ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 23-07-2022


ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 111/2022 ಕಲಂ. 324 ಸಂಗಡ 34 ಐಪಿಸಿ : ಇಂದು ದಿನಾಂಕ:22-07-2022 ರಂದು ಬೆಳಗ್ಗೆ 9:00 ಗಂಟೆಗೆ ಠಾಣೆಯಲ್ಲಿರುವಾಗ ದೂರುದಾರನಾದ ಶ್ರೀ ಮಹಾದೇವಪ್ಪ ತಂದೆ ಭೀಮಶೆಪ್ಪ ಸಾ||ಮಲ್ಹಾರ ತಾ||ಜಿ||ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದು ದೂರು ಅಜರ್ಿ ಸಾರಂಶವೆನೆಂದರೆ ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಮದ 1) ಶ್ರೀ ಮಲ್ಲಿಕಾಜರ್ುನ ತಂದೆ ನಿಂಗಪ್ಪ ಮತ್ತು 2) ಈಶಪ್ಪ ತಂದೆ ಮಲ್ಲಿಕಾಜರ್ುನ ಇವರು ಜಮೀನಿಗೆ ಸಂಬಂದಪಟ್ಟಂತೆ ನನ್ನ ಮೇಲೆ ಹಲ್ಲೆ ಮಾಡಿರುವ ಕುರಿತು ಅವರ ಮೇಲೆ ಕಾನೂನು ಕ್ರಮ ಜರಗಿಸಲು ಮನವಿ ಅಜರ್ಿ. ಮೇಲ್ಕಂಡ ವಿಷಯಕ್ಕೆ ಸಂಬಂದಿಸಿದಂತೆ ನಿನ್ನೆ ಅಂದರೆ 21-07-2022 ರಂದು ಸಾಯಂಕಾಲ 5:30 ರ ಸಮಯದಲ್ಲಿ ನನ್ನ ಸ್ವಂತ ಜಮೀನಿನಲ್ಲಿ ಮೇಲಿನ ಹೆಸರಿನವರು ನೀರು ತಡೆಹೊಡ್ಡಿದ ಸಲುವಾಗಿ ಅವರನ್ನು ವಿಚಾರಿಸಿದಾಗ ಅವರು ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿರುತ್ತಾರೆ ನನ್ನ ಎದೆಗೆ ಕಲ್ಲಿನಿಂದ ಹೊಡೆದಿರುತ್ತಾರೆ ಕಾರಣ ಮೇಲೆ ತೋರಿಸಿದ ವ್ಯಕ್ತಿಗಳಾದ 1) ಮಲ್ಲಿಕಾಜರ್ುನ ತಂದೆ ನಿಂಗಪ್ಪ 2) ಮತ್ತು ಈಶಪ್ಪ ತಂದೆ ಮಲ್ಲಿಕಾಜರ್ುನ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿಸಿಕೊಳ್ಳುತ್ತೆನೆ.ಅಂತ ನೀಡಿ ದೂರಿನ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ:111/2022 ಕಲಂ. 324.ಸಂಗಡ 34 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 86/2022 ಕಲಂ 78(3) ಕೆ.ಪಿ ಎಕ್ಟ್ 1963: ಇಂದು ದಿನಾಂಕ. 22/07/2022 ರಂದು 6-15 ಪಿಎಂಕ್ಕೆ ಶ್ರೀ ವೀರಣ್ಣ ಪಿ.ಎಸ್.ಐ(ತನಿಖೆ) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜ್ಞಾಪನ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 22/07/2022 ರಂದು 4-00 ಪಿಎಂಕ್ಕೆ ನಾನು ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾರೋ ಒಬ್ಬನು ಯಾದಗಿರಿ ನಗರದ ಹಳೆ ಬಸನಿಲ್ದಾಣದ ಮದನಪೂರಗಲ್ಲಿ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 5-00 ಪಿಎಂಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಶಬ್ಬೀರ ತಂದೆ ಶೇಖ ಅಮೀದ್ ಸೇಠ ವ; 28 ಜಾ; ಮುಸ್ಲಿಂ ಉ; ಕೂಲಿಕೆಲಸ ಸಾ; ಮದನಪೂರಗಲ್ಲಿ ಯಾದಗಿರಿ ಅಂತಾ ತಿಳಿಸಿದ್ದು ನಂತರ ಆತನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) 1120=00 ನಗದು ಹಣ 2) ಒಂದು ಮಟಕಾ ಚೀಟಿ ಅಂ.ಕಿ.00-00, 3) ಒಂದು ಬಾಲಪೆನ್ ಅಂ.ಕಿ.00-00 ಸಿಕ್ಕಿದ್ದು ಸದರಿ ಮುದ್ದೆಮಾಲನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 22/07/2022 ರಂದು 5-00 ಪಿಎಂ ದಿಂದ 6-00 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿಪಂಚನಾಮೆಯನ್ನು ಮುಗಿಸಿಕೊಂಡು ಮರಳಿ ಠಾಣೆಗೆ 6-15 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿರವರಿಗೆ ಜ್ಞಾಪನಾ ಪತ್ರದೊಂದಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಕೊಟ್ಟ ಜ್ಞಾಪನದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 86/2022 ಕಲಂ.78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 119/2022 ಕಲಂ 279, ಐಪಿಸಿ: ದಿನಾಂಕ 21.07.2022 ರಂದು ಸಮಯ ಸಂಜೆ 5:30 ಗಂಟೆಗೆ ಆರೋಪಿತನು ಕಾರ್ ನಂಬರ ಟಿ.ಎಸ್-12-ಇ.ಕ್ಯೂ-9195 ನೇದ್ದನ್ನು ಗುರುಮಠಕಲ್ ಮಾರ್ಗವಾಗಿ ಹೈದ್ರಾಬಾದಗೆ ಹೋಗುತ್ತಿದ್ದಾಗ ಕಾರ್ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಿಯಂತ್ರಿಸಲು ಸಾಧ್ಯವಾಗದೇ ರಸ್ತೆಯ ಎಡಬದಿಯನ್ನು ಬಿಟ್ಟು ರಸ್ತೆಯ ಬಲಬದಿಗೆ ಹೋಗಿ ರಸ್ತೆಯ ಪಕ್ಕದಲ್ಲಿಯ ಮರಕ್ಕೆ ಡಿಕ್ಕಿ ಹೊಡೆದಿದಾಗ ಕಾರ್ನಲ್ಲಿಯ ಏರ್ ಬ್ಯಾಗ್ಗಳು ಓಪನ್ ಆಗಿದ್ದರಿಂದ ಚಾಲಕನಿಗೆ ಹಾಗೂ ಆತನ ಪಕ್ಕದ ಶೀಟ್ನಲ್ಲಿ ಕುಳಿತಿದ್ದ ಫಿರ್ಯಾದಿಗೆ ಯಾವುದೇ ರೀತಿಯ ಗಾಯಗಳಾಗಿರುವುದಿಲ್ಲ. ಸದರಿ ಅಪಘಾತದಿಂದ ಭಯಪಟ್ಟ ಫಿರ್ಯಾದಿ ತಡವಾಗಿ ಇಂದು ದಿನಾಂಕ 22.07.2022 ರಂದು ಠಾಣೆಗೆ ಬಂದು ಒಂದು ಗಣಕೀಕೃತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 119/2022 ಕಲಂ: 279 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 24-07-2022 10:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080