ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 23-06-2021

ಯಾದಗಿರ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ: 35/2021 ಕಲಂ 279, 338, 304(ಎ) ಐಪಿಸಿ : ನಿನ್ನೆ ದಿನಾಂಕ 21/06/2021 ರಂದು ಸಾಯಂಕಾಲ 7-30 ಪಿ.ಎಂ. ದ ಸುಮಾರಿಗೆ ಯಾದಗಿರಿ - ಹೈದ್ರಾಬಾದ್ ಮುಖ್ಯ ರಸ್ತೆಯ ಯಾದಗಿರಿ ನಗರದ ಸೈದಾಪುರ ಉಡುಪಿ ಹೊಟೆಲ್ ಮುಂದಿನ ಮುಖ್ಯ ರಸ್ತೆ ಮೇಲೆ ಈ ಕೇಸಿನ ಪಿಯರ್ಾದಿಯ ತಂದೆಯಾದ ಗಾಯಾಳು ಶರಣಪ್ಪ ವಯ;52 ವರ್ಷ ಇವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಕೇಸಿನ ಆರೋಪಿತ ಮೋಟಾರು ಸೈಕಲ್ ನಂಬರ ಕೆಎ-36, ಇಎಸ್-5976 ಸವಾರ ಅಮಿತಸಿಂಗ್ ಈತನು ತನ್ನ ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಗಾಯಾಳುವಿಗೆ ನೇರವಾಗಿ ಡಿಕ್ಕಿಕೊಟ್ಟಿದ್ದರಿಂದ ಅಪಘಾತ ಜರುಗಿದ್ದು, ಈ ಅಪಘಾತದಲ್ಲಿ ಎಡಗೈ, ಎಡಗಾಲಿಗೆ ಭಾರೀ ರಕ್ತಗಾಯ ಮತ್ತು ಒಳಪೆಟ್ಟಾಗಿ ಮುರಿದಿರುತ್ತವೆ ಅಲ್ಲದೇ ತಲೆಯ ಹಿಂಭಾಗಕ್ಕೆ ಭಾರೀ ಒಳಪೆಟ್ಟಾಗಿದ್ದು ಪ್ರಜ್ಞೆ ತಪ್ಪಿರುತ್ತಾರೆ. ಈ ಅಪಘಾತಕ್ಕೆ ಕಾರಣರಾದ ಮೋಟಾರು ಸೈಕಲ್ ಸವಾರನ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 35/2021 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. ಸದರಿ ಪ್ರಕರಣದಲ್ಲಿ ಗಾಯಾಳು ಶರಣಪ್ಪ ಈತನಿಗೆ ನಿನ್ನೆ ದಿನಾಂಕ 21/06/2021 ರಂದು ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಉಪಚರಿಸಿದ ವೈದ್ಯರು ಹೆಚ್ಚಿನ ಉಪಚಾರ ಕುರಿತು ರೆಫರ್ ಮಾಡಿದ್ದರಿಂದ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಸೇರಿಕೆಯಾದ ಗಾಯಾಳು ಶರಣಪ್ಪನಿಗೆ ಅಪಘಾತದಲ್ಲಾದ ಭಾರೀ ರಕ್ತಗಾಯ ಮತ್ತು ಗುಪ್ತಗಾಯಗಳ ಬಾಧೆಯಿಂದ ಚಿಕಿತ್ಸೆಗೆ ಸ್ಪಂದಿಸದೇ ನಿನ್ನೆ ದಿನಾಂಕ 21/06/2021 ರಂದು ರಾತ್ರಿ 10-48 ಪಿ.ಎಂ.ಕ್ಕೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಿರಿ ಅಂತಾ ಇಂದು ದಿನಾಂಕ 22/06/2021 ರಂದು ಪುರವಣಿ ಹೇಳಿಕೆ ನಿಡಿದ್ದರ ಸಾರಾಂಶದ ಮೇಲಿಂದ ಈ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

 

ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 39/2021 279, 304(ಎ) ಐಪಿಸಿ ಸಂ.187 ಐ.ಎಮ್.ವ್ಹಿ ಕಾಯ್ದೆ : ದಿನಾಂಕ:22/06/2021 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಮೃತ ಯಲ್ಲಾಲಿಂಗ @ ಯಲ್ಲಪ್ಪ ತಂದೆ ಪರಮಣ್ಣ ಸಾಲೋಡಗಿ ವಯಾ-18 ವರ್ಷ, ಸಾ:ಮಂಜಲಾಪೂರ ಹಳ್ಳಿ ಈತನು ತನ್ನ ಮೋಟಾರ್ ಸೈಕಲ್ ನಂ. ಕೆಎ-41 ಇ.ಎ-941 ನೇದ್ದರ ಮೇಲೆ ಹುಣಸಗಿ-ಕಕ್ಕೇರಾ ರಸ್ತೆಯ ಮೇಲೆ ಕಕ್ಕೇರಾ ಕ್ರಾಸ್ದಿಂದ ಮಂಜಲಾಪೂರ ಹಳ್ಳಿಗೆ ಹೋಗಲು ನಿಂಗಾನಾಯಕ ಇವರ ಹೊಲದ ಹತ್ತಿರ ಕರಿವಿಂಗನಲ್ಲಿ ಹೊರಟಾಗ ಆರೋಪಿತನು ತನ್ನ ಟ್ರ್ಯಾಕ್ಟರ ನಂ: ಕೆಎ-37 ಟಿ.ಎ-9387 ನೇದ್ದನ್ನು ಮಂಜಲಾಪೂರ ಹಳ್ಳಿ ಕಡೆಯಿಂದ ನಡೆಯಿಸಿಕೊಂಡು ಬಂದು ಕರುವಿಂಗನಲ್ಲಿ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿ ನಿಯಂತ್ರಣ ತಪ್ಪಿ ಮೃತನ ಮೋಟಾರ್ ಸೈಕಲ್ಲಗೆ ಜೋರಾಗಿ ಡಿಕ್ಕಿಕೊಟ್ಟಿದ್ದರಿಂದಾ ಮೃತ ಯಲ್ಲಾಲಿಂಗನ ತಲೆಗೆ ಭಾರಿ ರಕ್ತಗಾಯವಾಗಿ ಮೆದಳು ಹೊರಗೆ ಬಂದು ಸ್ಥಳದಲ್ಲಿಯೇ ಮೃತಪಟ್ಟ ಬಗ್ಗೆ ಅಪರಾಧ.

 


ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ : 40/2021 87 ಕೆ.ಪಿ ಯಾಕ್ಟ : ಇಂದು ದಿನಾಂಕ:22/06/2021 ರಂದು 17.30 ಮಾನ್ಯ ಡಿವೈಎಸ್ಪಿ ಸಾಹೇಬರಾದ ಶ್ರೀ ವೆಂಕಟೇಶ ಸುರಪುರ ಉಪ-ವಿಭಾಗ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರ ನೀಡಿದ್ದು ಇದ್ದು, ಏನೆಂದರೆ ಹುಣಸಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸಗಿ ಪಟ್ಟಣದ ಆಶ್ರಯ ಕಾಲೋನಿ ಹಿಂದೆ ಇರುವ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ಮೆರೆಗೆ ಜೂಜಾಟವನ್ನು ಆಡುವವರ ಮೇಲೆ ಎಫ್.ಐ.ಆರ್ ದಾಖಲಿಸಲು ಮತ್ತು ದಾಳಿ ಮಾಡುವ ಕುರಿತು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಸುರಪುರವರಲ್ಲಿ ಪರವಾನಿಗೆ ಪಡೆದುಕೊಂಡಿದ್ದು, ಈ ಬಗ್ಗೆ ಎಫ್.ಐ.ಆರ್ ದಾಖಲಿಸಲು ಸೂಚಿಸಿದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ:40/2021 ಕಲಂ. 87 ಕೆ.ಪಿ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.
ನಂತರ ಮಾನ್ಯ ಡಿವೈಎಸ್ಪಿ ಸಾಹೇಬರಾದ ಶ್ರೀ ವೆಂಕಟೇಶ ಸುರಪುರ ಉಪ-ವಿಭಾಗ ರವರು ಠಾಣೆಗೆ 19.30 ಗಂಟೆಗೆ ಮರಳಿ ಠಾಣೆಗೆ ಬಂದು 11 ಜನ ಆರೋಪಿತರು & ನಗದು ಹಣ 115000/- ರೂ.ಗಳು ಹಾಗೂ 52 ಇಸ್ಪೀಟ್ ಎಲೆಗಳು ಹಾಗೂ 6 ಮೋಟಾರ್ ಸೈಕಲ್ಲಗಳು ಅ:ಕಿ:265000/- ರೂ.ಗಳು ನೇದ್ದವುಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ. ಆರೋಪಿತರ ಹೆಸರು ಈ ರೀತಿ ಇದೆ, 1) ಮಹಿಬೂಬ ತಂದೆ ಕರೀಂಸಾಬ ಚೌದ್ರಿ ವಯಾ-26 ವರ್ಷ, ಜಾ:ಮುಸ್ಲೀಂ ಉ:ವೆಲ್ಡಿಂಗ್ ಕೆಲಸ ಸಾ:ಹುಣಸಗಿ 2) ಅಬ್ದುಲ್ ರಜಾಕ ತಂದೆ ಹಸನಸಾಬ ದ್ಯಾಮನಾಳ ವಯಾ-26 ವರ್ಷ, ಜಾ:ಮುಸ್ಲೀಂ ಉ:ಪೇಟಿಂಗ್ ಕೆಲಸ ಸಾ:ಹುಣಸಗಿ 3) ದೊಡ್ಡಪ್ಪ ತಂದೆ ದೇವಿಂದ್ರಪ್ಪ ಕೊಳೂರ ವಯಾ-26 ವರ್ಷ, ಜಾ:ಲಿಂಗಾಯತ ಉ:ಒಕ್ಕಲುತನ ಸಾ:ಹುಣಸಗಿ 4)ಚಾಂದಪಾಶಾ ತಂದೆ ನಬೀಸಾಬ ಬೆಕಿನಾಳ ವಯಾ-30 ವರ್ಷ, ಜಾ:ಮುಸ್ಲೀಂ ಉ:ಹಾಲು ಮಾರಾಟ ಮಾಡುವದು (ವ್ಯಾಪಾರ) ಸಾ:ಕೆಂಭಾವಿ ಕ್ರಾಸ್ ಹುಣಸಗಿ, 5) ಗಂಗಾಧರ ತಂದೆ ಮಹಾಂತಯ್ಯಸ್ವಾಮಿ ಹಿರೇಮಠ ವಯಾ-31 ವರ್ಷ, ಜಾ:ಜಂಗಮ ಉ: ಕೆ.ಇ.ಬಿಯಲ್ಲಿ ಆಪರೇಟರ್ ಕೆಲಸ, ಸಾ:ಹುಣಸಗಿ 6) ಮಂಜುನಾಥ ತಂದೆ ಬಾಲನ್ಣ ದೊರೆ ವಯಾ-21 ವರ್ಷ, ಜಾ:ಬೇಡರ ಉ:ವಿದ್ಯಾಥರ್ಿ ಸಾ:ಹುಣಸಗಿ 7) ನಿಂಗಣ್ಣ ತಂದೆ ಸಾಯಿಬಣ್ಣ ಬಿರಾದಾರ ವಯಾ-30 ವರ್ಷ, ಜಾ:ಬೇಡರ ಉ:ಒಕ್ಕಲುತನ ಸಾ:ಹುಣಸಗಿ 8) ಮಹೇಶ ತಂದೆ ಸಂಗಣ್ಣ ಮಲಗಲದಿನ್ನಿ ವಯಾ-31 ವರ್ಷ, ಜಾ:ಲಿಂಗಾಯತ ಉ:ವ್ಯಾಪಾರ ಸಾ:ಹುಣಸಗಿ 9) ಶರಣಬಸಪ್ಪ ತಂದೆ ಹಳ್ಳೆಪ್ಪ ಗುತ್ತೇದಾರ ವಯಾ-35 ವರ್ಷ, ಜಾ:ಈಳಿಗೇರ ಉ:ಒಕ್ಕಲುತನ ಸಾ:ಹುಣಸಗಿ 10) ರಾಜು ತಂದೆ ಸುಧಾಕರ ನಗನೂರ ವಯಾ-25 ವರ್ಷ ಜಾ:ಲಿಂಗಾಯತ ಉ:ಪೈನಾನ್ಸದಲ್ಲಿ ಕೆಲಸ ಸಾ:ಹುಣಸಗಿ, 11) ಬಸವರಾಜ ತಂದೆ ನಾಗಪ್ಪಗೌಡ ಐನಾಪೂರ ವಯಾ-35 ವರ್ಷ ಜಾ:ಬೇಡರ ಉ:ಹಮಾಲಿ ಕೆಲಸ ಸಾ:ಹುಣಸಗಿ ಅಂತಾ ಇರುತ್ತದೆ.

