ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 23-08-2021

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 128/2021 ಕಲಂ 379 ಐಪಿಸಿ : ಇಂದು ದಿನಾಂಕ: 22-08-2021 ರಂದು ಬೆಳಿಗ್ಗೆ 07-55 ಗಂಟೆಗೆ ಶ್ರಿ ವಿಜಯಕುಮಾರ ಪಿ..ಐ ರವರು ಠಾಣೆಗೆ ಹಾಜರಾಗಿ ಗೊಂದಡಗಿ ಗ್ರಾಮದ ಭೀಮಾನದಿಯಲ್ಲಿ ಮರಳು ತುಂಬಿದ ಟಿಪ್ಪರ ನಂ. ಕೆಎ-33 ಎ-9739 ನೇದ್ದನ್ನು ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆ ಮತ್ತು ಒಂದು ಮರಳು ತುಂಬಿದ ಟಿಪ್ಪರ ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.128/2021 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 129/2021 ಕಲಂ. 279, 337, 338 ಐಪಿಸಿ : ಇಂದು ದಿನಾಂಕ: 22.08.2021 ರಂದು ಮಧ್ಯಾಹ್ನ 2.15 ಗಂಟೆಗೆ ಸೈದಾಪೂರ ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್.ಸಿ ಬಂದಿದ್ದರಿಂದ ಸದರಿ ಆಸ್ಪತ್ರೆಗೆ ಭೇಟಿ ನೀಡಿ ಪ್ರತ್ಯೇಕ್ಷ ಸಾಕ್ಷಿ ಶ್ರೀಮತಿ ಹಾಜಿ ಬೇಗಂ. ಗಂಡ ದಿಲದಾರ ಪಾಶಾ ವಯ||32 ವರ್ಷ, ಜಾ|| ಮುಸ್ಲಿಂ, ಉ|| ಕೂಲಿ ಸಾ|| ಕಡೇಚೂರ ತಾ|| ಜಿ|| ಯಾದಗಿರಿ ಇವಳ ಫಿಯರ್ಾದಿ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ಇಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ರಾಚನಳ್ಳಿ ಕ್ರಾಸ ದಾಟಿ 200ಮೀಟರ ಅಂತರದಲ್ಲಿ ಸೈದಾಪೂರ ಕಡೆಗೆ ಹೋಗುವಾಗ ಅದೇ ವೇಳೆಗೆ ಸೈದಾಪೂರ ಕಡೆಯಿಂದ ಒಂದು ಟಿ.ವಿ.ಎಸ್. ಮೋಟಾರ ಸೈಕಲ ನಂ. ಕೆ.ಎ-36 ಇ.