ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 23-06-2022
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 109/2022 ಕಲಂ 279, 337, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯ ಆಕ್ಟ: ಇಂದು ದಿನಾಂಕ: 22/06/2022 ರಂದು 2.00 ಪಿ.ಎಂ.ಕ್ಕೆ ಶ್ರೀಮತಿ ಬಸಮ್ಮ ಗಂ/ ಶಿವಣ್ಣ ಪೂಜಾರಿ, ಸಾ|| ಅಣಬಿ, ರವರು ಇಂದು ಠಾಣೆಗೆ ಹಾಜರಾಗಿ ಒಂದು ಗಣಕೀಕರಿಸಿದ ದೂರು ಅಜರ್ಿಯನ್ನು ಸಲ್ಲಿಸಿದ್ದು, ಸದರಿ ಫಿಯರ್ಾದಿ ಸಾರಾಂಶ ಏನೆಂದರೆ, ನಾಳೆ ದಿನಾಂಕ: 23/06/2022 ರಂದು ನಮ್ಮೂರಲ್ಲಿ ಕಟ್ಟಿಸಿದ ನಮ್ಮ ಹೊಸ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಇದ್ದುದ್ದರಿಂದ ನಾನು ಮತ್ತು ನನ್ನ ಗಂಡ ಶಿವಣ್ಣ ತಂ/ ಸಿದ್ದಪ್ಪ ಪೂಜಾರಿ, ಮಗಳು ಸುನಂದಾ ಗಂ/ ಯಂಕೋಬ ಅಂಗಡಿ ಸಾ|| ವಾಗಣಗೇರಾ 3 ಜನರು ಕೂಡಿ ಸಂತೆ ಮಾಡಿಕೊಂಡು ಬಂದರಾಯಿತು ಅಂತಾ ಇಂದು ದಿನಾಂಕ: 22/06/2022 ರಂದು 11.45 ಎ.ಎಂ. ಸುಮಾರಿಗೆ ನಮ್ಮೂರ ಬಸ್ ನಿಲ್ದಾಣಕ್ಕೆ ಬಂದು ಶಹಾಪೂರಕ್ಕೆ ಹೊರಟಿದ್ದ ನಮ್ಮೂರ ಲಾಲ್ಸಾಬ ತಂ/ ರುಕುಂಸಾಬ ಗಾಣಿಗೇರ, ಈತನ ಟಂ.ಟಂ ಅಟೋ ನಂಬರ ಕೆಎ-33/8938 ರಲ್ಲಿ ಕುಳಿತುಕೊಂಡು ಶಹಾಪೂರಕ್ಕೆ ಹೊರಟೆವು. ಶಿರವಾಳ, ಮಡ್ನಾಳ ಮಾರ್ಗವಾಗಿ ಅಟೋದಲ್ಲಿ ಹೊರಟಿದ್ದಾಗ ಅಟೋ ಚಾಲಕ ಲಾಲ್ಸಾಬನು ಅಟೋವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟಿದ್ದನ್ನು ನೋಡಿ ನಾನು ಲಾಲ್ಸಾಬನಿಗೆ ನಿಧಾನವಾಗಿ ನಡೆಸು ಅಂತಾ ಹೇಳಿದರೂ ಕೂಡಾ ಕೇಳದೆ 12.30 ಪಿ.ಎಂ. ಸುಮಾರಿಗೆ ಲಾಲಸಾಬನು ಅಟೋವನ್ನು ಅತಿವೇಗವಾಗಿ ನಡೆಸಿಕೊಂಡು ಹೋಗುತ್ತಾ ಶಿರವಾಳ-ಹಳಿಸಗರ ಮುಖ್ಯ ರಸ್ತೆಯಲ್ಲಿ ಹಳಿಸಗರದ ಪರಮಾನಂದ ಸಿಮೇಂಟ್ ಅಂಗಡಿಯ ಮುಂದೆ ರೋಡಿನಲ್ಲಿರುವ ಬ್ರಿಡ್ಜ ಹತ್ತಿರ ಇದ್ದಾಗ ಎದುರನಿಂದ ಬಂದ ಒಂದು ವಾಹನಕ್ಕೆ ಸೈಡ್ ಕೊಡಲು ಹೋಗಿ ಒಮ್ಮೆಲೆ ಎಡಕ್ಕೆ ಕಟ್ ಮಾಡಿದಾಗ ಅಟೋ ಪಲ್ಟಿಯಾಗಿ ಬಿದ್ದಿದ್ದ ಪರಿಣಾಮ ಅಪಘಾತದಲ್ಲಿ ನನ್ನ ಗಂಡ ಶಿವಣ್ಣನವರ ಬಾಯಿಯ ಎಡ ಸೈಡಿಗೆ ಭಾರೀ ರಕ್ತಗಾಯವಾಗಿ ಬಾಯಿ ಹರಿದಿರುತ್ತದೆ, ತಲೆಯ ಹಿಂದೆ ಬಲಭಾಗದಲ್ಲಿ ಭಾರೀ ರಕ್ತಗಾಯ, ಬಲಗೈ ಮೊಳಕೈ ಕೆಳಗೆ ಭಾರೀ ರಕ್ತಗಾಯ, ಮುಂಗೈಗೆ ತರಚಿದ ಗಾಯ, ಎರಡೂ ಮೊಳಕಾಲಿಗೆ ತರಚಿದಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅಪಘಾತದಲ್ಲಿ ನನಗೆ ತಲೆಗೆ, ಬಲ ಮೆಲಕಿಗೆ ಒಳಪೆಟ್ಟು, ಬಲ ಕಿವಿಗೆ ರಕ್ತಗಾಯ, ಬಾಯಿಗೆ ರಕ್ತಗಾಯರುತ್ತದೆ. ಅಪಘಾತಪಡಿಸಿ ಟಂ. ಟಂ ಚಾಲಕ ಲಾಲ್ಸಾಬನು ತನ್ನ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ.
ಕಾರಣ ರಸ್ತೆ ಅಪಘಾತಪಡಿಸಿ ನನ್ನ ಗಂಡ ಶಿವಣ್ಣ ತಂ/ ಸಿದ್ದಪ್ಪ ಪೂಜಾರಿ, ಸಾ|| ಅಣಬಿ ರವರ ಸಾವಿಗೆ ಕಾರಣನಾದ ಟಂ.ಟಂ. ಅಟೋ ನಂ. ಕೆಎ-33/8938 ನೇದ್ದರ ಚಾಲಕ ಲಾಲ್ಸಾಬ ತಂ/ ರುಕುಂಸಾಬ ಗಾಣಿಗೇರ, ಸಾ|| ಅಣಬಿ ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.109/2022 ಕಲಂ 279, 337, 304(ಎ) ಐಪಿಸಿ ಸಂಗಡ 187 ಐ.ಎಂ.ವಿ ಯ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 94/2022 ಕಲಂ 379 ಐಪಿಸಿ : ಇಂದು ದಿನಾಂಕ: 22-06-2022 ರಂದು ಸಾಯಂಕಾಲ 04-30 ಗಂಟೆಗೆ ಶ್ರೀಮತಿ ಮಂಜುಳಾ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಬಂದಳ್ಳಿ ಗ್ರಾಮದ ಹಳ್ಳದ ಪಕ್ಕದಲ್ಲಿ ಅನಧಿಕೃತವಾಗಿ ಸಂಗ್ರಹ ಮಾಡಿದ ಮರಳನ್ನು ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆಯೊಂದಿಗೆ ವರದಿಯನ್ನು ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಮತ್ತು ವರದಿಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.94/2022 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 75/2022 ಕಲಂ 363, 366, 109 ಐಪಿಸಿ : ಇಂದು ದಿನಾಂಕ 22.06.2022 ರಂದು ಮಧ್ಯಾಹ್ನ 12.30 ಗಂಟೆಗೆ ನಾಗಮ್ಮ ಗಂಡ ಶರಣಪ್ಪ ಶೇಖಸಿಂದಿ, ವ|| 35 ವರ್ಷ, ಜಾ|| ಕಬ್ಬಲಿಗ, ಉ|| ಹೊಲಮನೆಕೆಲಸ, ಸಾ|| ರಾಂಪೂರ (ಕೆ) ಗ್ರಾಮ, ತಾ||ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಸಲ್ಲಿಸಿದ ಲಿಖಿತ ದೂರಿನ ಸಾರಾಂಶವೇನೆಂದರೆ, ನನಗೆ ಭಾರತಿ 14 ವರ್ಷ, ಮಲ್ಲೇಶ 10 ವರ್ಷ ಅಂತಾ ಒಂದು ಹೆಣ್ಣು ಒಂದು ಗಂಡು ಇಬ್ಬರು ಮಕ್ಕಳಿದ್ದಾರೆ. ನನ್ನಮಗಳು ಕುಮಾರಿ ಭಾರತಿ ಸ್ಟೇಷನ್ ಸೈದಾಪೂರದ ವಾಸವಿ ಶಾಲೆಯಲ್ಲಿ 8ನೇ ತರಗತಿವರೆಗೆ ವಿಧ್ಯಾಭ್ಯಾಸ ಮಾಡಿದ್ದಾಳೆ. ಈ ವರ್ಷ ಶಾಲೆಗೆ ಹೋಗದೆ ಮನೆಯಲ್ಲಿದ್ದಳು. ಹೀಗಿದ್ದು ದಿನಾಂಕ 20.06.2022 ರಂದು ನಾವು ಮನೆ ಮಂದೆಲ್ಲ ರಾತ್ರಿ ಊಟಮಾಡಿದ ನಂತರ ಎಂದಿನಂತೆ ನಮ್ಮಿಬ್ಬರ ಮಕ್ಕಳು ಆದಿನ ರಾತ್ರಿ 10.30 ಗಂಟೆ ಸುಮಾರಿಗೆ ನಮ್ಮ ಮನೆಯ ಎದುರುಗಡೆಯಿದ್ದ ನನ್ನತವರು ಮನೆಯ ಮ್ಯಾಳಿಗೆ ಮೇಲೆ ಮಲಗಲು ಹೋಗಿದ್ದರು. ಮರುದಿನ ಬೆಳಿಗ್ಗೆ 7 ಗಂಟೆಯಾದರೂ ಸಹ ನನ್ನಮಗಳು ಭಾರತಿ ಮನೆಗೆ ಬರಲಿಲ್ಲ. ಇನ್ನು ಮಲಗಿರಬಹುದು ಅಂತಾ ನಾನು ನನ್ನತವರು ಮನೆಯ ಮ್ಯಾಳಿಗೆ ಮೇಲೆ ಹೋಗಿ ನೋಡಿದ್ದೆ ನನ್ನಮಗಳು ಇರಲಿಲ್ಲ. ನನ್ನತವರು ಮನೆಯಲ್ಲಿ ವಿಚಾರಿಸಿದ ನಂತರ ನನ್ನ ಮನೆಗೆ ಬಂದು ನನ್ನಮಗ ಮಲ್ಲೇಶನಿಗೆ ಅಕ್ಕ ಎಲ್ಲಿ ಅಂತಾ ಕೇಳಿದಾಗ ತಾನು ಹೇಳುವ ಪೂರ್ವದಲ್ಲೇ ಭಾರತಿ ಮ್ಯಾಳಿಗೆ ಮೇಲೆ ಇರಲಿಲ್ಲ ಮನೆಗೆ ಹೋಗಿರಬಹುದು ಅಂತಾ ನನ್ನಪಾಡಿಗೆ ನಾನು ಮನೆಗೆ ಬಂದೆ ಅಂತಾ ತಿಳಿಸಿದ್ದ. ಈ ವಿಷಯ ನನ್ನಗಂಡನಿಗೆ ಮತ್ತು ನನ್ನತವರು ಮನೆಯವರಿಗೆ ಹಾಗೂ ನಮ್ಮ ಸಂಬಂಧಿಕರಿಗೆ ತಿಳಿಸಿ ಊರಲ್ಲಿ ಮತ್ತು ನೆಂಟರಿಷ್ಟರಲ್ಲಿ ಹುಡುಕಾಡಿದರೂ ಸಹ ನನ್ನಮಗಳು ಸಿಗಲಿಲ್ಲ. ನಮ್ಮ ಸಂಬಂಧಿಕರಿಗೆ ಫೋನ್ಮಾಡಿ ವಿಚಾರಿಸಿದರು ನನ್ನಮಗಳ ಸುಳಿವು