ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 23-05-2022
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 27/2022 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್:- ದಿನಾಂಕ 18/05/2022 ರಂದು ಸಾಯಂಕಾಲ ಸಮಯ 5 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀ ಅನಂತರೆಡ್ಡಿ ತಂದೆ ಅಮರೇಶಪ್ಪ ಸಿದ್ದಾಪುರ ವಯ;30 ವರ್ಷ, ಜಾ;ಲಿಂಗಾಯತ್, ಉ;ಖಾಸಗಿ ಕೆಲಸ, ಸಾ;ಗೊಲ್ಲಾದಿನ್ನಿ, ತಾ;ಸಿರವಾರ, ಜಿ;ರಾಯಚೂರು, ಹಾ;ವ;ಮಾತಾ ಮಾಣಿಕೇಶ್ವರಿ ಕಾಲನಿ, ಯಾದಗಿರಿ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ನಿನ್ನೆ ದಿನಾಂಕ 17/05/2022 ರಂದು ರಾತ್ರಿ 9-45 ಪಿ.ಎಂ.ಕ್ಕೆ ಜರುಗಿದ ರಸ್ತೆ ಅಪಘಾತದ ಘಟನೆಯ ಬಗ್ಗೆ ತಮ್ಮದೊಂದು ಲಿಖಿತ ದೂರು ಅಜರ್ಿಯನ್ನು ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಖಾಸಗಿ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನಮ್ಮ ಕುಟುಂಬವು ಸುಮಾರು 6-7 ವರ್ಷಗಳಿಂದ ನಮ್ಮುರಿನಿಂದ ಯಾದಗಿರಿಗೆ ಬಂದು ಇಲ್ಲಿಯೇ ನೆಲಸಿರುತ್ತೇವೆ. ನನ್ನ ತಂದೆಯಾದ ಅಮರೇಶಪ್ಪರವರು ಯಾದಗಿರಿಯ ಗಾಂಧಿಚೌಕ್ನಲ್ಲಿ ಬರುವ ನತ್ತು ಹೊಟೆಲನಲ್ಲಿ ಕೆಲಸ ಮಾಡಿಕೊಂಡು ಬಂದಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ 17/05/2022 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನನ್ನ ತಂದೆಯವರು ಎಂದಿನಂತೆ ನತ್ತು ಹೊಟೆಲಗೆ ತಮ್ಮ ಸೈಕಲ್ ನೇದ್ದನ್ನು ತೆಗೆದುಕೊಂಡು ಕೆಲಸಕ್ಕೆ ಹೋಗಿರುತ್ತಾರೆ. ನಿನ್ನೆ ರಾತ್ರಿ 10 ಪಿ.ಎಂ.ದ ಸುಮಾರಿಗೆ ನಾನು ಮತ್ತು ನನ್ನ ತಾಯಿಯವರಾದ ಶಾಂತಮ್ಮರವರು ನಮ್ಮ ಮನೆಯಲ್ಲಿದ್ದಾಗ ನನ್ನ ಸ್ನೇಹಿತರಾದ ಶೀ ಮಲ್ಲಣ್ಣ ತಂದೆ ಮಲ್ಲಿಕಾಜರ್ುನ ಪೂಜಾರಿ ಸಾ;ಯಾದಗಿರಿ ಇವರು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ಮತ್ತು ನನ್ನ ಸ್ನೇಹಿತನಾದ ರಮೇಶ ತಂದೆ ಸಕ್ರೆಪ್ಪ ಮಡಿವಾಳ ಸಾ;ಯಾದಗಿರಿ ಇಬ್ಬರು ಮಾತನಾಡುತ್ತಾ ಗಂಜ್ ಹತ್ತಿರ ಬರುವ ಸೈದಾಪುರ ಹೊಟೆಲ್ ಹತ್ತಿರ ನಿಂತಿದ್ದಾಗ ಸಮಯ ರಾತ್ರಿ 9-45 ಪಿ.ಎಂ.ದ ಸುಮಾರಿಗೆ ನಿಮ್ಮ ತಂದೆಯವರು ಸೈಕಲನ್ನು ಹಿಡಿದುಕೊಂಡು ಕೊಟಗಾರವಾಡಿ ರಸ್ತೆ ಕಡೆಯಿಂದ ಸೈದಾಪುರ ಹೊಟೆಲ್ ಕಡೆಯ ರಸ್ತೆ ಬದಿಯಲ್ಲಿ ಬಂದು ನಿಂತಿದ್ದಾಗ ನಾವಿಬ್ಬರು ನೋಡು ನೋಡುತ್ತಿದ್ದಂತೆ ಅದೇ ಸಮಯಕ್ಕೆ ಒಂದು ಕಾರ್ ನೇದ್ದರ ಚಾಲಕನು ತನ್ನ ಕಾರನ್ನು ಹೊಸಳ್ಳಿ ಕ್ರಾಸ್ ಕಡೆಯಿಂದ ಗಂಜ್ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ನಿಮ್ಮ ತಂದೆಗೆ ಡಿಕ್ಕಿಹೊಡೆದು ಅಪಘಾತ ಮಾಡಿದನು ಆಗ ನಾವಿಬ್ಬರು ಓಡೋಡಿ ನಿಮ್ಮ ತಂದೆ ಹತ್ತಿರ ಬಂದು ನೊಡಲಾಗಿ ಸದರಿ ಅಪಘಾತದಲ್ಲಿ ನಿಮ್ಮ ತಂದೆಗೆ ತಲೆಗೆ, ಹಣೆಗೆ ಭಾರೀ ಒಳಪೆಟ್ಟಾಗಿ ಅಲ್ಲಲ್ಲಿ ತರಚಿದ ರಕ್ತಗಾಯ ಆಗಿರುತ್ತವೆ. ನಿಮ್ಮ ತಂದೆಗೆ ಅಪಘಾತಪಡಿಸಿದ ಕಾರ್ ನೇದ್ದರ ಚಾಲಕನು ಸ್ವಲ್ಪ ಮುಂದೆ ಹೋಗಿ ದಾಲ್ ಮಿಲ್ ಹತ್ತಿರ ನಿಲ್ಲಿಸಿದ್ದು ಕಾರ ಹತ್ತಿರ ನಾವು ನೋಡಲು ಹೋಗುತ್ತಿದ್ದಾಗ ಕಾರ್ ಚಾಲಕನು ಗಡಿಬಿಡಿ ಮಾಡುತ್ತಾ ತನ್ನ ಕಾರನ್ನು ಚಾಲು ಮಾಡಿಕೊಂಡು ಓಡಿ ಹೋಗಿರುತ್ತಾನೆ. ಸಣ್ಣ ಮಳೆ ಬರುತ್ತಿದ್ದರಿಂದ ಹಾಗೂ ಕತ್ತಲು ಇದ್ದುದರಿಂದ ಕಾರ್ ನಂಬರ ನಮಗೆ ಸರಿಯಾಗಿ ಕಂಡು ಬಂದಿರುವುದಿಲ್ಲ, ನಾವುಗಳು ಕಾರ್ ಮತ್ತು ಅದರ ಚಾಲಕನನ್ನು ಮತ್ತೆ ನೋಡಿದರೆ ಗುತರ್ಿಸುತ್ತೇವೆ. ನೀನು ಕೂಡಲೇ ಘಟನಾ ಸ್ಥಳಕ್ಕೆ ಬಾ ಅಂದಾಗ ನಾನು ಈ ವಿಷಯವನ್ನು ನನ್ನ ತಾಯಿಗೆ ತಿಳಿಸಿ ಇಬ್ಬರು ಕೂಡಿಕೊಂಡು ಒಂದು ಖಾಸಗಿ ಆಟೋದಲ್ಲಿ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನನಗೆ ಈ ಮೇಲೆ ಪೋನಿನಲ್ಲಿ ಮಲ್ಲಣ್ಣರವರು ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ, ನನ್ನ ತಂದೆಯವರಿಗೆ ತಲೆಗೆ ಒಳಪೆಟ್ಟಾಗಿದ್ದರಿಂದ ಅರೆಪ್ರಜ್ಞಾವಸ್ಥೆಯಲ್ಲಿರುತ್ತಾರೆ. ನಾವುಗಳು ನನ್ನ ತಂದೆಗೆ ಉಪಚಾರ ಕುರಿತು ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕುರಿತು ಸೇರಿಕೆ ಮಾಡಿರುತ್ತೇವೆ. ಹೀಗಿದ್ದು ಯಾದಗಿರಿಯ ಸಕರ್ಾರಿ ಆಸ್ಪತ್ರೆಯ ವೈದ್ಯರು ನನ್ನ ತಂದೆಗೆ ಉಪಚರಿಸಿದ ನಂತರ ಹೆಚ್ಚಿನ ಉಪಚಾರಕ್ಕಾಗಿ ಉಪಚಾರ ಕುರಿತು ಕಲಬುರಗಿಯ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ ಮೇರೆಗೆ ನನ್ನ ತಂದೆಗೆ ಕಲಬುರಗಿಯ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಸೇರಿಕೆ ಮಾಡಿದ್ದು, ನಂತರ ಅಲ್ಲಿಂದ ಶ್ರೀ ಬಸವೆಶ್ವರ ಆಸ್ಪತ್ರೆ ಕಲಬುರಗಿಗೆ ರೆಫರ್ ಮಾಡಿದ್ದು, ಅಲ್ಲಿಂದ ರಿಮ್ಸ್ ಆಸ್ಪತ್ರೆ ರಾಯಚೂರಿಗೆ ಕರೆದುಕೊಂಡು ಹೋಗಲು ವೈದ್ಯರು ತಿಳಿಸಿದ ಮೇರೆಗೆ ರಾಯಚೂರಿಗೆ ರಿಮ್ಸ್ ಆಸ್ಪತ್ರೆ ಕರೆದುಕೊಂಡು ಹೊರಟಿದ್ದು, ಈ ಘಟನೆ ಬಗ್ಗೆ ನಮ್ಮ ಮನೆಯ ಹಿರಿಯರು ಕೇಸು ಕೊಡಲು ತಿಳಿಸಿದ ಮೇರೆಗೆ ತಡವಾಗಿ ಇಂದು ದಿನಾಂಕ 18/05/2022 ರಂದು ಸಾಯಂಕಾಲ ಖುದ್ದಾಗಿ ಠಾಣೆಗೆ ಬಂದು ಅಜರ್ಿ ದೂರು ನೀಡುತ್ತಿದ್ದು, ನಿನ್ನೆ ದಿನಾಂಕ 17/05/2022 ರಂದು ರಾತ್ರಿ 9-45 ಪಿ.ಎಂ.ಕ್ಕೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಯಾದಗಿರಿ ನಗರದ ಗಂಜ್ ಏರಿಯಾದ ಸೈದಾಪುರ ಹೊಟೆಲ್ ಹತ್ತಿರ ಮುಖ್ಯ ರಸ್ತೆಯ ಬದಿಯಲ್ಲಿ ನಿಂತಿದ್ದ ನನ್ನ ತಂದೆಗೆ ಯಾವುದೋ ಒಂದು ಕಾರ್ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ಡಿಕ್ಕಿಹೊಡೆದು ಅಪಘಾತಪಡಿಸಿ, ಘಟನಾ ಸ್ಥಳದಿಂದ ಕಾರ್ ಸಮೇತ ಓಡಿ ಹೋಗಿದ್ದು ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಘಟನೆಯ ಬಗ್ಗೆ ತಮ್ಮದೊಂದು ಲಿಖಿತ ದೂರು ಅಜರ್ಿಯನ್ನು ಸಲ್ಲಿಸಿದ್ದು, ಪಿಯರ್ಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 27/2022 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ.
