ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 24-04-2022


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 62/2022 ಕಲಂ 279, 337, 338 ಐ.ಪಿ.ಸಿ : ಇಂದು ದಿನಾಂಕ 23/04/2022 ರಂದು ಸಾಯಂಕಾಲ 20-00 ಗಂಟೆಗೆ ಫಿಯರ್ಾದಿ ಶ್ರೀ ಮಹಾದೇವಪ್ಪ ತಂದೆ ಪಿಡ್ಡಪ್ಪ ದೇಸಾಯಿ ವಯಸ್ಸು 52 ವರ್ಷ, ಜಾತಿ ಬೇಡರ, ಉಃ ಪಂಪ್ ಆಪರೇಟರ್ ಕೆಲಸ ಸಾಃ ಶಾರದಹಳ್ಳಿ ತಾಃ ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ದಿನಾಂಕ 21/04/2022 ರಂದು ಕುರಿಹಾಳ ಗ್ರಾಮದಲ್ಲಿರುವ ನಮ್ಮ ಸಂಬಂಧಿಕರಲ್ಲಿ ಒಂದು ಮಗು ಮೃತ ಪಟ್ಟಿದ್ದರಿಂದ ಅಂತ್ಯ ಸಂಸ್ಕಾರ ಕುರಿತು ನಾನು ಮತ್ತು ನನ್ನ ಮೊಮ್ಮಗ ಅಂದರೆ (ಅಣ್ಣನ ಮಗಳ ಮಗ) ವೆಂಕಪ್ಪ ಇಬ್ಬರೂ ಕೂಡಿ ಒಂದು ಮೋಟರ್ ಸೈಕಲ್ ನಂ.ಕೆಎ-33-ಕ್ಯೂ-5271 ರ ಮೇಲೆ ಮತ್ತು ನನ್ನ ಹೆಂಡತಿ ಶ್ರೀಮತಿ ನಾಗಮ್ಮ ಮತ್ತು ನನ್ನ ಅಳಿಯ ಅಂದರೆ ಮಗಳ ಗಂಡನಾದ ಬುಳ್ಳಯ್ಯ ತಂದೆ ಬುಳ್ಳಯ್ಯ ಬಿರಾದಾರ ಅವರಿಬ್ಬರೂ ಕೂಡಿ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂ. ಕೆಎ-33-ಆರ್-9044 ನೇದ್ದರ ಮೇಲೆ ನಮ್ಮೂರಿನಿಂದ ಅಂತ್ಯ ಸಂಸಾರ ಕುರಿತು ಕುರಿಹಾಳ ಗ್ರಾಮಕ್ಕೆ ಮೋಟರ್ ಸೈಕಲ್ ಮೇಲೆ ಹೊರಟೆವು. ನಾನು ಕುಳಿತ ಮೋಟರ್ ಸೈಕಲ್ ವೆಂಕಪ್ಪ ಈತನು ಚಲಾಯಿಸುತಿದ್ದನು ಮತ್ತು ನನ್ನ ಹೆಂಡತಿ ಕುಳಿತ ಮೋಟರ್ ಸೈಕಲ್ ಬುಳ್ಳಯ್ಯ ಚಲಾಯಿಸುತಿದ್ದನು. ಕೃಷ್ಣಾಪೂರದಿಂದ ಹತ್ತಿಗೂಡುರ ಗ್ರಾಮದ ಕಡೆಗೆ ಹೊರಟೆವು. ಸುರಪೂರ-ಶಹಾಪೂರ ರೋಡಿನ ಮೇಲೆ ಮುಂಜಾನೆ 09-10 ಗಂಟೆಯ ಸುಮಾರಿಗೆ ಮಂಡಗಳ್ಳಿ ಪೆಟ್ರೋಲ್ ಪಂಪ ಹತ್ತಿರ ಹೋಗುತಿದ್ದಾಗ, ಹಿಂದಿನಿಂದ ಅಂದರೆ ಸುರಪೂರ ಕಡೆಯಿಂದ ಒಂದು ಕಾರ್ ವಾಹನ ಚಾಲಕನು ತನ್ನ ವಾಹನವನ್ನು ಅಡ್ಡಾ-ದಿಡ್ಡಿಯಾಗಿ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು, ನಮ್ಮ ಮೋಟರ್ ಸೈಕಲ್ಗೆ ಓವರಟೇಕ್ ಮಾಡಿ ಮುಂದೆ ಹೋಗುತಿದ್ದ ಬುಳ್ಳಯ್ಯನ ಮೋಟರ್ ಸೈಕಲ್ ಹಿಂಭಾಗಕ್ಕೆ ಜೋರಾಗಿ ಡಿಕ್ಕಿ ಮಾಡಿದ್ದರಿಂದ ಬುಳ್ಳಯ್ಯ ಮತ್ತು ನನ್ನ ಹೆಂಡತಿ ಮೋಟರ್ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದರು. ಆಗ ನಾವು ನಮ್ಮ ಮೋಟರ್ ಸೈಕಲ್ ರೋಡಿನ ಬದಿಗೆ ನಿಲ್ಲಿಸಿ ಅವರ ಹತ್ತಿರ ಹೋಗಿ ನೋಡಲಾಗಿ ನನ್ನ ಹೆಂಡತಿಗೆ ತಲೆಗೆ ಭಾರಿ ರಕ್ತಗಾಯವಾಗಿ ರಕ್ತ ಬರುತಿತ್ತು, ಹಣೆಗೆ, ಬಲಗೈ ಅಂಗೈಗೆ, ಬಲಗಾಲ ಮೊಳಕಾಲಿಗೆ, ಸೊಂಟಕ್ಕೆ ರಕ್ತಗಾಯವಾಗಿರುತ್ತದೆ ಮತ್ತು ಎದೆಗೆ ಗುಪ್ತಗಾಯವಾಗಿರುತ್ತದೆ. ನನ್ನ ಅಳಿಯ ಬುಳ್ಳಯ್ಯ ಈತನಿಗೆ ಬಲಗಾಲ ಮೊಳಕಾಲಗೆ ಭಾರಿ ರಕ್ತಗಾಯವಾಗಿ ಎಲಬು ಮುರಿದಿರುತ್ತದೆ. ತಲೆಗೆ ಬಲಗಾಲ ತೊಡೆಗೆ, ಎಡಗಡೆ ಕಿವಿಗೆ ರಕ್ತಗಾಯವಾಗಿರುತ್ತದೆ. ಅಪಘಾತ ಪಡಿಸಿ ಅಲ್ಲೆ ನಿಂತಿದ್ದ ಕಾರ್ ಚಾಲಕನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಶಿವರಾಜ ತಂದೆ ಚಂದಲಿಂಗ ವಯಸ್ಸು 28 ವರ್ಷ, ಸಾಃ ಜಯನಗರ ಗಂಗಾವತಿ ತಾಃ ಗಂಗಾವತಿ, ಜಿಃ ಕೊಪ್ಪಳ ಅಂತಾ ಹೇಳಿದನು ಕಾರ್ ನಂ. ಕೆಎ-37-ಎ-7755 ಅಂತಾ ಇದ್ದು, ಅಪಘಾತದಲ್ಲಿ ಮೋಟರ್ ಸೈಕಲ್ ಮತ್ತು ಕಾರ್ ಜಖಂಗೊಂಡು ಹಾನಿಯಾಗಿರುತ್ತವೆ. ನನ್ನ ಜೊತೆಯಲ್ಲಿದ್ದ ವೆಂಕಪ್ಪ ಈತನು 108 ಗೆ ಫೊನ್ ಮಾಡಿದ್ದು, ಸ್ವಲ್ಪ ಸಮಯದ ನಂತರ 108 ವಾಹನ ಅಪಘಾತವಾದ ಸ್ಥಳಕ್ಕೆ ಬಂದಿದು,್ದ ನಾವಿಬ್ಬರೂ ಕೂಡಿ ಗಾಯಗೊಂಡ ನನ್ನ ಹೆಂಡತಿ ನಾಗಮ್ಮ ಹಾಗೂ ಅಳಿಯ ಬುಳ್ಳಯ್ಯ ಇಬ್ಬರಿಗೂ 108 ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೇವು. ವೈದ್ಯಾಧಿಕಾರಿಗಳು ಗಾಯಾಳುದಾರರಿಗೆ ಉಪಚಾರ ಮಾಡಿದ ನಂತರ ವೈದ್ಯಾಧಿಕಾರಿಯವರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಗಾಯಾಳುದಾರರನ್ನು 108 ದಲ್ಲಿ ಕರೆದುಕೊಂಡು ಕಲಬುರಗಿಗೆ ಹೋಗಿ, ಕಲಬುರಗಿಯ ಎ.ಎಸ್.ಎಮ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ. ನನ್ನ ಹೆಂಡತಿ ಮತ್ತು ಅಳಿಯನಿಗೆ ಅಪಘಾತದಲ್ಲಿ ಭಾರಿ ರಕ್ತಗಾಯ ಹಾಗೂ ಗುಪ್ತಗಾಯಗಳಾಗಿದ್ದು ನನ್ನ ಅಳಿಯನು ಮಾತನಾಡುವ ಸ್ಥಿತಿಯಲ್ಲಿ ಇರಲಾರದರಿಂದ ನಾನು ಅವರ ಯೋಗಕ್ಷೇಮ ನೋಡಿಕೊಳ್ಳಲು ಜೊತೆಯಲ್ಲಿಯೇ ಇದ್ದೇನು. ಸದ್ಯವು ನನ್ನ ಅಳಿಯ ಬುಳ್ಳಯ್ಯನು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಈ ದಿನ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸುತಿದ್ದೇನೆ.
