ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 23-12-2021

ಶೋರಾಪೂರ ಪೊಲೀಸ ಠಾಣೆ
ಗುನ್ನೆ ನಂ: 189/2021 ಕಲಂ 279, 304(ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ : ಇಂದು ದಿನಾಂಕ: 22-12-2021 ರಂದು 9-00 ಎ.ಎಮ್ ಕ್ಕೆ ಶ್ರೀ ಸತ್ಯಪ್ಪ ಎ.ಎಸ್.ಐ ಸುರಪೂರ ಠಾಣೆ ಇವರು ಠಾಣೆಗೆ ಹಾಜರಾಗಿ ಸಕರ್ಾರಿ ತಪರ್ೆಯಾಗಿ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 21/12/2021 ರಂದು ರಾತ್ರಿ 8-00 ಗಂಟೆಯಿಂದ ಇಂದು ದಿನಾಂಕಃ 22/12/2021 ರಂದು ಬೆಳಗಿನ 8-00 ಗಂಟೆಯ ವರೆಗೆ ನನಗೆ ಸುರಪೂರ ಠಾಣೆ ವ್ಯಾಪ್ತಿಯಲ್ಲಿ ಹೈ ವೇ ಪೆಟ್ರೋಲಿಂಗ್ ಕರ್ತವ್ಯಕ್ಕೆ ನೇಮಿಸಿದ್ದು ಇರುತ್ತದೆ. ಆದ್ದರಿಂದ ರಾತ್ರಿ 8-00 ಗಂಟೆಗೆ ನಾನು ಹೈ ವೇ ಪೆಟ್ರೋಲಿಂಗ್ ಸಕರ್ಾರಿ ವಾಹನ ಸಂಖ್ಯೆ ಕೆ.ಎ 33 ಜಿ 1486 ನೇದ್ದರಲ್ಲಿ ಚಾಲಕನಾದ ಶ್ರೀ ಅಮರೇಶ ಎ.ಪಿ.ಸಿ 80 ರವರನ್ನು ಕರೆದುಕೊಂಡು ಹೊರಟು ಬೀದರ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಮೇಲೆ ಸುರಪೂರ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಿದ್ದೇನು. ರಾತ್ರಿ ನಾವು ಸುರಪೂರ ನಗರದ ಕುಂಬಾರಪೇಟದಿಂದ ಬೈಪಾಸ ರಸ್ತೆಯ ಮೇಲೆ ಹಸನಾಪೂರ ರಾಜಾ ವೆಂಕಟಪ್ಪನಾಯಕ ಸರ್ಕಲ್ ಕಡೆಗೆ ಹೊರಟಿದ್ದಾಗ ಇಂದು ದಿನಾಂಕಃ 22/12/2021 ರಂದು 00-30 ಎ.ಎಮ್ ಸುಮಾರಿಗೆ ಸಿಬರಬಂಡಿ ಹನುಮಾನ ದೇವಸ್ಥಾನದ ಸಮೀಪ ಮುಖ್ಯರಸ್ತೆಯ ಮೇಲೆ ಒಬ್ಬ ವ್ಯಕ್ತಿಯ ಮೃತದೇಹ ಬಿದ್ದಿರುವದನ್ನು ನೋಡಿ ನಾವು ನಮ್ಮ ವಾಹನ ನಿಲ್ಲಿಸಿ ಇಳಿದು ನೋಡಲಾಗಿ ಅಂದಾಜು 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಮೃತಪಟ್ಟು ಬಿದ್ದಿದ್ದು, ರಸ್ತೆಯ ಮೇಲೆ ರಕ್ತಹರಿದಿರುತ್ತದೆ. ಸದರಿಯವನ ತಲೆಗೆ, ಎಡಗಣ್ಣಿನ ಪಕ್ಕ, ಗದ್ದದ ಮೇಲೆ, ಎಡಗಾಲಿನ ಪಾದದ ಮೇಲೆ ಭಾರಿ ರಕ್ತಗಾಯಗಳಾಗಿದ್ದು, ಹೊಟ್ಟೆಯ ಮೇಲೆ, ಎಡಮೊಣಕಾಲಿಗೆ, ಎಡಗೈ ಹಸ್ತದ ಮಣಿಕಟ್ಟಿನ ಹತ್ತಿರ ತರಚಿ ಕಂದುಗಟ್ಟಿರುವ ಗಾಯಗಳಾಗಿರುತ್ತವೆ. ಮೃತನು ಅಂದಾಜು 5 ಫೀಟ 8 ಇಂಚ ಎತ್ತರ, ಗೋಧಿವರ್ಣ, ಸಾದಾರಣ ಮೈಕಟ್ಟು., ಅಗಲವಾದ ಮುಖ ಉಳ್ಳವನಾಗಿರುತ್ತಾನೆ. ಮೃತನ ಮೈಮೇಲೆ 1) ಕೆಂಪು, ಕಪ್ಪು, ಬೂದಿ ಬಣ್ಣ ಮಿಶ್ರಿತ ಫುಲ್ ಶರ್ಟ, 2) ಬಿಳಿಬಣ್ಣದ ಹಾಪ ಬನಿಯನ್, 3) ನೀಲಿ ಬಣ್ಣದ ಅಂಡರವೇರ್, 4) ನೀಲಿ, ಹಸಿರು, ಹಳದಿ, ಬಿಳಿ ಬಣ್ಣಗಳ ಮಿಶ್ರಿತ ಬಮರ್ುಡಾ, 5) ಕಪ್ಪು ಬಣ್ಣದ ನೈಟ ಪ್ಯಾಂಟ ಧರಿಸಿರುತ್ತಾನೆ. ಶವವನ್ನು ನೋಡಿದರೆ ಸದರಿ ಅಪರಿಚಿತ ವ್ಯಕ್ತಿ ರಸ್ತೆಯ ಮೇಲೆ ನಡೆದುಕೊಂಡು ಹೋಗುವಾಗ ದಿನಾಂಕಃ 21/12/2021 ರಂದು 10-30 ಪಿ.ಎಮ್ ದಿಂದ 11-45 ಪಿ.ಎಮ್ ಮದ್ಯೆ ಯಾವುದೋ ಒಂದು ವಾಹನ ಡಿಕ್ಕಿ ಹೊಡೆದು ಹೋಗಿದ್ದರಿಂದ ಭಾರಿ ರಕ್ತಗಾಯಗಳಾಗಿ ಮೃತಪಟ್ಟಿರುವಂತೆ ಕಂಡು ಬರುತ್ತದೆ. ಆದ್ದರಿಂದ ರಾತ್ರಿ ಅಂಬ್ಯೂಲೇನ್ಸ್ ವಾಹನ ಸ್ಥಳಕ್ಕೆ ಕರೆಯಿಸಿ ಮೃತದೇಹವನ್ನು ಸುರಪೂರ ಸಕರ್ಾರಿ ಆಸ್ಪತ್ರೆಯ ಶವಾಗಾರ ಕೋಣೆಯಲ್ಲಿ ಹಾಕಿಸಿರುತ್ತೇನೆ. ಕಾರಣ ಸದರಿ ಅಪರಿಚಿತ ವ್ಯಕ್ತಿಗೆ ಅಪಘಾತ ಪಡಿಸಿ ಓಡಿ ಹೋಗಿರುವ ಚಾಲಕ ಮತ್ತು ವಾಹನವನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 189/2021 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 


ಭೀಗುಡಿ ಪೊಲೀಸ್ ಠಾಣೆ
ಗುನ್ನೆ ನಂ: 93/2021 ಕಲಂ 15(ಎ), 32(3) ಕೆ.ಇ ಎಕ್ಟ್ : ದಿನಾಂಕ: 22/12/2021 ರಂದು 8.30 ಎ.ಎಮ್.ಕ್ಕೆಆರೋಪಿತನು ಸರಕಾರದಿಂದಯಾವುದೇ ಪರವಾನಿಗೆಯನ್ನು ಪಡೆಯದೇಮುಡಬೂಳ ಗ್ರಾಮದಲ್ಲಿನತನ್ನಕಿರಾಣಿಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯಕುಡಿಯಲು ಅನುಕೂಲ ಮಾಡಿಕೊಟ್ಟಾಗ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿ ಸಮಯದಲ್ಲಿಆರೋಪಿತನಿಂದ ಸಿಕ್ಕ ಅಂದಾಜು 667.47/-ರೂಕಿಮ್ಮತ್ತಿನ 1.710 ಲೀಟರ್ಮದ್ಯವನ್ನು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಕ್ರಮಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡುಕ್ರಮ ಜರುಗಿಸಿದ್ದು ಇರುತ್ತದೆ.

 

ಭೀಗುಡಿ ಪೊಲೀಸ ಠಾಣೆ
ಗುನ್ನೆ ನಂ: 94/2021 ಕಲಂ 15(ಎ), 32(3) ಕೆ.ಇ ಎಕ್ಟ್ : ದಿನಾಂಕ: 22/12/2021 ರಂದು12.00 ಪಿ.ಎಮ್.ಕ್ಕೆಆರೋಪಿತನು ಸರಕಾರದಿಂದಯಾವುದೇ ಪರವಾನಿಗೆಯನ್ನು ಪಡೆಯದೇಮುಡಬೂಳ ಗ್ರಾಮದಲ್ಲಿನತನ್ನಕಿರಾಣಿಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯಕುಡಿಯಲು ಅನುಕೂಲ ಮಾಡಿಕೊಟ್ಟಾಗ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿ ಸಮಯದಲ್ಲಿಆರೋಪಿತನಿಂದ ಸಿಕ್ಕ ಅಂದಾಜು737.73/-ರೂಕಿಮ್ಮತ್ತಿನ 1.890 ಲೀಟರ್ಮದ್ಯವನ್ನು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಕ್ರಮಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡುಕ್ರಮ ಜರುಗಿಸಿದ್ದು ಇರುತ್ತದೆ.

 

ಭಿಗುಡಿ ಪೊಲೀಸ ಠಾಣೆ
ಗುನ್ನೆ ನ: 95/2021 ಕಲಂ 15(ಎ), 32(3) ಕೆ.ಇ ಎಕ್ಟ್ : ದಿನಾಂಕ: 22/12/2021 ರಂದು03.30 ಪಿ.ಎಮ್.ಕ್ಕೆಆರೋಪಿತನು ಸರಕಾರದಿಂದಯಾವುದೇ ಪರವಾನಿಗೆಯನ್ನು ಪಡೆಯದೇಮುಡಬೂಳ ಗ್ರಾಮದಲ್ಲಿನತನ್ನಕಿರಾಣಿಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯಕುಡಿಯಲು ಅನುಕೂಲ ಮಾಡಿಕೊಟ್ಟಾಗ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿ ಸಮಯದಲ್ಲಿಆರೋಪಿತನಿಂದ ಸಿಕ್ಕ ಅಂದಾಜು807.99/-ರೂಕಿಮ್ಮತ್ತಿನ2.070 ಲೀಟರ್ಮದ್ಯವನ್ನು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಕ್ರಮಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡುಕ್ರಮ ಜರುಗಿಸಿದ್ದು ಇರುತ್ತದೆ.


.

