ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 23-09-2022
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 132/2022 ಕಲಂ: 279,304(ಎ) ಐಪಿಸಿ ಮತ್ತು 187 ಐ.ಎಮ್.ವಿಆಕ್ಟ್: ಇಂದು ದಿನಾಂಕಃ 22/09/2022 ರಂದು 10-00 ಎ.ಎಮ್ ಕ್ಕೆ ಶ್ರೀ ಗುರುರೇವಣಸಿದ್ದ ತಂದೆ ಭೀಮಣ್ಣ ಯಳಮೇಲಿ ಸಾಃ ಆಲ್ದಾಳ ತಾಃ ಸುರಪೂರಇವರುಠಾಣೆಗೆ ಹಾಜರಾಗಿಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ಇಂದುಮುಂಜಾನೆ ನಾನು ಮತ್ತು ನನ್ನ ಹೆಂಡತಿಯಾದರೇಣುಕಮ್ಮಇಬ್ಬರೂ ನಮ್ಮ ಹೊಲಕ್ಕೆ ಹೋಗಲು ತಯಾರಾದಾಗ, ನಮ್ಮ ಮಗನಾದ ಮಾಳಿಂಗರಾಯ ಇತನು ನಮ್ಮ ಮನೆಯ ಹತ್ತಿರದ ಮುಖ್ಯರಸ್ತೆಯ ಆಚೆ ಇರುವಖುಲ್ಲಾಜಾಗದಲ್ಲಿ ಸಂಡಾಸಕ್ಕೆ ಕುಳಿತಿದ್ದನು. ನಮ್ಮತಂದೆಯವರಾದ ಭೀಮಣ್ಣತಂದೆಈರಪ್ಪ ಯಳಮೇಲಿ ಇವರುಅಲ್ಲೆಕಟ್ಟಿಗೆಕಡಿಯುತ್ತಿದ್ದರು. ನಾವು ನಮ್ಮ ಮಗನಿಗೆ ಕರೆದುಕೊಂಡು ಹೊಲಕ್ಕೆ ಹೋಗಬೆಕೆಂದು ನಮ್ಮ ಮನೆಯ ಮುಂದೆ ನಿಂತಿದ್ದೇವು. ಆಗ ಸ್ವಲ್ಪ ಹೊತ್ತಿನಲ್ಲಿ ನನ್ನ ಮಗನು ಬಹಿದರ್ೆಸೆ ಮುಗಿಸಿಕೊಂಡು ಎದ್ದು ನಮ್ಮ ಮನೆಯಕಡೆಗೆ ಬರುವದಕ್ಕಾಗಿರಸ್ತೆದಾಟುತ್ತಿದ್ದಾಗ 8-30 ಎ.ಎಮ್ ಸುಮಾರಿಗೆ ಹಾವಿನಾಳ ಕಡೆಯಿಂದ ನಮ್ಮೂರಿನ ವೈಜನಾಥತಂದೆ ಮಾನಪ್ಪ ಹುದ್ದಾರಇತನುತಮ್ಮ ಕಾರ ನಂಬರ ಕೆ.ಎ 51 ಎಮ್.ಕೆ 1299 ನೇದ್ದನ್ನುಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದವನೇರಸ್ತೆದಾಟುತ್ತಿದ್ದ ನಮ್ಮ ಮಗನಿಗೆ ಡಿಕ್ಕಿ ಪಡಿಸಿದರಿಂದ ನಮ್ಮ ಮಗನು ಡಾಂಬರರಸ್ತೆಯ ಮೇಲೆ ಜೋರಾಗಿ ಬಿದ್ದನು. ತಕ್ಷಣ ನಾನು ಮತ್ತು ನನ್ನ ಹೆಂಡತಿಯಾದರೇಣುಕಮ್ಮ, ನನ್ನತಂದೆಯಾದ ಭೀಮಣ್ಣ ಮೂವರು ಓಡಿ ಹೋಗಿ ನನ್ನ ಮಗನಿಗೆ ಎತ್ತಿಕೊಂಡು ನೋಡಲಾಗಿ ಮಗನ ಎದೆಯ ಮೇಲೆ ತರಚಿತಗಲುಕಿತ್ತಿರುವ ಭಾರಿರಕ್ತಗಾಯವಾಗಿದ್ದು, ಬಲಮುಂಡಿಗೆ, ಬಲಪಕ್ಕಡಿಗೆ, ಬಲಕಪಾಳಕ್ಕೆ, ಕಿವಿಗೆ, ಗದ್ದಕ್ಕೆ, ಮೂಗಿನ ಮೇಲೆ, ಎಡಗಣ್ಣಿನ ಹುಬ್ಬಿಗೆಎಡಗೈ ಹಸ್ತದ ಬೆರಳುಗಳಿಗೆ ತರಚಿರುವ ರಕ್ತಗಾಯಗಳಾಗಿದ್ದು ಇರುತ್ತದೆ. ಆಗ ಘಟನೆಯನ್ನು ನೋಡಿದ ಸಮೀಪದ ಮನೆಯವರಾದ ಹೊನ್ನಪ್ಪ ಹಾಗು ಹಣಮಂತಇವರು ಸಹ ಬಂದು ನಮ್ಮ ಮಗನಿಗೆ ನೋಡಿರುತ್ತಾರೆ. ಆಗ ನನ್ನ ಮಗನು ನರಳಾಡುತ್ತಿದ್ದಾಗ ಮೋ.ಸೈಕಲ್ ಮೇಲೆ ನಾನು ನನ್ನ ಹೆಂಡತಿ ಹಾಗು ಮಗನಿಗೆ ಹಿಂದುಗಡೆ ಕೂಡಿಸಿಕೊಂಡು ಸುರಪೂರಆಸ್ಪತ್ರೆಗೆಕರೆದುಕೊಂಡು ಬರುತ್ತಿದ್ದಾಗ 8-50 ಎ.ಎಮ್ ಸುಮಾರಿಗೆಕುಂಬಾರಪೇಟ ಹತ್ತಿರ ಮೃತಪಟ್ಟಿದ್ದರಿಂದ ಶವವನ್ನು ಸುರಪೂರ ಸಕರ್ಾರಿಆಸ್ಪತ್ರೆಯ ಶವಾಗಾರಕೋಣೆಯಲ್ಲಿ ಹಾಕಿರುತ್ತೇವೆ. ನನ್ನ ಮಗನಿಗೆ ಅಪಘಾತ ಪಡಿಸಿದ ಬಳಿಕ ಕಾರ ಚಾಲಕನು ಕಾರ ಸ್ಥಳದಲ್ಲೆ ನಿಲ್ಲಿಸಿ ಓಡಿ ಹೋಗಿರುತ್ತಾನೆ. ಕಾರಣಅಪಘಾತ ಪಡಿಸಿದ ಕಾರ ಚಾಲಕನ ವಿರುದ್ದ ಕಾನೂನು ಪ್ರಕಾರಕ್ರಮಜರುಗಿಸಬೇಕುಅಂತ ವಗೈರೆ ಹೇಳಿಕೆ ಸಾರಾಂಶದ ಮೇಲಿಂದಠಾಣೆಗುನ್ನೆ ನಂ. 