ಅಭಿಪ್ರಾಯ / ಸಲಹೆಗಳು


                                            ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24/04/2021
ವಡಗೇರಾ ಪೊಲೀಸ್ ಠಾಣೆ :- 46/2021 ಕಲಂ: 302, 201 ಸಂ 34 ಐಪಿಸಿ : ಇಂದು ದಿನಾಂಕ:23/04/2021 ರಂದು 1 ಪಿಎಮ್ ಕ್ಕೆ ಶ್ರೀಮತಿ ಬಸಮ್ಮ ಗಂಡ ಅಮಾತೆಪ್ಪ ಬೊನೆರ, ವ:40, ಜಾ:ಕಬ್ಬಲಿಗ, ಉ:ಹೊಲಮನೆ ಕೆಲಸ ಸಾ:ಹಾಲಗೇರಾ ತಾ:ವಡಗೇರಾ ಜಿ:ಯಾದಗಿರಿ ಇವಳು ವಡಗೇರಾ ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನನ್ನ ತವರು ಮನೆಯು ಶಿವನೂರು ಗ್ರಾಮ ಇದ್ದು, ನಮ್ಮ ತಂದೆ ಸಿದ್ದಪ್ಪ, ತಾಯಿ ಮಲ್ಲಮ್ಮ ದಂಪತಿಗೆ ನಾವು ಸಿದ್ದಲಿಂಗಮ್ಮ, ಬಸಮ್ಮ(ಫಿರ್ಯಾಧಿ), ಶರಣಮ್ಮ (ತೀರಿಕೊಂಡಿರುತ್ತಾಳೆ) ಮತ್ತು ಭೀಮಣ್ಣ ಹೀಗೆ ನಾಲ್ಕು ಜನ ಮಕ್ಕಳಿರುತ್ತೇವೆ. ನಮ್ಮ ತಂದೆ-ತಾಯಿ ಇಬ್ಬರೂ ತೀರಿಕೊಂಡಿರುತ್ತಾರೆ. ನಮಗೆ ಮೂರು ಜನ ಹೆಣ್ಣು ಮಕ್ಕಳಿಗೆ ಲಗ್ನ ಮಾಡಿಕೊಟ್ಟಿರುತ್ತಾರೆ. ನಮ್ಮ ತಾಯಿ ತೀರಿಕೊಂಡ ನಂತರ ನಮ್ಮ ತಮ್ಮನಿಗೆ ಅಡಿಗೆ ಮಾಡಿ ಹಾಕುವವರು ಯಾರು ಇಲ್ಲ ಎಂದು ಸದರಿ ನನ್ನ ತಮ್ಮ ಭೀಮಣ್ಣನಿಗೆ ಗೋಡಿಹಾಳ ಗ್ರಾಮದ ಭರಮಪ್ಪ ಈತನ ಮಗಳಾದ ತಾಯಮ್ಮ ಇವಳೊಂದಿಗೆ ಈಗ ಸುಮಾರು 15 ವರ್ಷಗಳ ಹಿಂದೆ ಲಗ್ನ ಮಾಡಿರುತ್ತೇವೆ. ನನ್ನ ತಮ್ಮನಿಗೆ 3 ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಹೀಗಿದ್ದು ನಾನು ಮತ್ತು ನನ್ನ ಅಕ್ಕ ಸಿದ್ದಲಿಂಗಮ್ಮ ಇಬ್ಬರೂ ಆಗಾಗ ತವರು ಮನೆಗೆ ಬಂದು ಹೋಗುತ್ತಿದ್ದೇವು. ನಮ್ಮ ಅತ್ತಿಗೆ ತಾಯಮ್ಮ ಗಂಡ ಮಕ್ಕಳೊಂದಿಗೆ ಮೊದ ಮೊದಲು ಚನ್ನಾಗಿದ್ದು, ಇತ್ತಿಚ್ಚೆಗೆ ತನ್ನ ಗಂಡನಿಗೆ ಸರಿಯಾಗಿ ನೋಡುತ್ತಿದ್ದಿದ್ದಿಲ್ಲ ಈ ವಿಷಯವನ್ನು ನಮ್ಮ ತಮ್ಮನು ನನ್ನ ಮತ್ತು ನನ್ನ ಅಕ್ಕ ಸಿದ್ದಲಿಂಗಮ್ಮ ಇವಳ ಮುಂದೆ ಹೇಳುತ್ತಿದ್ದನು. ಅಲ್ಲದೆ ಸದರಿ ನನ್ನ ತಮ್ಮ ಭೀಮಣ್ಣನು ಇತ್ತಿಚ್ಚೆಗೆ ಸೆರೆ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದನು. ಹಾಗಾಗಿ ನಾವು ನಮ್ಮ ಅತ್ತಿಗೆ ತಾಯಮ್ಮಳಿಗೆ ತನ್ನ ಗಂಡನಿಗೆ ಸರಿಯಾಗಿ ನೋಡಿಕೊ ಎಂದು ಹೇಳುತ್ತಿದ್ದೆವು ಅವಳು ಕಿವಿಗೆ ಹಾಕಿಕೊಳ್ಳುತ್ತಿದ್ದಿಲ್ಲ. ನನ್ನ ಹೆಂಡತಿ ತಾಯಮ್ಮ ಶಿವನೂರು ಗ್ರಾಮದಲ್ಲಿ ದೇವಪ್ಪ ಎಂಬುವನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿರುತ್ತಾಳೆ ಎಂದು ನಮ್ಮ ತಮ್ಮನು ಸಂಶಯ ಮಾಡಿಕೊಂಡು ನಮ್ಮ ಮುಂದೆ ಹೇಳುತ್ತಿದ್ದನು. ಆಗ ನಾವು ಅವನಿಗೆ ಹೆಂಡರ ಮೇಲೆ ಇಲ್ಲದ ಸಂಶಯ ಮಾಡಬಾರದು ನಿನಗೆ ನಾಲ್ಕು ಜನ ಮಕ್ಕಳಿದ್ದಾರೆ ಹೆಂಡತಿ-ಮಕ್ಕಳೊಂದಿಗೆ ಸರಿಯಾಗಿ ಸಂಸಾರ ಮಾಡಿಕೊಂಡು ಹೋಗು ಎಂದು ಬುದ್ಧಿ ಮಾತು ಹೇಳಿದ್ದೆವು. ಹೀಗಿದ್ದು ದಿನಾಂಕ: 16/04/2021 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಗೊಡಿಹಾಳ ಗ್ರಾಮದಿಂದ ನಮ್ಮ ಅತ್ತಿಗೆ ತಾಯಮ್ಮಳ ತಂದೆಯಾದ ಭರಮಪ್ಪನು ನಮ್ಮ ಮನೆಗೆ ಬಂದು ನಿಮ್ಮ ತಮ್ಮ ಭೀಮಣ್ಣ ತೀರಿಕೊಂಡಿರುತ್ತಾನೆ ಎಂದು ಸುದ್ದಿ ಬಂದಿರುತ್ತದೆ ಎಂದು ಹೇಳಿದನು. ಆಗ ಗಾಬರಿಯಾದ ನಾನು ಮತ್ತು ನೆಗೆಣ್ಣಿ ಶರಣಮ್ಮ ಗಂಡ ಯಲ್ಲಪ್ಪ ಮತ್ತು ಇತರರು ಕೂಡಿ ಶಿವನೂರು ಗ್ರಾಮಕ್ಕೆ ಹೋಗಿ ನನ್ನ ತಮ್ಮನ ಹೆಣವನ್ನು ನೋಡಿದೆವು. ನನ್ನ ತಮ್ಮನ ಕುತ್ತಿಗೆ ಬಲಭಾಗಕ್ಕೆ ಕಂದುಗಟ್ಟಿದ ಗಾಯವಾಗಿತ್ತು. ಸುದ್ದಿ ಕೇಳಿ ನಮ್ಮ ಅಕ್ಕ ಸಿದ್ಧಲಿಂಗಮ್ಮ ಕೂಡಾ ಬಂದಿದ್ದು, ಏನಾಯಿತು ಹೇಗೆ ಸತ್ತ ನಮ್ಮ ತಮ್ಮ ಎಂದು ನಮ್ಮ ಅತ್ತಿಗೆ ತಾಯಮ್ಮ ಇವಳಿಗೆ ಕೇಳಿದಾಗ ಕೆಲವು ದಿನಗಳಿಂದ ನನ್ನ ಗಂಡನು ವಿಪರಿತ ಸೆರೆ ಕುಡಿಯುವ ಚಟಕ್ಕೆ ಬಿದ್ದಿದ್ದು, ದಿನಾಲೂ ಮನೆಗೆ ಕುಡಿದು ಬರುತ್ತಿದನು. ಅದೇ ಪ್ರಕಾರ ದಿನಾಂಕ:15/04/2021 ರಂದು ರಾತ್ರಿ 9 ಗಂಟೆ ಸುಮಾರಿಗೆ ವಿಪರಿತ ಸೆರೆ ಕುಡಿದು ಮನೆಗೆ ಬಂದು ನಮ್ಮ ಜೊತೆ ಊಟ ಮಾಡಿ ರಾತ್ರಿ 10:30 ಗಂಟೆ ಸುಮಾರಿಗೆ ಮನೆಯಲ್ಲಿನ ಮಂಚದ ಮೇಲೆ ಮಲಗಿಕೊಂಡನು. ನಾನು ಮತ್ತು ನನ್ನ ತಂಗಿ ಸಾಬಮ್ಮ ತಂದೆ ಭರಮಣ್ಣ ಇಬ್ಬರೂ ಮಕ್ಕಳೊಂದಿಗೆ ಮನೆಯಲ್ಲಿ ಮಗಲಗಿಕೊಂಡೆವು. ರಾತ್ರಿ 1 ಗಂಟೆ ಸುಮಾರಿಗೆ ನನಗೆ ಎಚ್ಚರವಾಗಿ ನೋಡಿದಾಗ ನನ್ನ ಗಂಡ ಭೀಮಣ್ಣನು ಮಂಚದ ಮೇಲೆ ಮಲಗಿಕೊಂಡಿದ್ದನು. ನಾನು ದಿನಾಂಕ: 16/04/2021 ರಂದು ಮುಂಜಾನೆ 7:30 ಗಂಟೆ ಸುಮಾರಿಗೆ ನನ್ನ ಗಂಡ ಯಾಕೆ ಇನ್ನು ಎದ್ದೇಳುತಿಲ್ಲ ಅಂತಾ ನಾನು ಮತ್ತು ನನ್ನ ತಂಗಿ ಸಾಬಮ್ಮ ಇಬ್ಬರೂ ಹೋಗಿ ನೋಡಿ ಎಬ್ಬಿಸಲು ಹೋದಾಗ ನನ್ನ ಗಂಡನು ಮೃತಪಟ್ಟಿದ್ದನು. ನನ್ನ ಗಂಡನು ರಾತ್ರಿ ವಿಪರೀತ ಸೆರೆ ಕುಡಿದು ರಾತ್ರಿ ವೇಳೆ ಮಲಗಿದ್ದಲ್ಲಿಯೇ ಹೃದಯಘಾತವಾಗಿ ಮೃತಪಟ್ಟಿರಬಹುದು ಎಂದು ಹೇಳಿದಳು. ಅದೇ ಪ್ರಕಾರ ಸದರಿ ತಾಯಮ್ಮ ವಡಗೇರಾ ಪೊಲೀಸ್ ಠಾಣೆಗೆ ಹೋಗಿ ನನ್ನ ಗಂಡನು ರಾತ್ರಿ ವಿಪರೀತ ಸೆರೆ ಕುಡಿದು ರಾತ್ರಿ ವೇಳೆ ಮಲಗಿದ್ದಲ್ಲಿಯೇ ಹೃದಯಘಾತವಾಗಿ ಮೃತಪಟ್ಟಿರುತ್ತಾನೆ. ನನ್ನ ಗಂಡನ ಮರಣದಲ್ಲಿ ನಮಗೆ ಯಾರ ಮೇಲೆ ಯಾವುದೇ ಫಿಯರ್ಾಧಿ-ಸಂಶಯ ಇರುವುದಿಲ್ಲ ಎಂದು ದೂರು ಕೊಟ್ಟು ಪ್ರಕರಣ ದಾಖಲ ಮಾಡಿದ್ದಳು. ನಂತರ ನಿನ್ನೆ ದಿನಾಂಕ:22/04/2021 ರಂದು ಸಾಯಂಕಾಲ ಶಿವನೂರು ಗ್ರಾಮದಲ್ಲಿ ನಮ್ಮ ತಮ್ಮನ ಬಾಜು ಮನೆಯವನಾದ ಮರೆಪ್ಪ ತಂದೆ ಶರಣಪ್ಪ ಮಡಿವಾಳ ಈತನು ನಮ್ಮೂರಿಗೆ ಬಂದು ದಿನಾಂಕ:16/04/2021 ರಂದು ರಾತ್ರಿ 00:30 ಗಂಟೆ ಸುಮಾರಿಗೆ ನಾನು ಕಾಲ್ಮಡಿಯಲು ಎದ್ದಿದ್ದಾಗ ನಿಮ್ಮ ತಮ್ಮನ ಮನೆಯಲ್ಲಿ ಗುಸು ಗುಸು ಮಾತಾಡುವುದು ಕೇಳಿ ನಾನು ಮನೆ ಸಮೀಪ ಹೋದಾಗ ತಲಬಾಗಿಲು ತೆರೆದಿದ್ದು, ನಾನು ಬಾಗಿಲಲ್ಲಿ ನಿಂತು ಒಳಗಡೆ ನೋಡಿದಾಗ ನಿಮ್ಮ ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ನಮ್ಮೂರ ದೇವಪ್ಪ @ ದೇವಣ್ಣ ತಂದೆ ಮರೆಪ್ಪ ಶೆಕಸಿಂಧಿ ಈತನು ನಿಮ್ಮ ತಮ್ಮನ ಮನೆಯಲ್ಲಿದ್ದು, ಸದರಿ ದೇವಪ್ಪ @ ದೇವಣ್ಣ ಈತನು ನಿಮ್ಮ ತಮ್ಮನಿಗೆ ಕೈಯಿಂದ ಕುತ್ತಿಗೆ ಹಿಚುಕುತ್ತಿದ್ದು, ತಾಯಮ್ಮ ನಿಮ್ಮ ತಮ್ಮನ ಕಾಲುಗಳನ್ನು ಒತ್ತಿ ಹಿಡಿದಿದ್ದಳು. ಅವನು ಒದ್ದಾಡಿ ಪ್ರಾಣ ಬಿಟ್ಟ ನಂತರ ನನಗೆ ನೋಡಿದ ದೇವಪ್ಪ @ ದೇವಣ್ಣ ಈತನು ಗಾಬರಿಯಾಗಿ ತನ್ನ ಮನೆ ಕಡೆ ಹೋದನು. ನಂತರ ನಾನು ಮನೆಗೆ ಹೋದೆ. ಅವರು ನನಗೆ ಮುಂದೆ ನನಗೆ ಕಿರಿಕಿರಿ ಮಾಡಬಹುದು ಎಂದು ಈ ಸಂಗತಿ ಯಾರ ಮುಂದೆ ಹೇಳಿರಲಿಲ್ಲ. ಕಾರಣ ಸದರಿ ದೇವಪ್ಪ @ ದೇವಣ್ಣನು