ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 24-05-2022

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 58/2022 ಕಲಂ 379 ಐಪಿಸಿ: ಇಂದು ದಿನಾಂಕ; 23/09/2022 ರಂದು 6-45 ಪಿಎಮ್ ಕ್ಕೆ ಶ್ರೀ ಬಾಪುಗೌಡ ಪಾಟೀಲ ಪಿ.ಐ ಸಿ.ಇ.ಎನ್ ಪೊಲೀಸ ಠಾಣೆ ಯಾದಗಿರ ರವರು ಮುಂದಿನ ಕ್ರಮಕ್ಕಾಗಿ ಒಂದು ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 23/05/2022 ರಂದು ಸಾಯಂಕಾಲ 5-15 ಗಂಟೆ ಸುಮಾರಿಗೆ ನಮ್ಮ ಠಾಣೆಯಲ್ಲಿರುವಾಗ ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ಮಾಹಿತಿ ತಿಳಿದು ಬಂದಿದ್ದೆನೆಂದರೆ, ಯಾದಗಿರಿ (ಬಿ) ಗ್ರಾಮದ ಬಯಲು ಹನುಮಾನ ಮಂದಿರದ ಪಕ್ಕದಲ್ಲಿರುವ ಹೊಲದಲ್ಲಿ ಹಳ್ಳದಿಂದ ನೈಸಗರ್ಿಕ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಜಮೀನುಗಳಲ್ಲಿ ಅಕ್ರಮವಾಗಿ ಮರಳು ಗುಡ್ಡೆ ಹಾಕಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು ದಾಳಿ ಕುರಿತು ನಾನು ಮತ್ತು ಸಂಗಡ ನಮ್ಮ ಸಿಬ್ಬಂದಿಯವರಾದ ಜೀಪ್ ಚಾಲಕ ಪಿಡ್ಡಪ್ಪ ಎ.ಆರ್.ಎಸ್.ಐ, ಗುಂಡಪ್ಪ ಹೆಚ್.ಸಿ-115, ಬಸವರಾಜ ವೈ ಹೆಚ್.ಸಿ-89 ರವರು ಕೂಡಿಕೊಂಡು ಠಾಣೆಯ ಜೀಪ್ ನಂ.ಕೆಎ.33.ಜಿ.0163 ನೇದ್ದರಲ್ಲಿ ಹೊರಟು ರಾಚೋಟಿ ವೀರಣ್ಣ ದೇವಸ್ಥಾನ ಕಡೆಯಿಂದ ಬಯಲು ಹನುಮಾನ ಮಂದಿರ 200 ಮೀಟರ ಮುಂದೆ ಇರುವಂತೆ ರೋಡಿನ ಪಕ್ಕದಲ್ಲಿರುವ ಒಂದು ಹೊಲದಲ್ಲಿ 5-45 ಪಿ.ಎಮ್ ಸುಮಾರಿಗೆ ನೋಡಲಾಗಿ ಅಂದಾಜು 6 ಟಿಪ್ಪರನಷ್ಟು ಮರಳು ಕಳ್ಳತನದಿಂದ ಸಂಗ್ರಹಣೆ ಮಾಡಿ ಗುಡ್ಡೆ ಹಾಕಿದ್ದು ಇರುತ್ತದೆ. ನೋಡಲಾಗಿ ಮರಳು ಗುಡ್ಡೆಯ ಹತ್ತಿರ ಯಾರು ಇಲ್ಲದ ಕಾರಣ ಮರಳು ಶೇಖರಣೆ ಮಾಡಿದವರು ಮತ್ತು ಹೊಲದ ಮಾಲೀಕರ ಬಗ್ಗೆ ತಿಳಿದು ಬಂದಿರುವುದಿಲ್ಲ. ಸದರಿ ಹೊಲ ಸವರ್ೆ ನಂಬರನ್ನು ಭಾತ್ಮಿದಾರರಿಂದ ತಿಳಿದುಕೊಳ್ಳಲಾಗಿ ಸವರ್ೆ ನಂ.679 ಅಂತಾ ತಿಳಿದು ಬಂದಿರುತ್ತದೆ.ಕಾರಣ ಸದರಿ ಮರಳಿನ ಅಂ.ಕಿ.90,000/- ರೂ. ಇದ್ದು ಯಾರೋ ಆರೋಪಿತರು ಕಳ್ಳತನದಿಂದ ಮರಳನ್ನು ಮಾರಾಟ ಮಾಡುವ ಕುರಿತು ಹೊಲದ ಮಾಲೀಕರೊಂದಿಗೆ ಶಾಮೀಲಾಗಿ ಹಳ್ಳದಿಂದ ನೈಸಗರ್ಿಕ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಜಮೀನುಗಳಲ್ಲಿ ಅಕ್ರಮವಾಗಿ ಮರಳು ಗುಡ್ಡೆ ಹಾಕಿದ್ದು ಇರುತ್ತದೆ. ಸದರಿ ಸ್ಥಳದಲ್ಲಿ ನಮ್ಮ ಸಿಬ್ಬಂದಿಯವರಿಗೆ ಕಾವಲು ಬಿಟ್ಟು ಯಾದಗಿರಿ ನಗರ ಠಾಣೆಗೆ 6-30 ಪಿಎಮ್ ಕ್ಕೆ ಬಂದು ವರದಿಯನ್ನು ಟೈಪ ಮಾಡಿಸಿ ಠಾಣೆಯಲ್ಲಿ ಪ್ರಿಂಟ್ ತೆಗೆದಿದ್ದು 6-45 ಪಿಎಮ್ ಕ್ಕೆ ಸದರಿ ಆರೋಪಿತರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಕೊಟ್ಟ ವರದಿಯ ಮೇಲಿಂದ ಠಾಣೆಯ ಗುನ್ನೆ ನಂ.58/2022 ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಯಾದಗಿರಿ ಮಹಿಳಾ ಪೊಲೀಸ್ ಠಾಣೆ:-
