ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 23-11-2021

ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 178/2021 ಕಲಂ: 279, 337, 338 ಐಪಿಸಿ : ಇಂದು ದಿ: 22/11/21 ರಂದು 8ಪಿಎಮ್ಕ್ಕೆ ಶ್ರೀ ಮಾನಪ್ಪ ತಂದೆ ನಾಗಪ್ಪ ಮುದಗುಣಿ ಸಾ|| ಬೈರಿಮಡ್ಡಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಏನೆಂದರೆ, ನಾನು ಮತ್ತು ಬಸವರಾಜ ತಂದೆ ಸಂಗಪ್ಪ ಕುಂಬಾರ ಸಾ|| ರಂಗಂಪೇಠ, ಬಸವರಾಜ ತಂದೆ ಮಲ್ಲಪ್ಪ ತಳವಾರ ಸಾ|| ಹೊಸ ಸಿದ್ದಾಪುರ ಮತ್ತು ಮಾದೇಶ ತಂದೆ ಆಶಪ್ಪ ಅಗಸರ ಸಾ|| ತಿಮ್ಮಾಪುರ ಎಲ್ಲರು ಖಾನಾಪುರ ಎಸ್.ಕೆ ಗ್ರಾಮದ ಮಲ್ಲಿನಾಥ ತಂದೆ ಶರಣಪ್ಪ ಕುಂಬಾರ ಇವರ ಟ್ರಾಕ್ಟರ ಇಂಜಿನ್ ನಂಬರ ಕೆಎ33 ಟಿಬಿ 3499 ಮತ್ತು ಟ್ರಾಲಿ ನಂಬರ ಕೆಎ 33 ಟಿಬಿ 4188 ನೇದ್ದರ ಮೇಲೆ ಸುಮಾರು 2 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು ಇರುತ್ತೇವೆ. ಹೀಗಿದ್ದು, ದಿನಾಂಕ: 18/11/2021 ರಂದು ರಾತ್ರಿ 10 ಗಂಟೆ ಸುಮಾರಿಗೆ ನಮ್ಮ ಮಾಲಿಕರಾದ ಮಲ್ಲಿನಾಥ ಇವರು ತಿಳಿಸಿದ್ದೇನೆಂದರೆ, ದೇವರಗೊನಾಲ ಸೀಮಾಂತರದಲ್ಲಿರುವ ಕವಳಿ ಸಸಿಗಳನ್ನು ತುಂಬಿಕೊಂಡು ಮಾಲಗತ್ತಿ ಗ್ರಾಮಕ್ಕೆ ಹೋಗಿ ಹಾಕಿ ಬರಲು ತಿಳಿಸಿದ್ದರಿಂದ, ನಾನು, ಬಸವರಾಜ ತಂದೆ ಮಲ್ಲಪ್ಪ ತಳವಾರ ಸಾ|| ಹೊಸ ಸಿದ್ದಾಪುರ ಮತ್ತು ಮಾದೇಶ ತಂದೆ ಆಶಪ್ಪ ಅಗಸರ ಸಾ|| ತಿಮ್ಮಾಪುರ ಮತ್ತು ಟ್ರಾಕ್ಟರ ಚಾಲಕ ಬಸವರಾಜ ತಂದೆ ಸಂಗಪ್ಪ ಕುಂಬಾರ ಸಾ|| ರಂಗಂಪೇಠ ಎಲ್ಲರು ಟ್ರಾಕ್ಟರ ಇಂಜಿನ್ ನಂಬರ ಕೆಎ33 ಟಿಬಿ 3499 ಮತ್ತು ಟ್ರಾಲಿ ನಂಬರ ಕೆಎ 33 ಟಿಬಿ 4188 ನೇದ್ದರಲ್ಲಿ ದೇವರ ಗೊನಾಲ ಗ್ರಾಮದಲ್ಲಿ ಕವಳಿ ಸಸಿಗಳನ್ನು ತುಂಬಿಕೊಂಡು ಮಾಲಗತ್ತಿ ಗ್ರಾಮಕ್ಕೆ ಹೋಗಿ ಸಸಿಗಳನ್ನು ಇಳಿಸಿದ್ದು ಇರುತ್ತದೆ. ನಂತರ ಮರಳಿ ಸುರಪುರಕ್ಕೆ ಬರುವ ಕುರಿತು ದಿನಾಂಕ: 19/11/2021 ರಂದು 1:40 ಎಎಮ್ ಸುಮಾರಿಗೆ ಸುರಪುರ-ಕೆಂಭಾವಿ ಮುಖ್ಯ ರಸ್ತೆಯ ದೇವರಗೊನಾಲ ಸೀಮಾಂತರದ ಸುಭಾಸ ದೇಸಾಯಿ ಇವರ ಹೊಲದ ಹತ್ತಿರ ನಮ್ಮ ಟ್ರಾಕ್ಟರ ಚಾಲಕ ಬಸವರಾಜ ತಂದೆ ಸಂಗಪ್ಪ ಕುಂಬಾರ ಸಾ|| ರಂಗಂಪೇಠ ಈತನು ಟ್ರಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ರೋಡಿನ ಎಡಬದಿಗೆ ಟ್ರಾಕ್ಟರ ಪಲ್ಟಿಯಾಗಿ ಬಿದ್ದಿದ್ದರಿಂದ ನನಗೆ ಬಲಗಾಲ ಮೊಳಕಾಲಿಗೆ ಗುಪ್ತಗಾಯವಾಗಿದ್ದು, ಬಸವರಾಜ ತಂದೆ ಮಲ್ಲಪ್ಪ ತಳವಾರ ಈತನಿಗೆ ಎಡಗೈ ಮುರಿಂದಂತಾಗಿ ಭಾರಿ ಗುಪ್ತಗಾಯವಾಗಿರುತ್ತದೆ. ಮಾದೇಶ ತಂದೆ ಆಶಪ್ಪ ಈತನಿಗೆ ಎಡಗಾಲ ಹಿಮ್ಮಡಿಗೆ ಗುಪ್ತಗಾಯವಾಗಿರುತ್ತದೆ. ಟ್ರಾಕ್ಟರ ಚಾಲಕ ಬಸವರಾಜ ತಂದೆ ಸಂಗಪ್ಪ ಈತನಿಗೆ ಎಡಗಡೆ ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ. ನಂತರ ನಾವೆಲ್ಲರು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸುರಪುರ ಸರಕಾರಿ ಆಸ್ಪತ್ರೆಗೆ ಬಂದಿದ್ದು, ನಾನು ಮತ್ತು ಮಾದೇಶ, ಬಸವರಾಜ ಕುಂಬಾರ ಮೂರು ಜನರು ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡಿದ್ದು, ಬಸವರಾಜ ತಂದೆ ಮಲ್ಲಪ್ಪ ತಳವಾರ ಈತನು ಒಂದು ಖಾಸಗಿ ವಾಹನದಲ್ಲಿ ಮಸ್ಕಿಯ ಅನ್ನಪೂರ್ಣ ನಸರ್ಿಂಗ ಹೋಮ ಆಸ್ಪತ್ರೆಗೆ ಹೋಗಿರುತ್ತಾನೆ. ಎಲ್ಲರು ಉಪಚಾರ ಪಡೆದುಕೊಂಡು ಮರಳಿ ಊರಿಗೆ ಬಂದು ಎಲ್ಲರು ವಿಚಾರ ಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ಸಲ್ಲಿಸಿದ್ದು ಇರುತ್ತದೆ. ಕಾರಣ ಟ್ರಾಕ್ಟರ ಇಂಜಿನ್ ನಂಬರ ಕೆಎ33 ಟಿಬಿ 3499 ಮತ್ತು ಟ್ರಾಲಿ ನಂಬರ ಕೆಎ 33 ಟಿಬಿ 4188 ನೇದ್ದರ ಚಾಲಕ ಬಸವರಾಜ ತಂದೆ ಸಂಗಪ್ಪ ಕುಂಬಾರ ಸಾ|| ರಂಗಂಪೇಠ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 178/2021 ಕಲಂ: 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 167/2021 ಕಲಂ. 