ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 23-10-2022

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: ಪಿ.ಎ.ಆರ್ ನಂ. 36/2022 ಕಲಂ 109 ಸಿ.ಆರ್.ಪಿ.ಸಿ: ಮಾನ್ಯರವಲ್ಲಿ ನಾನು ಹಸನ್ ಪಟೇಲ್ ಎ.ಎಸ್.ಐ ಯಾದಗಿರಿ ನಗರ ಪೊಲೀಸ್ ಠಾಣೆ ಇದ್ದು, ಈ ಮೂಲಕ ತಮ್ಮಲ್ಲಿ ವರದಿ ಸಲ್ಲಿಸುವುದೇನೆಂದರೆ, ನಿನ್ನೆ ದಿನಾಂಕ 21/10/2022 ರಂದು ರಾತ್ರಿ 11-00 ಗಂಟೆಯಿಂದ ನಾನು ಇಲಾಖಾ ವಾಹನ ನಂ ಕೆ.ಎ 33 ಜಿ 0075 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ರಾತ್ರಿ ಚೆಕ್ಕಿಂಗ್ ಕುರಿತು ಠಾಣೆಯಿಂದ ಹೊರಟೆನು. ಯಾದಗಿರಿ ನಗರದ ಲಕ್ಕಿನಗರ, ಲಕ್ಷ್ಮೀ ನಗರ, ಚಿತ್ತಾಪೂರ ರೋಡ್, ವೀರಭದ್ರೇಶ್ವರ ನಗರ, ಹಳೆಯ ಬಸ್ ನಿಲ್ದಾಣ, ರೈಲು ನಿಲ್ದಾಣ, ಲಾಡೇಜ್ಗಲ್ಲಿ, ಅಜೀಜ್ ಕಾಲೋನಿ, ಹೊಸಾ ಬಸ್ ನಿಲ್ದಾಣ ಏರಿಯಾ ಹಾಗೂ ಇತರ ಕಡೆಗಳಲ್ಲಿ ತಿರುಗಾಡುತ್ತಾ ಇಂದು ದಿನಾಂಕ 22/10/2022 ರಂದು ಬೆಳಿಗ್ಗೆ 4-00 ಗಂಟೆಯ ಸುಮಾರಿಗೆ ಯಾದಗಿರಿ ನಗರ ಸಹರ ಕಾಲೋನಿ ಕೆ.ಇ.ಬಿ ಹತ್ತಿರ ಕಡೆಗೆ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಅಂಗಡಿಗಳ ಮುಂದೆ ಅನುಮಾನ ಆಸ್ಪದವಾಗಿ ತಿರುಗಾಡುತ್ತಿದ್ದನು. ನಮ್ಮನ್ನು ನೋಡಿದ ಅವನು ತನ್ನ ಇರುವಿಕೆಯನ್ನು ಮರೆ ಮಾರೆಮಾಚತೊಡಗಿದನು. ಸದರಿಯವನಿಗೆ ನೋಡಿದ ನಾನು ಆತನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ವಿಳಾಸ ತಪ್ಪು ತಪ್ಪಾಗಿ ಹೇಳತೊಡಗಿದನು. ಮಾತಿನಲ್ಲಿ ಕೂಡ ತಡವರಿಸತೊಡಗಿದ್ದರಿಂದ ಅವನ ಮೇಲೆ ನಮಗೆ ಬಲವಾಗಿ ಅನುಮಾನ ಬಂದ ಕಾರಣ ಕೂಡಲೆ ನಾನು ಅವನಿಗೆ ವಶಕ್ಕೆ ತೆಗೆದುಕೊಂಡು, ಬೆಳಿಗ್ಗೆ 4-30 ಗಂಟೆಗೆ ಯಾದಗಿರಿ ನಗರ ಠಾಣೆಗೆ ಬಂದೆವು. ಠಾಣೆಯಲ್ಲಿ ನಾನು ಆತನಿಗೆ ಕೂಲಂಕುಶವಾಗಿ ವಿಚಾರಿಸಿದಾಗ ತನ್ನ ಹೆಸರು ವೆಂಕಟೇಶ ತಂದೆ ಶಂಕ್ರಯ್ಯ ವಯಾ 50 ವರ್ಷ, ಜಾ|| ಗೊಲ್ಲಾ ಉ|| ಚಾಲಕ ಸಾ|| ಚಿಲ್ಲರ ನಗರ ಉಪ್ಪಲ್ ಹೈದ್ರಬಾದ್ ಅಂತಾ ತಿಳಿಸಿದನು. ಕಾರಣ ಸದರಿಯವನಿಗೆ ಹಾಗೆಯೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾಧ ಮಾಡುವ ಸಂಭವ ಇರುವುದ್ದರಿಂದ ಇಂದು ದಿನಾಂಕ 22/10/2022 ರಂದು ಬೆಳಿಗ್ಗೆ 6-00 ಗಂಟೆಗೆ ಅವನ ವಿರುದ್ದ ಮುಂಜಾಗ್ರತೆ ಕ್ರಮ ಕುರಿತು ಠಾಣೆ ಪಿ.ಎ.ಆರ್ ನಂ 36/2022 ಕಲಂ 109 ಸಿ.ಆರ್.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 46/2022 ಕಲಂ 279, 337, 338 ಐ.ಪಿ.ಸಿ : ಇಂದು ದಿನಾಂಕ: 22/10/2022 ರಂದು 11-30 ಎ.ಎಂ.ಕ್ಕೆ ಶ್ರೀ ಅಬ್ದುಲ್ ಖದೀರ್ ತಂದೆ ಮಹಮದ್ ಖಲೀಲ್ ಶೇಕ್ ವಯ;32 ವರ್ಷ, ಜಾ;ಮುಸ್ಲಿಂ, ಉ;ಮೋ.