ಅಭಿಪ್ರಾಯ / ಸಲಹೆಗಳು

                      ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 23-12-2022


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 65/2022  ಕಲಂ 279, 337, 338  ಐಪಿಸಿ : ಇಂದು ದಿನಾಂಕ 22/12/2022 ರಂದು ಸಮಯ 2-30 ಪಿ.ಎಂ.ಕ್ಕೆ  ಶ್ರೀ ಪೀರಪ್ಪ ತಂದೆ ಹಣಮಂತ ಚಾನಕೊಟಗಿ ವಯ;45 ವರ್ಷ, ಉ;ಒಕ್ಕುಲುತನ, ಜಾ;ಕುರಬರ, ಸಾ;ಹಿರೇ ರೂಗಿ ತಾ;ಇಂಡಿ, ಜಿ;ವಿಜಯಪುರ ಖುದ್ದಾಗಿ ಠಾಣೆಗೆ ಹಾಜರಾಗಿ ಇಂದು ದಿನಾಂಕ 22/12/2022 ರಂದು ಬೆಳಿಗ್ಗೆ 6-30 ಎ.ಎಂ.ಕ್ಕೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮುಂಡರಗಿ ಗ್ರಾಮದ ಹತ್ತಿರ ಜರುಗಿದ ರಸ್ತೆ ಅಪಘಾತದ ಬಗ್ಗೆ ಕನ್ನಡದಲ್ಲಿ ಟೈಪ್ ಮಾಡಿದ ತಮ್ಮದೊಂದು ಪಿಯರ್ಾದು ದೂರನ್ನು ಹಾಜರುಪಡಿಸಿದ್ದು, ಪಿಯರ್ಾದಿಯ  ಹೇಳಿಕೆ  ಸಾರಾಂಶವೇನೆಂದರೆ ನಮ್ಮೂರಿನ ಸತ್ಯಮ್ಮ ಗಂಡ ನರಸಪ್ಪ ಕಲಬುರಗಿ ಈಕೆಯ ಮಗ ರಾಯಣ್ಣನ ಜವಳ ಕಾರ್ಯಕ್ರಮವು ಯಾದಗಿರಿ ಜಿಲ್ಲೆಯ ಶ್ರೀ ಕ್ಷೇತ್ರ ಮೈಲಾಪುರ ಮಲ್ಲಯ್ಯನ ಗುಡಿಯಲ್ಲಿ ಇಂದು ದಿನಾಂಕ 22/12/2022 ರಂದು ಇಟ್ಟುಕೊಂಡಿದ್ದರಿಂದ ನಮಗೆ ಮತ್ತು ನಮ್ಮ ಸಮಾಜದವರಿಗೆ ಜವಳಕ್ಕೆ ಹೇಳಿದ್ದರಿಂದ ಹೋಗಿ ಬರಲು ಬುಲೆರೋ ಗೂಡ್ಸ್ ವಾಹನ ನಂ.ಕೆಎ-32, ಎಎ-2692 ನೇದ್ದನ್ನು ಮುಗಿಸಿದ್ದರು, ನಿನ್ನೆ ದಿನಾಂಕ 21/12/2022 ರಂದು ರಾತ್ರಿ 10 ಗಂಟೆ ಸುಮಾರಿಗೆ ಜವಳ ಕಾರ್ಯಕ್ರಮಕ್ಕೆ ಮೈಲಾಪುರಕ್ಕೆ ಹೋಗಿ ಬರಲು ನಾನು ಹಾಗೂ ನಮ್ಮುರಿನ 1) ವಿಠಲ್ ತಂದೆ ಕೆಂಚಪ್ಪ ಪೂಜಾರಿ, 2) ಭೀಮಬಾಯಿ ಗಂಡ ಲಕ್ಷ್ಮಣ ಕಲಬುರಗಿ, 3) ಗಡ್ಡೆಪ್ಪ ತಂದೆ ಜಟ್ಟೆಪ್ಪ ಚಾಂದಕೊಟಗಿ, 4) ಬೀರಪ್ಪ ತಂದೆ ಲಕ್ಷ್ಮಣ ಕಲಬುರಗಿ, 5) ಇಂದಿರಾಬಾಯಿ ಗಂಡ ಶಿವಪ್ಪ ಮಿರಿಗಿ, 6) ಮುತ್ತುಬಾಯಿ ಗಂಡ ಕಲ್ಲಪ್ಪ ಪೂಜಾರಿ, 7) ಮಾರ್ತಂಡಪ್ಪ ತಂದೆ ಮಲ್ಲಪ್ಪ ಹೊನ್ನಳ್ಳಿ, 8) ದಂಡಮ್ಮ ಗಂಡ ಅಮೋಘಸಿದ್ದ ಕಲ್ಲೂರ, 9) ಬೀರಪ್ಪ ತಂದೆ ಯಲ್ಲಪ್ಪ ಹೊನ್ನಳ್ಳಿ, 10) ಚಂದ್ರಬಾಗ ಗಂಡ ಮಾರ್ತಂಡಪ್ಪ ಹೊನ್ನಳ್ಳಿ, 11) ಸತ್ಯಮ್ಮ ಗಂಡ ನರಸಪ್ಪ ಕಲಬುರಗಿ, 12) ಶಿವಮ್ಮ ಅಜರ್ುನ ಹಿರೇಕುರಬರ, 13) ಸಿದ್ದಗೊಂಡಪ್ಪ ತಂದೆ ಕೆಂಚಪ್ಪ ಪೂಜಾರಿ, 14) ಲಲಿತಾ ಗಂಡ ದೊಡ್ಡಪ್ಪ ಹೂವಣ್ಣೋರ, 15) ಶಿವಪುತ್ರ ತಂದೆ ಮಲ್ಲಪ್ಪ ಹೂವಣ್ಣೋರ ಮತ್ತು  16) ಸಾಬಣ್ಣ ತಂದೆ ಜಟ್ಟೆಪ್ಪ ಚಾಂದಕೊಟಗಿ ತಯಾರಾಗಿ ನಾವುಗಳು ಎಲ್ಲರೂ ಹೋಗಿ ಬರಲು ಮುಗಿದ್ದ  ಬುಲೆರೋ ವಾಹನದಲ್ಲಿ ನಮ್ಮುರಿನಿಂದ ನಿನ್ನೆ ದಿನಾಂಕ 21/12/2022 ರಂದು ರಾತ್ರಿ 10 ಗಂಟೆ ಸುಮಾರಿಗೆ ಯಾದಗಿರಿ ಜಿಲ್ಲೆಯ ಮೈಲಾಫುರ ದೇವಾಸ್ಥನಕ್ಕೆ ಹೊರಟೆವು. ಬುಲೆರೋ ವಾಹನವನ್ನು ಅದರ ಚಾಲಕ ಅನೀಲ್ ತಂದೆ ವಿಶ್ವನಾಥ ಬಕರೇ ಸಾ;ಮಾದನಹಿಪ್ಪರಗಾ, ಜಿ;ಕಲಬುರಗಿ ಈತನು ಚಾಲನೆ ಮಾಡಿಕೊಂಡು ಹೊರಟಿದ್ದನು. ಬರುವಾಗ ಮಾರ್ಗ ಮದ್ಯೆ ನಮ್ಮ ವಾಹನದ ಟೈರಗಳು ಎರಡು ಬಾರಿ ಪಂಪಚರ್ ಆಗಿದ್ದರಿಂದ ರಾತ್ರಿಯೇ ಮೈಲಾಫುರಕ್ಕೆ ತಲುಪಬೇಕಾಗಿದ್ದ ನಮಗೆ ದಾರಿಯಲ್ಲಿಯೇ ತಡವಾಗಿರುತ್ತದೆ. ವಾಹನದ ಟೈರಗಳು ರಿಪೇರಿ ಮಾಡಿಕೊಂಡು ಹೊರಟಾಗ ನಾನು ಮತ್ತು ಬೀರಪ್ಪ ತಂದೆ ಲಕ್ಷ್ಮಣ ಕಲಬುರಗಿ ಇಬ್ಬರು ವಾಹನದ ಚಾಲಕನ ಪಕ್ಕದಲ್ಲಿ ಇರುವ ಮುಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದೆವು.  ಹೀಗಿದ್ದು  ಇಂದು ದಿನಾಂಕ 22/12/2022 ರಂದು ಬೆಳಿಗ್ಗೆ 6-30 ಎ.ಎಂ.ಕ್ಕೆ ಯಾದಗಿರಿ ನಗರದ ದಾಟಿದ ನಂತರ ಮಾರ್ಗ ಮದ್ಯೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಮುಂಡರಗಿ ಗ್ರಾಮದ ಹತ್ತಿರ ನಮ್ಮ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುವಾಗ ನಾವಿಬ್ಬರು ವಾಹನದ ಚಾಲಕ ಅನೀಲ್ ಈತನಿಗೆ ನಿಧಾನವಾಗಿ ಹೋಗು ಅಂದರೂ ಕೇಳದೆ ಅದೇ ವೇಗದಲ್ಲಿ ಹೋಗುತ್ತಿದ್ದಾಗ ಚಾಲಕನಿಗೆ ವಾಹನದ ಮೇಲಿನ ನಿಯಂತ್ರಣ ತಪ್ಪಿದಾಗ ರಸ್ತೆ ಮೇಲೆ ಸ್ಕಿಡ್ ಆಗಿ ವಾಹನವು ರಸ್ತೆ ಎಡ ಬದಿಗೆ ಪಲ್ಟಿಯಾಗಿರುತ್ತದೆ. ಸದರಿ ಅಪಘಾತದಲ್ಲಿ ನನಗೆ ಎಡ ತೊಡೆಗೆ, ಬಲಹುಬ್ಬಿನ ಹತ್ತಿರ ಗುಪ್ತಗಾಯ, ಎಡಗೈ ಮೊಣಕೈ ಹತ್ತಿರ ತರಚಿದ ರಕ್ತಗಾಯವಾಗಿದ್ದು, ನನ್ನ ಪಕ್ಕದಲ್ಲಿ ಕುಳಿತಿದ್ದ ಬೀರಪ್ಪ ತಂದೆ ಲಕ್ಷ್ಮಣ ಕಲಬುರಗಿ ಈತನಿಗೆ ನೋಡಲು ಆತನಿಗೆ ಎದೆಯ ಎಡಭಾಗಕ್ಕೆ, ಭುಜಕ್ಕೆ ಭಾರೀ ಗುಪ್ತಗಾಯವಾಗಿರುತ್ತವೆ. ಚಾಲಕನಿಗೆ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ, ವಾಹನದಿಂದ ಹೊರಗೆ ಬಂದು ನೋಡಲಾಗಿ ವಾಹನದ ಹಿಂದಿನ ಟ್ರಾಲಿಯಲ್ಲಿ ಕುಳಿತಿದ್ದ ಈ ಮೇಲೆ ಹೆಸರು ನಮೂದಿಸಿದಂತೆ ಜವಳ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಭಾರೀ ರಕ್ತಗಾಯ ಮತ್ತು ಗುಪ್ತಗಾಯಗಳು ಹಾಗೂ ತರಚಿದ ರಕ್ತಗಾಯಗಳು ಆಗಿರುತ್ತವೆ.  