ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 24-06-2021

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 89/2021 ಕಲಂ: 279,337,338 ಐ.ಪಿ.ಸಿ : ಇಂದು ದಿನಾಂಕ 23.06.2021 ರಂದು 1.15 ಪಿ ಎಮ್ ಕ್ಕೆ ಸುಮಂಗಲಾ ಗಂಡ ಈರಗಂಟೆಪ್ಪ ಚಲುವಾದಿ ವ|| 42 ಜಾ|| ಹಿಂದು ಹೊಲೆಯ ಉ|| ಕೂಲಿಕೆಲಸ ಸಾ|| ಅಸಂತಾಪೂರ ತಾ|| ದೇವರ ಹಿಪ್ಪರಗಿ ಆದ ನಾನು ತಮ್ಮಲ್ಲಿ ಸಲ್ಲಿಸುವ ಫಿಯರ್ಾದಿ ಅಜರ್ಿ ಏನಂದರೆ ನನ್ನ ಮಗನಾದ ಅನೀಲಕುಮಾರ ತಂದೆ ಈರಗಂಟಪ್ಪ ಚಲುವಾದಿ ವ|| 23 ಈತನು ದಿನಾಂಕ 15.06.2021 ರಂದು ಮೋಟರ್ ಸೈಕಲ ನಂಬರ ಕೆಎ-33 ಆರ್-1924 ನೇದ್ದನ್ನು ತೆಗೆದುಕೊಂಡು ಸುರಪೂರ ಹೋಗಿ ಬರುತ್ತೇನೆ ಅಂತ ಹೇಳಿ ನಮ್ಮೂರಿಗೆ ಬಂದ ನಮ್ಮ ಸಂಬಂದಿ ಜಗದೀಶ ತಂದೆ ದತ್ತಪ್ಪ ಸಾ|| ಸುರಪೂರ ಇಬ್ಬರೂ ಕೂಡಿಕೊಂಡು ಹೋದರು, ಮೋಟರ ಸೈಕಲನ್ನು ಸಂಬಂದಿ ಜಗದೀಶ ತಂದೆ ದತ್ತಪ್ಪ ಈತನು ನಡೆಸಿಕೊಂಡು ಹೋದನು. ಹೀಗಿದ್ದು ದಿನಾಂಕ: 15.06.2021 ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಮಗನೊಂದಿಗೆ ಹೋದ ಸಂಬಂದಿ ಜಗದೀಶ ತಂದೆ ದತ್ತಪ್ಪ ಸಾ|| ಸುರಪೂರ ಈತನು ನನಗೆ ಪೋನ ಮಾಡಿ ತಾನು ಹಾಗು ಮಗ ಅನೀಲಕುಮಾರ ಇಬ್ಬರೂ ಕೂಡಿಕೊಂಡು ಮೋಟರ್ ಸೈಕಲ ನಂಬರ ಕೆಎ-33 ಆರ್-1924 ನೇದ್ದರಲ್ಲಿ ಕೆಂಭಾವಿ ತಾಳಿಕೋಟಿ ಮುಖ್ಯ ರಸ್ತೆಯ ಪತ್ತೆಪೂರ ಕ್ರಾಸ ಹತ್ತಿರ ಕೆಂಭಾವಿ ಕಡೆಗೆ ಹೋಗುತ್ತಿದ್ದಾಗ ಸದರಿ ಮೋಟರ ಸೈಕಲ ನಾನೇ ನಡೆಸುತ್ತಿದ್ದು ಹಿಂದೆ ಅನೀಲಕುಮಾರ ಈತನು ಕುಳಿತಿದ್ದು ಅದೇ ವೇಳೆಗೆ ಎದುರಿನಿಂದ ಒಂದು ಮೋಟರ್ ಸೈಕಲ ನಂಬರ ಕೆಎ=33 ಇಎ-1058 ನೇದ್ದರ ಚಾಲಕನು ತನ್ನ ಮೋಟರ ಸೈಕಲದಲ್ಲಿ ಎರಡು ಜನರನ್ನು ಹಾಗು ಒಂದು ಮಗುವನ್ನು ಕೂಡಿಸಿಕೊಂಡು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟರ್ ಸೈಕಲಗೆ ಬಲವಾಗಿ ಡಿಕ್ಕಿಪಡಿಸಿದ್ದು ಕಾರಣ ಎರಡು ಮೋಟರ ಸೈಕಲಗಳು ಕೆಳಗೆ ಬಿದ್ದಿದ್ದು ಸದರಿ ಅಪಘಾತದಲ್ಲಿ ನನಗೆ ಯಾವದೇ ಗಾಯವಾಗಿರುವದಿಲ್ಲ ಆದರೆ ಹಿಂದೆ ಕುಳಿತ ಅನೀಲಕುಮಾರ ಈತನಿಗೆ ಬಾಯಿಗೆ ಭಾರೀ ರಕ್ತಗಾಯವಾಗಿ ಹಲ್ಲು ಮುರಿದು ಹೋಗಿದ್ದು ಅಲ್ಲದೇ ಬಲಭುಜಕ್ಕೆ ಭಾರೀ ಗುಪ್ತಗಾಯವಾಗಿ ಬಲಗಡೆ ಹಣೆಗೆ ತರಚಿದ ರಕ್ತಗಾಯವಾಗಿದ್ದು ಇರುತ್ತದೆ. ಅಂತ ತಿಳಿಸಿ ತಮಗೆ ಡಿಕ್ಕಿಪಡಿಸಿದ ಮೋಟರ ಸೈಕಲ ಚಾಲಕ ಬೀರಪ್ಪ ತಂದೆ ಸಿದ್ದಪ್ಪ ಮುದನೂರ ಸಾ|| ಕೆಂಭಾವಿ ಅಂತ ಗೊತ್ತಾಗಿದ್ದು ಸದರಿಯವನ ಮೋಟರ ಸೈಕಲ ಹಿಂದೆ ಎರಡು ಜನ ಹೆಣ್ಣು ಮಕ್ಕಳು ಹಾಗು ಒಂದು ಮಗು ಕುಳಿತಿದ್ದು ಅವರ ಹೆಸರು ವಿಚಾರಿಸಲಾಗಿ ತಿಪ್ಪಮ್ಮ. ಬಾಗ್ಯ ಹಾಗು ರೇಣುಕಾ ಅಂತ ಗೊತ್ತಾಗಿದ್ದು ಅವರಿಗೂ ಸಹ ಸಾದಾ ಹಾಗು ಭಾರೀ ಗಾಯಗಳಾಗಿದ್ದು ಇರುತ್ತದೆ. ನಂತರ ನಾವೆಲ್ಲರೂ ಕೂಡಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದಿದ್ದು ನಾನು ಅನೀಲಕುಮಾರ ಈತನಿಗೆ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ವಿಜಯಪುರದ ಸಂಜೀವಿನಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದೇನೆ ಅಂತ ತಿಳಿಸಿದಾಗ ನಾನು ಕೂಡಲೇ ಸಂಜೀವಿನಿ ಆಸ್ಪತ್ರೆ ವಿಜಯಪುರಕ್ಕೆ ಹೋಗಿ ನನ್ನ ಮಗನಿಗೆ ನೋಡಲಾಗಿ ಬಾಯಲ್ಲಿನ ಎಲ್ಲಾ ಹಲ್ಲು ಮುರಿದು ಮಾತನಾಡಲು ಬರುತ್ತಿರಲಿಲ್ಲ ಅಲ್ಲದೇ ಬಲಭುಜಕ್ಕೆ ಭಾರೀ ಗುಪ್ತಗಾಯವಾಗಿ ಬಲಗಡೆ ಹಣೆಗೆ ತರಚಿದ ರಕ್ತಗಾಯವಾಗಿದ್ದು ಇರುತ್ತದೆ. ಕಾರಣ ಸದರಿ ಅಪಘಾತಕ್ಕೆ ಮೋಟರ್ ಸೈಕಲ ನಂಬರ ಕೆಎ=33 ಇಎ-1058 ನೇದ್ದರ ಚಾಲಕ ಬೀರಪ್ಪ ತಂದೆ ಸಿದ್ದಪ್ಪ ಮುದನೂರ ಸಾ|| ಕೆಂಭಾವಿ ಈತನ ಅತೀವೇಗ ಹಾಗು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿಯವನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂಬರ 89/2021 ಕಲಂ 279.337.338 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 42/2021 ಕಲಂ.457, 380 ಐಪಿಸಿ: ಇಂದು ದಿನಾಂಕ:23/06/2021 ರಂದು ಬೆಳಿಗ್ಗೆ 11.30 ಗಂಟೆಗೆ ಫಿರ್ಯಾದಿ ಠಾಣೆಗೆ ಹಾಜರಾಗಿ ಲಿಖಿತ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೇ, ಬಲಶೆಟ್ಟಿಹಾಳ ಸರಕಾರಿ ಪ್ರೌಡ ಶಾಲೆಗೆ 2020 ನೇ ಸಾಲಿನ ನವ್ಹಂಬರ್ & ಡಿಸೆಂಬರ್ ತಿಂಗಳಲ್ಲಿ ಮಕ್ಕಳಿಗೆ ಹಂಚಿಕೆ ಮಾಡಲು ಕೊಟ್ಟ ಗೋಲ್ಡವಿನ್ನರ್ ಒಂದು ಲಿಟರ ಇರುವ ಒಳ್ಳೆಣ್ಣೆಯ ಒಟ್ಟು 70 