ಸೈಕಲ್ ಮೆಕಾನಿಕ್, ಸಾ;ಅಜೀಜ್ ಕಾಲನಿ, ಯಾದಗಿರಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ದಿನಾಂಕ 20/10/2022 ರಂದು 8-30 ಪಿ.ಎಂ.ಕ್ಕೆ ಜರುಗಿದ ರಸ್ತೆ ಅಪಘಾತದ ಘಟನೆಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಗಣಕೀಕರಣ ಮಾಡಿದ ಒಂದು ಫಿಯರ್ಾದಿ ದೂರನ್ನು ಹಾಜರುಪಡಿಸಿದ್ದು, ಪಿಯರ್ಾದಿ ಅಜರ್ಿ ಹೇಳಿಕೆಯ ಸಾರಾಂಶವೇನೆಂದರೆ ನಾನು ಈ ಮೂಲಕ ದೂರು ಅಜರ್ಿ ಸಲ್ಲಿಸುವುದೇನೆಂದರೆ ನಮ್ಮ ಸಂಬಂಧಿಕರಾದ ಶ್ರೀ ಜಾಫರ್ ತಂದೆ ಚಾಂದಪಾಶಾ ಇವರ ಮಗನ ಮದುವೆ ಕಾರ್ಯಕ್ರಮವು ನಾರಾಯಣಪೇಟದಲ್ಲಿ ಇದ್ದು, ನನಗೆ ಮದುವೆ ಕಾರ್ಯಕ್ರಮಕ್ಕೆ ಕರೆದಿದ್ದರಿಂದ ದಿನಾಂಕ 20/10/2022 ರಂದು ಸಾಯಂಕಾಲ 8 ಗಂಟೆಗೆ ಒಂದು ಟವೆರಾ ಕಾರ್ ನಂ.ಕೆಎ-01, ಎಡಿ-4834 ನೇದ್ದು ಮುಗಿಸಿದ್ದು ನಾನು ಕೂಡ ಅದರಲ್ಲಿ ಕುಳಿತುಕೊಂಡೆನು. ಅವರ ಸಂಬಂಧಿಕರು ಕೂಡ ಈ ಕಾರಿನಲ್ಲಿ ಬಂದು ಕುಳಿತಿರುತ್ತಾರೆ. ಸಮಯ ಅಂದಾಜು 8-15 ಪಿ.ಎಂ.ಕ್ಕೆ ನಮ್ಮ ಅಜೀಜ್ ಕಾಲನಿಯಿಂದ ನಾರಾಯಣಪೇಟಕ್ಕೆ ಹೊರಟೆವು ನಮ್ಮ ಟವೆರಾ ಕಾರನ್ನು ಮಹಮದ್ ಖದೀರ್ ತಂದೆ ಗುಲಾಮ ದಸ್ತಗೀರ ಶೇಕ್ ಸಾ;ಅಜೀಜ ಕಾಲನಿ ಯಾದಗಿರಿ ಇವರು ನಡೆಸಿಕೊಂಡು ನಾರಾಯಣಪೇಟಕ್ಕೆ ಹೋಗುತ್ತಿದ್ದಾಗ ಮಾರ್ಗ ಮದ್ಯೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆ ಮೇಲೆ ಬರುವ ಕೆ.ಎಸ್.ಆರ್.ಟಿ.ಸಿ ವರ್ಕಶಾಪ್ ದಾಟಿದ ನಂತರ ಅಶೋಕನಗರ ತಾಂಡಾ ಕ್ರಾಸ್ ಹತ್ತಿರ ಸಮಯ 8-30 ಪಿ.ಎಂ.ಕ್ಕೆ ನಾವು ನೋಡು ನೋಡುತ್ತಿದ್ದಂತೆ ನಮ್ಮ ಎದುರುಗಡೆ ಬರುತ್ತಿದ್ದ ಒಬ್ಬ ಲಾರಿ ಕಂಟೇನರ್ ಚಾಲಕನು ತನ್ನ ವಾಹನವನ್ನು ಮುಂಡರಗಿ ಕಡೆಯಿಂದ ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ತನ್ನ ಮುಂದೆ ಹೊರಟಿದ್ದ ಒಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ತಾನು ಹೋಗುತ್ತಿದ್ದ ರಸ್ತೆ ಮಾರ್ಗವನ್ನು ಬಿಟು,್ಟ ನಮ್ಮ ಕಾರ್ ಹೋಗುತ್ತಿದ್ದ ರಸ್ತೆಗೆ ಮಾರ್ಗದ ಕಡೆಗೆ ಬಂದು ನಮ್ಮ ಕಾರಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ, ಸದರಿ ಅಪಘಾತದ ರಭಸಕ್ಕೆ ನಮ್ಮ ಕಾರ್ ರಸ್ತೆಯ ಬದಿಯಲ್ಲಿ ಕೆಳಗೆ ಬಂದು ನಿಂತಿರುತ್ತದೆ. ಸದರಿ ಅಪಘಾತದಲ್ಲಿ ಕಾರಿನಲ್ಲಿದ್ದ ನನಗೆ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ, ಜಾಫರ್ ಇವರ ಸಂಬಂಧಿ ಹುಡುಗಿಯಾದ ಆಯೇಷಾ ತಂದೆ ನಜೀರ್ ಶೇಕ್ ವಯ;14 ವರ್ಷ, ಈಕೆಗೆ ಮುಖಕ್ಕೆ ಅಲ್ಲಲ್ಲಿ ತರಚಿದ ರಕ್ತಗಾಯ, ತಲೆಯ ಬಲಭಾಗಕ್ಕೆ ಭಾರೀ ರಕ್ತಗಾಯವಾಗಿರುತ್ತದೆ. ನಮ್ಮ ಕಾರ್ ಚಾಲಕ ಮಹಮದ್ ಖದೀರ್ ಈತನಿಗೆ ಬಲಭುಜಕ್ಕೆ ಭಾರೀ ಗುಪ್ತಗಾಯ ಆಗಿರುತ್ತದೆ. ಮತ್ತು ಕಾರಿನಲ್ಲಿದ್ದ ಉಳಿದವರಿಗೆ ಯಾವುದೇ ಗಾಯ, ವಗೈರೆ ಕಂಡು ಬಂದಿರುವುದಿಲ್ಲ. ನಮ್ಮ ಕಾರು ಬಲಭಾಗದ ಸೈಡಿಗೆ ಭಾರೀ ಡ್ಯಾಮೇಜ್ ಆಗಿರುತ್ತದೆ. ನಮಗೆ ಅಪಘಾತ ಪಡಿಸಿದ ಲಾರಿ ಕಂಟೇನರ್ ನಂಬರ ನೋಡಲಾಗಿ ಎಮ್.