ಸಿಕ್ಕಿಲ್ಲ. ನನ್ನಮಗ ಮಲ್ಲೇಶ ನಿನ್ನೆ ಸಾಯಂಕಾಲ ನಮಗೆ ತಿಳಿಸಿದ್ದೇನೆಂದರೆ, ನನ್ನಮಗಳು ಭಾರತಿ ಇವಳ ಸಂಗಡ ನಮ್ಮೂರಿನ ಕಟ್ಟಿಮನಿ ಅಂಬ್ರೇಶ ಹಲವಾರು ಸಲ ಮಾತನಾಡುವಾಗ ನಾನು ನೋಡಿದ್ದೇನೆ ಅಂತಾ ತಿಳಿಸಿದ. ಅದಕ್ಕೆ ನಾವು ಅಂಬ್ರೇಶನ ಅಣ್ಣನಾದ ಆಂಜನೇಯ ತಂದೆ ರಾಯಪ್ಪ ಕಟ್ಟಿಮನಿ ಈತನಿಗೆ ನಿನ್ನತಮ್ಮ ನಮ್ಮ ಹುಡುಗಿಯನ್ನು ಕರೆದುಕೊಂಡು ಹೋದಂತೆ ಕಾಣುತ್ತದೆ ನಿನ್ನ ತಮ್ಮನಿಗೆ ಫೋನ್ಮಾಡಿ ಹೇಳು ನಮ್ಮ ಹುಡುಗಿಯನ್ನು ತಂದು ಬಿಡುವಂತೆ ಎಂದು ಹೇಳಿದೆವು. ಅದಕ್ಕೆ ಆಂಜನೇಯ ಹುಡುಗ ಹುಡುಗಿ ಇಬ್ಬರೂ ಲವ್ ಮಾಡಿದ್ದರಿಂದ ಇಬ್ಬರೂ ಕೂಡಿ ಹೋಗಿರಬಹುದು ನಾನ್ಯಾಕ ಕರೆಸಲಿ ಅಂತಾ ಹೇಳಿದ. ಅದಕ್ಕೆ ನಾವು ನಮ್ಮ ಹುಡುಗಿ ಭಾರತಿ 14 ವರ್ಷ ಪ್ರಾಯದವಳಿದ್ದಾಳೆ ಅವಳಿಗೆ ಇನ್ನೂ ಮದುವೆ ಮಾಡುವ ವಯಸ್ಸಾಗಿಲ್ಲ ಅಂತಾ ತಿಳಿಸಿ ಹೇಳಿದರೂ ಸಹ ಆಂಜನೇಯ ಅದೆಲ್ಲ ನನಗೆ ಗೊತ್ತಿಲ್ಲ ನೀವು ಏನ್ ಮಾಡ್ಕೊಳ್ತಿರಿ ಮಾಡಿಕೊಳ್ಳಿ ಅಂತಾ ಹೇಳಿ ಹೋದ. ಮದುವೆ ಮಾಡುವ ವಯಸಿಲ್ಲದ ನನ್ನಮಗಳು ಭಾರತಿ ತಂದೆ ಶರಣಪ್ಪ ಶೇಖಸಿಂದಿ, ವ|| 14 ವರ್ಷ, ಜಾ|| ಕಬ್ಬಲಿಗ, ಉ|| ವಿಧ್ಯಾಥರ್ಿ ಇವಳಿಗೆ ನಮ್ಮೂರಿನ ಅಂಬ್ರೇಶ ತಂದೆ ರಾಯಪ್ಪ ಕಟ್ಟಿಮನಿ, ವ|| 24 ವರ್ಷ, ಜಾ|| ಕಬ್ಬಲಿಗ, ಉ|| ಕೂಲಿಕೆಲಸ ಈತನು ಪ್ರೀತಿ, ಪ್ರೇಮ ಅಂತಾ ಪುಸ್ಲಾಯಿಸಿ ನನ್ನಮಗಳಿಗೆ ದಿನಾಂಕ 20.06.2022 ರಂದು ರಾತ್ರಿ 10.30 ಗಂಟೆಯಿಂದ ಮರುದಿನ ಬೆಳಿಗ್ಗೆ 7 ಗಂಟೆಯ ಮಧ್ಯದ ಅವಧಿಯಲ್ಲಿ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ನನ್ನಮಗಳನ್ನು ಅಂಬ್ರೇಶ ಅಪಹರಣ ಮಾಡಿಕೊಂಡು ಹೋಗಲು ಅವನ ಅಣ್ಣ ಆಂಜನೇಯ ತಂದೆ ರಾಯಪ್ಪ ಕಟ್ಟಿಮನಿ, 30 ವರ್ಷ ಈತನ ಪ್ರಚೋದನೆ ಇದೆ. ನನ್ನಮಗಳಿಗೆ ಎರಡು ದಿನ ಹುಡುಕಾಡಿದ್ದರಿಂದ ದೂರು ನೀಡಲು ತಡವಾಗಿರುತ್ತದೆ. ಕಾರಣ ಮೇಲ್ಕಂಡ ಅಂಬ್ರೇಶ, ಆಂಜನೇಯ ಇವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೋರಿದೆ ಅಂತಾ ಆಪಾದನೆ.
ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 74/2022 ಕಲಂ: 341, 504, 506 ಸಂ. 34 ಐಪಿಸಿ:ದಿನಾಂಕ 22/06/2022 ರಂದು 06.30 ಪಿಎಮ್ಕ್ಕೆ ಶ್ರೀ, ಅಬ್ದುಲ್ ರಸೂಲ ತಂದೆ ದಸ್ತಗಿರಿಸಾಬ ಚೋರಗಸ್ತಿ ವ: 53 ವರ್ಷ ಜಾತಿ: ಮುಸ್ಲಿಂ ಉ: ಕೆಕೆಆರ್ ಟಿಸಿ ಚಾಲಕ ಬಿಲ್ಲೆ ಸಂಖ್ಯೆ-5848 ಸಾ: ನಾಯ್ಕಲ್ ತಾ:ವಡಗೇರಾ, ರವರು ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿದ್ದು ಸಾರಾಂಶವೇನಂದರೆ, ನಾನು ಯಾದಗಿರಿ ಬಸ್ ಡಿಪೋದಲ್ಲಿ ಸುಮಾರು 30 ವರ್ಷಗಳಿಂದ ಡ್ರೈವರ್ ಕೆಲಸ ಮಾಡಿಕೊಂಡು ಇರುತ್ತೇನೆ. ನನಗೂ ಮತ್ತು ನಮ್ಮ ಡಿಪೋದಲ್ಲಿ ಕೆಲಸ ಮಾಡುವ ಅಧಿಕಾರಿಗಳಾದ ಅಯ್ಯಣಗೌಡ ಎಟಿಎಸ್ ಮತ್ತು ನಿಜಪ್ಪ ಎಟಿಎಸ್ ಇವರು ಆಗಾಗ ನನ್ನೊಂದಿಗೆ ಕರ್ತವ್ಯದ ವಿಷಯದಲ್ಲಿ ತಕರಾರು ಮಾಡುತಿದ್ದರು, ಹೀಗಿದ್ದು