ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 24-03-2022


ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 27/2022 ಕಲಂ: 279, 304 (ಎ) ಐಪಿಸಿ : ಇಂದು ದಿನಾಂಕ:23.03.2022 ರಂದು ಮಧ್ಯಾಹ್ನ 1:30 ಗಂಟೆಗೆ ಪಿರ್ಯಾದಿ ಶ್ರೀಮತಿ ಆಶಿಮಾಬೇಗಂ ಗಂಡ ಸಾಹೇಬಪಟೇಲ ಮುಲ್ಲಾ ವ:36 ಜಾ:ಮುಸ್ಲಿಂ ಉ:ಮನೆಗೆಲಸ ಸಾ:ಮಾರನಾಳ ತಾ:ಹುಣಸಗಿ ಜಿ:ಯಾದಗಿರಿ ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯನ್ನು ಗಣಕಯಂತ್ರದಲ್ಲಿ ಹೇಳಿ ಟೈಪ್ ಮಾಡಿಸಿದ್ದು ಸದರಿ ಪಿರ್ಯಾದಿಯ ಹೇಳಿಕೆಯ ಸಾರಾಂಶ ಏನೆಂದರೆ, ನಾನು ಗಂಡ ಮಕ್ಕಳು ಮತ್ತು ಅತ್ತೆಯೊಂದಿಗೆೆ ಮನೆಗೆಲಸ ಮಾಡಿಕೊಂಡು ಉಪಜೀವನ ಮಾಡುತ್ತಿದ್ದೇನೆ. ನನ್ನ ಗಂಡ ಸಾಹೇಬಪಟೇಲ ತಂದೆ ನಬಿಸಾಬ ದೊಡಮನಿ ವ:39 ವರ್ಷ ಇತನು ಕೆಎಸ್ಆರ್ಟಿಸಿಯಲ್ಲಿ ಭಾಗೆಪಲ್ಲಿ ಡಿಪೋದಲ್ಲಿ ಬಸ್ ಚಾಲಕ ಅಂತ ಕೆಲಸ ಮಾಡುತ್ತಿದ್ದು ನನ್ನ ತವರೂರು ಹುಣಸಗಿ ಪಟ್ಟಣವಿದ್ದು ನನ್ನ ಗಂಡನು ಈಗ 4-5 ದಿವಸಗಳ ಹಿಂದೆ ಭಾಗೆಪಲ್ಲಿಯಿಂದ ನಮ್ಮೂರಿಗೆ ಬಂದಿದ್ದು ನನ್ನ ಗಂಡ ಸಾಹೇಬಪಟೇಲನು ನನ್ನ ಅಣ್ಣ ಮಹಮ್ಮದಗೌಸ ಇತನು ನಮ್ಮೂರಿಗೆ ಬಂದಾಗ ನನ್ನ ಗಂಡನು ಆತನ ಮೋಟರ್ ಸೈಕಲ್ ನಂ:ಕೆಎ-33 ಇಬಿ-3669 ನೇದ್ದನ್ನು 4-5 ದಿನ ನಾನು ಭಾಗೆಪಲ್ಲಿಗೆ ಹೋಗುವವರೆಗೆ ತನ್ನ ಹತ್ತಿರ ಇರಲಿ ಅಂತ ಇಟ್ಟುಕೊಂಡಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ 22.03.2022 ರಂದು ನಾನು ನನ್ನ ತವರೂರಾದ ಹುಣಸಗಿಗೆ ಹೋಗಿದ್ದು ಇಂದು ದಿನಾಂಕ 23.03.2022 ರಂದು ಮುಂಜಾನೆ 10:30 ಗಂಟೆಯ ಸುಮಾರಿಗೆ ನನ್ನ ಗಂಡ ಸಾಹೇಬಪಟೇಲನು ನನಗೆ ಪೋನ್ ಮಾಡಿ ತಾನು ಹುಣಸಗಿಗೆ ಬರುತ್ತೇನೆ ಅಂತ ತಿಳಿಸಿದ್ದು ಇರುತ್ತದೆ. ಇಂದು ದಿನಾಂಕ 23.03.2022 ರಂದು ನಾನು ಮಧ್ಯಾಹ್ನ 12:20 