ಡಬ್ಬಿಗಳಲ್ಲಿ 700 ಪಾಕೀಟಗಳು ಬಂದಿದ್ದು ಇರುತ್ತದೆ. ಬಿಸಿ ಊಟದ ಕೋಣೆಯಲ್ಲಿಟ್ಟು ಕೀಲಿ ಹಾಕಿದ್ದು ಇರುತ್ತದೆ. ದಿನಾಂಕ:22/06/2021 ರಾತ್ರಿ 10.00 ಗಂಟೆಯಿಂದ ದಿನಾಂಕ:23/06/2021 ರಂದು ಬೆಳಿಗಿನ 6 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಬಿಸಿ ಊಟದ ಕೋಣೆಯ ಬಾಗೀಲ ಚಿಲಕ ಮುರಿದು ಒಳಗೆ ಹೋಗಿ 70 ಡಬ್ಬಿಗಳಲ್ಲಿಯ 30 ಡಬ್ಬಿಗಳು ಒಟ್ಟು 300 ಪಾಕೀಟಗಳು ಅ:ಕಿ:50000/- ರೂ.ಗಳು ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ದೂರು.

 


ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 96/2021 ಕಲಂ 379 ಐಪಿಸಿ : ಇಂದು ದಿನಾಂಕ: 23-06-2021 ರಂದು ಮಧ್ಯಾಹ್ನ 4-00 ಗಂಟೆಗೆ ಶ್ರಿ ಭೀಮರಾಯ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ನೀಲಹಳ್ಳಿ ಗೇಟ್ ಹತ್ತಿರ ಅಕ್ರಮ ಮರಳು ಸಾಗಿಸುತ್ತಿದ್ದ ಒಂದು ಮಾಸ್ಸೆ ಫಗರ್ೂಶನ ಟ್ಯಾಕ್ಟರ ಇಂಜಿನ ನಂ. ಕೆ.ಎ-33 ಟಿಬಿ-1902 ಮತ್ತು ಟ್ರಾಲಿ ನಂಬರ ಇಲ್ಲದ್ದು ನೇದ್ದನ್ನು ಜಪ್ತಿ ಮಾಡಿಕೊಂಡು ಮೂಲ ಜಪ್ತಿಪಂಚನಾಮೆ ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.96/2021 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 145/2021. ಕಲಂ. 279. 338.ಐ.ಪಿ.ಸಿ.ಮತ್ತು 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ:23/06/2021 ರಂದು 17-00 ಗಂಟೆಗೆ ಪಿಯರ್ಾದಿ ಶ್ರೀ ದೇವಪ್ಪ ತಂದೆ ಬಸವಂತ್ರಾಯ ಮರ್ಸನವರ ವ|| 45 ಜಾ|| ಗಾಣಿಗ ಉ|| ಒಕ್ಕಲುತನ ಸಾ|| ಸಗರ (ಬಿ) ತಾ|| ಶಹಾಪೂರ. ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕರಣ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ದಿನಾಂಕ 16/06/2021 ರಂದು ನಾನು ಮತ್ತು ನನ್ನ ಮಗ ಅಂಬ್ರೀಶ ತಂದೆ ದೆವಪ್ಪ ಮರ್ಸನವರ, ಇಬ್ಬರು ಕೂಡಿ ಸಿದ್ದಣ್ಣ ತಂದೆ ಬಸಣ್ಣ ಶೇರಿ ಇವರ ಹೋಲದಲ್ಲಿ ಕೆಲಸಕ್ಕೆ ಹೋಗಿ ನಾವಿಬ್ಬರು ಕಸ ಹಾರಿಸುತ್ತಿದ್ದಾಗ ನಮಗೆ ಬುತ್ತಿ ತೆಗೆದುಕೊಂಡು ನನ್ನ ಮಗ ಸಂಗಮೇಶ ತಂದೆ ದೇವಪ್ಪ ಮರ್ಸನವರ ಇತನು