 

 

ಹುಣಸಗಿ ಪೊಲೀಸ್ ಠಾಣೆ

ಗುನ್ನೆ ನಂ: 41/2021 ಕಲಂ. 279, 337 338 ಐಪಿಸಿ : ದಿ:22/06/2021 ರಂದು ಸಾಯಂಕಾಲ 19.30 ಗಂಟೆಯ ಸುಮಾರಿಗೆ ಫಿರ್ಯಾದಿ ಹಾಗೂ ತನ್ನ ಸಂಗಡ ಕೆಲಸ ಮಾಡುವ ಇನ್ನಿಬ್ಬರ ಜೊತೆಯಲ್ಲಿ ಗೌಂಡಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಹುಣಸಗಿ ಬಸ್ ನಿಲ್ದಾಣದ ಹತ್ತಿರ ಬಾರ್ ಹತ್ತಿರ ಹೊರಟಾಗ ಆರೋಪಿತನು ತನ್ನ ಮೋಟಾರ್ ಸೈಕಲ್ ನಂ: ಕೆಎ-37 ಇಕೆ-4503 ನೇದ್ದನ್ನು ಬಸವೇಶ್ವ ವೃತ್ತ ಕಡೆಯಿಂದ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿಗೆ ಜೋರಾಗಿ ಡಿಕ್ಕಿಕೊಟ್ಟಿದ್ದರಿಂದ ಫಿರ್ಯಾದಿಯು ಕೆಳಗೆ ಬಿದ್ದು, ಸಾದಾ & ಭಾರಿ ರಕ್ತಗಾಯಗಳಾಗಿದ್ದು, & ಮೋಟಾರ್ ಸೈಕಲ್ ಚಾಲಕನು ಸಹ ಕೆಳಗೆ ಬಿದ್ದಿದ್ದು, ಅವನಿಗೂ ಕೂಡಾ ರಕ್ತಗಾಯಗಳಾದ ಬಗ್ಗೆ ಅಪರಾಧ.

 

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ 68/2021 ಕಲಂ 454, 457, 380 ಐಪಿಸಿ : ಫಿಯರ್ಾಧಿ ಸಾರಾಂಶವೇನೆಂದರೆ, ನಾನು ಸುಮಾರು 7 ವರ್ಷಗಳಿಂದ ಯಾದಗಿರಿ ಸಕರ್ಾರಿ ಪದವಿ ಮಹಾವಿದ್ಯಾಲಯದಲ್ಲಿ ಪ್ರಭಾರಿ ಪ್ರಾಂಶುಪಾಲರು ಅಂತಾ ಕೆಲಸ ಮಾಡಿಕೊಂಡು ಇದ್ದೇನೆ. ಈಗ ಲಾಕ್ಡೌನ್ ಇದ್ದ ಕಾರಣ 2-3 ದಿವಸಗಳಿಗೆ ಒಮ್ಮೆ ನಾನು ಕಾಲೇಜಿಗೆ ಬಂದು ನಿಗಾ ವಹಿಸುವುದು ಮಾಡುತ್ತೇನೆ. ನಮ್ಮ ಕಾಲೇಜಿನ ವಿದ್ಯಾಥರ್ಿಗಳಿಗೆ ಸ್ಮಾಟರ್್ ಕ್ಲಾಸ್ ತೆಗದುಕೊಳ್ಳಲು ಸ್ಮಾಟರ್್ ಕ್ಲಾಸ್ ರೂಮ್ ಯೋಜನೆಯ ಅಡಿಯಲ್ಲಿ ಸಕರ್ಾರದಿಂದ ನಮ್ಮ ಕಾಲೇಜಿಗೆ ಒಟ್ಟು 7 ಪ್ರೋಜೆಕ್ಟರ್ಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಇತರ ವಸ್ತುಗಳು ಮಂಜೂರಾಗಿ ದಿನಾಂಕ 10/03/2021 ರಂದು ನಮ್ಮ ಕಾಲೇಜಿಗೆ ಬಂದಿದ್ದು ಇರುತ್ತದೆ. ಸಕರ್ಾರದ ಕಡೆಯಿಂದ ಕಲಬುರಗಿಯವರು ಬಂದು ದಿನಾಂಕ 24/03/2021 ರಂದು ಎಲ್ಲಾ ವಸ್ತುಗಳನ್ನು ಇನ್ಸ್ಟಾಲೇಶನ್ ಮಾಡಿ ಹೋಗಿರುತ್ತಾರೆ. ಈ ಮುಂಚೆ ನಾನು ಮತ್ತು ನಮ್ಮ ಕಾಲೇಜಿನ ಸ್ವೀಪರ ಪರಮಣ್ಣ ಪೂಜಾರಿ ಇಬ್ಬರು ದಿನಾಂಕ 19/06/2021 ರಂದು ಶನಿವಾರ ಸಾಯಂಕಾಲ 05-00 ಗಂಟೆಯ ಸುಮಾರಿಗೆ ನಮ್ಮ ಕಾಲೇಜಿನ ಎಲ್ಲಾ ರೂಮಗಳನ್ನು ನೋಡಿ ಬೀಗ ಹಾಕಿಕೊಂಡು ಹೋಗಿರುತ್ತೇವೆ. ಹೀಗಿದ್ದು ನಾಳೆ ದಿನಾಂಕ 23/06/2021 ರಂದು ನಮ್ಮ ಕಾಲೇಜಿಗೆ ಮಾನ್ಯ ಸಚಿವರು ಹಾಗೂ ಶಾಸಕರು ಬಂದು ಸ್ಮಾಟರ್್ ಕ್ಲಾಸ್ ರೂಮ್ ಯೋಜನೆ ಉದ್ಘಾಟನೆ ಮಾಡುವ ಕಾರ್ಯಕ್ರಮ ಇರುವ ಪ್ರಯುಕ್ತ ಎಲ್ಲಾ ರೂಮಗಳನ್ನು ಸ್ವಚ್ಚ ಮಾಡಿಸೋಣ ಅಂತಾ ನಿನ್ನೆ ದಿನಾಂಕ 21/06/2021 ರಂದು ಸಾಯಂಕಾಲ 04-00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಸ್ವೀಪರ್ ಪರಮಣ್ಣ ಇಬ್ಬರು ಕೂಡಿ ನಮ್ಮ ಕಾಲೇಜಿಗೆ ಬಂದು ಕಾಲೇಜಿನ ಮೇನ್ ಗೇಟ್ ತೆಗೆದು ಒಳಗೆ ಹೋಗಿ ನೋಡಿದಾಗ, ಪ್ರೋಜೆಕ್ಟ್ರಗಳು ಕೂಡಿಸಿದ 03 ರೂಮ್ಗಳ ಕೀಲಿ ಮುರಿದು ಬಾಗಿಲು ತೆಗೆದಿದ್ದು ಕಂಡು ಬಂತು. ಒಳಗೆ ಹೋಗಿ ನೋಡಿದಾಗ, ಇಠಿಠಟಿ ಇಃ-ಘಿ05 ಅಂತಾ ಇದ್ದ, 02 ಪ್ರೊಜೆಕ್ಟರಗಳು, ಅ.ಕಿ 90,000/-ರೂ|| ಗಳು, ಃಕಇ 1ಏಗಿಂ ಅಂತಾ ಇದ್ದ, 01 ಯು.ಪಿ.ಎಸ್ ಅ.ಕಿ 16,500/-ರೂ|| ಗಳು ಮತ್ತು ಐಜಠಥಥಿ ಅಂತಾ ಇದ್ದ, 02 ಆನ್ಡ್ರೋಯಿ ಬಾಕ್ಸ್, ಅ.ಕಿ 9200/- ರೂ|| ಗಳು ಹೋಗಿದ್ದು, ಇನ್ನೊಂದು ರೂಮಿನಲ್ಲಿ ಃಕಇ 1ಏಗಿಂ ಅಂತಾ ಇದ್ದ, 01 ಯು.ಪಿ.ಎಸ್ ಅ.ಕಿ 16,500/-ರೂ|| ಗಳು ಮಾತ್ರ ಹೋಗಿದ್ದು ಕಂಡು ಬಂತು. ಸದರಿಯವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ದಿನಾಂಕ 19/06/2021 ರಂದು ಸಾಯಂಕಾಲ 05-00 ಗಂಟೆಯಿಂದ ದಿನಾಂಕ 21/06/2021 ರ ಸಾಯಂಕಾಲ 04-00 ಗಂಟೆಯ ಅವಧಿಯಲ್ಲಿ ನಮ್ಮ ಕಾಲೇಜ್ ರೂಮಗಳ ಕೀಲಿ ಮುರಿದು ಒಳಗೆ ಬಂದು ಕಾಲೇಜ್ ಕ್ಲಾಸ್ ರೂಮಿಗೆ ಅಳವಡಿಸಿದ ಸ್ಮಾಟರ್್ ಕ್ಲಾಸ್ ರೂಮ್ ಯೋಜನೆ ಅಡಿಯಲ್ಲಿ ಬಂದ ಒಟ್ಟು 1,32,200/- ರೂಪಾಯಿ ಕಿಮ್ಮತ್ತಿನ ಸಾಮಾನುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಇಂದು ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದು, ಕಳುವಾದ ವಸ್ತುಗಳನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 68/2021 ಕಲಂ 454, 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ : 67/2021 ಕಲಂ 323, 324, 504, 506 ಸಂ: 34 ಐಪಿಸಿ : ಇಂದು ದಿನಾಂಕ: 22/06/2021 ರಂದು 07.10 ಪಿಎಂ ಕ್ಕೆ ಶ್ರೀ. ಶಾಂತಪ್ಪ ತಂದೆ ದೇವಲು ಚವ್ಹಾಣ ವಯಾ:30 ಉ: ಒಕ್ಕಲುತನ ಜಾ: ಲಂಬಾಣಿ ಸಾ: ಚಂದಾಪೂರ ಮೇಲಿನ ತಾಂಡಾ ತಾ: ಶಹಾಪೂರ ಜಿ: ಯಾದಗಿರಿ ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದರ ಸಾರಂಶ ಏನಂದರೆ, ನಮ್ಮ ಮನೆಯ ಪಕ್ಕದಲ್ಲಿಯ ಖುಲ್ಲಾ ಜಾಗದ ವಿಷಯದಲ್ಲಿ ನಮ್ಮ ಅಣ್ಣ ತಮ್ಮಕಿಯ ಪೈಕಿಯ ಅನೀಲ ತಂದೆ ಟೋಪು ಚವ್ಹಾಣ ಇವರು ನಮ್ಮ ಜೋತೆಯಲ್ಲಿ ವೈಮನಸ್ಸು ಬೆಳೆಸಿಕೊಂಡಿದ್ದು ಆಗಾಗಾ ನಮ್ಮೊಂದಿಗೆ ಜಗಳ ಮಾಡುತ್ತಿದ್ದರು.