ಎಚ್-46, ಎ.ಆರ್-6166 ನೇದ್ದು ಇದ್ದು, ಅದರ ಚಾಲಕನು ಘಟನಾ ಸ್ಥಳದಲ್ಲಿ ಹಾಜರಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಜಾನಿಮಿಯಾ ತಂದೆ ಜಹೀರುದ್ದೀನ್ ಜಮಾದಾರ್ ಸಾ;ಜಲಕೋಟ್ ತಾ;ತುಳಜಾಪುರ, ಜಿ;ಉಸ್ಮಾನಬಾದ್ (ಮಹಾರಾಷ್ಟ್ರ) ಅಂತಾ ತಿಳಿಸಿರುತ್ತಾನೆ. ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ಹಾಗೂ ಹೈವೆ ಪೋಲೀಸರು ಬಂದಿದ್ದು, ನಾವು ಗಾಯಾಳುಗಳಿಗೆ ಅಂಬುಲೆನ್ಸ್ ನಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಉಪಚಾರ ಕುರಿತು ಕರೆದುಕೊಂಡು ಬಂದಿರುತ್ತೇವೆ. ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಆಯೇಷಾ ಈಕೆಗೆ ಉಪಚರಿಸಿದ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಗೆ ರೆಫರ್ ಮಾಡಿದ್ದು, ಆಗ ಅಪಘಾತದ ಬಗ್ಗೆ ವಿಚಾರಣೆಗೆ ಬಂದಿದ್ದ ಸಂಚಾರಿ ಠಾಣೆಯ ಪೊಲಿಸರಿಗೆ ನಾವು ಈ ಘಟನೆ ಬಗ್ಗೆ ಆಯೇಷಾ ತಂದೆಗೆ ಪೋನ್ ಮಾಡಿ ತಿಳಿಸಿದ್ದು, ಅವರು ನಾಳೆ ಬರುವುದಾಗಿ ಹೇಳಿದ್ದು, ಅವರು ಬಂದ ನಂತರ ವಿಚಾರಿಸಿ ತಿಳಿಸುವುದಾಗಿ ಹೇಳಿದ್ದು ಇರುತ್ತದೆ. ಹೀಗಿದ್ದು ಆಯೇಷಾ ಈಕೆಯು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು, ಈ ಘಟನೆ ಬಗ್ಗೆ ಆಯೇಷಾ ತಂದೆ ಹಾಗೂ ನಮ್ಮ ಮನೆಯ ಹಿರಿಯರು ಕೇಸು ಮಾಡು ಅಂತಾ ನನಗೆ ತಿಳಿಸಿದ್ದರಿಂದ ಇಂದು ದಿನಾಂಕ 22/10/2022 ರಂದು ತಡವಾಗಿ ಠಾಣೆಗೆ ಬಂದಿದ್ದು, ದಿನಾಂಕ 20/10/2022 ರಂದು ರಾತ್ರಿ 8-30 ಪಿ.ಎಂ.ಕ್ಕೆ ಯಾದಗಿರಿ-ಹೈದ್ರಾಬಾದ್ ರಸ್ತೆಯ ಕೆ.ಎಸ್.ಆರ್.ಟಿ.ಸಿ ವರ್ಕಶಾಪ್ ಹತ್ತಿರದ ಅಶೋಕ ನಗರ ತಾಂಡಾದ ಕ್ರಾಸ್ ಹತ್ತಿರ ನಮ್ಮ ಕಾರ್ ನಂ.ಕೆಎ-01, ಎಡಿ-4834 ನೇದ್ದಕ್ಕೆ, ಲಾರಿ ಕಂಟೇನರ್ ನಂ. ಎಮ್.ಎಚ್-46, ಎ.ಆರ್-6166 ನೇದ್ದರ ಚಾಲಕ ಜಾನಿಮಿಯಾ ಈತನು ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಆತನ ಮೇಲೆ ಕಾನೂನು ಪ್ರಕಾರ ಮುಂದಿನ ಕ್ರಮ ಜರುಗಿಸಿರಿ ಅಂತಾ ಈ ಮೂಲಕ ದೂರು ಸಲ್ಲಿಸಿರುತ್ತೇನೆ ಅಂತಾ ವಿನಂತಿ ಅಂತಾ ಕೊಟ್ಟ ಪಿಯರ್ಾದಿ ಅಜರ್ಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 46/2022 ಕಲಂ: 279, 337, 338 ಐ.ಪಿ.ಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 155/2022 ಕಲಂ: 143, 147, 148, 448, 323, 324,504, 506 ಸಂಗಡ 149 ಐಪಿಸಿ.: ಫೀರ್ಯಾದಿಯು ತನಗೆ ಮೊದಲನೇ ಹೆಂಡತಿಯ ಹೊಟ್ಟಿಲೆ ಮಕ್ಕಳಾಗದೇ ಇರುವುದರಿಂದ ಸುಮಾರು 14-15 ವರ್ಷಗಳ ಹಿಂದೆ 2ನೇ ಹೆಂಡತಿಯನ್ನು ಮದುವೆ ಮಾಡಿಕೊಂಡಿದ್ದು ಆಕೆಯ ಹೊಟ್ಟಿಲೇ ಕೂಡ ಮಕ್ಕಳಾಗಿರುವುದಿಲ್ಲ. ಆ ನಂತರ ತನ್ನ ಸಂಬಂದಿಕರೊಬ್ಬರ ಮಗಳನ್ನು ಸಾಕಿ ಸಲುವಿದ್ದು ಆಕೆಗೆ ತಮ್ಮೂರಿನಲ್ಲಿ ಗಂಡು ನೋಡಿ ಮದುವೆ ಮಾಡಿ ಅವರು ತನ್ನ ಮನೆ ಅಳಿತನಕ್ಕೆಂದು ತಗೊಂಡಿರುತ್ತಾನೆ. ಒಂದು ವೇಳೆ ಅವರನ್ನು ತನ್ನ ಮನೆಗೆ ಮಾಡಿಕೊಳ್ಳದೇ ಇದ್ದರೆ ಫಿರ್ಯಾದಿಯ ಹೊಲ-ಮನೆಯು ಫಿರ್ಯಾದಿ ತೀರಿಕೊಂಡ ನಂತರ ತಮಗೆ ಸಿಗುತ್ತದೆ ಎಂಬ ಕಾರಣಕ್ಕಾಗಿ ಆರೋಪಿತರೆಲ್ಲಾರು ಫಿರ್ಯಾದಿಯೊಂದಿಗೆ ದಿನಾಂಕ 15.10.2022 ರಂದು ಸಂಜೆ 6:30 ಗಂಟೆಗೆ ಆರೋಪಿತರೆಲ್ಲಾರು ಅಕ್ರಮ ಕೂಡ ರಚಿಸಿಕೊಂಡು ಕೈಯಲ್ಲಿ ಕಟ್ಟಿಗೆ-ಬಡಿಗೆಳನ್ನು ಹಿಡಿಕೊಂಡು ಫಿರ್ಯಾದಿಯ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಅವರೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದಿದ್ದು ಅಲ್ಲದೇ ಫಿರ್ಯಾದಿಗೆ, ಆತನ 2ನೇ ಹೆಂಡತಿಗೆ, ಅಳಿಯನಿಗೆ ಮನೆಯೊಳಗಿನಿಂದ ಹೊರಗಡೆ ಎಳೆದುಕೊಂಡು ಬಂದು ಕೈಯಿಂದ, ಕಟ್ಟಿಗೆಯಿಂದ ಹೊಡೆ-ಬಡೆ ಮಾಡಿ ಕಾಲಿನಿಂದ ಒದ್ದಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ್ದರಿಂದ ಫಿರ್ಯಾದಿಯು ತನ್ನ ದವಾಖಾನೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ತನ್ನ ಹೆಂಡತಿಯೊಂದಿಗೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 117/2022 ಕಲಂ 279, 337, 338 ಐಪಿಸಿ ಸಂಗಡ 187 ಐ.ಎಮ್.ವ್ಹಿ ಆಕ್ಟ್: ದಿನಾಂಕ 21.10.2022 ರಂದು ಸಾಯಂಕಾಲ 5.00 ಗಂಟೆಗೆ ಬಾಲಂಕು ಆಸ್ಪತ್ರೆ, ರಾಯಚೂರದಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ ಸದರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ದೇವರಾಜ ತಂದೆ ಚನ್ನಪ್ಪ ನರಸಪ್ಪನ್ನೋರ ಸಾ|| ಗೌಡಗೇರಾ ಗ್ರಾಮ ಈತನ ಫಿಯರ್ಾದಿ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ದಿನಾಂಕ 21.10.2022 ರಂದು ಬೆಳಿಗ್ಗೆ ನಾನು ಮತ್ತು ನನ್ನ ಸ್ನೇಹಿತ ಶಿವು ತಂದೆ ಸಣ್ಣ ಹಣಮಯ್ಯ ಬಾಗ್ಲೇರ ಇಬ್ಬರೂ ಕೂಡಿಕೊಂಡು ವೈಯಕ್ತಿಕ ಕೆಲಸದ ಮೇಲೆ ಫ್ಯಾಶನ ಪ್ರೋ ಮೋಟಾರ ಸೈಕಲ ನಂಬರ ಕೆಎ-33, ಎಸ್-1013 ನೇದ್ದರ ಮೇಲೆ ಕಾಳೇಬೆಳಗುಂದಿ ಗ್ರಾಮಕ್ಕೆ ಹೋಗಿ ಮರಳಿ ನಿನ್ನೆಯೇ ದಿನಾಂಕ 21.10.2022 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ನಾವು ಮೋಟಾರ ಸೈಕಲ ಮೇಲಿಂದ ಕಾಳೇಬೆಳಗುಂದಿಯಿಂದ-ಎನ್.ಹೆಚ್.