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ: 132/2021 ಕಲಂ 78(3) ಕೆ.ಪಿ ಎಕ್ಟ್ : ಇಂದು ದಿನಾಂಕ.22/12/2021 ರಂದು 1-15 ಪಿಎಮ್ ಕ್ಕೆ ಶ್ರೀ ದೀಪಕ್ ಆರ್. ಬೂಸರೆಡ್ಡಿ ಸಿ.ಪಿ.ಐ ಯಾದಗಿರಿ ವೃತ್ತ ರವರು ಒಬ್ಬ ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಹಾಗೂ ಒಂದು ಜ್ಞಾಪನಪತ್ರ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ:22/12/2021 ರಂದು 10-30 ಎ.ಎಮ್ ಸುಮಾರಿಗೆ ಯಾದಗಿರಿ ನಗರದ ಲಾಡೇಜಗಲ್ಲಿ ಹತ್ತಿರ ಬರುವ ಸ್ವಾಗತ ಹೋಟಲ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರೊಂದಿಗೆ ಹಾಗು ಅಧಿಕಾರಿ ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ 11:40 ಎ.ಎಮ್.ಕ್ಕೆ ದಾಳಿ ಕೈಗೊಂಡು ಮಟಕಾ ಜೂಜಾಟದಲ್ಲಿ ತೊಡಗಿದ್ದ ಅನೀಲ ತಂದೆ ಸುರೇಶ ಮುರುಡೆ ವಃ32 ಜಾಃ ಮರಾಠ ಉಃ ವ್ಯಾಪಾರ ಸಾಃ ಲಾಡೇಜಗಲ್ಲಿ ಯಾದಗಿರಿ ಈತನಿಗೆ ವಶಕ್ಕೆ ಪಡೆದುಕೊಂಡು ಸದರಿಯವನಿಂದ ಒಟ್ಟು 1)ನಗದು ಹಣ ರೂ.1520/-, 2) ಒಂದು ಮಟಕಾ ಅಂಕಿಗಳ ಚೀಟಿ, 3) ಒಂದು ಬಾಲ್ಪೆನ್ ದೊರೆತಿದ್ದು, ಈ ಬಗ್ಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 11-40 ಎಎಂ ದಿಂದ 12-40 ಪಿಎಂದವರೆಗೆ ಮಾಡಿ ಮುಗಿಸಿದ್ದು ನಂತರ ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೊಂದಿಗೆ 1-15 ಪಿಎಂಕ್ಕೆ ಯಾದಗಿರಿ ನಗರ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ. ಯಾದಗಿರಿ ನಗರ ಠಾಣೆ ರವರಿಗೆ ಜ್ಞಾಪನ ಪತ್ರದೊಂದಿಗೆ ಒಪ್ಪಿಸಿದ್ದು, ಸದರಿ ಆರೋಪಿತನ ವಿರುದ್ದ ಕ್ರಮ ಜರುಗಿಸಲು ಸೂಚಿಸಲಾಗಿದೆ. ಅಂತಾ ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.132/2021 ಕಲಂ.78(3) ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಗುರಮಿಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 195/2021 ಕಲಂ 143 147 148 323 324 307 ಸಂಗಡ 149 ಐ.ಪಿ.ಸಿ. : ಪಿರ್ಯಾಧಿಗೆ ಆರೋಪಿ ನರಸಪ್ಪ ಈತನು ಪಿರ್ಯಾಧಿಗೆ ಚಿಕ್ಕಪ್ಪನಾಗಬೇಕಾಗಿದ್ದು ಈತನ ಮನೆಯವರು ಮೊದಲನಿಂದಲು ಬನ್ನಿ ಮೂಡಿಯುವ ಚಾಜಾ ಮಾಡಿಕೊಂಡು ಬಂದಿದ್ದು ಈಗ ಗ್ರಾಮದ ಹಿರಿಯರು ಸೇರಿ ನರಸಪ್ಪನ ನಡವಳಿಗೆ ಸರಿ ಇಲ್ಲದ ಕಾರಣ ಪಿರ್ಯಾಧಿಯ ತಂದೆಗೆ ಬನ್ನಿ ಮೂಡಿಯುವ ಚಾಜಾ ವಹಿಸಿದ್ದು ಇದರಿಂದಾಗಿ ಪಿರ್ಯಾಧಿ ತಂದೆಯ ಮೇಲೆ ಆರೋಪಿತನು ಸಿಟ್ಟು ಮಾಡಿಕೊಂಡು ಪಿರ್ಯಾಧಿಗೆ ಮತ್ತು ಪಿರ್ಯಾಧಿಗೆ ತಂದೆಗೆ ಕೊಲೆ ಮಾಡುವ ಉದ್ದೇಶದಿಂದ ಏಕ್ಕೋದ್ದೇಶದಿಂದ ಇತರೊಂದಿಗೆ ಗುಂಪು ಕಟ್ಟಿಕೊಂಡು ಕಲ್ಲುಗಳು ಮಚ್ಚನ್ನು ಹಿಡಿದುಕೊಂಡು ಬಂದು ಹೊಡೆದು ಮಾಡಿದ ಬಗ್ಗೆ ಪಿರ್ಯಾಧಿ ವಗೈರೆ ಸಾರಾಂಶವಿರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ252/2021ಕಲಂ.143, 147, 148, 323, 324, 326, 504, 506 ಸಂಗಡ149 ಐ.ಪಿ.ಸಿ. : ಇಂದು ದಿನಾಂಕ:22-12-2021 ರಂದು 5:00 ಪಿ.ಎಮ್. ಕ್ಕೆ ಫಿರ್ಯಾದಿ ಶ್ರೀ ನಿಂಗಪ್ಪ ತಂದೆ ಚಂದ್ರಾಮ ಡಪ್ಪಿನೋರ ವಯ: 19 ವರ್ಷ ಜಾ: ಕುರುಬ ಉ: ಒಕ್ಕಲುತನ ಸಾ: ಹೈಯಾಳ ಬಿ ತಾ: ವಡಗೇರಾ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಏನಂದರೆ ನಮ್ಮದು ನಮ್ಮೂರ ಸೀಮಾಂತರದಲ್ಲಿ ಹೊಲ ಸವರ್ೆ ನಂ. 