ಹೀಗಿದ್ದು, ನಿನ್ನೆ ದಿನಾಂಕ:21/06/2021 ರಂದು 06.30 ಪಿಎಂ ಸುಮಾರಿಗೆ ನಮ್ಮ ಮನೆಯ ಹತ್ತಿರ ಖುಲ್ಲಾ ಜಾಗದಲ್ಲಿ ಕಟ್ಟಿಗೆ ಹಾಕುತ್ತಿದ್ದಾಗ, ಅನೀಲ ತಂದೆ ಟೊಪು ಚವ್ಹಾಣ ವಯಾ: 38 ವರ್ಷ, ಶ್ರೀಕಾಂತ ತಂದೆ ಟೋಪು ಚವ್ಹಾಣ ವಯಾ; 35 ವರ್ಷ ಮತ್ತು ಹೇಮಲಿಬಾಯಿ ಗಂಡ ಟೋಪು ಚವ್ಹಾಣ 58 ವರ್ಷ ಎಲ್ಲರೂ ಸಾ: ಚಂದಾಪೂರ ಮೇಲಿನ ತಾಂಡಾ ಇವರುಗಳು ಕೂಡಿ ಬಂದು ನನಗೆ ಸೂಳೆ ಮಗನೆ ಇಲ್ಲ್ಲಿ ಕಟ್ಟಿಗೆ ಹಾಕಬೇಡ ಅಂತಾ ಹೇಳಿದರು ಯಾಕೆ ಹಾಕುತ್ತಿ ಅಂತಾ ಅವಾಚ್ಯವಾಗಿ ಬೈಯತೊಡಗಿದರು, ಆಗ ಅಲ್ಲೆ ಸೇವಾಲಾಲ ಗುಡಿಯ ಹತ್ತಿರ ಮೋಬೈಲ್ ನೊಡುತ್ತಾ ಕುಳಿತಿದ್ದ ನನ್ನ ಮಗ ಅರುಣ ತಂದೆ ಶಾಂತಪ್ಪ ಚವ್ಹಾಣ ವಯಾ:13 ಈತನು ನಮ್ಮ ಜಾಗದಲ್ಲಿ ಕಟ್ಟಿಗೆ ಹಾಕಿದ್ದೇವೆ ಸುಮ್ಮನೆ ಹೊಲಸು ಬೈಯಬೇಡರಿ ಅಂತಾ ಅಂದಿದ್ದಕ್ಕೆ ಅನೀಲ ತಂದೆ ಟೋಪು ಚವ್ಹಾಣ ಈತನು ನನ್ನ ಮಗನಿಗೆ, ಬೋಸಡಿ ಮಗನೇ ನಿಂದೆ ಬಹಳ ಆಗಿದೆ ಅಂತಾ ಕೈಯಿಂದ ಟೊಂಕಕ್ಕೆ ಹೊಡೆದು ಅಲ್ಲೆ ಬಿದ್ದಿದ್ದ ಒಂದು ಬಡಿಗೆಯಿಂದ ನನ್ನ ಮಗನ ತೊಡೆಗೆ ಹೊಡೆದು ಗುಪ್ತಗಾಯ ಮಾಡಿದನು. ಶ್ರೀಕಾಂತ @ ಶಿರ್ಯಾ ತಂದೆ ಟೋಪು ಚವ್ಹಾಣ ಈತನು ಕೈಯಿಂದ ನನ್ನ ಮಗನ ಎಡ ಮೇಲಕಿಗೆ ಮತ್ತು ಪಕ್ಕೆಗೆ ಹೊಡೆದು ಗುಪ್ತ ಪೆಟ್ಟು ಮಾಡಿದನು, ಆಗ ಹೇಮಲಿಬಾಯಿ ಇವಳು ನೀವು ಹೀಗೆಯೇ ಇಲ್ಲಿ ಕಟ್ಟಿಗೆ ಹಾಕಿದರೆ ನಿಮಗೆ ಖಲಾಸ್ ಮಾಡತಿವಿ ಅಂತಾ ಬೈಯ್ದು, ಎಲೇ ಶಾಂತ್ಯಾ ನಿನಗೆ ಎಷ್ಟು ಹೇಳಿದರೂ ಬುದ್ದಿ ಇಲ್ಲಾ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ, ಅಲ್ಲೆ ಇದ್ದ ಥಾವರು ತಂದೆ ಟೀಕು ಚವ್ಹಾಣ ಮತ್ತು ನಮ್ಮ ಕಾಕಾ ಥಾವರೂ ತಂದೆ ಭೀಮಲು ಚವ್ಹಾಣ ಇವರು ಹಾಗೂ ನನ್ನ ಹೆಂಡತಿಯಾದ ಸುಶಿಲಾಬಾಯಿ ಗಂಡ ಶಾಂತು ಚವ್ಹಾಣ ಇವರುಗಳು ಬಿಡಿಸಿಕೊಂಡರು, ಇಲ್ಲದಿದ್ದರೆ, ಇನ್ನು ಹೊಡೆಯುತ್ತಿದ್ದರು, ಹೊಡೆದು ಹೊಗುವಾಗ ಮಕ್ಕಳೇ ಇಲ್ಲಿ ಮತ್ತೆ ಕಟ್ಟಿಗೆ ಹಾಕಿದರೆ ನಿಮಗೆ ಖಲಾಸ್ ಮಾಡುತ್ತೇವೆ ಅಂತಾ ಜೀವದ ಭಯ ಹಾಕಿ ಹೊಗಿರುತ್ತಾರೆ. ನಾವು ನಿನ್ನೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಹೊಗಿ ನಮ್ಮ ಮಗನಿಗೆ ಉಪಚಾರಕ್ಕೆ ಸೇರಿಕೆ ಮಾಡಿ ನಾನು ಮತ್ತು ನನ್ನ ಹೆಂಡತಿ ಇಬ್ಬರು ವಿಚಾರ ಮಾಡಿ ತಡವಾಗಿ ಇಂದು ದಿನಾಂಕ:22/06/2021 ರಂದು ಠಾಣೆಗೆ ಬಂದಿರುತ್ತೇವೆ.