-150 ಹೈವೇ ರೋಡಗೆ ಬಂದಾಗ ಯಾದಗಿರಿ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದ ಕ್ರೂಶರ ವಾಹನ ನಂಬರ ಕೆಎ-32, 7288 ನೇದ್ದರ ಚಾಲಕ ಕಿಲ್ಲನಕೇರಾ ಕ್ರಾಸ ಬಳಿ ಕ್ರಾಸ ಮಾಡುತ್ತಿದ್ದ ನಮ್ಮ ಮೋಟಾರ ಸೈಕಲಗೆ ಡಿಕ್ಕಿಪಡಿಸಿದ್ದರಿಂದ ಮೋಟಾರ ಸೈಕಲ ರಸ್ತೆ ಮೇಲೆ ಬಿದ್ದಿದ್ದು, ಕ್ರೂಸರ ವಾಹನ ಎನ್.ಹೆಚ್-150 ಮೇನ ಕೆಳಗಡೆ ಜಮೀನುದಲ್ಲಿ ಬಿದ್ದಿರುತ್ತದೆ. ಮೋಟಾರ ಸೈಕಲ ನಡೆಸುತ್ತಿದ್ದ ಶಿವುಗೆ ಬಲಗಾಲು ಮುರಿದಿದ್ದು, ಎಡಗಾಲಿಗೂ ಕೂಡ ಭಾರಿ ರಕ್ತಗಾಯವಾಗಿರುತ್ತದೆ. ಮೋಟಾರ ಸೈಕಲ ಹಿಂದೆ ಕುಳಿತಿದ್ದ ನನಗೆ ಅಪಘಾತದಲ್ಲಿ ಬಲಗಾಲು ಮೊಣಕಾಲ ಮೇಲೆ ರಕ್ತಗಾಯವಾಗಿರುತ್ತದೆ. ಕ್ರೂಸರ ವಾಹನದಲ್ಲಿದ್ದವರ ಹೆಸರು ಮತ್ತು ವಿಳಾಸ ಗೊತ್ತಿರುವದಿಲ್ಲ. ನಮಗೆ ಡಿಕ್ಕಿಪಡಿಸಿದ ವಾಹನ ನಂಬರ ನೋಡಲಾಗಿ ಕೆಎ-32-ಎ-7288 ಅಂತಾ ಇದ್ದು ಅದರ ಚಾಲಕನ ಹೆಸರು ವಿಳಾಸ ಗೊತ್ತಿರುವದಿಲ್ಲ. ನಂತರ ನಾವು ಒಂದು ಖಾಸಗಿ ವಾಹನದಲ್ಲಿ ಸರಕಾರಿ ಆಸ್ಪತ್ರೆ, ಸೈದಾಪೂರಗೆ ಬಂದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಬಾಲಂಕು ಆಸ್ಪತ್ರೆ, ರಾಯಚೂರಗೆ ಬಂದು ಸೇರಿಕೆಯಾಗಿರುತ್ತೇವೆ. ಕಾರಣ ಎನ್ ಹೆಚ್-150 ರೋಡಿನ ಮೇಲೆ ಕಿಲ್ಲನಕೇರಾ ಕ್ರಾಸ ಹತ್ತಿರ ಮೋಟಾರ್ ಅತೀವೇಗ ಮತ್ತು ಅಲಕ್ಷತನದಿಂದ ಕ್ರೂಸರ ವಾಹನ ಓಡಿಸಿಕೊಂಡು ಬಂದು ಮೋಟಾರ ಸೈಕಲಗೆ ಡಿಕ್ಕಿಪಡಿಸಿ ಅಪಘಾತಪಡಿಸಿದ ಕ್ರೂಸರ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆ. ಅಂತಾ ಆಪಾದನೆ.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 121/2022 ಕಲಂ: 78(3) ಕೆ.ಪಿ ಎಕ್ಟ 1963: ಇಂದು ದಿನಾಂಕ:22/10/2022 ರಂದು 12-15 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೆಮಾಲು ಹಾಜರಪಡಿಸಿ, ಜಪ್ತಿ ಪಂಚನಾಮೆಯೊಂದಿಗೆ ಸರಕಾರಿ ತಫರ್ೆಯಿಂದ ವರದಿ ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ:22/10/2022 ರಂದು ಸಮಯ ಬೆಳಗ್ಗೆ 8-45 ಗಂಟೆ ಸುಮಾರಿಗೆ ನಾನು ಮತ್ತು ಸಿಬ್ಬಂದಿಯವರಾದ ಮಲ್ಲಪ್ಪ ಹೆಚ್.ಸಿ 72, ತಾಯಪ್ಪ ಹೆಚ್ಸಿ 79, ಹುಲಗಪ್ಪ ಪಿಸಿ 344 ಮತ್ತು ಗೋವಿಂದ ಪಿಸಿ 16 ರವರು ಹಾಗೂ ಜೀಪ ಚಾಲಕ ಮಹೇಂದ್ರ ಪಿಸಿ 254 ರವರು ಪೋಲಿಸ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ಬೀಟ್ ಸಂ. 07 ರಲ್ಲಿ ಬರುವ ಕಾಡಂಗೇರಾ (ಬಿ) ಗ್ರಾಮದ ಹನುಮಾನ ದೇವಸ್ಥಾನದ ಕಟ್ಟೆಯ ಸಮೀಪ ಇವರ ಸಾರ್ವಜನಿಕ ಹೊಟೇಲ್ ಹತ್ತಿರ ಒಬ್ಬನು ಕುಳಿತುಕೊಂಡು ಅಲ್ಲಿಂದ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಕಲ್ಯಾಣ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿರುತ್ತದೆ ಎಂದು ಕಾಡಂಗೇರಾ (ಬಿ) ಗ್ರಾಮದ ಬೀಟ್ ಸಿಬ್ಬಂದಿಯವರಾದ ಮಲ್ಲಪ್ಪ ಹೆಚ್.