ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 23-11-2022

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ. 123/2022 ಕಲಂ: 143, 341, 323, 504, 506 ಸಂ. 149 ಐಪಿಸಿ : ಇಂದು ದಿನಾಂಕ; 22/11/2022 ರಂದು 6-30 ಪಿಎಮ್ ಕ್ಕೆ ಪಿರ್ಯಾಧಿ ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ನಾನು ಮತ್ತು ನಮಗೆ ಪರಿಚಯದವನಾದ ವಿನೋದ ತಂದೆ ಭೀಮಾ ಇಬ್ಬರೂ ಸೇರಿಕೊಂಡು ಖಾಸಗಿ ವ್ಯವಹಾರಗಳು ಮಾಡಿಕೊಂಡಿದ್ದು ಇರುತ್ತದೆ. ಸುಮಾರು ಒಂದು ವರ್ಷದ ಹಿಂದೆ ನಾವಿಬ್ಬರೂ ಸೇರಿ ಯಾದಗಿರಿ ಸೀಮಾಂತರದಲ್ಲಿ ನಡೆದಿರುವ ಕೋರ್ಟ ಕಾಮಗಾರಿ ಕೆಲಸಕ್ಕೆ ಅವಶ್ಯಕವಾದ ಮರಳನ್ನು ಖರೀದಿ ಮಾಡಿ ಸದರಿ ಕಟ್ಟಡದ ನಿಮರ್ಾಣಕ್ಕೆ ಸರಬರಾಜು ಮಾಡಿದ್ದು ಇರುತ್ತದೆ. ಸದರಿ ಬಿಲ್ಲಿನ ಹಣವನ್ನು ವಿನೋದ ಈತನು ಸುಮಾರು 5-6 ತಿಂಗಳ ಹಿಂದೆ ಕಾಮಗಾರಿಗೆ ಸರಬರಾಜು ಮಾಡಿದ ಮರಳಿನ ಹಣವನ್ನು ಪಡೆದಿದ್ದು ಇರುತ್ತದೆ. ಆ ಹಣದಲ್ಲಿ ನನಗೆ ಬರಬೇಕಾದ ಪಾಲು ಕೇಳಿದರೆ ಕೊಡದೆ ಆ ಹಣ ನಿನಗೆ ಕೊಡುವುದಿಲ್ಲ ಏನು ಮಾಡಿಕೊಳ್ಳುತ್ತೀಯಾ ಮಾಡಿಕೊ ಅಂತಾ ಹೇಳುತ್ತಾ ಬಂದಿದ್ದು, ನಾನು ಪದೇ ಪದೇ ಕೇಳಿದಕ್ಕೆ ಮಗನೇ ನಿನ್ನ ಪಾಲಿಗೆ ಯಾವ ಹಣ ಬರುವುದಿಲ್ಲ ಅಂತಾ ಹೇಳುತ್ತಾ ಬಂದಿದ್ದು ಇರುತ್ತದೆ. ಹೀಗಿದ್ದು ದಿನಾಂಕ 22/11/2022 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ನಾನು ಮತ್ತು ಆನಂದ ತಂದೆ ಹಿರ್ಯಾ ರಾಠೋಡ, ಆನಂದ ತಂದೆ ಉಮ್ಲಾ ಚವ್ಹಾಣ, ಸಂತೋಷ ತಂದೆ ಶಂಕರ ಪವಾರ ಎಲ್ಲರೂ ಯಾದಗಿರಿ ನಗರದ ಆರ್.ಟಿ.ಓ ಆಫೀಸ್ ಎದುರುಗಡೆ ಇರುವ ಲಕ್ಷ್ಮಿ ಹೊಟೆಲ್ ಮುಂದುಗಡೆ ಚಹಾ ಕುಡಿಯುತ್ತಾ ಕುಳಿತ್ತಿದ್ದಾಗ ವಿನೋದ ರಾಠೋಡ ಹಾಗೂ ಸಂತೋಷ ರಾಠೋಡ ಇವರು ನಾವಿದ್ದಲ್ಲಿಗೆ ಬಂದು ಲೇ ಬೋಸಡಿ ಮಗನೆ ನಿನಗೆ ಯಾವ ಹಣ ಕೊಡಬೇಕು ಪದೇ ಪದೇ ನನಗೆ ಹಣ ಕೇಳುತ್ತಿಯಾ ಬೋಸಡಿ ಮಗನೆ ಅಂತಾ ಬೈಯುತ್ತಾ ವಿನೋದ ಈತನು ಕೈಯಿಂದ ನನ್ನ ಎಡಕಪಾಳಕ್ಕೆ ಹೊಡೆದನು ಆಗ ನಾನು ಇವರೊಂದಿಗೆ ಯಾಕೆ ಜಗಳ ಮಾಡುವುದು ಅಂತಾ ಅಲ್ಲಿಂದ ಹೊರಟು ಹೋಗಬೇಕೆನ್ನುವಷ್ಟರಲ್ಲಿ ಸಂತೋಷ ರಾಠೋಡ ಈತನು ಎಲ್ಲಿಗೆ ಹೋಗುತ್ತೀಯಾ ಸುಳೇ ಮಗನೆ ಅಂತಾ ನನಗೆ ಎದೆಯ ಮೇಲಿನ ಶರ್ಟ ಹಿಡಿದು ಜೋರಾಗಿ ದಬ್ಬಿಕೊಟ್ಟಿದ್ದು ನಾನು ನೆಲಕ್ಕೆ ಬಿದ್ದೇನು ಆಗ ಅಲ್ಲಿಯೇ ಇದ್ದ ರಾಜು ತಂದೆ ಭೀಮಾ, ಪವನ ತಂದೆ ಮೋಹನ್, ಮೋಹನ್ ತಂದೆ ಭೀಮಾ, ಹಾಗೂ ಲಕ್ಷ್ಮಣ ತಂದೆ ಭೀಮಾ, ಗೋಪಿನಾಥ ತಂದೆ ಭೀಮಾ, ಮನೋಜ ತಂದೆ ಭೀಮಾ ಇವರೆಲ್ಲರೂ ಬಂದವರೇ ಈ ಸೂಳೇ ಮಗನದು ಬಹಳ ಆಗಿದೆ ಇವನಿಗೆ ಇವತ್ತು ಜೀವಂತ ಬಿಡುವುದು ಬೇಡ ಅಂತಾ ಕಾಲುಗಳಿಂದ ಒದ್ದು ಕೈಗಳಿಂದ ಹೊಡೆಬಡೆ ಮಾಡಿದ್ದು ಇರುತ್ತದೆ. ಆಗ ನನ್ನ ಸಂಗಡ ಚಹಾ ಕುಡಿಯುತ್ತಾ ಇದ್ದ ಆನಂದ ರಾಠೋಡ, ಆನಂದ ಚವ್ಹಾಣ, ಸಂತೋಷ ಪವಾರ ಇವರು ಮದ್ಯಸ್ಥಿಕೆ ವಹಿಸಿ ಜಗಳವನ್ನು ಬಿಡಿಸಿದ್ದು ಇರುತ್ತದೆ. ನನಗೆ ಹೇಳಿಕೊಳ್ಳುವಂತಹ ಗಾಯಗಳು ಆಗಿರದ ಕಾರಣ ನಾನು ಉಪಚಾರ ಪಡೆದುಕೊಂಡಿರುವುದಿಲ್ಲ. ಕಾರಣ ನನಗೆ ಕೊಡಬೇಕಾದ ವ್ಯವಹಾರದ ಹಣ ಕೊಡುವಂತೆ ಕೇಳಿದಕ್ಕೆ ವಿನೋದ ರಾಠೋಡ ಹಾಗೂ ಮೇಲ್ಕಂಡ 7 ಜನರು ಬಂದು ನನಗೆ ತಡೆದು ನಿಲ್ಲಿಸಿ, ಕೈಗಳಿಂದ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ನಾನು ನಮ್ಮ ಮನೆಯಲ್ಲಿ ನಮ್ಮ ಸಂಬಂದಿಕರಿಗೆ ಘಟನೆ ನಡೆದ ಬಗ್ಗೆ ವಿಚಾರ ಮಾಡಿ ತಡವಾಗಿ ಠಾಣೆಗೆ ಬಂದು ಅಜರ್ಿ ಸಲ್ಲಿಸಿದ್ದು ಮೇಲ್ಕಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.123/2022 ಕಲಂ.143, 341, 323, 504, 506 ಸಂ.149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 125/2022 ಕಲಂ 143, 147, 341, 447, 504, 506 ಸಂಗಡ 149 ಐಪಿಸಿ: ಇಂದು ದಿನಾಂಕ: 22.11.2022 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ಖಾಸಿಂ ಪಟೇಲ್ ತಂದೆ ಹುಸೇನ ಪಟೇಲ್, ವ|| 76 ವರ್ಷ, ಉ|| ದಗರ್ಾದಲ್ಲಿ ಸೇವೆ ಮಾಡುವದು, ಸಾ|| ಕುಮನೂರ ಗ್ರಾಮ, ತಾ|| ವಡಗೇರಾ, ಹಾ||ವ|| ಮಾದ್ವಾರ ಗ್ರಾಮ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿರುತ್ತಾರೆ. ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ಮಾದ್ವಾರ ಗ್ರಾಮದ ಹಜರತ ನವಾಬಜಾನಿ ದಗರ್ಾದ ಅಕ್ಕಪಕ್ಕದ ಮನೆಯವರಾದ ಆಪಾದಿತರು ದಗರ್ಾದ ನೆರಳು ತಮ್ಮ ಮನೆಗಳ ಮೇಲೆ ಬಿದ್ದು ತಮಗೆ ಅಪಶಕುನವಾಗುತ್ತಿದೆ ಅಂತಾ ಸುಳ್ಳು ನೆಪ ಮಾಡಿಕೊಂಡು ಹೇಗಾದರೂ ಮಾಡಿ ಫಿಯರ್ಾದಿಗೆ ಹೊಡೆಬಡೆ ಮಾಡಿ ಭಯ ಹುಟ್ಟಿಸಬೇಕೆಂಬ ದುರುದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ದಗರ್ಾದೊಳಗಡೆ ಅಪರಾಧಿಕ ಅತಿಕ್ರಮಣ ಮಾಡಿ ಇಂದು ದಗರ್ಾದ ಮುಂದುಗಡೆ ಫಿಯರ್ಾದಿಗೆ ತಡೆದು ನಿಲ್ಲಿಸಿ ಅಸಭ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ವಗೈರೆ ಆಪಾದನೆ.