ಆರ್-1350 ನೇದ್ದರ ಚಾಲಕ ಮೋಟಾರ ಸೈಕಲನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ಓಡಿಸಿಕೊಂಡು ಬಂದು ನಾವು ಕುಳಿತು ಹೊರಟ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿದನು. ಇದರಿಂದ ಮೋಟರ ಸೈಕಲ ಚಲಾಯಿಸುತ್ತಿದ್ದ ಅಮೀರ ಅಲಿ ಈತನಿಗೆ ಎಡಕಣ್ಣಿಗೆ ಗುಪ್ತಗಾಯವಾಗಿದ್ದು, ಬಾಯಿಗೆ ಮತ್ತು ತುಟಿಗೆ ಭಾರಿ ರಕ್ತಗಾಯವಾದಂತಾಗಿ ಹಲ್ಲು ಮುರಿದಂತಾಗಿದೆ. ಬಲಗಡೆ ತಲೆಗೆ ಒಳಪೆಟ್ಟಾಗಿ ಬಲಕಿವಿಗೆ ರಕ್ತ ಬಂದಂತೆ ಕಂಡುಬಂದಿರುತ್ತದೆ. ಮತ್ತು ಕೈಕಾಲಿಗೆ ಅಲ್ಲಲ್ಲಿ ತೆರಚಿದ ಗಾಯವಾಗಿರುತ್ತವೆ. ನನ್ನ ಮಗಳು ಆಶಾಬಿಗೆ ಎರಡೂ ಕಾಲುಗಳಿಗೆ ಮತ್ತು ಎಡ ಕಣ್ಣಿಗೆ ಮತ್ತು ಎಡ ಗಲ್ಲಕ್ಕೆ ತೆರಚಿದ ಗಾಯವಾಗಿರುತ್ತದೆ. ಅದರಂತೆ ನಮ್ಮ ಸೈಕಲ ಮೋಟರಗೆ ಅಪಘಾತಪಡಿಸಿದ ಟಿ.ವಿ.ಎಸ್. ಮೋಟಾರ ಸೈಕಲ ನಂ. ಕೆ.ಎ-36 ಇ.ಆರ್-1350 ನೇದ್ದರ ಚಾಲಕನಿಗೆ ಎರಡೂ ಮೊಳಕಾಲಿಗೆ ಒಳಪೆಟ್ಟು, ಮೂಗಿನಿಂದ ರಕ್ತ ಬಂದಿರುತ್ತದೆ. ಅತನ ಹೆಸರು ಮಹೇಶ ತಂದೆ ಭೀಮಣ್ಣ ವಯ|| 30 ವರ್ಷ, ಜಾ|| ಕುರುಬರ ಉ|| ಕೂಲಿ ಸಾ|| ಕರೇಕಲ ಶಕ್ತಿನಗರ ಹತ್ತಿರ ತಾ|| ಜಿ|| ರಾಯಚೂರ ಅಂತ ಗೊತ್ತಾಗಿರುತ್ತದೆ.್ಲ ಫಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ.129/2021 ಕಲಂ. 279, 337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ವಡಗೇರಾ ಪೊಲೀಸ ಠಾಣೆ
106/2021 ಕಲಂ: 41(ಡಿ), 102 ಸಿ.ಆರ್.ಪಿ.ಸಿ. ಮತ್ತು ಕಲಂ:98 ಕೆ.ಪಿ ಆಕ್ಟ್ ಹಾಗೂ ಕಲಂ: 379 ಐಪಿಸಿ : ಇಂದು ದಿನಾಂಕ:22/08/2021 ರಂದು 4-45 ಪಿಎಮ್ ಕ್ಕೆ ಶ್ರೀ ಎಂ.ಡಿ. ಅಜೀಜ್ ಪಿ.ಎಸ್.ಐ (ತನಿಖೆ) ವಡಗೇರಾ ಪೊಲೀಸ್ ಠಾಣೆ ರವರು ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ: 22/08/2021 ರಂದು 2-30 ಪಿ.ಎಮ್ ಸುಮಾರಿಗೆ ನಾನು ಮತ್ತು ಸಿಬ್ಬಂದಿಯವರಾದ ಮಹೇಂದ್ರ ಪಿ.