ದಿನಾಂಕ 21/06/2022 ರಂದು ಸಾಯಂಕಾಲ 05.00 ಗಂಟೆಯ ಸುಮಾರಿಗೆ ವರ್ಕಶಾಪ್ದಿಂದ ಓಪನ್ ಬಸ್ (ಸರಕು ಸಾಮಾಗ್ರಿಗಳನ್ನು ಸಾಗಾಟ ಮಾಡುವ) ಬಸ್ ತೆಗೆದುಕೊಂಡು ಬಸ್ನ ಬಿಡಿಭಾಗದ ಸಾಮಾಗ್ರಿಗಳನ್ನು ತೆಗೆದುಕೊಂಡು ಬಸ್ ಡಿಪೋಕ್ಕೆ ಸಾಯಂಕಾಲ 05.30 ಗಂಟೆಗೆ ಬಂದಾಗ ಅಲ್ಲಿ ಕರ್ತವ್ಯದ ಮೇಲಿದ್ದ ಶಿವಕುಮಾರ ಸ್ವಾಮಿ ಟಿಐ ರವರಿಗೆ ನಾಳೆ ಕರ್ತವ್ಯದ ಬಗ್ಗೆ ಕೇಳುತ್ತಿದ್ದಾಗ ಆ ಸಮಯದಲ್ಲಿ ಅಲ್ಲಿಯೇ ಇದ್ದ ಶ್ರೀ ಅಯ್ಯಣಗೌಡ ಎಟಿಎಸ್ ರವರು ನನ್ನ ಹತ್ತಿರ ಬಂದು ವಿನಾ ಕಾರಣ ನನ್ನೊಂದಿಗೆ ಜಗಳ ತೆಗೆದು ನನಗೆ ತಡೆದು ಲೇ ಬೋಸಡಿ ಮಗನೆ ಏನ್ ಡ್ಯೂಟಿ ಕೇಳುತ್ತೀಯಾ ಮಗನೆ ನಿನೇನು ಬಾರಿ ಕೆಲಸ ಮಾಡುತ್ತೀಯ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಒದರಾಡುತ್ತಿದ್ದು ಆಗ ನಾನು ಹಿಗೇಕೆ ಬೈಯ್ದಾಡುತ್ತಿದ್ದೀರಾ ಅಂತಾ ಪ್ರಶ್ನಿಸಿದ್ದಕ್ಕೆ ಅಲ್ಲಿಯೇ ಇದ್ದ ಇನ್ನೊಬ್ಬ ಎಟಿಎಸ್ ರವರಾದ ನಿಜಪ್ಪ ಇವರು ಸಹ ನನ್ನ ಹತ್ತಿರಕ್ಕೆ ಬಂದು ಲೇ ನಾವು ಅಧಿಕಾರಿಗಳು ನಮ್ಮನ್ನು ಎದುರು ಹಾಕಿಕೊಂಡು ನೀನು ಹೇಗೆ ಕೆಲಸ ಮಾಡುತ್ತೀಯಾ ನಾಳೆಯಿಂದ ನಾನು ಚೆಕ್ಕಿಂಗ ಬಂದಾಗ ನಿನಗೆ ನೋಡಿಕೊಳ್ಳುತ್ತೇವೆ ನಮಗೆ ಎದುರಾದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಧಮಕಿ ಹಾಕಿದ್ದು. ಆಗ ಅಲ್ಲಿಯೇ ಇದ್ದ ಶಿವಕುಮಾರ ಸ್ವಾಮಿ, ನಾಗರೆಡ್ಡಿ ಬುಕಿಂಗ್ ಅಧಿಕಾರಿ ಹಾಗೂ ಭದ್ರತಾ ಸಿಬ್ಬಂದಿಯಾದ ಶ್ರೀನಿವಾಸ ಇವರುಗಳು ಮದ್ಯಸ್ಥಿಕೆ ವಹಿಸಿ ನಮಗೆ ಬುದ್ದಿವಾದ ಹೇಳಿದ್ದು ಮೇಲ್ಕಂಡ ಎಟಿಎಸ್ ಅಧಿಕಾರಿಗಳು ನನಗೆ ಇನ್ನು ಮುಂದೆ ನಮ್ಮ ಕೈಯಲ್ಲಿ ಹೇಗೆ ಕೆಲಸ ಮಾಡುತ್ತೀಯಾ ಅಂತಾ ಹೇಳಿ ಅಲ್ಲಿಂದ ತೆರಳಿದ್ದು ಇರುತ್ತದೆ. ಕಾರಣ ನನಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈಯ್ದು ನೀನು ನಮ್ಮ ಕೈಯಲ್ಲಿ ಹೇಗೆ ಕೆಲಸ ಮಾಡುತ್ತೀಯಾ ಅಂತಾ ಜೀವದ ಬೆದರಿಕೆ ಹಾಕಿದ ಅಯ್ಯಣಗೌಡ ಎಟಿಎಸ್ ಹಾಗೂ ನಿಜಪ್ಪ ಎಟಿಎಸ್ ಇವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ, ನಾನು ನಮ್ಮ ಕುಟುಂಬದವರೊಂದಿಗೆ ವಿಚಾರಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 74/2022 ಕಲಂ 341, 504, 506 ಸಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿರುತ್ತೇನೆ.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 101/2022 ಕಲಂ: 279, 338 ಐಪಿಸಿ: ಇಂದು ದಿ: 22/06/2022 ರಂದು 6.30 ಪಿ.ಎಮ್ಕ್ಕೆ ಶ್ರೀ ಬಲವಂತ ತಂದೆ ನಾಗಪ್ಪ ಹಾದಿಮನಿ ವ|| 35 ವರ್ಷ ಜಾ|| ಮೇದಾರ ಉ|| ಗೌಂಡಿಕೆಲಸ ಸಾ|| ಮೇದಾಗಲ್ಲಿ ಸುರಪುರ ತಾ|| ಸುರಪೂರ ಇದ್ದು, ತಮ್ಮಲ್ಲಿ ದೂರು ಅಜರ್ಿ ಸಲ್ಲಿಸುವದೆನೆಂದರೆ, ನಾನು, ನಮ್ಮ ತಂದೆಯಾದ ನಾಗಪ್ಪ ತಂದೆ ನಿಂಗಪ್ಪ ಹಾದಿಮನಿ ವಯಸ್ಸು|| 65 ಹಾಗೂ ನಮ್ಮ ತಮ್ಮನಾದ ಶ್ಯಾಮಣ್ಣ ಮೂವರು ಸುರಪುರದಲ್ಲಿ ಗೌಂಡಿಕೆಲಸ ಮಾಡಿಕೊಂಡು ಇರುತ್ತೇವೆ. ಹೀಗಿದ್ದು ದಿನಾಂಕ: 17/06/2022 ರಂದು ಬೆಳಿಗ್ಗೆ ನಾನು, ನಮ್ಮ ತಮ್ಮ ಹಾಗೂ ನಮ್ಮ ತಂದೆ ಮೂವರು ಕೂಡಿ ಸುರಪುರದ ಜಿ.