119 ರಲ್ಲಿ 4 ಎಕರೆ 30 ಇದ್ದು ಸದರಿ ಜಮೀನಿಗೆ ಹೊಂದಿಕೊಂಡು ನಮ್ಮೂರ ನಾಗಪ್ಪ ಬಾಗಲಿ ಇವರ ಹೊಲವಿದೆ. ಆ ಹೊಲವನ್ನು ನಮ್ಮ ಸಂಭಂದಿಕರಾದ ನಿಂಗಪ್ಪ ತಂದೆ ಭೀಮಣ್ಣ ವನದುರ್ಗ ರವರು ಲೀಜಿಗೆ ಹಾಕಿ ಕೊಂಡಿದ್ದಾರೆ. ನಾನು ದಿನಾಂಕ: 20-12-2021 ರಂದು ಮುಂಜಾನೆ 11:00 ಗಂಟೆಗೆ ನಾನು ಮ್ಮ ಹೊಲಕ್ಕೆ ಎತ್ತು ಹೊಡೆದುಕೊಂಡು ಹೊರಟಿದ್ದೆನು. ಭೀಮಮ್ಮ ಗಂಡ ನಿಂಗಪ್ಪ ವನದುರ್ಗ ಇವರು ನನಗೆ ನಿಮ್ಮೌನ ಮಿಂಡಗಾರನ ಹೊಲ ಆದೇನು ? ನಮ್ಮ ಈ ಹೊಲದಲ್ಲಿ ಬರಬೇಡಾ ಎಂದು ಬೈದಳು. ಆಗ ನಾನು ನಿನ್ನ ಗಂಡನ ಕಳಿಸಮ್ಮ ಮಾತಾಡತೀವಿ ಎಂದು ಹೇಳಿ ಮುಂದಕ್ಕೆ ಹೋದೆನು. ನಾನು ಹೊಲದಿಂದ ಸಾಯಂಕಾಲ 7:00 ಗಂಟೆಗೆ ಮನೆಗೆ ಬಂದು ನಾನು ಎತ್ತು ಗಳೆ ಬಿಚ್ಚುತ್ತಿದ್ದಾಗ 1) ನಿಂಗಪ್ಪ ತಂದೆ ಭೀಮಪ್ಪ ವನದುರ್ಗ, 2) ಮಲ್ಲಪ್ಪ ತಂದೆ ಅಯ್ಯಪ್ಪ ಚಟ್ಟಳ್ಳಿ , 3) ಹೈಯಾಳಪ್ಪ ತಂದೆ ಭೀಮಪ್ಪ ವನದುರ್ಗ, 4) ಭೀಮಮ್ಮ ಗಂಡ ನಿಂಗಪ್ಪ ವನದುರ್ಗ, 5) ಅಯ್ಯಮ್ಮ ಗಂಡ ಮಲ್ಲಪ್ಪ ಚಟ್ಟಳ್ಳಿ , 6) ಬಸಮ್ಮ ಗಂಡ ಅಯ್ಯಪ್ಪ ಚಟ್ಟಳ್ಳಿ, ಎಲ್ಲರೂ ಕೂಡಿ ನಮ್ಮ ಮನೆಗೆ ಬಂದು ನನಗೆ ಏ ಸೂಳಿ ಮಗನೆ ನಮ್ಮ ಹೊಲದಲ್ಲಿ ಏಕೆ ಹೋಗಿದ್ದಿ ಅಲ್ಲಿ ದಾರಿ ಇಲ್ಲ ಅಂತಾ ಅವರಲ್ಲಿಯ ನಿಂಗಪ್ಪ ತಂದೆ ಭೀಮಪ್ಪ ವನದುರ್ಗ ಇವರು ನನಗೆ ಬಡಿಗೆಯಿಂದ ಹೊಡೆದನು. ನಾನು ಮಾವ ಮುಂಜಾನೆ ಮಾತಾಡೋಣ ಹೊಡಿಬೇಡಾ ಅಂತಾ ಹೇಳಿದೆನು. ಆದರು ಸಹಿತ ಕೇಳದೆ ಬಾಯಿಗೆ ಬಂದಂತೆ ಬೈದನು. ಆಗ ನಮ್ಮ ತಾಯಿ ದೇವಮ್ಮ ಅಡ್ಡ ಬಂದಳು. ಆಗ ಅವರಲ್ಲಿಯ ನಿಂಗಪ್ಪ ತಂದೆ ಭೀಮಪ್ಪ ವನದುರ್ಗ ಈತನು ಬಡಿಗೆಯಿಂದ ನಮ್ಮ ತಾಯಿಗೆ ಹೊಡೆದನು. ಆಗ ನಮ್ಮ ತಾಯಿ ಕೈ ಅಡ್ಡ ತಂದಿದ್ದು ಆಗ ನಮ್ಮ ತಾಯಿಯ ಕೈ ಮುರಿದು ಭಾರೀ ಗಾಯವಾಗಿದೆ. ಉಳಿದವರೆಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈದು ಅವರಲ್ಲಿಯ ಹೈಯಾಳಪ್ಪ ತಂದೆ ಭೀಮಣ್ಣ ವನದುರ್ಗ ಇವರು ನಮ್ಮ ತಂದೆ ಚಂದ್ರಾಮಪ್ಪ ತಂದೆ ಲಿಂಗಪ್ಪ ಈತನಿಗೆ ಬಡಿಗೆಯಿಂದ ಸೊಂಟಕ್ಕೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ. ಉಳಿದ ಭೀಮವ್ವ ವನದುರ್ಗ, ಅಯ್ಯಮ್ಮ ಚಟ್ಟಳ್ಳಿ, ಮತ್ತು ಬಸಮ್ಮ ಚಟ್ಟಳ್ಳಿ ಇವರು ನಮ್ಮ ತಾಯಿಗೆ ನನಗೆ ನಮ್ಮ ತಂದೆಗೆ ಕೈಯಿಂದ ಹೊಡೆದು ಒಳಪೆಟ್ಟು ಮಾಡಿರುತ್ತಾರೆ. ಆಗ ನಮ್ಮ ತಮ್ಮನಾದ ಶಿವಪ್ಪ ತಂದೆ ಚಂದ್ರಾಮ, ನಮ್ಮೂರ ನಿಂಗಪ್ಪ ತಂದೆ ಪದ್ಮಣ್ಣ ಪದ್ಮಣ್ಣೋರ , ಮತ್ತು ಮಲ್ಲಪ್ಪ ತಂದೆ ದೇವಪ್ಪ ಮಿಸಿಯೋರ ರವರು ಬಂದು ಜಗಳ ಬಿಡಿಸಿಕೊಂಡಿರುತ್ತಾರೆ . ಆಗ ಅವರಲ್ಲಿಯ ನಿಂಗಪ್ಪ ತಂದೆ ಭೀಮಣ್ಣ ವನದುರ್ಗ ಇವನು ಮಕ್ಕಳೆ ಇನ್ನೊಮ್ಮೆ ನಮ್ಮ ಹೊಲದಲ್ಲಿ ಬಂದರೆ ನಿಮ್ಮ ಜೀವ ತೆಗೆಯುತ್ತೇವೆ. ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ನಾನು ನಮ್ಮ ತಾಯಿ ಮತ್ತು ನಮ್ಮ ತಂದೆ ಮೂವರು ಶಹಾಪುರದ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿ ಉಪಚಾರ ಪಡೆದುಕೊಂಡಿರುತ್ತೇವೆ. ನಮ್ಮ ಮಾವನಿಗೆ ವಿಚಾರ ಮಾಡಿ ಇಂದು ದಿನಾಂಕ: 22-12-2021 ರಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ಆದ್ದರಿಂದ ದಿನಾಂಕ: 20-12-2021 ರಂದು ಸಾಯಂಕಾಲ 7:00 ಗಂಟೆಗೆ ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ನಮ್ಮ ಮನೆಗೆ ಬಂದು ನನಗೆ, ನಮ್ಮ ತಾಯಿ ತಂದೆಗೆ ಹೊಡೆದು ಭಾರಿಗಾಯ ಮಾಡಿದ್ದಲ್ಲದೇ. ಜೀವದ ಬೆದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.252/2021 ಕಲಂ. 143, 147, 148, 323, 324, 326, 504, 506 ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಸಿಕೊಂಡು ತನಿಖೆ ಕೈಗೊಂಡೆನು.