ಸದರಿ ಪ್ರಕರಣದಲ್ಲಿನ ಗಾಯಾಳು ಅಮರೇಶಪ್ಪ ತಂದೆ ನಾಗಪ್ಪ ಸಿದ್ದಾಪುರ ವಯ;48 ವರ್ಷ, ಜಾ;ಲಿಂಗಾಯತ್, ಉ;ಹೊಟೆಲನಲ್ಲಿ ಕೆಲಸ, ಸಾ;ಗೊಲ್ಲಾದಿನ್ನಿ, ತಾ;ಸಿರವಾರ, ಜಿ;ರಾಯಚೂರು, ಹಾ;ವ;ಮಾತಾ ಮಾಣಿಕೇಶ್ವರಿ ಕಾಲನಿ, ಯಾದಗಿರಿ ಈತನಿಗೆ ಘಟನೆಯ ದಿನಾಂಕ 17/05/2022 ರಂದು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಉಪಚಾರ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಜಿಲ್ಲಾಸ್ಪತ್ರೆಗೆ ರೆಫರ್ ಮಾಡಿದ್ದು, ತದನಂತರ ಅಲ್ಲಿಂದ ಕಲಬುರಗಿಯ ಶ್ರೀ ಬಸವೇಶ್ವರ ಆಸ್ಪತ್ರೆಗೆ ಕಳಿಸಿದ್ದು, ನಂತರ ಅಲ್ಲಿಂದ ರಿಮ್ಸ್ ಆಚಿತಜ ರಾಯಚೂರಿಗೆ ಕಳಿಸಿದ್ದು ನಂತರ ಅಲ್ಲಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿದ್ದು, ದಿನಾಂಕ 20/05/2022 ರಂದು ರಾತ್ರಿ 9 ಪಿ.ಎಂ.ಕ್ಕೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಬಂದು ಸೇರಿಕೆ ಆಗಿದ್ದು ಇರುತ್ತದೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳು ಉಪಚಾರ ಹೊಂದುತ್ತಾ ಚಿಕಿತ್ಸೆಗೆ ಸ್ಪಂದಿಸದೇ ನಿನ್ನೆ ದಿನಾಂಕ 21/05/2022 ರಂದು ರಾತ್ರಿ ಸಮಯ 09;26 ಪಿ.ಎಂ.ಕ್ಕೆ ಮೃತಪಟ್ಟಿರುತ್ತಾನೆ ಅಂತಾ ವಿಮ್ಸ್ ಆಚಿತಜಯಿಂದ ಡೆತ್ ಎಮ್.ಎಲ್.ಸಿ ಸ್ವೀಕೃತಗೊಂಡಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಇಂದು ತೆರಳಿ ಈ ಕೇಸಿನಲ್ಲಿ ಪಿಯರ್ಾದಿಯ ಪುರವಣಿ ಹೇಳಿಕೆಯನ್ನು ಪಡೆದುಕೊಂಡು ಪುರವಣಿ ಹೇಳಿಕೆಯ ಸಾರಾಂಶದ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಮತ್ತು ಮಾಹಿತಿಯನ್ನು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ:42/2022 ಕಲಂ. 279 337 338 ಐಪಿಸಿ ಸಂ.187 ಐ.ಎಮ್.ವ್ಹಿ ಕಾಯ್ದೆ : ಫಿರ್ಯಾದಿಯ ಮಗ ಕುಮಾರ ಈತನು ವಜ್ಜಲ ತಾಂಡಾದ ಲಕ್ಷ್ಮಣನಾಯಕ ತಂದೆ ಗೋವಿಂದ ಪೂಜೇರಿ ತಾನು ಜೆ.ಸಿ.ಬಿ ಆಪರೇಟರ್ ಕೆಲಸ ಮಾಡುತ್ತಿದ್ದು, ದಿನಾಂಕ:21/05/2022 ರಂದು ಜುಮ್ಮಾಲಪೂರ ತಾಂಡಾದಿಂದ ಹುಣಸಗಿಗೆ ಬಂದು ಕೆಲಸ ಮಾಡಿ, ಸಾಯಂಕಾಲ ತನ್ನ ಮಾಲೀಕನ ಮೋಟಾರ ಸೈಕಲ್ ನಂ:ಕೆಎ-13 ಇಇ-4086 ನೇದ್ದನ್ನು ತೆಗೆದುಕೊಂಡು ಜುಮ್ಮಾಲಪೂರ ತಾಂಡಾಕ್ಕೆ ಹೋಗಲು ಹೊರಟಿದ್ದು, ಹುಣಸಗಿ-ನಾರಾಯಣಪುರ ರೋಡಿನ ಮೇಲೆ ಹುಣಸಗಿ ಚಂದಾ ಸಾಹುಕಾರ ಇವರ ಪೆಟ್ರೋಲ್ ಪಂಪ್ ಹತ್ತಿರ ಇರುವ ಸಿಡಿ ದಾಟಿ ಹೊರಟಾಗ, ಆರೋಫಿತನು ಬಲಶೆಟ್ಟಿಹಾಳ ಕಡೆಯಿಂದ ತನ್ನ ಕಾರ್ ನಂ: ಕೆಎ-04 ಎಸಿ-0603 ನೇದ್ದನ್ನು ಅತೀ ವೇಗ ಹಾಗೂ ಅಲಕ್ಷತನ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಕುಮಾರನ ಮೋಟಾರ್ ಸೈಕಲ್ ಡಿಕ್ಕಿ ಕೊಟ್ಟು ಅಪಘಾತ ಮಾಡಿದ್ದು, ಅಪಘಾತದಲ್ಲಿ ಕುಮಾರನಿಗೆ ಎರಡು ಕಾಲುಗಳ ತೊಡೆಗೆ ಭಾರಿ ಒಳಪೆಟ್ಟಾಗಿ ಮುರಿದಿದ್ದು, ಬಾಯಿಗೆ ರಕ್ತಗಾಯವಾಗಿದ್ದು, ತೆಲೆ ಹಿಂಭಾಗದಲ್ಲಿ ರಕ್ತಗಾಯವಾಗಿದ್ದು, ಬಲಗೈಯ ಮುಂಗೈಯ ಹತ್ತಿರ ರಕ್ತಗಾಯವಾದ ಬಗ್ಗೆ ಅಪರಾಧ.
ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 73/2022, ಕಲಂ: 323, 324, 307, 504, 506 ಸಂಗಡ 34 ಐ.ಪಿ.ಸಿ : 22-05-2022 ರಂದು ಮಧ್ಯಾಹ್ನ 12-30 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಒಂದು ಎಮ್.ಎಲ್ ಸಿ ಇದೆ ಅಂತಾ ತಿಳಿಸಿದ ಮೇರೆಗೆ ನಾನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬೇಟಿ ಅಲ್ಲಿ ಉಪಚಾರ ಪಡೆಯುತಿದ್ದ ಗಾಯಾಳುವನ್ನು ವಿಚಾರಿಸಿದ್ದು ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ನಾನು ನನ್ನ ಕುಟುಂಬದೊಂದಿಗೆ ಉಪಜೀವನ ಮಾಡಿಕೊಂಡಿದ್ದು ನಮ್ಮ ಮನೆಗಗೆ ಕಬ್ಬಲಿಗ ಜನಾಂಗದ ಒಬ್ಬ ವ್ಯಕ್ತಿ ಮನೆಗೆ ಬಂದು ಹೋಗುತಿದ್ದರಿಂದ ನಮ್ಮ ಅಣ್ಣತಮ್ಮರು ನನ್ನ ಮೇಲೆ ಸಂಶಯಪಟ್ಟು ನನಗೆ ಹೊಡೆಬಡೆ ಮಾಡಿ ಊರು ಬಿಟ್ಟು ಹೋಗು ಅಂತಾ ಹೇಳಿದ್ದರಿಂದ ನಾನು ಊರು ಬಿಟ್ಟು ಬೆಂಗಳೂರಿಗೆ ಹೋಗಿದ್ದೆನು ದಿನಾಂಕ: 21-05-2022 ರಂದು ಹೆಡಗಿಮದ್ರ ಗ್ರಾಮಕ್ಕೆ ಬಂದಿದ್ದೆನು ಇಂದು ಬೆಳಿಗ್ಗೆ 09-00 ಗಂಟೆಗೆ ನಾನು ನಮ್ಮ ಮನೆಯವರು ಮನೆಯಲ್ಲಿರುವಾಗ ಆರೋಪಿತರಲ್ಲರು ಕೂಡಿಕೊಂಡು ಬಂದು ಲೇ ಸೂಳೆ ಮಗಳೆ ಮತ್ತೆ ಯಾಕೆ ಊರಿಗೆ ಬಂದಿದ್ದಿ ಅಂದು ಕೈಯಿಂದ ಹೊಡೆ ಬಡೆ ಮಾಡಿ ನನ್ನ ಮಗನಿಗೆ ಹೊಡೆದು ನೂಕಿಸಿಕೊಟ್ಟಿದ್ದರಿಂದ ನನ್ನ ಮಗನಿಗೆ ಕೈಗೆ ಕಾಲಿಗೆ ರಕ್ತಗಾಯವಾಗಿರುತ್ತವೆ, ಆಗ ಅವರು ಮನೆಯಿಂದ ಹೊರಗೆ ಹೋದಾಗ ಲೇ ರಂಡಿ ಸೂಳಿ ಬೋಸಡಿ ಸೂಳಿ ಊರಿಗೆ ಯಾಕೆ ಬಂದಿ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ 3 ಜನರು ಸೇರಿ ನಿನಗೆ ಸಾಯಿಸುತ್ತೇವೆ ಸೂಳೆ ಮಗಳೆ ಅಂದು ಬಾಯಿ ಒತ್ತಿ ಹಿಡಿದು ಕ್ರೀಮಿನಾಶಕ ಔಷಧಿ ಕುಡಿಸಿ ಮನ ಬಂದಂತೆ ಕೈಯಿಂದ ಹೊಟ್ಟೆಗೆ ಬೆನ್ನಿಗೆ ಹೊಡೆದು ನೀನು ಊರಲ್ಲಿ ಇದ್ದರೆ ಖಲಾಸ ಮಾಡುತ್ತೇವೆ ಅಂತಾ ಬೇದರಿಎಕ ಹಾಕಿರುತ್ತಾರೆ ಅಂತಾ ಪಿಯರ್ಾಧಿ ಸಾರಂಶ.
ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 08/2022 ಕಲಂ 107 ಸಿ.ಆರ್.ಪಿ.ಸಿ: ನಾನು ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಠಾಣೆ ಮಾನ್ಯರಲ್ಲಿ ಸಲ್ಲಿಸುವ ಸರಕಾರಿ ತರ್ಫೆ ಪಿರ್ಯಾಧಿ ಏನೆಂದರೆ, ಯಾದಗಿರಿ (ಬಿ) ಗ್ರಾಮದ ರಾಚೋಟಿ ವೀರಣ್ಣ ಗುಡಿಯ ಹತ್ತಿರ ಇರುವ ಹೊಲ ಸರ್ವೆ ನಂ.688/1 ವಿಸ್ತೀರ್ಣ 12 ಎಕರೆ 39 ಗುಂಟೆ ಜಮೀನಿನ ಪಾಲಿನ ವಿಷಯದಲ್ಲಿ ಮೊದಲನೇ ಪಾರ್ಟಿಯವರಾದ 1) ಕಿಷನ ತಂದೆ ಸೋಮ್ಲಾನಾಯಕ ರಾಠೋಡ 2) ವಿನೋದ ತಂದೆ ಕಿಷನ ರಾಠೋಡ 3) ಅರುಣ ತಂದೆ ಕಿಷನ ರಾಠೋಡ 4) ರುಕ್ಕಿಬಾಯಿ ಗಂಡ ಕಿಷನ ರಾಠೋಡ 5) ಪ್ರಮೀಳಾ ತಂದೆ ಕಿಷನ ರಾಠೋಡ ಸಾ; ಎಲ್ಲರೂ ಮುದ್ನಾಳ ದೊಡ್ಡ ತಾಂಡಾ ತಾ; ಜಿ; ಯಾದಗಿರಿ ಮತ್ತು ಎರಡನೇ ಪಾರ್ಟಿಯವರಾದ, 1) ಮೌನೇಶ ತಂ. ಶಂಕರ ಚವ್ಹಾಣ 2) ವಿನೋದ ತಂದೆ ಭಿಮ್ಲಾ ನಾಯಕ ರಾಠೋಡ, 3) ಮನೋಹರ ತಂದೆ ಪಾಂಡು ಪವಾರ 4) ಮೋಹನ ತಂದೆ ಭಿಮ್ಲಾ ನಾಯಕ ರಾಠೋಡ 5) ಲಕ್ಷ್ಮಣ ತಂದೆ ಭಿಮ್ಲಾ ನಾಯಕ ರಾಠೋಡ 6) ಮನೋಜ ತಂದೆ ಭಿಮ್ಲಾ ನಾಯಕ ರಾಠೋಡ 7)ಸಂತೋಷ ತಂದೆ ಭಿಮ್ಲಾ ನಾಯಕ ರಾಠೋಡ 8) ರಾಜು ತಂದೆ ಭಿಮ್ಲಾ ನಾಯಕ ರಾಠೋಡ 9)ಭಿಮ್ಲಾ ನಾಯಕ ತಂದೆ ಸಕ್ರು ರಾಠೋಡ 10) ಮೇನಕಾ ಗಂಡ ವಿನೋದಾ ರಾಠೋಡ 11) ಕವಿತಾ ಗಂಡ ಮನೋಹರ ಪವ್ವಾರ 12) ಪವನ ತಂದೆ ಮೋಹನ ರಾಠೋಡ ಸಾಃ ಎಲ್ಲರೂ ಮುದ್ನಾಳ ದೊಡ್ಡ ತಾಂಡಾ ತಾಃಜಿಃ ಯಾದಗಿರಿ ಸದರಿ ಎರಡು ಪಾರ್ಟಿಯವರು ದಿನಾಂಕ; 18/05/2022 ರಂದು ತಂಟೆ ತಕರಾರು ಮಾಡಿ ಹೊಡೆಬಡೆ ಮಾಡಿಕೊಂಡಿದ್ದು ಈ ಬಗ್ಗೆ ಯಾದಗಿರಿ ನಗರ ಪೊಲೀಸ ಠಾಣೆ ಗುನ್ನೆ ನಂ.56/2022 ಕಲಂ. 143, 147, 148, 323, 324, 326, 427, 504, 506, ಸಂ.149 ಐಪಿಸಿ ನೇದ್ದು ಮತ್ತು ಗುನ್ನೆ ನಂ.57/2022 ಕಲಂ. 143, 147, 148, 323, 324, 326, 427, 504, 506, ಸಂ.149 ಐಪಿಸಿ ಅಡಿಯಲ್ಲಿ ಗುನ್ನೆಗೆ ಪ್ರತಿಗುನ್ನೆಗಳು ದಾಖಲಾಗಿದ್ದು ಇರುತ್ತವೆ. ಕಾರಣ ಎರಡೂ ಪಾರ್ಟಿಯವರ ಮಧ್ಯೆ ಹೊಲ ಸರ್ವೆ ನಂ.688/1 ನೇದ್ದರ ಪಾಲಿನ ವಿಷಯದಲ್ಲಿ 10-12 ವರ್ಷಗಳಿಂದ ತಕರಾರು ಇದ್ದು ಒಬ್ಬರಿಗೊಬ್ಬರು ಜಗಳ ಮಾಡಿಕೊಂಡು ಸಂಜ್ಞೇಯ ಅಪರಾಧ ಮಾಡಿ ಪ್ರಾಣಹಾನಿ ಹಾಗೂ ಆಸ್ತಿಹಾನಿ ಮಾಡಿಕೊಂಡು ಸಾರ್ವಜನಿಕ ಶಾಂತತೆಗೆ ಭಂಗವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಕಾರಣ ಸದರಿಯವರಿಂದ ಮುಂದೆ ಜರುಗಬಹುದಾದ ಸಂಭವನೀಯ ಅಪರಾಧ ತಡೆಗಟ್ಟುವಗೊಸ್ಕರ ಮುಂಜಾಗೃತ ಕ್ರಮವಾಗಿ ಇಂದು ದಿನಾಂಕ; 22/05/2022 ರಂದು 6-15 ಪಿಎಮ್ ಕ್ಕೆ ಠಾಣೆಯ ಪಿ.ಎ.ಆರ್ ನಂ. 08/2022 ಕಲಂ.107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ. ಕಾರಣ ಮಾನ್ಯರವರು ಸದರಿ ಆರೋಪಿತರ ವಿರುದ ಕಲಂ.116(2) ಸಿ.ಆರ್.ಪಿ.ಸಿ ಪ್ರಕಾರ ಸದ್ವರ್ತನೆಗಾಗಿ ಇಂಟೆರಿಯಮ ಬಾಂಡ ಪಡೆದುಕೊಳ್ಳಲು ವಿನಂತಿ.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 71/2022 ಕಲಂ: 32, 34 ಕೆ.ಇ ಎಕ್ಟ 1965: ಇಂದು ದಿನಾಂಕ:22/05/2022 ರಂದು 7-45 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಸರಕಾರಿ ತಫರ್ೆಯಿಂದ ದೂರು ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ:22/05/2022 ರಂದು ಸಾಯಂಕಾಲ 5-20 ಪಿಎಮ್ ಕ್ಕೆ ನಾನು ಮತ್ತು ತಾಯಪ್ಪ ಹೆಚ್.ಸಿ 79, ವೇಣುಗೋಪಾಲ ಪಿಸಿ 36 ಮತ್ತು ಸಾಬರೆಡ್ಡಿ ಪಿಸಿ 290 ಎಲ್ಲರೂ ವಡಗೇರಾ ಪೊಲೀಸ್ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ಗೊಂದೆನೂರು ಸೀಮಾಂತರದ ಗೊಂದೆನೂರು ಕ್ರಾಸದಿಂದ ಅನತಿ ದೂರದಲ್ಲಿರುವ ಮಲ್ಲಿಕಾಜರ್ುನ ಕೊದಂಡಿ ಈತನ ಕಾಂಪ್ಲೇಕ್ಸ ಮುಂದುಗಡೆ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಕ್ವಾಟರ ಪೌಚುಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ತಾಯಪ್ಪ ಹೆಚ್.