132/2022 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಮ್.ವಿಆಕ್ಟ್ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 133/2022 ಕಲಂ: 78 () ಕೆ.ಪಿ. ಕಾಯ್ದೆ: ಇಂದು ದಿನಾಂಕ: 22/09/2022 ರಂದು 2:05 ಪಿ.ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ಶ್ರೀ ಸುನೀಲ್ ಮೂಲಿಮನಿ ಪಿ.ಐ ಸಾಹೇಬರು ಒಬ್ಬ ಆರೋಪಿ, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ: 22/09/2022 ರಂದು 11:30 ಎಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸುರಪುರ ಬಸ್ ನಿಲ್ದಾಣದ ಮುಂದೆ ಅಂಬೇಡ್ಕರ ಚೌಕ ಮುಂದುಗಡೆ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದಿದ್ದು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು, ಸಿಬ್ಬಂದಿಯವರಾದ 1) ಹೊನ್ನಪ್ಪ ಸಿಪಿಸಿ-427 ಹಾಗೂ ಜೀಪ ಚಾಲಕ 2) ಮಲಕಾರಿ ಎ.ಹೆಚ್.ಸಿ. 07 ಇವರಿಗೆ ವಿಷಯ ತಿಳಿಸಿ, ಹೊನ್ನಪ್ಪ ಸಿಪಿಸಿ-427 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೊನ್ನಪ್ಪ ಪಿಸಿ ರವರು ಇಬ್ಬರು ಪಂಚರಾದ 1) ಹಣಮಂತ ತಂದೆ ಮರೆಪ್ಪ ತಳವರ ವಃ 41 ಜಾಃ ಕಬ್ಬಲಿಗ ಉಃ ಒಕ್ಕಲುತನ ಸಾಃ ಹೊಸ ಸಿದ್ದಾಪುರ ತಾಃ ಸುರಪುರ 2) ಮಲ್ಲಪ್ಪ ತಂದೆ ಸಣ್ಣ ಬೀಮಪ್ಪ ಕೊಳುರ ವಃ 50 ಜಾಃ ಬೇಡರು ಉಃ ಒಕ್ಕಲುತನ ಸಾಃ ಹೊಸ ಸಿದ್ದಾಪುರ ತಾಃ ಸುರಪುರ ಇವರನ್ನು 12:30 ಪಿ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಾಗ ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 12:45 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ. ಕೆಎ-33 ಜಿ-0238 ನೇದ್ದರಲ್ಲಿ ಹೊರಟು 12:50 ಪಿ.ಎಮ್ ಕ್ಕೆ ಕೃಷ್ಣ ಪ್ರಸಾದ ಲಾಡ್ಜ ಮರೆಯಲ್ಲಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಸ್ವಲ್ಪ ಮುಂದೆ ನಡೆದುಕೊಂಡು ಹೋಗಿ ಒಂದು ಅಂಗಡಿಯ ಮರೆಯಲ್ಲಿ ನಿಂತು ನೋಡಲು ಅಂಬೇಡ್ಕರ ಚೌಕ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತುಕೊಂಡು 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 1 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಭಿಮಣ್ಣ ತಂದೆ ದೇವಿಂದ್ರಪ್ಪ ಕೊಳ್ಳುರ ವ|| 45 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಸಿದ್ದಾಪೂರ ತಾ|| ಸುರಪೂರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ ನಗದು ಹಣ 2150=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು, ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 1 ಪಿ.ಎಮ್ ದಿಂದ 2 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ 2:05 ಪಿ.ಎಮ್. ಕ್ಕೆ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ತಮಗೆ ಹಾಜರುಪಡಿಸಿದ್ದು, ಸದರಿ ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಕೊಟ್ಟ ವರದಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂ 133/2022 ಕಲಂ: 78 (3) ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 134/2022 ಕಲಂ: 147, 148, 323, 324, 504, 506 ಸಂ. 149 ಐಪಿಸಿ:ಇಂದು ದಿನಾಂಕ: 22/09/2022 ರಂದು 6:30 ಪಿ.ಎಮ್ ಕ್ಕೆ ಮಾನ್ಯ ನ್ಯಾಯಾಲಯದಿಂದ ಒಂದು ಖಾಸಗಿ ಪಿಯರ್ಾದಿ ವಸೂಲಾಗಿದ್ದು, ಸಾರಾಂಶವೆನೆಂದರೆ, ಪಿಯರ್ಾದಿ ಶ್ರೀ ಬಸವರಾಜ ತಂದೆ ನಿಂಗಪ್ಪ ಹುಂಡೆಕಲ್ ವಃ 60 ಉಃ ಒಕ್ಕಲುತನ ಸಾಃ ಬೈರಿಮಡ್ಡಿ ತಃ ಸುರಪುರ ಈತನು ಬೈರಿಮಡ್ಡಿ ನಿವಾಸಿ ಇದ್ದು ಹೀಗೆ ಸುಮಾರು ನಾಲ್ಕು ವರ್ಷಗಳ ಹಿಂದೆ ಊರಿನ ನಾಗಪ್ಪ ತಂದೆ ಪರಮಣ್ಣ ಬಾದ್ಯಾಪೂರ ಸಾ|| ಬೈರಿಮಡ್ಡಿ ಇವರು ನಮ್ಮ ಊರಿನವರಾದ ಬಲಭೀಮ @ ಭಿಮಣ್ಣ ಹಾಗೂ ಇತರರ ವಿರುದ್ಧ ಕೇಸು ಮಾಡಿದ್ದು ಆ ಕೇಸು ಸಿಸಿ ನಂ. 355/2018 ಈಕೇಸಿನಲ್ಲಿ ನಮಗೆ ಸಾಕ್ಷಿದಾರರೆಂದು ಕೋಟ ನೋಟೀಸ್ ನೀಡಿದ ಕಾರಣ ನಾನು ಹೋಗಿ ಸುರಪೂರ ಸಿವಿಲ್ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿರುತ್ತೇನೆ. ಸಾಕ್ಷಿ ನುಡಿದ ವಿಷಯ ಕುರಿತು ನನ್ನ ಮೇಲೆ ದ್ವೇಷ ಭಾವನೆಯಿಂದ ದಿನಾಂಕ;21/04/2022 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ ನಾನು ನಮ್ಮೂರಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಟ್ಟೆಯ ಹತ್ತಿರ ನಾನು ಮತ್ತು ನಮ್ಮೂಡರಿನವರಾದ ಅಯ್ಯಪ್ಪಾ ತಂದೆ ಮಲ್ಲಪ್ಪ ಅನಸೂರ, ರಂಗಣ್ಣ ತಂದೆ ಫಾಂಡಪ್ಪ ದೊರೆ ಹಾಗೂ ಬಲಭೀಮ ತಂದೆ ಬಗವಂತಪ್ಪ ಬನ್ನಟ್ಟಿ, ವೇಂಕಟೇಶ ತಂದೆ ಯಂಕಪ್ಪ ನಾಯ್ಕೋಡಿ, ನಾವೆಲ್ಲರೂ ಕುಳಿತುಕೊಂಡು ಮಾತನಾಡುತ್ತಿರುವಾಗ ಮೇಲೆ ಹೇಳಿದ ಅರೋಪಿಗಳಾದ 1) ಭೀಮಣ್ಣ @ಬಲಬೀಮ ತಂದೆ ಶಿವಪ್ಪ ಬಾದ್ಯಾಪೂರ, 2) ಭೀಮವ್ವ ಗಂಡ ಶಿವಪ್ಪ ಬಾದ್ಯಾಪೂರ 3) ನಿಂಗಪ್ಪ ತಂದೆ ಶಿವಪ್ಪ ಬಾದ್ಯಾಪೂರ 4) ತಾಯಮ್ಮ ಗಂಡ ನಿಂಗಪ್ಪ ಬಾದ್ಯಾಪೂರ 5) ಮೌನೇಶ ತಂದೆ ಶಿವಪ್ಪ ಬಾದ್ಯಾಪೂರ 6) ಹಣಮಂತಿ ಗಂಡ ಮಲ್ಲಪ್ಪ ಬಾದ್ಯಾಪುರ 7) ಮಾಳಮ್ಮ ಗಂಡ ಬಲಭೀಮ ಬಾದ್ಯಾಪುರ ಇವರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಬರುವ ಸಮಯದಲ್ಲಿ ಕೈಯಲ್ಲಿ ಬಡಿಗೆ ಕಲ್ಲು, ಕೊಡಲಿ ಹಿಡಿದುಕೊಂಡು ನಾವು ಕುಳಿತ ಸ್ಥಳಕ್ಕೆ ಬಂದವರೆ ಬಲಭಿಮ ಎನ್ನುವವನು ನಮ್ಮೆಲ್ಲರನ್ನು ಉದ್ದೇಶಿಸಿ ಲೇ ಬೋಸಡಿ ಸೂಳೇ ಮಕ್ಕಳೆ ನಮ್ಮ ವಿರುದ್ದ ಕೋಟರ್ಿನಲ್ಲಿ ಸಾಕ್ಷಿ ಹೇಳಬೇಡಾ ಅಂದರು ಸಹ ನಮ್ಮ ವಿರುದ್ದ ಸಾಕ್ಷಿ ಹೇಳಿ ಬಂದಿರಿ, ಎನಾಗುತ್ತದೆ ಸೆಂಟಾ ಆಗುತ್ತದೆನಲೇ ಅಂದವನೇ ಬಲಭಿಮ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಹೊಡೆಯುತ್ತಿರುವಾಗ ಭಿಮವ್ವ ಗಂಡ ಶಿವಪ್ಪ ಬಾದ್ಯಾಪುರ ಈಕೆ ಬಂದು ಈ ನನ್ನಟ್ಯಾನರು ಬಹಳ ಆಗಿದೆ ನಮ್ಮನೆಂದರೆ ಹೊಟ್ಟೆಯುರಿತ್ತಾರೆಂದು ಅವಾಚ್ಯಚಾಗಿ ಬೈಯುತ್ತಿದ್ದಾಗ ಮತ್ತು ನಿಂಗಪ್ಪ ತಂದೆ ಶಿವಪ್ಪ ಬಾದ್ಯಾಪುರ ಈತನು ಅಲ್ಲೇ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ನನ್ನ ಬೆನ್ನಿಗೆ ಹೊಡೆದನು. ಮತ್ತು ತಾಯಮ್ಮ ಗಂಡ ನಿಂಗಪ್ಪ ಬಾದ್ಯಾಪುರ ಈಕೆಯು ಬಂದು ನನ್ನ ಅಂಗಿ ಹಿಡಿದು ಜಗ್ಗಾಡಿದಳು, ನಂತರ ಮೌನೇಶ ತಂದೆ ಶಿವಪ್ಪ ಬಾದ್ಯಾಪುರ ಈತನು ತನ್ನ ಕೈಯಲ್ಲಿ ಕೊಡಲಿ ಹಿಡಿದುಕೊಂಡು ಬಂದು ಇವನನ್ನು ಬಿಡಬ್ಯಾಡರಿ ಈ ಸೂಳೆ ಮಗನದು ಬಹಳ ಆಗ್ಯಾದ ಎಂದು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಎತ್ತಿ ಹೊಡೆಯುವುದರಲ್ಲಿ ನಾನು ತಪ್ಪಿಸಿಕೊಂಡೆ ಇಲ್ಲದಿದ್ದರೆ ನಾನು ಜೀವ ಸಹಿತ ಉಳಿಯುತ್ತಿರಲಿಲ್ಲಾ, ಅಲ್ಲೆ ಇದ್ದ ಹಣಮಂತಿ ಮತ್ತು ಮಾಳಮ್ಮ ಈ ಇಬ್ಬರೂ ಕೂಡಿಕೊಂಡು ಪ್ರಚೋದನೆ ನೀಡುತ್ತ ಈ ಸೂಳೆ ಮಗನನ್ನು ಬಿಡ ಬ್ಯಾಡರಿ ಜೀವ ಹೊಡೆಯಿರಿ ಅದೆನು ಬುತ್ತದೆ ಬರಲಿ ನಾವು ನೋಡಿಕೊಳ್ಳುತ್ತೆವೆಂದು ಬೈಯುತ್ತಿದ್ದಳು ಮೇಲೆ ಹೇಳಿದ ಆರೋಪಿತರು ಹೊಡೆದು ನನಗೆ ಗುಪ್ತಗಾಯ ಮಾಡಿರುತ್ತಾರೆ, ಇವರು ಹೊಡೆತವನ್ನು ತಾಳಲಾರದೆ ಚೀರಾಡುತ್ತಿರವಾಗ ಅಲ್ಲೆ ನಿಂತಿರುವ ನನ್ನ ಮಗನಾದ ರಾಜು ತಂದೆ ಬಸವರಾಜ ಹುಂಡೆಕಲ್ ಇವರನು ಬಂದು ಬಿಡಿಸುವಾಗ ಇವನಿಗೂ ಸಹ ಬಲಭಿಮ ತಂದೆ ಶಿವಪ್ಪಾ ಬಾದ್ಯಾಪುರ, ಹಾಗೂ ನಿಂಗಪ್ಪ ತಂದೆ ಶಿವಪ್ಪ ಬಾದ್ಯಾಪುರ ಇವರಿಬ್ಬರೂ ಕೂಡಿಕೊಂಡು ಬಲಭಿಮ ಎಂಬುವವನು ಕಟ್ಟಿಗೆಯಿಂದ ನನ್ನ ಮಗನ ಬೆನ್ನಿಗೆ ಹೊಡೆದನು ನಂತರ ನಿಂಗಪ್ಪ ಈತನು ಕಲ್ಲಿನಿಂದ ಹೊಡೆಯುವಾಗ ನನ್ನ ಮಗನು ತಪ್ಪಿಸಿಕೊಂಡನು ಇಷ್ಟೆಲ್ಲ ಜಗಳಾ ನಡೆಯುವ ಸಮಯಲ್ಲಿಅಲ್ಲೆ ಇದ್ದ ಅಯ್ಯಾಪ್ಪ ತಂದೆ ಮಲ್ಲಪ್ಪ ಅನಸುರ, ರಂಗಣ್ಣ ತಂದೆ ಪಾಂಡಪ್ಪ ದೊರೆ, ಬಲಭೀಮ ತಂದೆ ಬಗವಂತಪ್ಪ ಬನ್ನೆಟ್ಟಿ, ವೆಂಕಟೇಶ ತಂದೆ ಯಂಕಪ್ಪ ನಾಯ್ಕೋಡಿ, ಎಲ್ಲರೂ ಕೂಡಿಕೊಂಡು ಇಬ್ಬರಿಗೆ ಬೈದು ಜಗಳಾ ಬಿಡಿಸಿದರು. ಜಗಳಾ ಬಿಟ್ಟು ಹೋಗುವ ಸಮಯದಲ್ಲಿ ನಿವೇನು ಚಾಜವಂತರೂ ಸೂಳಿ ಮಕ್ಕಳರಲೇ ನೀವು ಕೂಡಾ ನಮ್ಮ ವಿರುದ್ದ ಕೋಟರ್ಿನಲ್ಲಿ ಸಆಕ್ಷಿ ಹೇಳಿದ್ದಿರಿ ನಮಗೂ ಕೂಡಾ ಅವರ ಜೊತೆ ಖಲಾಸ ಮಾಡುತ್ತಿವಿ ಮಕ್ಕಳೆ ಎಂದು ಜಗಳಾ ಬಿಡಿಸುವದ್ದಕ್ಕೆ ಬಂದ ಸಾಕ್ಷಿದಾರರಿಗೂ ಮತ್ತು ನನಗೆ ಮತ್ತು ನನ್ನ ಮಗನಿಗೂ ಹೊಡೆ ಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋದರು. ಆದ್ದರಿಂದ ಆರೋಪಿತರರು ಭಾರತ ದಂಡ ಶಂಹಿತೆ ಕಲಂ. 