 


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 166/2021 ಕಲಂ.78(3) ಕೆಪಿ.ಆಕ್ಟ್ : ಇಂದು ದಿನಾಂಕ:22/12/2021 ರಂದು 6.00 ಪಿ.ಎಮ್ ಕ್ಕೆ ಶ್ರೀ ದೀಪಕ ಭೂಸರೆಡ್ಡಿ ಸಿ.ಪಿ..ಐ.ಯಾದಗಿರಿ ವೃತ ಕಛೇರಿ ಮತ್ತು ಸುರೇರಕುಮಾರ ಪಿಎಸ್,ಐ ಯಾದಗಿರಿ ಗ್ರಾಮೀಣ ಠಾಣೆ ರವರು ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೋಂದಿಗೆ ಠಾಣೆಗೆ ಒಂದು ಜ್ಞಾಪನ ಪತ್ರ ನೀಡಿದ ಸಾರಾಂಶವೆನೆಂದರೆ, ನಾವು ಮತ್ತು ಸಂಗಡ ಸಿಬ್ಬಂದಿಯವರಾದ ಬಸವರಾಜ ಎ.ಹೆಚ್.ಸಿ -32 ವಾಹನ ಚಾಲಕ, ಗಣೇಶ ಹೆಚ್.ಸಿ-31, ಗಜೇಂದ್ರ ಸಿಹೆಚ್.ಸಿ-123 , ಹರಿನಾಥರೆಡ್ಡಿ ಪಿಸಿ-267 ಮೊನಪ್ಪ-263 ಎಲ್ಲರು ಕೂಡಿಕೊಂಡು ಸರಕಾರಿ ವಾಹನ ಸಂಖ್ಯೆ ಕೆಎ33/ಜಿ/0314 ನೇದ್ದರಲ್ಲಿ ಕುಳಿತುಕೊಂಡು ಇಂದು ದಿನಾಂಕ 22/12/2021 ರಂದು ಸಾಯಂಕಾಲ 4:00 ಗಂಟೆಯ ಸುಮಾರಿಗೆ ಅಬ್ಬೆತುಮಕೂರು ಗ್ರಾಮದ ಶ್ರೀವಿಶ್ವರಾಧ್ಯ ಮಠಕ್ಕೆ ಭೇಟಿ ನೀಡಿ ಮರಳಿ ಯಾದಗಿರಿ ಕಡೆ ಬರುವಾಗ ಒಂದು ಬಾತ್ಮಿ ಬಂದಿದ್ದೆನೆಂದರೆ ಅಬ್ಬೆತುಮಕೂರು ಗ್ರಾಮದಲ್ಲಿ ಯಾರೊ ಒಬ್ಬ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಕೂಡಲೇ ನಾವು ಮತ್ತು ಸಹಸಿಬ್ಬಂದಿಯವರೊಂದಿಗೆ ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ಪಂಚರಾದ 1) ವೆಂಕಟೇಶ ತಂದೆ ಹಳೇಪ್ಪ ಕಡೆಚೂರು ವಯ:-49 ಜಾತಿ: ಉಪ್ಪಾರ ಉ: ವ್ಯಾಪಾರ ಸಾ: ಶೇಟಿಕೇರ 2) ಮೊಹ್ಮದ ಹುಸೇನ ತಂದೆ ಖಾಸಿಂ ಸಾಬ್ ನಸೀರೋದ್ದೀನ್ ವ: 33 ವರ್ಷ ಜಾ: ಮುಸ್ಲಿಂ ಸಾ: ಮುಸ್ಟೂರು ತಾ:ಜಿ: ಯಾದಗಿರಿ.ಇವರಿಗೆ ದಾಳಿಯ ಬಗ್ಗೆ ಮಾಹಿತಿ ತಿಳಿಸಿ ಎಲ್ಲರೊ ಸೇರಿಕೊಂಡು ಅಬ್ಬೆತುಮಕೂರ ಗ್ರಾಮದ ಅಂಬಿಗೇರ ಚೌಡಯ್ಯ ವೃತದ ಹತ್ತಿರ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಗೆಲ್ಲಿರಿ ಅಂತಾ ಕೂಗಾಡುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಕರೆಯುತ್ತಿದ್ದನು ಮತ್ತು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನು ಆಗ ನಾವೆಲ್ಲರೂ ಕೂಡಿ ಒಮ್ಮೆಲೆ ದಾಳಿ ಮಾಡಿ ಸಂಜೆ 4:30 ಗಂಟೆಗೆ ಅವನನ್ನು ನಮ್ಮ ವಶಕ್ಕೆ ಪಡೆದು ಅವನು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ನಾಗರಾಜ@ರಾಜು ತಂದೆ ರಾಜಶೇಖರಪ್ಪ ಹುಲಿಮನಿ ವ:40 ವರ್ಷ ಉ: ಒಕ್ಕಲತನ ಜಾತಿ: ಲಿಂಗಾಯತ ಸಾ: ಕಡಗಂಚಿ ತಾ: ಆಳಂದ ಜಿ: ಕಲಬುರಗಿ ಹಾ.ವ:ಅಬ್ಬೆತುಮಕುರ ಅಂತಾ ತಿಳಿಸಿದನು. ಅವನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ 1) ನಗದು ಹಣ 2410/ ರೂ 2)ಒಂದು ಮಟಕಾ ನಂಬರ ಬರೆದ ಚೀಟಿ ಮತ್ತು 4) ಒಂದು ಬಾಲಪೆನ್.ಅ.ಕಿ=.00 ಒಟ್ಟು 2410/-ರೂ ಗಳ ಸಿಕ್ಕಿದ್ದು. ಸದರಿಯವುಗಳನ್ನು ಪಂಚರ ಸಮಕ್ಷಮ ನಮ್ಮ ವಶಕ್ಕೆ ಪಡೆದುಕೊಂಡೆನು, ಮಟಕಾ ನಂಬರ ಯಾರಿಗೆ ಕೊಡುತ್ತಿ ಎಂದು ವಿಚಾರಿಸಿದಾಗ ನಾನೇ ಇಟ್ಟುಕೊಳ್ಳುತ್ತೆನೆ ಎಂದು ಹೇಳಿದನು .