ಸಿ ರವರ ಮುಖಾಂತರ ಇಬ್ಬರೂ ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ದಾಳಿಯ ವಿಷಯ ತಿಳಿಸಿ, ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ನಮ್ಮ ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದ್ದರಲ್ಲಿ ಕರೆದುಕೊಂಡು 5-30 ಪಿಎಮ್ ಕ್ಕೆ ಠಾಣೆಯಿಂದ ಹೊರಟು 5-50 ಪಿಎಮ್ ಕ್ಕೆ ಗೊಂದೆನೂರು ಕ್ರಾಸ ಗೆ ತಲುಪಿ ಕ್ರಾಸನಲ್ಲಿರುವ ಸಂಗೊಳ್ಳಿ ರಾಯಣ್ಣ ಬೋರ್ಡ ಹತ್ತಿರ ಜೀಪನ್ನು ನಿಲ್ಲಿಸಿ, ಅಲ್ಲಿಂದ ಸ್ವಲ್ಪ ದೂರ ಪಶ್ಚಿಮ ದಿಕ್ಕಿಗೆ ನಡೆದುಕೊಂಡು ಹೋಗಿ ಅಲ್ಲಿರುವ ಬಸವರಾಜ ಕಲಾಲ ಈತನ ಕಿರಾಣಿ ಡಬ್ಬಿಯನ್ನು ಮರೆಯಾಗಿ ನಿಂತು ನೋಡಲಾಗಿ ಕಾಂಪ್ಲೇಕ್ಸ ಮುಂದುಗಡೆ ಖಾಲಿ ಸ್ಥಳದಲ್ಲಿ ಒಬ್ಬ ವ್ಯಕ್ತಿಯು 50/- ರೂ. ಗೆ ಒಂದು 90 ಎಮ್.ಎಲ್ ಪೌಚು ಮದ್ಯ ಕುಡಿಯಿರಿ ಎಂದು ಕೂಗಿ ಕರೆದು ಮದ್ಯ ಮಾರಾಟ ಮಾಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 6 ಪಿಎಮ್ ಕ್ಕೆ ನಾವು ಅವನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿಯಬೇಕೆನ್ನುವಷ್ಟರಲ್ಲಿ ಅವನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದನು. ಅಲ್ಲಿಯೇ ಇದ್ದ ಪೊಲೀಸ್ ಬಾತ್ಮಿದಾರರಿಗೆ ಓಡಿ ಹೋದವನ ಹೆಸರು ವಿಳಾಸ ಕೇಳಿದಾಗ ಮಲ್ಲಿಕಾಜರ್ುನ ತಂದೆ ಶಂಕ್ರೆಪ್ಪ ಕೊದಂಡಿ, ವ:50, ಜಾ:ಕುರುಬರ, ಉ:ವ್ಯಾಪಾರ ಸಾ:ಗೊಂದೆನೂರು ತಾ:ವಡಗೇರಾ ಎಂದು ಹೇಳಿದರು. ಸದರಿ ವ್ಯಕ್ತಿಯು ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ ಒಂದು ರಟ್ಟಿನ ಕಾಟನ ಬಾಕ್ಸದಲ್ಲಿ 90 ಎಮ್.ಎಲ್ ದ ಓರಿಜಿನಲ್ ಚಾಯ್ಸ್ ಪೌಚುಗಳು ಇದ್ದು, ಎಣಿಕೆ ಮಾಡಿ ನೋಡಲಾಗಿ ಒಟ್ಟು 79 ಪೌಚುಗಳು ಇದ್ದು, 90ಘಿ79= 7 ಲೀಟರ್ 110 ಎಮ್.ಎಲ್ ಮದ್ಯ ಆಗುತ್ತಿದ್ದು, ಅದರ ಎಮ್.ಆರ್.ಪಿ ಬೆಲೆ 35. 13ಘಿ79=2775. 27/- ರೂ. ಗಳು ಆಗುತ್ತವೆ. ಎಲ್ಲಾ ಮದ್ಯ ತುಂಬಿದ 79 ಪೌಚುಗಳನ್ನು ಪಂಚರ ಸಮಕ್ಷಮ ಅದೇ ರಟ್ಟಿನ ಡಬ್ಬಿಯಲ್ಲಿ ಹಾಕಿ ಈ ರಟ್ಟಿನ ಡಬ್ಬಿಯನ್ನು ಬಿಳಿಯ ಬಣ್ಣದ ಬಟ್ಟೆಯಲ್ಲಿ ಹಾಕಿ ಕಟ್ಟಿ ದಾರದಿಂದ ಹೊಲೆದು ಸದರಿ ರಟ್ಟಿನ ಡಬ್ಬಿಗೆ ಘಆಉ ಅಂತಾ ಅರಗಿನಿಂದ ಸೀಲ್ ಮಾಡಿ ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆ ಚಿಟಿಯನ್ನು ಅಂಟಿಸಿ ಜಪ್ತಿಪಡಿಸಿಕೊಳ್ಳಲಾಯಿತು. 6 ಪಿಎಮ್ ದಿಂದ 7 ಪಿಎಮ್ ದ ವರೆಗೆ ಜಪ್ತಿ ಪಂಚನಾಮೆ ಜರುಗಿಸಿ, ಸದರಿ ಜಪ್ತಿ ಪಂಚನಾಮೆ, ಮುದ್ದೆಮಾಲುನೊಂದಿಗೆ ಮರಳಿ ಬಂದು ಈ ವರದಿ ಸಲ್ಲಿಸುತ್ತಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 71/2022 ಕಲಂ: 32, 34 ಕೆ.ಇ ಎಕ್ಟ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 84/2022 ಕಲಂ: 279, 304(ಎ) ಐ.ಪಿ.