147, 148, 323, 324, 504, 506, ಸಂ. 149 ಐಪಿಸಿ ಅಡಿ ಅಪರಾದವೆಸಗಿರುತ್ತಾರೆ ನಂತರ ಪಿರ್ಯಾದಿದಾರ ಸಂಭಂದಿಸಿದ ಸುರಪುರ ಪೊಲೀಸ್ ಠಾಣೆಗೆ ಹೋಗಿ ಲಿಖಿತ ದೂರನ್ನು ಹಾಗೂ ಅದನ್ನು ಸಂಭಂದಿಸಿದ ಪೊಲೀಸ್ ಮೇಲಾದಿಕಾರಿಗಳಿಗೆ ಖುದ್ದಾಗಿ ದೂರನ್ನು ಸಲ್ಲಿಸಿದ್ದಾರೆ ಅದು ಸಂಭಂದಿಸಿದ ಪೊಲೀಸ್ ಅಧಿಕಾರಿಗಳಿಗೆ ತಲುಪಿದೆ ಆದರೂ ಸಹ ಸಂಭಂದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸುರಪುರ ಆರಕ್ಷಕ ಉಪ ನಿರೀಕ್ಷಕರು ಇಲ್ಲಿಯವರೆಗೆ ಆರೋಫಿತರ ವಿರುದ್ದ ಯಾವುದೇ ದೂರನ್ನು ದಾಖಲಿಸಿಕೊಂಡಿಲ್ಲಾ ನಾನು ಇಲ್ಲಿಯವರೆಗೆ ಪೊಲೀಸ್ರು ಕ್ರಮ ತೆಗೆದುಕೊಳ್ಳಬಹುದೆಂದು ತಿಳಿದು ಕಾಯ್ದಿದ್ದಕ್ಕಾಗಿ ತಡವಾಗಿದೆ ಆದ್ದುದ್ದರಿಂದ ಪಿರ್ಯಾದಾರನು ಈ ಖಾಸಗಿ ಪಿರ್ಯಾದಿ ಸಲ್ಲಿಸಿದ್ದು ಇರುತ್ತದೆ ಅಂತಾ ಪಿರ್ಯಾದಿ ಇತ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 134/2022 ಕಲಂ. 147, 148, 323, 324, 504, 506, ಸಂ.149 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 75/2022 ಕಲಂ 341, 323, 324, 504, 506 ಸಂಗಡ 34 ಐಪಿಸಿ: ಇಂದು ದಿನಾಂಕ:22/09/2022 ರಂದು 08.30 ಎ.ಎಮ್. ಸುಮಾರಿಗೆ ಫಿಯರ್ಾದಿ ಮತ್ತು ಗಾಯಾಳು ಹಣಮಂತ್ರಾಯಇಬ್ಬರೂಕೂಡಿ ಹೊಲಕ್ಕೆ ಹೊರಟಾಗ ಆರೋಪಿತರು ಬಂದುತಡೆದು ನಿಲ್ಲಿಸಿ ಆರೋಪಿ ನಾಗರಾಜಈತನು ಏನಲೇ ಶಿವ್ಯಾ ಸೂಳೇ ಮಗನೆ ನಿನ್ನೆ ಸಾಯಂಕಾಲ ನಮ್ಮ ಹೊಲಕ್ಕೆ ಹಚ್ಚಿದ ಮುಳ್ಳುಕಂಟಿ ಕಿತ್ತಿಎಸೆದಿದ್ದಲ್ಲದೇ ನಮ್ಮೊಂದಿಗೆತಕರಾರು ಮಾಡ್ತೀದ್ಯಾಅಂತಾಅವಾಚ್ಯ ಶಬ್ದಗಳಿಂದ ಬೈದು ಫಿಯರ್ಾದಿಗೆ ಮತ್ತು ಗಾಯಾಳುವಿಗೆ ಕೈಯಿಂದ ಬಡಿಗೆಯಿಂದ ಹೊಡೆಬಡೆ ಮಾಡಿ ರಕ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.
ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 76/2022 ಕಲಂ 341, 323, 324, 504, 506(2) ಸಂಗಡ 34 ಐಪಿಸಿ: ಇಂದು ದಿನಾಂಕ:22/09/2022 ರಂದು 08.30 ಎ.