.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 154/2022 ಕಲಂ: 353, 504, 506 ಸಂ. 149 ಐಪಿಸಿ : ಇಂದು ದಿನಾಂಕ: 22/11/2022 ರಂದು 1.30 ಪಿಎಮ್ಕ್ಕೆ ಪಿರ್ಯಾದಿದಾರರಾದ ಶ್ರೀ ಮಲ್ಲಯ್ಯ ತಂದೆ ರಾಮಚಂದ್ರ ದಂಡು ತಹಸೀಲ್ದಾರರು ಗ್ರೇಡ್ 2 ತಹಸೀಲ ಕಾಯರ್ಾಲಯ ಸುರಪುರ ರವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ಜೈನಾಪುರ ಗ್ರಾಮದ 1) ದುಂಡಪ್ಪ ಬ ಕಾರನೂರ ತಂದೆ ಬಸಪ್ಪ ಕಾರನೂರ ಖಆ0039025371154 2) ವಿಜಯಕುಮಾರ ತಂದೆ ನಾಗಪ್ಪ ಖಆ0039025371147 ಇವರ ಪರಿವಾರ ಮತ್ತು ತಳವಾರ ಜಾತಿಗಳಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಸಕಾಲದಲ್ಲಿ ಅಜರ್ಿ ಸಲ್ಲಿಸಿದ್ದರು. ಸದರಿ ಅಜರ್ಿಯನ್ನು ಪರಿಶೀಲಿಸಲಾಗಿ ಕಂದಾಯ ನಿರೀಕ್ಷಕರು ಕೆಂಭಾವಿ ರವರು ಹಿಂದೂ ತಳವಾರ ಎಂದು ನಮಗೆ ಪಂಚನಾಮೆ ಸಲ್ಲಿಸಿದ್ದು, ನಂತರ ನಿನ್ನೆ ದಿನಾಂಕ: 21/11/2022 ರಂದು ಸಾಯಂಕಾಲ 4 ಗಂಟೆ ಸುಮಾರಿಗೆ ನಾನು ತಹಸೀಲ ಕಾಯರ್ಾಲಯದಲ್ಲಿರುವಾಗ ಪರಿವಾರ ಮತ್ತು ತಳವಾರ ಸಮಾಜದ 1) ದೇವಿಂದ್ರಪ್ಪಗೌಡ ಮಾಲಿ ಪಾಟೀಲ ಸಾ|| ದೇವರ ಗೊನಾಲ, 2) ವೆಂಕಟೇಶ ಸಾ|| ಬೋವಿಗಲ್ಲಿ ಸುರಪುರ, 3) ರಮೇಶಗೌಡ ಗುತ್ತೇದಾರ, 4) ದೊಡ್ಡಪ್ಪಗೌಡ ನಾಟೇಕಾರ, 5) ಹೊನ್ನಪ್ಪಗೌಡ ಹಸನಾಪುರ ಹಾಗೂ ಇವರ ಸಮಾಜದ ಇನ್ನೂ 15-20 ಕ್ಕೂ ಹೆಚ್ಚು ಜನ ತಹಸೀಲ ಕಛೇರಿಗೆ ಮುತ್ತಿಗೆ ಹಾಕಿ ಪರಿವಾರ ಮತ್ತು ತಳವಾರ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯ ಮಾಡಿದ್ದು, ಆಗ ನಾನು ಅವರಿಗೆ ಸರಕಾರದ ಸುತ್ತೋಲೆ ಹಾಗೂ ಸ್ಪಷ್ಠೀಕರಣವಾದ ಆದೇಶ ನಮಗೆ ಇನ್ನೂ ಬಂದಿರುವದಿಲ್ಲ ಆದ್ದರಿಂದ ನಾನು ಸದರಿ ಪ್ರಮಾಣ ಪತ್ರ ನೀಡಲು ಬರುವದಿಲ್ಲ ಎಂದು ತಿಳಿಸಿದ್ದರೂ ಕೂಡ ನನಗೆ ಮೇಲ್ಕಾಣಿಸಿದ ಜನರು ಜೀವ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಪರಿವಾರ ಮತ್ತು ತಳವಾರ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ನಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ಇಂದು ದಿನಾಂಕ. 22/11/2022 ರಂದು ಠಾಣೆಗೆ ಬಂದು ದೂರು ಸಲ್ಲಿಸಿದ್ದು ಆದ ಕಾರಣ ಸದರಿಯವರ ವಿರುದ್ದ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಕೊಳ್ಳುವಂತೆ ಈ ಮೂಲಕ ಕೋರಲಾಗಿದೆ. ಅಂತ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 154/2022 ಕಲಂ: 353, 504, 506, ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 23-11-2022 01:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080