ಗುನ್ನೆ ನಂ: 32/2022 ಕಲಂ: 498(ಎ), 323, 324, 504, 506 354,355 ಸಂ/34 ಐಪಿಸಿ : ಇಂದು ದಿನಾಂಕ: 23.05.2022 ರಂದು ಮದ್ಯಾಹ್ನ 2.30 ಗಂಟೆಗೆ ಅಂಚೆ ಮುಖಾಂತರ ಶಹಾಪೂರ ಅಪರ ಜೆ.ಎಂ.ಎಫ್.ಸಿ ನ್ಯಾಯಾಲಯದ ಉಲ್ಲೇಖಿತ ಪ್ರಕರಣ ಸಂ: 53/2022 ಸ್ವೀಕೃತವಾಗಿದ್ದು, ಸದರಿ ಪ್ರಕರಣದ ಸಾರಂಶವೇನೆಂದರೆ ಫಿರ್ಯಾಧಿ ಆರೋಪಿ ನಂ:01 ರವರ ಜೊತೆ ಸುಮಾರು 22 ವರ್ಷಗಳ ಹಿಂದೆ ಮದುವೆಯಾಗಿದ್ದು ಆದರೆ ಫಿರ್ಯಾಧಿಗೆ ಮಕ್ಕಳಾಗದ ಕಾರಣ ಆರೋಪಿತನು ಫಿರ್ಯಾಧಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡಲು ಶುರುಮಾಡಿದ್ದು ಅವಳಿಗೆ ಹೊಡೆಬಡೆ ಮಾಡುವುದು ಅಲ್ಲದೇ ಅವಾಚ್ಯವಾಗಿ ಬೈದು ನಿಂದನೆ ಮಾಡಿರುತ್ತಾನೆ. ನಂತರ ಆ-1 ನೇಯವನು ಆ-4 ನಾಗಮ್ಮ ಎಂಬೂವಳೊಂದಿಗೆ 2 ನೇ ಮದುವೆಯಾಗಿರುತ್ತಾನೆ. ನಂತರ ಆರೋಪಿತನು ಫಿರ್ಯಾಧಿಗೆ ಪುನಃ ಮನೆಗೆ ಕರೆಸಿಕೊಂಡು ಸಂಸಾರ ಮಾಡಿದ್ದು, ಅವರ ದಾಂಪತ್ಯ ಜೀವನದಲ್ಲಿ ಒಂದು ಗಂಡು ಮಗು ಜನಿಸಿರುತ್ತದೆ. ನಂತರ ಆರೋಪಿತರೇಲ್ಲರೂ ಫಿರ್ಯಾಧಿಗೆ ಮತ್ತು ಆಕೆಯ ಮಗನಿಗೆ ಜಿವನೊಪಾಯಕ್ಕೆ ಏನು ಕೊಡದೇ ಕಡೆಗಣಿಸುತ್ತಾ ಬಂದಿರುತ್ತಾನೆ. ನಂತರ ಫಿರ್ಯಾಧಿದಾರಳು ತನ್ನ ಮಗನೊಂದಿಗೆ ಬೇರೆ ಕಡೆ ಜೀವನ ಮಾಡಲು ಜೀವನೊಪಾಯ ಕೇಳಿದ್ದಕ್ಕೆ ಆರೋಪಿತರೇಲ್ಲರೂ ದಿನಾಂಕ:25.02.2022 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾಧಿ ಮನೆಗೆ ಹೋಗಿ ಜಗಳ ಮಾಡಿ ಫಿರ್ಯಾಧಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡಲು ಶುರುಮಾಡಿದ್ದು ಅವಳಿಗೆ ಹೊಡೆಬಡೆ ಮಾಡುವುದು ಅಲ್ಲದೇ ಅವಾಚ್ಯವಾಗಿ ಬೈದು ಮತ್ತು ಪ್ರಾಣ ಬೆದರಿಕೆ ಹಾಕಿ ಆರೋಪಿ ನಂ:2 ನೇಯವನು ಫಿರ್ಯಾಧಿಗೆ ಕೈ ಹಿಡಿದು ಅಪಮಾನ ಮಾಡಿದ್ದು ಅಲ್ಲದೇ ಆರೋಪಿ ನಂ: 04 ನೇಯವಳು ತನ್ನ ಕಾಲಿನಲ್ಲಿ ಇದ್ದ ಚಪ್ಪಲಿಯಿಂದ ಫಿರ್ಯಾಧಿಗೆ ಹೊಡೆದಿರುತ್ತಾಳೆ. ಮತ್ತು ಆ-01 ರಿಂದ ಆ-04 ರವರು ಕೂಡಿ ಫಿರ್ಯಾಧಿಗೆ ಹೊಡೆಬಡೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಅಂತಾ ಫಿರ್ಯಾಧಿದಾರರು ಮಾನ್ಯ ಅಪರ ಜೆ.ಎಮ್.ಎಫ್.ಸಿ ನ್ಯಾಯಾಲಯ ಶಹಾಪೂರ್ ದಲ್ಲಿ ಖಾಸಗಿ ದೂರು ಸಂ: 53/2022 ದಾಖಲಿಸಿದ್ದು ಸದರಿ ದೂರಿನ ಪ್ರತಿಯು ಯಾದಗಿರಿ ಮಹಿಳಾ ಪೊಲೀಸ್ ಠಾಣೆಗೆ ಇಂದು ದಿನಾಂಕ:23.05.2022 ರಂದು ಅಂಚ ಮೂಲಕ ವಸೂಲಾಗಿದ್ದು ಸದರಿ ಖಾಸಗಿ ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ಸಂ: 32/2022 ಕಲಂ: 498(ಎ), 504, 323, 324, 354, 355, 506, ಸಂ 34 ಐ.ಪಿ.ಸಿ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 29/2022 ಕಲಂ 279, 338 ಐಪಿಸಿ: ಇಂದು ದಿನಾಂಕ 23/05/2022 ರಂದು ಬೆಳಿಗ್ಗೆ ಸಮಯ 11 ಎ.ಎಂ.ಕ್ಕೆ ಪಿಯರ್ಾದಿ ಶ್ರೀ ದೇವರಾಜ ತಂದೆ ಬೋಜಣ್ಣ ಸಿಳ್ಳೀನ್ ವಯ;43 ವರ್ಷ, ಜಾ;ಬಣಜಿಗ, ಉ;ಒಕ್ಕುಲುತನ, ಸಾ;ಅರಿಕೇರಾ(ಕೆ), ತಾ;ಜಿ;ಯಾದಗಿರಿ ರವರು ಖುದ್ದಾಗಿ ಠಾಣೆಗೆ ಹಾಜರಾಗಿ ನಿನ್ನೆ ದಿನಾಂಕ 22/05/2022 ರಂದು 11-45 ಪಿ.ಎಂ.ಕ್ಕೆ ಯಾದಗಿರಿಯ ಎಸ್.ಎಲ್.