ಸಿ-254, ಮರಿಲಿಂಗ ಪಿಸಿ-355 ರವರೊಂದಿಗೆ ಠಾಣಾ ವ್ಯಾಪ್ತಿಯ ತುಮಕೂರು-ಕದರಾಪೂರು ಮೇನ ರೋಡೆ ಮೇಲೆ ಪೆಟ್ರೋಲಿಂಗ್ ಕರ್ತವ್ಯ ಮಾಡುತ್ತಿರುವಾಗ ಬೆಂಡಬೆಂಬಳ್ಳಿ ಟಿಪ್ಪು ಸುಲ್ತಾನ ಚೌಕ ಹತ್ತಿರ ಒಂದು ಮೋಟರ ಸೈಕಲ್ ನಂಬರ ಕೆಎ 36 ಈಪಿ 2243 ನಿಂತಿದ್ದು, ಅದರಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಬೆಂಡಬೆಂಬಳ್ಳಿ ಬಸ್ ನಿಲ್ದಾಣದಲ್ಲಿ ಓಡಾಡುವುದು ಮತ್ತೆ ಪುನಃ ಮೋಟರ ಸೈಕಲ್ನಲ್ಲಿ ಬಂದು ಕೂಡುವುದು ಹೀಗೆ ಬಂದು ಹೋಗುವುದು ಮಾಡುತ್ತಾ ಸುಮಾರು ಸಮಯದ ವರೆಗೆ ಮೋಟರ ಸೈಕಲುನು ಅಲ್ಲಿಯೇ ನಿಲ್ಲಿಸಿಕೊಂಡು ಓಡಾಡುವುದು ಮಾಡುತ್ತಿದ್ದ ನನಗೆ ಅವರ ಮೇಲೆ ಸಂಶಯ ಬಂದು ನಾನು ಮೋಟರ ಸೈಕಲ್ ಮೇಲೆ ಕುಳಿತಿದ್ದ ಅವರಿಬ್ಬರ ಹತ್ತಿರ ಹೋಗುತ್ತಿದ್ದಂತೆ ಅವರಿಬ್ಬರು ನನ್ನನ್ನು ನೋಡಿದ ಕೂಡಲೇ ಓಡಲು ಪ್ರಾರಂಭಿಸಿದ್ದು, ಆಗ ಸಿಬ್ಬಂದಿಯವರ ಸಹಾಯದಿಂದ ಇಬ್ಬರನ್ನು 2-45 ಪಿಎಮ್ ಕ್ಕೆ ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿ ಅವರು ತಡವರಿಸುತ್ತ ಹೆಸರನ್ನು ಬೇರೆ ಬೇರೆ ಹೇಳಿದ್ದರಿಂದ ಅವರ ಮೇಲೆ ಸಂಶಯ ಬಂದು ಧಿರ್ಘವಾಗಿ ವಿಚಾರಣೆಗೆ ಒಳಪಡಿಸಲಾಗಿ ತಮ್ಮ ಹೆಸರು 1) ಶಿವರಾಜ ತಂದೆ ಹೊನ್ನಪ್ಪ ಪಲಕನಮರಡಿ, ವಯ:33 ವರ್ಷ, ಜಾತಿ:ಬೇಡರು, ಉ||ಗಾರೆಕೆಲಸ, ಸಾ:ಹೂಡ, ತಾ||ಸಿರವಾರ ಜಿ||ರಾಯಚೂರು ಮತ್ತು 2) ಅಜರ್ುನ ತಂದೆ ರಾಮಚಂದ್ರ ಭಂಗೋಡಿ, ವಯ:32 ವರ್ಷ, ಜಾತಿ:ನೇಕಾರ, ಉ||ಹೊಟೇಲ್ನಲ್ಲಿ ಕೂಲಿಕೆಲಸ, ಸಾ:ಲಕ್ಷೀನಗರ ವಡಗಾಂವ ಜಿಲ್ಲಾ:ಬೆಳಗಾಂವ, ಹಾ||ವ||ಭೀಮರಾಯ ಸಾಹುಕಾರ ಹೋಟೇಲ್ ಗೂಗಲ್ ತಾ|| ದೇವದುರ್ಗ ಎಂದು ತಿಳಿಸಿದ್ದು, ಸದರಿಯವರ ಹತ್ತಿರ ಜೇಬು ಪರಿಶೀಲಿಸಿ ಸದರಿ ಮೋಟರ ಸೈಕಲ್ ಮತ್ತು ಅನುಮಾನಾಸ್ಫದವಾಗಿ ಓಡಾಡುತ್ತಿದ್ದ ಬಗ್ಗೆ ಅವರಿಬ್ಬರಿಗೆ ವಿಚಾರಿಸಿದಾಗ ಸದರಿಯವರು ತಮ್ಮ ಹತ್ತಿರ ಇದ್ದ ಮೋಟರ ಸೈಕಲ್ ನಂ: ಕೆಎ 36 ಈಪಿ 2243 ಬಗ್ಗೆ ಯಾವುದೇ ದಾಖಲಾತಿಗಳು ಹಾಜರಪಡಿಸದೇ ಅದರ ಬಗ್ಗೆ ಯಾವುದೇ ವಿವರಣೆ ನೀಡದೇ ಇದ್ದು, ಸದರಿಯವರ ಹತ್ತಿರ ಇರುವ ಮೋಟರ ಸೈಕಲ್ ಕಳ್ಳತನದಿಂದ ಅಥವಾ ಮೋಸತನದಿಂದ ತಂದಿರಬಹುದೆಂದು ಅನುಮಾನ ಬಂದಿದ್ದರಿಂದ ಇಬ್ಬರು ಪಂಚರನ್ನು ಬರಮಾಡಿಕೊಂಡು ಸದರಿ ಪಂಚರ ಸಮಕ್ಷಮ ಶಿವರಾಜ ಮತ್ತು ಅಜರ್ುನ ಇವರು ತಂದಿದ್ದ ಮೋಟರ ಸೈಕಲ್ ನಂ: ಕೆಎ 36 ಈಪಿ 2243 ನೇದ್ದನ್ನು ಪ್ರತ್ಯೇಕವಾಗಿ ಜಪ್ತಿ ಪಂಚನಾಮೆಯನ್ನು 2-50 ಪಿ.ಎಮ್. ದಿಂದ 3-50 ಪಿ.ಎಮ್ ದ ವರೆಗೆ ಕೈಗೊಂಡು ಪಂಚರ ಚೀಟಿ ಲಗತ್ತಿಸಿ ಮೋಟರ ಸೈಕಲ್ ನಂಬರ ಕೆಎ 36 ಈಪಿ 2243 ನೇದ್ದನ್ನು ತಾಬಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಕಾರಣ 1) ಶಿವರಾಜ ತಂದೆ ಹೊನ್ನಪ್ಪ ಪಲಕನಮರಡಿ, ವಯ:33 ವರ್ಷ, ಜಾತಿ:ಬೇಡರು, ಉ||ಗಾರೆಕೆಲಸ, ಸಾ:ಹೂಡ, ತಾ||ಸಿರವಾರ ಜಿ||ರಾಯಚೂರು ಮತ್ತು 2) ಅಜರ್ುನ ತಂದೆ ರಾಮಚಂದ್ರ ಭಂಗೋಡಿ, ವಯ:32 ವರ್ಷ, ಜಾತಿ:ನೇಕಾರ, ಉ||ಹೊಟೇಲ್ನಲ್ಲಿ ಕೂಲಿಕೆಲಸ, ಸಾ:ಲಕ್ಷೀನಗರ ವಡಗಾಂವ ಜಿಲ್ಲಾ:ಬೆಳಗಾಂವ, ಹಾ||ವ||ಭೀಮರಾಯ ಸಾಹುಕಾರ ಹೋಟೇಲ್ ಗೂಗಲ್ ತಾ|| ದೇವದುರ್ಗ ಇವರು ತಮ್ಮ ಹತ್ತಿರ ಇದ್ದ ಮೋಟರ ಸೈಕಲ್ ನಂ. ಕೆಎ 36 ಈಪಿ 2243 ನೇದ್ದರ ಬಗ್ಗೆ ಯಾವುದೇ ದಾಖಲಾತಿಗಳನ್ನು ಮತ್ತು ಸಮರ್ಪಕ ಮಾಹಿತಿಯನ್ನು ನೀಡದೇ ಇದ್ದರಿಂದ ಸದರಿಯವರು ತಮ್ಮ ಹತ್ತಿರ ಇರುವ ಮೋಟರ ಸೈಕಲ್ನ್ನು ಎಲ್ಲಿಯೋ ಕಳ್ಳತನ ಮಾಡಿಕೊಂಡು ಅಥವಾ ಮೋಸತನದಿಂದ ತಂದಂತೆ ಬಂದಂತೆ ಕಂಡುಬಂದಿದ್ದರಿಂದ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 106/2021 ಕಲಂ: 41(ಡಿ), 102 ಸಿ.ಆರ್.ಪಿ.ಸಿ. ಮತ್ತು ಕಲಂ:98 ಕೆ.ಪಿ ಆಕ್ಟ್ ಹಾಗೂ ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 23-08-2021 10:04 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080