ಕಾರಣ ಸದರಿ ಅಪಘಾತಕ್ಕೆ ಕಾರ್ ನಂ ಕೆಎ-37-ಎ-7755 ರ ಚಾಲಕನ ಅತಿವೇಗ ಮತ್ತು ಅಲಕ್ಷತನದಿಂದ ಈ ಅಪಘಾತವಾಗಿದ್ದು, ಕಾರ್ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 62/2022 ಕಲಂ 279, 337, 338 ಐ.ಪಿ.ಸಿ ಅಡಿಯಲ್ಲಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು

 

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 61/2022 ಕಲಂಃ 143, 147, 323, 324, 504,506 ಸಂಗಡ 149 ಐಪಿಸಿ : ದಿನಾಂಕ: 23/04/2022 ರಂದು 12-30 ಪಿ,ಎಂ ಕ್ಕೆ ಠಾಣೆಯಲ್ಲಿದ್ದಾಗ ಶ್ರೀಮತಿ ಪಾರ್ವತಿ ಗಂಡ ಭೀಮಣ್ಣ ಬಾದ್ಯಾಪೂರ ವ|| 30 ವರ್ಷ ಜಾ|| ಕುರುಬರ ಉ|| ಹೊಲಮನೆ ಕೆಲಸ ಸಾ|| ಬೈರಿಮಡ್ಡಿ ತಾ|| ಸುರಪೂರ ಇವರು ಠಾಣೆಗೆ ಬಂದು ಒಂದು ಗಣಕಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ನಮ್ಮ ತಂದೆ-ತಾಯಿಗೆ ನಾವು ನಾಲ್ಕು ಜನ ಹೆಣ್ಣು ಮಕ್ಕಳಿದ್ದು, ನಾಲ್ಕು ಜನರಿಗೂ ಮದುವೆ ಆಗಿರುತ್ತದೆ. ನಮ್ಮ ತಂದೆಯ ಹೆಸರಿನಲ್ಲಿ ಬೈರಿಮಡ್ಡಿ ಸೀಮಾಂತರದ ಹೊಲ ಸವರ್ೆ ನಂ. 57 ನೆದ್ದರಲ್ಲಿ ಒಟ್ಟು 3 ಎಕರೆ 25 ಗುಂಟೆ ಜಮೀನು ಇರುತ್ತದೆ. ಸದರಿ ಹೊಲದ ವಿಷಯದಲ್ಲಿ ನಮ್ಮ ಅಣ್ಣತಮಕೀಯವರಾದ ಬಲಭೀಮ ತಂದೆ ಶಿವಪ್ಪ ಬಾದ್ಯಾಪೂರ ಹಾಗೂ ಅವನ ಕಡೆಯವರು ಆಗಾಗ ನಮ್ಮ ತಂದೆಯ ಜೊತೆಗೆ ಜಗಳ ಮಾಡಿದ್ದರಿಂದ ಈ ಹಿಂದೆ ನಾವು ಅವರ ಮೇಲೆ ಕೇಸ್ ಮಾಡಿದ್ದು ಇರುತ್ತದೆ. ಹೀಗಿದ್ದು ದಿನಾಂಕ: 21/04/20022 ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನಾನು, ನಮ್ಮ ತಂದೆ ನಾಗಪ್ಪ ಇಬ್ಬರು ನಮ್ಮ ಹೊಲಕ್ಕೆ ಹೋಗುವ ಕುರಿತು ನಮ್ಮ ಗ್ರಾಮದ ಕನದಾಸ ಕಟ್ಟೆಯ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ನಮ್ಮ ಅಣ್ಣತಮಕೀಯಾದ 1) ಬಲಭೀಮ ತಂದೆ ಶಿವಪ್ಪ ಬಾದ್ಯಾಪೂರ 2) ನಿಂಗಪ್ಪ ತಂದೆ ಶಿವಪ್ಪ ಬಾದ್ಯಾಪುರ 3) ಮೌನೇಶ ತಂದೆ ಶಿವಪ್ಪ ಬಾದ್ಯಾಪುರ 4) ಭೀಮವ್ವ ಗಂಡ ಶಿವಪ್ಪ ಬಾದ್ಯಾಪೂರ 5) ಮಾಳವ್ವ ಗಂಡ ಬಲಭೀಮ ಬಾದ್ಯಾಪೂರ 6) ತಾಯಮ್ಮ ಗಂಡ ನಿಂಗಪ್ಪ ಬಾದ್ಯಾಪುರ ಎಲ್ಲರೂ ಗುಂಪು ಕಟ್ಟಿಕೊಂಡು ಬಂದವರೆ, ನಮ್ಮ ತಂದೆಗೆ ಎಲೇ ನಾಗ್ಯ ಸೂಳ್ಯ ಮಗನ್ಯಾ ನಿನ್ನ ಸೊಕ್ಕು ಬಹಳ ಆಗಿದೆ, ಈ ಹಿಂದೆ ನಮ್ಮ ಮೇಲೆ ಕೇಸ್ ಮಾಡಿ, ಎನ್ ಕಿತ್ತಿಗೊಂಡಿದಿ ಸೂಳ್ಯಾ ಮಗನ್ಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಮ್ಮ ತಂದೆಯು ಯಾಕೇ ಈ ರೀತಿ ಬೈಯುತ್ತಿರಿ ಅಂದಾಗ ಅವರಲ್ಲಿ ಬಲಬೀಮ ಈತನು ನಮ್ಮ ತಂದೆಗೆ ನೆಲಕ್ಕೆ ಕೆಡವಿದನು. ಆಗ ನಿಂಗಪ್ಪ ಮತ್ತು ಮೌನೇಶ ಇಬ್ಬರು ನಮ್ಮ ತಂದೆಗೆ ಕೈಯಿಂದ ಹೊಡೆದು, ಕಾಲಿನಿಂದ ಒದ್ದರು. ಆಗ ಬಿಡಿಸಲು ಹೋದ ನನಗೆ ಭೀಮವ್ವ ಈಕೆಯು ಕೈಯಿಂದ ನನ್ನ ಕಪಾಳಕ್ಕೆ ಹೊಡೆದಳು. ಮಾಳವ್ವ ಈಕೆಯು ನನ್ನ ಕೂದಲು ಹಿಡಿದು ಎಳೆದಾಡಿ ನೆಲಕ್ಕೆ ಕೆಡವಿದಳು. ತಾಯಮ್ಮ ಈಕೆಯು ಅಲ್ಲೇ ಬಿದ್ದ ಒಂದು ಕಲ್ಲಿನಿಂದ ನನ್ನ ಬೆನ್ನಿಗೆ, ಸೊಂಟಕ್ಕೆ ಹೊಡೆದು ಗುಪ್ತಗಾಯ ಮಾಡಿದಳು. ಆಗ ನಾವು ಚೀರಾಡುವ ಶಬ್ದ ಕೇಳಿ ಅಲ್ಲಿಗೆ ಬಂದ ನಮ್ಮ ತಾಯಿ ಲಕ್ಷ್ಮೀ ಹಾಗೂ ಅಲ್ಲೇ ಇದ್ದ ರಂಗಣ್ಣ ತಂದೆ ಪಾಂಡುರಂಗ ದೊರಿ ಮತ್ತು ಧರ್ಮಣ್ಣ ತಂದೆ ರಾಯಪ್ಪ ಬನ್ನೆಟ್ಟಿ ಇವರು ಜಗಳವನ್ನು ಬಿಡಿಸಿದರು. ಆಗ ಅವರು ಇವತ್ತು ನಮ್ಮ ಕೈಯಲ್ಲಿ ಉಳಿದುಕೊಂಡಿರಿ ಸೂಳೆ ಮಕ್ಕಳೆ, ಇಲ್ಲದಿದ್ದರೆ ನಿಮ್ಮ ಜೀವ ಸಹಿತ ಬಿಡುತ್ತಿರಲಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋದರು. ನಂತರ ನನಗೆ ಉಪಚಾರ ಕುರಿತು ನಮ್ಮ ತಂದೆ-ತಾಯಿ ಇಬ್ಬರು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಮಡು ಸುರಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದರು. ನನ್ನ ತಂದೆಗೆ ಅಷ್ಟೇನು ಗಾಯಗಳು ಆಗಿರದ ಕಾರಣ ನಮ್ಮ ತಂದೆ ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ಮನೆಯಲ್ಲಿ ನಮ್ಮ ತಂದೆ-ತಾಯಿಯೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ನನಗೆ ಮತ್ತು ನಮ್ಮ ತಂದೆಗೆ ಅವಾಚ್ಯವಾಗಿ ಬೈದು ಕಾಲಿನಿಂದ ಒದ್ದು, ಕೈಯಿಂದ ಮತ್ತು ಕಲ್ಲಿನಿಂದ ಹೊಡೆ-ಬಡೆ ಮಾಡಿ, ಜೀವದ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ಒದಗಿಸಿ ಕೊಡಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 54/2022 ಕಲಂ.78(3) ಕೆೆ.ಪಿ ಆಕ್ಟ್ : ಇಂದು ದಿನಾಂಕ 23-04-2022 ರಂದು 6-30 ಪಿ.ಎಮ್ ಕ್ಕೆ ಶ್ರೀ ರಾಜಕುಮಾರ ಪಿ.ಎಸ್.ಐ.(ಕಾ.ಸು) ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ರವರು ವರದಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 23-04-2022 ರಂದು ಸಾಯಂಕಾಲ 4 ಗಂಟೆಗೆ ಪೋಲಿಸ್ ಠಾಣೆಯಲ್ಲಿರುವಾಗ ಶೇಟ್ಟಿಗೇರಾ ಗ್ರಾಮದಲ್ಲಿ ಯಾರೋ ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಮಾಹಿತಿ ಬಂದಿದ್ದರಿಂದ ಕೂಡಲೇ ನಾನು ಮತ್ತು ಸಿಬ್ಬಂಧಿಯವರಾದ ಶ್ರೀ ಮೋನಪ್ಪ ಸಿಪಿಸಿ-263 ಮತ್ತು ಜೀಪ ಚಾಲಕನಾದ ಶ್ರೀಬಸವರಾಜ ಸಿಪಿಸಿ-185 ಎಲ್ಲರೊಂದಿಗೆ ಠಾಣೆಯಿಂದ ಹೊರಟು ಶೆಟ್ಟಿಗೇರಾ ಗ್ರಾಮದ ಕಡಗೆ ಹೊರಟು ಶೇಟ್ಟಿಗೇರಾ ಗ್ರಾಮದ ಗೇಟ ಹತ್ತಿರ ಹೋಗಿ ಅಲ್ಲಿ ದಾಳಿ ಮಾಡುವ ಸಲುವಾಗಿ ಇಬ್ಬರೂ ಪಂಚರಾದ 1] ಮೋಜಸ್ ತಂದೆ ದೇವಪುತ್ರ ಯಂಕಣ್ಣನೋರ ವ :29 ವರ್ಷ ಜಾ : ಕ್ರೀಶ್ಚನ ಉ :ಚಾಲಕ ಸಾ : ಯಡ್ಡಳ್ಳಿ ತಾ :ಜಿ :ಯಾದಗಿರಿ. 2] ಶ್ರೀ ಪ್ರಭಕಾರ ತಂದೆ ಸಾಬಣ್ಣ ದಂಡಿನೋರ ವ :26 ವರ್ಷ ಜಾ : ಎಸ ಸಿ ಮಾದಿಗ ಉ :ಸಮಾಜ ಸೇವಕ ಸಾ :ಯಡ್ಡಳ್ಳಿ ಸಾ: ಇಬ್ಬರೂ ಶೇಟ್ಟಿಗೇರಾ ಗ್ರಾಮದವರು ಇವರನ್ನು ಕರೆಯಿಸಿ ಅವರಿಗೆ ದಾಳಿಯ ಮಾಹಿತಿ ತಿಳಿಸಿ ಅಲ್ಲಿಂದ ಶೇಟ್ಟಿಗೇರಾ ಗ್ರಾಮದ ಊರೊಳಗೆ ಹೊರಟು ಮರೆಮ್ಮಾ ಆಯಿ ಗುಡಿಯಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಲಾಗಿ ಗುಡಿಯ ಪಕ್ಕದ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತು ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಗೆದ್ದು ಮಜಾ ಮಾಡಿರಿ ಅಂತಾ ಕೂಗಾಡುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಕರೆಯುತ್ತಿದ್ದನು ಮತ್ತು ಮಟಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನು, ಆಗ ನಾವೆಲ್ಲರೂ ಕೂಡಿ ಒಮ್ಮೆಲೆ ದಾಳಿ ಮಾಡಿ ಸಾಯಂಕಾಲ 4-45 ಗಂಟೆಗೆ ಅವನನ್ನು ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಶರಣಪ್ಪಾ ತಂದೆ ಸಾಬಣ್ಣಾ ಹತ್ತಿಕುಣಿ ವಯಾ:32 ಉ: ಚಾಲಕ ಜಾ: ಕುರುಬರ ಸಾ: ಶೇಟ್ಟಿಗೇರಾ ಅಂತಾ ತಿಳಿಸಿದನು. ಅವನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 1020/ ರೂ ನಗದು ಹಣ, ಎರಡು ಮಟಕಾ ನಂಬರ ಬರೆದ ಚೀಟಿಗಳು ಮತ್ತು ಒಂದು ಬಾಲಪೆನ್ನ ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮ ನಮ್ಮ ವಶಕ್ಕೆ ಪಡೆದುಕೊಂಡೆನು, ಮಟಕಾ ನಂಬರ ಯಾರಿಗೆ ಕೊಡುತ್ತಿ ಎಂದು ವಿಚಾರಿಸಿದಾಗ ನಾನೇ ಇಟ್ಟುಕೊಳ್ಳುತ್ತೆನೆ ಎಂದು ಹೇಳಿದನು .ಈ ಸವಿಸ್ತಾರವಾದ ಪಂಚನಾಮೆಯನ್ನು ಸಾಯಂಕಾಲ 4-45 ಗಂಟೆಯಿಂದ ಸಾಯಂಕಾಲ 5-45 ಗಂಟೆಯವರೆಗೆ ಮಾಡಿಕೊಂಡು ವರದಿ, ಜಪ್ತಿಪಂಚನಾಮೆ, ಒಬ್ಬ ಆರೋಪಿತನು ಹಾಗೂ ಮುದ್ದೆಮಾಲಿನೊಂದಿಗೆ ಮರಳಿ ಠಾಣೆಗೆ ಸಾಯಂಕಾಲ 6-30 ಗಂಟೆಗೆ ಬಂದು ಮುಂದಿನ ಕ್ರಮಕ್ಕಾಗಿ ಎಸ್.ಎಚ್.ಓ. ರವರಿಗೆ ಒಪ್ಪಿಸಿದ್ದು ಇರುತ್ತದೆ. ಸದರಿಯವನ ವಿರುದ್ಧ ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ 2021 ರ ಪ್ರಕಾರ ಮುಂದಿನ ಕ್ರಮ ಜರುಗಿಸಲು ಅಂತಾ ಒಂದು ವರದಿ ಸಾರಂಶದ ಪ್ರಕಾರ ಠಾಣೆ ಗುನ್ನೆ.ನಂ. 54/2022 .ಕಲಂ. ಕಲಂ 78(3) ಕೆ.ಪಿ. ಆ್ಯಕ್ಟ ತಿದ್ದುಪಡಿ ಕಾಯ್ದೆ 2021 ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 24-04-2022 12:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080