ಸಿ 72 ರವರು ತಿಳಿಸಿದ ಮೇರೆಗೆ ಇಬ್ಬರೂ ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ದಾಳಿ ಬಗ್ಗೆ ಮಾಹಿತಿ ತಿಳಿಸಿ, ಸದರಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪಿನಲ್ಲಿ ಕುಳಿತು ವಡಗೇರಾ ಠಾಣೆಯಿಂದ ಹೊರಟು ಸಮಯ 10:00 ಎಎಮ್ ಸುಮಾರಿಗೆ ಕಾಡಂಗೇರಾ (ಬಿ) ಗ್ರಾಮ ತಲುಪಿ ಕಾಡಂಗೇರಾ (ಬಿ) ಗ್ರಾಮದ ಶರಣಪ್ಪ ಕುಂಬಾರ ಇವರ ಹೊಟೇಲ್ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಮರೆಯಾಗಿ ನಿಂತು ನೋಡಲಾಗಿ ಗ್ರಾಮದ ಹನುಮಾನ ದೇವಸ್ಥಾನದ ಸಾರ್ವಜನಿಕ ಕಟ್ಟೆಯ ಮೇಲೆ ಒಬ್ಬ ವ್ಯಕ್ತಿ ಕುಳಿತು ದಾರಿ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಆಡಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಒಂದೊಂದು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 10-20 ಎಎಮ್ ಕ್ಕೆ ನಾವು ಅವನ ಮೇಲೆ ದಾಳಿ ಮಾಡಿ ಅವನಿಗೆ ವಶಕ್ಕೆ ಪಡೆದುಕೊಂಡು ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ಗೋವಿಂದಪ್ಪ ತಂದೆ ಸಿದ್ದಪ್ಪ ಕೊಂಬಿನೋರ ವ:40 ವರ್ಷ ಜಾ:ಹೊಲೆಯ ಉ:ಒಕ್ಕಲುತನ ಸಾ:ಕಾಡಂಗೇರಾ (ಬಿ) ತಾ:ವಡಗೇರಾ ಎಂದು ಹೇಳಿದನು. ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ಅಂಕಿಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 1120/-ರೂ. 3) ಒಂದು ಬಾಲ್ ಪೆನ್ನ ಅ.ಕಿ.00=00 ಹೀಗೆ ಒಟ್ಟು 1120/- ರೂ. ಇವುಗಳನ್ನು ಹಾಜರಪಡಿಸಿದ್ದು, ಆತನು ಹಾಜರುಪಡಿಸಿದ ಹಣವು ಮಟಕಾ ನಂಬರ ಬರೆದುಕೊಟ್ಟಿದ್ದರಿಂದ ಬಂದಿದ್ದು ಅಂತಾ ತಿಳಿಸಿದನು. ಸದರಿ ಘಟನೆ ಸ್ಥಳವು ಕಾಡಂಗೇರಾ (ಬಿ) ಗ್ರಾಮದ ಹನುಮಾನ ದೇವಸ್ಥಾನ ಕಟ್ಟೆ ಹತ್ತಿರ ಇರುತ್ತದೆ. ಸದರಿ ವಶಕ್ಕೆ ಪಡೆದುಕೊಂಡ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಸದರಿ ಆರೋಪಿ, ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿದ್ದು ಇರುತ್ತದೆ. ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 121/2022 ಕಲಂ: 78(3) ಕೆ.ಪಿ ಎಕ್ಟ 1963 ರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಕೆಂಭಾವಿ ಪೊಲೀಸ ಠಾಣೆ:-
