Feedback / Suggestions

                                                                                                  ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 24-01-2023

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 08/2023 ಕಲಂ 379 ಐ.ಪಿ.ಸಿ. : ಇಂದು ದಿನಾಂಕ:23/01/2023 ರಂದು 8:30 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸರಕಾರಿ ತಪರ್ೆ ಪಿಯರ್ಾದಿ ಶ್ರೀ ಆನಂದ ವಾಗಮೋಡೆ ಪಿಐ ಸುರಪೂರ ಪೊಲೀಸ್ ಠಾಣೆ, ಇವರು ಮುದ್ದೇಮಾಲಿನೊಂದಿಗೆ ಠಾಣೆಗೆ ಹಾಜರಾಗಿ ಕೊಟ್ಟ ವರದಿ ಸಾರಾಂಶವೇನೆಚಿದರೆ, ಇಂದು ದಿನಾಂಕ:23/01/2023 ರಂದು 05 ಎಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ, ಯಾರೋ ಒಬ್ಬ ವ್ಯಕ್ತಿ ಚೌಡೇಶ್ವರಹಾಳ ಸೀಮಾಂತರದ ಕೃಷ್ಣಾ ನದಿ ಪಾತ್ರದಿಂದ ಮರಳನ್ನು ತನ್ನ ಟ್ರ್ಯಾಕ್ಟರ್ ಮುಖಾಂತರ ಮಾರಾಟ ಮಾಡಲು ಅಕ್ರಮವಾಗಿ ಸಾಗಿಸುತ್ತಿದ್ದಾನೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂಧಿಯವರಾದ ಶ್ರೀ ಮಹಿಬೂಬ ಅಲೀ ಹೆಚ್.ಸಿ-83, ಶ್ರೀ ಹೊನ್ನಪ್ಪ ಸಿಪಿಸಿ427, ಶ್ರೀ ಹುಸೇನಿ ಸಿಪಿಸಿ-236 ಇವರಿಗೆ ವಿಷಯ ತಿಳಿಸಿ ಮಹಿಬೂಬ ಅಲೀ ಹೆಚ್.ಸಿ-83 ರವರಿಗೆ ಇಬ್ಬರು ಪಂಚರನ್ನು ಠಾಣೆಗೆ ಬರಮಾಡಿಕೊಂಡು ಬರುವಂತೆ ತಿಳಿಸಿದ ಮೇರೆಗೆ ಸದರಿ ಹೆಚ್.ಸಿ ರವರು ಇಬ್ಬರು ಪಂಚರಾದ 1) ಶ್ರೀ ಬಸವರಾಜ ತಂದೆ ಮಲ್ಲಪ್ಪ ಕರಿಗುಡ್ಡ ವ|| 19 ವರ್ಷ ಜಾ|| ಕೂಲಿ ಕೆಲಸ ಸಾ|| ವೆಂಕಟಾಪೂರ ತಾ|| ಸುರಪುರ 2) ಶ್ರೀ ಮಹಾದೇವಪ್ಪ ತಂದೆ ಮರೆಪ್ಪ ಹಳ್ಳದಮನಿ ವ|| 35 ವರ್ಷ ಜಾ|| ಬೇಡರ ಉ|| ಕೂಲಿ ಸಾ|| ಉದ್ದಾರ ಓಣಿ ಸುರಪುರಇವರನ್ನು 05:30 ಎ.ಎಮ್. ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಸಿಬ್ಬಂದಿಯವರು ಕೂಡಿಕೊಂಡು ನಮ್ಮ ಸಕರ್ಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಕುಳಿತುಕೊಂಡು 05:45 ಎ.ಎಂಕ್ಕೆ ಠಾಣೆಯಿಂದ ಹೊರಟು 06:25 ಎ.