ಗಂಟೆಯ ಸುಮಾರಿಗೆ ಹುಣಸಗಿಯಲ್ಲಿದ್ದಾಗ ನನ್ನ ಗಂಡನ ಕಾಕನಾದ ಮಾರನಾಳ ಗ್ರಾಮದ ದಸ್ತಗಿರಸಾಬ ತಂದೆ ಹಸನಸಾಬ ಕುಳಗೇರಿ ಇವರು ನನಗೆ ಪೋನ್ ಮಾಡಿ ತಿಳಿಸಿದ್ದೆನೆಂದರೆ ಈಗ ಸ್ವಲ್ಪ ಹೊತ್ತಿನ ಹಿಂದೆ ನಿನ್ನ ಗಂಡನು ಹುಣಸಗಿಗೆ ಹೋಗಲು ಮೋಟರ್ ಸೈಕಲ್ ನಂ:ಕೆಎ-33 ಇಬಿ-3669 ನೇದ್ದರ ಮೇಲೆ ನಾರಾಯಣಪೂರ-ಹುಣಸಗಿ ಮುಖ್ಯ ರಸ್ತೆಯ ಮೇಲೆ ಕೊಡೆಕಲ್ಲ ಕೆಇಬಿ ಹತ್ತಿರ ಹೋಗುತ್ತಿರುವಾಗ 12:05 ಪಿಎಮ್ ಸುಮಾರಿಗೆ ಮೋಟರ್ ಸೈಕಲ್ನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಯಿಸಿಕೊಂಡು ಹೋಗಿ ಮೋಟರ್ ಸೈಕಲ್ ಮೇಲೆ ನಿಯಂತ್ರಣ ಕಳೆದುಕೊಂಡು ಮೋಟರ್ ಸೈಕಲ್ ಸಮೇತ ಬಿದ್ದಿದ್ದಾಗಿ ನನಗೆ ಪರಿಚಯದ ಅದೇ ವೇಳೆಗೆ ಅಲ್ಲಿಂದ ಕೊಡಕಲ್ಲ ಕಡೆಗೆ ಬರುತ್ತಿದ್ದ ಎಣ್ಣಿವಡಿಗೇರಿ ಗ್ರಾಮದ ಅಂಬರೇಶ ತಂದೆ ಗದ್ದೆಪ್ಪ ಮಾರನಾಳ ಇತನು ನೋಡಿ ತಿಳಿಸಿದ್ದು ನಾನು ಕೊಡೆಕಲ್ಲದಲ್ಲಿ ಇದ್ದು ಕೂಡಲೇ ಅಲ್ಲಿಗೆ ಹೋಗಿ ನೋಡಲಾಗಿ ನಿನ್ನ ಗಂಡನ ಎಡಗಣ್ಣಿನ ಮೆಲಕಿನ ಹತ್ತಿರ ಹಾಗೂ ಹಣೆಯ ಮೇಲೆ ಭಾರಿ ರಕ್ತಗಾಯವಾಗಿ ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದ ನಾನು ಮತ್ತು ವಿಷಯ ತಿಳಿಸಿದ ಅಂಬರೇಶ ತಂದೆ ಗದ್ದೆಪ್ಪ ಮಾರನಾಳ ಇಬ್ಬರೂ ಕೂಡಿ ನಿನ್ನ ಗಂಡನನ್ನು ಕೊಡೆಕಲ್ಲ ಸರಕಾರಿ ಆಸ್ಪತ್ರೆಗೆ ಉಪಚಾರಕ್ಕಾಗಿ ಕರೆದುಕೊಂಡು ಹೋಗುವಾಗ ದಾರಿ ಮಧ್ಯ 12:15 ಗಂಟೆಯ ಸುಮಾರಿಗೆ ನಿನ್ನ ಗಂಡನು ಸತ್ತಿದ್ದು ಶವವನ್ನು ಕೊಡೆಕಲ್ಲ ಸರಕಾರಿ ಆಸ್ಪತ್ರೆಗೆ ಒಯ್ದು ಹಾಕುತ್ತೇವೆ ನೀನು ಕೂಡಲೇ ಬರಬೇಕು ಅಂತ ತಿಳಿಸಿ ಈ ವಿಷಯವನ್ನು ಮಾರನಾಳಕ್ಕೂ ಕೂಡ ಪೋನ್ ಮಾಡಿ ತಿಳಿಸುತ್ತೇನೆ ನೀನು ಬಾ ಅಂತ ತಿಳಿಸಿದ್ದರಿಂದ ನಾನು ಹಾಗೂ ನನ್ನ ಅಣ್ಣ ಮಹಮ್ಮದಗೌಸ ತಂದೆ ಕರೀಂಸಾಬ ಮುನ್ಸಿ ಇಬ್ಬರೂ ಕೂಡಿ 1:00 ಪಿಎಮ್ ಸುಮಾರಿಗೆ ಕೊಡೆಕಲ್ಲ ಸರಕಾರಿ ಆಸ್ಪತ್ರೆಗೆ ಬಂದು ನನ್ನ ಗಂಡನ ಶವವನ್ನು ನೋಡಿದ್ದು ನನ್ನ ಗಂಡನ ಎಡಗಣ್ಣಿನ ಮೆಲುಕಿನ ಹತ್ತಿರ ಹಾಗೂ ಹಣೆಯ ಮೇಲೆ ಭಾರಿ ರಕ್ತಗಾಯಗಳಾಗಿದ್ದು ಹಾಗೂ ಎರಡು ಕಾಲುಗಳ ಹೆಬ್ಬೆರಳುಗಳಿಗೆ ರಕ್ತಗಾಯವಾಗಿದ್ದು ಮಾರನಾಳದಿಂದ ನನ್ನ ಅತ್ತೆ ಖಾದರಬೀ ಗಂಡ ನಬೀಸಾಬ ದೊಡಮನಿ ಹಾಗೂ ನಮ್ಮ ಅಣ್ಣತಮ್ಮಕೀಯವರಾದ ದಸ್ತಗಿರಸಾಬ ತಂದೆ ಮೈಬೂಬಸಾಬ, ದಾವಲಸಾಬ ತಂದೆ ಇಮಾಮಸಾಬ, ಹಸನಸಾಬ ತಂದೆ ಹುಸೇನಸಾಬ ದೊಡಮನಿ ಹಾಗೂ ಮಾರನಾಳ ಗ್ರಾಮದವರಾದ ಗೌಡಪ್ಪ ತಂದೆ ಬಸಪ್ಪ ಪೊಲೀಸ್ಪಾಟೀಲ, ತಿಮ್ಮಣ್ಣ ತಂದೆ ಮುದಕಪ್ಪ ನಾಗರಬೆಟ್ಟ ಹಾಗೂ ಇತರರು ಬಂದು ನನ್ನ ಗಂಡನ ಶವವನ್ನು ನೋಡಿದ್ದು ನನ್ನ ಗಂಡ ಸಾಹೇಬಪಟೇಲ್ ಇತನು ಇಂದು ದಿನಾಂಕ 23.03.2022 ರಂದು ಮಧ್ಯಾಹ್ನ 12:05 ಗಂಟೆಯ ಸುಮಾರಿಗೆ ಮೋಟರ್ ಸೈಕಲ್ ನಂ:ಕೆಎ-33 ಇಬಿ-3669 ನೇದ್ದನ್ನು ಹುಣಸಗಿಗೆ ಬರಲು ಹುಣಸಗಿ-ನಾರಾಯಣಪೂರ ಮುಖ್ಯ ರಸ್ತೆಯ ಮೇಲೆ ಕೊಡೆಕಲ್ಲ ಗ್ರಾಮದ ಕೆಇಬಿ ಹತ್ತಿರ ಬರುತ್ತಿರುವಾಗ ಮೋಟರ್ ಸೈಕಲ್ನ್ನು ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಹೋಗಿ ಮೋಟರ್ ಸೈಕಲ್ ಮೇಲೆ ನಿಯಂತ್ರಣ ಕಳೆದುಕೊಂಡು ಮೋಟರ್ ಸೈಕಲ್ ಸಮೇತ ರಸ್ತೆಯ ಪಕ್ಕದಲ್ಲಿ ಬಿದ್ದುದರಿಂದ ಭಾರಿ ಗಾಯಗಳಾಗಿ ಉಪಚಾರಕ್ಕಾಗಿ ಆಸ್ಪತ್ರೆಗೆ ಒಯ್ಯುವಾಗ ದಾರಿ ಮಧ್ಯ 12:15 ಗಂಟೆಯ ಸುಮಾರಿಗೆ ಸತ್ತಿದ್ದು ಈ ಅಪಘಾತವು ನನ್ನ ಗಂಡನ ನಿರ್ಲಕ್ಷ್ಯತನದಿಂದಲೇ ಸಂಭವಿಸಿದ್ದು ನನ್ನ ಗಂಡ ಸಾಹೇಬಪಟೇಲ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ನೀಡಿದ ಪಿಯರ್ಾದಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:27/2022 ಕಲಂ: 279, 304 (ಎ) ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

 


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ : 19/2022 323, 324, 504, 506 ಸಂ. 34 ಐಪಿಸಿ : ಫಿರ್ಯಾದಿ & ಗಾಯಾಳು ಇಬ್ಬರೂ ಗಂಡ ಹೆಂಡತಿ ಕೂಡಿ ದಿನಾಂಕ:20/03/2022 ರಂದು ಸಂತೆಗೆಂದು ಹುಣಸಗಿ ಪಟ್ಟಣಕ್ಕೆ ಬಂದು ಸಂತೆ ಮಾಡಿಕೊಂಡು ವಾಪಸು ತಮ್ಮ ತಾಂಡಾಕ್ಕೆ ಹೊರಟಾಗ, ಕೊಳಿಹಾಳ ನಡುವಿನ ತಾಂಡಾದ ಮೋತಿಲಾಲ ಇವರ ಹೊಲದ ಹತ್ತಿರ ರೋಡಿನ ಮೇಲೆ ರಾತ್ರಿ 10.00 ಗಂಟೆಯ ಸುಮಾರಿಗೆ ಹೊರಟಾಗ ಆರೋಪಿತರಿಬ್ಬರೂ ಕೂಡಿ ಅಲ್ಲಿ ನಿಂತಿದ್ದು, ಗಾಯಾಳು ಶಂಕರ ಈತನು ಆರೋಪಿ ಶೇಖಪ್ಪನಿಗೆ ಈಗ 11 ವರ್ಷಗಳ ಹಿಂದೆ 25 ಸಾವಿರ ರೂಪಾಯಿ ಹಣವನ್ನು ಕೈಗಡ ಅಂತಾ ಕೊಟ್ಟಿದ್ದು, ಸದರಿ ಹಣವನ್ನು ಮರಳಿ ಕೊಡುವಂತೆ ಗಾಯಾಳು ಶಂಕರ ಈತನು ಆರೋಪಿ ಶೇಖಪ್ಪನಿಗೆ ಕೇಳಿದಾಗ ಆರೋಪಿ ಶೇಖಪ್ಪ ಈತನು ಏ ಶಂಕರ್ಯಾ ಬೋಸಡಿ ಮಗನೆ ನಿನಗೆ ನಾನು ಯಾವುದೇ ಹಣ ಕೊಡುವದಿಲ್ಲ, ನಿನ್ನದು ಸೊಕ್ಕ ಬಹಳಾಗ್ಯಾದ, ನನಗೆ ಹಣ ಕೇಳುತಿಯೇನಲೆ ಅಂದವನೆ ಕಾಲಿನಿಂದ ಒದ್ದು, ಕೈಯಿಂದ ಹೊಡೆಬಡೆ ಮಾಡಿದ್ದು, ಅಲ್ಲದೆ ಕಲ್ಲಿನಿಂದ ಎದೆಗೆ & ತಲೆಗೆ ಹೊಡೆದು ಗುಪ್ತಗಾಯ ಮಾಡಿದ್ದು, ಆರೋಪಿ ರಮೇಶ ಈತನು ಸಹ ಕೈಯಿಂದ ಹೊಡೆಬಡೆ ಮಾಡಿದ್ದು, ಗಾಯಾಳು ಶಂಕರನು ಚೀರಾಡಿದಾಗ ಫಿರ್ಯಾದಿ ಜಗಳ ಬಿಡಿಸಿದ್ದು, ಆರೋಫಿತರು ಗಾಯಾಳುವಿಗೆ ಹೊಡೆಯುವದನ್ನು ಬಿಟ್ಟು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಜೀವದ ಬೆದರಿಕೆ ಹಾಕುತ್ತಾ ಹೋಗಿದ್ದು, ಗಾಯಾಳು ಶಂಕರನಿಗೆ ತೆಲೆಗೆ ಒಳಪೆಟ್ಟು, ಬಲಗಣ್ಣಿಗೆ ಕಂದು ಗಟ್ಟಿದ ಗಾಯವಾಗಿ, ಮೂಗಿನಲ್ಲಿ ರಕ್ತ ಬರುತ್ತಿದ್ದು, ಅಲ್ಲದೇ ಎದೆಗೆ ಒಳಪೆಟ್ಟಾಗಿದ್ದು, ಅಂದು ರಾತ್ರಿಯಾಗಿದ್ದರಿಂದ ಮರುದಿನ ಬೇಳಿಗೆ ಫಿರ್ಯಾದಿದಾರಳು ಗಾಯಾಳುವಿಗೆ ಕರೆದುಕೊಂಡು ಹುಣಸಗಿ ಸರಕಾರಿ ಆಸ್ಪತ್ರೆಗೆ ತಂದು ತೋರಿಸಿ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದರ ಸಾರಾಶಂದ ಮೇಲಿಂದ ಕ್ರಮ ಜರುಗಿಸಿದ್ದು ಇರುತ್ತದೆ.