ಮನೆಯಿಂದ ಸಗರ(ಬಿ)-ಶಹಾಪೂರ ಮುಖ್ಯ ರಸ್ತೆಯ ಮೇಲೆ ನಡೆದುಕೊಂಡು ಬರುತ್ತಿರುವಾಗ, ಎದರುಗಡೆಯಿಂದ ಅಂದರೆ ರಸ್ತಾಪೂರ ಕಡೆಯಿಂದ ಒಂದು ಮೋಟರ್ ಸೈಕಲ್ ಚಾಲಕನು ತನ್ನ ಮೋಟರ್ ಸೈಕಲ್ನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗ ಸಂಗಮೇಶನಿಗೆ ಡಿಕ್ಕಿ ಪಡಿಸಿದನು. ಆಗ ನಾನು ಮತ್ತು ಅಂಬ್ರೀಶ ಇಬ್ಬರು ಅಪಘಾತವಾದ ಸ್ಥಳಕ್ಕೆ ಬಂದು ಸಂಗಮೇಶನಿಗೆ ನೋಡಿ ವಿಚಾರಿಸಲಾಗಿ ಸದರಿ ಅಪಘಾತದಲ್ಲಿ ಸಂಗಮೇಶನಿಗೆ ಎಡಗಡೆ ಟೊಂಕಕ್ಕೆ ಭಾರಿ ಗುಪ್ತಗಾಯ, ಎಡಗಾಲ ಗೆಜ್ಜೆಗೆ (ತೋಡೆಯ ಮೇಲೆ) ಭಾರಿ ಗುಪ್ತಗಾಯವಾಗಿದ್ದು ಇರುತ್ತದೆ. ಆಗ ಅಂಬ್ರೀಶನು ಅಪಘಾತ ಮಾಡಿದ ಮೋಟರ್ ಸೈಕಲ್ ಸವಾರನಿಗೆ ಹೆಸರು ವಿಚಾರಿಸಲಾಗಿ ತನ್ನ ಹೆಸರು ಸಂತೋಷ ತಂದೆ ದೀಪ್ಲಾ ಚವ್ಹಾಣ ಸಾ|| ಕಡಬೂರ ಅಂತ ತಿಳಿಸಿದನು, ಅಪಘಾತ ವಾದ ಮೋಟರ್ ಸೈಕಲ್ ನಂ ಕೆಎ-33 ಇಎಸ್-4007 ನೇದ್ದು ಇದ್ದು ಮುಂದೆ ಜಕಂ ಗೊಂಡಿರುತ್ತದೆ. ಸಂತೋಷನು ಸ್ವಲ್ಪ ಹೊತ್ತು ನಿಂತ ಹಾಗೆ ಮಾಡಿ ಮೋಟರ್ ಸೈಕಲ್ ತೆಗೆದುಕೊಂಡು ಹೋದನು, ಸದರಿ ಅಪಘಾತವು ಸಿದ್ದಣ್ಣ ತಂದೆ ಬಸಣ್ಣ ಶೇರಿ ಇವರ ಹೋಲದ ಹತ್ತಿರ ಬೆಳಿಗ್ಗೆ 9-30 ಗಂಟೆಗೆ ಅಪಘಾತವಾಗಿದ್ದು ಇರುತ್ತದೆ. ಆಗ ನಾನು ಮತ್ತು ಅಂಬ್ರೀಶ ಇಬ್ಬರು ಕೂಡಿ ಸಂಗಮೇಶನಿಗೆ ಉಪಚಾರ ಕುರಿತು ಒಂದು ಆಟೋದಲ್ಲಿ ಶಹಾಪೂರಕ್ಕೆ ಬಂದು, ಅಲ್ಲಿಂದ ಒಂದು ಕಾರಿನಲ್ಲಿ ಕಲಬುರಗಿಯ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಮಾಡಿದ್ದು. ಅಲ್ಲಿಂದ ಕುರಾಳ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆಮಾಡಿದ್ದು ಇರುತ್ತದೆ, ನನ್ನ ಮಗ ಸಂಗಮೇಶನಿಗೆ ಉಪಚಾರ ಮಾಡಿಸುವದು ಅವಶ್ಯವಾಗಿರುವದರಿಂದ ಉಪಚಾರ ಮಾಡಿಸಿ ಮತ್ತು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನಿಡಿದ್ದು ಇರುತ್ತದೆ. ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 145/2021 ಕಲಂ: 279, 338, ಐಪಿಸಿ & 187 ಐ,ಎಂ,ವಿ ಯಾಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 24-06-2021 09:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080