ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 23-07-2021
ಶೋರಾಪೂರ ಪೊಲೀಸ್ ಠಾಣೆ
122/2021 ಕಲಂ 279,337,338,304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆ್ಯಕ್ಟ್ : ದಿನಾಂಕ: 17/07/2021 ರಂದು 11:30 ಎ.ಎಮ್ ಕ್ಕೆ ಜಿ.ಜಿ.ಹೆಚ್ ಸುರಪೂರ ದಿಂದ ಎಮ್.ಎಲ್.ಸಿ ತಿಳಿಸಿದರಿಂದ ಶ್ರೀ ಪರಮೇಶ ಹೆಚ್ಸಿ-215 ರವರು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುದಾರನಾದ ಶ್ರೀ ದಶರಥ ತಂದೆ ಮಾನಪ್ಪ ಹುಡೇದವರ ಸಾ|| ಅರಳಹಳ್ಳಿ ತಾ|| ಸುರಪುರ ಇವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬಂದು ಗಾಯಾಳುವಿನ ಹೇಳಿಕೆ ಹಾಜರಪಡಿಸಿದ್ದರ ಸಾರಾಂಶವೆನಂದರೆ, ನನ್ನ ತಾಯಿ ಬಸಮ್ಮ ಗಂಡ ಮಾನಪ್ಪ ಹುಡೇದವರ ವ|| 50 ವರ್ಷ ಜಾ|| ಬೇಡರು ಉ|| ಮನೆಗೆಲಸ(ಗ್ರಾಮ ಪಂಚಾಯತ ಅದ್ಯಕ್ಷರು) ಇವರು ದೇವಾಪುರ ಗ್ರಾಮ ಪಂಚಾಯತಿ ಅದ್ಯಕ್ಷರಾಗಿರುತ್ತಾರೆ. ಇಂದು ದಿನಾಂಕ:17/07/2021 ರಂದು ಮುಂಜಾನೆ 11:00 ಗಂಟೆಗೆ ದೇವಾಪುರ ಗ್ರಾಮ ಪಂಚಾಯತಿಯಲ್ಲಿ ಪಂಚಾಯತ ಸದಸ್ಯರ ಸಾಮಾನ್ಯ ಸಭೆ ಇದ್ದ ಪ್ರಯುಕ್ತ ನಾನು ಮತ್ತು ನನ್ನ ತಾಯಿ ಇಬ್ಬರು ಕೂಡಿ ಮುಂಜಾನೆ 10:45 ಗಂಟೆಗೆ ಮನೆಯಿಂದ ಸಬೆಗೆ ಹಾಜರಾಗಲು ಹೊರಟಾಗ ಸುರಪುರ-ಲಿಂಗಸೂಗೂರು ಮುಖ್ಯ ರಸ್ತೆಯ ದೇವಾಪುರ ಸಣ್ಣ ಬ್ರೀಡ್ಜ ಹತ್ತಿರ ರೋಡಿನ ಮೇಲೆ ಅಂದಾಜು ಮುಂಜಾನೆ 11:00 ಗಂಟೆ ಸುಮಾರಿಗೆ ರೋಡಿನ ಎಡ ಬದಿಗೆ ನನ್ನ ಮೋಟರ್ ಸೈಕಲ್ ನಂ. ಕೆಎ-33 ಯು-1503 ನೇದ್ದು ಎದರುಗಡೆ ದನಗಳು ಬರುತಿದ್ದಾಗ ನಾನು ಮೋಟರ್ ಸೈಕಲ್ ನಿಲ್ಲಿಸಿದ್ದು ಎದರುಗಡಯಿಂದ ಬರುತ್ತಿದ್ದ ಒಂದು ಬಿಳಿ ಬಣ್ಣದ ನಾಲ್ಕು ಗಾಲಿಯ ವಾಹನ ಅತಿವೇಗ ಮತ್ತು ಅಲಕ್ಷತನದಿಂದ ನಡೆಸುಕೊಂಡು ಬಂದು ನನ್ನ ಮೋಟರ್ ಸೈಕಲ್ಗೆ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನಾನು ಮತ್ತು ನನ್ನ ತಾಯಿ ರೋಡಿನ ಮೇಲೆ ಬಿದ್ದೇವು. ನನಗೆ ಬಲಗೈ ಮೊಳಕೈ ಕೆಳಗೆ ಮತ್ತು ಹಸ್ತಕ್ಕೆ ರಕ್ತಗಾಯವಾಗಿದ್ದು ಹಾಗೂ ಎರಡು ಮೊಳಕಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ನನ್ನ ತಾಯಿಗೆ ನೋಡಲಾಗಿ ಎಡಗಡೆ ಮೇಲಕಿಗೆ, ಎಡಗಣ್ಣಿನ ಕೆಳಗೆ ಭಾರಿ ರಕ್ತಗಾಯ, ತಲೆಗೆ ಭಾರಿ ರಕ್ತಗಾಯ, ಮುಗಿನ ಮೇಲೆ ಮತ್ತು ನಾಲಿಗೆಗೆ ರಕ್ತಗಾಯವಾರುತ್ತದೆ. ನನ್ನ ತಾಯಿ ಮಾತನಾಡು ಸ್ಥಿತಿಯಲ್ಲಿ ಇರಲಿಲ್ಲ. ವಾಹನದ ಚಾಲಕನು ನಮ್ಮ ಕಡೆ ತಿರುಗಿ ನೋಡುತ್ತಾ ತನ್ನ ವಾಹನ ತಗೆದುಕೊಂಡು ಹೊದನು. ವಾಹನದ ಚಾಲಕನಿಗೆ ಮತ್ತೊಮ್ಮೆ ನೋಡಿದರೆ ಗುರುತಿಸುತ್ತೆನೆ. ನಮ್ಮ ಹಿಂದೆ ಹೊರಟಿದ್ದ ನಮ್ಮೂರಿನ ಗ್ರಾಮ ಪಂಚಾಯತ ಸದಸ್ಯನಾದ ಯಮನಪ್ಪ ತಂದೆ ಮಲ್ಲಪ್ಪ ಮ್ಯಾಗೇರಿ ಮತ್ತು ಚನ್ನಪ್ಪ ತಂದೆ ಜಂಬಯ್ಯ ಮೇಲಿನಮನಿ ಇವರುಗಳು ಬಂದು ನಮ್ಮನ್ನು ನೋಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸುರಪುರಕ್ಕೆ ತಂದು ಸೇರಿಕೆ ಮಾಡಿದರು. ಕಾರಣ ನನಗೆ ಮತ್ತು ನನ್ನ ತಾಯಿ ಬಸಮ್ಮಳಿಗೆ ಯಾವುದೋ ಒಂದು ಬಿಳಿ ಬಣ್ಣದ ನಾಲ್ಕು ಗಾಲಿಯ ವಾಹನ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಜೋರಾಗಿ ಡಿಕ್ಕಿ ಪಡಿಸಿ ವಾಹನ ನಿಲ್ಲಿಸಿದೆ ವಾಹನ ಸಮೇತ ಓಡಿದವನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ವಗೈರೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 122/2021 ಕಲಂ 279,337,338 ಐಪಿಸಿ ಮತ್ತು 187 ಐಎಂವಿ ಯ್ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿ ಭಾರಿಗಾಯ ಹೊಂದಿ ಹೆಚ್ಚಿನ ಚಿಕಿತ್ಸೆಗಾಗಿ ಯುನೈಟೆಡ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಬಸಮ್ಮ ಗಂಡ ಮಾನಪ್ಪ ಹುಡೇದವರ ಇವಳು ಚಿಕಿತ್ಸೆ ಫಲಕಾರಿಯಾಗದೇ ಅಪಘಾತದಲ್ಲಿ ಆಗಿರುವ ಗಾಯಗಳಿಂದಾಗಿ ಇಂದು ದಿನಾಂಕಃ 22/07/2021 ರಂದು 00-06 ಎ.ಎಮ್ ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಗ್ಗೆ 1-45 ಎ.ಎಮ್ ಕ್ಕೆ ಡೆತ್ ಎಮ್.ಎಲ್.ಸಿ ವಸೂಲಾಗಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ. 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ ಅಂತಾ ವಿನಂತಿ.
ಯಾದಗಿರ ನಗರ ಪೊಲೀಸ ಠಾಣೆ
ಗುನ್ನೆ ನಂ 78/2021 ಕಲಂ 457, 380 ಐಪಿಸಿ : ಫಿಯರ್ಾಧಿ ಸಾರಾಂಶವೇನೆಂದರೆ, ನಮ್ಮ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಹೇಮಲತಾ ಹಾಗೂ ಇಬ್ಬರು ಸಣ್ಣ ಮಕ್ಕಳು ಇರುತ್ತೇವೆ. ನಾನು ಹಾಗೂ ನನ್ನ ಹೆಂಡತಿ ಇಬ್ಬರು ಸಕರ್ಾರಿ ಆಸ್ಪತ್ರೆ ಯಾದಗಿರಿಯಲ್ಲಿ ಸ್ಟಾಪ್ನರ್ಸ್ ಅಂತಾ ಕೆಲಸ ಮಾಡುತ್ತೇವೆ. ನಿನ್ನೆ ದಿನಾಂಕ 21/007/2021 ರಂದು ನನ್ನದು ಹಾಗೂ ನನ್ನ ಹೆಂಡತಿಯದು ನೈಟ್ ಶಿಪ್ಟ್ ಡ್ಯೂಟಿ ಇರುವುದ್ದರಿಂದ ನಮ್ಮ ಇಬ್ಬರು ಮಕ್ಕಳನ್ನು ಪಕ್ಕದಲ್ಲಿ ಇರುವ ನಮ್ಮ ಸಂಬಂಧಿಕರ ಮನೆಯಲ್ಲಿ ಬಿಟ್ಟು ರಾತ್ರಿ 08-30 ಗಂಟೆಯ ಸುಮಾರಿಗೆ ನಮ್ಮ ಮನೆ ಬೀಗ ಹಾಕಿಕೊಂಡು ನಾನು & ನನ್ನ ಹೆಂಡತಿ ಇಬ್ಬರು ಡ್ಯೂಟಿಗೆ ಹೋದೆವು. ಹೀಗಿದ್ದು ಇಂದು ದಿನಾಂಕ 22/07/2021 ರಂದು ಬೆಳಿಗ್ಗೆ 05-30 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ಹೆಂಡತಿ ಇಬ್ಬರು ಡ್ಯೂಟಿ ಮುಗಿಸಿಕೊಂಡು ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆಗೆದಿದ್ದು, ಕೀಲಿ ಮುರಿದಿದ್ದು ಕಂಡು ಬಂತು. ಗಾಭರಿಯಾಗಿ ಮನೆ ಒಳಗೆ ಹೋಗಿ ನೋಡಿದಾಗ ಮನೆಯಲ್ಲಿಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಬೆಡ್ ರೂಮಿನ ಅಲಮರಿ ಮುರಿದು ತೆಗೆದಿದ್ದು ಕಂಡು ಬಂತು. ಏನು ಕಳುವಾಗಿದೆ ಅಂತಾ ಪರಿಶೀಲಿಸಿ ನೋಡಲಾಗಿ ಅಲಮರಿಯಲ್ಲಿ ಇದ್ದ 1] ಒಂದು 20. ಗ್ರಾಂ. ಬಂಗಾರದ ಚೈನ್, ಅ.ಕಿ 80,000/- ರೂ|| ಗಳು, 2] ಒಂದು 10. ಗ್ರಾಂ. ಬಂಗಾರದ ಚೈನ್, ಅ.ಕಿ 40,000/- ರೂ|| ಗಳು ಮತ್ತು 3] ನಗದು ಹಣ 25,000/- ರೂಪಾಯಿ ಕಾಣಲಿಲ್ಲ. ಇವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ನಾನು ಮನೆಯ ಪಕ್ಕದಲ್ಲಿ ಇದ್ದ ನಮ್ಮ ಸಂಬಂಧಿಯಾದ ಅನಂತಕುಮಾರ ತಂದೆ ವಿಜಕುಮಾರ ಹೊಸ್ಮನಿ, ಮತ್ತು ಧರ್ಮರಾಜ ತಂದೆ ವಿಜಕುಮಾರ ಹೊಸ್ಮನಿ ಇವರಿಗೆ ವಿಷಯ ತಿಳಿಸಿದಾಗ ಅವರು ಕೂಡ ಮನೆಗೆ ಬಂದು ನೋಡಿದರು. ಕಾರಣ ನಾನು ಮತ್ತು ನನ್ನ ಹೆಂಡತಿ ನಮ್ಮ ಮನೆಯ ಬೀಗ ಹಾಕಿಕೊಂಡು ಯಾದಗಿರಿಯ ಸಕರ್ಾರಿ ಆಸ್ಪತ್ರೆಗೆ ಡ್ಯೂಟಿಗೆ ಹೋದಾಗ ದಿನಾಂಕ 21/07/2021 ರಂದು ರಾತ್ರಿ 08-30 ಗಂಟೆಯಿಂದ ದಿನಾಂಕ 22/07/2021 ರ ಬೆಳಿಗ್ಗೆ 05-30 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಕೀಲಿ ಮುರಿದು ಮನೆ ಒಳಗೆ ಬಂದು ಬೆಡ್ ರೂಮಿನ ಅಲಮರಿ ಮುರಿದು, ಅದರಲ್ಲಿ ಇದ್ದ ಸುಮಾರು 1,45,000/ ರೂಪಾಯಿ ಕಿಮ್ಮತ್ತಿನ ಬಂಗಾರದ ಆಭರಣಗಳು ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದು, ಅವರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 78/2021 ಕಲಂ 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರ ನಗರ ಪೊಲೀಸ ಠಾಣೆ
ಗುನ್ನೆ ನಂ 79/2021 ಕಲಂ 457, 380 ಐಪಿಸಿ : ಫಿಯರ್ಾಧಿ ಸಾರಾಂಶವೇನೆಂದರೆ, ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತನಿದ್ದು, ಯಾದಗಿರಿಯ ಹೊಸಳ್ಳಿ ಕ್ರಾಸ್ದ ಶ್ರೀ ತಮ್ಮಣ್ಣ ಕಾಂಪ್ಲೆಕ್ಸ್ದಲ್ಲಿ ಇರುವ ಎಲ್.ಎನ್.ಟಿ ಕಂಪನಿಯ ಕಟ್ಟಡ ಕಾಮಗಾರಿಯ ಕಛೇರಿಯಲ್ಲಿ ಸುಮಾರು 2018 ರ ಮೇ ತಿಂಗಳಿನಿಂದ ಇಲ್ಲಿಯ ವರೆಗೆ ನಾನು ಅಕೌಂಟ್ಸ್ & ಅಡ್ಮೀನ್ ಅಂತಾ ಕೆಲಸ ಮಾಡಿಕೊಂಡು ಇರುತ್ತೇನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕೆ.ಬಿ.ಜೆ.ಎನ್.ಎಲ್ ಅಡಿಯಲ್ಲಿ 35 ಕೆರೆಗಳು ನೀರು ತುಂಬುವ ಕಾಮಗಾರಿಯನ್ನು ಎಲ್.ಎನ್.ಟಿ ಕಂಪನಿಯವರು ನಡೆಸಿರುತ್ತಾರೆ. ಈ ಆಫೀಸ್ನಲ್ಲಿ ಸುಮಾರು 25 ಜನ ಸಿಬ್ಬಂಧಿಯವರು ದಿನಾಲು ಕೆಲಸ ಮಾಡುತ್ತಿದ್ದು, ಅವರಲ್ಲಿ ಕೆಲವರು ಸೈಟ್ ಮೇಲೆ ಹೋಗುವದು, ಇನ್ನೂ ಕೆಲವರು ಆಫೀಸ್ದಲ್ಲಿ ಇದ್ದು ಕೆಲಸ ಮಾಡುತ್ತಾರೆ. ಆಫೀಸ್ದಲ್ಲಿ 09 ಗಣಕಯಂತ್ರಗಳು ಮತ್ತು 08 ಲ್ಯಾಪ್ಟ್ಯಾಪ್ಗಳು ಇರುತ್ತವೆ. ದಿನಾಲು ನಮ್ಮ ಆಫೀಸ್ನಲ್ಲಿ ಬೆಳಿಗ್ಗೆ 8-00 ಗಂಟೆಯಿಂದ ರಾತ್ರಿ 09-00 ಗಂಟೆಯ ವರೆಗೆ ಕೆಲಸ ಮಾಡುತ್ತೇವೆ. ಹೀಗಿದ್ದು ನಿನ್ನೆ ದಿನಾಂಕ 21/07/2021 ರಂದು ರಾತ್ರಿ 09-00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಆಫೀಸ್ನಲ್ಲಿ ಕೆಲಸ ಮಾಡುವ ಆಫೀಸ್ ಬಾಯಿ ಶಿವಕುಮಾರ ತಂದೆ ರಾಮಲು ಹಾಗೂ ಸಿಬ್ಬಂಧಿಯಾದ ವಿಜಯಚಂದ್ರ ತಂದೆ ರಮೇಶ ಮೂರು ಜನರು ನಮ್ಮ ಆಫೀಸ್ ಕೀಲಿ ಹಾಕಿಕೊಂಡು ಮನೆಗೆ ಹೋದೆವು. ನಂತರ ಇಂದು ದಿನಾಂಕ 22/07/2021 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ಆಫೀಸ್ ಬಾಯಿ ಶಿವಕುಮಾರ ತಂದೆ ರಾಮಲು ಈತನು ಪೋನ್ ಮಾಡಿ ಯಾರೋ ಕಳ್ಳರು ನಮ್ಮ ಆಫೀಸ್ ಕೀಲಿ ಮುರಿದು ಕಳ್ಳತನ ಮಾಡಿರುತ್ತಾರೆ ಅಂತಾ ವಿಷಯ ತಿಳಿಸಿದಾಗ ಕೂಡಲೆ ನಾನು ಸ್ಥಳಕ್ಕೆ ಬಂದು ನೋಡಿದೆನು. ಆಫೀಸ್ ಬಾಗಿಲು ಕೀಲಿ ಮುರಿದು ಎಲ್ಲಾ ಕಡೆ ಅಲಮರಿಯಲ್ಲಿ ಇದ್ದ ದಾಖಲಾತಿಗಳನ್ನು ಕಿತ್ತಿ ಹಾಕಿದ್ದು ಕಂಡು ಬಂತು. ನಂತರ ನಾನು ಯಾದಗಿರಿಯಲ್ಲಿ ಇರುವ ನಮ್ಮ ಸಿಬ್ಬಂಧಿಯಾದ ವಿಜಯಚಂದ್ರ, ಮುತ್ತುರಾಮ, ಸಾಯಿಬಾಬು & ಇತರರಿಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಿದರು. ಎಲ್ಲರು ಕೂಡಿ ಪರಿಶೀಲಿಸಿ ನೋಡಲಾಗಿ ಆಫೀಸ್ದಲ್ಲಿ ಇದ್ದ ತಲಾ 40,000/-ರೂ|| ಕಿಮ್ಮತ್ತಿನ 3 ಂಅಇಖ ಕಂಪನಿಯ ಲ್ಯಾಪ್ಟ್ಯಾಪ್ಗಳು ಕಳ್ಳತನವಾಗಿದ್ದು ಕಂಡು ಬಂತು. ಅವುಗಳ ಕ್ರ.ಸಂ 1] ಓಘಿಗಿಉಉಖ01084702ಆ6ಇ3400, 2] ಓಘಿಗಿಉಉಖ01090809ಃ513400, & 3] ಓಘಿಗಿಉಉಖ010908082253400, ಅಂತಾ ಇದ್ದು, ಅವುಗಳ ಒಟ್ಟು ಅಂದಾಜು ಕಿಮ್ಮತ್ತು 1,20,000/- ರೂಪಾಯಿಗಳು. ಕಾರಣ ದಿನಾಂಕ 21/07/2021 ರಂದು ರಾತ್ರಿ 09-00 ಗಂಟೆಯಿಂದ ಇಂದು ದಿನಾಂಕ 22/07/2021 ರಂದು ಬೆಳಿಗ್ಗೆ 7-00 ಗಂಟೆಯ ಅವಧಿಯಲ್ಲಿ ನಮ್ಮ ಎಲ್.ಎನ್.ಟಿ ಕಂಪನಿಯ ಕಛೇರಿಯಲ್ಲಿಯ ತಲಾ 40,000/- ರೂ|| ಕಿಮ್ಮತ್ತಿನ 3 ಂಅಇಖ ಕಂಪನಿಯ ಲ್ಯಾಪ್ಟ್ಯಾಪ್ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಅವುಗಳನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ನಮ್ಮ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಈಗ ಠಾಣೆಗೆ ತಡವಾಗಿ ಬಂದು ದೂರು ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 79/2021 ಕಲಂ 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 114/2021 ಕಲಂ 279, 337, 338 ಐಪಿಸಿ : ನಿನ್ನೆ ದಿನಾಂಕ 21.07.2021 ರಂದು ಗಾಯಾಳುದಾರರಾದ ಚಂದ್ರಶೇಖರ @ ಶೇಖರ, ವೆಂಕಟೇಶ ಮತ್ತು ರವಿ @ ರವಿಚಂದ್ರ ಮೂರು ಜನರು ಚಂದ್ರಶೇಖರ @ ಶೇಖರ ಈತನ ಮೋಟರು ಸೈಕಲ್ ನಂಬರ ಕೆಎ-33-ಬಿ-0565 ನೇದ್ದರ ಮೇಲೆ ಮುಂಡರಗಿ ಗ್ರಾಮದಿಂದ ಚಿಂತನಳ್ಳಿಯ ಗವಿ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಮರಳಿ ಅದೇ ಸಂಜೆ 6:50 ಗಂಟೆಗೆ ತಮ್ಮೂರ ಕಡೆಗೆ ಬರುತ್ತಿದ್ದಾಗ ಯಾದಗಿರಿ ಕಡೆಯಿಂದ ಕಾರ್ ನಂಬರ ಎಪಿ-24-ಎ.ಜೆಡ್-3438 ನೇದ್ದರ ಚಾಲಕನಾದ ಆರೋಪಿತನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ರಸ್ತೆಯ ಎಡಬದಿಯನ್ನು ಬಿಟ್ಟು ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ಗೆ ಡಿಕ್ಕಿಪಡಿಸಿದ ಪರಿಣಾಮವಾಗಿ ಗಾಯಾಳುದಾರರಿಗೆ ಭಾರಿ ಹಾಗೂ ಸಾಧಾ ಸ್ವರೂಪದ ರಕ್ತಗಾಯಗಳಾಗಿದ್ದು ಆ ಬಗ್ಗೆ ಫಿರ್ಯಾದಿಯು ತನ್ನ ಮಗನಿಗೆ ಚಿಕಿತ್ಸೆ ಕುರಿತು ರಾಯಚೂರನ ಆಸ್ಪತ್ರೆಗೆ ಸೇರಿಕೆ ಮಾಡಿದ ನಂತರ ಇಂದು ಸಂಜೆ 6:00 ಗಂಟೆಗೆ ಖುದ್ದಾಗಿ ಠಾಣೆಗೆ ಹಾಜರಾಗಿ ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 114/2021 ಕಲಂ 279, 337, 338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 115/2021 ಕಲಂ 447 323 324 504 506 ಸಂಗಡ 34 ಐಪಿಸಿ : ಇಂದು ದಿನಾಂಕ 22.07.2021 ರಂದು ಮದ್ಯಾಹ್ನ 3.00 ಸುಮಾರಿಗೆ ಪಿರ್ಯಾಧಿಯು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆರೋಪಿತರು ದನಗಳು ಪಿರ್ಯಾಧಿ ಹೊಲದಲ್ಲಿ ಹೋಗಿದ್ದು ಯಾಕೆ ದನಗಳನ್ನು ತಮ್ಮ ಹೊದಲ್ಲಿ ಬಿಟ್ಟಿದ್ದರಿ ನಮ್ಮ ಹೊಲ ಆಳಾಗುತ್ತಿದೆ ಅಂತಾ ಕೇಳಿದಕ್ಕೆ ಆರೋಪಿತರಿಬ್ಬರೂ ಅದೇ ಸಿಟ್ಟಿನಿಂದು ಪಿರ್ಯಾಧಿಯ ಹೊಲವನ್ನು ಅತೀಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಹೊಡೆದು ಕಾಲಿನಿಂದ ಒದ್ದು ಗಾಯಪಡಿದಿ ಜೀವಬೆದರಿಕೆ ಹಾಕಿ ಹೋಗಿದ್ದು ಪಿರ್ಯಾಧಿಯು ಗಾಯಗೊಂಡು ಉಪಚಾರಕ್ಕಾಗಿ ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ ಅಂತಾ ಪಿರ್ಯಾಧಿ ವಗೈರೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 115/2021 ಕಲಂ:447 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.