ನಮ್ಮ ಅತ್ತಿಗೆ ತಾಯಮ್ಮಳೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಅದೇ ವಿಷಯಕ್ಕೆ ಇಬ್ಬರೂ ಸೇರಿ ನಮ್ಮ ತಮ್ಮನಿಗೆ ಕುತ್ತಿಗೆ ಹಿಚುಕಿ ಕೊಲೆ ಮಾಡಿರುತ್ತಾರೆ. ಸದರಿ ಕೊಲೆಯನ್ನು ಮುಚ್ಚಿ ಹಾಕುವ ಕುರಿತು ನಮ್ಮ ಅತ್ತಿಗೆ ತಾಯಮ್ಮ ಇವಳು ತನ್ನ ಗಂಡನು ಹೃದಯಘಾತ ಆಗಿ ಮೃತಪಟ್ಟಿರುತ್ತಾನೆ ಎಂದು ಪ್ರಕರಣ ದಾಖಲ ಮಾಡಿರುತ್ತಾಳೆ. ಆದ್ದರಿಂದ ನನ್ನ ತಮ್ಮನಿಗೆ ಕೊಲೆ ಮಾಡಿ ಮರೆಮಾಚಲು ಪ್ರಯತ್ನಿಸಿರುವ ತಾಯಮ್ಮ ಮತ್ತು ದೇವಪ್ಪ @ ದೇವಣ್ಣ ಇಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 46/2021 ಕಲಂ:302, 201 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 53/2021 ಕಲಂ 78(3) ಕೆ.ಪಿ. ಆ್ಯಕ್ಟ : ದಿನಾಂಕ 23/04/2021 ರಂದು ಬೆಳಿಗ್ಗೆ 10-30 ಎ.ಎಮ್ ಕ್ಕೆ ಆರೋಪಿತರು ಅಬ್ಬೆತುಮಕೂರ ಗ್ರಾಮದಲ್ಲಿ ಇರುವ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಪ್ರೇರೇಪಣೆ ಮಾಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಪಂಚರು ಮತ್ತು ಸಿಬ್ಬಂಧಿಯವರ ಜೋತೆಗೆ ದಾಳಿ ಮಾಡಿ ಹಿಡಿದು ಆರೋಪಿತರಿಂದ ನಗದು ಹಣ 6,340/ರೂ, ಎರಡು ಮಟಕಾ ಚೀಟಿಗಳು, ಮೂರು ಮೊಬೈಲಗಳು, ಎರಡು ಬಾಲಪೆನ್ನ ಜಪ್ತಿ ಮಾಡಿಕೊಂಡು ಕ್ರಮ ಕೈಕೊಂಡಿದ್ದು ಇರುತ್ತದೆ,

ಶೋರಾಪೂರ ಪೊಲೀಸ್ ಠಾಣೆ :- 66/2021 ಕಲಂ 87 ಕೆ.ಪಿ.ಕಾಯ್ದೆ : ಇಂದು ದಿನಾಂಕ: 23/04/2021 ರಂದು 9:30 ಪಿ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಶ್ರೀ ಸಾಹೇಬಗೌಡ ಎಂ ಪಾಟೀಲ್ ಪಿಐ ಸಾಹೇಬರು 07 ಜನ ಆರೋಪಿತರೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:23/04/2021 ರಂದು 6:30 ಪಿಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸುರಪುರ ನಗರದ ಗಾಂದಿನಗರ ಏರಿಯಾದಲ್ಲಿರುವ ರತ್ನಮ್ಮ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176, 2)ಶ್ರೀ ಮಂಜುನಾಥ ಪಿಸಿ-271, 