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 53/2022 ಕಲಂ: 78(3) ಕೆಪಿ ಯಾಕ್ಟ : ಇಂದು ದಿನಾಂಕ 23/03/2022 ರಂದು 8.15 ಪಿಎಂ ಕ್ಕೆ ಮಾನ್ಯ ಶ್ರೀ ಗಜಾನಂದ ಪಿ ಎಸ್ ಐ ಸಾಹೇಬರು ಕೆಂಭಾವಿ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ಇಂದು ದಿನಾಂಕ 23/03/2022 ರಂದು 6.40 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಕೆಂಭಾವಿ ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ಠಾಣೆಯ ಆನಂದ ಪಿಸಿ 43, ಶಿವರಾಜ ಹೆಚ್.ಸಿ 85 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 6.50 ಪಿಎಂ ಕ್ಕೆ ಹೊರಟು ಕೆಂಭಾವಿ ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದ ಹತ್ತಿರ 6.55 ಪಿಎಂ ಕ್ಕೆ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು 7.00 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿ ಮಟಕಾ ನಂಬರ ಬರೆಯುತ್ತಿದ್ದ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ದಾವಲಮಲಿಕ್ ತಂದೆ ಅಮೀನಸಾಬ ಖಾನಾಪೂರ ವ|| 30 ವರ್ಷ ಜಾ|| ಮುಸ್ಲಿಂ ಉ|| ವ್ಯಾಪಾರ ಮತ್ತು ಮಟಕಾ ಬರೆದುಕೊಳ್ಳುವುದು ಸಾ|| ಕೆಂಭಾವಿ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 680/- ರೂಪಾಯಿ ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 7.00 ಪಿಎಂ ದಿಂದ 8.00 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 53/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 27-03-2022 05:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080