ಎಮ್. ಸುಮಾರಿಗೆ ಫಿಯರ್ಾದಿ ಮತ್ತುಇತರರುಕೂಡಿತಮ್ಮ ಹೊಲಕ್ಕೆ ಹೊರಟಾಗಆರೋಪಿತರೆಲ್ಲರೂಕೂಡಿ ಬಂದುತಡೆದು ನಿಲ್ಲಿಸಿ ಏನಲೇ ನಾಗ್ಯಾ ಸೂಳೇ ಮಗನೆ ನಿನ್ನೆ ಸಾಯಂಕಾಲ ದಾರಿಗೆ ಮುಳ್ಳುಕಂಟಿ ಹಚ್ಚಿದ್ದಲ್ಲದೇ ನಮ್ಮೊಂದಿಗೆತಕರಾರು ಮಾಡ್ತೀದ್ಯಾಅಂತಾಅವಾಚ್ಯ ಶಬ್ದಗಳಿಂದ ಬೈದು ಫಿಯರ್ಾದಿಗೆಕೈಯಿಂದ ಬಡಿಗೆಯಿಂದ ಹೊಡೆಬಡೆ ಮಾಡಿ ಗುಪ್ತಗಾಯಪಡಿಸಿ ಚಾಕುವಿನಿಂದ ಹೊಡೆದು ಕೊಲೆ ಮಾಡುತ್ತೇವೆಅಂತಾಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 107/2022 ಕಲಂ 32,34 ಕೆ,ಇ ಆಕ್ಟ್ ಮತ್ತು 284 ಐಪಿಸಿ: ಇಂದು ದಿನಾಂಕ 22.09.2022 ರಂದು 7-15 ಪಿ.ಎಮ.ಕ್ಕೆ ಸ.ತಫರ್ೇ ಶ್ರೀ ಹಣಮಂತ್ರಾಯ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ಜ್ಞಾಪನ ಪತ್ರದೊಂದಿಗೆ ಸೇಂಧಿ ಜಪ್ತಿಪಂಚನಾಮೆ, ಶ್ಯಾಂಪಲ್ ಮುದ್ದೆಮಾಲು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ. 107/2022 ಕಲಂ. 32, 34 ಕೆ.ಇ ಕಾಯ್ದೆ ಮತ್ತು 284 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 108/2022 ಕಲಂ 341, 323, 324, 504, 506 ಐಪಿಸಿ: ಇಂದು ದಿನಾಂಕ 22.09.2022 ರಂದು ಎಮ್.ಎಲ್.ಸಿ ಕುರಿತು ರಾಯಚೂರ ಆರಾಧನಾ ಆಸ್ಪತ್ರೆಗೆ ಹೋಗಿ ಗಾಯಾಳು ಮಲ್ಲಿಕಾಜರ್ುನ ತಂದೆ ಸಣ್ಣ ಬೀರಪ್ಪ ವ|| 31ವರ್ಷ ಜಾ|| ಕುರುಬ ಉ|| ಒಕ್ಕಲುತನ ಸಾ|| ಸಣ್ಣಸಂಬ್ರ ತಾ|| ಗುರುಮಠಕಲ ಜಿ|| ಯಾದಗಿರಿ ಈತನ ಲಿಖಿತ ದೂರು ಸ್ವೀಕರಿಸಿಕೊಂಡು ಠಾಣೆಗೆ ಬಂದ್ದಿದರ ಸಾರಾಂಶವೇನೆಂದರೆ, ಇಂದು ನಿನ್ನೆ ದಿನಾಂಕ 21.09.2022 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನಮ್ಮೂರಿನ ಮರೆಮ್ಮ ದೇವಿಯ ಗುಡಿಯ ಹತ್ತಿರ ಮಹಾದೇವನು ಬಂದು ನನಗೆ ಅಡ್ಡಗಟ್ಟಿ ನಿಂತು, ನೀನು ಹೊಲದಲ್ಲಿ ಏನು ಮಾತಾಡಿದೆಲೇ ಲುಚ್ಚಾ ಸೂಳೇ ಮಗನೇ? ಎಂದು ಅವಾಚ್ಯವಾಗಿ ಬೈದು, ಅಲ್ಲಿಯೇ ಇರತಕ್ಕಂತಹ ಕಲ್ಲನ್ನು ತೆಗೆದುಕೊಂಡು ಎದೆಗೆ ಜೋರಾಗಿ ಹೊಡೆದನು. ನಿನ್ನನ್ನು ಇವತ್ತು ಜೀವಂತ ಉಳಿಸುವದಿಲ್ಲ ಮಗನೇ ಅಂತ ಭಯ ಹುಟ್ಟಿಸಿ ನನ್ನ ತಲೆ ಕೂದಲನ್ನು ಹಿಡಿದು ತಲೆಯನ್ನು ಅಲ್ಲಿಯೇ ಗುಡಿಯ ಪಕ್ಕದಲ್ಲಿರುವ ರೂಮಿನ ಗೋಡೆಗೆ ಹೊಡೆದಾಗ ತಲೆಗೆ ಭಾರಿ ರಕ್ತಗಾಯವಾಗಿ ನಾನು ಮೂಚರ್ೆ ಬಂದು ಬಿದ್ದೆನು. ನಂತರ ನನಗೆ ರಾಯಚೂರ ಆರಾಧನಾ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಎಚ್ಚರವಾಗಿದ್ದು, .ಹೊಲದ ಒಡ್ಡಿಗೆ ಕ್ರಿಮಿನಾಶಕ ಸಿಂಪಡಿಸಿದ ವಿಷಯದಲ್ಲಿ ಜಗಳ ತೆಗೆದು ನನಗೆ ಹೊಡೆಬಡೆ ಮಾಡಿ ದು:ಖಪತಗೊಳಿಸಿದ ಮಹಾದೇವ ತಂದೆ ದೊಡ್ಡ ಬೀರಪ್ಪ ವಯಸ್ಸು 35 ವರ್ಷ, ಜಾತಿ ಕುರುಬರ ಉ|| ಒಕ್ಕಲುತನ ಸಾ|| ಸಣ್ಣಸಂಬ್ರ ಗ್ರಾಮ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಇಂದು ಮನೆಯವರಲ್ಲಿ ವಿಚಾರಿಸಿಕೊಂಡು ತಮ್ಮಲ್ಲಿ ದೂರು ನೀಡಿರುತ್ತೇನೆ. ಅಂತ ನೀಡಿದ ದೂರು ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 108/2022 ಕಲಂ 341, 323, 324, 504, 506 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 107/2022 ಕಲಂ: 143, 341, 323, 504, 506 ಸಂ. 149 ಐಪಿಸಿ: ಇಂದು ದಿನಾಂಕ. 22/09/2022 ರಂದು 5-00 ಪಿಎಮ್ಕ್ಕೆ ಪಿರ್ಯಾಧಿ ಶ್ರೀಮತಿ ನೇಹಾ ಸುಲ್ತಾನ ಗಂಡ ರಫೀಕ್ ಶೇಖ್ ವ; 24 ಜಾ; ಮುಸ್ಲಿಂ ಉ; ಕೂಲಿಕೆಲಸ ಸಾ; ನ್ಯೂ ಕನ್ನಡ ಶಾಲೆಯ ಹತ್ತಿರ ಸದರ ದರವಾಜಾ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಮ್ಮ ತಂದೆ ನವಾಬ ಚಾಂದ್ ತಾಯಿ ಇಷ್ರತ್ ಬೇಗಂ ಇವರಿಗೆ ನಾನು ಮತ್ತು ನನ್ನ ತಂಗಿ ಸನಾ ಬೇಗಂ ಅಂತಾ ನಾವು ಇಬ್ಬರು ಹೆಣ್ಣು ಮಕ್ಕಳಿದ್ದು ನನ್ನ ತಂಗಿಗೆ ಗೋಗಿ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ನನಗೆ ಸೋಲಾಪೂರದ ರಫೀಕ್ ಇತನೊಂದಿಗೆ ಮದುವೆ ಮಾಡಿದ್ದು ಇರುತ್ತದೆ. ನನ್ನ ಗಂಡ ಯಾವಾಗಲೂ ಕುಡಿದು ನನಗೆ ತೊಂದರೆ ಮಾಡುತ್ತಿದ್ದರಿಂದ ನಾನು ಹಿಗೇ ಕಳೆದ 7 ವರ್ಷಗಳಿಂದ ಆತನಿಗೆ ಬಿಟ್ಟು ಯಾದಗಿರಿಗೆ ಬಂದು ನನ್ನ ತಂದೆ ತಾಯಿವರೊಂದಿಗೆ ವಾಸವಿದ್ದು ಕೂಲಿಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದೇನೆ. ನನ್ನ ತಂದೆ ನವಾಬ ಚಾಂದ್ ಇತನು ವೀಪರೀತವಾಗಿ ಮಧ್ಯಪಾನ ಮಾಡುವ ಚಟವುಳ್ಳವನಾಗಿದ್ದು, ಯಾವುದೇ ಕೆಲಸಕ್ಕೆ ಹೋಗದೇ ಯಾದಗಿರಿ ನಗರದ ಅಲ್ಲಲ್ಲಿ ತಿರುಗಾಡುತ್ತಾ ಜನರ ಹತ್ತಿರ ಹಣ ಪಡೆದುಕೊಂಡು ಯಾವಾಗಲೂ ಕುಡಿದುಕೊಂಡು ತಿರುಗಾಡುತ್ತಾ ಹಗಲು ವೇಳೆಯಲ್ಲಿ ಮನೆಗೆ ಬರದೇ ರಾತ್ರಿ ವೇಳೆಯಲ್ಲಿ ಬಂದು ಮನೆಯಲ್ಲಿ ಮಲಗುತ್ತಿದ್ದನು. ಹಿಗೀದ್ದು ನಿನ್ನೆ ದಿನಾಂಕ; 21/09/2022 ರಂದು ಸಾಯಂಕಾಲ 6-45 ಪಿಎಮ್ ಸುಮಾರಿಗೆ ನಾನು ಮತ್ತು ನನ್ನ ತಾಯಿ ಇಬ್ಬರು ಮನೆಯಲ್ಲಿರುವಾಗ ನನ್ನ ತಂದೆ ನವಾಬ್ ಚಾಂದ ಇತನೊಂದಿಗೆ ನಮ್ಮ ಏರಿಯಾದ ಇಮ್ತಿಯಾಜ್ ತಂದೆ ಮಹ್ಮದ ಇದ್ರೀಸ್ ಇತನು ನ್ಯೂ ಕನ್ನಡ ಶಾಲೆಯ ಹತ್ತಿರ ಜಗಳ ಮಾಡುತ್ತಿರುವುದಾಗಿ ಗೊತ್ತಾಗಿ ನಾನು ಮತ್ತು ನನ್ನ ತಾಯಿ ಇಬ್ಬರು ಅಲ್ಲಿಗೆ ಹೋಗಿ ನೋಡಲಾಗಿ ನನ್ನ ತಂದೆ ನವಾಬ ಚಾಂದ್ ಇತನು ಕೆಳಗಡೆ ನೆಲದ ಮೇಲೆ ಬಿದಿದ್ದು ಅಲ್ಲೇ ಇದ್ದ ನಮ್ಮ ಏರಿಯಾದ ಖಾಲೀದ ಇತನ ಸಹಾಯದಿಂದ ಮೇಲಕ್ಕೆ ಎಬ್ಬಿಸಿ ವಿಚಾರಿಸಲಾಗಿ ತಿಳಿಸಿದ್ದೆನೆಂದರೆ, ನಾನು ದಗರ್ಾ ಕ್ರಾಸ ಕಡೆಯಿಂದ ಮನೆಗೆ ಬರುತ್ತಿರುವಾಗ ನ್ಯೂಕನ್ನಡ ಶಾಲೆಯ ಮುಂದುಗಡೆ 6-30 ಪಿಎಮ್ ಸುಮಾರಿಗೆ ನನ್ನ ಮುಂದೆ ನಮ್ಮ ಏರಿಯಾದ ಇಮ್ತಿಯಾಜ್ ಇತನು ಬಂದಿದ್ದು ಆಗ ನಾನು ಅವನಿಗೆ ಚಹಾ ಕುಡಿಯಲು ಹಣ ಕೇಳಿದಾಗ ಇಮ್ತಿಯಾಜ ಇತನು ಲೇ ಸೂಳೆ ಮಗನೇ ನಿನಗ್ಯಾಕೆ ಹಣ ಕೊಡಬೇಕು ಅಂತಾ ಬೈದನು. ಆಗ ನಾನು ಆಯಿತು ಹಣ ಕೊಡಲಿಲ್ಲ ಅಂದರೆ ಬೇಡ ನನಗೆ ಬೈಯಬೇಡ ಅಂತಾ ಹೇಳಿ ಅಲ್ಲಿಂದ ನಾನು ಮನೆಗೆ ಬರುತ್ತಿರುವಾಗ ಇಮ್ತಿಯಾಜ ಇತನು ಎಲ್ಲಿಗೆ ಹೋಗುತ್ತೀಯಾ ಬೊಸಡಿಕೆ ಟೆಹರೋ ಅಂತಾ ನನಗೆ ಎದೆಯ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ, ಜೋರಾಗಿ ನನಗೆ ದಬ್ಬಿಕೊಟ್ಟನು. ಅವನು ಜೋರಾಗಿ ದಬ್ಬಿಕೊಟ್ಟಿದ್ದರಿಂದ ನಾನು ನೆಲಕ್ಕೆ ಬಿದಿದ್ದು, ನೆಲಕ್ಕೆ ಬಿದ್ದಾಗ ನನ್ನ ಬಲಗಾಲಿನ ತೊಡೆಗೆ ಕಲ್ಲು ಬಡಿದು ಒಳಪೆಟ್ಟಾಗಿದ್ದರಿಂದ ನನಗೆ ಮೇಲಕ್ಕೆ ಎದ್ದೆಳಲು ಆಗದೇ ಬಿದ್ದಿರುತ್ತೇನೆ. ಆಗ ಖಾಲೀದ ಇತನು ಜಗಳ ಬಿಡಿಸಿ ಇಮ್ತಿಯಾಜನಿಗೆ ಅಲ್ಲಿಂದ ಕಳಿಸಿಕೊಟ್ಟಿದ್ದು ಇರುತ್ತದೆ ಅಂತಾ ತಿಳಿಸಿದನು. ನಂತರ ನನ್ನ ತಂದೆ ನಾನು ಮತ್ತು ನನ್ನ ತಾಯಿ ಹಾಗೂ ಖಾಲೀದ ಸೇರಿಕೊಂಡು ಮನೆಗೆ ಕರೆದುಕೊಂಡು ಹೋದೆವು. ಕಾಲು ನೋವು ಜಾಸ್ತಿ ಆಗಿರುವುದಿಲ್ಲ ಅಂತಾ ಆಸ್ಪತ್ರೆಗೆ ಹೋಗಿರುವುದಿಲ್ಲ. ಆದರೆ ರಾತ್ರಿ ವೇಳೆಯಲ್ಲಿ ನನ್ನ ತಂದೆಗೆ ಕಾಲು ನೋವು ಆಗಿದ್ದರಿಂದ ಇಂದು ದಿನಾಂಕ; 22/09/2022 ರಂದು ಬೆಳೆಗ್ಗೆ 9-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಾಯಿ ಇಷ್ರತ್ ಬೇಗಂ ಇಬ್ಬರು ಕೂಡಿಕೊಂಡು ನಮ್ಮ ತಂದೆಗೆ ಈ ರೀತಿ ಮಾಡಿರುವ ಬಗ್ಗೆ ಇಮ್ತಿಯಾಜ ಇತನ ಮನೆಗೆ ಕೇಳಲು ಹೋದಾಗ ಅಲ್ಲಿ 1) ಇಮ್ತಿಯಾಜ ಮತ್ತು ಆತನ ತಾಯಿ 2) ಹಸೀನಾ ಬೇಗಂ ಗಂಡ ಇದ್ರೀಸ್ ಹಾಗೂ ಸಹೋದರರಾದ 3) ಸಮೀರ್ 4) ಆರೀಫ್ 5) ಇಫರ್ಾನ್ 6) ಇದ್ರೀಸ್ ಇವರುಗಳು ಇದ್ದು, ಇಮ್ತಿಯಾಜ ಇತನು ದಬ್ಬಿದ್ದರಿಂದ ನಮ್ಮ ತಂದೆಗೆ ನಡೆಯಲು ಆಗುತ್ತಿಲ್ಲ ಅಂತಾ ಅಂದಾಗ ಅವರೆಲ್ಲರೂ, ನಿಮ್ಮ ತಂದೆಗೆ ನಾವೇನು ಮಾಡಿಲ್ಲ ಸುಮ್ಮನೆ ನಮ್ಮ ಮನೆಯ ಮುಂದೆ ಬಂದು ಗಲಾಟೆ ಮಾಡುತ್ತೀದ್ದರಾ ನೀವು ಇಲ್ಲಿಂದ ಹೋಗುತ್ತೀರಾ ಇಲ್ಲದಿದ್ದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ನನಗೆ ಅವರೆಲ್ಲರೂ ಕುತ್ತಿಗೆ ಹಿಡಿದು ದಬ್ಬಿ ಒಳಪೆಟ್ಟು ಮಾಡಿದ್ದು ಆಗ ನಮ್ಮ ತಾಯಿ ನನಗೆ ಬಿಡಿಸಿಕೊಂಡು ಮನೆಗೆ ಕರೆದುಕೊಂಡು ಬಂದಳು. ನಂತರ ನಾವು ಅಲ್ಲಿಂದ ಮನೆಗೆ ಬಂದು ನಮ್ಮ ತಂದೆಗೆ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ನನಗೆ ಅಷ್ಟೇನು ಪೆಟ್ಟು ಆಗದೇ ಇದ್ದುದರಿಂದ ನಾನು ಉಪಚಾರ ಪಡೆದುಕೊಂಡಿರುವುದಿಲ್ಲ. ಈಗ ನಾನು ಠಾಣೆಗೆ ಬಂದು ತಮ್ಮಲ್ಲಿ ದೂರು ನೀಡುತ್ತಿದ್ದು ನನಗೆ ಕುತ್ತಿಗೆ ಹಿಡಿದು ದಬ್ಬಾಡಿದ ಮತ್ತು ನನ್ನ ತಂದೆ ನವಾಬ ಚಾಂದ ಇವರಿಗೆ ದಬ್ಬಿಕೊಟ್ಟು ಗುಪ್ತಗಾಯ ಮಾಡಿದ ಈ ಮೇಲಿನವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಯಾದಗಿರಿ ನಗರ ಠಾಣೆ ಗುನ್ನೆ ನಂಬರ. 107/2022 ಕಲಂ 143, 341, 323, 504, 506 ಸಂ. 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.