ಗುನ್ನೆ ನಂ: 156/2022 ಕಲಂ: 87 ಕೆಪಿ ಯಾಕ್ಟ: ಇಂದು ದಿನಾಂಕ 22/10/2022 ರಂದು 7.00 ಪಿಎಂ ಕ್ಕೆ ಶ್ರೀ ಹಣಮಂತ ಬಂಕಲಗಿ ಪಿ.ಎಸ್.ಐ(ಕಾ.ಸು) ರವರು ಠಾಣೆಗೆ ಹಾಜರಾಗಿ ಮುದ್ದೆಮಾಲು, ಜಪ್ತಿ ಪಂಚನಾಮೆ, ಆರೋಪಿತರು ಹಾಗೂ ವರದಿ ನೀಡಿ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ವರದಿಯ ಸಾರಾಂಶವೇನೆಂದರೆ, ಇಂದು ದಿನಾಂಕ 22/10/2022 ರಂದು 4.00 ಪಿಎಂ ಕ್ಕೆ ನಾನು ಠಾಣೆಯಲ್ಲಿದ್ದಾಗ ಮಾವಿನಮಟ್ಟಿ ಸೀಮಾಂತರದ ಕೆರೆಯ ಪಕ್ಕದಲ್ಲಿನ ಸರಕಾರಿ ಗುಡ್ಡದ ಬಯಲು ಜಾಗೆಯ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಕೂಡಿ ಹಣವನ್ನು ಪಣಕ್ಕೆ ಹಚ್ಚಿ ಕೋಳಿ ಕಾಳಗ ಎಂಬ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು ಮತ್ತು ಠಾಣೆಯ ಶಿವರಾಜ ಹೆಚ್ಸಿ 85, ಶಿವಕುಮಾರ ಹೆಚ್.ಸಿ 91, ಆನಂದ ಪಿಸಿ 43, ಪ್ರಭುಗೌಡ 361, ಕಾಶಿನಾಥ ಪಿಸಿ 293, ಬಸವರಾಜ ಪಿಸಿ 363, ಮಾಳಪ್ಪ ಪಿಸಿ 29, ವಿಜಯಕುಮಾರ ಪಿಸಿ 103 ಮತ್ತು ರವಿಕುಮಾರ ಎ.ಹೆಚ್.ಸಿ 38 ರವರನ್ನು ಹಾಗೂ ಇಬ್ಬರು ಪಂಚರಾದ ಇಮ್ರಾನ್ ತಂದೆ ಇಕ್ಬಾಲಸಾಬ ಜಾಗೀರದಾರ ಮತ್ತು ಖಯ್ಯೂಮ್ ತಂದೆ ಅಬ್ದುಲಸಾಬ ಗೋಗಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಮತ್ತು ಒಂದು ಖಾಸಗಿ ಜೀಪಿನಲ್ಲಿ ಠಾಣೆಯಿಂದ 4.15 ಪಿಎಂ ಕ್ಕೆ ಹೊರಟು 4.55 ಪಿಎಂ ಕ್ಕೆ ಮಾವಿನಮಟ್ಟಿ ಸೀಮಾಂತರದ ಕೆರೆಯ ಪಕ್ಕದಲ್ಲಿನ ಸರಕಾರಿ ಗುಡ್ಡದ ಬಯಲು ಜಾಗೆಯ ಸಾರ್ವಜನಿಕ ಸ್ಥಳದ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಕೆಲವು ಜನರು ಹಣ ಪಣಕ್ಕಿಟ್ಟು ಕೆಂಪು ಹುಂಜಕ್ಕೆ 100 ರೂಪಾಯಿ, ಬಿಳಿ ಹುಂಜಕ್ಕೆ 100 ರೂಪಾಯಿ ಅಂತಾ ಹುಂಜಗಳನ್ನು ಜಗಳಕ್ಕೆ ಹಚ್ಚಿ ಕೋಳಿ ಪಂದ್ಯಾಟದ ಮೂಲಕ ಜೂಜಾಟ ಆಡುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು 5.00 ಪಿಎಂ ಕ್ಕೆ ನಾನು ಮತ್ತು ಸಿಬ್ಬಂದಿ ಜನರು ಕೂಡಿ ಒಮ್ಮೆಲೇ ದಾಳಿ ಮಾಡಿದ್ದು ದಾಳಿಯಲ್ಲಿ 09 ಜನರು ಸಿಕ್ಕಿದ್ದು ಉಳಿದವರು ಓಡಿ ಹೋಗಿದ್ದು ಸಿಕ್ಕವರ ಹೆಸರು ವಿಳಾಸ ವಿಚಾರಿಸಲಾಗಿ 1) ಭೀಮಣ್ಣ ತಂದೆ ಹಣಮಂತ್ರಾಯ ಗೋಸಿ ವ|| 40 ಜಾ|| ಕುರುಬರ ಉ|| ಒಕ್ಕಲುತನ ಸಾ|| ಚಿಗರಿಹಾಳ 2) ರಾಮಣ್ಣ ತಂದೆ ಭೀಮಣ್ಣ ತಳ್ಳಳ್ಳಿ ವ|| 36 ಜಾ|| ಬೇಡರ ಉ|| ಒಕ್ಕಲುತನ ಸಾ|| ಕರಡಕಲ್ 3) ದೇವಪ್ಪ ತಂದೆ ಹಣಮಂತ ಕೆರಿಕೋಡಿ ವ|| 41 ಜಾ|| ಬೇಡರ ಉ|| ಒಕ್ಕಲುತನ ಸಾ|| ಹೊಸ ಸಿದ್ದಾಪುರ 4) ಶರಣಬಸವ ತಂದೆ ದೇವಿಂದ್ರಪ್ಪ ಬಡಿಗೇರ ವ|| 31 ಜಾ|| ಹೊಲೆಯ ಉ|| ಕೂಲಿ ಸಾ|| ಮಂಗಳೂರ 5) ಸುಭಾಸ ತಂದೆ ಶರಣಪ್ಪ ಹವಲ್ದಾರ ವ|| 30 ಜಾ|| ಬೇಡರ ಉ|| ಕೂಲಿ ಸಾ|| ನಗನೂರ 6) ಕೊಂಡಯ್ಯ ತಂದೆ ಭೀಮರಾಯ ಪಾರ್ವತಿದೊಡ್ಡಿ ವ|| 20 ಜಾ|| ಬೇಡರ ಉ|| ಖಾಸಗಿ ಕೆಲಸ ಸಾ|| ಮಾಚಗುಂಡಾಳ 7) ಮಲ್ಲನಗೌಡ ತಂದೆ ಬೈಲಪ್ಪಗೌಡ ಪೊಲೀಸ್ ಪಾಟೀಲ್ ವ|| 25 ಜಾ|| ಬೇಡರ ಉ|| ಒಕ್ಕಲುತನ ಸಾ|| ಗೌಡಗೇರಾ 8) ನಿಂಗಯ್ಯ ತಂದೆ ಸಕ್ರೆಪ್ಪ ಗುತ್ತೆದಾರ ವ|| 25 ಜಾ|| ಈಳಿಗೇರ ಉ|| ಒಕ್ಕಲುತನ ಸಾ|| ಮಂಗಿಹಾಳ 