ಟಿ ಹೊಟೆಲ್ ಮುಂದೆ ಜರುಗಿದ ರಸ್ತೆ ಅಪಘಾತದ ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದರ ಸಾರಾಂಶವೇನೆಂದರೆ ನಾನು ಒಕ್ಕುಲುತನ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ನನ್ನ ಅಣ್ಣನವರಾದ ಸಿದ್ರಾಮಪ್ಪ ತಂದೆ ಬೋಜಣ್ಣ ಸಿಳ್ಳೀನ್ ವಯ;48 ವರ್ಷ ಇವರು ಯಾದಗಿರಿಯ ರಾಜೇಶ್ವರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿಕೊಂಡು ಬಂದಿರುತ್ತಾರೆ. ನಿನ್ನೆ ಬೆಳಿಗ್ಗೆ ಸುಮಾರಿಗೆ ನನ್ನ ಅಣ್ಣನಾದ ಸಿದ್ರಾಮಪ್ಪರವರು ತಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಆರ್-6430 ನೇದ್ದನ್ನು ತೆಗದುಕೊಂಡು ತಮ್ಮ ಕೆಲಸದ ಮೇಲೆ ಯಾದಗಿರಿಗೆ ಹೋಗಿ ಬರುತ್ತೇನೆಂದು ನಮಗೆ ಹೇಳಿ ಹೋಗಿದ್ದು ಇರುತ್ತದೆ. ಹೀಗಿದ್ದು ನಿನ್ನೆ ದಿನಾಂಕ 22/05/2022 ರಂದು ರಾತ್ರಿ 11-55 ಪಿ.ಎಂ.ದ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನಗೆ ಈ ಮೊದಲೇ ಪರಿಚಯ ಇರುವ ಶ್ರೀ ದುರ್ಗಪ್ಪ ತಂದೆ ಮಹಾದೇವಪ್ಪ ಅರಿಕೇರಿ ಸಾ;ಅಂಬೇಡ್ಕರ್ ನಗರ ಯಾದಗಿರಿ ಇವರು ಪೋನ್ ಮಾಡಿ ತಿಳಿಸಿದ್ದೇನೆಂದರೆ ನಾನು ಯಾದಗಿರಿಯ ಎಸ್.ಎಲ್.ಟಿ ಹೊಟೆಲ್ ಮುಂದೆ ನಿಂತಿದ್ದಾಗ ಅದೇ ಸಮಯಕ್ಕೆ ಒಬ್ಬ ಮೋಟಾರು ಸೈಕಲ್ ಸವಾರನು ಯಾದಗಿರಿಯ ಗಂಜ್ ವೃತ್ತದಿಂದ ಮುಂಡರಗಿ ಕಡೆಗೆ ಹೊರಟಿದ್ದಾಗ ನಾನು ನೋಡು ನೋಡುತ್ತಿದ್ದಂತೆ ಒಂದು ಲಾರಿ ಚಾಲಕನು ತನ್ನ ವಾಹನವನ್ನು ಇಂಡಸ್ಟ್ರೀಯಲ್ ಏರಿಯಾದ ಒಳಗಿನಿಂದ ರಸ್ತೆ ಕಡೆಯಿಂದ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ಮುಖ್ಯ ರಸ್ತೆಗೆ ಬಂದವನೇ ಗಂಜ್ ಕಡೆಗೆ ತಿರುಗಿಸುತ್ತಿದ್ದಾಗ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಸದರಿ ಮೋಟಾರು ಸೈಕಲ್ ನೇದ್ದಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದನು. ಆಗ ನಾನು ಓಡೋಡಿ ಹತ್ತಿರ ಹೋಗಿ ನೊಡಲಾಗಿ ಮೋಟಾರು ಸೈಕಲ್ ಮೇಲೆ ಇದ್ದವರು ನಿಮ್ಮ ಅಣ್ಣ ಸಿದ್ರಾಮಪ್ಪ ಇವರು ಇದ್ದು ನಾನು ಅವರಿಗೆ ವಿಚಾರಿಸಿದ್ದು, ಸದರಿ ಅಪಘಾತದಲ್ಲಿ ನಿಮ್ಮ ಅಣ್ಣನಿಗೆ ಹಣೆಗೆ, ತಲೆಗೆ ಭಾರೀ ಒಳಪೆಟ್ಟು ಮತ್ತು ರಕ್ತಗಾಯವಾಗಿದ್ದು ಇರುತ್ತದೆ. ಎಡಕಿಗೆ, ಸೊಂಟಕ್ಕೆ ಗುಪ್ತಗಾಯವಾಗಿದ್ದು ಕಂಡು ಬಂದಿರುತ್ತದೆ. ಅಪಘಾತಪಡಿಸಿದ ಲಾರಿ ನಂಬರ ಲೈಟಿನ ಬೆಳಕಿನಲ್ಲಿ ನೋಡಲಾಗಿ ಕೆಎ-23, ಬಿ-4300 ನೇದ್ದು ಇದ್ದು, ಲಾರಿ ಚಾಲಕನು ಸ್ಥಳದಲ್ಲಿ ಹಾಜರಿದ್ದು ಆತನ ಹೆಸರು ಮತ್ತು ವಿಳಾಸ ವಿಚಾರಿಸಿದ್ದು ತನ್ನ ಹೆಸರು ಬಾಬುರಾವ್ ತಂದೆ ನಾಮದೇವ್ ಸಾ;ಬಬಲೇಶ್ವರ, ತಾ;ಆಳಂದ ಅಂತಾ ತಿಳಿಸಿರುತ್ತಾನೆ. ಈ ಘಟನೆಯು ಇಂದು ದಿನಾಂಕ 22/05/2022 ರಂದು ರಾತ್ರಿ ಅಂದಾಜು ಸಮಯ 11-45 ಪಿ.ಎಂ.ಕ್ಕೆ ಜರುಗಿರುತ್ತದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು 108 ಅಂಬುಲೆನ್ಸ್ ಬಂದಿದ್ದು ನಾನು ನಿಮ್ಮ ಅಣ್ಣನಿಗೆ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದು ನೀವು ಕೂಡಲೇ ಆಸ್ಪತ್ರೆಗೆ ಬರಬೇಕು ಅಂತಾ ತಿಳಿಸಿದ್ದು, ಆಗ ನಾನು ಮನೆಯಲ್ಲಿದ್ದ ನನ್ನ ತಮ್ಮನಾದ ವಿರೇಶ ಹಾಗೂ ನನ್ನ ಅಣ್ಣನ ಪತ್ನಿಯಾದ ಶರಣಮ್ಮ ಇವರಿಗೆ ನನಗೆ ಬಂದ ವಿಷಯವನ್ನು ತಿಳಿಸಿ ಒಂದು ಖಾಸಗಿ ವಾಹನದಲ್ಲಿ ಎಲ್ಲರೂ ಕೂಡಿಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನಮಗೆ ಈ ಮೇಲೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ನನ್ನ ಅಣ್ಣ ಸಿದ್ರಾಮಪ್ಪನವರು ಚಿಕಿತ್ಸೆ ಹೊಂದುತ್ತಿದ್ದು, ನನ್ನ ಅಣ್ಣನಿಗೆ ಉಪಚಾರ ನೀಡಿದ ಯಾದಗಿರಿ ಸಕರ್ಾರಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಲು ತಿಳಿಸಿರುತ್ತಾರೆ. ಆದ್ದರಿಂದ ಘಟನೆಯ ಬಗ್ಗೆ ವಿಚಾರಣೆಗೆ ಬಂದ ಪೊಲೀಸರಿಗೆ ಈ ಘಟನೆ ಬಗ್ಗೆ ಮನೆಯಲ್ಲಿ ವಿಚಾರಿಸಿ ನಾಳೆ ಕೇಸು ಕೊಡುತ್ತೇವೆ ಸದ್ಯ ನಮ್ಮ ಅಣ್ಣನಿಗೆ ಕಲಬುರಗಿಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿರುತ್ತೇವೆ. ಹೀಗಿದ್ದು ನನ್ನ ಅಣ್ಣನಿಗೆ ಕಲಬುರಗಿಯ ಯುನೈಟೆಡ್ ಆಸ್ಪತ್ರೆಯಲ್ಲಿ ಉಪಚಾರಕ್ಕಾಗಿ ಸೇರಿಕೆ ಮಾಡಿರುತ್ತೇವೆ, ಈ ಘಟನೆಯ ಬಗ್ಗೆ ನಮ್ಮ ಮನೆಯ ಹಿರಿಯರು ಕೇಸು ಕೊಡಲು ತಿಳಿಸಿದ್ದರಿಂದ ನಾನು ಇಂದು ದಿನಾಂಕ 23/05/2022 ರಂದು ಬೆಳಿಗ್ಗೆ ಖುದ್ದಾಗಿ ಠಾಣೆಗೆ ಹಾಜರಾಗಿ ತಡವಾಗಿ ದೂರು ನೀಡುತ್ತಿದ್ದು, ನಿನ್ನೆ ದಿನಾಂಕ 22/05/2022 ರಂದು ರಾತ್ರಿ 11-45 ಪಿ.ಎಂ.ಕ್ಕೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆಯ ಎಸ್.ಎಲ್.ಟಿ ಹೊಟೆಲ್ ಹತ್ತಿರ ಮುಖ್ಯ ರಸ್ತೆ ಮೇಲೆ ನನ್ನ ಅಣ್ಣನ ಮೋಟಾರು ಸೈಕಲ್ ನಂಬರ ಕೆಎ-33, ಆರ್-6430 ನೇದ್ದಕ್ಕೆ ಲಾರಿ ನಂಬರ ಕೆಎ-23, ಬಿ-4300 ನೇದ್ದರ ಚಾಲಕನು ಡಿಕ್ಕಿಹೊಡೆದು ಅಪಘಾತಪಡಿಸಿದ್ದು, ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದು ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 29/2022 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 92/2022 174 ಸಿ.ಆರ್.ಪಿ.ಸಿ: ಇಂದು ದಿನಾಂಕ:23/05/2022 ರಂದು 10-45 ಎಎಮ್ಕ್ಕೆ ಪಿರ್ಯಾಧಿಯಾದ ಶ್ರೀಶಿವಲಿಂಗಪ್ಪ ತಂದೆ ಚಂದಪ್ಪ ಬಂದಳ್ಳಿ ಸಾ: ಮಳ್ಳಳ್ಳಿ ತಾ: ವಡಗೇರಾ ಇವರು ಪೋಲಿಸ ಠಾಣೆಗೆ ಹಾಜರಾಗಿ ನೀಡಿದ ದೂರು ಅಜರ್ಿಯೇನೆಂದರೆ ನಾನು ಕೂಲಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನನ್ನ ಹೆಂಡತಿಯಾ ಮರೆಮ್ಮ ಇವಳು ಸಹ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತಾಳೆ. ಹೀಗಿದ್ದು ದಿನಾಂಕ:23/05/2022 ರಂದು 6-00 ಗಂಟೆ ಸುಮಾರಿಗೆ ಮಳ್ಳಳ್ಳಿ ಗ್ರಾಮದ ಬಳಿಚಕ್ರ ಮಲ್ಲಪ್ಪ ಇವರ ಹೊಲಕ್ಕೆ ಬದನೆಕಾಯಿ ಹರಿಯುವ ಕೂಲಿ ಕೆಲಸಕ್ಕೆ ನನ್ನ ಹೆಂಡತಿ ಮರೆಮ್ಮ ಮತ್ತು ಮಗಳಾದ ದುಂಡಮ್ಮ ಇಬ್ಬರೂ ಹೋದರು. ನಾನು ಮನೆಯಲ್ಲಿದೇನು. ಹೋದ ಸ್ವಲ್ಪ ಹೊತ್ತಿನಲ್ಲೇ ನನ್ನ ಮಗಳು ದುಂಡಮ್ಮ ಇವಳು ಗಾಭರಿಯಾಗಿ ಅಳುತ್ತಾ ಓಡಿ ಬಂದು ನಾನು ಮತ್ತು ಅವ್ವ ಇಬ್ಬರು ಸೇರಿ ಬಳಿಚಕ್ರ ಮಲ್ಲಪ್ಪ ಇವರ ಹೊಲದಲ್ಲಿ ಬದನೆಕಾಯಿ ಹರಿಯುವಾಗ ಅವ್ವ ನಿಗೆ ಆಕಸ್ಮಿಕವಾಗಿ ಹಾವು ಕಚ್ಚಿದೆ ಅಂತಾ ಹೇಳಿದ್ದಳು. ಆಗ ನಾನು ಗಾಭರಿಯಾಗಿ ನನ್ನ ಮಗಳು ದುಂಡಮ್ಮ ಹಾಗೂ ಇತರರು ಕೂಡಿ ಬಳಿಚಕ್ರ ಮಲ್ಲಪ್ಪ ಇವರ ಹೊಲದ ಬದನೆಕಾಯಿ ತೊಟಕ್ಕೆ ಹೋಗಿ ನೋಡಿದಾಗ ನನ್ನ ಹೆಂಡತಿ ಮರೆಮ್ಮಳು ಅಳುತ್ತಾ ಕುಳಿತಿದ್ದಳು. ಆಗ ನಾನು ಏನು ಆಯಿತ್ತು ಅಂತಾ ಕೇಳಿದಾಗ ನನ್ನ ಹೆಂಡತಿ ಮರೆಮ್ಮ ಹೇಳಿದ್ದೆನೆಂದರೆ ನಾನು ಮತ್ತು ನಮ್ಮ ಮಗಳು ದುಂಡಮ್ಮ ಇಬ್ಬರು ಸೇರಿ ಬಳಿಚಕ್ರ ಮಲ್ಲಪ್ಪ ಈತನ ತೋಟದಲ್ಲಿ ಬದನೆಕಾಯಿ ಹರಿಯುವಾಗ ಬೆಳಗ್ಗೆ 6-30 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ನನ್ನ ಬಲಗಾಲಿನ ಹಿಮ್ಮಡಿಯಿಂದ ಸ್ವಲ್ಪ ದೂರದಲ್ಲಿನ ಮೇಲ್ಭಾಗಕ್ಕೆ ವಿಷಪೂರಿತ ಹಾವು ಕಚ್ಚಿತ್ತು ಎಂದು ಹೇಳಿದ್ದಳು. ನಂತರ ನಾನು ನನ್ನ ಮಗಳೂ ಮತ್ತು ಇತರರು ಕೂಡಿ ನನ್ನ ಹೆಂಡತಿಗೆ ಅಲ್ಲಿಂದ ಮನೆಗೆ ತಂದು ಊರಲ್ಲಿಯೇ ನೀರು ಮಂತ್ರಿಸಿ ಕುಡಿಸಿ, ಅಲ್ಲಿಂದ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರಗೆ ಹೋಗುತ್ತಿರವಾಗ ದಾರಿಯಲ್ಲಿ 7-30 ಎಎಮ್ ಸುಮಾರಿಗೆ ಗುರುಸುಣಗಿ ಸಮೀಪ ಮೃತಪಟ್ಟಿರುತ್ತಾಳೆ. ಮೃತಳ ಮರಣದಲ್ಲಿ ನಮಗೆ ಯಾರ ಮೇಲೆ ಯಾವುದೇ ಪಿಯರ್ಾಧಿ-ಸಂಶಯ ವೈಗಾರೆ ಇರುವುದಿಲ್ಲ ಎಂದು ಮುಂದಿನ ಕಾನೂನು ಕ್ರಮ ಜರಗಿಸುವ ಕುರಿತು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಯುಡಿಆರ್ ನಂಬರ: 9/2022 ಕಲಂ:174 ಸಿಆರ್ಪಿಸಿ ಅಡಿಯಲ್ಲಿ ದೂರು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

 
ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 82/2022 ಕಲಂ. ಮಹಿಳೆ ಕಾಣೆಯಾದ ಬಗ್ಗೆ. ಎಂದಿನಂತೆ ದಿನಾಂಕ 19.05.2022 ರಂದು ಫೀರ್ಯಾದಿ ಮತ್ತು ಅವರ ಮನೆಯಲ್ಲಿಯವರು ಎಲ್ಲಾರೂ ಊಟ ಮಾಡಿ ಮಲಗಿರುತ್ತಾರೆ. ಆ ನಂತರ ದಿನಾಂಕ 20.05.2022 ರ 2:30 ಎ.ಎಮ್ ಸುಮಾರಿಗೆ ಫಿರ್ಯಾದಿಯ ಮಗಳು ಹೀನಾ ಕೌಸರ ಈಕೆಯ ಪುಟ್ಟ ಮಗು ಎದ್ದು ಅಳುತ್ತಿದ್ದಾಗ ಹೀನಾ ಕೌಸರ ಮತ್ತು ಕಾಣೆಯಾದ ಮಹಿಳೆ ಆರೀಫಾ ಬೇಗಂ ಇಬ್ಬರು ಎದ್ದು ಆ ಮಗುವಿಗೆ ಹಾಲು ಕಾಯಿಸಿ ಕುಡಿಸಿದ ನಂತರ ಮಲಗಿಸಿರುತ್ತಾರೆ. ಅದಾದ ನಂತರ ಸಮಯ 03:00 ಎ.ಎಮ್ ಸುಮಾರಿಗೆ ಫಿರ್ಯಾದಿಯು ಎದ್ದು ಕಾಲು ಮಡಿದ ನಂತರ ಮನೆಯೊಳಗೆ ಬಂದು ನೋಡಿದಾಗ ತನ್ನ ಮಗಳು ಆರಿಫಾ ಬೆಗಂ ಕಾಣೀಸದೇ ಇದ್ದಾಗ ಮನೆಯಲ್ಲಿ ತನ್ನ ಹೆಂಡತಿಗೆ ವಿಚಾರಿಸಿದ ನಂತರ ಹುಡಕಲಾಗಿ ಎಲ್ಲಿಯೂ ಕಂಡು ಬಂದಿರುವುದಿಲ್ಲ. ಆ ನಂತರ ತಮ್ಮ ಸಂಬಂದಿಕರು ಇರುವ ಕಡೆಗಳಲ್ಲಿ ಹುಡುಕಿ ಫೋನ್ ಮಾಡಿ ವಿಚಾರಿಸಲಾಗಿ ಎಲ್ಲಿಯೂ ಇಲ್ಲ ಅಂತಾ ಗೊತ್ತಾದ ನಂತರ ಇಂದು ದಿನಾಂಕ 23.05.2022 ರಂದು ಠಾಣೆಗೆ ಬಂದು ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿ ಕೊಡುವಂತೆ ದೂರು ಅಜರ್ಿಯನ್ನು ಸಲ್ಲಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂಬರ 82/2022 ಕಲಂ. ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡೆನು.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 83/2022 ಕಲಂ: 00 ಒಕ ಕಅ (ಮಹಿಳೆ ಕಾಣೆ): ಪಿರ್ಯಾಧಿಯ ಹೆಂಡತಿ ದಿನಾಂಕ: 01.05.2022 ರಂದು ಮಧ್ಯಾಹ್ನ 2.00 ಗಂಟೆಯಿಂದ 3.00 ಗಂಟೆಯ ಮಧ್ಯದ ಅವಧಿಯಲ್ಲಿ ಪಿರ್ಯಾಧಿ ಮತ್ತು ಪಿರ್ಯಾಧಿಯ ಹೆಂಡತಿ ಇಬ್ಬರೂ ಕೂಡಿ ಹೊಲದಲ್ಲಿ ಕೆಲಸ ಮಾಡಿ ಮನೆಗೆ ಬಂದು ಇಬ್ಬರೂ ಮಲಗಿಕಂಡಿದ್ದಾಗ ಮನೆಯಿಂದ ಹೊರಗೆ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲಾ. ನನ್ನ ಹೆಂಡತಿಯನ್ನ ಹುಡಕಿ ಕೊಡಬೇಕು ಅಂತಾ ನೀಡಿದ ಗಣಕಿಕೃತ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 83/2022 ಕಲಂ: 00 ಒಕ ಕಅ (ಮಹಿಳೆ ಕಾಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.


ಭೀಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 46/2022 ಕಲಂ 15(ಎ), 32(3) ಕೆ.ಇ ಎಕ್ಟ್: ದಿನಾಂಕ: 23/05/2022 ರಂದು 5.00 ಪಿ.ಎಮ್.ಕ್ಕೆ ಆರೋಪಿತನು ದಿಗ್ಗಿ ಗ್ರಾಮದಲ್ಲಿನ ತನ್ನ ದಿನಸಿ ಅಂಗಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಸರಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯ ಕುಡಿಯಲು ಅನುಕೂಲ ಮಾಡಿಕೊಟ್ಟಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದ್ದು ದಾಳಿ ಸಮಯದಲ್ಲಿ ಆರೋಪಿತನಿಂದ ಸಿಕ್ಕ ಅಂದಾಜು 878.25/- ರೂ ಕಿಮ್ಮತ್ತಿನ 2.25 ಲೀಟರ್ ಮದ್ಯವನ್ನು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಕಾನೂನು ಕ್ರಮ ಜರುಗಿಸುವಂತೆ ವರದಿ ನೀಡಿದ್ದರ ಮೇರೆಗೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 83/2022 ಕಲಂ: 341,324,326,504,506 ಐಪಿಸಿ: ಇಂದು ದಿನಾಂಕ 23.05.2022 ರಂದು 9.30 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಚಂದ್ರಶೇಖರ ತಂದೆ ಶರಣಪ್ಪ ದರಿ ವ|| 55ವರ್ಷ ಜಾ|| ಲಿಂಗಾಯತ ರಡ್ಡಿ ಉ|| ಒಕ್ಕಲುತನ ಸಾ|| ಕೆಂಭಾವಿ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನಮ್ಮ ತಂದೆ ತಾಯಿಗೆ ನಾವು ಒಟ್ಟು ಐದು ಜನ ಮಕ್ಕಳಿದ್ದು ಅವರಲ್ಲಿ ನಾಲ್ಕು ಜನ ಗಂಡು ಮಕ್ಕಳಿರುತ್ತೇವೆ. ನಾವೆಲ್ಲರೂ ಒಕ್ಕಲುತನ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದೇವೆ. ಹೀಗಿದ್ದು ನಿನ್ನೆ ದಿನಾಂಕ 22.05.2022 ರಂದು 9 ಪಿಎಂ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಮಗನಾದ ಅನೀಲಕುಮಾರ ತಂದೆ ಚಂದ್ರಶೇಖರ ದರಿ ಈತನು ನನಗೆ ಪೋನ ಮಾಡಿ ತಿಳಿಸಿದ್ದೇನಂದರೆ ನಮ್ಮ ತಮ್ಮನಾದ ಶಿವರಡ್ಡಿ ತಂದೆ ಶರಣಪ್ಪ ದರಿ ವ|| 35 ಈತನು ಕೆಂಭಾವಿ ಪಟ್ಟಣದ ಉಡುಪಿ ಹೋಟಲ ಮುಂದುಗಡೆ ನಡೆದುಕೊಂಡು ಬರುತ್ತಿದ್ದಾಗ ನಮ್ಮೂರ ಮಂಜುನಾಥ ತಂದೆ ರಾಮಚಂದ್ರಪ್ಪ ಪಾಟೀಲ ಈತನು ತಡೆದು ನಿಲ್ಲಿಸಿ ಸೂಳೇ ಮಗನೇ ನಿನ್ನ ಸೊಕ್ಕು ಬಹಾಳ ಆಗಿದೆ ಅಂತ ಅವಾಚ್ಯವಾಗಿ ಬೈದು ತನ್ನ ಕೈಯಲ್ಲಿದ್ದ ಬೀಯರ ಬಾಟಲಿಯಿಂದ ನಮ್ಮ ತಮ್ಮನ ತಲೆಗೆ ಬಲಾವಗಿ ಹೊಡೆದು ಭಾರೀ ರಕ್ತಗಾಯ ಪಡಿಸಿರುತ್ತಾನೆ ಅಂತ ತಿಳಿಸಿದಾಗ ನಾನು ಕೂಡಲೇ ಆ ಸ್ಥಳಕ್ಕೆ ಹೋಗಿ ನೋಡಲು ನಮ್ಮ ತಮ್ಮನು ಕೆಳಗಡೆ ಕುಳಿತಿದ್ದು ನೋಡಲು ತಮ್ಮನ ತಲೆಯಿಂದ ಭಾರೀ ರಕ್ತಸ್ರಾವವಾಗುತ್ತಿತ್ತು ಅಲ್ಲದೇ ಬಲಗೈಗೆ ಭಾರೀ ಗುಪ್ತಗಾಯವಾಗಿ ಕೈ ಮುರಿದಂತಾಗಿತ್ತು ನಂತರ ನಾನು ಅಲ್ಲಿಯೇ ಇದ್ದ ಮಂಜುನಾಥ ಈತನಿಗೆ ಏಕೇ ನಮ್ಮ ತಮ್ಮನಿಗೆ ಹೊಡೆದಿರುವಿ ಅಂತ ಕೇಳಿದಾಗ ಸದರಿಯವನು ಮಗನೇ ಏನು ಮಾಡಿಕೊಳ್ಳುತ್ತೀ ಮಾಡಿಕೋ ಅಂತ ನನಗೂ ಅವಾಚ್ಯವಾಗಿ ಬೈದು ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿದನು. ನಾನು ಇರಲಿ ಬಿಡು ಅಂತ ಅಂದು ಕೂಡಲೇ ನಮ್ಮ ತಮ್ಮನಿಗೆ ಸರಕಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಉಪಚಾರ ಪಡಿಸಿದ್ದು ಇರುತ್ತದೆ. ನಂತರ ಅಲ್ಲಿನ ವೈದ್ಯರು ಉಪಚಾರ ನೀಡಿ ಕೂಡಲೇ ಹೆಚ್ಚಿನ ಉಪಚಾರ ಕುರಿತು ಬೇರೆ ಆಸ್ಪತ್ರೆಗೆ ಹೋಗಲು ತಿಳಿಸಿದ ಮೇರೆಗೆ ನನ್ನ ತಮ್ಮನಿಗೆ ನಾನು ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುಗರ್ಿಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಆದ್ದರಿಂದ ವಿನಾಕಾರಣವಾಗಿ ನಮ್ಮ ತಮ್ಮನಾದ ಶಿವರಡ್ಡಿ ದರಿ ಈತನಿಗೆ ತಡೆದು ನಿಲ್ಲಿಸಿ ಜಗಳ ತೆಗೆದು ಅವಾಚ್ಯವಾಗಿ ಬೈಯ್ದು ಬೀಯರ್ ಬಾಟಲಿಯಿಂದ ತಲೆಗೆ ಹೊಡೆದು ಭಾರೀ ರಕ್ತಗಾಯ ಪಡಿಸಿ ಅದೇ ಬಾಟಲಿಯಿಂದ ಬಲಗೈಗೆ ಹೊಡೆದು ಭಾರೀ ಗುಪ್ತಗಾಯ ಪಡಿಸಿ ಜೀವದ ಭಯ ಹಾಕಿದ ಮಂಜುನಾಥ ತಂದೆ ರಾಮಚಂದ್ರಪ್ಪ ಪಾಟೀಲ ಸಾ|| ಕೆಂಭಾವಿ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 83/2022 ಕಲಂ 341,324,326,504,506 ಐಪಿಸಿ ರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 85/2022 ಕಲಂ 498(ಎ) 323. 324, 504. 506. ಐಪಿಸಿ. ಇಂದು ದಿನಾಂಕ 23/05/2022 ರಂದು 18-00 ಪಿ.ಎಂ.ಕ್ಕೆ ಪಿಯರ್ಾದಿ ಶ್ರೀಮತಿ, ಲಲಿತಾ ಗಂಡ ರಾಮನಗೌಡ ಸುಬೆದಾರ ವ|| 33 ಜಾ|| ರೆಡ್ಡಿ ಉ|| ಎಫ್.ಡಿ.ಎ. (ಪಿ.ಯು. ಕಾಲೇಜ್ ಯಡ್ರಾಮಿ) ಸಾ|| ಚೆಳ್ಳಿಗಿ ತಾ|| ತಾಳಿಕೋಟಿ ಹಾ|| ವ|| ಶಾರದ ಶಾಲೆಯ ಹತ್ತಿರ ಮಡಿವಾಳೇಶ್ವರ ನಗರ ಶಹಾಪೂರ ಜಿ|| ಯಾದಗಿರಿ. 9535105553 ಇವರು ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದರ ಸಾರಾಂಶ ವೆನೆಂದರೆ, ನನಗೆ ಸುಮಾರು 10 ವರ್ಷಗಳ ಹಿಂದೆ ನಮ್ಮ ಸಂಪ್ರದಾಯದಂತೆ ಚೆಳ್ಳಿಗಿ ಗ್ರಾಮದ ರಾಮನಗೌಡ ತಂದೆ ಅಯ್ಯಪ್ಪ ಸುಬೆದಾರ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ.
ಹೀಗಿದ್ದು ನಾನು ಮತ್ತು ನನ್ನ ಗಂಡ ಇಬ್ಬರು ಸುಖವಾಗಿ ಸಂಸಾರ ನಡೆಸುತ್ತ ಬಂದಿದ್ದು ಇರುತ್ತದೆ. ನಮಗೆ ಇಬ್ಬರು ಮಕ್ಕಳಿದ್ದು ಮೊದಲನೇ ಮಗ ಸಾತ್ವಿಕ್, ಎರಡನೇ ಮಗಳು ಅದಿತಿ, ನಾನು ಯಡ್ರಾಮಿಯ ಪಿ.ಯು ಕಾಲೇಜನಲ್ಲಿ ಎಫ್.ಡಿ.ಎ. ಅಂತ ಕರ್ತವ್ಯ ನಿರ್ವಹಿಸುತ್ತಿದ್ದು ಇರುತ್ತದೆ. ನನ್ನ ಗಂಡನಾದ ರಾಮನಗೌಡ ಈತನು ಕೆ.ಕೆ.ರ.ಸಾರಿಗೆ ಸಂಸ್ಥೆಯ ಗುರಮಿಟಕಲ್ ಬಸ್ಸ್ ಡಿಪೋದಲ್ಲಿ ಕಂಡಕ್ಟರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇರುತ್ತದೆ. ನಾನು ಮತ್ತು ನನ್ನ ಗಂಡ ರಾಮನಗೌಡ ಇಬ್ಬರು ಕೂಡಿ ಮಡಿವಾಳೇಶ್ವರ ನಗರ ಶಹಾಪೂರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತೇವೆ. ನನ್ನ ಗಂಡನು ದಿನಾಲು ನನಗೆ ನಿನು ಸರಿಯಾಗಿಲ್ಲ ನಿನಗೆ ಅಡುಗೆಮಾಡಲು ಬರುವುದಿಲ್ಲಾ ನೀನು ನೋಡಲು ಚೆನ್ನಾಗಿಲ್ಲಾ ನನಗೆ ತಕ್ಕ ಹೆಂಡತಿ ಅಲ್ಲಾ ನಾನು ಸುಮ್ಮನೆ ಇಲ್ಲಿಗೆ ವಗರ್ಾವಣೆ ಮಾಡಿಸಿಕೊಂಡಿರುತ್ತೆನೆ. ನಾನು ಇಲ್ಲಿಗೆ ಬಂದದ್ದು ಬಹಳ ತಪ್ಪಾಗಿದೆ ಅಂತ ಆಗಾಗ ತಕರಾರು ಮಾಡುತ್ತ ಬಂದ್ದಿದ್ದು. ನಾನು ಹೋಗಲಿ ಅಂತ ನನ್ನ ಗಂಡನೊಂದಿಗೆ ಜೀವನ ಸಾಗಿಸುತ್ತ ಬಂದಿರುತ್ತೇನೆ.