ವಿನಾಃ ಕಾರಣ ನಮ್ಮ ಜೋತೆ ಜಗಳ ಮಾಡಿ ಅವಾಚ್ಯವಾಗಿ ಬೈಯುತ್ತಿದ್ದಾಗ, ಅವಾಚ್ಯ ಬೈಯಬೇಡರಿ ಅಂದ ನನ್ನ ಮಗನಿಗೆ ಕೈಯಿಂದ, ಬಡಿಗೆಯಿಂದ ಹೊಡೆದು, ಅವಾಚ್ಯವಾಗಿ ಬೈಯ್ದು ಜೀವದ ಭಯ ಹಾಕಿರುವ ಅನೀಲ ತಂದೆ ಟೊಪು ಚವ್ಹಾಣ ವಯಾ: 38 ವರ್ಷ, ಶ್ರೀಕಾಂತ ತಂದೆ ಟೋಪು ಚವ್ಹಾಣ ವಯಾ; 35 ವರ್ಷ ಮತ್ತು ಹೇಮಲಿಬಾಯಿ ಗಂಡ ಟೋಪು ಚವ್ಹಾಣ 58 ವರ್ಷ ಎಲ್ಲರೂ ಸಾ: ಚಂದಾಪೂರ ಮೇಲಿನ ತಾಂಡಾ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮಾನ್ಯರವರಲ್ಲಿ ವಿನಂತಿ. ಅಂತಾ ಅಜರ್ಿ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 67/2021 ಕಲಂ, 323, 324, 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 144/2021 ಕಲಂ 279, 304(ಎ) ಐ.ಪಿ.ಸಿ : ಇಂದು ದಿನಾಂಕ 22/06/2021 ರಂದು, ರಾತ್ರಿ 20-15 ಗಂಟೆಗೆ ಫಿರ್ಯಾದಿ ಶ್ರೀ ಖಾದರಭಾಷಾ ತಂದೆ ಅಮೀನಸಾಬ ಆಸಿಂಗಾಳ, ವಯಸ್ಸು 42 ವರ್ಷ, ಜಾತಿ ಮುಸ್ಲಿಂ ಉಃ ಐಸ್ಕ್ರಿಮ್ ವ್ಯಾಪಾರ, ಸಾಃ ಚಾಮುಂಡೇಶ್ವರಿ ನಗರ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 22/06/2021 ರಂದು ಮುಂಜಾನೆಯ ಸುಮಾರಿಗೆ ನನ್ನ ತಮ್ಮ ಸೈಯದಸಾಬ ಈತನ ಮಕ್ಕಳಾದ ಇಬ್ರಾಹಿಂ ತಂದೆ ಸೈಯದ್ಸಾಬ ಆಸಿಂಗಾಳ ವಯಸ್ಸು 20 ವರ್ಷ ಮತ್ತು ಎಮ್.ಡಿ ರಫೀಕ್ ತಂದೆ ಸೈಯದ್ಸಾಬ ಆಸಿಂಗಾಳ ವಯಸ್ಸು 11 ವರ್ಷ ಇಬ್ಬರೂ ಕೂಡಿ ಅತುಲ್ ಗೂಡ್ಸ್ ಆಟೋ ನಂಬರ ಕೆಎ-33-ಎ-6225 ನೇದ್ದರಲ್ಲಿ ಐಸ್ ಕ್ರಿಮ್ ಡಬ್ಬಿಗಳನ್ನಿಟ್ಟುಕೊಂಡು ಮಾರಾಟ ಮಾಡಲು ಹಳ್ಳಿಗಳ ಕಡೆಗೆ ಹೋದರು. ಆಟೋವನ್ನು ಇಬ್ರಾಹಿಂ ಈತನು ಚಲಾಯಿಸಿಕೊಂಡು ಹೋದನು. ಸಾಯಂಕಾಲ 6-15 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ನಮ್ಮ ಓಣಿಯ ಸಣ್ಣ ಅಯ್ಯಪ್ಪ ತಂದೆ ಯಲ್ಲಪ್ಪ ನಾಶಿ ಈತನು ಫೋನ್ ಮಾಡಿ ಇಂದು ಮಧ್ಯಾಹ್ನದ ಸುಮಾರಿಗೆ ಶಹಾಪೂರದಿಂದ ನಾನು ಮತ್ತು ನಮ್ಮ ಓಣಿಯ ಮಹ್ಮದ ಹಬೀಬ್ ತಂದೆ ಮಹ್ಮದ ಹುಸೇನ್ ಚಿಗರಿಹಾಳ ಇಬ್ಬರು ಕೂಡಿ ಮೋಟರ್ ಸೈಕಲ್ ಮೇಲೆ ಕೆಲಸದ ನಿಮಿತ್ಯ ಸುರಪೂರಕ್ಕೆ ಹೋಗಿ ಮರಳಿ ಮೋಟರ್ ಸೈಕಲ್ ಮೇಲೆ ಶಹಾಪೂರಕ್ಕೆ ಬರುತಿದ್ದಾಗ ಸಾಯಂಕಾಲ 6-00 ಗಂಟೆಯ ಸುಮಾರಿಗೆ, ಹತ್ತಿಗೂಡುರ- ಶಹಾಪೂರ ಮುಖ್ಯೆ ರಸ್ತೆಯ ಮೇಲೆ ಹತ್ತಿಗೂಡುರ ಸೀಮಾಂತರದ ಗೌರಮ್ಮ ಶಾಂತಿ ಧಾಮದ ಹತ್ತಿರ ಬರುತಿದ್ದಾಗ, ನಮ್ಮ ಹಿಂದಿನಿಂದ ಅಂದರೆ ಹತ್ತಿಗೂಡುರ ಕಡೆಯಿಂದ ಒಂದು ಗೂಡ್ಸ್ ಆಟೋ ಚಾಲಕನು ತನ್ನ ಆಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ರೋಡಿನ ಬಲಬದಿಗೆ ಗೂಡ್ಸ್ ಆಟೋ ಪಲ್ಟಿಮಾಡಿದ್ದು, ಆಗ ನಾವಿಬ್ಬರೂ ಹತ್ತಿರ ಹೋಗಿ ನೋಡಲಾಗಿ, ನಿಮ್ಮ ತಮ್ಮನ ಮಕ್ಕಳಾದ ಇಬ್ರಾಹಿಂ ತಂದೆ ಸೈಯದ್ಸಾಬ ಆಸಿಂಗಾಳ ಮತ್ತು ಎಮ್.ಡಿ ರಫೀಕ್ ತಂದೆ ಸೈಯದ್ಸಾಬ ಆಸಿಂಗಾಳ ಇದ್ದು, ಎಮ್.ಡಿ ರಫೀಕ್ನಿಗೆ ಬಲಕಪಾಳಕ್ಕೆ, ಬಲಹಣೆಗೆ, ಮೂಗಿನ ಬಲಭಾಗಕ್ಕೆ, ಎಡಹಣೆಗೆ, ಕುತ್ತಿಗೆಯ ಬಲಭಾಗಕ್ಕೆ ತರಚಿದ ರಕ್ತಗಾಯಗಳಾಗಿ ಬಾಯಿಂದ ರಕ್ತ ಬಂದಿರುತ್ತದೆ, ಬಲಭುಜಕ್ಕೆ ತರಚಿದ ರಕ್ತಗಾಯವಾಗಿರುತ್ತದೆ. ಎಡಗೈ ಮೊಣಕೈ ಹತ್ತಿರ ಎಲಬು ಮುರಿದು ಭಾರಿ ಕಟ್ಟಾದ ರಕ್ತಗಾಯವಾಗಿ ಎಡರಟ್ಟೆಗೆ ತರಚಿದ ಭಾರಿ ರಕ್ತಗಾಯವಾಗಿರುತ್ತದೆ ಆಟೋ ಚಲಾಯಿಸುತಿದ್ದ ಇಬ್ರಾಹಿಂನಿಗೆ ಯಾವುದೇ ಗಾಯವಗೈರೆ ಆಗಿರುವುದಿಲ್ಲ. ಎಮ್.ಡಿ ರಫೀಕನಿಗೆ ಉಪಚಾರ ಕುರಿತು ಯಾವುದಾದರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಶಹಾಪೂರ ಸರಕಾರಿ ಆಸ್ಪತ್ರೆಗೆ ಬರುತ್ತೇವೆ ನೀವು ಆಸ್ಪತ್ರೆಯ ಕಡೆಗೆ ಬನ್ನಿ ಅಂತ ತಿಳಿಸಿದ ಮೇರೆಗೆ, ನಾವು ಆಸ್ಪತ್ರೆಯಲ್ಲಿ ಬಂದು ನಿಂತಿದ್ದಾಗ ಅಯಪ್ಪ ಈತನು ಒಂದು ಆಟೋದಲ್ಲಿ ನಮ್ಮ ಮಗ ಎಮ್.ಡಿ ರಫೀಕ ಈತನಿಗೆ ಹಾಕಿಕೊಂಡು ಬಂದಾಗ ವಿಚಾರಿಸಲಾಗಿ ಗಾಯಾಳು ಎಮ್.ಡಿ ರಫೀಕನಿಗೆ ಆಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಬರುತಿದ್ದಾಗ, ಸಂಜೆ 7-00 ಗಂಟೆಯ ಸುಮಾರಿಗೆ ರಸ್ತಾಪೂರ ಕಮಾನ ಹತ್ತಿರ ರಫೀಕನು ತನಗೆ ಅಪಘಾತದಲ್ಲಿ ಆದ ಗಾಯಗಳಿಂದ ಮೃತ ಪಟ್ಟಿರುತ್ತಾನೆ ಅಂತ ತಿಳಿಸಿದ್ದು, ವೈದ್ಯಾಧಿಕಾರಿಳು ನೋಡಿ ಮಾರ್ಗ ಮದ್ಯದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತ ತಿಳಿಸಿದ್ದು, ರಫೀಕನಿಗೆ ನೋಡಲಾಗಿ ಮೇಲೆ ಹೇಳಿದಂತೆ ಗಾಯಗಳಾಗಿ ಮೃತ ಪಟ್ಟಿದ್ದನು. ಕಾರಣ ಈ ಅಪಘಾತಕ್ಕೆ ಕಾರಣಿಭೂತನಾದ ಅತುಲ್ ಗೂಡ್ಸ್ ಆಟೋ ನಂಬರ ಕೆಎ-33-ಎ-6225 ನೇದ್ದರ ಚಾಲಕನಾದ ಇಬ್ರಾಹಿಂ ತಂದೆ ಸೈಯದ್ಸಾಬ ಆಸಿಂಗಾಳ ಸಾಃ ಚಾಮುಂಡೇಶ್ವರಿ ನಗರ ಶಹಾಪೂರ ಈತನ ವಿರುದ್ಧ ಕ್ರಮ ಕೈಗೊಳ್ಳಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 144/2021 ಕಲಂ 279, 304(ಎ) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

 