ಕೆ ವೆಂಕಟೇಶ ಇವರ ಮನೆಯ ಹತ್ತಿರ ಇರುವ ನಾಗೇಶ ಇವರ ಮನೆಯ ಕೆಲಸಕ್ಕೆ ಬಂದಿದ್ದೆವು. ನಾವೆಲ್ಲರು ಕೆಲಸ ಮಾಡುತ್ತಿರುವಾಗ ನಮ್ಮ ತಂದೆಯಾದ ನಾಗಪ್ಪ ಇವರು ನನಗೆ ಮೂತ್ರ ವಿಸರ್ಜನೆ ಬಂದಿದೆ ನಾನು ಮೂತ್ರವಿಸರ್ಜನೆ ಮಾಡಿ ಬರುತ್ತೇನೆ ಅಂತ ಹೇಳಿ ಹೋದನು. ನಮ್ಮ ತಂದೆಯು ಸುರಪುರ-ಶಹಾಪುರ ಮುಖ್ಯ ರಸ್ತೆಯ ಆಚೆಯ ದಂಡಿಗೆ ಹೋಗಿ ಮೂತ್ರವಿಸರ್ಜನೆ ಮಾಡಿ ಪುನಃ ವಾಪಸ್ಸು ಬರುವಾಗ ಮದ್ಯಾಹ್ನ 4 ಗಂಟೆ ಸುಮಾರಿಗೆ ಸುರಪುರ ಕಡೆಯಿಂದ ಒಂದು ಬಿಳಿ ಬಣ್ಣದ ಕಾರ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡಿನ ದಂಡೆಯ ಮೇಲೆ ಬರುತ್ತಿದ್ದ ನಮ್ಮ ತಂದೆಗೆ ಡಿಕ್ಕಿಪಡಿಸಿದಾಗ ನಮ್ಮ ತಂದೆ ಕೆಳಗೆ ಬಿದ್ದನು. ಆಗ ಅಲ್ಲಿಯೇ ಇದ್ದ ನಾನು ಮತ್ತು ನಮ್ಮ ತಮ್ಮ ಶ್ಯಾಮಣ್ಣ ಇಬ್ಬರು ಕೂಡಿ ಹೋಗಿ ನೋಡಲಾಗಿ ನಮ್ಮ ತಂದೆಗೆ ಬಲಗೈ ಮುರಿದಂತಾಗಿ ಭಾರಿ ಒಳಪೆಟ್ಟಾಗಿದ್ದು, ಬಲಗಡೆ ಎದೆಗೆ ಭಾರಿ ಪೆಟ್ಟಾಗಿ ಗುಪ್ತಗಾಯವಾಗಿರುತ್ತದೆ. ಎಡಚಪ್ಪೆಗೆ ತರಚಿದ ರಕ್ತಗಾಯವಾಗಿರುತ್ತದೆ. ನಮ್ಮ ತಂದೆಗೆ ಡಿಕ್ಕಿಪಡಿಸಿದ ಕಾರ ಅಲ್ಲ್ಲಿಯೇ ನಿಂತಿದ್ದು ನಂಬರ ನೋಡಲಾಗಿ ಕೆಎ-33 ಎಮ್ 7571 ಅಂತ ಇದ್ದು, ಕಾರ್ ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಸಲೀಂಪಾಶಾ @ ಸಲೀಂಖಾಜಿ ತಂದೆ ಬಾಷುಮಿಯಾ ವಕೀಲರು ಸುರಪುರ ಅಂತ ಗೊತ್ತಾಯಿತು. ನಂತರ ನಾನು ಮತ್ತು ನಮ್ಮ ತಮ್ಮ ಶ್ಯಾಮಣ್ಣ ಇಬ್ಬರು ಕೂಡಿ ಒಂದು ಖಾಸಗಿ ವಾಹನದಲ್ಲಿ ನಮ್ಮ ತಂದೆಗೆ ಹಾಕಿಕೊಂಡು ಶಹಾಪುರದ ಸ್ಪಂದನ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ನಾನು ಇಲ್ಲಿಯವರೆಗೆ ಆಸ್ಪತ್ರೆಯಲ್ಲಿಯೇ ಇದ್ದು, ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ನಮ್ಮ ತಂದೆಗೆ ಅಪಘಾತ ಪಡಿಸಿದ ಕಾರ್ ನಂ. ಕೆಎ-33. ಎಮ್-7571 ನೇದ್ದರ ಚಾಲಕ ಸಲೀಂಪಾಶಾ @ ಸಲೀಂಖಾಜಿ ತಂದೆ ಬಾಷುಮಿಯಾ ವಕೀಲರು ಸುರಪುರ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.101/2022 ಕಲಂ:279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 107/2022 ಕಲಂ: 504, 506 ಐಪಿಸಿ: ಇಂದು ದಿನಾಂಕ 22.06.2022 ರಂದು 2.00 ಪಿ.ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಉಮೇಶರೆಡ್ಡಿ ತಂದೆ ಮಲ್ಲಿಕಾಜರ್ುನ ಜಾಲಿಬೆಂಚಿ ವ|| 26ವರ್ಷ ಜಾ|| ರೆಡ್ಡಿ ಉ|| ಖಾಸಗಿ ಕೆಲಸ ಸಾ|| ಕೆಂಭಾವಿ ಇವರು ಕೊಟ್ಟ ಅಜರ್ಿ ಸಾರಾಂಶವೇನೆಂದರೆ, ನಾನು 2ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಇದ್ದಾಗ ನನಗೆ ಆಕಸ್ಮಿಕವಾಗಿ ಪರಿಚಯವಾದ ಪವನ್ ತಂದೆ ಅರುಣ ದಾನಿ ಸಾ|| ಹುಬ್ಬಳ್ಳಿ ಈತನು ನನಗೆ ನಂಬಿಸಿ ಮೋಸ ಮಾಡಿ ನಂತರ ನಾನು ಕೆಂಭಾವಿಯಲ್ಲಿದ್ದಾಗ ಫೋನ್ ಮಾಡಿ ನನಗೆ ನೌಕರಿ ಕೊಡಿಸುವುದಾಗಿ ನಂಬಿಸಿ ನನ್ನ ಅಕೌಂಟಿನಿಂದ 22,89,129/- ರೂಪಾಯಿ ಹಣ ತನ್ನ ಅಕೌಂಟಿಗೆ ಹಾಕಿಸಿಕೊಂಡು ಮರಳಿ ನನಗೆ ಹಣ ಕೊಡದೇ ಮೋಸ ಮಾಡಿದ್ದರಿಂದ ನಾನು ದಿನಾಂಕ 22/02/2021 ರಂದು ಕೆಂಭಾವಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರಿಂದ ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ 27/2021 ಕಲಂ 406, 420, 506 ಸಂ 34 ಐಪಿಸಿ ನೇದ್ದು ದಾಖಲಾಗಿದ್ದು, ಪ್ರಕರಣ ದಾಖಲಾದಾಗಿನಿಂದ ಪವನ್ ಈತನು ನನಗೆ ಆಗಾಗ್ಗೆ ಕೆಂಭಾವಿಗೆ ಬಂದಾಗ ನೀನು ಕೇಸು ಮಾಡಿದರೇನಾಯ್ತು ನಿನ್ನ ಹಣ ಕೊಡಲ್ಲ. ನೀನು ಕೇಸು ವಾಪಸ್ ಪಡೆದುಕೊಂಡರೆ ಸರಿಯಾಗುತ್ತೆ ಇಲ್ಲವೆಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕುತ್ತಾ ಬಂದಿದ್ದು ಇರುತ್ತದೆ. ಅದರಂತೆ ದಿನಾಂಕ 12/06/2022 ರಂದು 2.00 ಪಿಎಂ ಸುಮಾರಿಗೆ ಪವನ್ ತಂದೆ ಅರುಣ ದಾನಿ ಸಾ|| ಹುಬ್ಬಳ್ಳಿ ಈತನು ಕೆಂಭಾವಿಗೆ ಬಂದು ನನಗೆ ಭೇಟಿಯಾಗಿ ನೀನು ಕೇಸು ಕೆಂಭಾವಿಯಲ್ಲಿ ಮಾಡಿರಬಹುದು ಆದರೆ ನಾನು ಜಾಮೀನು ಹುಬ್ಬಳ್ಳಿ ಕೋಟರ್ಿನಲ್ಲಿ ತೆಗೆದುಕೊಂಡಿದ್ದೇನೆ. ನನಗೆ ನೀನು ಏನೂ ಮಾಡಲು ಸಾಧ್ಯವಿಲ್ಲ. ನಿನ್ನ ಹಣ ಯಾವುದೇ ಕಾರಣಕ್ಕೂ ನಿನಗೆ ಕೊಡಲ್ಲ. ನೀನು ಇಂತಹ ಹತ್ತು ಕೇಸು ಮಾಡಿದರೂ ನಾನು ಅಂಜಲ್ಲ. ನೀನು ಸುಮ್ಮನೆ ಈ ಕೇಸು ವಾಪಸ್ ತೆಗೆದುಕೋ ಇಲ್ಲದಿದ್ದರೆ ನಿನಗೆ ಜೀವ ಸಹಿತ ಹೊಡೆಯುತ್ತೇನೆ ಅಂತಾ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾನೆ. ಈ ಬಗ್ಗೆ ಮನೆಯಲ್ಲಿ ವಿಚಾರಿಸಿಕೊಂಡು ನಾನು ತಡವಾಗಿ ಇಂದು ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ನನಗೆ ಮೋಸ ಮಾಡಿ ನನ್ನ ಅಕೌಂಟಿನಿಂದ ಹಣ ಹಾಕಿಸಿಕೊಂಡು ಮರಳಿ ನನಗೆ ಹಣ ಕೊಡದೇ ಇದ್ದುದರಿಂದ ಕೇಸು ಮಾಡಿದ್ದಕ್ಕೆ ನನಗೆ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಪವನ್ ತಂದೆ ಅರುಣ ದಾನಿ ಈತನ ಮೇಲೆ ಕ್ರಮ ಜರುಗಿಸಬೇಕು ಅಂತ ನೀಡಿದ ಅಜರ್ಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಪಿಸಿ 176 ರವರ ಮೂಲಕ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು 8.15 ಪಿಎಂ ಕ್ಕೆ ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 107/2022 ಕಲಂ 504, 506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 103/2022 ಕಲಂ 447, 323, 324, 504 506 ಸಂ 34 ಐಪಿಸಿ:ಸದರಿ ಪ್ರಕರಣದಲ್ಲಿ ಪಿರ್ಯಾದಿಯು ತಮ್ಮ ಜಮೀನು ನೋಡಲೇಂದು ಅಟೋವನ್ನು ತೆಗೆದುಕೊಂಡು ಹೋಗಿದ್ದು ತಮ್ಮ ಜಮೀನು ಸವರ್ೇ ನಂ:34/1 ರಲ್ಲಿ ತಮ್ಮ ಜಮೀನು ಪಾಲಿಗೆ ಮಾಡಿದ ಹಾಗೂ ಅಟೂ ಡ್ರೈವರ್ ನೊಂದಿಗೆ ತಮ್ಮ ಜಮೀನಿನಲ್ಲಿ ಇದ್ದಾಗ ಆರೋಪಿತರೆಲ್ಲರೂ ನೀಲಿ ಬಣ್ಣದ ಸೋನಾಲಿಕ್ ಟ್ಯಾಕ್ಟರ ನಂ:ಟಿಎಸ್-25 ಸಿ-8040 ನೇದ್ದನ್ನು ತೆಗೆದುಕೊಂಡು ಪಿರ್ಯಾಧಿಯ ಜಮೀನನ್ನು ಅತೀಕ್ರಮ ಪ್ರವೇಶ ಮಾಡಿ ಪಿರ್ಯಾಧಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈ ಮತ್ತು ಕಟ್ಟಿಗೆಯಿಂದ ಹೊಡೆಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ ವಗೈರೆ ಸಾರಾಂಶ ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 110/2020.ಕಲಂ, 498(ಎ) ,504,506ಸಂ, 34. ಐ.ಪಿ.ಸಿ.: ಇಂದು ದಿನಾಂಕ 22/06/2022 ರಂದು 20-35 ಗಂಟೆಗೆ ಸರಕಾರಿ ಆಸ್ಪತೆಯಿಂದ ಎಂ.ಎಲ್.ಸಿ.ಇದೆ ಅಂತ ಮಾಹಿತಿ ಬಂದಮೇರೆಗೆ ಆಸ್ಪತ್ರೆಗೆ 20-45 ಪಿ.ಎಂ.ಕ್ಕೆ ಹೋಗಿ ಉಪಚಾರ ಪಡೆಯುತ್ತಿದ್ದ ಶ್ರೀಮತಿ, ಮಂಜುಳಾ ಗಂಡ ಶೇಖಪ್ಪ ಸುರಪೂರ ವ|| 32 ಜಾ|| ಕಬ್ಬಲಿಗ ಉ|| ಟೇಲರ ಸಾ|| ಆಲ್ಯಾಳ ತಾ|| ಸುರಪೂರ ಹಾ||ವ|| ಜೀವೇಶ್ವರ ನಗರ ಶಹಾಫೂರ 9019999381. ಇವರ ಹೇಳಿಕೆಯನ್ನು 22-00 ಪಿ.ಎಂ ವರೆಗೆ ಪಡೆದುಕೊಂಡು ಮರಳಿ ಠಾಣೆಯಗೆ 22-20 ಪಿ.ಎಂ. ಕ್ಕೆ ಬಂದು ಸದರಿ ಹೇಳಿಕೆಯ ಸಾರಾಂಶವೆನೆಂದರೆ. ನನಗೆ ಸುಮಾರು 13 ವರ್ಷದ ಹಿಂದೆ ಹಾಲ್ಯಾಳ ಗ್ರಾಮ ಶೇಖಪ್ಪ ತಂದೆ ಹಣಮಂತ್ರಾಯ ಸುರಪೂರ ಈತನೊಂದಿಗೆ ನಮ್ಮ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ನಾನು ಮತ್ತು ನನ್ನ ಗಂಡನಾದ ಶೇಖಪ್ಪ ಇಬ್ಬರು ಸುಖವಾಗಿ ಸಂಸಾರ ಮಾಡಿಕೊಂಡು ಬಂದಿದ್ದು ಇರುತ್ತದೆ. ನಮಗೆ ಇಬ್ಬರು ಮಕ್ಕಳಿದ್ದು ಮೊದಲನೇ ಮಗಳಾದ ವಶರ್ಿಣಿ ಈಕೆಗೆ 10 ವರ್ಷ, ಎರಡನೆ ಮಗನಾದ ಮಹೇಶ ಈತನಿಗೆ 6 ವರ್ಷ ಇರುತ್ತದೆ ಸದ್ಯ ನಾನು ಗಬರ್ಿಣಿ ಇರುತ್ತೇನೆ.
ಹೀಗಿದ್ದು ನಾನು ಮತ್ತು ನನ್ನ ಗಂಡನಾದ ಶೇಖಪ್ಪ ತಂದೆ ಹಣಮಂತ್ರಾಯ ಇಬ್ಬರು ಉಪಜೀವನಕ್ಕಾಗಿ ಶಹಾಪೂರಕ್ಕೆ ಸುಮಾರು 1 ವರ್ಷ 6 ತಿಂಗಳ ಹಿಂದೆ ಬಂದು ನನ್ನ ಗಂಡ ಶೇಖಪ್ಪ ಈತನು ಎಗ್ಗ ರೈಸ ಬಂಡಿ ಇಟ್ಟುಕೊಂಡಿದ್ದನು. ನಾನು ಟೇಲರ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದು ಇರುತ್ತದೆ. ಇತ್ತಿಚೆಗೆ ನನ್ನ ಗಂಡನಾದ ಶೇಖಪ್ಪ ಈತನು ನನಗೆ ನಿನು ಸರಿಯಾಗಿಲ್ಲ ನಿನಗೆ ಅಡುಗೆ ಮಾಡಲು ಬರುವುದಿಲ್ಲಾ ನಿನು ನನಗೆ ತಕ್ಕ ಹೆಂಡತಿ ಅಲ್ಲಾ ಅಂತ ಕಿರುಕುಳ ಕೊಡುತ್ತಿದ್ದು. ನನಗೆ ಸೂಳಿ ಮಂಜಿ ನಿನ್ನ ನಡತೆ ಸರಿ ಇಲ್ಲಾ ಅಂತ ಅವಾಚ್ಯವಾಗಿ ಬೈಯುವದು ಮಾಡುತ್ತಿದ್ದನು, ಮತ್ತು ನನ್ನ ಮೈದುನರಾದ ಶರಣಪ್ಪ ತಂದೆ ಹಣಮಂತ್ರಾಯ ಸುರಪೂರ, ಯಂಕಪ್ಪ ತಂದೆ ಹಣಮಂತ್ರಾಯ ಸುರಪೂರ ಇವರು ಆಗಾಗ ಮನೆಗೆ ಬಂದಾಗ ನಿನು ನಮ್ಮ ಅಣ್ಣನಿಗೆ ತಕ್ಕ ಹೆಂಡತಿ ಅಲ್ಲ ನೀನು ಸರಿಯಾಗಿಲ್ಲಾ ಅಂತ ಕಿರುಕುಳ ಕೊಡುತ್ತಿದ್ದರು. ಆಗ ನನ್ನ ತಾಯಿಯಾದ ಬಾಗಮ್ಮ ಗಂಡ ಶಿವಪ್ಪ ಮೋಟಗಿ ಇವರು ನನ್ನ ಮನೆಗೆ ಬಂದಾಗ ನನ್ನ ಗಂಡ ನನ್ನ ಮೈದುನದರು