂ ಕಿಮ್ಮತ್ತಿನ ಮದ್ಯವನ್ನು ಜಪ್ತಿ ಮಾಡಿದ್ದು ಅಂತಾ ಜಪ್ತಿ ಪಂಚನಾಮೆಯ & ಪಿಎಸ್ಐ ರವರು ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 29/2022 ಕಲಂ.15(ಎ), 32 (3) ಕನರ್ಾಟಕ ಅಭಕಾರಿ ಕಾಯ್ದೆ : ದಿನಾಂಕ:22/04/2022 ರಂದು ಸಾಯಂಕಾಲ 18.30 ಗಂಟೆಯ ಸುಮಾರಿಗೆ ಆರೋಪಿತನು ಅಭಕಾರಿ ಇಲಾಖೆಯಿಂದಾ ಅಧೀಕೃತವಾಗಿ ಯಾವುದೇ ಪರವಾನಿಗೆಯನ್ನು ಪಡೆಯದೇ ಇರುವ ಸ್ಥಳದಲ್ಲಿ ಮದ್ಯ ಸೇವನೆಯನ್ನು ಮಾಡಲು ಅನುವು ಮಾಡಿಕೊಟ್ಟಿದ್ದು, ಕಂಡ ಪಿಯರ್ಾದಿ ಹಾಗೂ ಪಂಚರು ಮತ್ತು ಸಿಬ್ಬಂದಿಯಾದ ಶ್ರೀಶೈಲ್ ಎಎಸ್ಐ, ಶಿವಪ್ಪ ಹೆಚ್.ಸಿ-136 ಬಸವರಾಜ ಪಿಸಿ-173, ಶಿವಕುಮಾರ ಎ.ಹೆಚ್.ಸಿ-26 ರವರೊಂದಿಗೆ ದಾಳಿ ಮಾಡಿ ಆರೋಪಿತನ ಹತ್ತಿರ ಇದ್ದ ಕಾಲಂ ನಂ.10 ರಲ್ಲಿ ನಮೂದ ಮಾಡಿದ ಒಟ್ಟು 206-00/-ರೂ ಕಿಮ್ಮತ್ತಿನ ಮದ್ಯವನ್ನು ಜಪ್ತಿ ಮಾಡಿದ್ದು ಅಂತಾ ಜಪ್ತಿ ಪಂಚನಾಮೆಯ & ಪಿಎಸ್ಐ ರವರು ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.
ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 40/2022 ಕಲಂ 78(6) ಕೆ.ಪಿ. ಎಕ್ಟ್ : ದಿನಾಂಕ:12/04/2022 ರಂದು 7 ಪಿ.ಎಮ್ ಕ್ಕೆ ಭೀ.ಗುಡಿಯ ದಿಗ್ಗಿ ಕಮಾನ್ ಮುಂದೆಒಬ್ಬ ವ್ಯಕ್ತಿಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಬಗ್ಗೆ ಫಿಯರ್ಾದಿದಾರರಿಗೆ ಬಾತ್ಮಿ ಬಂದಿದ್ದರಿಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿಆರೋಪಿನು ತನ್ನಕೈಯ್ಯಲ್ಲಿ ಮೊಬೈಲ್ ಹಿಡಿದುಕೊಂಡುಇಂದುರಾತ್ರಿ 7.30 ಗಂಟೆಗೆ ಪ್ರಾರಂಭವಾಗಿರುವಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಾದ (ಆಅ ಗಿ/ಖ ಖಖ)ಟ್ವೆಂಟಿ - ಟ್ವೆಂಟಿ ಪಂದ್ಯದ ಪೈಕಿ ಅದರಲ್ಲಿಡೆಲ್ಲಿಗೆದ್ದರೆಒಂದು ಸಾವಿರರೂಪಾಯಿಗೆಐದು ಸಾವಿರರೂಪಾಯಿಕೊಡುತ್ತೇನೆ, ರಾಜಸ್ಥಾನಗೆದ್ದರೆಒಂದು ಸಾವಿರರೂಪಾಯಿಗೆ ಹತ್ತು ಸಾವಿರರೂಪಾಯಿಕೊಡುತ್ತೇನೆಅಂತಾತನ್ನ ಮೊಬೈಲ ಮೂಲಕ ಯಾರಿಗೋ ಸಂಪರ್ಕ ಮಾಡುತ್ತಾ ಮೊಬೈಲ್ ಮುಖಾಂತರಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಮಾತಾಡಿತನ್ನ ಹತ್ತಿರಇರುವಒಂದು ನೋಟ್ ಬುಕ್ನಲ್ಲಿ ಬರೆದುಕೊಳ್ಳುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗತಾನು ಸಾರ್ವಜನಿಕರಿಂದ ಪಡೆದುಕೊಂಡ ಬೆಟ್ಟಿಂಗ್ ಹಣವನ್ನು ಉಮೇಶ ಸಾ:ಮುದ್ದೆಬಿಹಾಳ(8867429443) ಈತನಿಗೆಕೊಡುವದಾಗಿ ತಿಳಿಸಿರುತ್ತಾನೆ. ಸದರಿಆರೋಪಿತನಿಂದ 1)ನಗದು ಹಣ 2770 ರೂಪಾಯಿ, 2)ಒ ಕಂಪನಿಯ ಸ್ಮಾರ್ಟ ಫೋನ್ ಅ.ಕಿ.1000/- 3)ಖಜಚಿಜಟಕಂಪನಿಯ ಸ್ಮಾರ್ಟಫೋನ್ ಅ.ಕಿ 1000=00 ರೂ 4)ಒಂದು ನೋಟ್ ಬುಕ್ ಅ.ಕಿ. 00=00, 5)ಒಂದು ಬಾಲ್ ಪೆನ್ ಅ.ಕಿ. 00=00 ನೇದ್ದವುಗಳನ್ನು 7.50 ಪಿ.ಎಮ್ ದಿಂದ 8.50 ಪಿ.ಎಮ್ ವರೆಗೆ ಜಪ್ತಿಪಡಿಸಿಕೊಂಡು 9.00 ಪಿ.ಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದರಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.