ಸಿ: ಃ ಇಂದು ದಿನಾಂಕ 22/05/2022 ರಂದು ಸಾಯಂಕಾಲ 19-00 ಗಂಟೆಗೆ ಫಿರ್ಯಾಧಿ ಅಪ್ರೀನ ಗಂಡ ಇಬ್ರಾಹಿಂ ಅಣಬಿ ವಯ: 32 ವರ್ಷ ಜಾತಿ: ಮುಸ್ಲಿಂ ಉಃ ಮನೆಗೆಲಸ ಸಾಃ ಶಿರವಾಳ ಹಾ:ವ: ದೋರನಳ್ಳಿ ತಾಃ ಶಹಾಪೂರ ಇದ್ದು, ತಮ್ಮಲ್ಲಿ ದೂರು ನೀಡುವುದೆನೆಂದರೆ, ನನಗೆ ಸುಮಾರು 11 ವರ್ಷಗಳಿಂದ ಶಿರವಾಳ ಗ್ರಾಮದ ಇಬ್ರಾಹಿಂ ತಂದೆ ರಸುಲಸಾಬ ಅಣಬಿ ಇವರೊಂದಿಗೆ ಮದುವೆ ಆಗಿದ್ದು ನಮಗೆ ಸದ್ಯ ಒಬ್ಬ ಗಂಡು ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ. ನನ್ನ ಗಂಡನು ಲಾರಿ ಚಾಲಕ ಕೆಲಸ ಮಾಡಿಕೊಂಡು ಇರುತ್ತಾನೆ. ನಾವು ಸದ್ಯ ದೋರನಳ್ಳಿ ಗ್ರಾಮದಲ್ಲಿ ಮನೆ ಮಾಡಿಕೊಂಡು ಗಂಡ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನನ್ನ ಗಂಡನು ಕೆಲಸ ನಿಮಿತ್ಯವಾಗಿ ಆಗಾಗ ದೋರನಳ್ಳಿ ಗ್ರಾಮದಿಂದ ಶಿರವಾಳ ಗ್ರಾಮಕ್ಕೆ ಹೋಗಿ ಬರುವುದು ಮಾಡುತ್ತಿದ್ದನು. ಹೀಗಿದ್ದು ದಿನಾಂಕ: 22/05/2022 ರಂದು ಮುಂಜಾನೆ 10.00 ಗಂಟೆಯ ಸುಮಾರಿಗೆ ನನ್ನ ಗಂಡ ಇಬ್ರಾಹಿಂ ಈತನು ನಮ್ಮ ಮೋಟಾರ ಸೈಕಲ್ ನಂ: ಕೆಎ.33/ಎ-3507 ನೇದ್ದನ್ನು ತೆಗೆದುಕೊಂಡು ಶಿರವಾಳದಲ್ಲಿ ಕೆಲಸ ಇದೆ ಹೋಗಿ ಬರುತ್ತೇನೆ ಅಂತಾ ನನಗೆ ಹೇಳಿ ಹೋದನು. ನಂತರ ಮದ್ಯಾಹ್ನ 2-45 ಗಂಟೆ ಸುಮಾರಿಗೆ ನನ್ನ ತಂದೆ ಮೈಬೂಬಸಾಬ ತಂದೆ ಅಜೀಜಸಾಬ ಕೆಂಭಾವಿ ಇವರು ಪೋನ ಮಾಡಿ ತಿಳಿಸಿದ್ದೆನೆಂದರೆ, ನಾನು ಹೊಲದಿಂದ ಊರ ಕಡೆಗೆ ಬರುವ ಕುರಿತು ಶಿರವಾಳ-ದೊರನಳ್ಳಿ ರಸ್ತೆಯ, ನಮ್ಮೂರಿನ ಹಳ್ಳೆಪ್ಪ ದಿಗ್ಗಿ ಇವರ ಹೊಲದ ಹತ್ತಿರ ಮದ್ಯಾಹ್ನ 2-30 ಗಂಟೆ ಸುಮಾರಿಗೆ ಮೋಟಾರ ಸೈಕಲ ಮೇಲೆ ಬರುವಾಗ ನಿನ್ನ ಗಂಡನು ಮೋಟಾರ ಸೈಕಲ್ ಮೇಲೆ ನಮ್ಮ ಮುಂದೆ ರಸ್ತೆ ಮೇಲೆ ಹೊರಟಿದ್ದನು ಆಗ ದೊರನಳ್ಳಿ ಕಡೆಯಿಂದ ಒಂದು ಕ್ರೂಜರ ಜೀಪ ನೇದ್ದರ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿನ್ನ ಗಂಡನು ನಡೆಸುತ್ತಿದ್ದ ಮೋಟಾರ ಸೈಕಲಿಗೆ ಡಿಕ್ಕಿ ಪಡಿಸಿದ್ದು, ನಿನ್ನ ಗಂಡ ಇಬ್ರಾಹಿಂನು ಮೋಟಾರ ಸೈಕಲ ಸಮೇತ ರಸ್ತೆ ಮೇಲೆ ಬಿದ್ದಿದ್ದು, ನಾನು ಹೋಗಿ ನೋಡಲಾಗಿ ಆತನಿಗೆ ಬಲಕಾಲು ತೋಡೆಗೆ, ಮೋಳಕಾಲಿನ ಹತ್ತಿರ, ಮತ್ತು ಪಾದದ ಮೇಲೆ ಭಾರಿ ರಕ್ತಗಾಯ ಆಗಿ ಮುರಿದಂತಾಗಿರುತ್ತದೆ, ಮತ್ತು ಡಿಕ್ಕಿ ಪಡಿಸಿದ ಕ್ರೂಜರ ಜೀಪ ನಂ: ಕೆಎ-33/ಎ-8022 ಇರುತ್ತದೆ ಹಾಗೂ ಅದರ ಚಾಲಕನ ಹೆಸರು ವಿಚಾರಿಸಲಾಗಿ, ಆತನ ಹೆಸರು ಶಿವಾನಂದ ತಂದೆ ಭೀಮರಾಯ ಹೊಸಮನಿ ಸಾ: ಇಟಗಿ ತಾ: ಶಹಾಪೂರ ಅಂತಾ ಗೊತ್ತಾಗಿರುತ್ತದೆ ಅಂತಾ ನನಗೆ ತಿಳಿಸಿದ ಕೂಡಲೇ ನಾನು ಕೂಡಲೇ ಘಟನಾ ಸ್ಥಳಕ್ಕೆ ಬಂದು ನೋಡಲಾಗಿ, ಅಲ್ಲಿ ನಮ್ಮ ತಂದೆ ಮತ್ತು ಮೈದುನಾದ ಬುರಾನುದ್ದಿನ ತಂದೆ ರಸುಲಸಾಬ ಅಣಬಿ ಇವರಿಬ್ಬರು ಇದ್ದರು. ನನ್ನ ಗಂಡನಿಗೆ ನನ್ನ ತಂದೆ ಹೇಳಿದಂತೆ ರಕ್ತಗಾಯಗಳು ಆಗಿದ್ದವು. ನಂತರ ನನ್ನ ತಂದೆ 108 ವಾಹನಕ್ಕೆ ಕರೆ ಮಾಡಿ, 108 ವಾಹನದಲ್ಲಿ ಎಲ್ಲರೂ ನನ್ನ ಗಂಡನಿಗೆ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ತಂದು ಸೇರಿಕೆ ಮಾಡಿದೆವು. ನಂತರ ವೈದ್ಯರ ಸಲಹೆದ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಜೇವರಗಿ ದಾಟಿ ಹೋಗುತ್ತಿರುವಾಗ ಮಾರ್ಗ ಮದ್ಯದಲ್ಲಿ ಅಂದಾಜು ಸಾಯಾಂಕಾಲ 4-45 ಗಂಟೆ ಸುಮಾರಿಗೆ ಮೃಪಟ್ಟಿರುತ್ತಾನೆ. ನಂತರ ನನ್ನ ಗಂಡನ ಮೃತ ದೇಹವನ್ನು ಸರಕಾರಿ ಆಸ್ಪತ್ರೆ ಶಹಾಪೂರ ಶವಾಗಾರ ಕೋಣೆಯಲ್ಲಿ ತಂದು ಹಾಕಿರುತ್ತೇವೆ.