ಕಿರುಕುಳ ಕೊಡುತ್ತಿದ್ದ ಬಗ್ಗೆ ನಾನು ತಿಳಿಸುತ್ತಿದೆನು. ಆಗ ನನ್ನ ತಾಯಿ ನಮಗೆ ಚೆನ್ನಾಗಿ ಸಂಸಾರ ಮಾಡಲು ಮತ್ತು ಚೆನ್ನಾಗಿ ಇರಲು ಬುದ್ದಿಮಾತು ಹೇಳುತ್ತಿದ್ದಳು. ನಾನು ಹೋಗಲಿ ಅಂತ ಸುಮ್ಮನಾಗಿ ನನ್ನ ಗಂಡನೊಂದಿಗೆ ಚೆನ್ನಾಗಿ ಸಂಸಾರ ಮಾಡಿಕೊಂಡು ಹೊಗುತ್ತಿದ್ದೆನು. ನನ್ನ ಗಂಡನು ಮತ್ತು ನನ್ನ ಮೈದುನದವರು ಕಿರುಕುಳ ಕೊಡುವುದು ಬಿಟ್ಟಿರಲಿಲ್ಲಾ. ಸುಮಾರು 2 ತಿಂಗಳಿಂದ ನನ್ನ ಗಂಡನು ನನಗೆ ಬಿಟ್ಟು ಹೋಗಿದ್ದನು. ಇಂದು ದಿನಾಂಕ 22/06/2022 ರಂದು ಸಾಯಂಕಾಲ ನಾನು ಮತ್ತು ನನ್ನ ತಾಯಿ ಬಾಗಮ್ಮ ಇಬ್ಬರು ಕುಂಬಾರ ಓಣಿಯ ಉಮಾ ಆಸ್ಪತ್ರೆಯ ಹತ್ತಿರ ಇದ್ದಾಗ ನನ್ನ ಗಂಡ ಶೇಖಪ್ಪ, ಮತ್ತು ನನ್ನ ಮೈದುನರವರಾದ ಶರಣಪ್ಪ ತಂದೆ ಹಣಮಂತ್ರಾಯ ಸುರಪೂರ, ಯಂಕಪ್ಪ ತಂದೆ ಹಣಮಂತ್ರಾಯ ಸುರಪೂರ ಇವರು ಬಂದು ನನಗೆ ನಿನು ಸರಿಯಾಗಿ ಇಲ್ಲಾ, ನಿನ್ನ ನಡತೆ ಸರಿಯಾಗಿಲ್ಲಾ ಬಾ ನ್ಯಾಯಮಾಡಬೆಕು ಅಂತ ಕರೆದರು ಆಗ ನಾನು ಸರಿ ಬರುತ್ತೇನೆ ಅಂತ ಹೇಳಿ ನಾನು ಮತ್ತು ನನ್ನ ತಾಯಿ ಬಾಗಮ್ಮ ಇಬ್ಬರು ಅವರೊಂದಿಗೆ ಹೋಗಿ ಬಸವೇಶ್ವರ ನಗರದ ಅಯ್ಯಣ್ಣ ಕನ್ಯಾಕೊಳ್ಳೂರ ಇವರ ಮನೆಯ ಹತ್ತಿರ ಸಾಯಂಕಾಲ 4-30 ಗಂಟೆಗೆ ಹೊದೆವು ಆಗ ನನ್ನ ಗಂಡ ಶೇಖಪ್ಪ ಮತ್ತು ನನ್ನ ಮೈದುನದವರಾದ ಶರಣಪ್ಪ, ಯಂಕಪ್ಪ, ಇವರು ನನಗೆ ಮಂಜಿ ಸೂಳಿ ನಿನಗೆ ಅಡುಗೆ ಮಾಡಲು ಬರುದಿಲ್ಲಾ ನಿನ್ನ ನಡತೆ ಸರಿ ಇಲ್ಲಾ ನಿನ್ನ ತವರು ಮನಿಗೆ ಹೋಗು ಇಲ್ಲಿ ಇರಬೇಡಾ ಇಲ್ಲಿ ಇದ್ದರೆ ನಿನ್ನ ಜೀವ ಸಹಿತ ಬಿಡುವುದಿಲ್ಲಾ ಅಂತ ಜೀವ ಬೆದರಿಕೆ ಹಾಕಿದರು. ಆಗ ನನ್ನ ತಾಯಿ ಅವರಿಗೆ ಈರಿತಿ ಮಾತನಾಡುವುದು ಸರಿ ಅಲ್ಲಾ ಅಂತ ಬುದ್ದಿಮಾಡು ಹೇಳಿದಳು. ಸದರಿ ಜಗಳವು 4-30 ಗಂಟೆಯ ಸುಮಾರಿಗೆ ಅಯ್ಯಣ್ಣ ಕನ್ಯಾಕೊಳ್ಳೂರ ಇವರ ಮನೆಯ ಹತ್ತಿರ ಜರುಗಿರುತ್ತದೆ. ಆಗ ನಾನು ಮತ್ತು ನನ್ನ ತಾಯಿ ನಮ್ಮ ಮನೆಗೆ ಬಂದೆವು ಸದರಿ ವಿಷಯವನ್ನು ನನ್ನ ಮನಸಿನ ಮೇಲೆ ತೆಗೆದುಕೊಂಡು ಮನನೊಂದು ಮನೆಯಲ್ಲಿ ಹೆನಿನ ಪುಡಿಯನ್ನು ಕುಡಿದಿರುತ್ತೇನೆ. ನಂತರ ನನ್ನ ತಾಯಿಗೆ ನಾನು ಹೇನಿನ ಪುಡಿಯನ್ನು ಕುಡಿರುತ್ತೇನೆ ಅಂತ ತಿಳಿಸಿದಾಗ ನನ್ನ ತಾಯಿ ಬಾಗಮ್ಮ ಇವಳು ನನಗೆ ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಉಪಚಾರ ಕುರಿತು ಸೇರಿಕೆ ಮಾಡಿದ್ದರಿಂದ ಉಪಚಾರ ಪಡೆಯುತ್ತಿದ್ದೆನೆ. ಕಾರಣ ನನಗೆ ವಿನಾಕಾರಣ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರಕುಳ ನೀಡಿ ಅವಾಚ್ಚ ಶಬ್ದಗಳಿಂದ ಬೈದು ಜೀವದ ಭಯ ಹಾಕಿದ ನನ್ನ ಗಂಡ ಶೇಖಪ್ಪ, ನನ್ನ ಮೈದುನರಾದ ಶರಣಪ್ಪ, ಯಂಕಪ್ಪ, ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೆಕು ಅಂತ ಹೇಳಿಕೆಯ ಸಾರಾಂಶದ ಮೆಲಿಂದ ಠಾಣೆಯ ಗುನ್ನೆ ನಂ 110/2022 ಕಲಂ 498(ಎ),504,506,ಸಂ, 34 ಐ,ಪಿ,ಸಿ, ನ್ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಗೆ ಕೈಕೊಂಡೆನು.