ಭೀಗುಡಿ ಪೊಲೀಸ್ ಠಾಣೆ
ಗುನ್ನೆ ನಂ: 45/2021 ಕಲಂ 143,147,498(ಎ),302,304(ಬಿ) ಸಂ 149 ಐಪಿಸಿ ಮತ್ತು 3 & 4 ಡಿ.ಪಿ ಯಾಕ್ಟ : ಫಿಯರ್ಾದಿಯ ಮಗಳಾದ ಮೃತಝರೀನಾಬೇಗಂ ಇವಳಿಗೆ ದಿನಾಂಕ 08/03/2021 ರಂದುಆರೋಪಿ ಚಾಂದಪಟೇಲ ಈತನಿಗೆಕೊಟ್ಟು ಮದುವೆ ಮಾಡಿದ್ದು, ಮದುವೆ ಕಾಲಕ್ಕೆ 50 ಗ್ರಾಂ ಬಂಗಾರ, 01 ಲಕ್ಷ ನಗದು ಹಣ ಹಾಗು ಒಂದು ಮೋಟರ್ ಸೈಕಲ್ ವರದಕ್ಷಣೆ ನೀಡಿದ್ದುಇರುತ್ತದೆ. ಮದುವೆಯಾದಒಂದು ವಾರದ ನಂತರ ಮೃತಳ ಗಂಡಚಾಂದಪಟೇಲ ಹಾಗು ಅತ್ತೆ, ಮಾವ, ನಾದಿನ ಹಾಗು ಮೈದುನಎಲ್ಲರೂ ಸೇರಿ ಮೃತಳಿಗೆ ನೀನು ಹಳ್ಳಿಗಮಾರ ಇರುವಿ, ನೋಡಲುಅಸಹ್ಯವಾಗಿರುವಿಅಂತ ಕಿರುಕುಳ ನೀಡುತ್ತಿದ್ದರು. ಈ ವಿಷಯ ಮೃತಳು ತನ್ನತವರು ಮನೆಯವರಿಗೆ ಫೋನ ಮಾಡಿ ತಿಳಿಸುತ್ತ ಬಂದಿದ್ದಳು. ಅಲದೆ ಮೃತಳ ಗಂಡ ಬೇರೆಯವಳೊಂದಿಗೆ ಅನೈತಿಕ ಸಂಬಂಧಇಟ್ಟುಕೊಂಡಿದ್ದು, ರಾತ್ರಿ ಸಮಯದಲ್ಲಿ ಮೊಬೈಲನಲ್ಲಿಚಾಟಿಂಗ್ ಮಾಡುತ್ತಾನೆ, ನಾನು ಕೇಳಿದ್ದಕ್ಕೆ ಕೈಕಟ್ಟಿ ಬಾಯಿಗೆ ಬಟ್ಟೆ ಹಾಕಿ ಹೊಡೆ ಬಡೆ ಮಾಡುತ್ತಾನೆಅಂತ ಮೃತಳು ತನ್ನತವರು ಮನೆಯವರಿಗೆ ಫೋನ ಮಾಡಿ ತಿಳಿಸಿದ್ದಳು. ಅಲ್ಲದೆಅತ್ತೆಆಬಿದಾ ಇವಳು ನೀವು ಮದುವೆಯಲ್ಲಿ ವರದಕ್ಷಣೆಕಡಿಮೆಕೊಟ್ಟೀದ್ದೀರಿಇನ್ನೂತವರು ಮನೆಯಿಂದ ವರದಕ್ಷಣೆತೆಗೆದುಕೊಂಡು ಬರಬೇಕುಅಂತ ಕಿರುಕುಳ ಕೊಡುತ್ತಿದ್ದಳು. ಇಂದು 12.30 ಪಿಎಮ್ ಕ್ಕೆ ಮೃತಝರೀನಾ ಇವಳು ತನ್ನತಮ್ಮನಾದ ಆಸೀಫ ಈತನಿಗೆ ಫೋನ ಮಾಡಿ ನನ್ನಗಂಡ ಹಾಗು ಅತ್ತೆಮಾವ, ನಾದಿನಿ ಹಾಗು ಮೈದುನ ವರದಕ್ಷಣೆತರುವ ವಿಷಯದಲ್ಲಿ ನನಗೆ ಹೊಡೆಯುತ್ತಿದ್ದಾರೆ. ನೀನು ಬೇಗ ಬಂದುಕರೆದುಕೊಂಡು ಹೋಗು ಇಲ್ಲದಿದ್ದರೆ ನನಗೆ ಸಾಯಿಸುತ್ತಾರೆಅಂತ ಫೋನ ಮಾಡಿದ್ದಳು. ನಂತರ 4.30 ಪಿಎಮ್ ಸುಮಾರಿಗೆ ಮೃತಳ ಮೈದುನ ಶರೀಫಈತನು ನಮಗೆ ಫೋನ ಮಾಡಿ ನಿಮ್ಮ ಮಗಳು ಸೀರಿಯಸ್ ಇದ್ದಾಳೆ ಶಹಾಪೂರದ ಸ್ಪಂದನಾಆಸ್ಪತ್ರೆಗೆ ಬನ್ನಿ ಅಂತ ತಿಳಿಸಿದ್ದರಿಂದ ನಾವು ಅಲ್ಲಿಗೆ ಹೋಗಿ ನೋಡಲಾಗಿ ನಮ್ಮ ಮಗಳು ಮೃತಪಟ್ಟಿದ್ದಳು. ಸದರಿ ನನ್ನ ಮಗಳಿಗೆ ಆರೋಪಿತರೆಲ್ಲರೂ ಸೇರಿ ವರದಕ್ಷಣೆಗಾಗಿಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದುಅವರ ಮೇಲೆ ಕಾನೂನು ಕ್ರಮಜರುಗಿಸಬೇಕುಅಂತಅಜರ್ಿಯ ಸಾರಾಂಶವಿರುತ್ತದೆ.

ಇತ್ತೀಚಿನ ನವೀಕರಣ​ : 23-06-2021 01:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080