279, 337, ಐಪಿಸಿ:ದಿನಾಂಕ: 22-11-2021 ರಂದು ಮದ್ಯಾಹ್ನ 01-00 ಗಂಟೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಸವೆನೆಂದರೆ ದಿನಾಂಕ: 22-11-2021 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ ಶರಣಬಸವ ರವರು ಪೊನ್ ಮಾಡಿ ರಾಯಚೂರಿಗೆ ಹೋಗುವದು ಇದೆ ಬಾ ಅಂತಾ ಹೇಳಿದ್ದರಿಂದ ನಾನು ಅವರ ಮನೆಗೆ ಹೋದಾಗ ಆತನು ನನಗೆ ಹೇಳಿದ್ದೆನೆಂದರೆ ನನ್ನ ಮಗ ಅಗಸ್ತ್ಯ ಈತನಿಗೆ ಆರಾಮ ಇಲ್ಲ ರಾಯಚೂರಿಗೆ ಹೋಗಿ ಬರೆಬೇಕು ಅಂತಾ ಹೇಳಿದನು ಆಗ ನಾನು ಮತ್ತು ಶರಣಬಸವ ಮತ್ತು ಆತನ ಹೆಂಡತಿ ಪ್ರಾಂಜಲಿ ಮತ್ತು ಆತನ ಮಗ ಅಗಸ್ತ್ಯ ಕಾರಿನಲ್ಲಿ ಕುಳಿತುಕೊಂಡಿದ್ದು ಕಾರನ್ನು ನಾನು ನಡೆಸಿಕೊಂಡು ರಾಯಚೀರಿಗೆ ಹೋಗುತಿದ್ದೆವು, ನಾವು ಯಾದಗಿರಿ-ರಾಯಚೂರ ಮುಖ್ಯ ರಸ್ತೆಯ ಮೇಲೆ ಸೈದಾಪುರದ ಕರಿಬೇಟ್ಟ ಕ್ರಾಸ ಹತ್ತಿರ ಹೋಗುತ್ತಿರುವಾಗ ನಾರಯಣಪೆಟ್ ಕಡೆಯಿಂದ ಒಬ್ಬ ಮೋಟರ ಸೈಕಲ್ ಚಾಲಕನು ತಾನು ನಡೆಸುವ ಮೋಟರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಾವು ಹೋಗುವ ಕಾರ ನಂ. ಕೆಎ-33 ಎಮ್-3689 ನೇದ್ದಕ್ಕೆ ಡಿಕ್ಕಿ ಪಡಿಸಿದ್ದು ಆಗ ಸಮಯ ಬೆಳಿಗ್ಗೆ 10-30 ಗಂಟೆ ಆಗಿತ್ತು, ಮೋಟರ ಸೈಕಲ್ ಡಿಕ್ಕಿಪಡಿಸಿದ್ದರಿಂದ ನಾನು ನಡೆಸುವ ಕಾರಿನ ಎಡಭಾಗ ಮತ್ತು ಹಿಂದಿನ ಭಾಗ ಕಾರು ಜಖಂ ಆಗಿರುತ್ತದೆ. ಕಾರಿನಲ್ಲಿ ಕುಳಿತ ನಮಗೆ ಯಾವುದೇ ಗಾಯಗಳು ಆಗಿರುವದಿಲ್ಲ ಅಪಘಾತಪಡಿಸಿದವನಿಗೆ ವಿಚಾರಿಸಲಾಗಿ ಅವನ ಹೆಸರು ನಾಗಪ್ಪ ತಂದೆ ಮಹಾದೇವಪ್ಪ ವ|| 19 ವರ್ಷ ಜಾ|| ಬುಡಗ ಜಂಗಮ ಉ|| ಸಾಬುನ ವ್ಯಾಪರ ಸಾ|| ಸೈದಾಪೂರ ಅಂತಾ ತಿಳಿಸಿದನು ಅವನ ಮೋಟರ ಸೈಕಲ್ ಪರಿಶಿಲಿಸಿ ನೋಡಲಾಗಿ ಅದರ ನಂ. ಕೆಎ-33 ಎಸ್-9509 ಅಂತಾ ಇರುತ್ತದೆ ಅವನಿಗೆ ಅಪಘಾತದಲ್ಲಿ ತಲೆಗೆ ಮುಖದ ಗಲ್ಲಕ್ಕೆ ಎರಡು ಮೋಣಕಾಲಿಗೆ ರಕ್ತಗಾಯವಾಗಿರುತ್ತವೆ. ಅವನಿಗೆ ಗಾಯಗಳು ಆಗಿದ್ದರಿಂದ ಆಗ ಉಪಚಾರ ಸೈದಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಇರುತ್ತದೆ. ಮೋಟರ ಸೈಕಲ್ ಚಾಲಕ ವಿರುದ್ದ ಕಾನೂನು ಕ್ರಮ ಜರುಗಿಸುವ ಕುರಿತು.