ಈ ಸವಿಸ್ತಾರವಾದ ಪಂಚನಾಮೆಯನ್ನು ಸಂಜೆ 4:30 ಗಂಟೆಯಿಂದ 5:30 ಗಂಟೆಯವರೆಗೆ ಮಾಡಿಕೊಂಡು ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಸಂಜೆ 6:00 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ. ರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿಯವನ ವಿರುಧ ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ 2021 ರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 253/2021 ಕಲಂ 143, 147, 323, 324, 354, 504, 506 ಸಂಗಡ 149 ಐ.ಪಿ.ಸಿ. : ಇಂದು ದಿನಾಂಕ 22/12/2021 ರಂದು, ಸಂಜೆ 19-00 ಗಂಟೆಗೆ ಫಿರ್ಯಾದಿ ಶ್ರೀಮತಿ ಭೀಮಮ್ಮ ಗಂಡ ನಿಂಗಪ್ಪ ವನದುರ್ಗ, ವಯಸ್ಸು 22 ವರ್ಷ ಜಾತಿ ಕುರುಬ, ಉಃ ಹೊಲ ಮನೆ ಕೆಲಸ ಸಾಃ ಹೈಯ್ಯಾಳ(ಬಿ) ತಾಃ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನನ್ನ ಗಂಡ ನಿಂಗಪ್ಪ ತಂದೆ ಭೀಮಣ್ಣ ವನದುರ್ಗ ಇವರು ನಮ್ಮೂರ ನಾಗಪ್ಪ ತಂದೆ ನಿಂಗಪ್ಪ ಬಾಗಲಿ ಇವರ ಹೊಲ ಒಂದು ವರ್ಷ ಲಿಜಿಗೆ ಹಾಕಿಕೊಂಡಿರುತ್ತಾರೆ. ಈ ವರ್ಷ ಹೊಲದಲ್ಲಿ ಹತ್ತಿ ಬೆಳೆ ಇರುತ್ತದೆ. ಈ ಹೊಲದಿಂದ ಸ್ವಲ್ಪ ದೂರದಲ್ಲಿ ನಮ್ಮ ಸಂಬಂಧದಲ್ಲಿ ಮಾವನಾದ ಚಂದ್ರಾಮಪ್ಪ ತಂದೆ ಲಿಂಗಪ್ಪ ಡಪ್ಪಿನೋರ್ ಇವರ ಹೊಲ ಇರುತ್ತದೆ. ಇವರು ತಮ್ಮ ಹೊಲಕ್ಕೆ ಹೋಗಬೇಕಾದರೆ ಹಳೆ ದಾರಿಯಿಂದ ಹೋಗುತಿದ್ದರು. ಆ ದಾರಿಗೆ ಹಾದು ಹೋಗದೆ ಮತ್ತು ನಮಗೆ ಯಾರಿಗೂ ಹೇಳದೆ-ಕೇಳದೆ ಚಂದ್ರಾಮಪ್ಪ ಮತ್ತು ಅವನ ಮಗ ನಿಂಗಪ್ಪ ಇಬ್ಬರೂ ನಮ್ಮ ಹತ್ತಿ ಹೊಲದ ಬದುವಿಗೆ ಬೆಳೆಯಲ್ಲಿ ಎತ್ತಿನ ಬಂಡಿ ಹೊಡೆದುಕೊಂಡು ಹೋಗಿದ್ದರಿಂದ ಸ್ವಲ್ಪ ಹತ್ತಿ ನೆಲಕ್ಕೆ ಬಿದ್ದು ಹಾಳಾಗಿರುತ್ತದೆ. ಹೀಗಿರುವಾಗ ನಿನ್ನೆ ದಿನಾಂಕ 20/11/2021 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ಲಿಜೀಗೆ ಹಾಕಿಕೊಂಡಿದ್ದ ನಾಗಪ್ಪ ಬಾಗಲಿ ಇವರ ಹೊಲದಲ್ಲಿ ನಾನು ಕೆಲಸ ಮಾಡುತಿದ್ದಾಗ, ನಿಂಗಪ್ಪ ತಂದೆ ಚಂದ್ರಾಮಪ್ಪ ಡಪ್ಪಿನೋರ್ ಈತನು ಹೊಲದ ಬದುವಿಗೆ ಎತ್ತುಗಳನ್ನು ಹೊಡೆದುಕೊಂಡು ಹೋಗುವುದನ್ನು ಬಿಟ್ಟು ಹೊಲದಲ್ಲಿ ಎತ್ತುಗಳನ್ನು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಹೊರಟಿದ್ದನ್ನು, ಆಗ ನಾನು ನಿಂಗಪ್ಪನಿಗೆ ಏನೋ ನಿಂಗಪ್ಪ ಹತ್ತಿ ಬಿಡಿಸಲಿಕ್ಕೆ ಬಂದಿದೇ ವರ್ಷದ ಗಂಜಿ ಹಾಳು ಮಾಡ್ತಿಯೇನು ಸ್ವಲ್ಪ ನೋಡಿಕೊಂಡು ಎತ್ತುಗಳನ್ನು ಹೊಡೆದುಕೊಂಡು ಹೋಗಬೇಕು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡ್ತಿಯೇನು, ಇದೇ ರೀತಿ ನಿಮ್ಮ ಹೊಲದಲ್ಲಿ ಬೇರೆ ಏರಾದರು ಎತ್ತುಗಳನ್ನು ಹೊಡೆದುಕೊಂಡು ಬೆಳೆ ಹಾಳು ಮಾಡಿ ಹೋದರೆ ನಿನಗೆ ಹೇಗಾಗುತ್ತದೆ ಅಂತಾ ವಿಚಾರಿಸಿದ್ದಕ್ಕೆ, ಏ ರಂಡಿ ನಿಮ್ಮ ಸ್ವಂತ ಹೊಲ ಇದ್ದವರಂತೆ ಮಾತಾಡ್ತಿಯಾ ಹೊಲದ ಮಾಲೀಕನೆ ನನಗೆ ಏನು ಅನ್ನುವುದಿಲ್ಲ ನೀ ಯಾವಕ್ಕೀ ಕೇಳಲಿಕ್ಕೆ ಅಂತಾ ಕೆಟ್ಟದ್ದಾಗಿ ಮಾತನಾಡಿ ಹೋದನು. ನಂತರ ನಾನು ಮನೆಯ ಬಂದಾಗ ಸಾಯಂಕಾಲದ ಸುಮಾರಿಗೆ ಈ ವಿಷಯವನ್ನು ನನ್ನ ಗಂಡ ನಿಂಗಪ್ಪ ಇವರಿಗೆ ತಿಳಿಸಿದ್ದು, ಅವರ ಮನೆಗೆ ಹೋಗಿ ವಿಚಾರಿಸಿದರಾಯಿ ಅಂತಾ ಹೇಳಿ ಸಾಯಂಕಾಲ 6-50 ಗಂಟೆಯ ಸುಮಾರಿಗೆ ನಾನು, ನನ್ನ ಗಂಡ ನಿಂಗಪ್ಪ ಇಬ್ಬರು ಚಂದ್ರಾಮಪ್ಪ ಡಪ್ಪಿನೋರ್ ಇವರ ಮನೆಗೆ ಮುಂದೆ ಹೋಗಿ ಚಂದ್ರಾಮಪ್ಪ ಇವರಿಗೆ ಕರೆದು ನಿಮ್ಮ ಮಗ ನಿಂಗಪ್ಪ ಈತನು ಹೊಲದಲ್ಲಿ ಎತ್ತುಗಳನ್ನು ಹೊಡೆದುಕೊಂಡು ಹೋಗಿದ್ದುಕೇಳಿದ್ದಕ್ಕೆ ಕೆಟ್ಟದ್ದಾಗಿ ಮಾತನಾಡಿ ಹೋಗಿರುತ್ತಾನೆ ಹೆಣ್ಣುಮಕ್ಕಳಿಗೆ ಆ ರೀತಿಯಾಗಿ ಮಾತನಾಡುವುದು ಸರಿಯಲ್ಲ ಆತನಿಗೆ ತಿಳುವಳಿಕೆ ಹೇಳಿರಿ ಅಂತಾ ಹೇಳುತಿದ್ದಾಗ, 1) ಚಂದ್ರಾಮಪ್ಪನು ಏಕಾ-ಏಕಿ ನನ್ನ ಗಂಡನಿಗೆ ಏ ಬೋಸ್ಡಿ ಮಗನೇ ಆ ಹೊಲ ಏನು ನಿಮ್ಮ ಸ್ವಂತ ಹೊಲ ಏನು ನಾವು ಅಲ್ಲಿಂದಲೇ ಹೋಗುತ್ತೇವೆ ನೋಡು ಏನ್ ಮಾಡ್ಕೋತಿರಿ ಮಾಡ್ಕೋರಿ ಒಂದು ನೀವ ಇರಬೇಕು ಇಲ್ಲಾ ನಾವು ಇರಬೇಕು ಅಂತಾ ನನ್ನ ಗಂಡನ ಮೈ ಮೇಲೆ ತೂರಿ ಹೋಗುತಿದ್ದಾಗ ಅಷ್ಟರಲ್ಲಿಯೇ ಅವನ ಮಕ್ಕಳಾದ 2) ನಿಂಗಪ್ಪ ತಂದೆ ಚಂದ್ರಾಮಪ್ಪ ಡಪ್ಪಿನೋರ್, 3) ದೇವಮ್ಮ ಗಂಡ ಚಂದ್ರಾಮಪ್ಪ ಡಪ್ಪಿನೋರ್, 4) ನಿಂಗಪ್ಪ ವಾಗಣಗೇರಿ 5) ಶಿವಪ್ಪ ತಂದೆ ಚಂದ್ರಾಮಪ್ಪ ಡಪ್ಪಿನೋರ್ ರವರೆಲ್ಲರೂ ನಮ್ಮ ಜೊತೆ ಜಗಳ ಮಾಡುವ ಉದ್ದೇಶದಿಂದ ನಮಗೆ ಸುತ್ತು ಗಟ್ಟಿದ್ದು, ಆಗ ನಿಂಗಪ್ಪ ಈತನು ನನ್ನ ಗಂಡನಿಗೆ ಏ ಬೋಸ್ಡಿ ಮಗನೇ ನಿಮ್ಮದು ಕಿರಿ-ಕಿರಿ ಬಹಳ ಆಗಿದೆ ಅಂತಾ ನನ್ನ ಗಂಡನ ಜೊತೆ ಜಗಳಕ್ಕೆ ಬಿದ್ದು ಕೈಯಿಂದ ಕಪಾಳಕ್ಕೆ ಬೆನ್ನಿಗೆ ಹೊಡೆದು ದಬ್ಬಿಸಿಕೊಟ್ಟಾಗ ನನ್ನ ಗಂಡ ಕೆಳಗಡೆ ಬಿದ್ದನು. ಆಗ ನಿಂಗಪ್ಪನು ಓಡಿ ಹೋಗಿ ತಮ್ಮ ಮನೆಯಲ್ಲಿನ ಒಂದು ಬಡಿಗೆ ತೆಗೆದುಕೊಂಡು ಬಂದು ನನ್ನ ಗಂಡನ ತಲೆಗೆ ಹೊಡೆದರಿಂದ ರಕ್ತ ಬಂದಿರುತ್ತದೆ. ಆಗ ನಾನು ಜಗಳ ಬಿಡಿಸಲು ಹೋದಾಗ ಚಂದ್ರಾಮಪ್ಪ ಈತನು ನನಗೆ ತಲೆಯ ಕೂದಲು ಹಿಡಿದು ಜಗ್ಗಾಡಿ ಕೈಯಿಂದ ತಲೆಗೆ, ಬೆನ್ನಿಗೆ ಹೊಡೆಯುತಿದ್ದಾಗ, ನಿಂಗಪ್ಪ ವಾಗಣಗೇರಿ ಈತನು ಈ ರಂಡಿದೇ ಬಹಳ ಆಗಿದೇ ಅಂತಾ ನನ್ನ ಜೊತೆ ಜಗಳಕ್ಕೆ ಬಿದ್ದು, ಕೈಯಿಂದ ತಲೆಗೆ ಹೊಡೆದು ನನ್ನ ಮೈ ಮೇಲಿನ ಸಿರೇ ಹಿಡಿದು ಎಳೆದಾಡಿ ಮಾನಹಾನಿ ಮಾಡಿರುತ್ತಾನೆ ಅಲ್ಲದೆ ನಿಂಗಪ್ಪ ವಾಗಣಗೇರಿ ಈತನು ನನ್ನ ಗಂಡನಿಗೆ ಬಡಿಗೆಯಿಂದ ಬೆನ್ನಿಗೆ ಸೊಂಟಕ್ಕೆ ಮತ್ತು ಎರಡು ಕಾಲುಗಳಿಗೆ ಹೊಡೆದಿರುತ್ತಾನೆ ಆಗ ಜಗಳದ ಸುದ್ದಿ ತಿಳಿದು ನನ್ನ ಅಕ್ಕ ಅಯ್ಯಮ್ಮ ಮತ್ತು ನನ್ನ ಅಕ್ಕನ ಗಂಡ ಮಲ್ಲಪ್ಪ ರವರು ಮತ್ತು ಗ್ರಾಮದ ದೇವಪ್ಪ ತಂದೆ ತಿಪ್ಪಣ್ಣ ಕಾಮಣ್ಣನೋರ ರವರು ಬಂದು ಜಗಳ ಬಿಡಿಸಿಕೊಂಡರು. ನಂತರ ದೇವಮ್ಮ ಇವಳು ನನಗೆ ಮತ್ತು ನನ್ನ ಗಂಡನಿಗೆ ಕೆಟ್ಟದ್ದಾಗಿ ಬೈಯುತಿದ್ದಾಗ, ಅವರ ಮಗ ಶಿವಪ್ಪನು ಇವರಿಗೆ ಇಷ್ಟಕ್ಕೆ ಬಿಡಬಾರದು ಇನ್ನೊಮ್ಮೆ ನಮ್ಮ ತಂಟಗೆ ಬಾರದಂತೆ ಮಾಡಬೇಕು ಅವರಿಗೆ ಒಂದು ಗತಿ ಕಾಣಿಸಬೇಕು ಅಂತಾ ಜೀವ ಬೆದರಿಕೆ ಹಾಕಿರುತ್ತಾನೆ.