ಎಂ ಸುಮಾರಿಗೆ ಬೇವಿನಾಳ ಕ್ರಾಸ್ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಟ್ರ್ಯಾಕ್ಟರ್ದಲ್ಲಿ ತುಂಬಿಕೊಂಡು ಕಳ್ಳತನದಿಂದ ಸಾಗಿಸುತ್ತಿದ್ದನ್ನು ಖಚಿತಪಡಿಸಿಕೊಂಡು, 06:30 ಎ.ಎಮ್ಕ್ಕೆ ನಾವೆಲ್ಲರು ಒಮ್ಮೆಲೆ ದಾಳಿ ಮಾಡಿ ಹಿಡಿಯಬೇಕೆನ್ನುಷ್ಟರಲ್ಲಿ ಆರೋಪಿತನು ನಮ್ಮನ್ನು ನೋಡಿ ಸ್ಥಳದಲ್ಲಿಯೇ ಟ್ರ್ಯಾಕ್ಟರ ಬಿಟ್ಟು ಓಡಿ ಹೋದನು. ಸದರಿ ಚಾಲಕನನ್ನು ಇನ್ನೊಮ್ಮೆ ನೋಡಿದಲ್ಲಿ ಗುತರ್ಿಸುತ್ತೇನೆ. ನಂತರ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ಹೋಗಿ ನೋಡಲಾಗಿ ಸ್ಥಳದಲ್ಲಿ ಒಂದು ಸ್ವರಾಜ ಕಂಪನಿಯಟ್ರ್ಯಾಕ್ಟರ್ ಇಟಿರಟಿಜ ಎಅ.1353/ಖಇಊ1539 ಮತ್ತು ಚೆಸ್ಸಿ ನಂ. ಒಃಓಂಏ49ಂಊಓಖಿಊ24696 ಇದ್ದು, ಟ್ರ್ಯಾಲಿಗೆ ನಂಬರ್ ಇರುವದಿಲ್ಲ. ಅ.ಕಿ. 2 ಲಕ್ಷ ರೂ. ಗಳು. ಹಾಗು ಟ್ರ್ಯಾಕ್ಟರದಲ್ಲಿದ್ದ 2 ಘನ ಮೀಟರ್ ಮರಳು ಅ.ಕಿ. 1600/- ರೂ.ಗಳು. ನಂತರ ಸದರಿ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ 06:30 ಎ.ಎಂ ದಿಂದ 07:30 ಎ.ಎಂ ದ ಅವದಿವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ವಾಹನವನ್ನು ಜಪ್ತಿ ಪಡಿಸಿಕೊಂಡು ನಮ್ಮ ತಾಬಾಕ್ಕೆ ತೆಗೆದುಕೊಂಡು ಠಾಣೆಗೆ ತಂದಿದ್ದು ಇರುತ್ತದೆ. ಕಾರಣ ಸದರಿ ಟ್ರ್ಯಾಕ್ಟರ್ ನೇದ್ದರ ಚಾಲಕ ಮತ್ತು ಮಾಲಿಕನು ಸರಕಾರದ ಸ್ವತ್ತಾದ ನೈಸಗರ್ಿಕ ಮರಳನ್ನು ಚೌಡೇಶ್ವರಹಾಳ ಸಿಮಾಂತರದಿಂದ ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತು ಜಪ್ತಿ ಪಂಚನಾಮೆಯೊಂದಿಗೆ ಈ ವರದಿಯನ್ನು ನೀಡಿದ್ದು,ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಲಾಗಿದೆ ಅಂತ ಜಪ್ತಿ ಪಂಚನಾಮೆಯೊಂದಿಗೆ ಈ ವರದಿಯನ್ನು ನೀಡಿದ್ದು,ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 08/2023 ಕಲಂ 379 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ ಠಾಣೆ:-
ಗುನ್ನೆ ನಂ: 09/2023 ಕಲಂ: 379 ಐಪಿಸಿ  : ಇಂದು ದಿನಾಂಕ:23/01/2023 ರಂದು 01-48 ಪಿಎಮ್ಕ್ಕೆ ಆನ್ಲೈನ್ ಮೂಲಕ (ಇ ಎಫ್ಐಆರ್)  ಪಿರ್ಯಾದಿ ವಸೂಲಾಗಿದ್ದು ಅದರಲ್ಲಿ ಪಿಯರ್ಾದಿದಾರರಾದ ಶ್ರೀ ಮಲ್ಲಿಕಾಜರ್ುನಯ್ಯ ತಂದೆ ಚನ್ನಬಸಯ್ಯ ಜೆಟಗಿಮಠ ವ|| 44 ವರ್ಷ ಜಾ|| ಹಿಂದೂ ಜಂಗಮ ಉ|| ಸಹ ಶಿಕ್ಷಕರು ಬಾಲಕಿಯರ ಪ.ಪೂ ಕಾಲೇಜು (ಪ್ರೌಢಶಾಲಾ ವಿಭಾಗ) ಸುರಪುರ ಸಾ|| ಕೆನರಾ ಬ್ಯಾಂಕ್ ಹತ್ತಿರ ಸುರಪುರ ಇವರು ಕೊಟ್ಟ ದೂರಿನ ಸಾರಾಂಶವೇನೆಂದರೆ, ನನ್ನದೊಂದು ಗ್ರೇ ಕಲರ್ ಹೊಂಡಾ ಶೈನ್ ಮೋಟರ ಸೈಕಲ್ ನಂಬರ ಏಂ-33-ಖ-4666 (ಅಊಇಖಖ ಓಔ ಒಇ4ಎಅ651ಎಈಖಿ098862, ಇಓಉಓಇ ಓಔ. ಎಅ65ಇಖಿ0140828) ನೇದ್ದು ಇದ್ದು, ಅದನ್ನು ನಾನೇ ಚಲಾಯಿಸಿಕೊಂಡು ಇರುತ್ತೇನೆ. ಸದರಿ ಮೋಟರ ಸೈಕಲನ್ನು ಪ್ರತಿದಿನ ನನ್ನ ಮನೆಯ ಮುಂದೆ ನಿಲ್ಲಿಸುತ್ತಿದ್ದೆನು. ಹೀಗಿದ್ದು ದಿನಾಂಕ 03/01/2023 ರಂದು ಮದ್ಯಾಹ್ನ ಶಾಲೆಯಲ್ಲಿ ಊಟಕ್ಕೆ ಬಿಟ್ಟ ನಂತರ ನಾನು 1-20 ಪಿಎಮ್ ಸುಮಾರಿಗೆ ಮನೆಗೆ ಬಂದು ನಮ್ಮ ಮನೆಯ ಮುಂದೆ ನನ್ನ ಮೋಟರ ಸೈಕಲನ್ನು ನಿಲ್ಲಿಸಿ ಮನೆಯಲ್ಲಿ ಹೋಗಿದ್ದೆನು. ನಂತರ ಊಟ ಮಾಡಿ 2-15 ಪಿಎಮ್ಕ್ಕೆ ಮನೆಯ ಹೊರಗಡೆ ಬಂದು ನಾನು ನಿಲ್ಲಿಸಿದ ಮೋಟರ ಸೈಕಲ ನೋಡಲಾಗಿ ಸ್ಥಳದಲ್ಲಿ ಮೋಟರ ಸೈಕಲ್ ಇರಲಿಲ್ಲ. ಆಗ ನಾನು ಗಾಬರಿಯಾಗಿ ಸುತ್ತಮುತ್ತ ಹುಡುಕಾಡಲು ಎಲ್ಲಿಯೂ ಕಾಣಿಸಲಿಲ್ಲ. ನಂತರ ನಾನು ಮತ್ತು ನಮ್ಮ ಮನೆಯ ಹತ್ತಿರ ಇರುವ ವಿವೇಕಾನಂದ ಬಟ್ಟೆ ಅಂಗಡಿಯ ಮಾಲಿಕರಾದ ನಾಗರಾಜ ಗಣಮುಖಿ ಇಬ್ಬರು ಕೂಡಿಕೊಂಡು ಸುರಪುರ ಪಟ್ಟಣದ ಎಲ್ಲಾ ಕಡೆ ಹುಡುಕಾಡಲಾಗಿ ನಮ್ಮ ಮೋಟರ ಸೈಕಲ್ ಸಿಕ್ಕಿರುವದಿಲ್ಲ. ಕಾರಣ ದಿನಾಂಕ 03/01/2023 ರಂದು 01-20 ಪಿಎಮ್ದಿಂದ 02-15 ಪಿಎಮ್ದ ಮದ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ನನ್ನ ಹೊಂಡಾ ಶೈನ್ ಮೋಟರ ಸೈಕಲ್ ನಂಬರ ಏಂ-33-ಖ-4666 ಅ.ಕಿ 30,000=00 ನೇದ್ದು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಮನೆಯಲ್ಲಿ ವಿಚಾರಿಸಿ ಮತ್ತು ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದರೂ ನನ್ನ ಮೋಟರ ಸೈಕಲ್ ಸಿಗದ ಕಾರಣ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದು, ಕಾರಣ ಕಳುವಾದ ನನ್ನ ಮೋಟರ ಸೈಕಲ್ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಇದ್ದ ಅಜರ್ಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 09/2023 ಕಲಂ: 