ಈ ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ಬಂದಿದ್ದು ಇರುತ್ತದೆ ಆಗ ಘಟನಾ ಸ್ಥಳಕ್ಕೆ ಬಂದಿದ್ದ ಮುಂಡರಗಿ ಗ್ರಾಮದ ಬಸವರಾಜ ದನಕಾಯಿ ಎಂಬಾತನು ನಮಗೆಲ್ಲಾ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ನಮಗೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಲ್ಲಿ ಉಪಚಾರ ನೀಡಿದ ವೈದ್ಯರು ನಮ್ಮವರಲ್ಲಿ ವಿಠಲ್ ತಂದೆ ಕೆಂಚಪ್ಪ ಪೂಜಾರಿ ಈತನಿಗೆ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಗೆ ರೆಫರ್ ಮಾಡಿದ್ದು ಇರುತ್ತದೆ. ಈ ಘಟನೆಯ ನಂತರ ಎಲ್ಲಾ ಗಾಯಾಳುಗಳಿಗೆ ಹಾಗೂ ಅವರ ಮನೆಯವರಿಗೆ ವಿಚಾರಿಸಿ,  ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು ಇಂದು ದಿನಾಂಕ 22/12/2022 ರಂದು ಬೆಳಿಗ್ಗೆ 6-30 ಎ.ಎಂ.ಕ್ಕೆ ಮುಂಡರಗಿ ಗ್ರಾಮದ ಹತ್ತಿರ ನಾವು ಕುಳಿತುಕೊಂಡು ಹೊರಟಿದ್ದ ಬುಲೆರೋ ಜೀಪ್ ವಾಹನ ನಂಬರ ಕೆಎ-32. ಎಎ-2692 ನೇದ್ದರ ಚಾಲಕ ಅನೀಲ್ ಈತನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಮಾಡಿ ಅಪಘಾತ ಪಡಿಸಿದ್ದು ಆತನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಪಿಯರ್ಾದಿಯ  ಹೇಳಿಕೆ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ  65/2022 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು  ತನಿಖೆ ಕೈ ಕೊಂಡೆನು.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: ದಿನಾಂಕ: 21.12.2022 ರಂದು ರಾತ್ರಿ 09.30 ಗಂಟೆ ಸುಮಾರಿಗೆ ಮೃತ ಸಣ್ಣ ಹಣಮಂತ ತಂದೆ ಬುಗ್ಗಪ್ಪ ಪಿಚ್ಚಕುಂಟ್ಲಾ ಈತನು ಗಾಜರಕೋಟ ಗ್ರಾಮದಲ್ಲಿ ಕುಡಿದ ನಿಶೆಯಲ್ಲಿ ಕ್ರಿಮಿನಾಷಕ ಔಷದಿ ಸೇವನೆಮಾಡಿ ದಿನಾಂಕ: 22.12.2022 ರಂದು ಮದ್ಯಾಹ್ನ 02.42 ಗಂಟೆಗೆ ರಾಯಚೂರ ರೀಮ್ಸ ಆಸ್ಪತ್ರೆಯಲ್ಲಿ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ.
 

ಇತ್ತೀಚಿನ ನವೀಕರಣ​ : 24-12-2022 12:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080