ಕಾರಣ ನನ್ನ ಗಂಡನು ಮೋಟಾರ ಸೈಕಲ ನಂ: ಕೆಎ.33/ಎ-3507 ನೇದ್ದನ್ನು ಚಲಾಯಿಸಿಕೊಂಡು ಶಿರವಾಳದಿಂದ ದೋರನಳ್ಳಿ ಕಡೆಗೆ ಬರುವಾಗ ದೋರನಳ್ಳಿ ಸೀಮಾಂತರದ ಹಳ್ಳೆಪ್ಪ ದಿಗ್ಗಿ ಇವರ ಹೊಲದ ಹತ್ತಿರ ರಸ್ತೆ ಮೇಲೆ ಬರುವಾಗ ದೊರನಳ್ಳಿ ಗ್ರಾಮದ ಕಡೆಯಿಂದ ಕ್ರೂಜರ ಜೀಪ ನಂ: ಕೆಎ-33/ಎ-8022 ನೇದ್ದರ ಚಾಲಕನಾದ ಶಿವಾನಂದ ತಂದೆ ಭೀಮರಾಯ ಹೊಸಮನಿ ಸಾ: ಇಟಗಿ ತಾ: ಶಹಾಪೂರ ಈತನು ತನ್ನ ಜೀಪನ್ನ ಅತೀವೇಗ ಮತ್ತು ಅಲಕ್ಷನದಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡನ ಮೋಟಾರ ಸೈಕಲಿಗೆ ಡಿಕ್ಕಿ ಪಡಿಸಿದ್ದು. ಸದರಿ ಕ್ರೂಜರ ಜೀಪ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 84/2022 ಕಲಂ 279, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.
ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 33/2022 ಕಲಂ 87 ಕೆಪಿ ಯ್ಯಾಕ್ಟ: ಇಂದು ದಿನಾಂಕ: 22/05/2022 ರಂದು 01.45 ಎ.ಎಮ್.ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಅಯ್ಯಪ್ಪ ಪಿಎಸ್ಐ ಗೋಗಿ ಪೊಲೀಸ್ ಠಾಣೆ. ರವರು ಆರೋಪಿತರು ಮತ್ತು ಜಪ್ತಿ ಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ:21/05/2022 ರಂದು 10.45 ಪಿ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಚಾಮನಾಳ ಗ್ರಾಮದ ಹನುಮಾನ ದೇವರ ಗುಡಿಯ ಪಕ್ಕದಲ್ಲಿಯ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಯಾರೋ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದಿದ್ದರಿಂದ, ಪಂಚರು ಮತ್ತು ಸಿಬ್ಬಂದಯವರೊಂದಿಗೆ ಕೂಡಿಕೊಂಡು 11.35 ಪಿ.ಎಮ್ ಕ್ಕೆ ದಾಳಿ ಮಾಡಿದ್ದು, ದಾಳಿಯಲ್ಲಿ ಮೇಲಿನ 3 ಜನ ಆರೋಪಿತರು ಸಿಕ್ಕಿ ಬಿದ್ದಿದ್ದು, 03 ಜನ ರೋಪಿತರು ಓಡಿ ಹೋಗಿದ್ದು, ಸಿಕ್ಕಿಬಿದ್ದವರಿಂದ ಮತ್ತು ಜೂಜಾಟ ಕಣದಲ್ಲಿದ್ದ ಒಟ್ಟು ನಗದು ಹಣ 8,150=00 ರೂ, 52 ಇಸ್ಪೇಟ ಎಲೆಗಳನ್ನು ದಿನಾಂಕ:22/05/2022 ರಂದು 00.35 ಎಎಮ್ ಅವಧಿಯಲ್ಲಿ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ಪಡೆದು 01.45 ಎ.ಎಮ್.ಕ್ಕೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಆರೋಪಿತರನ್ನು, ಮುದ್ದೇಮಾಲನ್ನು ಹಾಜರ ಪಡಿಸಿ ಕ್ರಮ ಜರುಗಿಸಲು ವರದಿ ನೀಡಿದ್ದು ವರದಿಯ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 32/2022 ಕಲಂ, 87 ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.