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 09/2023 ಕಲಂ: 143, 147, 148, 504, 324, 323, 506 ಸಂ 149 ಐಪಿಸಿ : ಇಂದು ದಿನಾಂಕ:23/01/2023 ರಂದು 5-15 ಪಿಎಮ್ ಕ್ಕೆ ಶ್ರೀಮತಿ ಭೀಮಮ್ಮ ಗಂಡ ಮಹಾದೇವಪ್ಪ ಕ್ಯಾತ್ನಳ, ವ:50, ಜಾ:ಹೊಲೆಯ, ಉ:ಹೊಲಮನೆ ಕೆಲಸ ಸಾ:ಬೇನಕನಹಳ್ಳಿ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನಾನು ಹೊಲಮನೆ ಕೆಲಸ ಮಾಡಿಕೊಂಡು ಗಂಡ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ನನ್ನ ಗಂಡನ ಅಣ್ಣತಮ್ಮಕೀಯ ದೊಡ್ಡಪ್ಪನ ಮಗನಾದ ಮರೆಪ್ಪ ತಂದೆ ಬಸಪ್ಪ ಕ್ಯಾತ್ನಳ ಈತನು ನಮ್ಮ ಕಬ್ಜೆಯಲ್ಲಿರುವ ಶಿವನೂರು ಸೀಮಾಂತರದ ಹೊಲ ಸವರ್ೆ ನಂ. 50 ನೇದನ್ನು ನಮಗೆ ಹೇಳದೆ ಕೇಳದೆ ತನ್ನ ಹೆಸರಿನಲ್ಲಿ ಮಾಡಿಕೊಂಡಿದ್ದನು. ಆಗ ನನ್ನ ಗಂಡನು ಮರೆಪ್ಪನಿಗೆ ನಾವು ಉಣ್ಣುತ್ತಿರುವ ಹೊಲವನ್ನು ನಿನ್ನ ಹೆಸರಿಗೆ ಹೇಗೆ ಮಾಡಿಸಿಕೊಂಡಿರುವಿ ಎಂದು ಕೇಳಿದ್ದಕ್ಕೆ ನಾನು ಮಾಡಿಕೊಂಡಿನಿ ನೀವೆನು ಮಾಡುತ್ತಿರಿ ಮಾಡ್ರಿ ಎಂದು ಈಗ ಸುಮಾರು ದಿನಗಳಿಂದ ನಮ್ಮೊಂದಿಗೆ ತಂಟೆ ತಕರಾರು ಮಾಡುತ್ತಾ ಬರುತ್ತಿದ್ದನು. ಹೀಗಿದ್ದು ದಿನಾಂಕ:21/01/2023 ರಂದು ರಾತ್ರಿ 7-30 ಗಂಟೆ ಸುಮಾರಿಗೆ ನಮ್ಮ ಮನೆಯಲ್ಲಿ ನಾನು ನನ್ನ ಗಂಡನಿಗೆ ಊಟ ಬಡಿಸುತ್ತಿದ್ದಾಗ 1) ಮರೆಪ್ಪ ತಂದೆ ಬಸಪ್ಪ ಕ್ಯಾತ್ನಳ, 2) ಶಿವಪ್ಪ ತಂದೆ ದೊಡ್ಡಯ್ಯ ಹೆಂಡೆರ ಸಾ:ಗೋನಾಲ, 3) ಹಣಮಂತಿ ಗಂಡ ಮರೆಪ್ಪ ಕ್ಯಾತ್ನಳ, 4) ಸಿದ್ದಮ್ಮ ಗಂಡ ಶಾಂತಪ್ಪ ಕ್ಯಾತ್ನಳ, 5) ನೀಲಮ್ಮ ಗಂಡ ಭೀಮರಾಯ ಕ್ಯಾತ್ನಳ ಎಲ್ಲರೂ ಸಾ:ಬೇನಕನಹಳ್ಳಿ ಮತ್ತು ಅವರ ಸಂಬಂಧಿಕರಾದ ಗೋನಾಲ ಗ್ರಾಮದ 6) ನಿಂಗಪ್ಪ ತಂದೆ ದೊಡ್ಡಯ್ಯ ಹೆಂಡೆರ, 7) ಮಲ್ಲಪ್ಪ ತಂದೆ ಹುಲಗಪ್ಪ ಹೆಂಡೆರ ಮತ್ತು 8) ದೊಡ್ಡಯ್ಯ ತಂದೆ ಹಣಮಂತ ಹೆಂಡೆರ ಇವರೆಲ್ಲರೂ ಸೇರಿಕೊಂಡು ಗುಂಪು ಕಟ್ಟಿಕೊಂಡು ಬಂದವರೆ ನನ್ನ ಗಂಡನಿಗೆ ಲೇ ಮಗನೆ ಮಾದ್ಯಾ ಹೊರಗೆ ಬಾ ಲೇ ಸೂಳೆ ಮಗನೆ ಹೊಲ ಹೆಂಗೆ ನಿನ್ನ ಹೆಸರಿನಲ್ಲಿ ಮಾಡಿಕೊಂಡಿ ಎಂದು ಕೇಳತಿಯನಲೇ ಭೊಸುಡಿ ಮಗನೆ ಇವತ್ತು ನಿನ್ನ ತಿಂಡಿ ಮುರಿಯುತ್ತೇವೆ ಎಂದು ಅವಾಚ್ಯ ಬೈಯುತ್ತಿದ್ದಾಗ ನಾನು ಮತ್ತು ನನ್ನ ಗಂಡ ಇಬ್ಬರೂ ಮನೆಯಿಂದ ಹೊರಗಡೆ ಬಂದು ವಿನಾಕಾರಣ ನಮ್ಮ ಮನೆತನ ಬಂದು ಯಾಕೆ ಬೈಯುತ್ತಿದ್ದಿರಿ ಎಂದು ಕೇಳುತ್ತಿದ್ದಾಗ ಮರೆಪ್ಪನು ಮಾದ್ಯಾ ಸೂಳೆ ಮಗ ಇವತ್ತು ಸಿಕ್ಕಾನ ಇವನಿಗೆ ಖಲಾಸ ಮಾಡಿಯೇ ತೀರೋಣ ಎಂದು ತನ್ನ ಕೈಯಲ್ಲಿದ್ದ ಕಟ್ಟಿಗೆ ಬಡಿಗೆಯಿಂದ ನನ್ನ ಗಂಡನ ಬಲ ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಶಿವಪ್ಪನು ಮರೆಪ್ಪನ ಕೈಯಲ್ಲಿದ್ದ ಕಟ್ಟಿಗೆ ಕಸಿದುಕೊಂಡು ನನ್ನ ಗಂಡನ ಎರಡು ಪಕ್ಕೆಗಳಿಗೆ ಮತ್ತು ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿದನು. ನನ್ನ ಗಂಡನು ಸತ್ತೆನೆಪ್ಪೊ ಎಂದು ಚೀರಾಡಿ ಕೆಳಗಡೆ ಬಿದ್ದಾಗ ನಾನು ನನ್ನ ಗಂಡನಿಗೆ ಹೊಡೆಯುವುದು ಬಿಡಿಸಲು ಹೊದರೆ ನನಗೆ ಸಿದ್ದಮ್ಮ ಮತ್ತು ನೀಲಮ್ಮ ಇಬ್ಬರೂ ಗಟ್ಟಿಯಾಗಿ ಹಿಡಿದುಕೊಂಡಾಗ ಹಣಮಂತಿ ಇವಳು ಬಂದು ಈ ಸೂಳಿದು ಸೊಕ್ಕು ಜಾಸ್ತಿಯಾಗಿದೆ ಇವಳಿಗೆ ಬಿಡಬ್ಯಾಡ್ರಿ ಎಂದು ಜಗಳ ತೆಗೆದು ನನ್ನ ತಲೆ ಮೇಲಿನ ಕೂದಲು ಹಿಡಿದು ಕೈಯಿಂದ ಮುಷ್ಟಿ ಮಾಡಿ ನನ್ನ ಮುಖ ಮತ್ತು ಹೊಟ್ಟೆಗೆ ಗುದ್ದಿ ಒಳಪೆಟ್ಟು ಮಾಡಿದಳು. ನಿಂಗಪ್ಪ, ಮಲ್ಲಪ್ಪ ಮತ್ತು ದೊಡ್ಡಯ್ಯ ಇವರು ಬಂದು ಕೆಳಗಡೆ ಬಿದ್ದ ನನ್ನ ಗಂಡನಿಗೆ ಕಾಲಿನಿಂದ ಸೊಂಟಕ್ಕೆ ಒದ್ದಿರುತ್ತಾರೆ. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮ ಮನೆ ಆಜುಬಾಜುದವರಾದ ದೇವಪ್ಪ ತಂದೆ ಮರೆಪ್ಪ ಕ್ಯಾಂಡೆಟ್, ದುರುಗಪ್ಪ ತಂದೆ ಬಾಲಪ್ಪ ಭಂಡಾರಿ ಮತ್ತು ದೇವಪ್ಪ ತಂದೆ ಅಯ್ಯಪ್ಪ ಬಡಿಗೇರ ಇವರುಗಳು ಬಂದು ನನಗೆ ಮತ್ತು ನನ್ನ ಗಂಡನಿಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಆಗ ಹೊಡೆಯುವುದು ಬಿಟ್ಟ ಅವರು ನಮಗೆ ಇವತ್ತು ಉಳದ್ರಿ ಸೂಳೆ ಮಕ್ಕಳೆ ಇನ್ನೊಂದು ಸಲ ಆ ಹೊಲದ ಹೆಸರಿಗೆ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ನನ್ನ ಗಂಡನಿಗೆ ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದೇವು. ಇಲ್ಲಿನ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದರು. ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು ವಡಗೇರಾ ಠಾಣೆ ಪೊಲೀಸರು ಬಂದಾಗ ನಾನು ಮತ್ತು ನನ್ನ ಗಂಡ ನಮ್ಮ ಹಿರಿಯರಿಗೆ ವಿಚಾರಣೆ ಮಾಡಿಕೊಂಡು ದೂರು ಕೊಡುವುದಿದ್ದರೆ ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ಕಾರಣ ಈಗ ನಮ್ಮ ಹಿರಿಯರಿಗೆ ವಿಚಾರಣೆ ಮಾಡಿಕೊಂಡು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ವಿನಾಕಾರಣ ನಾವು ಕಬ್ಜೆಯಲ್ಲಿರುವ ಹೊಲದ ಸಂಬಂಧ ಜಗಳ ತೆಗೆದು, ಅವಾಚ್ಯ ಬೈದು ಗುಂಪು ಕಟ್ಟಿಕೊಂಡು ಬಂದು ನನ್ನ ಗಂಡನಿಗೆ ಕಟ್ಟಿಗೆ ಬಡಿಗೆಯಿಂದ ಹೊಡೆಬಡೆ ಮಾಡಿ ರಕ್ತ ಮತ್ತು ಗುಪ್ತಗಾಯ ಮಾಡಿ, ನನಗೆ ಕೈಯಿಂದ ಹೊಡೆದು ಇಬ್ಬರಿಗೆ ಜೀವ ಬೆದರಿಕೆ ಹಾಕಿದ ಮೇಲ್ಕಂಡರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 09/2023 ಕಲಂ:143, 147, 148, 504, 324, 323, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 10/2023 ಕಲಂ: 78(3) ಕೆ.ಪಿ ಎಕ್ಟ 1963 : ಇಂದು ದಿನಾಂಕ:23/01/20233 ರಂದು 6-30 ಪಿಎಮ್ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೆಮಾಲು ಹಾಜರಪಡಿಸಿ, ಜಪ್ತಿ ಪಂಚನಾಮೆಯೊಂದಿಗೆ ಸರಕಾರಿ ತಫರ್ೆಯಿಂದ ವರದಿ ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 23/01/2023 ರಂದು ಸಮಯ ಮದ್ಯಾಹ್ನ 3 ಗಂಟೆ ಸುಮಾರಿಗೆ ನಾನು ಮತ್ತು ಸಿಬ್ಬಂದಿಯವರಾದ ಸಾಬರೆಡ್ಡಿ ಪಿಸಿ 290, ವೆಂಕೋಬ ಪಿಸಿ 384, ಸಂಜೀವಕುಮಾರ ಪಿಸಿ 03 ಹಾಗೂ ಜೀಪ ಚಾಲಕ ಮಹೇಂದ್ರ ಪಿಸಿ 254 ರವರು ಪೋಲಿಸ ಠಾಣೆಯಲ್ಲಿದ್ದಾಗ ವಡಗೇರಾ ಠಾಣಾ ವ್ಯಾಪ್ತಿಯ ಬೀಟ್ ಸಂ. 08 ರಲ್ಲಿ ಬರುವ ಟಿ. ವಡಗೇರಾ ಗ್ರಾಮದ ಬಸ್ ನಿಲ್ದಾಣದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಕಲ್ಯಾಣ ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿರುತ್ತದೆ 3-10 ಪಿಎಮ್ಕ್ಕೆ ಇಬ್ಬರೂ ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ದಾಳಿ ಬಗ್ಗೆ ಮಾಹಿತಿ ತಿಳಿಸಿ, ಸದರಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪಿನಲ್ಲಿ ಕುಳಿತು 3-20 ಪಿಎಮ್ಕ್ಕೆ ವಡಗೇರಾ ಠಾಣೆಯಿಂದ ಹೊರಟು ಸಮಯ 4 ಪಿಎಮ್ ಸುಮಾರಿಗೆ ಟಿ. ವಡಗೇರಾ ಗ್ರಾಮ ತಲುಪಿ ಸದರಿ ಟಿ. ವಡಗೇರಾ ಗ್ರಾಮದ ಜಿಬ್ಲೇಸಾಬ ದಗರ್ಾದ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಬಂದು ಟಿ. ವಡಗೇರಾ ಗ್ರಾಮದ ಬಸ್ ನಿಲ್ದಾಣವನ್ನು ಮರೆಯಾಗಿ ನಿಂತು ನೋಡಲಾಗಿ ಟಿ. ವಡಗೇರಾ ಗ್ರಾಮದ ಬಸ್ ನಿಲ್ದಾಣದ ಸಾರ್ವಜನಿಕ ಕಟ್ಟೆಯ ಮೇಲೆ ಒಬ್ಬ ವ್ಯಕ್ತಿಯು ಕುಳಿತು ದಾರಿ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಆಡಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಒಂದೊಂದು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 4-10 ಪಿಎಮ್ ಕ್ಕೆ ನಾವು ಅವನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದಿದ್ದು, ಮಟಕಾ ಬರೆಸುವವರು ಅಲ್ಲಿಂದ ಓಡಿ ಹೋದರು. ಸದರಿ ವಶಕ್ಕೆ ಪಡೆದವನಿಗೆ ಹೆಸರು ವಿಳಾಸ ಕೇಳಿದಾಗ ಅವನು ತನ್ನ ಹೆಸರು ರಂಗಯ್ಯ ತಂದೆ ಸಿದ್ದಯ್ಯ ಇಳಗೇರ, ವ:27, ಜಾ:ಇಳಗೇರ, ಉ:ಒಕ್ಕಲುತನ ಸಾ:ಟಿ. ವಡಗೇರಾ ತಾ:ವಡಗೇರಾ ಎಂದು ಹೇಳಿದನು. ಸದರಿಯವನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ 1) ಮಟಕಾ ನಂಬರಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ. 00=00, 2) ನಗದು ಹಣ 1500/- 3) ಒಂದು ಬಾಲ್ ಪೆನ್ನ ಅ.ಕಿ.00=00 ಹೀಗೆ ಒಟ್ಟು 1500/- ರೂ. ಇವುಗಳನ್ನು ಹಾಜರಪಡಿಸಿದ್ದು, ಆತನು ಹಾಜರುಪಡಿಸಿದ ಹಣವು ಮಟಕಾ ನಂಬರಗಳು ಬರೆದುಕೊಟ್ಟಿದ್ದರಿಂದ ಬಂದಿದ್ದು ಅಂತಾ ತಿಳಿಸಿದನು. ಸದರಿ ಘಟನೆ ಸ್ಥಳವು ಟಿ. ವಡಗೇರಾ ಗ್ರಾಮದ ಬಸ್ ಕಟ್ಟೆ ಹತ್ತಿರ ಇರುತ್ತದೆ. ಸದರಿ ವಶಕ್ಕೆ ಪಡೆದುಕೊಂಡ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಸದರಿ ಆರೋಪಿ, ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆಯನ್ನು ಹಾಜರುಪಡಿಸಿದ್ದು ಇರುತ್ತದೆ. ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 10/2023 ಕಲಂ: 78(3) ಕೆ.ಪಿ ಎಕ್ಟ 1963 ರ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

Last Updated: 24-01-2023 10:53 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080