3) ಶ್ರೀ ಸೋಮಯ್ಯ ಸಿಪಿಸಿ-235, 4) ಶ್ರೀ ಹೊನ್ನಪ್ಪ ಸಿಪಿಸಿ-427, 5) ವಿರೇಶ ಸಿಪಿಸಿ-374, 6) ಕುಮಾರ ಪಿಸಿ-139 ಇವರೆಲ್ಲರಿಗೂ ವಿಷಯ ತಿಳಿಸಿ, ಮಂಜುನಾಥ ಹೆಚ್ಸಿ-176 ಇವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ಹೇಳಿದಂತೆ, ಮಂಜುನಾಥ ಹೆಚ್ಸಿ ಇವರು ಇಬ್ಬರು ಪಂಚರಾದ 1) ಸಿದ್ದಪ್ಪ ತಂದೆ ಮರೆಪ್ಪ ಡೊಳ್ಳು ವ|| 45 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ವೆಂಕಟಾಪುರ 2) ವಿಠ್ಠಲ್ ತಂದೆ ಮಾರ್ಥಂಡರಾವ್ ಕುಲ್ಕಣರ್ಿ ವ|| 45 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಕೆಲಸ ಸಾ|| ಬೋವಿಗಲ್ಲಿ ಸುರಪುರ ಇವರನ್ನು 7 ಪಿ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 7:15 ಪಿ.ಎಂ ಕ್ಕೆ ಠಾಣೆಯ ಜೀಪ್ ನಂ. ಕೆಎ-33.ಜಿ-0238 ನೇದ್ದರಲ್ಲಿ ಠಾಣೆಯಿಂದ ಹೊರಟು 7:35 ಪಿ.ಎಂ ಕ್ಕೆ ಸುರಪುರ ನಗರದ ಗಾಂದಿನಗರ ಏರಿಯಾದಲ್ಲಿರುವ ರತ್ನಮ್ಮ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಶ್ರೀ ರತ್ನಮ್ಮ ದೇವರ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 7:40 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 07 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ವೆಂಕಟೇಶ ತಂದೆ ಮಾರ್ಥಂಡರಾವ್ ಕುಲ್ಕಣರ್ಿ ವ|| 51 ವರ್ಷ ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಬೋವಿಗಲ್ಲಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1300/- ರೂಗಳು ವಶಪಡಿಸಿಕೊಳ್ಳಲಾಯಿತು. 2) ದಿನೇಶ ತಂದೆ ಮೋಹನಬಾಬು ದಬರ್ಾರಿ ವ|| 27 ವರ್ಷ ಜಾ|| ಕಬ್ಬಲಿಗ ಉ|| ವ್ಯಾಪಾರ ಸಾ|| ಬೋವಿಗಲ್ಲಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1100/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಲಕ್ಷ್ಮಣ ತಂದೆ ನಾಗಪ್ಪ ಪೇಸಲಾರ ವ|| 39 ವರ್ಷ ಜಾ|| ಮೇದಾ ಉ|| ವ್ಯಾಪಾರ ಸಾ|| ಮೇದಾಗಲ್ಲಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1250/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಭೀಮಣ್ಣ ತಂದೆ ಹಣಮಂತ್ರಾಯ ಚಟ್ನಳ್ಳಿ ವ|| 64 ವರ್ಷ ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ಬೊವಿಗಲ್ಲಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1350/- ರೂಗಳು ವಶಪಡಿಸಿಕೊಳ್ಳಲಾಯಿತು. 5) ರಂಗಪ್ಪ ತಂದೆ ಹಣಮಂತ್ರಾಯ ಕರಿಗುಡ್ಡ ಜಾ|| ಬೇಡರು ಉ|| ಒಕ್ಕಲುತನ ಸಾ|| ಕರಿಗುಡ್ಡ ತಾ|| ದೇವದುರ್ಗ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 900/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಶಿವರಾಜ ತಂದೆ ಯಲ್ಲಪ್ಪ ರತ್ತಾಳ ವ|| 28 ವರ್ಷ ಜಾ|| ಕುರಬರ ಉ|| ಟೇಲರ ಸಾ|| ವೆಂಕಟಾಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1250/- ರೂಗಳು ವಶಪಡಿಸಿಕೊಳ್ಳಲಾಯಿತು. 7) ತಿರುಪತಿ ತಂದೆ ಕೃಷ್ಣಪ್ಪ ಡೊಳ್ಳು ವ|| 37 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ವೆಂಕಟಾಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1150/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 4,700/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 13,000/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 7:40 ಪಿ.ಎಮ್ ದಿಂದ 8:40 ಪಿ.ಎಮ್ ವರೆಗೆಜೀಪ್ನ ಲೈಟಿನ ಬೆಳಕಿನಲ್ಲಿಬರೆದುಕೊಂಡಿದ್ದು ಇರುತ್ತದೆ. ನಂತರ 07 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸುತ್ತಿದ್ದು, ಸದರ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 66/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

ಇತ್ತೀಚಿನ ನವೀಕರಣ​ : 24-04-2021 10:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080