ನಂತರ ನಮಗೆ ಹೊಡೆದವರು ನಾವು ದಿನನಿತ್ಯ ಅದೇ ಹೊಲದಲ್ಲಿಂದ ತಿರುಗಾಡುತ್ತೇವೆ ನಿವೇನಾದರು ನಮಗೆ ದಾರಿಯ ಸಂಬಂಧ ತಂಟೆ ತಕರಾರು ಮಾಡಿದರೇ ನಿಮಗೆ ಒಂದು ಗತಿ ಕಾಣಿಸದೇ ಬಿಡುವುದಿಲ್ಲ ಅಂತ ಧಮಕಿ ಹಾಕಿ ಹೋದರು. ನಂತರ ಅದೇ ದಿನ ಒಂದು ಆಟೋದಲ್ಲಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಗಂಡನಿಗೆ ಉಪಚಾರ ಮಾಡಿಸಿರುತ್ತದೆ. ನನಗೆ ಗಾಯಗಳಾಗದರಿಂದ ಆಸ್ಪತ್ರೆಯಲ್ಲಿ ತೋರಿಸಿಕೊಂಡಿರುವುದಿಲ್ಲ ಸದ್ಯವು ನನಗೆ ಉಪಚಾರದ ಅವಶ್ಯಕತೆ ಇರುವುದಿಲ್ಲ. ಈ ಜಗಳವು ದಿನಾಂಕ 20/12/2021 ರಂದು ಸಂಜೆ 7-00 ಗಂಟೆಯಿಂದ 7-20 ಗಂಟೆಯ ಅವಧಿಯಲ್ಲಿ ಚಂದ್ರಾಮಪ್ಪ ತಂದೆ ಲಿಂಗಪ್ಪ ಡಪ್ಪಿನೋರ್ ಇವರ ಮನೆಯ ಮುಂದೆ ಇರುವ ರಸ್ತೆಯ ಮೇಲೆ ಆಗಿರುತ್ತದೆ. ನಂತರ ಈ ಬಗ್ಗೆ ನನ್ನ ಕುಟುಂಬದವರ ಜೊತೆ ವಿಚಾರಣೆ ಮಾಡಿ ಈ ದಿನ ತಡವಾಗಿ ಠಾಣೆಗೆ ಹಾಜರಾಗಿ ದೂರು ಸಲ್ಲಿಸುತಿದ್ದೇನೆ.
ಕಾರಣ ನನಗೆ ಮತ್ತು ನನ್ನ ಗಂಡನಿಗೆ ಮೇಲ್ಕಂಡವರು ಅಕ್ರಮ ಕೂಟ ರಚಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ರಕ್ತಗಾಯ ಹಾಗೂ ಗುಪ್ತಗಾಯ ಪಡಿಸಿದವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ವಿನಂತಿ. ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 143, 147, 323, 324, 354, 504, 506, ಸಂ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 


ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ, 186/2021 ಕಲಂ: 341,323,324,504,506 ಐಪಿಸಿ : ಇಂದು ದಿನಾಂಕ: 22.12.2021 ರಂದು 8.30 ಪಿಎಮ್ ಕ್ಕೆ ಕೋರ್ಟ ಕರ್ತವ್ಯ ನಿರ್ವಹಿಸುವ ಶ್ರೀ ಅಮರಪ್ಪ ಪಿಸಿ 176 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ಪಿರ್ಯಾದಿ ನಂ 18/2021 ನೇದ್ದನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ಆರೋಪಿ ಹಾಗು ಫಿಯರ್ಾದಿಯ ಮದ್ಯ ಹಣ ಕೊಡು98 ತೊಗೋ ವಿಚಾರದಲ್ಲಿ ತಕರಾರು ನಡೆದಿದ್ದು ಅದೇ ವೈಷಮ್ಯದಿಂದ ಆರೋಪಿತರು ದಿನಾಂಕ 20.10.2021 ರಂದು 02.30 ಪಿ ಎಮ್ ಸುಮಾರಿಗೆ ಜಗಳಾ ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹಾಗು ಕಲ್ಲಿನಿಂದ ಹೊಡೆಬಡೆ ಮಾಡಿ ಜಾಕೂ ತೋರಿಸಿ ಜೀವದ ಭಯ ಹಾಕಿದ್ದು ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಇದ್ದ ಖಾಸಗಿ ಪಿರ್ಯಾದಿ ಅಜರ್ಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 186/2021 ಕಲಂ: 341, 323,324,504,506 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 23-12-2021 11:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080