9) ಮೌನೇಶ ತಂದೆ ಭೀಮಣ್ಣ ಬಂಡೋಳಿ ವ|| 30 ಜಾ|| ಬೇಡರ ಉ|| ಒಕ್ಕಲುತನ ಸಾ|| ಕರಡಕಲ್ ತಾ|| ಸುರಪೂರ ಅಂತ ತಿಳಿಸಿದ್ದು ಎಲ್ಲರ ಮಧ್ಯದ ಕಣದಲ್ಲಿ 6400/- ರೂ ಹಾಗೂ 3 ಹುಂಜಗಳು ಅಂ|| ಕಿ|| 1200/- ರೂ ಗಳು ಹಾಗೂ ಕೋಳಿ ಪಂದ್ಯಾಟದ ಮೂಲಕ ಜೂಜಾಟ ಆಡುತ್ತಿರುವ ಸ್ಥಳದ ಹತ್ತಿರ 15 ಸೈಕಲ್ ಮೋಟಾರಗಳು ಸಿಕ್ಕಿದ್ದು 1) ಸ್ಪ್ಲೆಂಡರ ಪ್ಲಸ್ ನಂ ಕೆಎ 33 ವೈ 8602 ಅಂ|| ಕಿ|| 15000/- ರೂ 2) ಯುನಿಕಾರ್ನ ನಂ ಕೆಎ 33 ಯು 6790 ಅಂ|| ಕಿ|| 25000/- ರೂ 3) ಸಿಟಿ 100 ನಂ ಕೆಎ 33 ಎಕ್ಸ್ 5608 ಅಂ|| ಕಿ|| 15000/- ರೂ 4) ಪಲ್ಸರ್ 150 ನಂ ಕೆಎ 05 ಎಲ್.ಸಿ 5496 ಅಂ|| ಕಿ|| 25000/- ರೂ 5) ಹೋಂಡಾ ಶೈನ್ ನಂ ಕೆಎ 33 ವಿ 2567 ಅಂ|| ಕಿ|| 20000/- ರೂ 6) ಹೀರೋ ಹೋಂಡಾ ನಂ ಕೆಎ 33 ಹೆಚ್ 7442 ಅಂ|| ಕಿ|| 15000/- ರೂ 7) ಪ್ಲಾಟಿನಾ ನಂ ಕೆಎ 33 ವಿ 4239 ಅಂ|| ಕಿ|| 15000/- ರೂ 8) ಡ್ರೀಮ್ ಯುಗ ನಂ ಕೆಎ 33 ಜೆ 4046 ಅಂ|| ಕಿ|| 15000/- ರೂ 9) ಹೀರೋ ಹೋಂಡಾ ನಂ ಕೆಎ 33 ವೈ 4533 ಅಂ|| ಕಿ|| 15000/- ರೂ 10) ಡಿಸ್ಕವರಿ ನಂ ಕೆಎ 02 ಹೆಚ್.ಜೆ 0745 ಅಂ|| ಕಿ|| 15000/- ರೂ 11) ಹೆಚ್.ಎಫ್. ಡಿಲಕ್ಸ್ ಚೆಸ್ಸಿ ನಂ ಟಃಐಊಂ11ಚಿಐಈ9ಂ12521 ಅಂ|| ಕಿ|| 15000/- ರೂ 12) ಹೋಂಡಾ ಶೈನ್ ನಂ ಕೆಎ 33 ವೈ 7309 ಅಂ|| ಕಿ|| 20000/- ರೂ 13) ಪ್ಯಾಶನ್ ಪ್ರೋ ನಂ ಕೆಎ 28 ಇಸಿ 7802 ಅಂ|| ಕಿ|| 20000/- ರೂ 14) ಸ್ಪ್ಲೆಂಡರ್ ಪ್ಲಸ್ ನಂ ಕೆಎ 33 ವಿ 5924 ಅಂ|| ಕಿ|| 15000/- ರೂ 15) ಟಿವಿಎಸ್ ಸ್ಟಾರ ಸಿಟಿ ನಂ ಕೆಎ 33 ಆರ್ 7690 ಅಂ|| ಕಿ|| 15000/- ರೂ ಗಳು ಸಿಕ್ಕಿದ್ದು ಅವುಗಳನ್ನು ಜಪ್ತಿ ಪಂಚನಾಮೆಯ ಮೂಲಕ ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 5.00 ಪಿಎಂ ದಿಂದ 6.00 ಪಿಎಂ ದವರೆಗೆ ಮಾಡಿದ್ದು ನಮಗೆ ದಾಳಿಯಲ್ಲಿ ಸಿಕ್ಕ ವ್ಯಕ್ತಿಗಳಿಗೆ ಪಂದ್ಯಾಟ ನಡೆಸಿಕೊಂಡು ಹೋಗುವ ವ್ಯಕ್ತಿ ಯಾರು ಅಂತಾ ವಿಚಾರಿಸಿದಾಗ ರಾಮಪ್ಪ ತಂದೆ ವಿಜಯಕುಮಾರ ಸಾ|| ಹೆಗ್ಗಣದೊಡ್ಡಿ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯು ಓಡಿ ಹೋಗಿದ್ದು ಅವನು ಸಿಕ್ಕಿರುವುದಿಲ್ಲ. ದಾಳಿಯಲ್ಲಿ ಸಿಕ್ಕ 9 ಜನ ಹಾಗೂ ಪಂದ್ಯಾಟ ನಡೆಸಿ ಓಡಿ ಹೋದ ರಾಮಪ್ಪ ರವರ ಮೇಲೆ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಕೆಂಭಾವಿ ಠಾಣೆ ಗುನ್ನೆ ನಂ 156/2022 ಕಲಂ 87 ಕೆಪಿ ಯಾಕ್ಟ್ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದ.

ಇತ್ತೀಚಿನ ನವೀಕರಣ​ : 23-10-2022 01:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080