ದಿನಾಂಕ 21/05/2022 ರಂದು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಗಂಡನಾದ ರಾಮನಗೌಡ ಇಬ್ಬರು ನಮ್ಮ ಮನೆಯ ಮುಂದೆ ಇದ್ದಾಗ ನನ್ನ ಗಂಡನಾದ ರಾಮನಗೌಡನು ನನಗೆ ನಿನು ಸರಿಯಾಗಿಲ್ಲ ನಿನಗೆ ಸರಿಯಾಗಿ ಅಡುಗೆಮಾಡಲು ಬರುವುದಿಲ್ಲಾ ನಿನು ನನಗೆ ತಕ್ಕ ಹೆಂಡತಿ ಅಲ್ಲ ನನಗೆ ಸುಮ್ಮನೆ ಇಲ್ಲಿಗೆ ವಗರ್ಾವಣೆ ಮಾಡಿಸಿದ್ದಿ. ನಾನು ಇಲ್ಲಿಗೆ ವಗರ್ಾವಣೆ ಮಾಡಿಸಿಕೊಂಡು ಬರಬಾರದಿತ್ತು. ಅಂತ ಅಂದನು ಆಗ ನಾನು ಈಗ ಏನಾಗಿದೆ ಎಲ್ಲ ಸರಿಯಾಗಿ ಇದೆಯಲ್ಲ ಅಂತ ಅಂದಾಗ. ಎದರು ಮಾತನಾಡುತ್ತಿ ಏನಲೇ ಸೂಳಿ ಅಂತ ಅವಾಚ್ಯ ಶಬ್ದಗಳಿಂದ ಬೈದನು. ನನ್ನ ಗಂಡ ರಾಮನಗೌಡನು ತನ್ನ ಕೈಯಿಂದ ಎಡಗಡೆ ಕಪಾಳಕ್ಕೆ ಹೋಡೆದನು. ನನ್ನ ಗಂಡ ರಾಮನಗೌಡನು ಅಲ್ಲೆ ಬಿದ್ದಿದ್ದ ಒಂದು ಬಡಿಗೆಯಿಂದ ನನಗೆ ಬಲಗೈ ಮೊಳಕೈಗೆ ಹೊಡೆದನು. ಅದೆ ಬಡಿಗೆಯಿಂದ ನನಗೆ ಹಿಂದಿನ ಸೊಂಟಕ್ಕೆ ಹೊಡೆದು ಗುಪ್ತಗಾಯ ಮಾಡಿದನು. ಆಗ ಅಲ್ಲಿಗೆ ಬಂದ ನನ್ನ ಅಣ್ಣ ದೇವರೆಡ್ಡಿ ತಂದೆ ನಿಂಗಣ್ಣ ಮುಂದಿನಮನಿ, ನನ್ನ ದೊಡ್ಡಮ್ಮನ ಮಗನಾದ ಹಣಮಂತ್ರಾಯ ತಂದೆ ಬಸರೆಡ್ಡಿ ಸಾಲೋಡಿಗಿ ಸಾ|| ಹಾಲಗಡ್ಲಾ ಇವರು ಬಂದು ಜಗಳ ನೋಡಿ ನನಗೆ ಹೋಡೆಯುವದನ್ನು ಬಿಡಿಸಿಕೊಂಡರು. ಆಗ ನನ್ನ ಗಂಡ ರಾಮನಗೌಡ ಈತನು ನನಗೆ ನೀನು ಇನ್ನು ಮುಂದೆ ನನ್ನ ಮನೆಯಲ್ಲಿ ಇದ್ದರೆ ನಿನಗೆ ಜೀವಸಹಿತ ಬಿಡುವುದಿಲ್ಲಾ ಅಂತ ಜೀವದ ಭಯ ಹಾಕಿ ಹೋದನು. ಸದರಿ ಜಗಳವು ನಮ್ಮ ಮನೆಯ ಮುಂದೆ ಇರುವ ರಸ್ತೆಯ ಮೇಲೆ ಮದ್ಯಾಹ್ನ 2-30 ಗಂಟೆಗೆ ಜರುಗಿರುತ್ತದೆ. ನಾನು ನಮ್ಮ ಹಿರಿಯರೊಂದಿಗೆ ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರುನಿಡಿದ್ದು ಇರುತ್ತದೆ. ನನಗೆ ಉಪಚಾರ ಕುರಿತು ಆಸ್ಪತ್ರೆಗ ಕಳಿಸಿಕೊಡಬೆಕು. .
ಕಾರಣ ನನಗೆ ವಿನಾಕಾರಣ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರಕುಳ ನೀಡಿ ಹೋಡೆಬಡೆ ಮಾಡಿ ಜೀವದ ಭಯ ಹಾಕಿದ ನನ್ನ ಗಂಡ ರಾಮನಗೌಡನ ಮೇಲೆ ಕಾನೂನು ಕ್ರಮ ಜರುಗಿಸಬೆಕು ಅಂತ ಸಲ್ಲಿಸಿದ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 85/2022 ಕಲಂ 498(ಎ) 323, 324, 504, 506, ಐ.ಪಿ.ಸಿ. ನ್ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 24-05-2022 10:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080