 


ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 183/2021 ಕಲಂ 143, 147, 323, 354, 504, 506, ಸಂ 149 ಐ.ಪಿ.ಸಿ. : ಪಿರ್ಯಾಧಿ ಪಿರ್ಯಾಧಿಯ ಗಂಡ ಮತ್ತು ಮೈದುನ ಇವರೆಲ್ಲರೂ ತಮ್ಮ ಮನೆಯ ಮುಂದೆ ಇದ್ದಾಗ ಆರೋಪಿತರೆಲ್ಲರೂ ನೀವು ನಮ್ಮ ಅಂಬಿಬಾಯಿಯ ಮೇಲೆ ಕಳುವಿನ ಆಪಾದನೆ ಮಾಡಿದ್ದರಿ ಅಂತಾ ಸಿಟ್ಟುಮಾಡಿಕೊಂಡು ಅರೋಪಿತರೆಲ್ಲರೂ ಗುಂಪು ಕಟ್ಟಿಕೊಂಡು ಬಂದು ಪಿರ್ಯಾಧಿಗೆ ಪಿರ್ಯಾಧಿಯ ಗಂಡ ಮತ್ತು ಮೈದುನ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ-ಬಡೆ ಮಾಡಿ ಪಿರ್ಯಾಧಿಗೆ ಮಾನಬಂಗ ಪಡಿಸಲು ಪ್ರಯತ್ನಿಸಿ ಜೀವಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ ವಗೈರೆ ಸಾರಾಂಶವಿರುತ್ತದೆ.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 184/2021 ಕಲಂ: 78() ಕೆ.ಪಿ. ಆಕ್ಟ್ : ಇಂದು ದಿನಾಂಕ 22.11.2021 ರಂದು ಮಧ್ಯಾಹ್ನ 01:30 ಗಂಟೆಗೆ ಧರ್ಮಪೂರ ಗ್ರಾಮದ ಗೇಟ್ ಹತ್ತಿರ ರೋಡಿನ ಮೇಲೆ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಒಬ್ಬ ಆರೋಪಿತನು ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶಿವಲಿಂಗಪ್ಪ ಪಿ.ಎಸ್.ಐ ರವರು ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ ಸಮಯ ಮಧ್ಯಾಹ್ನ 2:30 ಗಂಟೆಗೆ ದಾಳಿ ಮಾಡಿ ಆರೋಪಿತರ ಪೈಕಿ ಲಕ್ಷ್ಮಣ ತಂದೆ ನಿಂಗಪ್ಪ ಎಟೌತಲ ವ||28 ವರ್ಷ ಸಾ||ದರ್ಮಪೂರು ಎಂದು ತಿಳಿಸಿ ಅಂತಾ ಹೇಳಿ ನಾನು ನಮ್ಮೂರಿನ ಶೇಖರ ತಂದೆ ಸೊಮಣ್ಣ ದೂಳ ಈತನು ಹೇಳಿದಂತೆ ನಾನು ನಮ್ಮೂರಲ್ಲಿ ಮತ್ತು ನಮ್ಮೂರ ಸುತ್ತ-ಮುತ್ತಲಿನ ಹಳ್ಳಿ ಮತ್ತು ತಾಂಡಾಗಳ ಜನರಿಂದ ಮಟಕಾ ನಂಬರ ಬರೆದುಕೊಂಡು ಹೋಗಿ ಅದನ್ನು ಶೇಖರನಿಗೆ ಕೊಟ್ಟರೇ ಆತನ ನನಗೆ 100/- ರೂ.ಗಳೀಗೆ 10/- ರೂ ನಂತೆ ಕಮೀಷನ್ ರೂಪದಲ್ಲಿ ಹಣವನ್ನು ಕೊಡುತ್ತಾನೆ ಆದ್ದರಿಂದ ನಾನು ಆತ ಹೇಳಿದಂತೆ ಮಟಕಾ ಅಂಕಿ-ಸಂಖ್ಯೆಗಳನ್ನು ಬರೆಕೊಳ್ಳುತ್ತೇನೆಂದು ತಿಳಿಸಿದ್ದರಿಂದ ಆತನಿಂದ ವಶಕ್ಕೆ ತೆಗೆದುಕೊಂಡು ಆತನ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 550/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ದಿನಾಂಕ 22.11.2021 ರಂದು ಸಮಯ ಸಂಜೆ 04:00 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಠಾಣೆ ಗುನ್ನೆ ನಂಬರ 184/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

ಇತ್ತೀಚಿನ ನವೀಕರಣ​ : 23-11-2021 10:02 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080